Oppanna.com

ಕಾಟು ಹರಟೆ: ‘ಹಣೆವಾರ’- ಗೆಡ್ಡ

ಬರದೋರು :   ದೊಡ್ಡಮಾವ°    on   19/01/2011    22 ಒಪ್ಪಂಗೊ

ದೊಡ್ಡಮಾವ°
Latest posts by ದೊಡ್ಡಮಾವ° (see all)

ಮಾ ಬುದ್ದಿವಂತನ ಹಾಂಗೆ ವಿಶ್ವೇಶ್ವರ ಭಟ್ಟ ಹೇಳ್ತ°, ಬಹುಜನರ ಎದುರು ತಲೆ ತೊರುಸೆಡಿ. ಅದು ಅಸಭ್ಯ.
ಪ್ರಶ್ನೆಗೆ ಉತ್ತರ ಹೊಳೆಕಾರೆ ತಲೆ ತೊರುಸೇಕು, ಉಗುರು ಕಚ್ಚೇಕು,ಅಲ್ದೋ..?

ಆ ಮೆದುಳಿಲ್ಲಿದ್ದ ಪ್ರತಿಭೆಯ ಜ್ಞಾನಕ್ಕೆ ತರೇಕಾರೆ ಎಂತಾರು ಒಂದು ಚೇಷ್ಟೆ ಬೇಕಾವುತ್ತೇ.
ಆತಪ್ಪ, ಬೇಡದ್ರೆ ಬೇಡ – ಉದ್ದ ಗೆಡ್ಡ ಇದ್ದರೆ ಸಾಕಕ್ಕು. ಬೇಕಾರೆ ರಜ ಬೇಗವೇ ಪ್ರತಿಭನ ಹೆರ ಬರುಸುಗು – ಗೆಡ್ಡ ತೊರುಸಿರೆ.
ಏಕೆ ಹೇದರೆ ಗೆಡ್ಡದ ಬೇರು ನೇರ ಮೆದುಳಿಂಗೆ ಸಂದೇಶ ಕೊಡುತ್ತು. ಇವೆಲ್ಲ ಮಹಾನುಭಾವರು ಆದ್ಸು ಹೇಂಗೆ!
ರವೀಂದ್ರನಾಥ ಟಾಗೋರ್, ಗೆಲಿಲಿಯೋ.. ಹೋಗಲಿ, ಈಗಾಣ ಪ್ರಕಾಶರಾವ್ ಪಾವಗಡ …
ಅವರ ಗೆಡ್ಡದ ಮೂಲಕವೇ. ಸಂದೇಹ ಬೇಡ.

ಮಂತ್ರದ್ರಷ್ಟಾರರು ನಮ್ಮ ಋಷಿಮುನಿಗೊ ಉದ್ದ ಗೆಡ್ಡ ಇಲ್ಲದ್ದಿದ್ದಿದ್ದ್ರೆ, ವೇದೋಪನಿಷತ್ತು, ರಾಮಾಯಣಾದಿಗೊ ಇರ್ತಿತೋ?
ಬ್ರಹ್ಮನೂ ಹಾಂಗೇ.
ವಿಶ್ವಾಮಿತ್ರನ ಗೆಡ್ಡಕ್ಕೆ ಮರುಳಾಗಿ ಶಕುಂತಲೆ ಆವಿರ್ಭವಿಸಿದ್ಸರಿಂದ ಶಾಕುಂತಲಾ ಹೇಳ್ತ ಸುಂದರ ಕಾವ್ಯ (ನಾಟಕ) ಸಾರಸ್ವತ ಲೋಕಕ್ಕೆ ಆಸ್ತಿ ಆತು.

