ಕಣ್ಣಾ ಮುಚ್ಚೇ ಕಾಡೇ ಗೂಡೇ…

August 28, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಣ್ಣಾ ಮುಚ್ಚೇ ಕಾಡೇ ಗೂಡೇ
ಉದ್ದಿನಾ ಮೂಡೇ ಉರುಳೇ ಹೋಯ್ತು
ನನ್ನಯ ಆಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಆಕಿ ಹಿಡಿದುಕೊಳ್ಳಿ..
ಮಕ್ಕೊಗೆಲ್ಲ ಭಾರೀ ಖೊಷಿ…
ಕನ್ನಡ ದೇಶದ ಚಾಮರಸ ಒಂದರಿ ಜನರ ಕಂಡ ಹಾಂಗೂ ಆತು ವಿಹಾರಕ್ಕೆ ಹೋದ ಹಾಂಗೂ ಆತು ಹೇಳ್ಯೊಂಡು ಊರು ತಿರುಗುಲೆ ಹೆರಟದಡ.
ರಾಜ ಹೇಳುವಗ ಸುಮ್ಮನೆ ಆವ್ತಿಲ್ಲೆನ್ನೆ. ಹಾಂಗಾಗಿ ಒಟ್ಟಿಂಗೆ ಮಂತ್ರಿ ತಿಪ್ಪಸ್ವಾಮಿಯೂ…
ಹೀಂಗೆ ಸಂಚಾರ ಮಾಡಿಯೋಂಡಿಪ್ಪಗ ದಾರಿಕರೆಲಿ ಏಳೆಂಟು ಮಕ್ಕೊ ಈ ಪದ್ಯ ಹೇಳ್ಯೊಂಡು ಭಾರೀ ಖೊಷಿಲಿ ಆಡಿಯೊಂಡಿತ್ತಿದ್ಸರ ಕಂಡವು.
ಒಬ್ಬನ ಕಣ್ಣಿನ ಇನ್ನೊಬ್ಬ° ಮುಚ್ಚಿ ಹಿಡಿಸ್ಸು ಕಾಣ್ತು. ಪದ್ಯ ಹೇಳಿ ಮುಗುದಪ್ಪಗ ಕಣ್ಣಿಂದ ಕೈ ತೆಗೆಸ್ಸು ಕಾಣ್ತು.
ಬಾಕಿ ಮಕ್ಕೊ ಸುತ್ತೂ ನಿಂದೋಂಡಿದ್ದವು. ಕೈ ಬಿಟ್ಟಪ್ಪಗ ಬಾಕಿ ಇಪ್ಪವರ ಅಟ್ಟುಸಿ ಹಿಡಿಸ್ಸು ಕಾಣ್ತು. ಓಡಿಯೊಂಡು ಹೋಪಗ ಕೆಲಾವು ಹುಗ್ಗಿ ಕೂರ್ಸು ಕಾಣ್ತು.
ಕಿಟ್ಟಿದ ಮಕ್ಕೊ ಔಟ್ ಆವ್ತಾ ಇದ್ದವು. ರೆಜ್ಜ ಹೊತ್ತಪ್ಪಗ ಮದಾಲು ಔಟಾದವನ ಕಣ್ಣು ಮುಚ್ಚಿ ಆಟ ಪುನಾ ಸುರು ಮಾಡ್ತವು…
ದೂರಲ್ಲಿ ನಿಂದೊಂಡು ಮಕ್ಕಳ ಆಟ ನೋಡಿಯೊಂಡು ಇದ್ದಿದ್ಸ ಅರಸಂಗೆ ಹೊತ್ತು ಹೋದ್ಸೇ ಗೊಂತಾಯಿದಿಲ್ಲೆ.
ಮಂತ್ರಿ ಬಂದು “ಸಾಲದೋ, ಇನ್ನು ಹೋಪನೋ…” ಕೇಟನಡ. “ಆಯಿದಿಲ್ಲೆ, ಇಷ್ಟು ಹೊತ್ತು ಆಟ ನೋಡಿರೂ ಎನಗೆ ಅವ್ವು ಹೇಳ್ತ ಪದ್ಯ ಎಂತ್ಸೂ ಅರ್ಥ ಆಯಿದಿಲ್ಲೆನ್ನೆ, ನಿನಗೆ ಗೊಂತಿದ್ದೋ?” ಅರಸು ಮಂತ್ರಿಯ ಹತ್ತರೆ ಕೇಳಿದ°.
“ಓಹೋ… ಅದುವೋ… ಆ ಮಕ್ಕೊ ಹೇಳ್ತ ಪದ್ಯಲ್ಲಿ ಇಡೀ ರಾಮಾಯಣವೇ ಇದ್ದು” ಹೇಳಿದ° ಮಂತ್ರಿ. ರಾಜಂಗೆ ಆಶ್ಚರ್ಯ ಆತು.
ಮಂತ್ರಿ ವಿವರಣೆ ಕೊಡ್ಳೆ ಸುರು ಮಾಡಿದ.
ಕಣ್ಣಾ ಮುಚ್ಚೇ ಹೇಳಿರೆ ಕ್ಷಣಾರ್ಧಲ್ಲಿ, ಕಣ್ಣು ಮುಚ್ಚಿ ಒಡೆಸ್ಸಷ್ಟರಲ್ಲಿ ಕಾಡನ್ನೇ ಗೂಡು ಮಾಡಿಯೊಳೆಕ್ಕಾತು. ಅರಮನೆಲಿ ಇದ್ದ ರಾಮ ದೇವರು ಕಾಡು ಪಾಲು ಆದ°.
ಉದ್ದಿನ ಮೂಡೇ ಉರುಳೇ ಹೋಯ್ತು ಹೇದರೆ, ಉದ್ದಿನ ಹಾಂಗಿಪ್ಪ ಕರಿ ಕರಿ ಬುರುಡೆಗೊ ಸಗಣಕ್ಕೆ ಸಾವಿರ ಮಧ್ಯಾಹ್ನಕ್ಕೆ ಲಯ ಹೇಳ್ತ ಹಾಂಗೆ ಉರುಳಿ ಸೋತು ಹೋದವು ಹೇಳಿ ಅರ್ಥ ಮಾಡಿಯೊಂಬ°.
ಹಾಂಗಾರೆ ಎಂತ ಹೇಳಿ ಆತು..? ಕಾಡು ಸೇರಿದ ರಾಮ ರಾಕ್ಷಸಂಗಳ ಕೊಂದ° ಹೇಳಿ ಆತಿಲ್ಯೋ…
ನಮ್ಮಲ್ಲಿ ಕೆಲಾವು ಮಕ್ಕೊ ಆಕಿ ಹೇಳ್ಸರ ಹಕ್ಕಿ ಹೇಳ್ತವು, ಸಾಮಾನ್ಯವಾಗಿ ಕೈಯ ಒಳ ಇಪ್ಪ ಮನೆ ಹೆಂಮಕ್ಕಳ ಹೇಳ್ಸು ಇದಾ..
ಹಾಂಗಾಗಿ ನನ್ನಯ ಆಕಿ ಬಿಟ್ಟೇ ಬಿಟ್ಟೇ ನಿಮ್ಮಯ ಆಕಿ ಹಿಡಿದುಕೊಳ್ಳಿ ಹೇಳಿರೆ ಎನ್ನ ಹೆಂಡತಿಯ ಬಿಡೇಕಾಗಿ ಬಂತು ನಿಂಗಳ ಹೆಂಡತಿಯ ಜಾಗ್ರತೆಲಿ ಮಡಿಕ್ಕೊಳ್ಳಿ ಹೇಳಿ ರಾಮ ದೇವರು ನವಗೆ ಉಪದೇಶ ಕೊಡ್ಸು ಹೇಳಿ ಮಂತ್ರಿ ವಿವರಣೆ ಕೊಟ್ಟ.
ರಾಜಂಗೆ “ಅಪ್ಪನ್ನೆ…!!” ಹೇಳಿ ಅನುಸಿ ಹೋತಡ.
ಕಣ್ಣಾ ಮುಚ್ಚೇ ಕಾಡೇ ಗೂಡೇ..., 5.0 out of 10 based on 5 ratings
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. Oppannange namma hale ajji kathegalannu heenge blogilli serusalakkanne!!
  Aanu sanna ippaga enna ajji sumaru kathe helugu – suttavina kathe, 7 sampige marada rajakumariya kathe ityadi..
  Enna magalu eega kelire enage ondoo gontille… entha viparyasa.
  ee vishayavagi ningo ondu katheya puta eke suru madlaga??

  [Reply]

  ಮುಳಿಯ ಭಾವ

  raghumuliya Reply:

  ಒಳ್ಳೆ ಅಭಿಪ್ರಾಯ.
  ಒಪ್ಪಣ್ಣ ಭಾವಾ..ಕಥಾಸರಿತ್ಸಾಗರ ಶುರು ಆಗಲಿ ಬೈಲಿಲಿ.ಮುಂದೆ ನಿನಗೂ ಬೇಕಕ್ಕು,ಹೇಳುಲೆ!!

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನಿಂಗಳ ಕಥೆಂದಲೇ ಶುರು ಆಗ್ಲಿ ಮುಳಿಯ ಭಾವ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಶಾಂತತ್ತೆಪುಣಚ ಡಾಕ್ಟ್ರುವಸಂತರಾಜ್ ಹಳೆಮನೆದೊಡ್ಡಭಾವನೆಗೆಗಾರ°ಅಡ್ಕತ್ತಿಮಾರುಮಾವ°ಮಾಷ್ಟ್ರುಮಾವ°ಪವನಜಮಾವಶುದ್ದಿಕ್ಕಾರ°ಜಯಗೌರಿ ಅಕ್ಕ°ದೊಡ್ಮನೆ ಭಾವಪುತ್ತೂರುಬಾವಬೊಳುಂಬು ಮಾವ°ಯೇನಂಕೂಡ್ಳು ಅಣ್ಣvreddhiವಿದ್ವಾನಣ್ಣವಾಣಿ ಚಿಕ್ಕಮ್ಮಎರುಂಬು ಅಪ್ಪಚ್ಚಿಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೀಪಿಕಾವೇಣಿಯಕ್ಕ°ಪ್ರಕಾಶಪ್ಪಚ್ಚಿಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