ಒಂದು ಕೋಳಿಯ ಕಥೆ..

March 8, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಾಮದೇವರು ಲಂಕಗೆ ಸೇತುವೆ ಕಟ್ಟಲೆ ಹೆರಟ°. ಕಿಷ್ಕಿಂಧೆಯ ಮಂಗಂಗೊ ಎಲ್ಲ ಅವನ ಸಕಾಯಕ್ಕೆ ಬಂದವು.
ಸಮುದ್ರಕ್ಕೆ ಸೇತುವೆ ಕಟ್ಟಲೆ ಎಲ್ಲಾ ಕಡೆಂದಲೂ ಬಂಡೆ ಕಲ್ಲು ಮಣ್ಣು ತಂದು ತಂದು ಹಾಕಿದವು.
ಕುಂಞಿ ಮಂಗಂಗೊ ಅವಕ್ಕೆ ಎಡಿಗಾದಷ್ಟು ತಂದು ಹಾಕಿದವು. ಹಾಕಿಕ್ಕಿ ನೀರಿಲ್ಲಿ ಕೈಕಾಲು ಅದ್ದಿ ಚಳಪಳ ಮಾಡಿಕ್ಕಿ ತಿರುಗಿ ಹೋಗಿ ತಂದು ಹಾಕಿಯೋಂಡಿತ್ತಿದ್ದವು.
ಯೆಜಮಾನ ಮಂಗಂಗೊ ಆಟ ಆಡಿಂಡು ಕೂರುಸ್ಸಕ್ಕೆ ಜೋರು ಮಾಡುವಗ ಎಂಗೊ ಒಂದು ಸರ್ತಿ ಕಲ್ಲು ಮಣ್ಣು ತಂದು ಹಾಕಿಕ್ಕಿ ರೆಜಾ ನೀರಾಟ ಆಡಿರೆ ಮತ್ತೆ ಮದಲಿಂದಲೂ ಎರಟಿ ಉತ್ಸಾಹ ಬತ್ತು ಅಂಬಗ ಎರಟಿ ಕೆಲಸ ಆವ್ತು ಹೇದು ಸಮಜಾಯಿಷಿ ಕೊಟ್ಟವು.

ಸುಗ್ರೀವಾದಿಗೊಕ್ಕೂ ಅದು ಸರಿ ಕಂಡತ್ತು.
ಇವರ ಉತ್ಸಾಹವೂ ಕೆಲಸವೂ ಶಕ್ತಿಯೂ ಕಂಡು ರಾಮದೇವರಿಂಗೆ ಕೊಶಿ ಆತು.
ಅವಕ್ಕೆ ಉಪಕಾರ ಆವ್ತ ಹಾಂಗೆ ಎಂತಾರೂ ಒಂದು ವರ ಕೊಡೇಕು ಹೇದು ತೋರಿ, ಅವು ಕೇಟದಲ್ಲ ಇವ° ಆಗಿ ಕೊಟ್ಟದು.
ನಿಂಗೊ ಹಿಡುದ್ಸೆಲ್ಲಾ ಕಬ್ಬಿಣ ಆಗಲಿ, ಕಚ್ಚಿದ್ಸೆಲ್ಲ ಕಬ್ಬಾಗಲಿ ಹೇದು ವರ ಕೊಟ್ಟ°.

ಹಾಂಗಾಗಿ ಇಂದಿಂಗೂ ಎಂಥ ಸಪುರದ ಗೆಲ್ಲಿಲ್ಲಿ ಬೇಕಾರು ಮಂಗಂಗೊ ನೇತಂಡು ಹೋವ್ತವು.
ಕುಜುವೆಯದ್ದೊ ಬಪ್ಪಂಗಾಯಿದೊ ಮೇಣ ಸಾನು ಅವಕ್ಕೆ ಮೆಚ್ಚುತ್ತು.
ಅವು ರಾಮದೇವರ ಭಕ್ತಂಗೊ. ಬೇಟೆಗಾರಂಗೊ ಬೇಟೆಲಿ ಗುಂಡು ಹೊಡದರೆ ಮರಂದ ಬೀಳುವಾಗಲೂ ಅವು ಕೈಮುಗುಕ್ಕೊಂಡೇ ಇರ್ತವು.
ಮಂಗಂಗಳ ಕೊಲ್ಲಲಾಗ – ಅವು ರಾಮ ಭಕ್ತಂಗೊ.
ಅವಕ್ಕೆ ಪೂಜೆ ಮಾಡ್ತವು.
ಎಲ್ಲಾ ಮಂಗಂಗಳ ಪ್ರತಿನಿಧಿಸುತ್ತ ಹನುಮಂತಂಗೆ ಗುಡಿ ಕಟ್ಟಿ ಪೂಜೆ ಮಾಡುತ್ತವು.
ಸೇತು ಕಟ್ಲೆ ಎಲ್ಲಾ ಮೃಗಂಗಳೂ ಪಕ್ಷಿಗಳೂ ಬಯಿಂದವು.
ಕುಂಡೇಚ…! ಅದಕ್ಕೆ ಎಷ್ಟು ಮಣ್ಣು ತಪ್ಪಲೆಡಿಗು…?
ಅಂದರೂ ಎಡಿಗಾಷ್ಟು ಕೆಲಸ ಮಾಡೇಕು ಹೇದು ಒಂದಾರಿ ನೀರಿಲ್ಲಿ ಮೈ ಚೆಂಡಿ ಮಾಡುಸ್ಸು ಹೊಯಿಗೆಲಿ ಹೊಡಚ್ಚುಸ್ಸು, ನೀರಿಂಗೆ ಹೋಗಿ ಅದ್ದುಸ್ಸು.
ಹೀಂಗೇ ಮಾಡಿಂಡು ಇದ್ದತ್ತು.
ಅದರ ಕಂಡು ರಾಮದೇವರಿಂಗೆ ಕೊಶಿ ಆಗಿ, ಅದರ ಕೈಲಿ ನೆಗ್ಗಿ, ಬಲಕೈ ಮೂರು ಬೆರಳಿಲ್ಲಿ ಅದರ ಬೆನ್ನು ಉದ್ದಿದ°.
ಅದದ ಈಗ ಕುಂಡೇಚನ ಮೈಲಿ ಮೂರು ಬರೆ ಕಾಣುಸ್ಸು.
ಎಲ್ಲಾ ಪ್ರಾಣಿಗಳೂ ಸೇತು ಕಟ್ಲೆ ಬಯಿಂದವಾನೆ. ಬಾರದ್ಸು ಒಂದೇ ಒಂದು.
ಏವದು ಹೇದರೆ ಕೋಳಿ.

