ಕಾಟು ಹರಟೆ: ‘ಹಣೆವಾರ’- ಗೆಡ್ಡ

ಮಾ ಬುದ್ದಿವಂತನ ಹಾಂಗೆ ವಿಶ್ವೇಶ್ವರ ಭಟ್ಟ ಹೇಳ್ತ°, ಬಹುಜನರ ಎದುರು ತಲೆ ತೊರುಸೆಡಿ. ಅದು ಅಸಭ್ಯ.
ಪ್ರಶ್ನೆಗೆ ಉತ್ತರ ಹೊಳೆಕಾರೆ ತಲೆ ತೊರುಸೇಕು, ಉಗುರು ಕಚ್ಚೇಕು,ಅಲ್ದೋ..?

ಆ ಮೆದುಳಿಲ್ಲಿದ್ದ ಪ್ರತಿಭೆಯ ಜ್ಞಾನಕ್ಕೆ ತರೇಕಾರೆ ಎಂತಾರು ಒಂದು ಚೇಷ್ಟೆ ಬೇಕಾವುತ್ತೇ.
ಆತಪ್ಪ, ಬೇಡದ್ರೆ ಬೇಡ – ಉದ್ದ ಗೆಡ್ಡ ಇದ್ದರೆ ಸಾಕಕ್ಕು. ಬೇಕಾರೆ ರಜ ಬೇಗವೇ ಪ್ರತಿಭನ ಹೆರ ಬರುಸುಗು – ಗೆಡ್ಡ ತೊರುಸಿರೆ.
ಏಕೆ ಹೇದರೆ ಗೆಡ್ಡದ ಬೇರು ನೇರ ಮೆದುಳಿಂಗೆ ಸಂದೇಶ ಕೊಡುತ್ತು. ಇವೆಲ್ಲ ಮಹಾನುಭಾವರು ಆದ್ಸು ಹೇಂಗೆ!
ರವೀಂದ್ರನಾಥ ಟಾಗೋರ್, ಗೆಲಿಲಿಯೋ.. ಹೋಗಲಿ, ಈಗಾಣ ಪ್ರಕಾಶರಾವ್ ಪಾವಗಡ …
ಅವರ ಗೆಡ್ಡದ ಮೂಲಕವೇ. ಸಂದೇಹ ಬೇಡ.

ಮಂತ್ರದ್ರಷ್ಟಾರರು ನಮ್ಮ ಋಷಿಮುನಿಗೊ ಉದ್ದ ಗೆಡ್ಡ ಇಲ್ಲದ್ದಿದ್ದಿದ್ದ್ರೆ, ವೇದೋಪನಿಷತ್ತು, ರಾಮಾಯಣಾದಿಗೊ ಇರ್ತಿತೋ?
ಬ್ರಹ್ಮನೂ ಹಾಂಗೇ.
ವಿಶ್ವಾಮಿತ್ರನ ಗೆಡ್ಡಕ್ಕೆ ಮರುಳಾಗಿ ಶಕುಂತಲೆ ಆವಿರ್ಭವಿಸಿದ್ಸರಿಂದ ಶಾಕುಂತಲಾ ಹೇಳ್ತ ಸುಂದರ ಕಾವ್ಯ (ನಾಟಕ) ಸಾರಸ್ವತ ಲೋಕಕ್ಕೆ ಆಸ್ತಿ ಆತು.

ಆ.! ಆಗಳೇ ಕೇಟೆ, ಗೆಡ್ಡ ಇಲ್ಲದ್ದ ಋಷಿ ಇದ್ದನೋ ಹೇದು, ಇದ್ದ ಒಬ್ಬ ನಾರದ ಹೇದು – ಏಕೂ ಬೇಡದ್ದವ, ಸುಮ್ಮನೆ ಚಾಡಿ ಹೇಳುಸ್ಸು.
ಎಲ್ಲಿ ರಕ್ತಪಾತ ಆವುತ್ತೋ ಅದರ ದೂರ ನಿಂದು ನೋಡಿ ಕೊಶಿ ಪಡುಸ್ಸು.
ಕರ್ಣಾರ್ಜುನ ಯುದ್ಧ ಅಪ್ಪಗ ಬಾನಲ್ಲಿ ನಿಂದು ನೋಡಿಂಡಿದ್ದಿದ್ದ.
ತಾರಕಕ್ಕೇರುವಗ ಸಂತೋಷಲ್ಲಿ “ಅಂಬರದೊಳ್ ನರ್ತಿಸಿದನ್ ನಾರದಂ ಗುಡಿಕಟ್ಟಿ ಕೋವಣಮಮ್”.
ಚೀ, ನಾಚಿಕೆ ಇಲ್ಲದ್ದ ಬಡುವ.

ಬಾರತಕ್ಕೆ ನೋಬೆಲ್ ಸಿಕ್ಕೆಕ್ಕಾದರೆ ಆರಾದರೂ ಗೆಡ್ಡದವರಿಂದಲೇ ಆಯೇಕು.
ಅಂಬಗ ಮಾಪಳಗೊಕ್ಕೆ ಉದ್ದ ಉದ್ದ ಬೆಳಿಬೆಳಿ ಗೆಡ್ಡ ಇರ್ತನೆ?
ಇರ್ತು; ಹೋತಂಗೆ ಗೆಡ್ಡ ಇಲ್ಲೆಯೋ? ನಾಯಿ ಬೀಲದ ಹಾಂಗೆ – ಮಾನ ಮುಚ್ಚಲೂ ಆಗ, ನೆಳವು ಓಡುಸಲೂ ಆಗ.
ಜೀವ ಕೋಟಿಗೆ ಉಪಕಾರ ಆವುತ್ತ ಕೆಲಸ ಅವರಿಂದ ಆದ್ಸು ಇದ್ದೋ?
ಯಾವುದೇ ಒಂದು ಸುವ್ಯವಸ್ಥೆ ಇದ್ದರೆ ಅದರ ಕುಟ್ಟೆ ತೆಗದು ಚೆಂದ ನೋಡುಸ್ಸು.
ಅನಾಚಾರ ಎಂತ ಬೇಕಾರೂ ಮಾಡಲಕ್ಕು. ಶುಕ್ರವಾರ ಪಳ್ಳಿಗೆ ಹೋದರೆ ಸಾಕು.