ಆ.! ಆಗಳೇ ಕೇಟೆ, ಗೆಡ್ಡ ಇಲ್ಲದ್ದ ಋಷಿ ಇದ್ದನೋ ಹೇದು, ಇದ್ದ ಒಬ್ಬ ನಾರದ ಹೇದು – ಏಕೂ ಬೇಡದ್ದವ, ಸುಮ್ಮನೆ ಚಾಡಿ ಹೇಳುಸ್ಸು.
ಎಲ್ಲಿ ರಕ್ತಪಾತ ಆವುತ್ತೋ ಅದರ ದೂರ ನಿಂದು ನೋಡಿ ಕೊಶಿ ಪಡುಸ್ಸು.
ಕರ್ಣಾರ್ಜುನ ಯುದ್ಧ ಅಪ್ಪಗ ಬಾನಲ್ಲಿ ನಿಂದು ನೋಡಿಂಡಿದ್ದಿದ್ದ.
ತಾರಕಕ್ಕೇರುವಗ ಸಂತೋಷಲ್ಲಿ “ಅಂಬರದೊಳ್ ನರ್ತಿಸಿದನ್ ನಾರದಂ ಗುಡಿಕಟ್ಟಿ ಕೋವಣಮಮ್”.
ಚೀ, ನಾಚಿಕೆ ಇಲ್ಲದ್ದ ಬಡುವ.

ಬಾರತಕ್ಕೆ ನೋಬೆಲ್ ಸಿಕ್ಕೆಕ್ಕಾದರೆ ಆರಾದರೂ ಗೆಡ್ಡದವರಿಂದಲೇ ಆಯೇಕು.
ಅಂಬಗ ಮಾಪಳಗೊಕ್ಕೆ ಉದ್ದ ಉದ್ದ ಬೆಳಿಬೆಳಿ ಗೆಡ್ಡ ಇರ್ತನೆ?
ಇರ್ತು; ಹೋತಂಗೆ ಗೆಡ್ಡ ಇಲ್ಲೆಯೋ? ನಾಯಿ ಬೀಲದ ಹಾಂಗೆ – ಮಾನ ಮುಚ್ಚಲೂ ಆಗ, ನೆಳವು ಓಡುಸಲೂ ಆಗ.
ಜೀವ ಕೋಟಿಗೆ ಉಪಕಾರ ಆವುತ್ತ ಕೆಲಸ ಅವರಿಂದ ಆದ್ಸು ಇದ್ದೋ?
ಯಾವುದೇ ಒಂದು ಸುವ್ಯವಸ್ಥೆ ಇದ್ದರೆ ಅದರ ಕುಟ್ಟೆ ತೆಗದು ಚೆಂದ ನೋಡುಸ್ಸು.
ಅನಾಚಾರ ಎಂತ ಬೇಕಾರೂ ಮಾಡಲಕ್ಕು. ಶುಕ್ರವಾರ ಪಳ್ಳಿಗೆ ಹೋದರೆ ಸಾಕು.

ಶಿಖ ಹೇಳಿರೆ ಜೊಟ್ಟು. ಗೆಡ್ಡಕ್ಕೆ ಮೀಸಗೆ ಸಂಸ್ಕೃತಲ್ಲಿ ಎಂತ ಹೇಳುಸ್ಸು, ನೆಂಪಾವುತಿಲ್ಲೆ. ಹುಡುಕ್ಕಿ ನೋಡೇಕಷ್ಟೆ.

ಎಂಗಳ ಹತ್ರಾಣ ಮನೆಯವು ಗೆಡ್ಡವ ಗಡ್ಡ ಹೇಳುಸ್ಸು. ಹಾಂಗೆ ಗೆಂಡೆ ಗೆಡ್ಡೆ, ಗೆಂಡ- ಗಂಡ.
ಮನೆಲಿ ಇರ್ತ ಹೆಮ್ಮಕ್ಕೊ ಹೇಳುಗು:-

ಇವು ಆನು ಕೆಲಸಿ ಹತ್ರಂಗೆ ಹೋಗಿ ಗೆಡ್ಡ ತೆಗಶಿಂಡು ಬತ್ತೆ ಹೇದಿಕ್ಕಿ ಹೋಯಿದವು. ಇನ್ನೂ ಬಯಿಂದವಿಲ್ಲೆ. ಕುಚ್ಚಿ ತೆಗಶಿಂಡು ಕೂರ್ತವೋ ಎಂತ್ಸೋ?

ಕನ್ನಡ ಆಡ ಅವರ ಭಾಷೆ. ದಣಿಯ ವಿತ್ಯಾಸ ಇಲ್ಲೆ, ಹೇದ್ಸೆಲ್ಲಾ ಅರಡಿತ್ತು. ಅವಕ್ಕೂ ನವಗೂ ಹಶು ಆಗಿ ಹೊಟ್ಟೆ ಪೆಡಚ್ಚುತ್ತು.
ಇವು ಬಂದು ಮಿಂದು ಊಟ ಅಪ್ಪಗ ಒಂದು ಕವಳಿಗೆ ಮಜ್ಜಿಗೆ ನೀರಾರೂ ಮಾಡಿ ಕುಡಿತ್ತೆ.

22 thoughts on “ಕಾಟು ಹರಟೆ: ‘ಹಣೆವಾರ’- ಗೆಡ್ಡ

  1. ದೊಡ್ಡ ಮಾವ°, ಶುದ್ದಿ ಲಾಯ್ಕ ಆಯಿದು. ಧನ್ಯವಾದ.
    ನಿಂಗೋ ಬರದ್ದದರಲ್ಲಿ ಯೋಚನೆ ಮಾಡ್ಲೆ ಸುಮಾರು ಇದ್ದು. ಕೆಲವು ದಿನ ಬೇಕಿದಾ ಅರಗುಸುಲೆ!!!
    ಬರೆತ್ತಾ ಇರಿ ಹೀಂಗಿಪ್ಪ ವಿಚಾರಂಗಳ… ಎಂಗಳ ಭಾಶೆಯೂ ಸರಿ ಅಕ್ಕು. ಹೊಸ ವಿಚಾರ ಗೊಂತಾದ ಹಾಂಗೆದೇ ಅಕ್ಕು.

    ಎನಗೆ ಕೆಲವು ಶಬ್ಧಂಗ ಅರ್ತ ಆಗದ್ದೆ ಒಪ್ಪಣ್ಣನ ಹತ್ತರೆ ಕೇಳಿಗೊಂಡೆ.
    ನಿಂಗೊ ಕೆಲವು ಶಬ್ಧ ಬೈಲಿಂಗೆ ಅರ್ತ ಆಗ ಹೇಳಿ ಅಪ್ಪದರ ಅಂದಾಜು ಮಾಡಿ, ಶಬ್ಧದ ಅರ್ತವೂ ಕರೇಲಿ ಕೊಟ್ಟಿಕ್ಕಿ ಆತೋ…
    ಇಲ್ಲದ್ದರೆ ಎನ್ನ ಹಾಂಗಿರ್ತವಕ್ಕೆ ಪೂರ ಅರ್ತ ಆವುತ್ತಿಲ್ಲೆ.

    1. ಅದು ಒಳ್ಳೆ ಬುದ್ದಿವಂತಿಕೆ ನಿಜ, ಎನಗೂ ಹಾಂಗಿಪ್ಪದು ತಲಗೆ ಹೋಯಿದಿಲ್ಲೆ. ಇನ್ನಾಣ ಸರ್ತಿ ಬರವಗ ಹಾಂಗಿಪ್ಪ ಒಂದು ಪಟ್ಟಿ ಕೊಡ್ಳೆ ಪ್ರಯತ್ನ ಮಾಡ್ತೆ. ಆತೋ…

  2. ದೊಡ್ಡಮಾವಾ..
    ಶುದ್ದಿ ಕೇಳಿ ಬಾರೀ ಕೊಶಿ ಆತು.
    ಹಳೆ ಹವ್ಯಕ ಭಾಶೆಯ ಶೆಬ್ದಂಗೊ ಕೇಳಿ ಅಪ್ಪಗ ಮನಸ್ಸು ಒಂದರಿ ಕೊಶೀ ಆಗಿಬತ್ತು.

    ಗೆಡ್ಡದ ಶುದ್ದಿ ಕೇಳುವಗ ಎಲ್ಲೋರಿಂಗೂ ಆಸೆ ಆತಿದಾ..
    ಹಾಂಗೇ, ಇನ್ನಾಣ ಶುದ್ದಿ ಯೇವಗ ಹೇಳ್ತಿ – ಹೇಳಿಯೂ ಆಸೆ ಆಗಿಂಡು ಇದ್ದು! 🙂

    1. ಮನೆಲಿ ಆಟ ಆಡ್ಳೆ ಒಬ್ಬ° ಪುಳ್ಳಿ ಬಂದ ಮೇಲೆ ಪುರುಸೊತ್ತು ರೆಜಾ ಕಮ್ಮಿ ಆಯಿದು ಇದಾ… ಇನ್ನಾಣ ಶುದ್ದಿ ಬೇಗ ಹೇಳ್ತೆ, ಆತೋ…

  3. e bosa anaamika idra odiddavilya heli kanthalda….? olle lekhana dodda mavange dhanyavada….aanude gedda bidvado heli alochane madigondu idde…

    1. ನೀನು ಗೆಡ್ಡ ಬಿಡ್ತೆಯೋ? ರಾಮ ರಾಮಾ..!!
      ಮತ್ತೆ, ನೀನು ತೆಗದ ಪಟಲ್ಲಿ ಪೂರ ಸೇಮಗೆಸೇಮಗೆ ಬಕ್ಕು…! 😉
      ಬೇಡ, ಹೀಂಗಿದ್ದರೇ ಲಾಯಿಕ.

      ಮತ್ತೆ ಗೊಂತಿಲ್ಲೆ, ಬೈಲಿನ ಸಮಷ್ಟಿಯ ಅಭಿಪ್ರಾಯ! 😉

  4. ಮಾಪಳೆಗಳ ಶಕ್ತಿ ಇಪ್ಪದು ಈ ಗೆಡ್ದಲ್ಲಿ ಅಲ್ಲದೊ.ಪ್ರತಿಯೊಬ್ಬ ಉಗ್ರ ಗಾಮಿಗವಕ್ಕೊ ಗೆಡ್ದ ಇದ್ದಲ್ಲದೊ…….

  5. ಬಾರಿ ಒಳ್ಳೆ ಒ೦ದು ಚೆನಲ್ ಮತ್ತು ಅ೦ತ ರ್ಜಾಲದ ಬಗ್ಯೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದ.ಎನ್ನ ಪ್ರೀತಿಯ ಚೆನಲು ವೆಬ್ಸೈಟು.ಬಯಲಿನೋರಿ೦ಗೆಲ್ಲಾ ಉಪಕಾರ ಆವುತ್ತ ಹಾ೦ಗಿಪ್ಪ ಹಿ೦ಗಿರ್ತ ಮಾಹಿತಿಗೊ ಇನ್ನಷ್ಟು ಬರಳಿ.ಇನ್ನೊ೦ದು ವಿಷಯ ಎ೦ತ ಹೇಳೀರೆ ನಮ್ಮ ಬೋಸ ಭಾವನ ಇಟೆಲಿಗೆ ಕಳುಸೀರೆ ಅಕ್ಕೋ ಹೇಳಿ ರಜಾ ಆ ಕುದಲು ಕರು೦ಚಿ ಸರಿ ಅಕ್ಕೋ ಹೇಳಿ.ಏವದಕ್ಕೂಬಯಲಿನೋರು ಒ೦ದು ತೀರ್ಮಾನಕ್ಕೆ ಬಪ್ಪದು ಒಳ್ಳೆದು.ಒಪ್ಪ೦ಗಳೊಟ್ಟಿ೦ಗೆ

  6. ಒಂದು ಸಣ್ಣ ಸಂಶಯ ಇದ್ದು, ಬೈಲಿನ ಗೆಡ್ಡಬಿಟ್ಟ ಬುದ್ದಿಜೀವಿಗೋ ದಯಮಾಡಿ ಉತ್ತರಿಸಿಕ್ಕಿ!

    ಗೆಡ್ಡಬಿಡುದು ಗೆಡ್ಡಬಿಡುದು ಹೇಳಿ ಮಾತಾಡಿಗೊತ್ತಾ ಇದ್ದವನ್ನೆ ಎಲ್ಲೋರು, ಈ ಗೆಡ್ಡವ ಬಿಟ್ರೆ ಅದು ಕೆಳ ಬೀಳದೋ?
    ಗೆಡ್ಡ ಉದ್ದಕ್ಕೆ ಬಿಡುದು ಹೇಳ್ತವಲ್ಲದೋ, ಅಂಬಾಗ ಅಡ್ಡಕ್ಕೂ ಬಿಡ್ಲಾವುತ್ತೋ??

