‘ಘನ’

December 15, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ರಾಮಣ್ಣನ ಮದುವೆ ಸಟ್ಟುಮುಡಿ ಲಾಯಕ ಕಳುತ್ತಡ ಅಪ್ಪೋ. ಎಲ್ಲವೂ ಶ್ರೀ ಗುರುದೇವತಾ ಮತ್ತು ಹಿರಿಯರ ಅನುಗ್ರಹಂದ ಸಾಧ್ಯ ಅಷ್ಟೇ ಅಪ್ಪೋ. ಸಟ್ಟುಮುಡಿ ಕಳಿಶಿಕ್ಕಿ ಹೋಪಗ ಬಟ್ಟಮಾವ ನಮ್ಮ ಮನೆ ಜಾಲ್ಲೆ ಆಗಿಯೇ ಹೋದ್ದಿದಾ. ರಾಮಣ್ಣನ ಮನೆಯೋಕ್ಕೂ ವೈದಿಕಲ್ಲಿ ಅಪಾರ ಶ್ರದ್ಧಾ ಭಕ್ತಿ. ಹಲವು ಜನ ಭಟ್ಟಕ್ಕಳೂ ಬಂದಿತ್ತವಡ ನೆಂಟರಿಷ್ಟರು ಹೇಳಿ ಸಟ್ಟುಮುಡಿಗೆ. ಅಕೇರಿಗೆ ವೈದಿಕರೆಲ್ಲಾ ಸೇರಿ ಮಂತ್ರಾಕ್ಷತೆ ಸಮಯಲ್ಲಿ ಭರ್ಜರಿ ಘನವೂ ರೈಸಿತ್ತಡ. ಹಾಂಗೆ ಬಟ್ಟಮಾವನತ್ರೆ ಆ ಬಗ್ಗೆ ಮಾತಾಡಿಗೊಂಡಿತ್ತಿದ್ದು ರಜಾ ಹೊತ್ತು. ಆವಾಗ ಭಟ್ಟಮಾವ° ಹೇಳಿದ್ದು –

ವೇದಮಂತ್ರವ ಕಲ್ತು ಹೇಳ್ಳೆ ಚಂದ – ಹೇಳ್ತರ ಕೇಳ್ಳೆ ಬಲು ಚಂದ. ನಾಕು ಮಂತ್ರ ಕಲ್ತ ಮಾಂತ್ರಕ್ಕೆ ವೇದಮೂರ್ತಿ ಆವ್ತನಿಲ್ಲೆ., ವೇದಮೂರ್ತಿಯ ಮಗನೂ ವೇದಮೂರ್ತಿ ಹೇಳಿ ಕರೆಸಿಗೊಂಬಲಾವ್ತನಿಲ್ಲೆ. ವೇದವ ಅರ್ಥವಾತ್ತಾಗಿ ಕರಗತ ಮಾಡಿದವ°- ವೇದಮೂರ್ತಿ. ಸಂಪೂರ್ಣ ವೇದಾಧ್ಯಯನ ಮಾಡಿದವನ ಕಾಂಬಗಳೇ ಗೊಂತಾವ್ತಪ್ಪೋ. ಶಾರೀರಿಕವಾಗಿಯೂ, ವ್ಯಕ್ತಿತ್ವಲ್ಲಿಯೂ ಅವರ ಪ್ರತ್ಯೇಕವಾಗಿ ಗುರುತುಸಲೆ ಎಡಿಗು. ಸಂಪೂರ್ಣ ವೇದ ಕಲ್ತವರ ಮಂತ್ರ ಉಚ್ಚಾರಣೆ ಗಾಂಭೀರ್ಯವೇ ಅದ್ಭುತ. ಇಡೀ ಪರಿಸರವೇ ಕಂಪುಸುಗು. ಆ ಮಂತ್ರ ಆ ಪರಿಸರಲ್ಲಿ ಹಲವು ಕಾಲ ಪ್ರತಿಬಿಂಬಿತವಾಗಿ ಝೇಂಕರಿಸಿಗೊಂಡಿಕ್ಕು. ವೇದವ ಸ್ವರವತ್ತಾಗಿ ಕಲ್ತು ಮುಗುಶಲೆ ಕೆಲವು ವರ್ಷಂಗಳೇ ಬೇಕು.

ವೇದ ಮಂತ್ರಂಗಳ ಪಠಿಸುವದರಲ್ಲಿ ದಶವಿಧಡ. ಹೇಂಗೆ ಹೇಳಿರೆ ಎರಡು ಸರಳ ಮತ್ತು ಅಷ್ಟ ವಿಕೃತಿಗ (ಎಂಟು ಪ್ರಕಾರ) ಇದ್ದಡ.

ಎರಡು ಸರಳ (ಮೂಲ) ಹೇಳುವದು – ೧.‘ಪದಪಾಠ’ ೨.‘ಕ್ರಮಪಾಠ’.

ಅಷ್ಟ ವಿಕೃತಿಗೊ – ‘ಜಟಾಮಾಲಾಶಿಖಾರೇಖಾಧ್ವಜೋದಂಡೋರಥೋಘನಃ’| ೧.ಜಟಾಪಾಠ, ೨.ಮಾಲಾಪಾಠ, ೩.ಶಿಖಾಪಾಠ, ೪. ರೇಖಾಪಾಠ, ೫.ಧ್ವಜಪಾಠ, ೬.ದಂಡಪಾಠ, ೭.ರಥಪಾಠ, ೮.ಘನಪಾಠ. ನವಗರಡಿಯಪ್ಪಾ ಇದು!

ಅದರಲ್ಲಿ ಮೊದಲನೆಯದ್ದು ಮೂಲಪಾಠ (ಸಂಹಿತಾ ಪಾಠ). ಮೂಲ ಹೇಳಿರೆ ಸಂಹಿತೆ + ಶಾಖೆ. ಸಂಹಿತೆ (ಮೂಲ) ಓದುತ್ತ್ಸು ಹೇಳಿರೆ ಇಪ್ಪದರ ಇಪ್ಪ ಹಾಂಗೆ ಓದಿಗೊಂಡು / ಪಠಿಸಿಗೊಂಡು ಹೋಪದು . 1 2 3 4 5 6 …. ಈ ಕ್ರಮಲ್ಲಿ . ಅರ್ಥಾತ್, ರಾಮ ಕೃಷ್ಣ ಗೋವಿಂದ ಮಾಧವ ಅಚ್ಯುತ ಅನಂತ ……

ಮತ್ತೆ ‘ಪದಪಾಠ’. ಪದಪಾಠ ಹೇಳಿರೆ ಸಂಹಿತೆಯ ಪದ ವಿಂಗಡಿಸಿಗೊಂಡು ಮಂತ್ರ ಹೇಳುತ್ತ ಕ್ರಮ. ಹೇಳಿರೆ.. 1 / 2 / 3 / 4 ಈ ಕ್ರಮಲ್ಲಿ.

ಮತ್ತೆ ‘ಕ್ರಮಪಾಠ’. ಪ್ರಥಮ ಶಬ್ದ ಮತ್ತು ಎರಡನೇ ಪದ ಸೇರ್ಸಿಗೊಂಡು ಕ್ರಮಬದ್ದವಾಗಿ ಮಂತ್ರ ಹೇಳುವದು. ಹೇಂಗೆ ಹೇಳಿತ್ತು ಕಂಡ್ರೆ – 1 2 / 2 3 / 3 4 / 4 5…… ಈ ವಿಧಲ್ಲಿ. ಹೇಳಿರೆ..,- ರಾಮ ಕೃಷ್ಣ ; ಕೃಷ್ಣ ಗೋವಿಂದ; ಗೋವಿಂದ ಮಾಧವ…..

ಮತ್ತೆ ‘ಜಟೆ’ (ಜಟಾಪಾಠ). ಇದರ ಕ್ರಮ – 1 2 2 1 1 2 / 2 3 3 2 2 3

ಮತ್ತೆ ಅಕೇರಿಗೆ ‘ಘನಪಾಠ’ – ಘನಪಾಠ ಆದವನ ‘ಘನಪಾಠೀ’ ಹೇಳಿ ಹೇಳುತ್ಸು. (ಹಾಂಗೇಳಿ ಜಟೆ ಆದವನ ‘ಜಟಾಪಾಠೀ’ (ಜಟಾಪಟಿ)ಯೋ ಹೇಳಿ ದೆನಿಗೋಳ್ತ ಕ್ರಮ ಇಲ್ಲೆ. ಆದರೆ, ಕ್ರಮಪಾಠೀ ಹೇಳಿ ಕ್ರಮ ಪಾಠ ಆದವನ ಹೇಳುವದಿದ್ದು. ಎಂತಕೆ ಹೇಳಿರೆ., ವೇದಾಧ್ಯಯನ ಜಟೆಲಿ ನಿಲ್ಸುವ ಕ್ರಮ ಇಲ್ಲೆಡ. ಒಂದೋ ‘ಕ್ರಮ’ಲ್ಲಿ ಮುಂದೆ ಹೋದರೆ ‘ಘನ’ ಮುಗಿಶಿಕ್ಕಿ). ಮೂಲ, ಕ್ರಮ, ಜಟೆ…. ಆಗದ್ದವಂಗೆ ‘ಘನ’ ಹೇಳ್ಳೆ ಸುಲಭ ಇಲ್ಲೆ. ಅಂತೇ ಬಾಯಿಪಾಠ ಮಾಡಿ ನಾಲ್ಕೈದು ಹೇಳ್ಳೆ ಎಡಿಗಷ್ಟೆ. ಘನ ಕಲ್ತವ ಯಾವ ಮಂತ್ರಕ್ಕೂ ಘನ ಹೇಳುಗು.

ಘನ ಹೇಳುವ ಕ್ರಮ –
1 2 2 1 1 2 3 3 2 1 1 2 3 / 2 3 3 2 2 3 4 4 3 2 2 3 4 / 3 4 4 3 3 4 5 5 4 3 3 4 5

ನಮ್ಮ ಅನುಪತ್ಯಂಗಳಲ್ಲಿ ಮಂತ್ರಾಕ್ಷತೆ ಆಗಿಕ್ಕಿ ವೈದಿಕರು ಘನ ಹೇಳ್ತವಪ್ಪೋ. ನಾವೂ ಕೆಲವರು ಅವು ಹೇಳ್ತದರ ಕಣ್ಣು ಮೂಗು ಬಾಯಿ ಬಿಟ್ಟು ನೋಡಿದಲ್ಲೇ ಬಾಕಿ ಅಪ್ಪೋದಿದ್ದು. ಒಂದೇ ಧಾಟಿಲಿ ಒಂದೊಂದೇ ಸ್ತರ ಏರ್ಸಿಗೊಂಡು ಹೋಪಗ ನವಗೂ ಆ ಕಂಪನದ ಅನುಭವ ಆವ್ತು ಹೇಳುವದು ನಿಸ್ಸಂದೇಹ. ಅವಕ್ಕೆಷ್ಟು ಬಚ್ಚುತ್ತೋ ಹೇಳಿ ಮುಗಿಷಿಯಪ್ಪಗ ! . ಮತ್ತೆಂತಕೆ ಅಷ್ಟು ಭಂಙಲ್ಲಿ ಅದರ ಹೇಳೇಕು ಕೆಳ್ತೀರೋ. ಸಭಾರಂಜನಗೆ, ಪ್ರಾವೀಣ್ಯ ಪ್ರದರ್ಶನಕ್ಕೆ ಖಂಡಿತಾ ಅಗತ್ಯವೇ., ಬೇಡದ್ದೋರಿಂಗೆ ಬೇಡದ್ರೂ.

ಇಂದ್ರಾಣ ಶುದ್ದಿಲ್ಲಿ ನಮ್ಮ ಬೈಲಿಂಗಾಗಿ ಒಂದು ಘನ

ಬ್ರಾಹ್ಮಣಾಶೀರ್ವಾದಮಂತ್ರಂದಲೇ ಸುರುಮಾಡುವೋ° ಆಗದೋ.

ಮಂಗಲದೇವತಾಪ್ರಸಾದೋಸ್ತ್ವಿತ್ಯನುಗೃಹಾಣಾ,

ಓಂ ಉಪ ಶ್ವಾಸಯ ಪೃಥಿವೀಮುತ ದ್ಯಾಂ ಪುರುತ್ರಾ ತೇ ಮನುತಾಂ ವಿಷ್ಠಿತಂ ಜಗತ್ | ಸ ದುಂದುಭೇ ಸಜೂರಿಂದ್ರೇಣ ದೇವೈರ್ದೂರಾದ್ದವೀಯೋ ಅಪ ಸೇಧ ಶತ್ರೂನ್ || ೧ || ಆ ಕ್ರಂದಯ ಬಲಮೋಜೋ ನ ಆ ಧಾ ನಿಷ್ಟನಿಹಿ ದುರಿತಾ ಬಾಧಮಾನಃ| ಅಪ ಪ್ರೋಥ ದುಂದುಭೇ ದುಚ್ಛುನಾಗ್‍ಮ್ ಇತ ಇಂದ್ರಸ್ಯ ಮುಷ್ಟಿರಸಿ ವೀಡಯಸ್ವ ॥ ೨ ॥ ಆsಮೂರಜ ಪ್ರತ್ಯಾವರ್ತಯೇಮಾಃ ಕೇತುಮದ್ದುಂದುಭಿರ್ವಾವದೀತಿ । ಸಮಶ್ವಪರ್ಣಾಶ್ಚರಂತಿ ನೋ ನರೋsಸ್ಮಾ ಕಮಿಂದ್ರ ರಥಿನೋ ಜಯಂತು ॥ ೩ ॥ ಯಥಾ ಹ ತದ್ವಸವೋ ಗೌರ್ಯಂ ಚಿತ್ಪದಿ ಷಿತಾಮಮುಂಚತಾಯಜತ್ರಾಃ । ಏವಾ ತ್ವಮಸ್ಮತ್ಪ್ರ ಮುಂಚಾವ್ಯಗ್‍ಹಃ ಪ್ರಾತಾರ್ಯಗ್ನೇ ಪ್ರತರಾಂ ನ ಆಯುಃ ॥ ೪ ॥

ಸಂಹಿತಾ ಪಾಠ – [1 2 3 4 5 6 ]

ಓಂ ಏತೇsನವಾರಮಪಾರಂ ಪ್ರ ಪ್ಲವಂತೇ ಯೇ ಸಂವಥ್ಸರಮುಪಯಂತಿ ಯದ್ಬೃಹದ್ರಥಂತರೇ ಅನ್ವರ್ಜೇಯುರ್ಯಥಾ ಮಧ್ಯೇ ಸಮುದ್ರಸ್ಯ ಪ್ಲವಮನ್ವರ್ಜೇಯುಸ್ತಾದೃಕ್ತದನುಥ್ಸರ್ಗಂ ಬೃಹದ್ರಥಂತರಾಭ್ಯಾಮಿತ್ವಾಪ್ರತಿಷ್ಠಾಙ್ಗಚ್ಛಂತಿ ಸರ್ವೇಭ್ಯೋ ವೈ ಕಾಮೇಭ್ಯಃ ಸಂಧಿರ್ದುಹೇ ತದ್ಯಜಮಾನಾಃ ಸರ್ವಾನ್ಕಾಮಾನವ ರುಂಧತೇ || [ಯಜು. ಸಂ. ೭ ಕಾಂಡ , ೫ ಪ್ರಶ್ನೆ. ೩. ಅನುವಾಕ ೧೦ ಪಂಚಾಶತ್]

ಪದಪಾಠ – [1 / 2 / 3 / 4]

ಏತೇ | ಅನವಾರಂ | ಅಪಾರಂ | ಪ್ರೇತಿ | ಪ್ಲವಂತೇ | ಯೇ | ಸಂವಥ್ಸರಮಿತಿ ಸಂ – ವಥ್ಸರಮ್ | ಉಪಯಂತೀತ್ಯೂಪ – ಯಂತಿ | ಯತ್ | ಬೃಹದ್ರಥಂತರೇ ಇತಿ ಬೃಹತ್ – ರಥಂತರೇ | ಅನ್ವರ್ಜೇಯುರಿತ್ಯನು – ಅರ್ಜೇಯುಃ| ಯಥಾ | ಮಧ್ಯೇ | ಸಮುದ್ರಸ್ಯ | ಪ್ಲವಂ | ಅನ್ವರ್ಜೇಯುರಿತ್ಯನು – ಅರ್ಜೇಯುಃ | ತಾದೃಕ್ | ತತ್ | ಅನುತ್ಸರ್ಗಮಿತ್ಯನುತ್ – ಸರ್ಗಮ್ | ಬೃಹದ್ರಥಂತರಾಭ್ಯಾಮಿತಿ ಬೃಹತ್ – ರಥಂತರಾಭ್ಯಾಮ್ | ಇತ್ವಾ | ಪ್ರತಿಷ್ಠಾಮಿತಿ ಪ್ರತಿ – ಸ್ಥಾಮ್ | ಗಚ್ಛಂತಿ | ಸರ್ವೇಭ್ಯಃ | ವೈ | ಕಾಮೇಭ್ಯಃ | ಸಂಧಿರಿತಿ ಸಂ – ಧಿಃ | ದುಹೇ | ತತ್ | ಯಜಮಾನಾಃ| ಸರ್ವಾನ್ | ಕಾಮಾನ್ | ಅವೇತಿ | ರುಂಧತೇ |

ಇದು ಅವ್ವು ಹೇಳಿದ ಸೂತ್ರಲೆಕ್ಕಕ್ಕೆ ತಾಳೆ ಆವ್ತೋ ನೋಡಿರೆ ಉಮ್ಮಾ ನವಗರಡಿಯ. ಏನೂ ಆ ಬಗ್ಗೆ ತಿಳುವಳಿಕೆ ಇಲ್ಲದ್ದೆ ಅವರತ್ರೆ ಇದರ ಚರ್ಚೆ ಮಾಡುವದು ಸೂಕ್ತ ಅಲ್ಲ ಹೇಳಿ ಕಂಡತ್ತು. ಅವು ವೇದ ಕಲ್ತವು. ನಾವು ಅವ್ವು ಹೇಳುದರ ಕೇಳುವದು ಮಾತ್ರ. ಅದು ಮತ್ತೆ ಸರಿ ಇಲ್ಲದ್ದೆ ಇಕ್ಕೋ. ಮಂತ್ರವ ಪದವಿಂಗಡನೆ ಹೇಂಗೆ ಹೇಳಿ ಅವರತ್ರೆಯೇ ಕೇಳೆಕ್ಕಷ್ಟೇ ನವಗೇನಾರು ರಜಾರೂ ಅರ್ಥ ಆವ್ತಾ ನಮೂನೆಲಿ ಇದ್ದಿದ್ದರೆ. ಒಂದನೇ ತರಗತಿ ವಿದ್ಯಾರ್ಥಿ ಹತ್ತನೇ ತರಗತಿ ಪಾಠ ಪುಸ್ತಕಂದ ತಿಳಿವಲೆ ಸಾಧ್ಯವೋ.

ಕ್ರಮ ಪಾಠ – [1 2 / 2 3 / 3 4 / 4 5……]

ಏತೇನವಾರಂ | ಅನವಾರ ಮಪಾರಂ | ಅಪಾರಂ ಪ್ರ | ಪ್ರಪ್ಲವಂತೇ | ಪ್ಲವಂತೇ ಯೇ | ಯೇ ಸಂವಥ್ಸರಂ | ಸಂವಥ್ಸರಮುಪಯಂತಿ | ಸಂವಥ್ಸರಮಿತಿ ಸಂ – ವಥ್ಸರಮ್ | ಉಪಯಂತಿ ಯತ್ | ಉಪಯಂತೀತ್ಯೂಪ – ಯಂತಿ | ಯದ್ಬೃಹದ್ರಥಂತರೇ |ಬೃಹದ್ರಥಂತರೇ ಅನ್ವರ್ಜೇಯುಃ | ಬೃಹದ್ರಥಂತರೇ ಇತಿ ಬೃಹತ್ – ರಥಂತರೇ | ಅನ್ವರ್ಜೇಯುರ್ ಯಥಾ ಅನ್ವರ್ಜೇಯುರಿತ್ಯನು – ಅರ್ಜೇಯುಃ |ಯಥಾ ಮಧ್ಯೇ | ಮಧ್ಯೇ ಸಮುದ್ರಸ್ಯ | ಸಮುದ್ರಸ್ಯ ಪ್ಲವಂ | ಪ್ಲವ ಮನ್ವರ್ಜೇಯುಃ | ಅನ್ವರ್ಜೇಯುಸ್ತಾದೃಕ್ | ತಾದೃಕ್ ತತ್ | ತದನುತ್ಸರ್ಗಂ | ಅನುತ್ಸರ್ಗಂ ಬೃಹದ್ರಥಂತರಾಭ್ಯಾಮ್ | ಅನುತ್ಸರ್ಗಮಿತ್ಯನುತ್ – ಸರ್ಗಮ್ | ಬೃಹದ್ರಥಂತರಾಭ್ಯಾಮಿತ್ವಾ | ಬೃಹದ್ರಥಂತರಾಭ್ಯಾಮಿತಿ ಬೃಹತ್ – ರಥಂತರಾಭ್ಯಾಮ್ | ಇತ್ವಾ ಪ್ರತಿಷ್ಠಾಮ್ | ಪ್ರತಿಷ್ಠಾಮ್ ಗಚ್ಛಂತಿ | ಪ್ರತಿಷ್ಠಾಮಿತಿ ಪ್ರತಿ – ಸ್ಥಾಮ್ | ಗಚ್ಛಂತಿ ಸರ್ವೇಭ್ಯಃ| ಸರ್ವೇಭ್ಯೋ ವೈ | ವೈಕಾಮೇಭ್ಯಃ| ಕಾಮೇಭ್ಯಃ ಸಂಧಿಃ | ಸಂಧಿರ್ದುಹೇ | ಸಂಧಿರಿತಿ ಸಂ – ಧಿಃ| ದುಹೇ ತತ್ | ತದ್ಯಜಮಾನಾಃ | ಯಜಮಾನಾಃಸರ್ವಾನ್ | ಸರ್ವಾನ್ ಕಾಮಾನ್ | ಕಾಮಾನವ | ಅವರುಂಧತೇ | ರುಂಧತ ಇತಿ ರುಂಧತೇ |

ಘನ ಪಾಠ – [1 2 2 1 1 2 3 3 2 1 1 2 3 / 2 3 3 2 2 3 4 4 3 2 2 3 4 / 3 4 4 3 3 4 5 5 4 3 3 4 5]

ಏತೇನ ವಾರ ಮನ ವಾರ ಮೇತ ಏತೇನ ವಾರಮ ಪಾರ ಮಪಾರ ಮನ ವಾರ ಮೇತ ಏತೇನ ವಾರಮ ಪಾರಂ |

ಅನ ವಾರಮ ಪಾರ ಮಪಾರ ಮನ ವಾರ ಮನ ವಾರಮ ಪಾರಂ ಪ್ರ ಪ್ರಾ ಪಾರ ಮನ ವಾರಮನ ವಾರಮ ಪಾರಂ ಪ್ರಾ |

ಅಪಾರಂ ಪ್ರ ಪ್ರಾ ಪಾರಮ ಪಾರಂ ಪ್ರ ಪ್ಲವಂತೇ ಪ್ಲವಂತೇ ಪ್ರಾ ಪಾರಮ ಪಾರಂ ಪ್ರ ಪ್ಲವಂತೇ |
ಪ್ರ ಪ್ಲವಂತೇ ಪ್ಲವಂತೇ ಪ್ರ ಪ್ರ ಪ್ಲವಂತೇ ಯೇ ಯೇ ಪ್ಲವಂತೇ ಪ್ರ ಪ್ರ ಪ್ಲವಂತೇ ಯೇ |

ಪ್ಲವಂತೇ ಯೇ ಯೇ ಪ್ಲವಂತೇ ಪ್ಲವಂತೇ ಯೇ ಸಂವಥ್ಸರಗುಂ ಸಂವಥ್ಸರಮ್ ಯೇ ಪ್ಲವಂತೇ ಪ್ಲವಂತೇ ಯೇ ಸಂವಥ್ಸರಮ್ |

ಯೇ ಸಂವಥ್ಸರಗುಂ ಸಂವಥ್ಸರಮ್ ಯೇ ಯೇ ಸಂವಥ್ಸರ ಮುಪಯಂತ್ಯುಪಯಂತಿ ಸಂವಥ್ಸರಂ ಯೇ ಯೇ ಸಂವಥ್ಸರ ಮುಪಯಂತಿ | ಸಂವಥ್ಸರ ಮುಪಯಂತ್ಯುಪಯಂತಿ ಸಂವಥ್ಸರಗುಂ ಸಂವಥ್ಸರ ಮುಪಯಂತಿ ಯದ್ಯದುಪಯಂತಿ ಸಂವಥ್ಸರಗುಂ ಸಂವಥ್ಸರ ಮುಪಯಂತಿ ಯತ್ | ಸಂವಥ್ಸರಮಿತಿ ಸಂ – ವಥ್ಸರಮ್ |

ಉಪಯಂತಿ ಯದ್ಯದುಪ ಯಂತ್ಯುಪ ಯಂತಿ ಯದ್ ಬೃಹದ್ರಥಂತರೇ ಬೃಹದ್ರಥಂತರೇ ಯದುಪ ಯಂತ್ಯುಪ ಯಂತಿ ಯದ್ ಬೃಹದ್ರಥಂತರೇ | ಉಪಯಂತೀತ್ಯೂಪ – ಯಂತಿ | ಯದ್ ಬೃಹದ್ರಥಂತರೇ ಬೃಹದ್ರಥಂತರೇ ಯದ್ಯದ್ ಬೃಹದ್ರಥಂತರೇ ಅನ್ವರ್ಜೇಯು ರನ್ವರ್ಜೇಯುರ್ ಬೃಹದ್ರಥಂತರೇ ಯದ್ಯದ್ ಬೃಹದ್ರಥಂತರೇ ಅನ್ವರ್ಜೇಯುಃ |

ಬೃಹದ್ರಥಂತರೇ ಅನ್ವರ್ಜೇಯು ರನ್ವರ್ಜೇಯುರ್ ಬೃಹದ್ರಥಂತರೇ ಬೃಹದ್ರಥಂತರೇ ಅನ್ವರ್ಜೇಯುರ್ ಯಥಾ ಯಥಾನ್ವರ್ಜೇಯುರ್ ಬೃಹದ್ರಥಂತರೇ ಬೃಹದ್ರಥಂತರೇ ಅನ್ವರ್ಜೇಯುರ್ ಯಥಾ | ಬೃಹದ್ರಥಂತರೇ ಇತಿ ಬೃಹತ್ – ರಥಂತರೇ|

ಅನ್ವರ್ಜೇಯುರ್ ಯಥಾ ಯಥಾನ್ವರ್ಜೇಯು ರನ್ವರ್ಜೇಯುರ್ ಯಥಾ ಮಧ್ಯೇ ಮಧ್ಯೇ ಯಥಾನ್ವರ್ಜೇಯು ರನ್ವರ್ಜೇಯುರ್ ಯಥಾ ಮಧ್ಯೇ | ಅನ್ವರ್ಜೇಯುರಿತ್ಯನು – ಅರ್ಜೇಯುಃ | ಯಥಾ ಮಧ್ಯೇ ಮಧ್ಯೇ ಯಥಾ ಯಥಾ ಮಧ್ಯೇ ಸಮುದ್ರಸ್ಯ ಸಮುದ್ರಸ್ಯ ಮಧ್ಯೇ ಯಥಾ ಯಥಾ ಮಧ್ಯೇ ಸಮುದ್ರಸ್ಯ | ಮಧ್ಯೇ ಸಮುದ್ರಸ್ಯ ಸಮುದ್ರಸ್ಯ ಮಧ್ಯೇ ಮಧ್ಯೇ ಸಮುದ್ರಸ್ಯ ಪ್ಲವಂ ಪ್ಲವಗುಂ ಸಮುದ್ರಸ್ಯ ಮಧ್ಯೇ ಮಧ್ಯೇ ಸಮುದ್ರಸ್ಯ ಪ್ಲವಂ | ಸಮುದ್ರಸ್ಯ ಪ್ಲವಂ ಪ್ಲವಗುಂ ಸಮುದ್ರಸ್ಯ ಸಮುದ್ರಸ್ಯ ಪ್ಲವ ಮನ್ವರ್ಜೇಯುರನ್ವರ್ಜೇಯುಃ ಪ್ಲವಗುಂ ಸಮುದ್ರಸ್ಯ ಸಮುದ್ರಸ್ಯ ಪ್ಲವ ಮನ್ವರ್ಜೇಯುಃ | ಪ್ಲವ ಮನ್ವರ್ಜೇಯುರನ್ವರ್ಜೇಯುಃ ಪ್ಲವಂ ಪ್ಲವ ಮನ್ವರ್ಜೇಯುಸ್ತಾದೃಕ್ ತಾದೃಗನ್ವರ್ಜೇಯುಃ ಪ್ಲವಂ ಪ್ಲವ ಮನ್ವರ್ಜೇಯುಸ್ತಾದೃಕ್ | ಅನ್ವರ್ಜೇಯುಸ್ತಾದೃಕ್ ತಾದೃಗನ್ವರ್ಜೇಯುರನ್ವರ್ಜೇಯುಃ ಸ್ತಾದೃಕ್ ತತ್ತತ್ತಾದೃಗನ್ವರ್ಜೇಯು ರನ್ವರ್ಜೇಯುಸ್ತಾದೃಕ್ ತತ್ | ಅನ್ವರ್ಜೇಯುರಿತ್ಯನು – ಅರ್ಜೇಯುಃ | ತಾದೃಕ್ ತತ್ತತ್ತಾದೃಕ್ ತಾದೃಕ್ ತದನುತ್ಸರ್ಗ ಮನುತ್ಸರ್ಗಂ ತ್ತತ್ತಾದೃಕ್ ತಾದೃಕ್ ತದನುತ್ಸರ್ಗಂ | ತದನುತ್ಸರ್ಗ ಮನುತ್ಸರ್ಗಂ ತತ್ತದನುತ್ಸರ್ಗಂ ಬೃಹದ್ರಥಂತರಾಭ್ಯಾಮ್ ಬೃಹದ್ರಥಂತರಾಭ್ಯಾಮ್ ಮನುನುತ್ಸರ್ಗಂ ತತ್ತದನುತ್ಸರ್ಗಂ ಬೃಹದ್ರಥಂತರಾಭ್ಯಾಮ್ | ಅನುತ್ಸರ್ಗಂ ಬೃಹದ್ರಥಂತರಾಭ್ಯಾಮ್ ಬೃಹದ್ರಥಂತರಾಭ್ಯಾ ಮನುನುತ್ಸರ್ಗ ಮನುನುತ್ಸರ್ಗಂ ಬೃಹದ್ರಥಂತರಾಭ್ಯಾ ಮಿತ್ವೇತ್ವಾ ಬೃಹದ್ರಥಂತರಾಭ್ಯಾ ಮನುನುತ್ಸರ್ಗ ಮನುನುತ್ಸರ್ಗಂ ಬೃಹದ್ರಥಂತರಾಭ್ಯಾ ಮಿತ್ವಾ | ಅನುತ್ಸರ್ಗಮಿತ್ಯನುತ್ – ಸರ್ಗಮ್ | ಬೃಹದ್ರಥಂತರಾಭ್ಯಾ ಮಿತ್ವೇತ್ವಾ ಬೃಹದ್ರಥಂತರಾಭ್ಯಾಮ್ ಬೃಹದ್ರಥಂತರಾಭ್ಯಾ ಮಿತ್ವಾ ಪ್ರತಿಷ್ಠಾಂಪ್ರತಿಷ್ಠಾ ಮಿತ್ವಾ ಬೃಹದ್ರಥಂತರಾಭ್ಯಾಮ್ ಬೃಹದ್ರಥಂತರಾಭ್ಯಾ ಮಿತ್ವಾ ಪ್ರತಿಷ್ಠಾಮ್ | ಬೃಹದ್ರಥಂತರಾಭ್ಯಾಮಿತಿ ಬೃಹತ್ – ರಥಂತರಾಭ್ಯಾಮ್ | ಇತ್ವಾ ಪ್ರತಿಷ್ಠಾಂಪ್ರತಿಷ್ಠಾ ಮಿತ್ವೇತ್ವಾ ಪ್ರತಿಷ್ಠಾಮ್ ಗಚ್ಛಂತಿ ಗಚ್ಛಂತಿ ಪ್ರತಿಷ್ಠಾ ಮಿತ್ವೇತ್ವಾ ಪ್ರತಿಷ್ಠಾಮ್ ಗಚ್ಛಂತಿ | ಪ್ರತಿಷ್ಠಾಮ್ ಗಚ್ಛಂತಿ ಗಚ್ಛಂತಿ ಪ್ರತಿಷ್ಠಾಮ್ ಪ್ರತಿಷ್ಠಾಮ್ ಗಚ್ಛಂತಿ ಸರ್ವೇಭ್ಯಃ ಸರ್ವೇಭ್ಯೋ ಗಚ್ಛಂತಿ ಪ್ರತಿಷ್ಠಾಮ್ ಪ್ರತಿಷ್ಠಾಮ್ ಗಚ್ಛಂತಿ ಸರ್ವೇಭ್ಯಃ| ಪ್ರತಿಷ್ಠಾಮಿತಿ ಪ್ರತಿ – ಷ್ಠಾಮ್ | ಗಚ್ಛಂತಿ ಸರ್ವೇಭ್ಯಃ ಸರ್ವೇಭ್ಯೋ ಗಚ್ಛಂತಿ ಗಚ್ಛಂತಿ ಸರ್ವೇಭ್ಯೋ ವೈ ವೈ ಸರ್ವೇಭ್ಯೋ ಗಚ್ಛಂತಿ ಗಚ್ಛಂತಿ ಸರ್ವೇಭ್ಯೋ ವೈ | ಸರ್ವೇಭ್ಯೋ ವೈ ವೈ ಸರ್ವೇಭ್ಯಃ ಸರ್ವೇಭ್ಯೋ ವೈ ಕಾಮೇಭ್ಯಃ ಕಾಮೇಭ್ಯೋ ವೈ ಸರ್ವೇಭ್ಯಃ ಸರ್ವೇಭ್ಯೋ ವೈ ಕಾಮೇಭ್ಯಃ | ವೈ ಕಾಮೇಭ್ಯಃ ಕಾಮೇಭ್ಯೋ ವೈ ವೈ ಕಾಮೇಭ್ಯಃಸ್ಸಂಧಿಃ ಸ್ಸಂಧಿಃ ಕಾಮೇಭ್ಯೋ ವೈ ವೈ ಕಾಮೇಭ್ಯಃಸ್ಸಂಧಿಃ | ಕಾಮೇಭ್ಯಃಸ್ಸಂಧಿಃ ಸ್ಸಂಧಿಃ ಕಾಮೇಭ್ಯಃ ಕಾಮೇಭ್ಯಃಸ್ಸಂಧಿರ್ದುಹೇ ದುಹೇ ಸಂಧಿಃ ಕಾಮೇಭ್ಯಃ ಕಾಮೇಭ್ಯಃ ಸ್ಸಂಧಿರ್ದುಹೇ | ಸಂಧಿರ್ದುಹೇ ದುಹೇ ಸಂಧಿಃ ಸ್ಸಂಧಿರ್ದುಹೇ ತತ್ತದ್ದುಹೇ ಸಂಧಿಃ ಸ್ಸಂಧಿರ್ದುಹೇ ತತ್ | ಸಂಧಿರಿತಿ ಸಂ – ಧಿಃ | ದುಹೇ ತತ್ತದ್ದುಹೇ ದುಹೇ ತದ್ಯಜಮಾನಾ ಯಜಮಾನಾ ಸ್ತದ್ದುಹೇ ದುಹೇ ತದ್ಯಜಮಾನಾಃ| ತದ್ಯಜಮಾನಾ ಯಜಮಾನಾ ಸ್ತತ್ತದ್ಯಜಮಾನಾ ಸ್ಸರ್ವಾನ್ ತ್ಸರ್ವಾನ್ ಯಜಮಾನಾ ಸ್ತತ್ತದ್ಯಜಮಾನಾ ಸ್ಸರ್ವಾನ್ | ಯಜಮಾನಾ ಸ್ಸರ್ವಾನ್ ತ್ಸರ್ವಾನ್ ಯಜಮಾನಾ ಯಜಮಾನಾ ಸ್ಸರ್ವಾನ್ ಕಾಮಾನ್ ಕಾಮಾನ್ ತ್ಸರ್ವಾನ್ ಯಜಮಾನಾ ಯಜಮಾನಾ ಸ್ಸರ್ವಾನ್ ಕಾಮಾನ್ | ಸರ್ವಾನ್ ಕಾಮಾನ್ ಕಾಮಾನ್ ತ್ಸರ್ವಾನ್ ತ್ಸರ್ವಾನ್ ಕಾಮಾನವಾವ ಕಾಮಾನ್ ತ್ಸರ್ವಾನ್ ತ್ಸರ್ವಾನ್ ಕಾಮಾನವಾವ | ಕಾಮಾನವಾವ ಕಾಮಾನ್ ಕಾಮಾ ನವರುಂಧತೇ ರುಂಧತೇವ ಕಾಮಾನ್ ಕಾಮಾ ನವರುಂಧತೇ | ಅವರುಂಧತೇರುಂಧತೇ ವಾವರುಂಧತೇ | ರುಂಧತ ಇತಿ ರುಂಧತೇ |

|| ಶ್ರೀ ಕೃಷ್ಣಾರ್ಪಣ ಮಸ್ತು ||

ನಮ್ಮ ತುಪ್ಪೆಕ್ಕಲ್ಲು ಭಾವಂದ್ರು ಮೇಗಾಣ ಘನ ಹೇಳಿದ್ದದು ಕೇಳ್ಳೆ –
GHANA by chennai bhaava

 

 

'ಘನ', 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. Dr Pradeep
  dr pradeep

  ನಿಂಗಳ ಶ್ರಮ ಮೆಚ್ಚೆಕ್ಕಾದ್ದು. ಧನ್ಯವಾದ

  [Reply]

  VA:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋರ ಪ್ರೀತಿಯ ಒಪ್ಪಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 3. ಶ್ರೀಹರ್ಷ ಭಟ್ (ಸಾಹಸಿ)
  ಹರ್ಶ

  ಮಂತ್ರವ save ಮಾಡುದು ಹೆಂಗೆ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಸದ್ಯಕ್ಕೆ ಬೈಲಿಲಿ ಬಂದು ಕೂದು ಕೇಳುಲೆ ಮಾತ್ರ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮಯೇನಂಕೂಡ್ಳು ಅಣ್ಣಶರ್ಮಪ್ಪಚ್ಚಿಮಂಗ್ಳೂರ ಮಾಣಿಶೇಡಿಗುಮ್ಮೆ ಪುಳ್ಳಿನೀರ್ಕಜೆ ಮಹೇಶವೆಂಕಟ್ ಕೋಟೂರುಕೇಜಿಮಾವ°ಕಜೆವಸಂತ°ದೊಡ್ಡಭಾವvreddhiವಿಜಯತ್ತೆಡೈಮಂಡು ಭಾವಬಂಡಾಡಿ ಅಜ್ಜಿದೀಪಿಕಾಅಜ್ಜಕಾನ ಭಾವದೊಡ್ಮನೆ ಭಾವನೆಗೆಗಾರ°ಡಾಗುಟ್ರಕ್ಕ°ವೇಣಿಯಕ್ಕ°ಅನಿತಾ ನರೇಶ್, ಮಂಚಿಜಯಶ್ರೀ ನೀರಮೂಲೆಕೊಳಚ್ಚಿಪ್ಪು ಬಾವಚುಬ್ಬಣ್ಣಚೆನ್ನಬೆಟ್ಟಣ್ಣಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