e-ಬೇಂಕ್-ಡೆಬಿಟ್ ಕಾರ್ಡ್

December 12, 2010 ರ 9:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಕಾಲವ ರೆಜಾ ಹಿಂದಂಗೆ ಓಡಿಸಿರೆ, ಅಂದ್ರಾಣ ಕಾಲಲ್ಲಿ ನವಗೆ ಪೈಸೆ ಅಗತ್ಯ ಇಪ್ಪಗ ಬೇಂಕಿನ ವ್ಯವಹಾರ ಹೇಂಗೆ ಇತ್ತಿದ್ದು ಹೇಳಿ ಆಲೋಚನೆ ಮಾಡುವೊ°.

ನಮ್ಮ ಅಗತ್ಯಕ್ಕೆ ಬೇಕು ಹೇಳಿ ನಾವು ಬೇಂಕಿಲ್ಲಿ ಪೈಸೆ ಮಡುಗುವದು ಮೊದಲಿಂದಲೇ ಬಂದ ರೂಢಿ.
ಬೇರೆ ಬೇರೆ ದಿಕ್ಕೆ ಪೈಸೆಯ ಹೂಡಿಕೆ ಮಾಡುವವು ಇದ್ದರೂ ಒಂದು ಅಂಶ ಬೇಂಕಿಲ್ಲಿಯೇ ಇಕ್ಕಷ್ಟೆ.
ಅಲ್ಲಿ ಮಡುಗಿದ ಹಣ ಸುರಕ್ಷಿತ, ಬೇಕಪ್ಪಗ ತೆಗವಲೆ ಆವ್ತು, ಬಡ್ಡಿಯೂ ಸಿಕ್ಕುತ್ತು ಹೇಳ್ತ ಒಂದು ಒಳ್ಳೆ ಅಭಿಪ್ರಾಯ.