    😉 ಬೋಸಭಾವ! ನಿನ್ನತ್ರೆ ಕೇಳ್ತಿಲ್ಲೆ ಆತೋ, ನಿನ್ನ ಗಡ್ಡ ಎಲ್ಲಾ ಹೊಡೆಂಗೂ ಸರಿಸಮವಾಗಿ ಹಬ್ಬಿದಾಂಗಿದ್ದು. (ALL ROUND Development) 😀

    1. [ಗೆಡ್ಡಬಿಟ್ಟ ಬುದ್ದಿಜೀವಿಗೋ]
      ಸರಿಯಾದ ಪದ ಪ್ರಯೋಗ. ಆದರೆ ಬುದ್ಧಿಜೀವಿಗಳ ಬುದ್ಧಿ ಇಪ್ಪದು ಅವು ನೇಲ್ಸಿದ ಚೀಲಲ್ಲಿ ಅಲ್ಲದಾ?
      ಬುದ್ಧಿ ತಲೆಲಿ ಇಲ್ಲದ್ದರೆ ಉತ್ತರ ಹೇಳ್ತದು ಹೇಂಗೆ ಭಾವ?

    2. ಗುರುತ್ವಾಕರ್ಷಣೆಯ ನಿಯಮವನ್ನೇ ಪ್ರಶ್ನೆ ಮಾಡಿಗೊಂಡಿದ್ದೆನ್ನೇ ಮಾಣೀ .ಅಡ್ಡ ಬೆಳವದು ಮನುಷ್ಯರು ,ಗೆಡ್ಡವ ನೆಲ ಎಳೆತ್ತಿಲ್ಲೆಯೋ?

      1. ಓ, ಅದಪ್ಪು! ಆದರೆ ಆ ನ್ಯೂಟನ್ ಅಜ್ಜಂಗೆ ತಲಗೆ ಏಪ್ಳು ಬಿದ್ದಪ್ಪಗಳೇ ಗೊಂತಾದ್ದಡ! ಗಡ್ಡ ಕೆಳ ಬೆಳವದಾರ ನೋಡಿ ಏಕೆ ತಲಗೆ ಹೋಯ್ದಿಲ್ಲೆಯೋ! ಸುಮ್ಮನೆ ಅಲ್ಲ, ಭಾರತೀಯರೇ ಬುದ್ದಿವಂತರು ಹೇಳುದು! 😉

  7. {…ಪ್ರತಿಭನ ಹೆರ ಬರುಸುಗು}
    ಮಾವ, ಎಲ್ಲಾ ಸರಿ, ಈ ಪ್ರತಿಭ ಹೇಳಿರೆ ಆರು?? ಹೆರ ಎಲ್ಲಿಗೆ ಬತ್ಸು?? 😉

    {…ಗೆಡ್ಡದ ಬೇರು ನೇರ ಮೆದುಳಿಂಗೆ ಸಂದೇಶ ಕೊಡುತ್ತು}
    ಓ ಹೋ…!! ಹಾಗೆಲ್ಲ ಒಳ ಒಳ, ಗೆಡ್ಡ-ಮೆದುಳು ಸಿಕ್ಸೆ೦ಡು ಇದ್ದೊ??…. 😛
    ಗೆಡ್ಡಕ್ಕೆ ದೀನಾ ಎಣ್ಣೆ-ಮಣ್ಣೊ ಹಾಕೇಕು. ಅಲ್ಲದ್ರೆ, ತಲೆ ಚಾಣೆ ಆವತ್ತಾ೦ಗೆ, ಗಡ್ಡವೂ ಚಾಣೆ ಅಕ್ಕೊ ಎನೋ?? 😉

    {..ಗೆಡ್ಡ ಬಿಡ್ತವ್ವು….. ಮಹಾನುಭಾವರು}
    ಇದಾ, ಆನು ಕೂಡ, ಮಹಾನುಭಾವನೇ… ಆನ ಗೆಡ್ಡ ಬೀಡ್ತೆ… 😀

    1. ಪ್ರತಿಭನ ಹೆರ ಬರುಸುದು ಹೇದರೆ ಪ್ರತಿಭೆಯ ಹೆರ ಬರ್ಸುದು ಹೇಳಿ.ಹೀಂಗೆ ಶಬ್ದಂಗಳ ಸೃಷ್ಟಿ ಮಾಡ್ಸಕ್ಕೆ ಪರ್ಸೊನಿಫಿಕೇಷನ್ ಹೇಳಿ ಆರೋ ಹೇಳಿತ್ತಿದ್ದವು. ಹೆಚ್ಚು ಗೊಂತಿಪ್ಪವು ವಿವರಣೆ ಕೊಡುಗು ಇದಾ…
      ನಿನ್ನ ಗೆಡ್ಡವ ಎಣ್ಣೆ ಹಾಕಿ, ಬಾಚಿರೆ ಚೆಂದ ಕಾಂಗು ಹೇಳ್ಸರಲ್ಲಿ ಸಂಶಯ ಇಲ್ಲೆ. ಅಲ್ಲದ್ರೆ ನಾಳ್ದು ಮುಜುಂಗರೆ ಜಾತ್ರೆಗೆ ಬಾ, ಹೀಂಗೇ ಇಪ್ಪ ನಮ್ಮವ° ಒಬ್ಬ° ಇರ್ತ ಅಲ್ಲಿ, ಅವನ ತೋರುಸಿ ಕೊಡುವೆ. ಆಗದೋ…

  8. ದೊಡ್ಡ ಮಾವ೦ ಲೇಖನ ಒಳ್ಳೆದಾಯಿದು ಓದಿ ಗೆಡ್ಡ ಬೆಳಸುತ್ತೋ ಹೇಳಿ ಹೆ೦ಡತ್ತಿ ಹತ್ತರೆ ಒ೦ದು ಸಮಾಲೋಚನೆ ಮಾಡಿದೆ.ಅಯ್ಯೊ ಹತ್ತುವರ್ಷ ಆದರೂ ನಿ೦ಗಳ ಗೆಡ್ಡ ಆ ಮಟ್ಟಕ್ಕೆ (ಬುದ್ದಿಯೊ ಗೊ೦ತಿಲ್ಲೆ) ಬಾರ ಹೇಳಿತ್ತು.ಎನ್ನದು ಉತ್ತಮರ ಗೆಡ್ಡ ಅದ.ಉಳ್ಳಿ ಗಡ್ಡಾ ಉತ್ತಮರ ಗಡ್ಡ ಹೇಳಿ ಒ೦ದು ಅರಸಿ೦ಗೆ ಕೆಲಸಿ ಹೇಳಿದ್ದಾಡ.ಅದರ ಕತೆ ಹೇಳೀರೆ ಅದೆ ಒ೦ದು ಲೇಖನ ಅಕ್ಕು ಹ೦ಗಾಗಿ ಬೇಡ.ಅ೦ತೂ ನಿ೦ಗಳ ಲೇಖನ ಓದಿ ಬುದ್ದಿವ೦ತ ಆವುತ್ತ ಹುಮ್ಮಸಿಲ್ಲಿ ಗೆಡ್ಡ ಬೆಳಸೇಕು ಹೇಳಿ ಹೆರಟೆ ತಲೆ ಎತ್ತಿತ್ತಿಲ್ಲೆ ಅದ.ಸರಿ ಇಲ್ಲಿಗೆ ನಿಲ್ಲುಸುವೊ೦.ಒಪ್ಪ೦ಗಳೊಟ್ಟಿ೦ಗೆ.

  9. ದೊಡ್ಡ ಮಾವ (ಎನಗೆ ಭಾವ) ಬರದ ಪ್ರತಿಯೊಂದು ವಾಕ್ಯವೂ ಅರ್ಥ ಗರ್ಭಿತ. ಸಣ್ಣ ಕ್ಯಾಪ್ಸೂಲಿಲ್ಲಿ ಎಲ್ಲ ಮದ್ದನ್ನು ತುಂಬುಸಿದ ಹಾಂಗೆ . “ಗೆಡ್ಡವಿಲ್ಲದವ ಬಲು ದಡ್ಡ” ಹೇಳಿ ಬುದ್ದಿವಂತರ ಹಾಂಗೆ ತೋರ್ಸೆಳುತ್ತ ಕೆಲವು ಜೆನ ಹೇಳುಗು. ಈಗಾಣ ಕಾಲಲ್ಲಿ ಪ್ರದರ್ಶನಕ್ಕೆ ಜಾಸ್ತಿ ಬೆಲೆ ಅಲ್ಲದೊ ? ಅನಾಚಾರ ಎಂತ ಬೇಕಾರೂ ಮಾಡಲಕ್ಕು. ಶುಕ್ರವಾರ ಪಳ್ಳಿಗೆ ಹೋದರೆ ಸಾಕು.
    ಎಂತಾ ಮಾತಲ್ದೊ ? ಲಾಯಕಾಯಿದು, ಭಾವ. ಇನ್ನೂ ಇಂತ ಲೇಖನಂಗೊ ಬರಳಿ.

  10. ಗೆಡ್ಡಪುರಾಣ ಓದಿ ಮೀಸೆಯೆಡಕ್ಕಿಲಿ ನೆಗೆ ಬಂತು,ದೊಡ್ಡ ಮಾವಾ.. ಒ೦ದರಿ ಗೆಡ್ಡ ಬಿಟ್ಟರಕ್ಕೋ ಹೇಳಿ ಆಸೆ ಆವುತ್ತ್ಸು.ಬುದ್ಧಿಜೀವಿ ಹೇಳ್ಸಿಗೊ೦ಬಲಕ್ಕನ್ನೇ !!

    1. {..ಒ೦ದರಿ ಗೆಡ್ಡ ಬಿಟ್ಟರಕ್ಕೋ}

      ಭಾವ, ನಿ೦ಗೊ ಗೆಡ್ಡ ಬಿಟ್ಟರೆ, ಮತ್ತೆ ಗುರ್ತ ಸಿಕ್ಕಾ… ಹಾ.. ಹೇಳಿದ್ಲೇ ಬೇಡ…!! 😛
      ಮತ್ತೆ ಮೀಸೆ- ಗೆಡ್ಡ, ಎಡಕ್ಕಿಲ್ಲಿ ಇಪ್ಪ ಜೆನ ಆರು ಹೇಳಿ ಗೊ೦ತಾಗ.. 🙁

      1. ಹೋ,ಅಪ್ಪನ್ನೇ.ನಿನ್ನ ಗೆಡ್ಡ ಮರದೇ ಹೊತದಾ. ಆರು ಹೇಳಿದ್ದು ನೀನು ಬಡ್ದ ,ದಡ್ಡ ಹೇಳಿ?ನೋಡಿದೆಯಾ,ಟಾಗೋರ್, ಗೆಲಿಲಿಯೋ ಎಲ್ಲರ ಒಟ್ಟಿ೦ಗೆ ನಿನ್ನನ್ನೂ ಸೇರ್ಸಿದವದಾ..

      2. [ನಿ೦ಗೊ ಗೆಡ್ಡ ಬಿಟ್ಟರೆ, ಮತ್ತೆ ಗುರ್ತ ಸಿಕ್ಕಾ]
        ಬೋರ್ಡು ಹಾಕಿಗೊಂಡರಾತು, ಬೋಸಭಾವ ಹಾಂಗೆ ಮಾಡ್ಸು.. 😉

        [ಒ೦ದರಿ ಗೆಡ್ಡ ಬಿಟ್ಟರಕ್ಕೋ]

        ಬಿಡ್ತರೆ ಅಡ್ಡಿಲ್ಲೆ ಮಾವ, ಬೀಳುವ ಮೊದಲು ಹಿಡ್ಕೊಳ್ಳಿ! 😉

        1. ಏ ಮಾಣಿ,ಹಿಡಿಸೂಡಿಯ ಕಡೆ ಹಿಡಿವದಲ್ಲದೋ?ಕೊಡಿಯನ್ನೂ ಹಿಡಿಯೆಕ್ಕೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×