ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ! E-ಮಠ!

ಅಂತರ್ಜಾಲ ಪ್ರಪಂಚಲ್ಲಿ ನಮ್ಮ ಬಯಲು ಹೊಸ ದಾಖಲೆ ಮಾಡಿತ್ತದಾ! ಲಕ್ಷದ ಲೆಕ್ಕಲ್ಲಿದ್ದು ನಾವೀಗ..
ಅಂತರ್ಜಾಲ ಹೇಳುವ ಮಾಯಾಜಾಲಲ್ಲಿ ಇಪ್ಪ ಒಟ್ಟೂ ಜಾಲತಾಣಂಗಳ ಸಂಖ್ಯೆ 255,287,546 ಹೇಳಿ Netcraft ಹೇಳ್ತ ಕಂಪೆನಿಯ ದಶಂಬರದ ಸರ್ವೆ ಹೇಳ್ತು..
ಓ ಮೊನ್ನೆ ಜುಲೈಗಪ್ಪಾಗ ಈ ಜಗತ್ತಿಲಿ ಒಟ್ಟು 1,966,514,816 ಅಂತರ್ಜಾಲ ಉಪಯೋಗ್ಸುವ ಜನಂಗೊ ಇತ್ತಿದ್ದವಡ!
ಅತ್ಯಂತ ಹೆಚ್ಚು ಅಂತರ್ಜಾಲದ ಪ್ರಯೋಜನ ಪಡೆತ್ತ ಇಪ್ಪತ್ತು ದೇಶಗಳ ಪಟ್ಟಿಲಿ ನಮ್ಮ ದೇಶ ನಾಕನೇ ಸ್ಥಾನಲ್ಲಿದ್ದಡ..
ಎಲ್ಲಾ ಸರಿಯೇ,, ಆದರೆ ಸಮಸ್ಯೆ ಹೇಳಿರೆ, ಈ 255,287,546 ಜಾಲತಾಣಂಗಳಲ್ಲಿ ಏವ ಮಾಹಿತಿ ಎಲ್ಲಿದ್ದು, ಯಾವ ತಾಣವ ನೋಡ್ತದು ಯಾವುದರ ಬಿಡ್ತದು ಹೇಳಿ ತಿಳಿವದೇ ಕಷ್ಟ, ನಮ್ಮ ಬಯಲಿನ ಹಾಂಗಿಪ್ಪ ಒಳ್ಳೆ ವಿಚಾರಂಗೊ, ಮಾಹಿತಿಗೋ ಇಪ್ಪ ತಾಣವ ಹುಡ್ಕುದು ಹೇಳಿರೆ ಸಮುದ್ರಲ್ಲಿ ರತ್ನ ಹುಡ್ಕಿದ ಹಾಂಗೆ..
ಯಾವ ಜಾಲತಾಣಲ್ಲಿ (ವೆಬ್ ಸೈಟ್) ಎಂತ ಮಾಹಿತಿ ಇದ್ದು, ಅದರ ಪ್ರಯೋಜನ ಪಡವದು ಹೇಂಗೆ ಹೇಳಿ ತಿಳಿವದೂ ಹೊಸಬ್ಬರಿಂಗೆ (ಹಳಬ್ಬರಿಂಗುದೆ) ಕಷ್ಟವೇ..
ನಾವಗೆ ಗೊಂತಿಪ್ಪ/ಗೊಂತಪ್ಪ ಬಯಲುಗಳ, ಜಾಲತಾಣಂಗಳ, ಅಂತರ್ಜಾಲದ ವಿಶೇಷ ವಿಸ್ಮಯಗಳ ಬಗ್ಗೆ ನಮ್ಮ ಬಯಲಿಂಗೆ ತಿಳಿಶುವ ಪ್ರಯತ್ನ ಮಾಡಿರೆ ಹೇಂಗೆ ಹೇಳುವ ಯೋಚನೆ ಬಂತಡ ಒಪ್ಪಣ್ಣಂಗೆ,.
ಕೂಡ್ಲೆ ಬಲ್ನಾಡುಮಾಣಿಯ ಕಾಲೆಳದ °!
ಈ ಅಂಕಣ ಬಯಲಿನವಕ್ಕೆ ಪ್ರಯೋಜನ ಅಕ್ಕು ಹೇಳ್ತ ಆಶಯಲ್ಲಿ ಸುರುವಿಂಗೆ ಗೆಣಪ್ಪಣ್ಣಂಗೂ, ಮನೆದೇವರಿಂಗೂ, ನಮ್ಮ ಗುರುಗಳಿಂಗೂ ನಮಸ್ಕಾರ ಮಾಡಿಕ್ಕಿ ಮುಂದರಿತ್ತೆ..

