Oppanna.com

ದುಃಖವೂ ಒಂದು ಯೋಗ

ಬರದೋರು :   ಗಣೇಶ ಮಾವ°    on   13/11/2010    28 ಒಪ್ಪಂಗೊ

ಗಣೇಶ ಮಾವ°

ನಾವು ಯಾವಾಗಲೂ ಸಂತೋಷಂದ ಇಪ್ಪಲೇ ಹಲವು ರೀತಿಲಿ ಪ್ರಯತ್ನಪಡ್ತು.
ಅದಕ್ಕಾಗಿ ಜೀವನಲ್ಲಿ ಅನೇಕ ರೀತಿಲಿ ಪ್ರಯತ್ನ ಪಡ್ತು. ಆ ಪ್ರಯತ್ನ ಕೈಗೂಡಿಯರೆ ನಾವು  ಸಂತೋಷಂದ ಇರ್ತು.ಇಲ್ಲದ್ರೆ ದು:ಖ ಪಡ್ಲೆ ಸುರು ಮಾಡ್ತು.
ಅದರ ವಾಸ್ತವ ಸ್ಥಿತಿ ಬೇರೆಯೇ ಇರ್ತು. ಕತ್ತಲೆ ಇದ್ದರೆ ಮಾತ್ರವೇ ಅಲ್ದೋ ಬೆಣಚ್ಚು ಕಾಂಬದು? ಹಾಂಗಾದರೆ ದು:ಖಲ್ಲಿಯೂ ಸಂತೋಷವ ಅನುಭವಿಸುದು ಹೇಂಗೆ? – ಹೇಳುವ ಪ್ರಶ್ನೆ ಬಪ್ಪದು ಸಹಜ.
ಈ ವಿಷಯಂಗಳ ಬಗ್ಗೆ ಅನೇಕ ರೀತಿಲಿ ಕಲ್ಪನೆ ಮಾಡಿಗೊಂಡು ಮತ್ತೆ ಸಮಾಜಲ್ಲಿ ನೆಡವ ಘಟನೆಗಳ ನೋಡಿ ಬರದ್ದೆ..ಇದರ್ಲಿ ಅಭಿಪ್ರಾಯ ಭೇದಂಗ ಬಪ್ಪಲೂ ಸಾಕು.ಇರಳಿ..
ವಿಷಯಕ್ಕೆ ಹೋವ್ತೆ..

ಮನಸ್ಸು ಬಿಚ್ಚಿ ಕೂಗುದೂ ಒಂದು ಯೋಗವೇ!

ಜಗತ್ತಿಲಿ ಎಲ್ಲೋರಿಂಗೂ ಅವರದ್ದೇ ಆದಂತಹ ಯಾವುದೋ ಒಂದು ಸಮಸ್ಯೆ ಇರ್ತು.
ಅದರ ಎಲ್ಲೋರ ಹತ್ತರೆಯೂ ಹೇಳಿಗೊಂಬಲೆ ಎಡಿತ್ತಿಲ್ಲೆ..
ಅದಕ್ಕಾಗಿ ಹಲವಾರು ರೀತಿಲಿ,ಹಲವಾರು ಕ್ಷೇತ್ರಂಗಳಲ್ಲಿ ಅವರದ್ದೇ ಆದ ರೀತಿಲಿ ಹುಡುಕಾಟ ನಡೆಶಿ ತೃಪ್ತರಪ್ಪಲೆ ಪ್ರಯತ್ನ ಪಡ್ತು.ಯಾವುದೋ ರೀತಿಯ ಕಷ್ಟ-ಕಾರ್ಪಣ್ಯ ಕಾರ್ಮೋಡದ ಹಾಂಗೆ ಜೀವನಲ್ಲಿ ಒಂದರಿಯಾದರೂ ಒಬ್ಬಂಗೆ ಬತ್ತು,ಆದರೆ ಎಲ್ಲೋರಿಂಗೂ ಮನಸ್ಸು ಬಿಚ್ಚಿ ಕೂಗುಲೆ ಎಡಿತ್ತಿಲ್ಲೆ.

ಕಷ್ಟಂಗ ಬಂದಪ್ಪಗ ಮನಸ್ಸು ತಣಿವ ಹಾಂಗೆ ಕೂಗುದೂ ಒಂದು ವರವೇ!!
ದೇವರು, ದು:ಖ ಪಟ್ಟು ಕೂಗುವ ಅವಕಾಶವ ಮನುಷ್ಯರಿಂಗೆ ಮಾತ್ರ ಕೊಟ್ಟಿದ!ಹಾಂಗೆ ಹೇಳಿ ಪ್ರಾಣಿಗೊಕ್ಕೆ ದು:ಖ ಇಲ್ಲೇ ಹೇಳಿದ್ದಲ್ಲ !!
ಅವಕ್ಕೆ ಅವರದ್ದೇ ಆದ ರೀತಿಲಿ ಇರ್ತು.ಅದರ ನವಗೆ ಅರ್ಥ ಮಾಡಿಗೊಂಬಲೆ ಎಡಿತ್ತಿಲ್ಲೆ ಅಷ್ಟೇ!!
ಆದರೆ ಮನುಷ್ಯರು ಕೂಗುದಕ್ಕೆ ವಿಭಿನ್ನ ರೀತಿ ಇರ್ತು.ಅದು ಅವರವರ ಭಾವನೆಗೆ ಹೊಂದಿಗೊಂಡು ಇರ್ತು.ಮನುಷ್ಯರಿಂಗೆ ಇದರ ಎಲ್ಲಾ ತಡವಲೆ ದೇವರು ಮೇಧಾಶಕ್ತಿ ಹೇಳುದರ ಕಷ್ಟಂಗಳ ಜೊತೆಲಿಯೇ ಕೊಟ್ಟಿದ!!ಅದರ ತಾಳ್ಮೆಂದ ವಿವೇಚನೆ ಮಾಡುವ ಪ್ರಯತ್ನ ಮಾತ್ರ ಮಾಡಿರೆ ರಜ್ಜ ಪರಿಹಾರ ಸಿಕ್ಕುಗು.

ಹೆಚ್ಚಾಗಿ ಹೆಮ್ಮಕ್ಕ (ಅಂದ್ರಾಣ ಹಳ್ಳಿ ಜೀವನಕ್ಕೆ ಹೋಲ್ಸಿಯಪ್ಪಗ) ಸಣ್ಣ ಸಣ್ಣ ಸಮಸ್ಯೆಗೆ ಸ್ಪಂದಿಸಿ ಕೂಗಿಗೊಂಡಿತ್ತವು.
ಈ ಕಾರಣಕ್ಕಾಗಿಯೇ ಅವು ಎಂಥಹಾ ಸಮಸ್ಯೆಯೂ ಮನೆ,ಗೆಂಡ,ಮಕ್ಕೊಗೆ ಬಂದರೆ ಸುಲಾಭಲ್ಲಿ ನಿಭಾಯಿಸಿಗೊಂಡಿತ್ತವು.
ಹಾಂಗೆ ಹೇಳಿ ಕೂಗುದರಿಂದ ಮಾತ್ರ ಸಮಸ್ಯೆ ಪರಿಹಾರ ಆವುತ್ತು  ಹೇಳಿ ಹೇಳಿದ್ದಲ್ಲ!ಅದರಿಂದ ಮನಸ್ಸು ಮನೋಭಾರಂದ ಮುಕ್ತ ಆವ್ತು.ಪ್ರಶಾಂತತೆ ಸಿಕ್ಕುತ್ತು.

ಕಷ್ಟಂಗ ಆರಿಂಗೂ ಸಂತೋಷ ಅಲ್ಲ!
ಕಷ್ಟಂಗಳಲ್ಲಿಯೂ ಎರಡು ವಿಧ ಇದ್ದು – ಒಂದು ಶಾರೀರಿಕ ಕಷ್ಟ, ಎರಡನೇದು ಮಾನಸಿಕ ಕಷ್ಟ.
ಶಾರೀರಿಕ ಕಷ್ಟ ಬೆಗರಿನ ರೂಪಲ್ಲಿ ಇರ್ತು.ಮಾನಸಿಕ ಕಷ್ಟ ಕಣ್ಣೀರಿನ ರೂಪಲ್ಲಿ ಹೆರ ಬತ್ತು.
ಮಾನಸಿಕ ವಿಚಾರಂಗಳ ಮನಸ್ಸಿಲೇ ಮಡಿಕ್ಕೊಂದಿದ್ದರೆ ಮನುಷ್ಯನ ದೈಹಿಕ ಮಾನಸಿಕ ಕ್ರಿಯೆಗ ಏರುಪೇರು ಅಪ್ಪಲೆ ಸುರು ಆವ್ತು.ಅದರಿಂದಾಗಿ ಶಾರೀರಿಕ ಕಷ್ಟ ಅಪ್ಪಲೆ ಸುರು  ಆವ್ತು.
ಹೀಂಗಿಪ್ಪ ಸಂದರ್ಭಲ್ಲಿ ಕೆಲವು ಜೆನಂಗ ಬಾಂಧವ್ಯಂಗಳ ದೂರ ಮಾಡಿ ಮನೋಸ್ಥೈರ್ಯವ ಕಳಕ್ಕೊಂಡು ಆತ್ಮಹತ್ಯೆಯ ದಾರಿ ಹಿಡಿತ್ತವು.

ಈ ಸಂದರ್ಭಲ್ಲಿ ಆರ ಪ್ರೀತಿಗೂ ಮನಸ್ಸು ಕೊಡ್ತವಿಲ್ಲೆ.
ಆದಷ್ಟು ಎಲ್ಲೋರಿಂದ ದೂರ ಇದ್ದು ಒಂಟಿತನವ ಇಷ್ಟಪಡ್ತವು. ಹೀಂಗೆ ಮನಸ್ಸಿಲಿ ಯಾವುದೇ ವಿಚಾರಂಗಳ ಆರತ್ರೆಯೂ ಹೇಳದ್ದೇ ಮಡುಗಿದರೆ ಶರೀರಲ್ಲಿ  ದೇಹ ಸೌಂದರ್ಯ ಕಡಮ್ಮೆ ಆಗಿ ಮುದಿತನ ಬೇಗ ಬತ್ತು.
ಮಾನಸಿಕ ಸಮಸ್ಯೆಗಳ ಬಹಿರ್ಗತ ಮಾಡುವವು ನೂರಕ್ಕೆ ಒಬ್ಬನೂ ಕೂಡಾ ಆತ್ಮಹತ್ಯೆಗೆ ಕೈ ಹಾಕುತ್ತವಿಲ್ಲೆ.ಜೀವನಲ್ಲಿ ಬಪ್ಪ ಸಮಸ್ಯೆಗೊಕ್ಕೆ ಹೆದರದ್ದೇ ಬದುಕಿನ ನಿವೃತ್ತಿಯ ಚೆಂದಲ್ಲಿ ಕಳೆತ್ತವು.

ನಮ್ಮ ಯಾಂತ್ರಿಕ ಜೀವನಲ್ಲಿ ಸಮಸ್ಯೆಯ ತಾತ್ಕಾಲಿಕವಾಗಿ ಪರಿಹಾರ ಮಾಡಿಗೊಂಡು ಶಾಶ್ವತವಾದ ಪರಿಹಾರ ಕಾಂಬದು ಹೇಂಗೆ ಹೇಳಿ ನೋಡುವ..
ಒಬ್ಬನೇ ರೂಮಿಲಿ ಬಾಗಿಲು ಹಾಕಿಗೊಂಡು ಸಮಸ್ಯೆಗಳ ಒಂದರಿ ಗ್ರೇಶಿ ಮನಸ್ಸು ಬಿಚ್ಚಿ ಕೂಗಿ.
ಎಂತಕೆ ಹೇಳಿರೆ ಈಗ ಅದಕ್ಕೂ ಪುರುಸೊತ್ತು ಅಪ್ಪದು ಕಡಮ್ಮೆ.ಮತ್ತೆ ಮಾನಸಿಕವಾದ ತೃಪ್ತಿ ಸಿಕ್ಕಿದ ಮೇಲೆ ಒಂದರಿ ತಲೆ ಮೈ ಸರಿಯಾಗಿ ಚೆಂಡಿ ಅಪ್ಪ ಹಾಂಗೆ ಮೀಯೇಕ್ಕು.

ಸ್ನಾನೇನ ಶುದ್ಧೇನ ನ ತು ಚಂದನೇನ“ಹೇಳಿ ಹಿರಿಯರು ಹೇಳಿದ್ದವಲ್ದಾ?- ಮೀವದರಿಂದ ಶರೀರ ಶುದ್ಧಿ  ಅಪ್ಪದಲ್ಲದ್ದೇ ಮನಸ್ಸೂ ಶುದ್ಧ ಆವ್ತು.
ಮತ್ತೆ ನಿಧಾನವಾಗಿ ಕೂದು ಸಮಸ್ಯೆಗಳ ಆಲೋಚನೆ ಮಾಡೆಕ್ಕು. ಇಷ್ಟು ಮಾಡುದರಿಂದ ನಮ್ಮ ಕೈಲಿಯೇ ಆದ ತಪ್ಪಿಂದಾಗಿ ಬಪ್ಪ ಸಮಸ್ಯೆಗಳ ಪರಿಹಾರ ಮಾಡ್ಲೆ ಒಂದು ದಾರಿ ಸಿಕ್ಕುಗು.
ನವಗೆ ಗೋಚರಕ್ಕೆ ಬಾರದ್ದೆ ಅನಿರೀಕ್ಷಿತವಾಗಿ ಬಪ್ಪಂತಹ ಕಷ್ಟಕ್ಕೆ ಕಾಲವೇ ಉತ್ತರ ಕೊಡ್ತು.
ಅದಕ್ಕೆ ನಾವು ತಾಳ್ಮೆಯ ಮುಖ್ಯವಾಗಿ ಅಳವಡಿಸೆಕ್ಕು.ಮತ್ತೆ ನಾವು ಆತ್ಮೀಯರು ಹೇಳಿ ಆರತ್ರೆ ನಂಬಿಕೆ ಮಡುಗಿದ್ದೋ ಅವರತ್ರೆ ಹೇಳೆಕ್ಕು.ಕೆಲವು ಕಷ್ಟಂಗಳ ಕಾಲವೇ ತನ್ನಷ್ಟಕ್ಕೇ ಪರಿಹಾರ ಮಾಡ್ತು.ಕಾಲಕ್ಕಿಪ್ಪ ಶಕ್ತಿ ಅನಂತ..

ಮನಸ್ಸು ಬಿಚ್ಚಿ ಕೂಗುದರಿಂದ ಶರೀರಲ್ಲಿಪ್ಪ “ಟಾಕ್ಸಿನ್ಸ್” ಹೆರ ಬತ್ತು.ಇದು ದೇಹಕ್ಕೆ ಒಳ್ಳೆದು.
ಸಾಧಾರಣವಾಗಿ ಕಣ್ಣಿಂಗೆ ಕಸವು ಬಿದ್ದಪ್ಪಗ, ಹೊಗೆ, ಧೂಳಿಂಗೆ  ಅಥವಾ ನೀರುಳ್ಳಿ ಕತ್ತರುಸಗ ಬಪ್ಪ ಕಣ್ಣೀರು “ಇರಿಟೇಶನ್”  ಆಗಿ ಹೆರ ಬಪ್ಪದಕ್ಕೆ ವೆತ್ಯಾಸ ಇದ್ದಲ್ದ?
ಮಾನಸಿಕ ತುಮುಲಂದ ಬಪ್ಪ ಕಣ್ಣೀರು “ಎಮೋಷನಲ್ “ಆಗಿ ಹೆರ ಬತ್ತು.ಇದರಿಂದಾಗಿ ಮನಶ್ಶಾಂತಿ ಸಿಕ್ಕುತ್ತು.

ವಿಷಾದವ ನಾವು ಒಂದು ಯೋಗ ಹೇಳಿ ಗ್ರೆಶಿರೆ ಮನುಷ್ಯ ಮಹಾತ್ಮ ಅಪ್ಪ ದಾರಿಗೆ ಹೋವ್ತಾ ಇದ್ದ ಹೇಳಿ ಅರ್ಥ!
ಮತ್ತೊಬ್ಬರ ಬದುಕಿಂಗೆ ಮಾದರಿ ಆವ್ತ.
ಸಂಪತ್ತೌಚ ವಿಪತ್ತೌಚ ಮಹಾತಾಮೇಕ ರೂಪತಾ“ಹೇಳಿ ಸುಭಾಷಿತದ ಸಾರದ ಹಾಂಗೆ ಮಹರ್ಷಿಗ,ಸನ್ಯಾಸಿಗ,ಯೋಗಿಗ ಸಮಸ್ಯೆಗೊಕ್ಕೆ ಹೆದರ್ತವಿಲ್ಲೆ. ಅವು ವಿಧಿ ನಿಯಮಕ್ಕೆ ಬಿಡ್ತವು.

“ಯೋಗ” ಹೇಳಿರೆ ಅಕಲ್ಪಿತ “ಅದೃಷ್ಟ”.
“ಯೋಗ” ಹೇಳಿರೆ “ಸಾಧನೆ”. – ಇದೆರಡೂ ಸೇರಿಯಪ್ಪಗ ಮನುಷ್ಯ “ಯೋಗಿ”ಆವ್ತ.

ದು:ಖವ ಒಂದು ಯೋಗ ಹೇಳಿ ನೋಡಿರೆ ನಾವು ದು:ಖಲ್ಲಿಯೂ  ಸುಖ ಕಾಂಬಲೆ  ಎಡಿಗು.ಅಷ್ಟರವರೆಗೆ ಜೀವನವ ಚೆಂದಕ್ಕೆ ಕರಕ್ಕೊಂಡು ಹೋದ ಆ ಅತೀಂದ್ರಿಯ(ದೇವರು)ಶಕ್ತಿಗೆ ಧನ್ಯವಾದ ಹೇಳೆಕ್ಕು.ಸಣ್ಣ ಕಲ್ಲಿನ ಕೂಡಾ ಕಣ್ಣಿನ ಹತ್ತರಂಗೆ ಹಿಡುದು ನೋಡಿರೆ ಗುಡ್ಡೆಯ ಹಾಂಗೆ ಕಾಂಬದು ಸಹಜ!ಅದೇ ದೊಡ್ಡ ಗುಡ್ಡೆಯ ಅಂಗೈ ಅಗಲದ ಕನ್ನಟಿಲಿ ನೋಡಿರೆ ಗುಡ್ಡೆ ಪೂರ್ತಿ ಅಂಗೈ ಒಳವೇ ಕಾಣ್ತಿಲ್ಲೆಯ?ಹಾಂಗೆಯೇ ಕಷ್ಟ- ಸುಖದ ರೀತಿ.ಅನುಭವಿಸುವ ರೀತಿಲಿ ಮಾತ್ರ ಇಪ್ಪದು ಅದರ ವ್ಯತ್ಯಾಸಂಗ.

ಅತೀ ಸಮಸ್ಯೆ ಬಂದಪ್ಪಗ ಮನಸ್ಸಿನ ರಜ್ಜ ಹೊತ್ತು ಆಲೋಚನೆ ಮಾಡ್ಲೆ ಬೇಕಾಗಿ ನಿಯಂತ್ರಣ ಮಡುಗೆಕ್ಕು.ಆ ಮೂಲಕ ಮನಸ್ಸು ಬಯಸುವ ಗೊಂದಲಕ್ಕೆ ಕಡಿವಾಣ ಹಾಕೆಕ್ಕು.ಮತ್ತೆ ಮನಸ್ಸಿನ ಪ್ರಶಾಂತ ವಾತಾವರಣಕ್ಕೆ ಕೊಂಡುಹೋಯೆಕ್ಕು.ಎಲ್ಲಿಯೂ ದುಡುಕಲೆ ಅವಕಾಶ ಮಾಡಿ ಕೊಡ್ಲೆ ಆಗ.ಮತ್ತೆ ನಿಧಾನವಾಗಿ ಮೌನಕ್ಕೆ ಶರಣಾಯೆಕ್ಕು.ಅಷ್ಟಾದ ಮೇಲೆಯೇ ಹೊಸ ಪರಿಷ್ಕಾರಕ್ಕೆ ಹೆರಡೆಕ್ಕು.ಹಾಂಗಾದರೆ ಮಾತ್ರ ಯಶಸ್ಸು ಸಿಕ್ಕುಗಷ್ಟೇ.

ಮನಸ್ಸು ಬಿಚ್ಚಿ ಬಂದ ದು:ಖದ ಕಣ್ಣೀರು

ದು:ಖ ಇಲ್ಲದ್ರೆ ಸಂತೋಷಕ್ಕೆ ಬೆಲೆ ಇಲ್ಲೆ..
ಬೆಶಿಲು ಇಲ್ಲದ್ರೆ ನೆರಳಿಂಗೆ ಬೆಲೆ ಇಲ್ಲೆ..!

ಅವಶ್ಯಕತೆ ಇಲ್ಲದ್ರೆ ಸಂಪತ್ತಿಂಗೆ ಬೆಲೆ ಇಲ್ಲೆ..
ಇದೆಲ್ಲವ ಆಲೋಚಿಸಿದರೆ ಕಷ್ಟಕ್ಕೆ ಬೆಲೆ ಇಲ್ಲೆ..!!

……………………………

………………………………..

(..ಮುಳಿಯ ಭಾವ ಪದ್ಯವ ಮುಂದರುಸುತ್ತವಡ..)

ಗುರುಗಳ ಆಶೀರ್ವಚನಲ್ಲಿ ಎನಗೆ ನೆಂಪು ಇಪ್ಪ ದು:ಖದ ಬಗ್ಗೆ ಒಂದು ವಿಷಯವ ಹೇಳುಲೆ ಇಷ್ಟ ಪಡ್ತೆ.
“ದುಖವ ಬಯೆಸೆಡಿ,ತಾ ನಾಗಿ ದು:ಖ ಹತ್ತರೆ ಬಂದಪ್ಪಗ ಅದರ ಯೋಗಿಯ ಹಾಂಗೆ ಮೌನವಾಗಿ ಅನುಭವಿಸು, ಎಂಥಾ ದು:ಖವೂ ಆರನ್ನೂ ಎಂತ ಮಾಡ್ಲೆ ಎಡಿಯ.
ಅಷ್ಟು ಧೈರ್ಯವ ರೂಡ್ಸಿದರೆ ದು:ಖವೇ ನವಗೆ ಶರಣಾವ್ತು. ದು:ಖಲ್ಲಿ ಎಷ್ಟೋ ಅವ್ಯಕ್ತ ಸತ್ಯಂಗ ನವಗೆ ಗೊಂತಾವ್ತು.ಆ ಸತ್ಯದ ಮೂಲಕ ಜೀವನ ಸಾಕ್ಷಾತ್ಕಾರ ಅಪ್ಪಲೆ ದಾರಿ ಆವ್ತು.”

ದು:ಖಮಿತ್ಯೇವ ಯತ್ಕರ್ಮ ಕಾರ್ಯಕ್ಲೇಶಭಯಾತ್ತ್ಯಜೇತ್!
ಸಕೃತ್ವಾ ರಾಜಸಂ ತ್ಯಾಗಂ ನೈವತ್ಯಾಗ ಫಲಂ ಲಭೇತ್ !!  –
ಭಗವದ್ಗೀತೆ

ವಿ.ಸೂ:
ಸುಖವನ್ನೂ ದು:ಖವನ್ನೂ ಜೀವನಲ್ಲಿ ಸಮಾನವಾಗಿ ಸ್ವೀಕಾರ ಮಾಡಿದ ಮಾಷ್ಟ್ರುಮಾವ ಬರದ  ಅವರ ಜೀವನದ ಅನುಭವ ಕಥನ “ದೃಷ್ಟ-ಅದೃಷ್ಟ” ಓದದ್ದವು ಒಂದರಿ ಓದಿಕ್ಕಿ.
ಹೆಚ್ಚಿನ ಮಾಹಿತಿಗೆ ಗುರಿಕ್ಕಾರನ ಸಂಪರ್ಕ ಮಾಡಿ.

28 thoughts on “ದುಃಖವೂ ಒಂದು ಯೋಗ

  1. ಸುಖಃದ ಅನುಭವ ಆಯೆಕ್ಕಾರೆ ದುಖಃದ ಅನುಭವವೂ ಆಯೆಕ್ಕು. ಎರಡನ್ನೂ ಒಂದೇ ರೀತಿ ಸ್ವೀಕರುಸಲೆ ಎಲ್ಲರಿಂಗೂ ಕಷ್ಟ ಸಾಧ್ಯ. ಅದಕ್ಕೆ ಮನಸ್ಸಿನ ಹಿಡಿತಲ್ಲಿ ಮಡುಗಲೆ ಎಡಿಗಾಯೆಕ್ಕು. ಅನುಭವಿಸುವದು ನಮ್ಮ ಯೋಗ ಹೇಳಿ ತಿಳ್ಕೊಳ್ತ ಪಕ್ವತೆ ಇರೆಕು. ಬಂದದರ ಬಂದ ಹಾಂಗೇ ಸ್ವೀಕರುಸುವ ಛಲ ಬೇಕು.
    ದಿನಲ್ಲಿ ಹಗಲು ಇದ್ದು ಇರುಳು ಇದ್ದು. ಇರುಳಿನ ಸದುಪಯೋಗ ನಾವು ಮಾಡ್ತಿಲ್ಲೆಯಾ? ಶರೀರಕ್ಕೆ ಬೇಕಾದ ವಿಶ್ರಾಂತಿ ಪಡಕ್ಕೊಂಬ ಸುಖ ಅಲ್ಲಿಯೇ ಸಿಕುವದಲ್ಲದಾ? ಅದೇ ರೀತಿ ದುಃಖ ಆದಪ್ಪಗ ಸುಖಃ ಅದರ ಹಿಂದೆಯೇ ಬತ್ತು ಹೇಳ್ತ ಆಶಾಭಾವನೆ ಬೆಳೆಶೆಕ್ಕು. ಹೇಳುತ್ತಷ್ಟು ಸುಲಭ ಅಲ್ಲ ಹೇಳಿ ಗೊಂತಿದ್ದು.
    ದುಖಃವ ಹೆರ ಹಾಕಲೆ ಕಣ್ಣೀರು, ನವಗೆ ದೇವರು ಕೊಟ್ಟ ವರವೇ ಸರಿ. ತುಂಬಾ ದುಖಃ ಅಪ್ಪಗ ಜೋರು ಕೂಗಿ ಆದರೂ ಕಣ್ಣೀರು ಬಂದರೆ ಅರ್ಧ ದುಖಃ ಶಮನ ಅದ ಹಾಂಗೇ. ಮತ್ತೆ ಕಾಲವೇ ಎಲ್ಲವನ್ನೂ ಮರೆಸುತ್ತು.

    1. ದು:ಖ ಆದಪ್ಪಗ ಸುಖ ಬಪ್ಪ ಆಶಾ ಭಾವನೆಯ ಚೆಂದಕ್ಕೆ ವಿವರ್ಸಿ ಲೇಖನಕ್ಕೆ ಪುಷ್ಟಿ ಕೊಟ್ಟದಕ್ಕೆ ಧನ್ಯವಾದ ಶರ್ಮಪ್ಪಚ್ಚೀ…

  2. ಗಣೇಶ ಮಾವ,
    ಕಣ್ಣೀರಿನ ಹಿಡುದು ಮಡುಗಲಾಗ ಹೇಳಿಕ್ಕಿ ನಿ೦ಗೊ ಪಟಲ್ಲಿ ಅದರ ಹಿಡುದು ಮಡುಗಿದಿ! 🙂
    ಇರಲಿ, ಉರುಳುವ ಕಣ್ಣೀರ ಬಿ೦ದುವಿನ ಅ೦ದವ ತೋರುಸಿ ಅದರ ಪ್ರಾಮುಖ್ಯವ ಚೆ೦ದಕೆ ವಿವರುಸಿದ್ದಿ.

    {ಮನಸ್ಸು ಬಿಚ್ಚಿ ಕೂಗುವದೂ ಒ೦ದು ಯೋಗವೆ}
    ಯಡಿಯೂರಪ್ಪ ಕೂಗಿ ಕೂಗಿ ಯೋಗಿ ಆತೋ ಹೇಳಿ!

    ದುಃಖದ ನಿವಾರಣೆ ನಮ್ಮ ಕೈಲಿದ್ದೂ ಕೂಗಿರೆ ಅದು ದೌರ್ಬಲ್ಯದ ಸ೦ಕೇತ ಹೇಳಿ ಹೇಳ್ಳಕ್ಕೊ ಏನೊ!!

    ಮನಸ್ಸಿಲ್ಲಿಪ್ಪ ದುಃಖವ ಹೆರ ಹಾಕಿ ನಿರಾಳ ಆಗಿ ಹೇಳಿ ಗಣೇಶ ಮಾವ ಹೇಳ್ತವು.
    ರಘುಭಾವನೂ ಹೇಳ್ತವು ‘ಯೋಚನೆಗಳನು ಕಂತೆ ಕಟ್ಟಿಯೆ ಮಡುಗೊದೆಂತಗೆ’ ಹೇಳಿ.

    ದುಃಖ ಹೆರ ಬಾರದ್ದೆ ಮಾನಸಿಕವಾಗಿ ಜಡ್ಡು ಕಟ್ಟಿರೆ ಅದು ‘ಆಧಿ’ ಆವುತ್ತಡ.
    ಶಾರೀರಿಕವಾಗಿ ಜಡ ಹಿಡುದು ರೋಗ ಬ೦ದರೆ ಅದು ‘ವ್ಯಾಧಿ’ ಅಡ.

    ಈ ಒಪ್ಪಣ್ಣನ ಬಯಲಿಲ್ಲಿ ವ್ಯಾಧಿ ಬಾರದ್ದ ಹಾ೦ಗೆ ಯೋಗ, ಚಿಕಿತ್ಸೆ ಎಲ್ಲ ವಿಚಾರ೦ಗಳೂ ಇದ್ದು.
    ವಿಚಾರ ವಿನಿಮಯ ಮಾಡಿ ವೈಚಾರಿಕ ಶುದ್ಧಿಗೂ ಇಲ್ಲಿ ಅವಕಾಶ ಇದ್ದು.

    ಇವುಗಳ ಅಳವಡಿಸಿಕೊ೦ಡು ಒಪ್ಪಣ್ಣನ ಬಯಲಿಲ್ಲಿ ಸರಿಯಾಗಿ ನೆಡದರೆ ‘ಆಧಿ’ಯೂ ಇರ ‘ವ್ಯಾಧಿ’ಯೂ ಬಾರ!!

    1. ಮಹೇಶಣ್ಣ,ಅದು ಕಣ್ಣೀರಿನ ಹಿಡುದು ಮಡುಗಿದ್ದದು ಅಲ್ಲ.ಬಪ್ಪಲೆ ಪ್ರಾರಂಭ ಆದ್ದು…
      ಇನ್ನು ಈ ವಿಷಯ ರಾಜಕೀಯ ಹೋಲಿಕೆ ಅಪ್ಪಲೆ ಸಾಧ್ಯ ಇಲ್ಲೆ.ಅವು ಯಾವಾಗ ಕೂಗುತ್ತವು,ನೆಗೆ ಮಾಡ್ತವು ಹೇಳಿಗೊಂಡು ನವಗೆ ಒಂದೂ ಅರ್ಥ ಆಗ..ಒಂದು ನಮೂನೆಲಿ ಯೆಡಿಯೂರಪ್ಪ ಈಗ ಯೋಗಿಯೇ!!!ಸುಮಾರು ಸರ್ತಿ ಸಭೆಲಿ ಕೂಗಿ ಈಗ ಹೆಂಗಾರು ಆಗಿ ಕುರ್ಚಿ ಒಳುದ್ದಿಲ್ಲೆಯೋ?ಅದೂ ಒಂದು ಯೋಗವೇ!!! ಅದರ ಅನುಭವಿಸುದು ಆ ನಮೂನೆ ಯೋಗಿ,ಹೆಚ್ಚಿನ ಮಾಹಿತಿಗೆ ಗುಣಾಜೆ ಮಾಣಿಯ ಸಂಪರ್ಕಿಸಿ
      ಇನ್ನು ದುಃಖದ ನಿವಾರಣೆ ನಮ್ಮ ಕೈಲಿದ್ದೂ ಕೂಗಿರೆ ಅದು ದೌರ್ಬಲ್ಯದ ಸ೦ಕೇತ ಹೇಳಿ ಹೇಳ್ಳಕ್ಕೊ ಏನೊ!!
      ದೌರ್ಬಲ್ಯ ಅಲ್ಲ,ಅದೊಂದು ಪರಿಹಾರ ಕಾಂಬಲೆ ದಾರಿ.ಯೋಚನೆ ಮಾಡಿ ನಿರ್ಧಾರ ಮಾಡ್ಲೆ ಒಂದು ಅವಕಾಶ.
      ಆಧಿ ವ್ಯಾಧಿಯ ವಿವರಣೆ ಕೊಟ್ಟು ಲೇಖನಕ್ಕೆ ಜೀವ ತುಂಬಿದ್ದಕ್ಕೆ ಧನ್ಯವಾದ ಮಹೇಶಣ್ಣ….

      1. { ಯಡಿಯೂರಪ್ಪ ಕೂಗಿ ಕೂಗಿ ಯೋಗಿ ಆತೋ ಹೇಳಿ! }
        ಗುಣಾಜೆಮಾಣಿ ನೆಗೆಮಾಡಿ ನೆಗೆಮಾಡಿ ವಿಯೋಗಿ ಆದನೋ ಹೇಳಿ ಒಂದು ಕನುಪ್ಯೂಸು ಬತ್ತಾ ಇದ್ದು ಎಂಗೊಗೆ!! 😉

        ಗಣೇಶಮಾವಾ.. ಶುದ್ದಿ ಪಷ್ಟಾಯಿದು.

  3. ಸುಖ ಶಾಷ್ವತ ಅಲ್ಲ-ದು:ಖ ಎ೦ದಿಗು ಕೊನೆ ಅಲ್ಲಾ..
    ಅಟ್ಟಕ್ಕೆ ಏರಿದವ, ಚೊರಿ೦ಗೆ ಕೆಳ ಬಪ್ಪಲೆ ಬೇಕು..
    ಮನುಶ್ಯ ಎಷ್ಟೆ ಎತ್ತರಕ್ಕೆ ಬೆಳೆಯಲಿ, ತನ್ನ ಕಾಲು ನೆಲಕ್ಕಲಿ ಮಡುಗಲೇ ಬೇಕು..
    ತಾನು ಎಷ್ಟೆ ಪೈಸೆ ಮಾಡ್ಲಿ, ಎಷ್ಟೆ ಎತ್ತರ ಬೇಳೆಯಲಿ, ಎಷ್ಟೇ ಗಳುಸಲಿ,
    ತಾನು ಬ೦ದ ದಾರಿ ಮರವಲಾಗ, ಅದಕ್ಕೆ ಪೂರಕ ವಾಗಿಪ್ಪವರ ಮರವಲಾಗ..
    ದೇಶಕ್ಕೆ ರಾಜನೆ/ರಾಣಿ ಆಗಲಿ, ತನ್ನ ಅಬ್ಬೆಯಪ್ಪ೦ಗೆ ಮಗನೆ/ಮಗಳೆ.

    ನಿ೦ಗೊ ಬರದ್ದು ಬಾರಿ ಲಾಯಕೆ ಆಯಿದು.. ಇದು ಒ೦ದು ವಿಷೆಶ ಲೇಕನೆ..
    ಎನ್ನ ಕಡೆ೦ದ, ೧೦೦ ರಕ್ಕೆ ೧೦೦ ಅ೦ಕ.. 🙂

    1. ಧನ್ಯವಾದ ಚುಬ್ಬಣ್ಣ ಭಾವಾ,ಮಾರ್ಕು ಕೊಟ್ಟದಕ್ಕೆ…ನಿಂಗಳ ಒಪ್ಪ ಮುಳಿಯ ಭಾವನ ಪದ್ಯದ ಹಾಂಗೆ ಬತ್ತಾ ಇದ್ದು,ಅರ್ಥ ಪೂರ್ಣ ಒಪ್ಪಂಗಳ ಕೊಟ್ಟು ಲೇಖನವ ಪುಷ್ಟಿ ಮಾಡಿದ್ದಕ್ಕೆ ಧನ್ಯವಾದ

  4. ಸುಖ ದು:ಖವ ಸಮಾನ ದ್ರಿಷ್ಟಿಲಿ ನೋಡ್ಲೆ ಎಡಿಗಾದವನ ಸ್ಥಿಥ ಪ್ರಜ್ನ ಹೇಳ್ತವಾಡ.ನಾವು ಆಸ್ಥಿತಿಗೆ ಎತ್ತಲೆ ನಿರ೦ತರ ಪ್ರಯತ್ನ ಮಾಡಿಯೊ೦ಡಿದ್ದರೆ ಅದೇ ಸ್ಥಿತಿ ಅಲ್ಲದ್ದರೂ ದು:ಖವ ನಮ್ಮ ಹತೋಟೀಲಿ ಮಡಗಿಯೊ೦ಬಲೆ ಎಡಿಗು.ಇನ್ನು ಮುಳಿಯ ಭಾವನ ದ್ವಿಪದಿಗೊ ಸುಪರ್ಬ್ ಹೇಳದ್ದೆ ನಿವ್ರುತ್ತಿಯೇ ಇಲ್ಲೆ.ಶ್ರೀದೇವಿ ಅಕ್ಕ೦ ಹೇಳಿದ ಹಾ೦ಗೆ ದು:ಖ ಎದುರುಸುತ್ತದರಲ್ಲಿಯೇ ಮನುಷ್ಯನ ಜಯಾಪಜಯ ನಿರ್ಣಯ ಆವುತ್ತು.ದು:ಖವ ಎದುರುಸಿ ನಿ೦ದು ಹೋರಡಿದ ಎಷ್ಟೆಷ್ಟೋ ಜನ೦ಗೊ ಭೂಲೋಕಕ್ಕೆ ಹೊಸ ಹೊಸ ಕಾಣಿಕಗಳನ್ನೆ ಕೊಟ್ಟ ಉದಾಹರಣೆ ಬೇಕಾಷ್ಟು ಇದ್ದು.ಅ೦ತೂ ಗಣೇಶ ಮಾವನ ಲೇಖನ ಬಯಲಿನೋರ ಒ೦ದಷ್ಟು ಚಿ೦ತನಗೆ ದೂಡಿದ್ದು ಹೇಳುವದರಲ್ಲಿ ಸ೦ಶಯ ಇಲ್ಲೆ.ಒಪ್ಪ೦ಗಳೊಟ್ಟಿ೦ಗೆ.

  5. ಗಣೇಶ ಮಾವ°, ಎಲ್ಲಾ ಮನುಷ್ಯಂಗೂ ಒಂದಲ್ಲ ಒಂದು ರೀತಿಯ ದುಃಖ ಇದ್ದೇ ಇರ್ತು. ಸ್ವರೂಪ ಬೇರೆ ಬೇರೆ ಆದಿಕ್ಕು ಅಷ್ಟೇ!! ತಮ್ಮ ದಾರಿಗೆ ಬಂದದೆಲ್ಲದರ ಎದುರುಸುವ ಶಕ್ತಿ ಪ್ರತಿಯೊಬ್ಬನಲ್ಲಿಯೂ ಇರ್ತು. ಆದರೆ ಅದರ ನಾವು ಕಂಡುಗೊಂಡಿರ್ತಿಲ್ಲೆ. ದುಃಖ ಯಾವಾಗಲೂ ಇರ್ತಿಲ್ಲೆ, ನಮ್ಮ ಗಟ್ಟಿ ಮಾಡ್ಲೆ ಬಂದು ಹೋಗಿ ಮಾಡ್ತು. ದುಃಖ ಬಂದಪ್ಪಗ ಅದರ ಎದುರುಸುಲೇ ತಯಾರಿಪ್ಪವನೇ ನಿಜವಾಗಿಯೂ ಮಾನಸಿಕವಾಗಿ ಗಟ್ಟಿ ಇಪ್ಪವ°. ಹಾಂಗಿಪ್ಪವ° ಆ ಸ್ಥಿತಿಲಿ ತಾನೂ ಮೇಲೆ ಬತ್ತ° ಅಲ್ಲದ್ದೆ, ತನ್ನ ಒಟ್ಟಿನ್ಗೆ ಇಪ್ಪವರನ್ನೂ ಮೇಲೆ ತತ್ತ° ಅಲ್ಲದಾ?
    ನಿಂಗೊ ವಿ. ಸೂ. ನೆಲಿ ಹೇಳಿದ ಪುಸ್ತಕ “ದೃಷ್ಟ-ಅದೃಷ್ಟ” ನಿಜವಾಗಿಯೂ ಎಲ್ಲರಿಂಗೂ ಮಾರ್ಗದರ್ಶಿ. ದಾರಿಲಿ ಬಂದ ಕಷ್ಟವ ಎದುರಿಸಿ ಬಂದವಕ್ಕೆ ಹೇಂಗೆ ಜಯ ಸಿಕ್ಕಿಯೇ ಸಿಕ್ಕುತ್ತು ಹೇಳುದಕ್ಕೆ ಮಾಷ್ಟ್ರು ಮಾವ° ಒಂದು ಉದಾಹರಣೆ. ಖಂಡಿತವಾಗಿಯೂ ಇದು ಪ್ರತಿಯೊಬ್ಬಂಗೂ ಸ್ಪೂರ್ತಿಯಾಗಲಿ.

  6. sukha-dukha eradoo bekaade heli vivarisuva lekhana laikiddu.Padyavoo samayochita, sama yojita!

  7. ಬಲಿಪ್ಪಜ್ಜನ ಪ್ರಿಯ ದ್ವಿಪದಿಗಳನ್ನೇ ಮುಂದುವರಿಸುವ ಹಾಂಗಾರೆ ….

    ಬಾನ ಜಾಲಿಲಿ ಹೊಳೆವ ದಿನಮಣಿಯ ಕಿರಣಾ
    ದೀನ ಭೂಮಿಯ ಮೇಲೆ ಬೆಶಿಲಿಂಗೆ ಕಾರಣಾ

    ಅನುಮಾನಬೇಡ ಬಿಡಿ ನೆರಳಿನವತರಣಾ
    ತಾನಾಗಿ ಇಕ್ಕು ತೆರೆ ಅಡ್ಡ ಹಿಡುದಕ್ಷಣಾ

    ಸಂತೋಷ ಮನಸಿಂಗೆ ಮುದವೀವ ಕಾಲಾ
    ಅಂತರಂಗದ ಬಯಕೆ ದಕ್ಕಿ ಅನುಕೂಲಾ

    ಕಂತುಗೆದೆಗಾಸೆ ಪೂರೈಸದಿರೆ ಶೂಲಾ
    ಗೊಂತಾತು ದುಃಖಕ್ಕೆ ಆಸೆಯೇ ಮೂಲಾ

    ತಳಿಯದ್ದೆ ಭಾವನೆಗೆ ಕಡಿವಾಣ ಹಾಕೀ
    ತಿಳಿಯಾದ ಮನಸಿನಲಿ ಕಾರಣವ ಒಕ್ಕೀ

    ಕಳಿಗು ದುಃಖದ ಕ್ಷಣಗಳದೊ ದೂರ ನೂಕೀ
    ಗಳಿಸಿ ಸಂತೋಷ ಚಿರಯೌವನದಿ ಬದುಕೀ

    ಎಲ ಕತೆಯೇ ದುಃಖ ನೆರಳಿಗೆ ಸಾಟಿ ಇಲ್ಲೇ
    ಮೂಲ ಹುಡುಕಿದರೆ ಉತ್ತರ ಸಿಕ್ಕಿತಿಲ್ಲೇ

    ಒಂದು ಪಾವಲಿಯೆರಡು ಮೋರೆ ಸುಖ ದುಃಖಾ
    ಇಂದು ಗೊಂತಾತಿನ್ನು ಸಂತಸವು ಸುಕ್ಕಾ

    1. ಶುದ್ದಿಯ ಒಪ್ಪಂಗಳ ಎಡೆಲಿಯೂ ಒಂದು ದ್ವಿಪದಿ ಮಾಲೆ…
      ಇದೆಂತದು ರಘು ಭಾವ ನಿಂಗಳ ಹೊಸ ಲೀಲೆ!!!?
      ಭಾಮಿನಿಯ ಒಟ್ಟಿನ್ಗೆ ಇನ್ನು ದ್ವಿಪದಿಗಳೂ ಬರಲಿ ಭಾವ. ನಿಂಗೊ ಬರದ್ದದರ ಎಂಗೊ ಕೊಶೀಲಿ ಆಸ್ವಾದಿಸಿ ಒಪ್ಪ ಬರೆತ್ತೆಯಾ° ಆಗದಾ?

    2. ಮುಳಿಯ ಭಾವ,
      ನಿಂಗಳ ದ್ವಿಪದಿ ತುಂಬಾ ಅರ್ಥಪೂರ್ಣ ಆಯಿದು.ಲೇಖನಕ್ಕೆ ಜೀವ ತುಂಬಿದ್ದಕ್ಕೆ ಅನಂತ ಧನ್ಯವಾದಂಗೋ

      1. ಮುಳಿಯಭಾವ ಎಂತದೇ ಮಾಡ್ಳಿ..
        ನೆಗೆಗಾರನ ಹಾಂಗೆ ಏಕಪದಿ ಬರದ್ದವಿಲ್ಲೆ..
        ಅವಕ್ಕೆ ಮಾತ್ರೆ ಹಿಡಿವಲೆ ಎಡಿತ್ತಿಲ್ಲೆಡ..!!! 😉

        1. ನೀನು ಆರನ್ನೂ ಬಿಡೆ,ಒಂದು ಕಾಲಿಲಿ ನಿಲ್ಲಿಸುವೆ ,ಅಲ್ಲದೋ ನೆಗೆಗಾರ??

  8. ಬಾರಿ ಲೈಕಿನ ಲೇಖನ ಗಣೇಶ ಮಾವ . ನಿಂಗಳ ವಿಮರ್ಶಾ/ಬರವಣಿಗೆ ಚಾತುರ್ಯತೆಯ ಈ ಲೇಖನದ ಮೂಲಕ ತಿಳಿಸಿದ್ದಿ. ಜೀವನವ ಸಹಜವಾಗಿ ಹೆಂಗೆ ನಡೆಸುಲಕ್ಕು ಹೇಳುದರ ಲೇಖನದ ಮೂಲಕ ತಿಳಿಸಿದ್ದಿ. ಹಿಂಗೆ ಹೊಸ ಹೊಸ ವಿಷಯಂಗ ಬತ್ತ ಇರಲಿ.

  9. ಬಾರೀ ಚೆ೦ದಕೆ ದು:ಖವ ವಿವರ್ಸಿದ್ದಿ.ಇನ್ನ೦ತೂ ದು:ಖಲ್ಲಿಪ್ಪ ಸುಖವ ಪಡವಲೆ ಕಲ್ತರೆ ನಿಜವಾದ ದು:ಖ ಇಲ್ಲೆ.ಎಲ್ಲೋರಿ೦ಗೂ ಸ್ಥಿತಪ್ರಜ್ನ ಅಪ್ಪಲೆ ಎಡಿಯದ್ರು ಅದ ಕ್ಕಾಗಿ ಒ೦ದಷ್ಟು ಪ್ರಯತ್ನ ಪಡ್ಲಕ್ಕು.ಅ೦ತೂ ಒಳ್ಳೆ ಲೇಖನಕ್ಕೆ ಒ೦ದು ದೊಡ್ಡ ಒಪ್ಪ.ಒಪ್ಪ೦ಗಳೊಟ್ಟಿ೦ಗೆ

    1. ಖಂಡಿತಾ!! ಪ್ರಯತ್ನ ಪಡೆಕ್ಕು.ಮತ್ತೆ ಅನುಭವಿಸೆಕ್ಕು.ಅದರ್ಲಿ ಇಪ್ಪ ಮಾನಸಿಕ ತೃಪ್ತಿ ಗೊಂತಾಯೆಕ್ಕಾದರೆ ಆ (ಕಷ್ಟದ) ಸಮಯಕ್ಕೇ ಕಾಯೆಕ್ಕಷ್ಟೇ…

  10. ಮಾವ°, ಲೇಖನ ಲಾಯ್ಕಾಯಿದು.. ಗಹನವಾದ ವಿಷಯವ ಸರಳವಾಗಿ ನಿರೂಪಿಸಿದ್ದಿ! ಕಷ್ಟ ಸುಖ ಎರಡೂ ಮನುಷ್ಯಂಗೆ ಇಪ್ಪದೇ.. ಬೇಜಾರಪ್ಪದ್ದೆ ಇಡೀ ದಿನ ಮೋರೆ ಗೆಂಟು ಹಾಕ್ಯೊಂಡು, ಹಣೆಲಿ ನೆರಿಗೆ ತೋರ್ಸಿಗೊಂಡು ಇಪ್ಪದಕ್ಕಿಂತ ರಜ ಹೊತ್ತು ಕೂಗಿ ಮತ್ತೆ ಸಮಧಾನಲ್ಲಿ ರಜ ಸಹಜವಾಗಿ ನೆಗೆ ಬಪ್ಪಾಗ ನೆಗೆ ಮಾಡಿಗೊಂಡಿಪ್ಪದು ಒಳ್ಳೇದು! ಮನಸ್ಸು ಎಷ್ಟು ಶಾಂತವಾಗಿದ್ದೋ ಅಷ್ಟು ಬೇಗನೆ ಸಮಸ್ಯೆ ಪರಿಹಾರಕ್ಕೆ ದಾರಿ ಸಿಕ್ಕುಗು… ಸಮಸ್ಯೆ ಬಂದಪ್ಪಗ ಎಲ್ಲರೂ ಸಮಸ್ಯೆಯ ಬಗ್ಗೆ ಆಲೋಚನೆ ಮಾಡಿ ಮಾಡಿ ತಲೆಬೆಶಿ ಮಾಡಿಗೊತ್ತವೇ ಹೊರತು ಪರಿಹಾರದ ಬಗ್ಗೆ ಯೋಚನೆ ಮಾಡ್ತವಿಲ್ಲೆ, ತಲೆಬೆಶಿ ಮಾಡಿರೆ ಕೆಲಸ ಕೆಡುಗಷ್ಟೆ ಕೆಲಸ ಬೇಗ ಆಗ ಹೇಳ್ತದರ ಚೆಂದಕ್ಕೆ ಬರದ್ದಿ! ಹಿಂಗಿಪ್ಪ ಲೇಖನಂಗೊ ಇನ್ನುದೆ ಬರಲಿ !! 🙂

    1. ಅಪ್ಪು ಆದರ್ಶೋ,,ನಿನ್ನ ಹಾಂಗೆ ಮುಗುಳು ನೆಗೆ ಮಾಡಿಗೊಂಡು ಏವತ್ತೂ ಇರೆಕ್ಕು.ಒಪ್ಪವಾದ ಒಪ್ಪಕ್ಕೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×