ಎನ್ನ ಜೊಟ್ಟಿಂಗೆ ಮಣ್ಣಕ್ಕು ಹೇದಂಡು ಅದು ಬಯಿಂದೇ ಇಲ್ಲೆ.
ಹಾಂಗಾಗಿ ಅದಕ್ಕೆ ಶಾಪ – ಮನಿಷರ ಕೈಲೇ ನಿನಗೆ ಮರಣ ಹೇದು.

ನೆಂಟ್ರು ಬಂದರೆ ಬೆಂದಿಗೆ ಕೋಳಿ ಪೊಜಕ್ಕುತ್ತವು.
ತೊಂಡಾಗಿ ಸಾವಲೆ ಕಾಯ್ತವಿಲ್ಲೆ.
ಅದರಿಂದ ಮದಲೆ ಅದರ ಪೊಜಕ್ಕಿ ಮುಗುಶುತ್ತವು, ಅಲ್ದೋ…?
ಒಂದು ಕೋಳಿಯ ಕಥೆ.., 4.6 out of 10 based on 5 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಲಕ್ಶ್ಮಿ ಅಕ್ಕ

  ಅಳಿಲ ಸೇವೆಯ ಶ್ರೀರಾಮ ಗುರುತಿಸಿದರೆ ಅದಕ್ಕೆ ಅದರಿಂದ ದೊಡ್ಡ ಭಾಗ್ಯ ಎಂಥ ಬೇಕು? ಶ್ರೀ ರಾಮ ಜಯ ರಾಮ ಜಯ ಜಯ ರಾಮ

  [Reply]

  VA:F [1.9.22_1171]
  Rating: 0 (from 0 votes)
 2. ಅಡಕೋಳಿ
  ಅಡಕೋಳಿ

  ನನಗೆ ಒಟ್ಟು ಉಳಿಗಾಲ ಇಲ್ಲೆ!

  ಕಥೆ ಅಧ್ಬುತ ಇದ್ದು….

  [Reply]

  VN:F [1.9.22_1171]
  Rating: 0 (from 0 votes)
 3. thirumala raya halemane

  nice writing. btw, amerika lli kunDEcha nge bennilli bare ille. kunDEcha iddu. howell, new jersey li engaLa madalaaNa mane ya hinde maralli mEle keLa hOgyonDu itthu, lawn lli mane hatthare yoo kelavu sarthi ODaadugu.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಪಟಿಕಲ್ಲಪ್ಪಚ್ಚಿಪುಣಚ ಡಾಕ್ಟ್ರುಪವನಜಮಾವಕಾವಿನಮೂಲೆ ಮಾಣಿದೊಡ್ಡಭಾವಜಯಶ್ರೀ ನೀರಮೂಲೆಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿವೆಂಕಟ್ ಕೋಟೂರುದೀಪಿಕಾಗೋಪಾಲಣ್ಣಕೇಜಿಮಾವ°ಸುವರ್ಣಿನೀ ಕೊಣಲೆಶಾಂತತ್ತೆಅಕ್ಷರದಣ್ಣದೇವಸ್ಯ ಮಾಣಿಚುಬ್ಬಣ್ಣಶ್ಯಾಮಣ್ಣಡಾಗುಟ್ರಕ್ಕ°ಕಳಾಯಿ ಗೀತತ್ತೆಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ಹಳೆಮನೆ ಅಣ್ಣಅನುಶ್ರೀ ಬಂಡಾಡಿದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