ಶ್ರೀ ಗುರುಗಳ ನೆನೆಸಿಗೊಂಡಪ್ಪದ್ದೆ ಎನಗೆ ಮೊದಲು ನೆನಪ್ಪದು ಗುರುಗಳ ಇಷ್ಟದೈವ ಶ್ರೀರಾಮ..
ಶ್ರೀರಾಮ ಹೇಳಿಯಪ್ಪದ್ದೆ ಎನಗೆ ನೆನಪಪ್ಪದು ಹರೇರಾಮ,. ಹರೇರಾಮ.ಇನ್ (www.hareraama.in) – ಶಿಷ್ಯವರ್ಗಕ್ಕೆ ಅಂತರ್ಜಾಲಲ್ಲಿ ಆಧ್ಯಾತ್ಮದ ದಾರಿ ತೋರ್ಸುವ ನಮ್ಮ ಗುರುಗಳ ಅಧಿಕೃತ ಜಾಲತಾಣ..

ಓ.. ನಮ್ಮ ಗುರುಗಳೂ ಇಂಟರ್ನೆಟ್ಟಿಲಿದ್ದವೋ!! ಕೇಳುಗು ಕೆಲವರು..
ಗುರುಗೋ ಎನ್ನ ಮೋರೆಪುಟಲ್ಲಿದ್ದವು ಹೇಳುಗು ಹಲವರು.. ನಮ್ಮದೇ ಮನೆ ಇಪ್ಪಾಗ ಹೆರ ನಿಂದು ಮಾತಾಡುದೆಂತಕೆ ಹೇಳ್ತ ಗುರುಗಳ ಮಾತಿಂಗೆ ತಲೆದೂಗಿ ಹರೇರಾಮಕ್ಕೆ ಬಪ್ಪೋರ ಸಂಖ್ಯೆಯೂ ದೊಡ್ಡದೇ..
ಆಧುನಿಕ ತಂತ್ರಜ್ಞಾನವ ಅದ್ಭುತವಾಗಿ ಉಪಯೋಗಿಸಿಗೊಂಬ ಬೆರಳಿಣಿಕೆಯ ಯತಿವರ್ಯರಲ್ಲಿ ನಮ್ಮ ಗುರುಗೊ ಮುಂಚೂಣಿಲಿದ್ದವು..
E-ಮಠ ಹೇಳುವ ಸಂಗತಿಯ ಇಷ್ಟರವರೆಗೆ ಬೇರೆ ಆರೂ ಪ್ರಯೋಗಿಸಿದ್ದಿರ!

www.hareraama.in ಹೇಳಿ ಟೈಪಿಸಿದಪ್ಪದ್ದೆ “ಹರೇ ರಾಮ” ಹೇಳಿ ಕಾಂಬ ಮುದ್ದಾದ ಅಕ್ಷರಂಗೊ, ಶ್ರೀಗುರುಗಳ ನಗುಮೊಗವ ತೋರ್ಸುವ ಜಾಲತಾಣದ ಮುಖಪುಟ ಮನಸ್ಸಿಂಗೆ ಕುಶಿ ಕೊಡದ್ದಿರ..
ಗುರುಗಳ ಸನ್ನಿಧಿಯ ನೆನಪಿಸದ್ದಿರ..