ಕಷ್ಟ ಪಟ್ಟು ದುಡುದು ಸಂಪಾದಿಸಿದ ಪೈಸೆ ಹಾಳು ಮಾಡ್ಲಾಗ ಹೇಳ್ತ ಜಾಗ್ರತೆ ಹೆರಿಯವರಿಂದ ಮಕ್ಕೊಗೆ ವ್ಯಾವಹಾರಿಕವಾಗಿಯೂ, ತಾತ್ವಿಕವಾಗಿಯೂ ಪಾಠ ಆಗಿರ್ತು.
ಅಗತ್ಯಕ್ಕೆ ಪೈಸೆ ತೆಗೆಕಾರೆ, ವ್ಯವಹಾರ ಇಪ್ಪ ದಿನ, ಸಮಯ ನೋಡಿ ಪಾಸ್ ಪುಸ್ತಕ ಹಿಡ್ಕೊಂಡು ಬೇಂಕಿಂಗೆ ಹೋಯೆಕ್ಕು. ಅಲ್ಲಿ ನಮ್ಮ ಹಾಂಗೆ ಬಂದವು ಹಲವಾರು ಜೆನಂಗೊ.
ಒಬ್ಬೊಬ್ಬನದ್ದು ಒಂದೊಂದು ವ್ಯವಹಾರ.
ಅವು ಕೊಟ್ಟ ಫೋರ್ಮಿಲ್ಲಿ (form) ತಾರೀಕು, ಎಷ್ಟು ರೂಪಾಯಿ ತೆಗೆಕು (ಅಕ್ಷರಲ್ಲಿ, ಸಂಖ್ಯೆಲಿ-ಎರಡರಲ್ಲಿಯೂ ಬರದ್ದು ಸರಿ ಆಗಿರೆಕ್ಕು), ಅಕೌಂಟ್ ನಂಬ್ರ ಇನ್ನೂ ಕೆಲವು ವಿವರಂಗಳ ತುಂಬುಸಿ ಅಲ್ಲಿಪ್ಪ ಗುಮಾಸ್ತಂಗೆ (clerk) ಕೊಡೆಕು.
ಅವ ಅದರ ಅಟ್ಟಿಲಿ ಮಡುಗಿ, ಒಂದೊಂದೇ ತೆಗದು ಅವರ ಲೆಡ್ಜರ್ ಪುಸ್ತಕಲ್ಲಿ ಬರದು (entry ಹಾಕಿ), ಒಂದು ಬಿಲ್ಲೆ (token) ಕೊಡುಗು.
ಪಾಸ್ ಪುಸ್ತಕವ ಫೋರ್ಮಿನೊಟ್ಟಿಂಗೆ ಅವನ ಮೇಗಾಣ ಅಧಿಕಾರಿಗೆ ದಸ್ಕತ್ತು ಹಾಕಿ ಪಾಸ್ ಮಾಡ್ಲೆ ಕೊಡುಗು.
ಮತ್ತೆ ನಮ್ಮ ಕಾಯಾಣ ಕೇಷ್ (Cash) ಕೌಂಟರ್ ಹತ್ರೆ. ಢುಂಡಿರಾಜ ಹೇಳುವ “ನಗದು” ವಿನ ಎದುರು.
ಇಪ್ಪ ಒಂದೋ ಎರಡೋ ಬೆಂಚಿಲ್ಲಿ ಕೂಬಲೆ ಜಾಗೆ ಸಿಕ್ಕಿದರೆ ಅಜ್ಜಿ ಪುಣ್ಯ.
ಅವ ದೆನುಗೊಳಿ ಅಪ್ಪಗ ಹೋಯೆಕ್ಕು. ಇಲ್ಲದ್ದರೆ ಅವಂಗೆ ಪಿಸುರು ಎಳಗ್ಗು. ಎಷ್ಟು ಸರ್ತಿ ನಿಮ್ಮನ್ನು ಕರೀಬೇಕು? ಜೋರು ಮಾಡಿದರೂ ಮಾಡಿದ. ಅವ ಕೊಟ್ಟ ನೋಟಿನ ಲೆಕ್ಕ ಮಾಡಿ ತೆಕ್ಕೊಳೆಕ್ಕು.
ಸ್ವಲ್ಪ ಚಿಲ್ಲರೆ ಬೇಕಿತ್ತು ಹೇಳಿ ಆಪಿ ತಪ್ಪಿ ಎಲ್ಲಿಯಾರೂ ಕೇಳಿರೆ ಮತ್ತೆ ಸಹಸ್ರ ನಾಮ ಗ್ಯಾರಂಟಿ.
ಪೈಸೆ ಬೇಕಾದ್ದು ನವಗೆ ಅಲ್ಲದೋ, ಪೆರಪ್ಪ ಮಾತಾಡ್ಲೆ ಗೊಂತಿಲ್ಲೆ ಇದ. ಅವಂಗೂ ನೋಟು ಎಣುಸಿ ಎಣುಸಿ ಬೊಡುದಿರ್ತಿದ. ಎಡೆಲಿ ಚಾ ಕುಡಿವಲೆ ಕೂಡಾ ಕೆಲವು ಸರ್ತಿ ಪುರುಸ್ತೊತ್ತು ಇರ.
ಇಷ್ಟೆಲ್ಲಾ ಮಾಡಿ ಪಾಸ್ ಪುಸ್ತಕಲ್ಲಿ ಬರದ್ದು ಸರಿ ಇದ್ದೋ ನೋಡಿ ಹೆರ ಬಪ್ಪಗ ಹಬ್ಬ ಹರ. ಆಪೀಸು ಕೆಲಸಲ್ಲಿ ಇಪ್ಪವ ರಜೆ ಮಾಡಿ ಹೋದರೆ ಅರ್ಧ ದಿನ ಹೋದ ಹಾಂಗೆ.
ಸಾಕಪ್ಪಾ ಈ ಬೇಂಕಿನ ವ್ಯೆವಹಾರ ಹೇಳಿ ಒಂದು ಸರ್ತಿ ಹೇಳಿಯೊಂಡರೂ ಮತ್ತೆ ಪುನಃ ಪೈಸೆ ಬೇಕಾದಪ್ಪಗ ಅಲ್ಲಿಗೆ ಹೋಗದ್ದೆ ನಿವೃತ್ತಿ ಇಲ್ಲೆ ಅನ್ನೆ.

