ದುಃಖವೂ ಒಂದು ಯೋಗ

November 13, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾವು ಯಾವಾಗಲೂ ಸಂತೋಷಂದ ಇಪ್ಪಲೇ ಹಲವು ರೀತಿಲಿ ಪ್ರಯತ್ನಪಡ್ತು.
ಅದಕ್ಕಾಗಿ ಜೀವನಲ್ಲಿ ಅನೇಕ ರೀತಿಲಿ ಪ್ರಯತ್ನ ಪಡ್ತು. ಆ ಪ್ರಯತ್ನ ಕೈಗೂಡಿಯರೆ ನಾವು  ಸಂತೋಷಂದ ಇರ್ತು.ಇಲ್ಲದ್ರೆ ದು:ಖ ಪಡ್ಲೆ ಸುರು ಮಾಡ್ತು.
ಅದರ ವಾಸ್ತವ ಸ್ಥಿತಿ ಬೇರೆಯೇ ಇರ್ತು. ಕತ್ತಲೆ ಇದ್ದರೆ ಮಾತ್ರವೇ ಅಲ್ದೋ ಬೆಣಚ್ಚು ಕಾಂಬದು? ಹಾಂಗಾದರೆ ದು:ಖಲ್ಲಿಯೂ ಸಂತೋಷವ ಅನುಭವಿಸುದು ಹೇಂಗೆ? – ಹೇಳುವ ಪ್ರಶ್ನೆ ಬಪ್ಪದು ಸಹಜ.
ಈ ವಿಷಯಂಗಳ ಬಗ್ಗೆ ಅನೇಕ ರೀತಿಲಿ ಕಲ್ಪನೆ ಮಾಡಿಗೊಂಡು ಮತ್ತೆ ಸಮಾಜಲ್ಲಿ ನೆಡವ ಘಟನೆಗಳ ನೋಡಿ ಬರದ್ದೆ..ಇದರ್ಲಿ ಅಭಿಪ್ರಾಯ ಭೇದಂಗ ಬಪ್ಪಲೂ ಸಾಕು.ಇರಳಿ..
ವಿಷಯಕ್ಕೆ ಹೋವ್ತೆ..

ಮನಸ್ಸು ಬಿಚ್ಚಿ ಕೂಗುದೂ ಒಂದು ಯೋಗವೇ!

ಜಗತ್ತಿಲಿ ಎಲ್ಲೋರಿಂಗೂ ಅವರದ್ದೇ ಆದಂತಹ ಯಾವುದೋ ಒಂದು ಸಮಸ್ಯೆ ಇರ್ತು.
ಅದರ ಎಲ್ಲೋರ ಹತ್ತರೆಯೂ ಹೇಳಿಗೊಂಬಲೆ ಎಡಿತ್ತಿಲ್ಲೆ..
ಅದಕ್ಕಾಗಿ ಹಲವಾರು ರೀತಿಲಿ,ಹಲವಾರು ಕ್ಷೇತ್ರಂಗಳಲ್ಲಿ ಅವರದ್ದೇ ಆದ ರೀತಿಲಿ ಹುಡುಕಾಟ ನಡೆಶಿ ತೃಪ್ತರಪ್ಪಲೆ ಪ್ರಯತ್ನ ಪಡ್ತು.ಯಾವುದೋ ರೀತಿಯ ಕಷ್ಟ-ಕಾರ್ಪಣ್ಯ ಕಾರ್ಮೋಡದ ಹಾಂಗೆ ಜೀವನಲ್ಲಿ ಒಂದರಿಯಾದರೂ ಒಬ್ಬಂಗೆ ಬತ್ತು,ಆದರೆ ಎಲ್ಲೋರಿಂಗೂ ಮನಸ್ಸು ಬಿಚ್ಚಿ ಕೂಗುಲೆ ಎಡಿತ್ತಿಲ್ಲೆ.

ಕಷ್ಟಂಗ ಬಂದಪ್ಪಗ ಮನಸ್ಸು ತಣಿವ ಹಾಂಗೆ ಕೂಗುದೂ ಒಂದು ವರವೇ!!
ದೇವರು, ದು:ಖ ಪಟ್ಟು ಕೂಗುವ ಅವಕಾಶವ ಮನುಷ್ಯರಿಂಗೆ ಮಾತ್ರ ಕೊಟ್ಟಿದ!ಹಾಂಗೆ ಹೇಳಿ ಪ್ರಾಣಿಗೊಕ್ಕೆ ದು:ಖ ಇಲ್ಲೇ ಹೇಳಿದ್ದಲ್ಲ !!
ಅವಕ್ಕೆ ಅವರದ್ದೇ ಆದ ರೀತಿಲಿ ಇರ್ತು.ಅದರ ನವಗೆ ಅರ್ಥ ಮಾಡಿಗೊಂಬಲೆ ಎಡಿತ್ತಿಲ್ಲೆ ಅಷ್ಟೇ!!
ಆದರೆ ಮನುಷ್ಯರು ಕೂಗುದಕ್ಕೆ ವಿಭಿನ್ನ ರೀತಿ ಇರ್ತು.ಅದು ಅವರವರ ಭಾವನೆಗೆ ಹೊಂದಿಗೊಂಡು ಇರ್ತು.ಮನುಷ್ಯರಿಂಗೆ ಇದರ ಎಲ್ಲಾ ತಡವಲೆ ದೇವರು ಮೇಧಾಶಕ್ತಿ ಹೇಳುದರ ಕಷ್ಟಂಗಳ ಜೊತೆಲಿಯೇ ಕೊಟ್ಟಿದ!!ಅದರ ತಾಳ್ಮೆಂದ ವಿವೇಚನೆ ಮಾಡುವ ಪ್ರಯತ್ನ ಮಾತ್ರ ಮಾಡಿರೆ ರಜ್ಜ ಪರಿಹಾರ ಸಿಕ್ಕುಗು.

ಹೆಚ್ಚಾಗಿ ಹೆಮ್ಮಕ್ಕ (ಅಂದ್ರಾಣ ಹಳ್ಳಿ ಜೀವನಕ್ಕೆ ಹೋಲ್ಸಿಯಪ್ಪಗ) ಸಣ್ಣ ಸಣ್ಣ ಸಮಸ್ಯೆಗೆ ಸ್ಪಂದಿಸಿ ಕೂಗಿಗೊಂಡಿತ್ತವು.
ಈ ಕಾರಣಕ್ಕಾಗಿಯೇ ಅವು ಎಂಥಹಾ ಸಮಸ್ಯೆಯೂ ಮನೆ,ಗೆಂಡ,ಮಕ್ಕೊಗೆ ಬಂದರೆ ಸುಲಾಭಲ್ಲಿ ನಿಭಾಯಿಸಿಗೊಂಡಿತ್ತವು.
ಹಾಂಗೆ ಹೇಳಿ ಕೂಗುದರಿಂದ ಮಾತ್ರ ಸಮಸ್ಯೆ ಪರಿಹಾರ ಆವುತ್ತು  ಹೇಳಿ ಹೇಳಿದ್ದಲ್ಲ!ಅದರಿಂದ ಮನಸ್ಸು ಮನೋಭಾರಂದ ಮುಕ್ತ ಆವ್ತು.ಪ್ರಶಾಂತತೆ ಸಿಕ್ಕುತ್ತು.

ಕಷ್ಟಂಗ ಆರಿಂಗೂ ಸಂತೋಷ ಅಲ್ಲ!
ಕಷ್ಟಂಗಳಲ್ಲಿಯೂ ಎರಡು ವಿಧ ಇದ್ದು – ಒಂದು ಶಾರೀರಿಕ ಕಷ್ಟ, ಎರಡನೇದು ಮಾನಸಿಕ ಕಷ್ಟ.
ಶಾರೀರಿಕ ಕಷ್ಟ ಬೆಗರಿನ ರೂಪಲ್ಲಿ ಇರ್ತು.ಮಾನಸಿಕ ಕಷ್ಟ ಕಣ್ಣೀರಿನ ರೂಪಲ್ಲಿ ಹೆರ ಬತ್ತು.
ಮಾನಸಿಕ ವಿಚಾರಂಗಳ ಮನಸ್ಸಿಲೇ ಮಡಿಕ್ಕೊಂದಿದ್ದರೆ ಮನುಷ್ಯನ ದೈಹಿಕ ಮಾನಸಿಕ ಕ್ರಿಯೆಗ ಏರುಪೇರು ಅಪ್ಪಲೆ ಸುರು ಆವ್ತು.ಅದರಿಂದಾಗಿ ಶಾರೀರಿಕ ಕಷ್ಟ ಅಪ್ಪಲೆ ಸುರು  ಆವ್ತು.
ಹೀಂಗಿಪ್ಪ ಸಂದರ್ಭಲ್ಲಿ ಕೆಲವು ಜೆನಂಗ ಬಾಂಧವ್ಯಂಗಳ ದೂರ ಮಾಡಿ ಮನೋಸ್ಥೈರ್ಯವ ಕಳಕ್ಕೊಂಡು ಆತ್ಮಹತ್ಯೆಯ ದಾರಿ ಹಿಡಿತ್ತವು.

ಈ ಸಂದರ್ಭಲ್ಲಿ ಆರ ಪ್ರೀತಿಗೂ ಮನಸ್ಸು ಕೊಡ್ತವಿಲ್ಲೆ.
ಆದಷ್ಟು ಎಲ್ಲೋರಿಂದ ದೂರ ಇದ್ದು ಒಂಟಿತನವ ಇಷ್ಟಪಡ್ತವು. ಹೀಂಗೆ ಮನಸ್ಸಿಲಿ ಯಾವುದೇ ವಿಚಾರಂಗಳ ಆರತ್ರೆಯೂ ಹೇಳದ್ದೇ ಮಡುಗಿದರೆ ಶರೀರಲ್ಲಿ  ದೇಹ ಸೌಂದರ್ಯ ಕಡಮ್ಮೆ ಆಗಿ ಮುದಿತನ ಬೇಗ ಬತ್ತು.
ಮಾನಸಿಕ ಸಮಸ್ಯೆಗಳ ಬಹಿರ್ಗತ ಮಾಡುವವು ನೂರಕ್ಕೆ ಒಬ್ಬನೂ ಕೂಡಾ ಆತ್ಮಹತ್ಯೆಗೆ ಕೈ ಹಾಕುತ್ತವಿಲ್ಲೆ.ಜೀವನಲ್ಲಿ ಬಪ್ಪ ಸಮಸ್ಯೆಗೊಕ್ಕೆ ಹೆದರದ್ದೇ ಬದುಕಿನ ನಿವೃತ್ತಿಯ ಚೆಂದಲ್ಲಿ ಕಳೆತ್ತವು.

ನಮ್ಮ ಯಾಂತ್ರಿಕ ಜೀವನಲ್ಲಿ ಸಮಸ್ಯೆಯ ತಾತ್ಕಾಲಿಕವಾಗಿ ಪರಿಹಾರ ಮಾಡಿಗೊಂಡು ಶಾಶ್ವತವಾದ ಪರಿಹಾರ ಕಾಂಬದು ಹೇಂಗೆ ಹೇಳಿ ನೋಡುವ..
ಒಬ್ಬನೇ ರೂಮಿಲಿ ಬಾಗಿಲು ಹಾಕಿಗೊಂಡು ಸಮಸ್ಯೆಗಳ ಒಂದರಿ ಗ್ರೇಶಿ ಮನಸ್ಸು ಬಿಚ್ಚಿ ಕೂಗಿ.
ಎಂತಕೆ ಹೇಳಿರೆ ಈಗ ಅದಕ್ಕೂ ಪುರುಸೊತ್ತು ಅಪ್ಪದು ಕಡಮ್ಮೆ.ಮತ್ತೆ ಮಾನಸಿಕವಾದ ತೃಪ್ತಿ ಸಿಕ್ಕಿದ ಮೇಲೆ ಒಂದರಿ ತಲೆ ಮೈ ಸರಿಯಾಗಿ ಚೆಂಡಿ ಅಪ್ಪ ಹಾಂಗೆ ಮೀಯೇಕ್ಕು.

ಸ್ನಾನೇನ ಶುದ್ಧೇನ ನ ತು ಚಂದನೇನ“ಹೇಳಿ ಹಿರಿಯರು ಹೇಳಿದ್ದವಲ್ದಾ?- ಮೀವದರಿಂದ ಶರೀರ ಶುದ್ಧಿ  ಅಪ್ಪದಲ್ಲದ್ದೇ ಮನಸ್ಸೂ ಶುದ್ಧ ಆವ್ತು.
ಮತ್ತೆ ನಿಧಾನವಾಗಿ ಕೂದು ಸಮಸ್ಯೆಗಳ ಆಲೋಚನೆ ಮಾಡೆಕ್ಕು. ಇಷ್ಟು ಮಾಡುದರಿಂದ ನಮ್ಮ ಕೈಲಿಯೇ ಆದ ತಪ್ಪಿಂದಾಗಿ ಬಪ್ಪ ಸಮಸ್ಯೆಗಳ ಪರಿಹಾರ ಮಾಡ್ಲೆ ಒಂದು ದಾರಿ ಸಿಕ್ಕುಗು.
ನವಗೆ ಗೋಚರಕ್ಕೆ ಬಾರದ್ದೆ ಅನಿರೀಕ್ಷಿತವಾಗಿ ಬಪ್ಪಂತಹ ಕಷ್ಟಕ್ಕೆ ಕಾಲವೇ ಉತ್ತರ ಕೊಡ್ತು.
ಅದಕ್ಕೆ ನಾವು ತಾಳ್ಮೆಯ ಮುಖ್ಯವಾಗಿ ಅಳವಡಿಸೆಕ್ಕು.ಮತ್ತೆ ನಾವು ಆತ್ಮೀಯರು ಹೇಳಿ ಆರತ್ರೆ ನಂಬಿಕೆ ಮಡುಗಿದ್ದೋ ಅವರತ್ರೆ ಹೇಳೆಕ್ಕು.ಕೆಲವು ಕಷ್ಟಂಗಳ ಕಾಲವೇ ತನ್ನಷ್ಟಕ್ಕೇ ಪರಿಹಾರ ಮಾಡ್ತು.ಕಾಲಕ್ಕಿಪ್ಪ ಶಕ್ತಿ ಅನಂತ..

ಮನಸ್ಸು ಬಿಚ್ಚಿ ಕೂಗುದರಿಂದ ಶರೀರಲ್ಲಿಪ್ಪ “ಟಾಕ್ಸಿನ್ಸ್” ಹೆರ ಬತ್ತು.ಇದು ದೇಹಕ್ಕೆ ಒಳ್ಳೆದು.
ಸಾಧಾರಣವಾಗಿ ಕಣ್ಣಿಂಗೆ ಕಸವು ಬಿದ್ದಪ್ಪಗ, ಹೊಗೆ, ಧೂಳಿಂಗೆ  ಅಥವಾ ನೀರುಳ್ಳಿ ಕತ್ತರುಸಗ ಬಪ್ಪ ಕಣ್ಣೀರು “ಇರಿಟೇಶನ್”  ಆಗಿ ಹೆರ ಬಪ್ಪದಕ್ಕೆ ವೆತ್ಯಾಸ ಇದ್ದಲ್ದ?
ಮಾನಸಿಕ ತುಮುಲಂದ ಬಪ್ಪ ಕಣ್ಣೀರು “ಎಮೋಷನಲ್ “ಆಗಿ ಹೆರ ಬತ್ತು.ಇದರಿಂದಾಗಿ ಮನಶ್ಶಾಂತಿ ಸಿಕ್ಕುತ್ತು.

ವಿಷಾದವ ನಾವು ಒಂದು ಯೋಗ ಹೇಳಿ ಗ್ರೆಶಿರೆ ಮನುಷ್ಯ ಮಹಾತ್ಮ ಅಪ್ಪ ದಾರಿಗೆ ಹೋವ್ತಾ ಇದ್ದ ಹೇಳಿ ಅರ್ಥ!
ಮತ್ತೊಬ್ಬರ ಬದುಕಿಂಗೆ ಮಾದರಿ ಆವ್ತ.
ಸಂಪತ್ತೌಚ ವಿಪತ್ತೌಚ ಮಹಾತಾಮೇಕ ರೂಪತಾ“ಹೇಳಿ ಸುಭಾಷಿತದ ಸಾರದ ಹಾಂಗೆ ಮಹರ್ಷಿಗ,ಸನ್ಯಾಸಿಗ,ಯೋಗಿಗ ಸಮಸ್ಯೆಗೊಕ್ಕೆ ಹೆದರ್ತವಿಲ್ಲೆ. ಅವು ವಿಧಿ ನಿಯಮಕ್ಕೆ ಬಿಡ್ತವು.

“ಯೋಗ” ಹೇಳಿರೆ ಅಕಲ್ಪಿತ “ಅದೃಷ್ಟ”.
“ಯೋಗ” ಹೇಳಿರೆ “ಸಾಧನೆ”. – ಇದೆರಡೂ ಸೇರಿಯಪ್ಪಗ ಮನುಷ್ಯ “ಯೋಗಿ”ಆವ್ತ.

ದು:ಖವ ಒಂದು ಯೋಗ ಹೇಳಿ ನೋಡಿರೆ ನಾವು ದು:ಖಲ್ಲಿಯೂ  ಸುಖ ಕಾಂಬಲೆ  ಎಡಿಗು.ಅಷ್ಟರವರೆಗೆ ಜೀವನವ ಚೆಂದಕ್ಕೆ ಕರಕ್ಕೊಂಡು ಹೋದ ಆ ಅತೀಂದ್ರಿಯ(ದೇವರು)ಶಕ್ತಿಗೆ ಧನ್ಯವಾದ ಹೇಳೆಕ್ಕು.ಸಣ್ಣ ಕಲ್ಲಿನ ಕೂಡಾ ಕಣ್ಣಿನ ಹತ್ತರಂಗೆ ಹಿಡುದು ನೋಡಿರೆ ಗುಡ್ಡೆಯ ಹಾಂಗೆ ಕಾಂಬದು ಸಹಜ!ಅದೇ ದೊಡ್ಡ ಗುಡ್ಡೆಯ ಅಂಗೈ ಅಗಲದ ಕನ್ನಟಿಲಿ ನೋಡಿರೆ ಗುಡ್ಡೆ ಪೂರ್ತಿ ಅಂಗೈ ಒಳವೇ ಕಾಣ್ತಿಲ್ಲೆಯ?ಹಾಂಗೆಯೇ ಕಷ್ಟ- ಸುಖದ ರೀತಿ.ಅನುಭವಿಸುವ ರೀತಿಲಿ ಮಾತ್ರ ಇಪ್ಪದು ಅದರ ವ್ಯತ್ಯಾಸಂಗ.

ಅತೀ ಸಮಸ್ಯೆ ಬಂದಪ್ಪಗ ಮನಸ್ಸಿನ ರಜ್ಜ ಹೊತ್ತು ಆಲೋಚನೆ ಮಾಡ್ಲೆ ಬೇಕಾಗಿ ನಿಯಂತ್ರಣ ಮಡುಗೆಕ್ಕು.ಆ ಮೂಲಕ ಮನಸ್ಸು ಬಯಸುವ ಗೊಂದಲಕ್ಕೆ ಕಡಿವಾಣ ಹಾಕೆಕ್ಕು.ಮತ್ತೆ ಮನಸ್ಸಿನ ಪ್ರಶಾಂತ ವಾತಾವರಣಕ್ಕೆ ಕೊಂಡುಹೋಯೆಕ್ಕು.ಎಲ್ಲಿಯೂ ದುಡುಕಲೆ ಅವಕಾಶ ಮಾಡಿ ಕೊಡ್ಲೆ ಆಗ.ಮತ್ತೆ ನಿಧಾನವಾಗಿ ಮೌನಕ್ಕೆ ಶರಣಾಯೆಕ್ಕು.ಅಷ್ಟಾದ ಮೇಲೆಯೇ ಹೊಸ ಪರಿಷ್ಕಾರಕ್ಕೆ ಹೆರಡೆಕ್ಕು.ಹಾಂಗಾದರೆ ಮಾತ್ರ ಯಶಸ್ಸು ಸಿಕ್ಕುಗಷ್ಟೇ.

ಮನಸ್ಸು ಬಿಚ್ಚಿ ಬಂದ ದು:ಖದ ಕಣ್ಣೀರು

ದು:ಖ ಇಲ್ಲದ್ರೆ ಸಂತೋಷಕ್ಕೆ ಬೆಲೆ ಇಲ್ಲೆ..
ಬೆಶಿಲು ಇಲ್ಲದ್ರೆ ನೆರಳಿಂಗೆ ಬೆಲೆ ಇಲ್ಲೆ..!

ಅವಶ್ಯಕತೆ ಇಲ್ಲದ್ರೆ ಸಂಪತ್ತಿಂಗೆ ಬೆಲೆ ಇಲ್ಲೆ..
ಇದೆಲ್ಲವ ಆಲೋಚಿಸಿದರೆ ಕಷ್ಟಕ್ಕೆ ಬೆಲೆ ಇಲ್ಲೆ..!!

……………………………

………………………………..

(..ಮುಳಿಯ ಭಾವ ಪದ್ಯವ ಮುಂದರುಸುತ್ತವಡ..)

ಗುರುಗಳ ಆಶೀರ್ವಚನಲ್ಲಿ ಎನಗೆ ನೆಂಪು ಇಪ್ಪ ದು:ಖದ ಬಗ್ಗೆ ಒಂದು ವಿಷಯವ ಹೇಳುಲೆ ಇಷ್ಟ ಪಡ್ತೆ.
“ದುಖವ ಬಯೆಸೆಡಿ,ತಾ ನಾಗಿ ದು:ಖ ಹತ್ತರೆ ಬಂದಪ್ಪಗ ಅದರ ಯೋಗಿಯ ಹಾಂಗೆ ಮೌನವಾಗಿ ಅನುಭವಿಸು, ಎಂಥಾ ದು:ಖವೂ ಆರನ್ನೂ ಎಂತ ಮಾಡ್ಲೆ ಎಡಿಯ.
ಅಷ್ಟು ಧೈರ್ಯವ ರೂಡ್ಸಿದರೆ ದು:ಖವೇ ನವಗೆ ಶರಣಾವ್ತು. ದು:ಖಲ್ಲಿ ಎಷ್ಟೋ ಅವ್ಯಕ್ತ ಸತ್ಯಂಗ ನವಗೆ ಗೊಂತಾವ್ತು.ಆ ಸತ್ಯದ ಮೂಲಕ ಜೀವನ ಸಾಕ್ಷಾತ್ಕಾರ ಅಪ್ಪಲೆ ದಾರಿ ಆವ್ತು.”

ದು:ಖಮಿತ್ಯೇವ ಯತ್ಕರ್ಮ ಕಾರ್ಯಕ್ಲೇಶಭಯಾತ್ತ್ಯಜೇತ್!
ಸಕೃತ್ವಾ ರಾಜಸಂ ತ್ಯಾಗಂ ನೈವತ್ಯಾಗ ಫಲಂ ಲಭೇತ್ !!  –
ಭಗವದ್ಗೀತೆ

ವಿ.ಸೂ:
ಸುಖವನ್ನೂ ದು:ಖವನ್ನೂ ಜೀವನಲ್ಲಿ ಸಮಾನವಾಗಿ ಸ್ವೀಕಾರ ಮಾಡಿದ ಮಾಷ್ಟ್ರುಮಾವ ಬರದ  ಅವರ ಜೀವನದ ಅನುಭವ ಕಥನ “ದೃಷ್ಟ-ಅದೃಷ್ಟ” ಓದದ್ದವು ಒಂದರಿ ಓದಿಕ್ಕಿ.
ಹೆಚ್ಚಿನ ಮಾಹಿತಿಗೆ ಗುರಿಕ್ಕಾರನ ಸಂಪರ್ಕ ಮಾಡಿ.

ದುಃಖವೂ ಒಂದು ಯೋಗ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸುಖಃದ ಅನುಭವ ಆಯೆಕ್ಕಾರೆ ದುಖಃದ ಅನುಭವವೂ ಆಯೆಕ್ಕು. ಎರಡನ್ನೂ ಒಂದೇ ರೀತಿ ಸ್ವೀಕರುಸಲೆ ಎಲ್ಲರಿಂಗೂ ಕಷ್ಟ ಸಾಧ್ಯ. ಅದಕ್ಕೆ ಮನಸ್ಸಿನ ಹಿಡಿತಲ್ಲಿ ಮಡುಗಲೆ ಎಡಿಗಾಯೆಕ್ಕು. ಅನುಭವಿಸುವದು ನಮ್ಮ ಯೋಗ ಹೇಳಿ ತಿಳ್ಕೊಳ್ತ ಪಕ್ವತೆ ಇರೆಕು. ಬಂದದರ ಬಂದ ಹಾಂಗೇ ಸ್ವೀಕರುಸುವ ಛಲ ಬೇಕು.
  ದಿನಲ್ಲಿ ಹಗಲು ಇದ್ದು ಇರುಳು ಇದ್ದು. ಇರುಳಿನ ಸದುಪಯೋಗ ನಾವು ಮಾಡ್ತಿಲ್ಲೆಯಾ? ಶರೀರಕ್ಕೆ ಬೇಕಾದ ವಿಶ್ರಾಂತಿ ಪಡಕ್ಕೊಂಬ ಸುಖ ಅಲ್ಲಿಯೇ ಸಿಕುವದಲ್ಲದಾ? ಅದೇ ರೀತಿ ದುಃಖ ಆದಪ್ಪಗ ಸುಖಃ ಅದರ ಹಿಂದೆಯೇ ಬತ್ತು ಹೇಳ್ತ ಆಶಾಭಾವನೆ ಬೆಳೆಶೆಕ್ಕು. ಹೇಳುತ್ತಷ್ಟು ಸುಲಭ ಅಲ್ಲ ಹೇಳಿ ಗೊಂತಿದ್ದು.
  ದುಖಃವ ಹೆರ ಹಾಕಲೆ ಕಣ್ಣೀರು, ನವಗೆ ದೇವರು ಕೊಟ್ಟ ವರವೇ ಸರಿ. ತುಂಬಾ ದುಖಃ ಅಪ್ಪಗ ಜೋರು ಕೂಗಿ ಆದರೂ ಕಣ್ಣೀರು ಬಂದರೆ ಅರ್ಧ ದುಖಃ ಶಮನ ಅದ ಹಾಂಗೇ. ಮತ್ತೆ ಕಾಲವೇ ಎಲ್ಲವನ್ನೂ ಮರೆಸುತ್ತು.

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ದು:ಖ ಆದಪ್ಪಗ ಸುಖ ಬಪ್ಪ ಆಶಾ ಭಾವನೆಯ ಚೆಂದಕ್ಕೆ ವಿವರ್ಸಿ ಲೇಖನಕ್ಕೆ ಪುಷ್ಟಿ ಕೊಟ್ಟದಕ್ಕೆ ಧನ್ಯವಾದ ಶರ್ಮಪ್ಪಚ್ಚೀ…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆಡೈಮಂಡು ಭಾವಒಪ್ಪಕ್ಕಡಾಗುಟ್ರಕ್ಕ°ಶೀಲಾಲಕ್ಷ್ಮೀ ಕಾಸರಗೋಡುಶುದ್ದಿಕ್ಕಾರ°ಸಂಪಾದಕ°ಜಯಶ್ರೀ ನೀರಮೂಲೆಅಕ್ಷರ°ಪೆರ್ಲದಣ್ಣವೆಂಕಟ್ ಕೋಟೂರುಸರ್ಪಮಲೆ ಮಾವ°ಮುಳಿಯ ಭಾವvreddhiಸುವರ್ಣಿನೀ ಕೊಣಲೆಮಂಗ್ಳೂರ ಮಾಣಿವೇಣೂರಣ್ಣಚುಬ್ಬಣ್ಣಪುಣಚ ಡಾಕ್ಟ್ರುಬೊಳುಂಬು ಮಾವ°ತೆಕ್ಕುಂಜ ಕುಮಾರ ಮಾವ°ದೊಡ್ಡಭಾವಶಾ...ರೀಶೇಡಿಗುಮ್ಮೆ ಪುಳ್ಳಿನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