HareRaama.in - ಮುಖಪುಟ

ಶ್ರೀಮಠದ ಕಾರ್ಯಗಳ ಬಗ್ಗೆ ಮತ್ತೆ ಹರೇರಾಮಲ್ಲಿ ಹೊಸದಾಗಿ ವಿಷಯಂಗ ಬಂದಪ್ಪದ್ದೆ ಸುಲಾಬಲ್ಲಿ ತಿಳ್ಕೊಂಬಲೆ ಅನುಕೂಲ ಅಪ್ಪ ಹಾಂಗೆ ಬಲದ ಕೊಡೀಲಿ ಟ್ವಿಟ್ಟರ್, ಮೋರೆಪುಟ, ಫೀಡ್, ಗೂಗಲ್ ಗ್ರೂಪು, ಮತ್ತೆ ಸಮೋಸ (sms) ಬತ್ತ ಹಾಂಗೆ ಮಾಡ್ಲೆ ಇತ್ಯಾದಿ ಸಂಕೋಲೆಗೊ ಇದ್ದು. ಕ್ಲಿಕ್ಕಿಸಿ ಆಯ ಸೇವೆಯ ಪ್ರಯೋಜನ ಪಡವಲಕ್ಕು..
ಸಮೋಸ ಬಾರಿ ಸುಲಾಬ, 😉 ನಿಂಗಳ ಕರ್ಣಪಿಶಾಚಿಂದ (Mobile) ON Hareraama ಹೇಳಿ ಒಂದು ಸಮೋಸ ಕಳ್ಸಿಕ್ಕಿ 9870807070 ನಂಬರಿಂಗೆ, ಅಷ್ಟೆ..

ಕನ್ನಡಲ್ಲಿ ಟೈಪಿಸುಲೆ ಅನುಕೂಲ ಅಪ್ಪಲೆ Indic IME ಹೇಳ್ತ ಒಂದು ಸಣ್ಣ ಜೆನ ಇದ್ದು ಬಲದ ಕೊಡೀಲಿ ಮೂಲೆಲಿ.. ಅದರ ಸ್ವಿಚ್ಚು ಒತ್ತಿ ಕನ್ನಡ ಸೆಲೆಕ್ಟು ಮಾಡಿರಾತು..
ತೆಳುಹಳದಿ ಬಣ್ಣದ ಪಟ್ಟಿಯ ಮಧ್ಯೆ ಜಾಲತಾಣಲ್ಲಿಪ್ಪ ಪುಟಂಗೊಕ್ಕೆ ಸಂಕೋಲೆಗ ಇದ್ದು (MENU).
ನಿಂಗಳ ಎಲಿಯ ಮೊನೆಯ (mouse pointer) ಆಯಾ ಪುಟದ ಸಂಕೋಲೆಯ ಮೇಲೆ ಮಡುಗಿರೆ, ಅದರ ಒಳಪುಟಗಳ ಸಂಕೋಲೆ ಹಸುರು ಬಣ್ಣದ ಪಟ್ಟಿಗಳಲ್ಲಿ ಬತ್ತು…
ನಾವಗೆ ಬೇಕಾದ ಸಂಕೋಲೆಯ ಹಿಡುದು ಅದರಲ್ಲಿಪ್ಪ ಲೇಖನಂಗಳ ಓದಲಕ್ಕು..
ಸಂಕೋಲೆಗಳ ಪಟ್ಟಿಯ ಕೆಳಾಚಿ ಎಡದ ಹೊಡೆಲಿ ಶ್ರೀಗುರುಗಳ ಬಗ್ಗೆ, ಮಠದ ಪರಂಪರೆಯ ಬಗ್ಗೆ ರಜ ಬರದ್ದವು.. ಪೂರ ಓದೆಕ್ಕಾರೆ read this ಸಂಕೋಲೆಯ ಕ್ಲಿಕ್ಕಿಸಿರಾತು.
ಅದರಿಂದಲೇ ಬಲತ್ತಿಂಗೆ ಶ್ರೀಗುರುಗಳ ಹೊಸದಾಗಿ ಬಂದ ಪ್ರವಚನ ಕೇಳ್ತ ವ್ಯವಸ್ಥೆ ಮಾಡಿದ್ದವು.. ಕೇಳುಲೆ play ಸ್ವಿಚ್ಚಿನ ಒತ್ತಿರಾತು..

ಪ್ರವಚನದ ಬಲತ್ತಿಂಗೆ ನಿಂಗೊ (ಹರೇರಾಮದ ಸದಸ್ಯರಾಗಿದ್ದರೆ) ಲಾಗ ಹಾಕುಲೆ (Log in) ವ್ಯವಸ್ಥೆ ಮಾಡಿದ್ದವು..
ಹೊಸ ಸದಸ್ಯರಪ್ಪಲೆ ಅಲ್ಲೇ ಕೆಳಾಚಿ ಸಣ್ಣಕ್ಕೆ Register ಹೇಳ್ತ ಸಂಕೋಲೆ ಇದ್ದು, ಕ್ಲಿಕ್ಕಿಸಿ, ನಿಂಗಳ ಬಗ್ಗೆ ವಿಷಯಂಗಳ ತುಂಬುಸಿರಾತು, ನಿಂಗಳುದೆ ಸದಸ್ಯರಪ್ಪಲಕ್ಕು, ಲೇಖನಂಗೊಕ್ಕೆ ಒಪ್ಪ ಕೊಡ್ಲಕ್ಕು.
ಅಲ್ಲೇ ಕೆಳ ’ಪ್ರಸ್ತುತ’ ಹೇಳ್ತ ವಿಭಾಗದ ಇತ್ತೀಚೆಗಿನ ಶುದ್ದಿ ಬರ್ತಾ ಇರ್ತು…
ಇನ್ನು ರಜ ಕೆಳ ಬಂದರೆ ಶ್ರೀ ಗುರುಗಳ ಲೇಖನಿಂದ ಬಂದ ಬರಹಂಗಳ ಸ್ಥೂಲ ನೋಟ ಸಿಕ್ಕುಗು.
’ರಾಮ’ ಹೇಳುದು ಆಧ್ಯಾತ್ಮಕ್ಕೆ ಸಂಬಂಧಪಡ್ತದಾದರೆ, ’ರಾಜ್ಯ’ ಶ್ರೀಗಳ ಸಾಮಾಜಿಕ ಕಳಕಳಿಯ ಮೇಲೆ ಬೆಣಚ್ಚಿ ಬೀರುತ್ತು..

ಹರೇರಾಮ - ಪುಟದ ಕೊನೆಯಭಾಗ

 • ’ರಾಮ’ ವಿಭಾಗಲ್ಲಿ ಪ್ರತಿ ಗುರುವಾರ ಹೊಸ ಲೇಖನ ಬತ್ತು, ರಾಮಾಯಣದ ಬಗ್ಗೆ ಅದರ ಪಾತ್ರಗಳ ಬಗ್ಗೆ, ಅದರ ಆಧ್ಯಾತ್ಮ ಮೌಲ್ಯಗಳ ಬಗ್ಗೆ ಗುರುಗಳ ವ್ಯಾಖ್ಯಾನ ಅದ್ಭುತ!
 • ’ರಾಜ್ಯ’ಲ್ಲಿ ಲೇಖನ ಬಪ್ಪದು ಆಯಿತ್ಯವಾರ..
 • ’ಶ್ರೀಮುಖ’ ಹೆಸರೇ ಹೇಳ್ತ ಹಾಂಗೆ ಶ್ರೀಗಳ ನುಡಿಮುತ್ತುಗಳ, ದೃಷ್ಟಾಂತಗಳ ಮಾಲಿಕೆ..
 • ’ಪ್ರಮುಖ’ ಅಂಕಣಲ್ಲಿ ಆರಾದರೂ ವಿಶೇಷ ವ್ಯಕ್ತಿಗೊ ಶ್ರೀಗುರುಗಳ ಬಗ್ಗೆ ಬರದ ಲೇಖನ ಪ್ರಕಟ ಆವ್ತು..
 • ಅದರಿಂದಲೂ ಕೆಳಾಚಿ ಇಪ್ಪ ’ಸಮ್ಮುಖ’ ಅಂಕಣಲ್ಲಿ ಗುರುಗಳ ಶಿಷ್ಯವರ್ಗದೋರ ಲೇಖನಂಗೊ ಪ್ರಕಟ ಆವ್ತು..

ಎಲ್ಲಾ ವಿಭಾಗಲ್ಲಿಯುದೆ, ಇಡೀ ಲೇಖನವ ಓದಲೆ ಆಯಾ ಲೇಖನದ ಕೆಳಾಚಿ ಇಪ್ಪ Read this ಹೇಳುವ ಕೆಂಪು ಬಣ್ಣದ ಸಂಕೋಲೆಲಿ ಕ್ಲಿಕ್ಕಿಸೆಕ್ಕಾವುತ್ತು..

ಗುರುಗಳ ಇ-ಮಠಲ್ಲಿ ಶುದ್ದಿ ಎಲ್ಲ ಸರೀ ಗೊಂತಾಗೆಡದೋ, ಅದಕ್ಕೆ ಈ ಲೇಖನಂಗಳ ಸರಮಾಲೆಯ ಕೆಳಾಚಿ ಶುದ್ದಿ ಸಂಕೋಲೆಗಳ ಸರಮಾಲೆಯೂ ಇದ್ದು, ಹೊಸ ಶುದ್ದಿಗೆ, ಘಟನಾವಳಿಗೊಕ್ಕೆ, ಪೇಪರಿಲಿ ಬಂದ ಶುದ್ದಿಗಳ ಬಗ್ಗೆ ಇತ್ಯಾದಿ, ಗುರುಗೊ ಮಾಡಿದ ಘೋಷಣೆಯ ಬಗ್ಗೆ ಕೂಡ. ಆಯಾ ಸಂಕೋಲೆಗೆ ಕ್ಲಿಕ್ಕಿಸಿ ಶುದ್ದಿ ಓದಿರಾತು..
ಗುರುಗಳ ಭೇಟಿಯ ಅವಕಾಶ ಪಡಕ್ಕೊಂಬಲೆ Appointment ಹೇಳ್ತ ಸಂಕೋಲೆ ಇದ್ದು, ಕ್ಲಿಕ್ಕಿಸಿ ಬಂದ ಪುಟಲ್ಲಿ ವಿವರ ತುಂಬುಸಿ ಕಳ್ಸಿರಾತು..
ಗುರುಗಳತ್ರೆ ಎಂತಾರು ಹೇಳೆಕ್ಕೋ, ಅದಕ್ಕೂ ಅವಕಾಶ ಇದ್ದು..
ಆದರೆ ನಿಂಗ ಜಾಲತಾಣದ ಸದಸ್ಯಾರಾಗಿ log in ಮಾಡೆಕ್ಕಾವುತ್ತು.
ನಮ್ಮ ಪ್ರೊಪೈಲು ಪುಟಂದ ಟೈಪಿಸಿ ಕಳ್ಸಿರಾತು ಗುರುಗಳಿಂಗೆ..
ಸಂಕೋಲೆ ಗುರುಗಳ ಭೇಟಿಯ ಅವಕಾಶಕ್ಕೆ ಬೇಕಾದ ಸಂಕೋಲೆಯ ಹತ್ರೆಯೆ ಇರ್ತು..

ಇಷ್ಟೆಲ್ಲಾ ಅಲ್ಲದ್ದೆ ಜಾಲತಾಣದ ಮುಖಪುಟದ ಕಡೇಂಗೆ ಪಟದ ಪುಟಕ್ಕೆ ಹೋವುತ್ತ ಸಂಕೋಲೆಯೂ, ಇತ್ತೀಚೆಗೆ ಬಂದ ಒಪ್ಪಂಗಳೂ, ಲೇಖನಂಗಳೂ, ಸದಸ್ಯರ ಮಾತುಕತೆಗಳೂ ಕಾಣ್ತು..
ಅಲ್ಲೆ ಬಲತ್ತಿಂಗೆ ದಿನಚರಿಲಿ ಕ್ಯಾಲೆಂಡರಿನ ತೋರ್ಸಿದ್ದವು, ಅದರ್ಲಿ ವಿಶೇಷ ಕಾರ್ಯಕ್ರಮಂಗೊ ಇದ್ದರೆ ಆ ದಿನ ಕೆಂಪಿಲಿರ್ತು,, ಕ್ಲಿಕ್ಕಿಸಿರೆ ವಿವರ ಸಿಕ್ಕುತ್ತು..
ಮತ್ತೆ ಪುನಾ ಮೇಲೆ ’ಮೆನು’ವಿನತ್ಲಾಗಿ ಹೋದರೆ ಅದರ್ಲಿ ತುಂಬಾ ಸಂಕೋಲೆಗ ಇದ್ದು, ಎಲ್ಲಾ ಆನು ಹೇಳಿಗೊಂಡು ಹೋದರೆ ಲೇಖನ ಹೋಗಿ ಪುಸ್ತಕ ಅಕ್ಕು..

ಬೋಸಭಾವ ಅರ್ದಲ್ಲಿ ಓದಿ ಒರಗಿಕ್ಕೀಗ, ನಗೆಗಾರ ದಾರಿ ತಪ್ಪಿ ಬೇರೆ ಎಲ್ಯಾರು ಹೋಗಿ ಪರಂಚಿಗೊಂಡಿಪ್ಪಲೂ ಸಾಕು!
ಡೌನ್ಲೋಡ್ ಹೇಳ್ತ ಸಂಕೋಲೆಲಿ ಕೆಲವು ಬಾರಿ ಚೆಂದದ ಪಟಂಗೋ ಇದ್ದು, ಅದರ ನಿಂಗಳ ಕಂಪ್ಯೂಟರಿಂಗೆ ಹಾಕಿಮಡುಗುಲಕ್ಕು..
ಶ್ರೀಪ್ರವಾಸ ಹೇಳ್ತ ವಿಭಾಗ ಗುರುಗಳ ಭೇಟಿ/ಪ್ರವಾಸ/ಪ್ರಯಾಣದ ಬಗ್ಗೆ ಮಾಹಿತಿ ಕೊಡ್ತು..
ಪ್ರಕೃತ ಹೇಳ್ತ ವಿಭಾಗ ಇತ್ತೀಚೆಗಿನ ಕಾರ್ಯಕ್ರಮದ ಬಗ್ಗೆ ಹೇಳುತ್ತು..

ಹರೇರಾಮದ ಅಂಕಣಂಗೊ..

ನಿಂಗಳ ಮಿಂಚಂಚೆಗೆ ಶುದ್ದಿ ಬಪ್ಪ ಹಾಂಗೆ ಮಾಡೆಕ್ಕಾರೆ ಈ ಸಂಕೋಲೆಲಿ ಹೋಗಿ, ಪುಟದ ಕೇಳಾಚಿ ಎಡದ ಹೊಡೆಲಿ ನಿಂಗಳ ಮಿಂಚಂಚೆಯುದೆ ಹೆಸರುದೆ ಹಾಕಿ ಸ್ವಿಚ್ಚು ಒತ್ತಿರಾತು!
http://hareraama.in/category/sri-tour/

ಅಂಬೆರ್ಪಿಲಿಪ್ಪೋಕ್ಕೆ ನೇಲುಲೆ ಕೆಲವು ಸಂಕೋಲೆ ಇದ್ದು ನೋಡಿ:
ಶ್ರೀಮಠದ ಬಗ್ಗೆ: http://hareraama.in/about-us/about-ramachandrapura-math/kannada/
ಶಾಖಾಮಠಂಗೋ: http://hareraama.in/about-us/branches/
ಪಟದಪುಟ ಇಲ್ಲಿದ್ದು: http://hareraama.in/photogallery/
ಗುರುಗಳ ದನಿ ಕೇಳೆಕ್ಕೋ? : http://hareraama.in/category/av/
ನಿಂಗಳ ಕಂಪ್ಯೂಟರಿಗೆ ಗೋಡೆಚಿತ್ರ(wallpapers) ಬೇಕಾರೆ: http://hareraama.in/category/downloads/wall-papers/
ಗುರುಗಳ ಪ್ರವಾಸದ ವಿವರವ ಪ್ರಯಾಸ ಇಲ್ಲದ್ದೆ ತಿಳಿವಲೆ: http://hareraama.in/category/sri-tour/
ಶ್ರೀಮಠದ ಸುಪರ್ದಿಲಿಪ್ಪ ಸಂಸ್ಥೆಗೋ: http://hareraama.in/about-us/institutions/

ಒಟ್ಟಿನ ಮೇಲೆ ಹರೇರಾಮ.ಇನ್ ಒಂದು ಅಭೂತಪೂರ್ವ ಪ್ರಯತ್ನ ಹೇಳುದರಲ್ಲಿ ಸಂಶಯ ಇಲ್ಲೆ..
ಹುಡುಕಿದಷ್ಟೂ ಮುಗಿಯ, ಅಷ್ಟೂ ವಿಷಯಂಗೋ, ಲೇಖನಂಗೋ ಇದರ್ಲಿದ್ದು..
ಗುರುಗೊ ಒಂದೊಂದರಿ ದೂರಲ್ಲಿದ್ದರೂ, ಅವು ದೂರಲ್ಲಿದ್ದವು ಹೇಳುವ ಭಾವನೆಗೆ ಆಸ್ಪದ ಕೊಡ್ತಿಲ್ಲೆ E-ಮಠ..

ನಮ್ಮ ಬಯಲಿನೋರೆಲ್ಲರೂ ಶ್ರೀಗುರುಗಳ ಆಶೀರ್ವಾದಂದ E-ಮಠದ ಮುಖಾಂತರ ಇನ್ನೂ ಹತ್ತರೆ ಬರಳಿ ಹೇಳಿ ಹಾರೈಕೆ!

ಸಧ್ಯಲ್ಲೆ ಇನ್ನೊಂದು ಬಯಲಿನ ಶುದ್ದಿ ತೆಕ್ಕೊಂಡು ಬತ್ತೆ ಆತೋ!?
ಹರೇರಾಮ..

ಬಲ್ನಾಡುಮಾಣಿ

   

You may also like...

25 Responses

 1. ನೀನು ಅಂತರ್ಜಾಲಕ್ಕೆ ಸಂಬಂಧಿಸಿದ ಶುದ್ದಿ ಬರೆತ್ತೆ ಹೇಳಿ ಗೊಂತಾದಪ್ಪಗ ಸಂತೋಷ ಆತು 🙂 ಎನ್ನ ಹಾಂಗಿಪ್ಪವಕ್ಕೆ ಅದು ತುಂಬಾ ಅಗತ್ಯ [ಅಂತರ್ಜಾಲದ ಅ ಆ ಇ ಈ ಬಾರದ್ದವಕ್ಕೆ].
  ’ಹರೇರಾಮ’ ಜಾಲತಾಣದ ಬಗ್ಗೆ ಬರದ್ದು, ವಿವರಣೆ ತುಂಬಾ ಲಾಯ್ಕಾಯ್ದು. ತುಂಬಾ ಜೆನ ನೀನು ಬರವ ಶುದ್ದಿಂದ ಪ್ರಯೋಜನ ಪಡಕ್ಕೊಂಗು.

  • ಧನ್ಯವಾದಂಗೋ ಅಕ್ಕೋ! 🙂 ಅಂತರ್ಜಾಲದ ಅ-ಆ-ಇ-ಈ, ಏಬಿಸಿಡಿ ಎಲ್ಲ ಹೇಳಿಕೊಡುವಾ, ಎನಗೆ ಗೊಂತಿಪ್ಪಷ್ಟು! ಮಧ್ಯಲ್ಲಿ ಕೆಲವು ಅಕ್ಷರಂಗೋ ಬಿಟ್ಟು ಹೋದರೆ ನೆರೆಕರೆಯೋರು ನೆನಪ್ಸಿರಾತು!

 2. Balanadu Maani, Bhaari laiykkaidu lekhana… mundeyu intha olle lekhana bharali ninna computer inda…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *