Oppanna.com

ಕಣ್ಣಾ ಮುಚ್ಚೇ ಕಾಡೇ ಗೂಡೇ…

ಬರದೋರು :   ದೊಡ್ಡಮಾವ°    on   28/08/2010    13 ಒಪ್ಪಂಗೊ

ದೊಡ್ಡಮಾವ°
Latest posts by ದೊಡ್ಡಮಾವ° (see all)
ಕಣ್ಣಾ ಮುಚ್ಚೇ ಕಾಡೇ ಗೂಡೇ
ಉದ್ದಿನಾ ಮೂಡೇ ಉರುಳೇ ಹೋಯ್ತು
ನನ್ನಯ ಆಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಆಕಿ ಹಿಡಿದುಕೊಳ್ಳಿ..
ಮಕ್ಕೊಗೆಲ್ಲ ಭಾರೀ ಖೊಷಿ…
ಕನ್ನಡ ದೇಶದ ಚಾಮರಸ ಒಂದರಿ ಜನರ ಕಂಡ ಹಾಂಗೂ ಆತು ವಿಹಾರಕ್ಕೆ ಹೋದ ಹಾಂಗೂ ಆತು ಹೇಳ್ಯೊಂಡು ಊರು ತಿರುಗುಲೆ ಹೆರಟದಡ.
ರಾಜ ಹೇಳುವಗ ಸುಮ್ಮನೆ ಆವ್ತಿಲ್ಲೆನ್ನೆ. ಹಾಂಗಾಗಿ ಒಟ್ಟಿಂಗೆ ಮಂತ್ರಿ ತಿಪ್ಪಸ್ವಾಮಿಯೂ…
ಹೀಂಗೆ ಸಂಚಾರ ಮಾಡಿಯೋಂಡಿಪ್ಪಗ ದಾರಿಕರೆಲಿ ಏಳೆಂಟು ಮಕ್ಕೊ ಈ ಪದ್ಯ ಹೇಳ್ಯೊಂಡು ಭಾರೀ ಖೊಷಿಲಿ ಆಡಿಯೊಂಡಿತ್ತಿದ್ಸರ ಕಂಡವು.
ಒಬ್ಬನ ಕಣ್ಣಿನ ಇನ್ನೊಬ್ಬ° ಮುಚ್ಚಿ ಹಿಡಿಸ್ಸು ಕಾಣ್ತು. ಪದ್ಯ ಹೇಳಿ ಮುಗುದಪ್ಪಗ ಕಣ್ಣಿಂದ ಕೈ ತೆಗೆಸ್ಸು ಕಾಣ್ತು.
ಬಾಕಿ ಮಕ್ಕೊ ಸುತ್ತೂ ನಿಂದೋಂಡಿದ್ದವು. ಕೈ ಬಿಟ್ಟಪ್ಪಗ ಬಾಕಿ ಇಪ್ಪವರ ಅಟ್ಟುಸಿ ಹಿಡಿಸ್ಸು ಕಾಣ್ತು. ಓಡಿಯೊಂಡು ಹೋಪಗ ಕೆಲಾವು ಹುಗ್ಗಿ ಕೂರ್ಸು ಕಾಣ್ತು.
ಕಿಟ್ಟಿದ ಮಕ್ಕೊ ಔಟ್ ಆವ್ತಾ ಇದ್ದವು. ರೆಜ್ಜ ಹೊತ್ತಪ್ಪಗ ಮದಾಲು ಔಟಾದವನ ಕಣ್ಣು ಮುಚ್ಚಿ ಆಟ ಪುನಾ ಸುರು ಮಾಡ್ತವು…
ದೂರಲ್ಲಿ ನಿಂದೊಂಡು ಮಕ್ಕಳ ಆಟ ನೋಡಿಯೊಂಡು ಇದ್ದಿದ್ಸ ಅರಸಂಗೆ ಹೊತ್ತು ಹೋದ್ಸೇ ಗೊಂತಾಯಿದಿಲ್ಲೆ.
ಮಂತ್ರಿ ಬಂದು “ಸಾಲದೋ, ಇನ್ನು ಹೋಪನೋ…” ಕೇಟನಡ. “ಆಯಿದಿಲ್ಲೆ, ಇಷ್ಟು ಹೊತ್ತು ಆಟ ನೋಡಿರೂ ಎನಗೆ ಅವ್ವು ಹೇಳ್ತ ಪದ್ಯ ಎಂತ್ಸೂ ಅರ್ಥ ಆಯಿದಿಲ್ಲೆನ್ನೆ, ನಿನಗೆ ಗೊಂತಿದ್ದೋ?” ಅರಸು ಮಂತ್ರಿಯ ಹತ್ತರೆ ಕೇಳಿದ°.
“ಓಹೋ… ಅದುವೋ… ಆ ಮಕ್ಕೊ ಹೇಳ್ತ ಪದ್ಯಲ್ಲಿ ಇಡೀ ರಾಮಾಯಣವೇ ಇದ್ದು” ಹೇಳಿದ° ಮಂತ್ರಿ. ರಾಜಂಗೆ ಆಶ್ಚರ್ಯ ಆತು.
ಮಂತ್ರಿ ವಿವರಣೆ ಕೊಡ್ಳೆ ಸುರು ಮಾಡಿದ.
ಕಣ್ಣಾ ಮುಚ್ಚೇ ಹೇಳಿರೆ ಕ್ಷಣಾರ್ಧಲ್ಲಿ, ಕಣ್ಣು ಮುಚ್ಚಿ ಒಡೆಸ್ಸಷ್ಟರಲ್ಲಿ ಕಾಡನ್ನೇ ಗೂಡು ಮಾಡಿಯೊಳೆಕ್ಕಾತು. ಅರಮನೆಲಿ ಇದ್ದ ರಾಮ ದೇವರು ಕಾಡು ಪಾಲು ಆದ°.
ಉದ್ದಿನ ಮೂಡೇ ಉರುಳೇ ಹೋಯ್ತು ಹೇದರೆ, ಉದ್ದಿನ ಹಾಂಗಿಪ್ಪ ಕರಿ ಕರಿ ಬುರುಡೆಗೊ ಸಗಣಕ್ಕೆ ಸಾವಿರ ಮಧ್ಯಾಹ್ನಕ್ಕೆ ಲಯ ಹೇಳ್ತ ಹಾಂಗೆ ಉರುಳಿ ಸೋತು ಹೋದವು ಹೇಳಿ ಅರ್ಥ ಮಾಡಿಯೊಂಬ°.
ಹಾಂಗಾರೆ ಎಂತ ಹೇಳಿ ಆತು..? ಕಾಡು ಸೇರಿದ ರಾಮ ರಾಕ್ಷಸಂಗಳ ಕೊಂದ° ಹೇಳಿ ಆತಿಲ್ಯೋ…
ನಮ್ಮಲ್ಲಿ ಕೆಲಾವು ಮಕ್ಕೊ ಆಕಿ ಹೇಳ್ಸರ ಹಕ್ಕಿ ಹೇಳ್ತವು, ಸಾಮಾನ್ಯವಾಗಿ ಕೈಯ ಒಳ ಇಪ್ಪ ಮನೆ ಹೆಂಮಕ್ಕಳ ಹೇಳ್ಸು ಇದಾ..
ಹಾಂಗಾಗಿ ನನ್ನಯ ಆಕಿ ಬಿಟ್ಟೇ ಬಿಟ್ಟೇ ನಿಮ್ಮಯ ಆಕಿ ಹಿಡಿದುಕೊಳ್ಳಿ ಹೇಳಿರೆ ಎನ್ನ ಹೆಂಡತಿಯ ಬಿಡೇಕಾಗಿ ಬಂತು ನಿಂಗಳ ಹೆಂಡತಿಯ ಜಾಗ್ರತೆಲಿ ಮಡಿಕ್ಕೊಳ್ಳಿ ಹೇಳಿ ರಾಮ ದೇವರು ನವಗೆ ಉಪದೇಶ ಕೊಡ್ಸು ಹೇಳಿ ಮಂತ್ರಿ ವಿವರಣೆ ಕೊಟ್ಟ.
ರಾಜಂಗೆ “ಅಪ್ಪನ್ನೆ…!!” ಹೇಳಿ ಅನುಸಿ ಹೋತಡ.

13 thoughts on “ಕಣ್ಣಾ ಮುಚ್ಚೇ ಕಾಡೇ ಗೂಡೇ…

  1. Oppannange namma hale ajji kathegalannu heenge blogilli serusalakkanne!!
    Aanu sanna ippaga enna ajji sumaru kathe helugu – suttavina kathe, 7 sampige marada rajakumariya kathe ityadi..
    Enna magalu eega kelire enage ondoo gontille… entha viparyasa.
    ee vishayavagi ningo ondu katheya puta eke suru madlaga??

    1. ಒಳ್ಳೆ ಅಭಿಪ್ರಾಯ.
      ಒಪ್ಪಣ್ಣ ಭಾವಾ..ಕಥಾಸರಿತ್ಸಾಗರ ಶುರು ಆಗಲಿ ಬೈಲಿಲಿ.ಮುಂದೆ ನಿನಗೂ ಬೇಕಕ್ಕು,ಹೇಳುಲೆ!!

  2. ಎಂಥಾ ಕಲ್ಪನೆ ನಮ್ಮ ಹಿರಿಯೋರದ್ದು!
    ದೊಡ್ಡಮಾವಂಗೆ ಧನ್ಯವಾದಂಗೊ. ಹೀಂಗೇ ಬರೆತ್ತಾ ಇರಿ. ಇನ್ನಷ್ಟು ಗೂಢಾರ್ಥಂಗಳ ಅನಾವರಣ ಆಗಲಿ.

  3. ಓ! ಅದಪ್ಪನ್ನೇ..
    ಅಂಬಗ ಅಟ್ಟ-ಮುಟ್ಟ ತನ್ನಾ ದೇವಿ – ಇತ್ಯಾದಿ ಎಷ್ಟೋ ಆಟಂಗಳ ಹಿಂದೆ ಅದೆಷ್ಟು ಆಲೋಚನೆಗೊ ಇಕ್ಕು!
    ಹೆರ್ಕಿ ಕೊಟ್ಟದಕ್ಕೆ ತುಂಬಾ ಧನ್ಯವಾದಂಗೊ ದೊಡ್ಡಮಾವಾ°..

  4. good.another version uses hakki in the place of aki. Meening is like this: when we die our body falls down. Player says I am going .you save your souls.hakki is prana.uddina moote is body.

  5. ಅರ್ಥ ತಿಳಿಶಿ ಕೊಟ್ಟದು ಒಳ್ಳೆದಾತು. ಇದೇ ರೀತಿ ಬೇರೆ ಆಟಂಗಳಲ್ಲಿಯುದೆ ಇಪ್ಪ ಒಳಾರ್ಥವ ಬೈಲಿಲಿ ಗೊಂತಿಪ್ಪವು ತಿಳಿಶಿದರೆ ಒಳ್ಳೆದು.

  6. ದೇವರ ಹಲವು ಕಡೆ ತೋರ್ಸಿಕೊಡುವ ಹಿರಿಯರು ಹೇಳಿಕೊಟ್ಟ ಆಟ ಅದ್ಭುತ!!ಇಂದು ಹಾಂಗಿರ್ಥ ಆಟ ನೋಡ್ಲೆ ಕೂಡಾ ಸಿಕ್ಕುತ್ತಿಲ್ಲೆ.ಇದರ ಓದಿಯಪ್ಪಗ ಒಂದರಿ ಬಾಲ್ಯದ ನೆಂಪು ಆತು. ಧನ್ಯವಾದ.

  7. ವಾ ದೇವರೆ…..!
    ಹಿ೦ಗೆಲ್ಲಾ ಇದ್ದು ಹೇಳಿ ಗೊಂತೇ ಇಲ್ಲೆ!
    ಕೊಶಿಯಾತು ಓದಿ, ದೊಡ್ಡಮಾವ… 😛

  8. ನವಗೆ ಹಿರಿಯರು ಬೇಕು ಹೇಳಿ ಇದಕ್ಕೆ ಹೇಳುದು. ನಾವು ಯಾವತ್ತೂ ಆಡಿಗೊಂದು ಇದ್ದ ಆಟ ಈಗ ಹೊಸ ವಿವರಣೆಲಿ ಬಂದಪ್ಪಗ ಆ ಆಟದ ಬಗ್ಗೆ ಪ್ರೀತಿ ಇನ್ನೂ ಹೆಚ್ಚಾತು!!!
    ದೊಡ್ಡ ಮಾವ° ತುಂಬಾ ಲಾಯಕಾಯಿದು ವಿವರಣೆ. ಇನ್ನುದೇ ಹೀಂಗಿಪ್ಪದರ ಎಂಗೊಗೆ ತಿಳಿಶಿ ಕೊಡಿ ಆತೋ?
    ಧನ್ಯವಾದ..

  9. ನಂಬಲಸಾಧ್ಯ. ಈ ಆಟದ ಗೂಢ ಅರ್ಥ ಗೊಂತಿತ್ತಿಲ್ಲೆ, ತಿಳಿಸಿದ್ದಕ್ಕೆ ಧನ್ಯವಾದಾಂಗಳು.

  10. ಕಣ್ಣ ಮುಚ್ಚೇ..ಲಿ ಕೂಡಾ ರಾಮಯಣವನ್ನೇ ಅಳವಡಿಸಿದ್ದವು ಹೇಳಿರೆ..!!! ವಿವರ ತುಂಬಾ ಕೊಶಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×