* * * * * *

ಮೊನ್ನೆ ಅರ್ಜೆಂಟ್ ಪೈಸೆ ಬೇಕಾತು.
ಬೇಂಕಿಂಗೆ ರಜೆ ದಿನ ಹೇಳಿ ಪೈಸೆ ಬೇಕಾದಪ್ಪಗ ಹಾಂಗೊಂದು ಕಾರಣ ಹೇಳಿರೆ ಸಾಕಾವ್ತೋ? ಪೈಸೆಗೆ ಪೈಸೆಯೇ ಆಯೆಕ್ಕಲ್ಲದಾ.
ಅಂಗಿ ಹಾಕಿಂಡು ಹೆರಟೆ. ಮನೆಲಿ ಇತ್ತಿದ್ದ ಅತ್ತೆಗೆ ಗೊಂತಾತು. ಆದಿತ್ಯವಾರ, ಇಂದು ಬೇಂಕಿಂಗೆ ರಜೆ ಅಲ್ಲದಾ, ಕೇಳಿದವು.
ಅಪ್ಪು, ಆದರೆ ಪೈಸೆ ತಪ್ಪದಕ್ಕೆ ತೊಂದರೆ ಇಲ್ಲೆ. ಈ ಒಂದು ಕಾರ್ಡ್ ಇದ್ದರೆ ಸಾಕು ಹೇಳಿ ATM ಡೆಬಿಟ್ ಕಾರ್ಡ್ ತೋರಿಸಿದೆ.
ಕಾರ್ಡ್ ಹಾಕಿ ಪೈಸೆ ತೆಗೆತ್ತ ಕೆಣಿ ಎನಗೂ ಒಂದರಿ ನೋಡೆಕ್ಕು ಹೇಳಿದವು. ಈ ಅತ್ತೆಗೆ ಹಾಂಗೆ, ಎಲ್ಲವನ್ನೂ ತಿಳಿತ್ತ ಕುತೂಹಲ. ಮೆಚ್ಚೆಕ್ಕಾದ್ದೇ!

ಅಳಿಯ ಎನ್ನ ಹತ್ರೆ ಬುರುಡೆ ಬಿಡ್ತಾ ಇದ್ದನೋ ಹೇಳಿ ಒಂದು ಸಣ್ಣ ಸಂಶಯ ಬಂದಿಪ್ಪಲೂ ಸಾಕು.
ಸರಿ, ಎಂಗಳ ಸವಾರಿ ಮನೆ ಹತ್ರೆ ಇಪ್ಪ ATM ಸೆಂಟರಿಂಗೆ.
ಅಲ್ಲಿ ಕಾರ್ಡ್ ಹಾಕುದು, ಮತ್ತೆ ಬೇಕಾದ ಪೈಸೆ ಎಷ್ಟು ಹೇಳಿ ಎಂಟರ್ ಮಾಡುದು, ಪೈಸೆ ಬಪ್ಪದು, ಮತ್ತೆ ರಶೀದಿ, ಮತ್ತೆ ಕಾರ್ಡ್ ವಾಪಾಸು ಬಪ್ಪದು ಇದರೆಲ್ಲ ಭಕ್ತಿ ಶ್ರದ್ಧೆಂದ ನೋಡಿದವು.
ಸತ್ಯ ನಾರಾಯಣ ಪೂಜೆಲಿ ಆರತಿ ಅಪ್ಪಗ ಭಕ್ತಿಲಿ ಕೈ ಮುಗುದು ಶ್ರದ್ಧೆಲಿ ನಿಲ್ತವಿಲ್ಲೆಯಾ ಹಾಂಗೇ ಕಂಡತ್ತು..
ಇವ ಲೊಟ್ಟೆ ಹೇಳಿದ್ದಲ್ಲ ಹೇಳುವದರ ಅವರ ನೆಗೆಲಿಯೇ ಗೊಂತಾತು.
ಅಂಬಗ ಇದೆಲ್ಲಾ ಹೇಂಗೆ ಬಪ್ಪದು, ಮಾರ್ಗದ ಕರೇಲಿ ಪೈಸೆ ಕೊಡ್ತ ಮೆಶಿನಿನ ಮಡುಗಿರೆ ಆರಾರೂ ಕದ್ದೊಂಡು ಹೋಗವೋ, ನಾವು ಬೇಂಕಿಲ್ಲಿ ಮಡುಗಿದ ಪೈಸೆ ಅಲ್ಲಿಗೆ ಹೇಂಗೆ ಬಪ್ಪದು . . . -ಪ್ರಶ್ನೆಗಳ ಸುರಿಮಳೆ.
ಒಬ್ಬ ಕುತೂಹಲಹಲ್ಲಿ ಕೇಳುವಾಗ ನವಗೆ ಗೊಂತಿಪ್ಪದರ ಹೇಳ್ಲೆ ಕೊಶೀ ಅಲ್ಲದಾ?.
ಹಾಂಗೆ ಕೇಳುವವು ಆರಿದ್ದವು. ಎಲ್ಲರೂ ಹೇಳುವವೇ ಅಲ್ಲದಾ !!!

* * * *

ಇಲೆಕ್ಟ್ರೋನಿಕ್ಸ್ ಮಾಧ್ಯಮ ಮುಂದುವರುದ ಹಾಂಗೇ ಬೇಂಕಿಂಗ್ ವೆವಸ್ಥೆಯೂ ಬದಲಾವಣೆ ಆಯಿದು.
ಪೈಸೆಗೆ ಬೇಕಾಗಿ ಬೇಂಕಿಂಗೆ ಹೋಗಿ ಕ್ಯೂ ನಿಲ್ಲೆಕ್ಕಾದ ಅಗತ್ಯ ಇಲ್ಲೆ. ಇಂಟರ್ನೆಟ್ ಬೇಂಕಿಂಗ್ ಹೇಳಿ ಮನೆಲಿ ಕೂದೊಂಡೇ ನಮ್ಮ ವ್ಯವಹಾರಂಗಳ ಮಾಡ್ತ ಕಾಲ ಇದು.
ಹೀಂಗಿಪ್ಪ ವೆವಸ್ಥೆಗಳಲ್ಲಿ ATM ಕೂಡಾ ಒಂದು. Automated Teller Machine ಹೇಳ್ತವಾದರೂ ಜೆನಂಗೊಕ್ಕೆ Any Time Money (ಯಾವಾಗ ಬೇಕಾರೂ ಹಣ) ಹೇಳಿಯೇ ಅರ್ಥ ಆದ್ದು.
ಕಾಶಿಯರ್, ಕ್ಲರ್ಕ್, ಮೆನೇಜರ್ ಆರೂ ಇಲ್ಲದ್ದೆ ನೆಡವ ಬೇಂಕ್.
ಮಾರ್ಗದ ಕರೇಲಿ ಏರ್ ಕಂಡಿಶನ್ ರೂಮಿಲ್ಲಿ ಇಪ್ಪ ಮೆಶಿನಿಂದ, ನಮ್ಮ ಎಕ್ಕೌಂಟಿಲ್ಲಿ ಇಪ್ಪ ಪೈಸೆಯ ಬೇಕಾದಪ್ಪಗ ತೆಗೆತ್ತ ಏರ್ಪಾಡು..

ATM ಕಾರ್ಡಿನ ಎದುರಾಣ ಹೊಡೆ (ಕೆಂಪುವೃತ್ತದ ಒಳಾಣ ವಿವರಂಗಳ ಗಮನುಸಿ)

ATM ಕಾರ್ಡಿನ ರಚನೆ ಮತ್ತೆ ಕಾರ್ಯ:
ಇದು ಸುಮಾರು3.4 ಇಂಚು ಉದ್ದ 2.1 ಇಂಚು ಅಗಲ ಇಪ್ಪ ಪ್ಲಾಸ್ಟಿಕ್ ಕಾರ್ಡ್.
ಇದರ ಒಂದು ಹೊಡೆಲಿ, ಈ ಕಾರ್ಡ್ ಯಾವ ಬೇಂಕಿಂಗೆ ಸಂಬಂಧಪಟ್ಟದ್ದು, ಅರಿಂಗೆ ಕೊಟ್ಟದು, ಅದರ ವಾಯಿದೆ ಎಷ್ಟು, 16 ಅಂಕೆ ನಂಬ್ರ, ಬೇಂಕಿನ ಹೋಲೋಗ್ರಾಂ (3D-hologram) ಇಷ್ಟು ಇರ್ತು.
ಇನ್ನೊಂದು ಹೊಡೆಲಿ ಮೇಗ್ನೆಟಿಕ್ ಸ್ಟ್ರಿಪ್(magnetic stripe), ಅದರ ಕೆಳ ದಸ್ಕತ್ತು ಹಾಕಲೆ ಜಾಗೆ.
ಈ ಮೇಗ್ನೆಟಿಕ್ ಸ್ಟ್ರಿಪ್ಪಿಲ್ಲಿ  ನಮ್ಮ ಬೇಂಕಿನ ಅಕ್ಕೌಂಟಿನ ವಿವರಂಗೊ ಇರ್ತು. ಕಾರ್ಡಿನ ಮೆಶಿನಿಂಗೆ ಹಾಕಿ, ನಮ್ಮ ಗುಟ್ಟು ಸಂಖ್ಯೆ (PIN) ಒತ್ತಿ ಅಪ್ಪಗ ಕಂಪ್ಯೂಟರ್ ಮೂಲಕ ವಿವರಂಗೊ, ಬೇಂಕಿನ ಮಾಹಿತಿ ಕೇಂದ್ರಕ್ಕೆ(Server) ಹೋಗಿ ಅಲ್ಲಿಂದ ಸೂಚನೆ ವಾಪಾಸು ಬತ್ತು.
ಕೂಡ್ಲೆ ಇಲ್ಲಿಯಾಣ ಕಂಪ್ಯೂಟರ ಜಾಗೃತವಾಗಿ ನಾವು ಕೇಳಿದಷ್ಟು ಪೈಸೆ ಕೊಡ್ಲೆ ಎಡಿಗೋ ಹೇಳ್ತ ಮಾಹಿತಿಯ ಕೇಂದ್ರಲ್ಲಿ ವಿಚಾರಿಸಿ, ನವಗೆ ಲೆಕ್ಕ ಮಾಡಿ ಕೊಡ್ತು.
ಇಷ್ಟೆಲ್ಲಾ ವ್ಯೆವಹಾರ ಕೆಲವೇ ಸೆಕುಂಡಿಲ್ಲಿ ನೆಡೆತ್ತು. ಇದಕ್ಕಾಗಿ ಕಂಪ್ಯೂಟರಿಲ್ಲಿ ಪ್ರತ್ಯೇಕ ISDN ವೆವಸ್ಥೆ (ISDNIntegrated Service Digital Network) ಮಾಡಿರ್ತವು.

ಈ ಡೆಬಿಟ್ ಕಾರ್ಡಿನ ಉಪಯೋಗಿಸಿ ಅಂಗಡಿಗಳಲ್ಲಿ ವ್ಯವಹಾರ ಮಾಡ್ಲೆ ಆವುತ್ತು.
ದೊಡ್ಡ ದೊಡ್ಡ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ ಚಿನ್ನದ ಅಂಗಡಿಗಳಲ್ಲಿ, ಜವುಳಿ ವ್ಯಪಾರಸ್ಥರಲ್ಲಿ, ಇನ್ನೂ ಹೆಚ್ಚಿನ ಕಡೆ ಇದರ ಮೂಲಕ ವ್ಯವಹಾರ ಮಾಡುವ ವೆವಸ್ಥೆ ಇರ್ತು.

ATM ಕಾರ್ಡ್ ಪಡಕ್ಕೊಂಬದು ಹೇಂಗೆ?
ನಮ್ಮ ಖಾತೆ (Account) ಇಪ್ಪ ಬೇಂಕಿಲ್ಲಿ ಇದರ ಬಗ್ಗೆ ಒಂದು ಅರ್ಜಿ ಸಲ್ಲಿಸೆಕ್ಕು. ಕೆಲವು ದಿನ ಆದಪ್ಪಗ ನಮ್ಮ ಮನೆಗೆ ಗುಟ್ಟು ಸಂಖ್ಯೆ- PIN (Personal Identification Number) ಕಳುಸುತ್ತವು.
ಈ PIN ನಂಬ್ರ ಹೇಳಿರೆ ನಾಲ್ಕು ಅಂಕೆಯ ಸಂಖ್ಯೆ. ನಾವು ಕಂಪ್ಯೂಟರ್ ಗಳಲ್ಲಿ ಉಪಯೋಗಿಸುವ Password ನ ಹಾಂಗೆ.
ಅದು ಇಲ್ಲದ್ದೆ ಯಾವುದೇ ವ್ಯೆವಹಾರ ಮಾಡ್ಲೆ ಎಡಿಯ.
ನಂತ್ರ ನಮ್ಮ ಬೇಂಕಿಂಗೆ ಹೋದರೆ ಅಲ್ಲಿ ನಮ್ಮ ಕಾರ್ಡ್ ಕೊಡ್ತವು.

ATM ಕಾರ್ಡಿನ ಹಿಂದಾಣ ಹೊಡೆ

ಕಾರ್ಡ್ ಉಪಯೋಗಿಸುವಾಗ ಮಾಡೆಕ್ಕಾದ ಜಾಗ್ರತೆಗೊ:

 • ಮದಲಾಣ ವ್ಯೆವಹಾರ ಏ.ಟಿ.ಎಂ (ATM) ಸೆಂಟರಿಲ್ಲಿ ಮಾಡುವಾಗ, ಅಲ್ಲಿ ಬೇಂಕಿಂದ ಬಂದ ಈ PIN ನಂಬ್ರವ ಬದಲುಸೆಕ್ಕು.
 • ಬದಲಿಸಿದ ನಂಬ್ರ ನವಗೆ ಮಾತ್ರ ನೆಂಪಿಲ್ಲಿ ಮಡುಗುತ್ತ ಹಾಂಗೆ ಇರೆಕು. ಬೇರೆಯವಕ್ಕೆ ಊಹಿಸಲೆ ಎಡಿಯದ್ದ ಹಾಂಗಿಪ್ಪದು ಆಗಿರೆಕು. (ನಮ್ಮ ವಾಹನದ ನಂಬ್ರ ಕೊಡುವದು ಅಷ್ಟು ಸೂಕ್ತ ಅಲ್ಲ)
 • ಕಾರ್ಡಿನ ಯಾವಾಗಲೂ ಜಾಗ್ರತೆಲಿ ನಮ್ಮ ಸುಪರ್ದಿಲಿ ತೆಗದು ಮಡುಗೆಕ್ಕು.
 • ಬೇರೆಯವಕ್ಕೆ ಯಾವುದೇ ಕಾರಣಕ್ಕೂ ಸಿಕ್ಕಲೆ ಆಗ. ಗುಟ್ಟು ಸಂಖ್ಯೆ ಕೂಡಾ ಹಾಂಗೇ, ಅದು ನಮ್ಮ ಸೊತ್ತು.
 • ATM ಸೆಂಟರ್ ಒಳ ಬೇರೆಯವರ ಸಹಾಯ ತೆಕ್ಕೊಂಬದು ಬೇಡ. ಕಾರ್ಡ್ ಹಾಕಿ ಅಪ್ಪಗ ಮೆಶಿನ್ ಪರದೆಲಿ ಸೂಚನೆಗೊ (Instructions) ಬತ್ತು.
  ಅದರ ನೋಡಿ ಬೇಕಾದ ಕ್ರಿಯೆಗೊ ಮಾಡಿರೆ ಆತು. ಎಂತಾರೂ ಸಂಶಯ ಇದ್ದರೆ ಕಾರ್ಡ್ ತೆಕ್ಕೊಂಡು ವಾಪಾಸ್ ಬಂದರೆ ಆತು.
 • ಕಾರ್ಡಿನ ಮೇಗ್ನೆಟಿಕ್ ಸ್ಟ್ರಿಪ್ ಲ್ಲಿ ನಮ್ಮ ಖಾತೆಯ ಜಾತಕ ಇಪ್ಪ ಕಾರಣ ಯಾವುದೇ ಮೇಗ್ನೆಟಿಕ್ ಸಾಧನಂಗಳ(TV, Sound Box) ಹತ್ರೆ ಇದರ ಮಡುಗಲೆ ಆಗ.
 • ಕಾರ್ಡಿಂಗೆ ಯಾವುದೇ ರೀತಿಯ ಹಾನಿ ಅಪ್ಪಲೆ ಆಗ (ಅತಿ ಉಷ್ಣ, ಗಾಯ, ಗೀರು ಇತ್ಯಾದಿ).
 • ಅಗತ್ಯ ಬಿದ್ದಲ್ಲಿ ಕಾರ್ಡಿನ ಬಗ್ಗೆ ಸಂಪರ್ಕ ಮಾಡೆಕ್ಕಾದ ಬೇಂಕಿನ ನಂಬ್ರ ಬರದು ಮಡ್ಕೊಳೆಕ್ಕು.
 • ಕಾರ್ಡ್ ಕಾಣೆಯಾದರೆ ಈ ನಂಬ್ರ ಮೂಲಕ ಆವರ ಸಂಪರ್ಕ ಮಾಡಿರೆ ಮತ್ತೆ ಯಾವುದೇ ವ್ಯೆವಹಾರ ಆ ಕಾರ್ಡಿಲ್ಲಿ ಆಗದ್ದ ಹಾಂಗೆ ಬೇಂಕಿನವು ತಡೆ ಹಿಡಿತ್ತವು.
 • ಒಂದೇ ಸರ್ತಿ ಜಾಸ್ತಿ ಪೈಸೆ ತೆಗವದು ಬೇಡ.
 • ರಶೀದಿಯ ಅಲ್ಲಿಯೇ ಬಿಟ್ಟಿಕ್ಕಿ ಹೋಪದು ಬೇಡ.

ಸುರಕ್ಷತೆ:
ಕಾರ್ಡಿನ ಸುರಕ್ಷತೆ ನಮ್ಮ ಕೈಲಿ ಇಪ್ಪದು.

 • ATM ಸೆಂಟರ್ ಹತ್ರೆ ಸಂಶಯಾಸ್ಪದ ವ್ಯೆಕ್ತಿಗೊ ನಮ್ಮ ಗಮನುಸುತ್ತಾ ಇದ್ದವು ಹೇಳಿ ಕಂಡರೆ ಪೈಸೆ ತೆಗಯದ್ದೆ ವಾಪಾಸ್ ಬಪ್ಪದು ಕ್ಷೇಮ.
 • “ನಮ್ಮ PIN ನಂಬರಿನ ವಿರುದ್ಧ ಕ್ರಮಲ್ಲಿ ಒತ್ತಿದರು ಕೂಡಾ (1234 ರ ಬದಲಿಂಗೆ 4321) ಪೈಸೆ ತೆಗವಲೆ ಆವುತ್ತು. ಆದರೆ ಈ ರೀತಿ ಮಾಡಿರೆ, ಎಚ್ಚರಿಕೆ ಗಂಟೆ ಹತ್ರಣ ಪೋಲೀಸ್ ಸ್ಟೇಶನಿಲ್ಲಿ ಹೊಡೆತ್ತು. ಅವಕ್ಕೆ ತುರ್ತಾಗಿ ಅಲ್ಲಿಗೆ ಬಪ್ಪಲೆ ಆವ್ತು. ಇದು ಗ್ರಾಹಕರ ಸುರಕ್ಷೆಗೆ ಬೇಕಾಗಿ ಇಪ್ಪ ಕ್ರಮ. ಒತ್ತಾಯ ಪೂರ್ವಕವಾಗಿ ಅರಾರೂ ಪೈಸೆ ತೆಗವಲೆ ಬೆದರಿಕೆ ಹಾಕಿರೆ ಈ ರೀತಿ ಮಾಡ್ಲೆ ಅಕ್ಕು.” ಈ ರೀತಿಯ ಒಂದು ಮಿಂಚಂಚೆ ಸಂದೇಶ ಕೆಲವು ಸಮಯ ಮೊದಲು ಬಂದಿತ್ತಿದ್ದು – ಆದರೆ ಈ ವ್ಯವಸ್ಥೆ ಇನ್ನೂ ಕಾರ್ಯಗತ ಆಯಿದಿಲ್ಲೆ.
 • ಚಿನ್ನದ ಅಂಗಡಿಗಳಲ್ಲಿ ಇಪ್ಪ ಹಾಂಗೆ, ಸುರಕ್ಷತಾ ಕ್ರಮವಾಗಿ ಕೆಮರ ಹುಗ್ಗಿಸಿ ಮಡುಗಿ ನಮ್ಮ ಚಲನ ವಲನ ರೆಕಾರ್ಡ್ ಮಾಡುವ ವ್ಯೆವಸ್ಥೆ ಎಲ್ಲಾ ATM ಸೆಂಟರ್ ಗಳಲ್ಲಿ ಇರ್ತು. ಯಾವುದೇ ನಮೂನೆಯ ಕಳ್ಳತನ ಆದರೆ ಹಿಡಿವಲೆ ಸಹಾಯ ಅಪ್ಪಲೆ ಈ ವೆವಸ್ಥೆ.

ಇಲೆಕ್ಟ್ರೋನಿಕ್ ಮಾಧ್ಯಮ ಮುಂದುವರಿದ ಹಾಂಗೆ, ಬೇಂಕಿಂಗ್ ಸೌಲಭ್ಯಂಗಳೂ ಜಾಸ್ತಿ ಆವ್ತಾ ಇದ್ದು.
ಅದರ ಸದುಪಯೋಗ ಮಾಡಿಗೊಂಬದು ನಮ್ಮ ಕೈಲಿ ಇದ್ದು
.

e-ಬೇಂಕ್-ಡೆಬಿಟ್ ಕಾರ್ಡ್, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. ಮೋಹನಣ್ಣ

  ನೀನು ಅದರಿ೦ದ ಚೆ೦ದ ಇದ್ದೆ ಆದರೆ ಕೂಸುಗೊ ಎಲ್ಲ ಅದರ ಹಾ೦ಗಿರೇಕು ಹೇಳ್ತವದ ಹಾ೦ಗಾಗಿ ಹಾ೦ಗೆ ತೆಗವಲೆ ಹೇಳು ಹೇಳಿ ಹೇಳಿದ್ದು ಮತ್ತೆ ನಿನ್ನ ಸೌ೦ದರ್ಯದಬಗ್ಯೆ ಉಪಮೆಯೇ ಇಲ್ಲೆ ಆದರೆ ಈ ಜನ೦ಗೋಕ್ಕೆ ಗೊ೦ತಾಯೆಕಲ್ಲದೊ.ನಿನು ಏನು ಬೇಜಾರು ಮಾಡೇಡ ಆತೊ.ಒಪ್ಪ೦ಗಳೊಟ್ಟಿ೦ಗೆ.

  [Reply]

  ಬೋಸ ಬಾವ

  ಬೋಸ... Reply:

  ಅದು ಅಪ್ಪು.. ನಿ೦ಗೊಗಾದರು, ಬೋಸನ ಸೌ೦ದರ್ಯದ ಬಗ್ಗೆ ಕೊಶಿ ಇದ್ದನೆ,
  ಎನ್ನ ಹೋಗಳಿದ್ದಕ್ಕೆ ಸ೦ತೋಷಾತಿದ.. 😀 ದನ್ಯವಾದ೦ಗೊ.. ! 😉

  [Reply]

  VA:F [1.9.22_1171]
  Rating: +1 (from 1 vote)
 2. ಗಣೇಶ ಮಾವ°

  ಶರ್ಮಪ್ಪಚ್ಚೀ,,ಆಧುನಿಕ ರೀತಿಲಿ ಬ್ಯಾಕಿಂದ ಪೈಸೆ ತೆಗವ ವಿವರಣೆ ಮನಸ್ಸಿನ್ಗೆ ಸರಿಯಾಗಿ ಅರ್ಥ ಅಪ್ಪಂಥಹ ರೀತಿಲಿ ಶುದ್ಧಿ ಹೇಳಿದ್ದಿ.ಇದರಿಂದಾಗಿ ಎನಗೆ ಕೆಲವು ಸಂಶಯಂಗ ಪರಿಹಾರ ಆತು..ಧನ್ಯವಾದಂಗೋ!!!

  [Reply]

  VN:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಶರ್ಮಪ್ಪಚ್ಚಿ.. ATM ನ ಬಗ್ಗೆ ಲಾಯಕ ಮಾಹಿತಿ ಕೊಟ್ಟಿದಿ. ಬೇಂಕಿಲಿ ಹೇಂಗೆ ವ್ಯವಹಾರ, ಈಗಾಣ e- ಬೇಂಕಿಲಿ ಹೇಂಗೆ ವ್ಯವಹಾರ ಆವುತ್ತು ಹೇಳಿ ಎರಡರ ಬಗ್ಗೆಯೂ ಚೆಂದಲ್ಲಿ ವಿವರಣೆ ಕೊಟ್ಟಿದಿ. ಕಾರ್ಡಿನ ಬಗ್ಗೆ ಜಾಗ್ರತೆ, ಸುರಕ್ಷತೆ ಎರಡೂ ಹೇಳಿದ್ದು ಒಳ್ಳೇದಾತು. ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿನೆಗೆಗಾರ°ಡಾಗುಟ್ರಕ್ಕ°ವೆಂಕಟ್ ಕೋಟೂರುಜಯಗೌರಿ ಅಕ್ಕ°ದೊಡ್ಡಭಾವಬೋಸ ಬಾವವಸಂತರಾಜ್ ಹಳೆಮನೆಎರುಂಬು ಅಪ್ಪಚ್ಚಿಡಾಮಹೇಶಣ್ಣಗೋಪಾಲಣ್ಣವಿಜಯತ್ತೆವಾಣಿ ಚಿಕ್ಕಮ್ಮಬಂಡಾಡಿ ಅಜ್ಜಿಹಳೆಮನೆ ಅಣ್ಣದೊಡ್ಮನೆ ಭಾವಪಟಿಕಲ್ಲಪ್ಪಚ್ಚಿಪುತ್ತೂರುಬಾವಅನುಶ್ರೀ ಬಂಡಾಡಿಶ್ರೀಅಕ್ಕ°ಕೇಜಿಮಾವ°ಜಯಶ್ರೀ ನೀರಮೂಲೆದೊಡ್ಡಮಾವ°ವೇಣಿಯಕ್ಕ°ಅನು ಉಡುಪುಮೂಲೆಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