ಶಿಖ ಹೇಳಿರೆ ಜೊಟ್ಟು. ಗೆಡ್ಡಕ್ಕೆ ಮೀಸಗೆ ಸಂಸ್ಕೃತಲ್ಲಿ ಎಂತ ಹೇಳುಸ್ಸು, ನೆಂಪಾವುತಿಲ್ಲೆ. ಹುಡುಕ್ಕಿ ನೋಡೇಕಷ್ಟೆ.

ಎಂಗಳ ಹತ್ರಾಣ ಮನೆಯವು ಗೆಡ್ಡವ ಗಡ್ಡ ಹೇಳುಸ್ಸು. ಹಾಂಗೆ ಗೆಂಡೆ ಗೆಡ್ಡೆ, ಗೆಂಡ- ಗಂಡ.
ಮನೆಲಿ ಇರ್ತ ಹೆಮ್ಮಕ್ಕೊ ಹೇಳುಗು:-

ಇವು ಆನು ಕೆಲಸಿ ಹತ್ರಂಗೆ ಹೋಗಿ ಗೆಡ್ಡ ತೆಗಶಿಂಡು ಬತ್ತೆ ಹೇದಿಕ್ಕಿ ಹೋಯಿದವು. ಇನ್ನೂ ಬಯಿಂದವಿಲ್ಲೆ. ಕುಚ್ಚಿ ತೆಗಶಿಂಡು ಕೂರ್ತವೋ ಎಂತ್ಸೋ?

ಕನ್ನಡ ಆಡ ಅವರ ಭಾಷೆ. ದಣಿಯ ವಿತ್ಯಾಸ ಇಲ್ಲೆ, ಹೇದ್ಸೆಲ್ಲಾ ಅರಡಿತ್ತು. ಅವಕ್ಕೂ ನವಗೂ ಹಶು ಆಗಿ ಹೊಟ್ಟೆ ಪೆಡಚ್ಚುತ್ತು.
ಇವು ಬಂದು ಮಿಂದು ಊಟ ಅಪ್ಪಗ ಒಂದು ಕವಳಿಗೆ ಮಜ್ಜಿಗೆ ನೀರಾರೂ ಮಾಡಿ ಕುಡಿತ್ತೆ.

ದೊಡ್ಡಮಾವ°

   

You may also like...

22 Responses

 1. ಶ್ರೀದೇವಿ ವಿಶ್ವನಾಥ್ says:

  ದೊಡ್ಡ ಮಾವ°, ಶುದ್ದಿ ಲಾಯ್ಕ ಆಯಿದು. ಧನ್ಯವಾದ.
  ನಿಂಗೋ ಬರದ್ದದರಲ್ಲಿ ಯೋಚನೆ ಮಾಡ್ಲೆ ಸುಮಾರು ಇದ್ದು. ಕೆಲವು ದಿನ ಬೇಕಿದಾ ಅರಗುಸುಲೆ!!!
  ಬರೆತ್ತಾ ಇರಿ ಹೀಂಗಿಪ್ಪ ವಿಚಾರಂಗಳ… ಎಂಗಳ ಭಾಶೆಯೂ ಸರಿ ಅಕ್ಕು. ಹೊಸ ವಿಚಾರ ಗೊಂತಾದ ಹಾಂಗೆದೇ ಅಕ್ಕು.

  ಎನಗೆ ಕೆಲವು ಶಬ್ಧಂಗ ಅರ್ತ ಆಗದ್ದೆ ಒಪ್ಪಣ್ಣನ ಹತ್ತರೆ ಕೇಳಿಗೊಂಡೆ.
  ನಿಂಗೊ ಕೆಲವು ಶಬ್ಧ ಬೈಲಿಂಗೆ ಅರ್ತ ಆಗ ಹೇಳಿ ಅಪ್ಪದರ ಅಂದಾಜು ಮಾಡಿ, ಶಬ್ಧದ ಅರ್ತವೂ ಕರೇಲಿ ಕೊಟ್ಟಿಕ್ಕಿ ಆತೋ…
  ಇಲ್ಲದ್ದರೆ ಎನ್ನ ಹಾಂಗಿರ್ತವಕ್ಕೆ ಪೂರ ಅರ್ತ ಆವುತ್ತಿಲ್ಲೆ.

  • ಅದು ಒಳ್ಳೆ ಬುದ್ದಿವಂತಿಕೆ ನಿಜ, ಎನಗೂ ಹಾಂಗಿಪ್ಪದು ತಲಗೆ ಹೋಯಿದಿಲ್ಲೆ. ಇನ್ನಾಣ ಸರ್ತಿ ಬರವಗ ಹಾಂಗಿಪ್ಪ ಒಂದು ಪಟ್ಟಿ ಕೊಡ್ಳೆ ಪ್ರಯತ್ನ ಮಾಡ್ತೆ. ಆತೋ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *