Oppanna.com

ಸರ್ಪಮಲೆ ಮಾವಂಗೆ ಬೈಲಿಂಗೆ ಸ್ವಾಗತ!

ಬರದೋರು :   ಶುದ್ದಿಕ್ಕಾರ°    on   11/12/2010    10 ಒಪ್ಪಂಗೊ

ಬೈಲಿನ ಎಲ್ಲೋರಿಂಗೂ ನಮಸ್ಕಾರ!
ಬೈಲಿನ ಅರಡಿವೋರಿಂಗೆ ಸರ್ಪಮಲೆ ಮಾವನನ್ನೂ ಅರಡಿಗು, ಅಲ್ಲದೋ?

ಇವುದೇ ಡಾಗುಟ್ರೇ, ಆದರೆ – ಹೆದರೆಡಿ, ಇಂಜೆಕ್ಷನು ಹಿಡಿತ್ತ ಡಾಗುಟ್ರಲ್ಲ.
ಇವು ಪೆನ್ನು ಹಡಿತ್ತ ಡಾಗುಟ್ರು!

ಸರ್ಪಮಲೆ ಮಾವ ಮುಗುಳುನೆಗೆಲಿ!

ಶಿಕ್ಷಣಕ್ಷೇತ್ರಲ್ಲಿ ಹತ್ತು-ಮೂವತ್ತೊರಿಶ ಕೆಲಸಮಾಡಿದ ಅನುಭವ ಅವಕ್ಕಿದ್ದು.
ಕೊಡೆಯಾಲದ ಕೋಲೇಜಿಲಿ ಲೆಗುಚ್ಚರು ಅಗಿದ್ದು, ಈಗ ರಿಠೇರ್ಡು!
ರಿಠೇರ್ಡು ಆದರೂ ಮನೆಲಿ ಕೂಪಲೆ ಬಿಟ್ಟಿದವಿಲ್ಲೆ, ರಾಮಜ್ಜನ ಕೋಲೇಜಿನವು ಹೋಗಿ ಬಪ್ಪಲೇಬೇಕು ಹೇಳಿ ಕೇಳಿಗೊಂಡವು.
ಆತಂಬಗ, ಹೇಳಿ ಇವುದೇ ಹೆರಟು ಬಂದವು.
ಪ್ರಸ್ತುತ ರಾಮಜ್ಜನ ಕೋಲೇಜಿನ ಮೇಗಾಣ ಮಾಳಿಗೆಯ ಮೂಲೆಯ ಕೋಣೆಲಿ ಕೂದಂಡಿದ್ದವು!
ಮೆನೇಜುಮೆಂಟು ಕೋಲೇಜಿನ ಗುರಿಕ್ಕಾರ್ರಾಗಿದ್ದವು!

ಕೊಡೆಯಾಲಂದ ಪುತ್ತೂರಿಂಗೆ – ಮಾರ್ಗ ಹಾಳಾದರೂ ಹೋಗಿಬಂದು ಮಾಡ್ತವು ನಿತ್ಯ.
ಅನುಭವಿ, ಶಿಕ್ಷಣ ತಜ್ಞ ಸರ್ಪಮಲೆಮಾವನ ಬೇಡಿಕೆಯ ಗ್ರೇಶಿರೆ ನವಗೆ ಕೊಶಿ ಅಪ್ಪದು.
ಬೈಲಿನ ಆರಿಂಗಾರು ಅವರ ಭೇಟಿಮಾಡ್ಳಿದ್ದರೆ ಮಾಳಿಗೆ ಹತ್ತಿಗೊಂಡು ಹೋಯೆಕ್ಕು, ಹೆರಾಣ ಪೇನಿನ ಬುಡಲ್ಲಿ ಕಾದು ನಿಲ್ಲೆಕ್ಕು.
ಒಳ ಹೋದಕೂಡ್ಳೆ ಒಂದರಿ ಇಂಗ್ಳೀಶಿಲಿ ಮಾತಾಡಿ ಹೆದರುಸುಗು, ಮತ್ತೆ ಪ್ರೀತಿಲಿ ನೆಗೆನೆಗೆಮಾಡಿ ಮಾತಾಡುಗು!

ಕೋಲೇಜಿಲಿ ಎಷ್ಟೇ ಅಂಬೆರ್ಪು ಇರಳಿ, ಬೈಲಿಂಗ ಬಾರದ್ದೆ ಇರ್ತವಿಲ್ಲೆ.
ಕೊಶಿ ಆದ ಶುದ್ದಿಗೆ ಒಪ್ಪಕೊಟ್ಟೊಂಡು, ಶುದ್ದಿ ಬರದವನ ಪ್ರೋತ್ಸಾಹ ಮಾಡಿಗೊಂಡು, ಕೊಶಿ ಹಂಚಿಗೊಂಡು ನಮ್ಮ ನೆಡುಕೆ ಇದ್ದವು.
ಅವು ಬರದ ಒಪ್ಪಂಗಳ ಸರಿಯಾಗಿ ನೋಡಿರೇ ಜೆನಂಗೊಕ್ಕೆ ಅವರ ಪಾಂಡಿತ್ಯ ಅರಡಿಗು – ಅಷ್ಟು ಲಾಯಿಕಲ್ಲಿ ಅನುಭವಪೂರಿತವಾಗಿ ಒಪ್ಪ ಬರಗು ಶುದ್ದಿಗೊಕ್ಕೆ.
ಒಪ್ಪವೇ ಅಷ್ಟು ಲಾಯಿಕಲ್ಲಿ ಕೊಡುವಗ, ಶುದ್ದಿಯ ಎಷ್ಟು ಲಾಯಿಕಲ್ಲಿ ಹೇಳುಗು, ಅಲ್ಲದೋ?!
ಮೊನ್ನೆ ಅವರ ಭೇಟಿಗೆ ಹೋಗಿಪ್ಪಗ ನಾವು ಕೇಳಿಯೇಬಿಟ್ಟತ್ತು – ಬೈಲಿಂಗೆ ಶುದ್ದಿ ಹೇಳ್ತಿರೋ – ಹೇಳಿ.
ಒಂದು ಕ್ಷಣ ಸುಮ್ಮನೆ ಕೂದು, ಮತ್ತೆ ಅಕ್ಕು ಹೇಳ್ತನಮುನೆ ತಲೆ ಆಡುಸಿದವು.

ಎದುರು ಸಿಕ್ಕಿರೆ ಅವು ಮಾತಾಡುದು ತುಂಬಾ ಕಮ್ಮಿ; ಅತ್ತೆ ಒಟ್ಟಿಂಗೆ ಇದ್ದರೆ ಅಂತೂ ಮತ್ತೂ ಕಮ್ಮಿ!!
ಅದಿರಳಿ, ನಮ್ಮತ್ರೆ ಶುದ್ದಿ ಹೇಳಿಯೇ ಹೇಳ್ತವು!
ಬನ್ನಿ, ಸರ್ಪಮಲೆ ಮಾವನ ಶುದ್ದಿಗಳ ಕೇಳುವೊ°.
ಒಪ್ಪ ಒಪ್ಪ ಶುದ್ದಿಗೊಕ್ಕೆ ನಮ್ಮ ಒಪ್ಪ ಕೊಡುವೊ°.

ಸರ್ಪಮಲೆ ಮಾವಾ°, ನಿಂಗೊಗೆ ಸ್ವಾಗತಮ್.
~
ಒಪ್ಪಣ್ಣ

ಸರ್ಪಮಲೆಮಾವನ ಬಗ್ಗೆ:

ಮೋರೆಪುಟ: ಸಂಕೊಲೆ
ಓರುಕುಟ್ಟುತ್ತ ಪುಟ: ಸಂಕೊಲೆ

ಇವರ ಲೇಖನಂಗೊ ಸದ್ಯಲ್ಲೇ ಸುರು ಆವುತ್ತು.
ಕಾದೊಂಡಿರಿ!
~
ಗುರಿಕ್ಕಾರ°

10 thoughts on “ಸರ್ಪಮಲೆ ಮಾವಂಗೆ ಬೈಲಿಂಗೆ ಸ್ವಾಗತ!

  1. ಸರ್ಪಮಲೆ ಮಾವನ ಸ್ವಾಗತಕ್ಕೆ ಗುರಿಕ್ಕಾರನೊಟ್ಟಿಂಗೆ ಬೈಲಿನ ಎಲ್ಲೋರು ಸೇರಿಯೊಂಡದು ನೋಡಿ ತುಂಬಾ ಸಂತೋಷ ಆತು. ಬೈಲಿನ ಕರೇಲಿ ನಿಂದೊಂಡಿದ್ದವನ ಬೈಲಿಂಗೆ ಇಳಿಶಿದ ಒಪ್ಪಣ್ಣ, ಸರ್ಪಮಲೆ ಮಾವ ಬೈಲಿಂಗೆ ಬತ್ತ ಶುದ್ದಿ ಹೇಳಿದ ಶುದ್ದಿಕ್ಕಾರ, ಸ್ವಾಗತಿಸಿದ ಗುರಿಕ್ಕಾರ ಹಾಂಗೂ ಬೈಲಿನ ಎಲ್ಲೋರಿಂಗೆ ಧನ್ಯವಾದಂಗೊ.

  2. ಮಾವ°…. ನಿಂಗಳ ಹೆಸರು ಈ ಮೊದಲು ಕೇಳಿತ್ತೆ. ಬೈಲಿಂಗೆ ಬಂದು ಒಪ್ಪಕೊಟ್ಟದರನ್ನು ಓದಿದ್ದೆ..ಈಗ ನಿಂಗ ಖುದ್ದು ಬೈಲಿಲ್ಲಿ ಬರವಲೆ ಶುರು ಮಾಡಿದ್ದು ತುಂಬಾ ಕೊಶಿಯ ವಿಚಾರ. ಬೈಲಿಂಗೆ ಸ್ವಾಗತ…

  3. ಅನುಭವಿಗೊ ಬೈಲಿಂಗೆ ಬಂದರೆ ಅನನುಭವಿಗೊಕ್ಕೆ ಒಳ್ಳೆದೇ.ರಜಾ ಇನ್ಫ್ಲೇಶನ್ ಕಮ್ಮಿ ಆದರೂ ಸಾಮಾನುಗೊಕ್ಕೆ ಕ್ರಯ ಕಮ್ಮಿ ಏಕೆ ಆವುತ್ತಿಲ್ಲೆ ಹೇಳಿರೆ ಒಳ್ಳೆದಕ್ಕದಾ.

    1. ಕ್ರಯ ಹೇಳ್ತದು,ನೂಲು ಕಡುದ ಗಾಳಿಪಟ ಅಲ್ಲದೋ ಮಾವ?

  4. ಸರ್ಪಮಲೆ ಮಾವ°, ನಿಂಗಳ ಲಾಯ್ಕಲ್ಲಿ ಪರಿಚಯ ಮಾಡಿ ಕೊಟ್ಟಿದ° ಒಪ್ಪಣ್ಣ. ಬೇಗ ಬತ್ತಿ ಬೈಲಿಂಗೆ ಹೇಳಿದವು ಗುರಿಕ್ಕಾರ್ರು.
    ಬನ್ನಿ ಬೈಲಿಂಗೆ ಶುದ್ದಿ ಹೇಳುಲೆ. ಸ್ವಾಗತ ನಿಂಗೊಗೆ.
    ನಿಂಗಳ ಅನುಭವಂದ ಬಪ್ಪ ವಿಷಯಂಗಳ ಓದುಲೆ ಕಾಯ್ತಾ ಇದ್ದೆಯಾ°. ತುಂಬಾ ವಿಷಯಂಗ ಬರಲಿ ನಿಂಗಳಿಂದ.
    ಗೋಪಾಲ ಮಾವನ ಹಾಂಗೆ ನಿಂಗಳ ಹತ್ತರೆ ಪಾಠ ಹೇಳ್ಸಿ ಗೊಂತಿಲ್ಲೆ ಎನಗೆ. ನಿಂಗಳ ಕೈಲಿ ಒಪ್ಪಣ್ಣನ ಬೈಲಿಲಿ ಪಾಠ ಹೇಳ್ಸಿ, ನಿಂಗೊ ಹೇಳುದರ ಅರ್ಥೈಸಿಗೊಂಡು, ಮನನ ಮಾಡಿಗೊಂಬ ಒಳ್ಳೆಯ ಅವಕಾಶ.

    ಅದಪ್ಪು ಮಾವ°, ನಿಂಗಳ ಕಾಂಬಲೆ ಹಾಂಗೆ ಕಾಯೇಕ್ಕಾವುತ್ತೋ? ಒಪ್ಪಣ್ಣ ನ ಕಾದು ಕೂರ್ಸಿದ್ದು ಒಳ್ಳೇದಾತು. 🙂 ಅವ° ಎನ್ನ ಅಂತೇ ಇಲ್ಲದ್ದೆ, ಈಗ ಸಿಕ್ಕುತ್ತೆ, ಮತ್ತೆ ಸಿಕ್ಕುತ್ತೆ, ನಾಳೇ ಸಿಕ್ಕುತ್ತೆ ಹೇಳಿ ಕಾಯಿಸುತ್ತ°.
    ಇನ್ನೊಂದರಿ ಬಂದರೂ ಅವನ ಹೆರವೇ ಕೂರ್ಸಿ ರಜ್ಜ ಹೊತ್ತು ಕಳುದೇ ಒಳ ಬಪ್ಪಲೆ ಮಾಡಿ ಆತಾ? 🙂

  5. ವಿಮರ್ಶಾತ್ಮಕ ಒಪ್ಪ ಕೊಟ್ಟೊಂಡು, ಪ್ರೋತ್ಸಾಹಿಸಿಂಡು ಇತ್ತಿದ್ದ ಸರ್ಪಮಲೆ ಭಾವ ಬಯಲಿಂಗೆ ಬದ್ದು ಶುದ್ದಿ ಹೇಳ್ತವು ಕೇಳಿ ಕೊಶೀ ಆತು. ನಿಂಗಳ ಲೇಖನಂಗೊಕ್ಕೆ ಬಯಲಿಲ್ಲಿ ಕಾದೊಂಡು ಇದ್ದೆಯೊ.ಆತ್ಮೀಯ ಸ್ವಾಗತ.
    ಸರ್ಪಮಲೆ ಮಾವ, ಈ ಮೊದಲು “ನಮ್ಮೂರು ನಮ್ಮೋರು” ಅಂಕಣಲ್ಲಿ ಪರಿಚಯ ಮಾಡಿದ ಡಾ| ಮಡ್ವ ಶಾಂಭಟ್ಟ (ಕುಂಬಳೆ), ಇವರ ಸೋದರ ಅಳಿಯ.

  6. ಸರ್ಪಮಲೆ ಮಾವ ಏವಾಗ ಬಕ್ಕು ಹೇಳಿ ಆಶೆಲಿ ಕಾದುಕೂದುಗೋ೦ಡಿದಿತ್ತಿದ್ದೆ. ಮಾವ, ನಿಂಗಳ ಒಪ್ಪಂಗಳ ನೋಡಿ ಅಪ್ಪಗ ಸಂತೋಷ ಆವುತ್ತಾ ಇತ್ತು.ಬನ್ನಿ,ಆತ್ಮೀಯ ಸ್ವಾಗತ.

  7. ಉದಯ ಮಾವ,
    ಈ article ಓದಿ ಖುಶಿ ಆತು… retired, but, not tired 🙂
    Best wishes.

  8. ಆನು 24 ವರ್ಶ ಹಿಂದೆ CAIIB ಪರೀಕ್ಷೆಗೆ ಬರವಲೆ ಬೇಕಾಗಿ ಟ್ಯೂಶನ್ನಿಂಗೆ ಹೋಪಾಗ ಸರ್ಪಮಲೆ ಮಾವ ಎಂಗೊಗೆ ಅರ್ಥಶಾಸ್ತ್ರ ಪಾಠವ ಒಳ್ಳೆ ಅರ್ಥ ಆವ್ತ ಹಾಂಗೆ ಕಲುಶಿದ್ದವು. ವಿಜ್ಞಾನ ಕಲುತ್ತ ಎನ್ನ ಹಾಂಗ್ರುತ್ತವಕ್ಕೆ ಅರ್ಥಶಾಸ್ತ್ರ ಅರ್ಥ ಆಯಕಾರೂ ಕಷ್ಟ ಇತ್ತು. ಅಂಬಗ ಸರ್ಪಮಲೆ ಮಾವ ಹೇಳಿ ಎನಗೆ ಗೊಂತಿಲ್ಲೆ. ಮನ್ನೆ ಭಾರತೀ ಕಾಲೇಜಿಲ್ಲಿ ಸ್ವಾಮೀಜಿಗೊ ಬಂದಿಪ್ಪಗ ಅಲ್ಲಿ ಇವರ ಭೇಟಿ ಆತು. ಅವೇ ಎನ್ನ ಕೇಳಿದವು. ಗೋಪಾಲ ಮಾವನೋ ಹೇಳಿ. ಎನಗೆ ಆಶ್ಚರ್ಯ. ಆನು ಅವರ ವ್ಯಕ್ತಿತ್ವದ ಎದುರು ಸಣ್ಣವ ಆದರೂ, ಎನ್ನ ಗುರ್ತ ಹಿಡುದು ಪ್ರೀತಿಲಿ ಮಾತಾಡುಸಿದವು. ಒಪ್ಪಣ್ಣನ ಮೂಲಕ ಹಿರಿಯರಾದ ಪ್ರೊಫೆಸರ್ ಸರ್ಪಮಲೆ ಮಾವನ ಗುರ್ತ ಆದ್ದದು ಭಾರಿ ಸಂತೋಷ ಆತು. ಸರ್ಪಮಲೆ ಮಾವನ ಲೇಖನಂಗವಕ್ಕೆ ಸ್ವಾಗತ. ಬೈಲಿನವಕ್ಕೆ ಮಾವನಿಂದ ಒಳ್ಳೆಯ ಮಾಹಿತಿಗೊ, ವಿಚಾರಂಗೊ ಸಿಕ್ಕಲಿ. ಒಳ್ಳೆಯ ಸಾಹಿತ್ಯ ಕೃಷಿ ನೆಡೆಯಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×