ಗುಡು ಗುಡು…ಗುಡು ಗುಡೂ ಹೇಳ್ತು…

ನಮ್ಮ ಜನಪದ ಸಾಹಿತ್ಯ ಹೇಳಿರೆ ಒಂದು ದೊಡ್ಡ ಸಾಗರ.
ಆ ಸಾಗರದ ಅಡಿಲಿ ಕತೆಗೊ, ಪದ್ಯಂಗೊ,ಗಾದೆಗೊ,ಒಗಟುಗೊ, ಕುಶಾಲುಗೊ ಹೀಂಗಿರ್ತ ಮುತ್ತು ರತ್ನಂಗೊ ಧಾರಾಳ ಇದ್ದು. ‘ಇದ್ದು’ ಹೇಳಿರೆ ಮುಗಾತೊ?
ಅದೆಲ್ಲ ನವಗೆ ಬೇಕು ಹೇಳಿ ಆದರೆ ಅದರ ಆಳಕ್ಕೆ ಮುಂಗಿ ಅಡೀಲಿ ಕೈಹಾಕಿ ಪರಡೆಕ್ಕು. ಧಾರಾಳ ಹೆರ್ಕಿ ತಪ್ಪಲಕ್ಕು.

ತಯಿಂದವು. ತುಂಬ ಜೆನ ಜನಪದ ವಿದ್ವಾಂಸರುಗೊ ಈ ಸಾಹಿತ್ಯಂಗಳ ಹೆರ್ಕಿ ತಂದು ವ್ಯವಸ್ಥಿತ ರೂಪಲ್ಲಿ ಸಂಗ್ರಹ ಮಾಡಿ ನವಗೆಲ್ಲ ಸಿಕ್ಕುವಾಂಗೆ ಮಾಡಿದ್ದವು.
ಗ್ರಂಥ-ಸೀಡಿ-ಕೇಸೆಟ್ಟುಗಳಲ್ಲಿ ಅದರ ತುಂಬುಸಿ ಮಡುಗಿದ್ದವು. ಕೆಲವು ನೆಟ್ಟಿಲ್ಲಿಯೂ ಇಕ್ಕು. ಆದರೆ ಹೀಂಗೆ ಹೆರ್ಕಿ ಸಂಗ್ರಹ ಮಾಡ್ಲೆ ಬಾಕಿ ಆದ ಕತೆಗಳೋ ಪದ್ಯಂಗಳೋ ಇನ್ನೂ ಎಷ್ಟೋ ಇಕ್ಕು.
ಆನು ಈಗ ಈ ವಿಷಯ ಎಂತಗೆ ಹೇಳಿದೆ ಹೇಳಿರೆ- ಎನಗೆ ಎನ್ನ ಹಿರೀರು ಹೇಳಿದ ಒಂದು ಸಣ್ಣ ಕತೆ ಪಕ್ಕನೆ ನೆಂಪಾತು.
ಅದು ಏವದಾರು ಪುಸ್ತಕಲ್ಯೋ ಮಣ್ಣೊ ದಾಖಲಾಯಿದೊ ಹೇಳ್ತ ಸಂಗತಿ ಎನಗೆ ಗೊಂತಿಲ್ಲೆ. ಅಥವಾ ಅದು ನಿಂಗೊಗೆ ಆರಿಂಗಾರು ಗೊಂತಿಪ್ಪ ಕತೆ ಆಗಿಪ್ಪಲೂ ಸಾಕು.
ಆದರೂ ಅದರ ಇಲ್ಲಿ ಒಂದಾರಿ ಹೇಳಿತ್ತೂಳಿ ಆದರೆ ಗೊಂತಿಪ್ಪವಕ್ಕೂ ಇನ್ನೊಂದಾರಿ ನೆಂಪು ಮಾಡಿದಾಂಗೆ ಅಕ್ಕನ್ನೆ ಹೇಳ್ತ ಉದ್ದೇಶ.

ಕತೆ ಹೇಳಿರೆ ಕತೆ.
ಹಾಂಗಾದ ಕಾರಣ- ಏವಗ? ಎಲ್ಲಿ? ಆರು? ಹೀಂಗಿರ್ತ ಪೆರಟ್ಟು ಪ್ರಶ್ನೆಗಳೆಲ್ಲ ಕೇಳ್ಳಾಗ. “ಒಂದಾನೊಂದು ಕಾಲಲ್ಲಿ ಒಂದಾನೊಂದು ಊರಿಲ್ಲಿ ಒಬ್ಬ” ಹೇಳಿ. ಅಷ್ಟೆ.

ಹಾಂಗೆ, ಒಂದಾನೊಂದು ಕಾಲಲ್ಲಿ ಒಂದಾನೊಂದು ಊರಿಲ್ಲಿ ಎಲ್ಲೆಲ್ಲಿಂದಲೋ ಅವರವರ ಕಾರ್ಯಕ್ಕೆ ಹೋದ ಮೂರು ಜೆನ ದಾರಿಹೋಕಂಗೊ ಒಂದು ಛತ್ರಕ್ಕೆ ಬಂದು ಸೇರಿದವಡ.
ಅಂಬಗಾಣ ಪರಿಸ್ಥಿತಿ ನವಗೆ ಕೇಳಿ ಗೊಂತಿದ್ದನ್ನೆ? ಎಷ್ಟೇ ದೂರದ ಪ್ರಯಾಣ ಆದರೂ ನೆಡದೋ ಎತ್ತಿನ ಗಾಡಿಲಿಯೋ ಮಣ್ಣೊ ಹೋಯೆಕ್ಕಷ್ಟೆ.
ಕಸ್ತಲಾದರೆ ನಿಂಬಲೆ ಲೋಡ್ಜುಗಳೋ ರೆಸೋರ್ಟುಗಳೋ ಇಲ್ಲೆ. ಊರಿನ ಆರಾರು ದೊಡ್ಡಕುಳಂಗೊ* ಕಟ್ಟುಸಿದ ಧರ್ಮಛತ್ರವೇ ಆಯೆಕ್ಕಷ್ಟೆ.

ಬೇಶ ತಿಂಗಳು. ಪತ್ತನಾಜೆ* ಹತ್ರಾಣ ದಿನ. ಬೆಶಿಲ ಗಾವು, ಧೂಳು-ಧಗೆಲಿ ನೆಡದು ಮೂರ್ಸ್ಸಂದಿ ಅಪ್ಪಗ ಛತ್ರಕ್ಕೆ ಎತ್ತಿದವು.
ಅವರವರ ಮಾರಾಪುಗಳ ಕರೇಲಿ ಮಡುಗಿಕ್ಕಿ ಬಾವಿಂದ ನೀರೆಳದು ಚೊಕ್ಕಕೆ ಮೈ ಕೈ ತೊಳಕ್ಕೊಂಡವು. ಸೌ…ಖ್ಯ ಆತು! ಬಚ್ಚಲು ಅರೆವಾಶಿ ತಗ್ಗಿತ್ತು!
ಇನ್ನು ಪ್ರಯಾಣ ಮುಂದರ್ಶುದು ಹೇಂಗೂ ನಾಳೆ ಉದಿಯಾದ ಮತ್ತೇ. ಅಷ್ಟನ್ನಾರ ನಮ್ಮ ಹಾಂಗೇ: ನಮ್ಮೊಟ್ಟಿಂಗೇ ನಿಂಬವರ ಪರಿಚಯ ಮಾಡಿಯೋಳದ್ರೆ ಅಕ್ಕೋ?
ಮೂರು ಜೆನವೂ ಪರಸ್ಪರ ಪರಿಚಯ ಮಾಡಿಯೊಂಡವು. ಮಳೆ-ಬೆಳೆ; ಆಳು-ಕಾಳು ಲೋಕ ವಿಚಾರಂಗಳ ಬಗ್ಗೆ ಹನಿಯೋತ್ತ* ಮಾತಾಡಿಯೊಂಡವು.

ಇರುಳಾತು. ಹೊಟ್ಟೆಯೂ ನೆಂಪು ಮಾಡಿತ್ತು. ಕಟ್ಟಿಂಡು ಬಂದ ಬುತ್ತಿ ಹತ್ತರೇ ಇಪ್ಪಗ ಬೇರೆ ಆಲೋಚನೆ ಮಾಡೆಕ್ಕಾದ ಅಗತ್ಯ ಇಲ್ಲೆನ್ನೆ?! ಅವ್ವವು ತಂದ ಬುತ್ತಿ ಕಟ್ಟಂಗಳ ಬಿಡುಸಿ ಉಂಡವು.
ಇವನ ಕುಣಿಯ ಅವಂಗೆ: ಅವನ ಪಂಚೊಳ್ಳಿ ಆಚವಂಗೆ- ಹೀಂಗೆ ಅತ್ತು ಇತ್ತು ಹಂಚಿಂಡು ಎಲೆಯೂ ತಿಂದವು..
ಆ ಉಲ್ಲಾಸಲ್ಲಿ ಮತ್ತೊಂದಷ್ಟು ಹೊತ್ತು ಪಟ್ಟಾಂಗ ಹೊಡದವು.. ಹನಿಯೋತ್ತು ಕಳುದಪ್ಪಗ “ಇನ್ನು ಮನುಗುವನೊ?” ಕೇಳಿದ ಒಬ್ಬ. “ಸರಿ” ಹೇಳಿ ಆತು.
ಮೂರು ಜೆನವುದೆ ಹತ್ತರತ್ತರೆ ಸಾರೀಟ* ಮನುಗಿದವು. ಮನುಗಿದು ಮಾಂತ್ರ- ಆರಿಂಗು ಒರಕ್ಕು ಬಯಿಂದಿಲ್ಲೆ.
ಈ ಸೆಖೆಗೆ ಅಷ್ಟು ಪಕ್ಕ ಒರಕ್ಕು ಬಕ್ಕೊ? ಎಲ್ಲರು ಅವರವರಷ್ಟಕೆ ಸ್ವಂತ ವಿಚಾರಂಗಳ, ಸಮಸ್ಯೆಗಳ ನೆಂಪು ಮಾಡಿಂಡು ಮನುಗಿಂಡು ಇದ್ದವು. ಕರ್ಗಾಣ ಕಸ್ತಲೆ..
ಆಕಾಶಲ್ಲಿ ಮೋಡವೂ ತುಂಬಿದ್ದೊ ಸಂಶಯ.. ದೂರಲ್ಲಿ ಸಣ್ಣಕೆ ಗುಡುಗುದೂ ಕೇಳ್ತು..ಅಪ್ಪೊ ಅಲ್ಲದೊ ಹೇಳಿ ಮಿಂಚುದೂ ಕಾಣ್ತು..

ಅಷ್ಟಪ್ಪಗ ಈ ಕರೇಲಿ ಮನುಗಿದವಂಗೆ ಪಾಪ, ಹೊಟ್ಟೆಲಿ ಎಂತದೋ ರಜ ಸಂಕಟ ಸುರುವಾತು.
ಮದ್ಯಾನ್ನ ಎಲ್ಯಾರು ಜೆಂಬ್ರ ಊಟ ಉಂಡದು ಹೆಚ್ಚು ಕಮ್ಮಿ ಆತೊ ಏನೊ- ಹೊಟ್ಟೆ ಉಬ್ಬರ್ಸಿದಾಂಗೆ ಅಪ್ಪಲೆ ಸುರುವಾತು.
ಅವ ಮೆಲ್ಲಂಗೆ ಹೊಟ್ಟೆ ಉದ್ದಿಗೊಂಡು ಅವನಷ್ಟಕ್ಕೇ ಹೇಳುವಾಂಗೆ ಸಣ್ಣ ಸ್ವರಲ್ಲಿ “ಗುಡು ಗುಡು.. ಗುಡು ಗುಡೂ ಹೇಳ್ತಪ್ಪ..” ಹೇಳಿದ.
ಅವನ ಹತ್ತರೆ ಮನುಗಿಂಡಿದ್ದವಂಗೆ ಇದು ಕೇಳಿತ್ತು. ಅವನುದೆ ಸಣ್ಣಕೆ ಹೇಳಿದ- “ಹೇಳುದು ಮಾಂತ್ರ, ಬತ್ತಿಲ್ಲೆನ್ನೆ…?!!
ವಿಷಯ ಎಂತರ ಹೇಳಿರೆ, ಅವನ ಕೆರೆಲಿ ನೀರು ಪೂರ ಆರಿ ತೋಟಕ್ಕೆ ಒಳ್ಳೆತ ಕಾಚಲು ಬಡುದ್ದು. ಮಳೆ ಏವಗ ಬತ್ತು ಹೇಳಿ ಕಾಯ್ತಾ ಇದ್ದ. ದಿನಾಗಿಲು ಮುಗಿಲು ಹಾಕುತ್ತು: ಗುಡುಗು ’ಗುಡು ಗುಡು’ ಹೇಳ್ತು. ಮಳೆ ಮಾಂತ್ರ ಬತ್ತಿಲ್ಲೆ!!
ಅದನ್ನೆ ಚಿಂತೆ ಮಾಡಿಂಡು ಮನುಗಿಂಡಿದ್ದವಂಗೆ ಸುರೂವಾಣವ ಹೇಳಿದ್ದು ಅದೇ ವಿಷಯ ಜಾನ್ಸಿ ಹೀಂಗೆ ಉದ್ಗಾರ ತೆಗದ್ದು!

ಎರಡ್ನೆಯವ ಹೇಳಿದ್ದು ಮೂರನೆಯವಂಗೆ ಕೇಳಿತ್ತು. ಅವ- “ಏ… ಅದು ಬಾರ. ಬಪ್ಪೋಳು ಆಗಿದ್ದರೆ ಮಾಣಿಯನ್ನೂ ಕರಕ್ಕೊಂಡು ಹೋವ್ತಿತ್ತು..” ಹೇಳಿ ಹೇಳಿದ!
ಅವನ ಕತೆ ಎಂತರ ಗೊಂತಿದ್ದೊ? ಎಂತದೋ ವಿಷಯಕ್ಕೆ ಲಡಾಯಿ ಆಗಿ ಅವನ ಹೆಂಡತಿ ಕೋಪುಸಿಂಡು ಅದರ ಅಪ್ಪನ ಮನೆಗೆ ಹೋಯಿದು. ಹೋಗಿ ದಿನ ಸುಮಾರಾತು.
ಕೋಪ ಕಮ್ಮಿ ಆಗಿ ಮನೆಗೆ ವಾಪಾಸು ಬಕ್ಕೊ ಏನೊ ಹೇಳ್ತ ಸಣ್ಣ ಆಶೆ ಇವಂಗೆ. ಅದೇ ವಿಷಯ ಇವನ ತಲೆಲಿ ಸುತ್ತುತ್ತಾ ಇದ್ದು!
ಆದರೆ ಅದು ಸಣ್ಣ ಮಾಣಿಯನ್ನು ಕೂಡ ಬಿಟ್ಟಿಕ್ಕಿ ಹೋದಕಾರಣ ಅದು ಪುನ; ಬಕ್ಕು ಹೇಳ್ತ ಪೂರ ಧೈರ್ಯವೂ ಇಲ್ಲೆ!!

****

ಹೀಂಗೆಲ್ಲ ಕತೆ..
ಗೊಂತಾತಿಲ್ಯೊ..?
ಅವರವರ ಭಾವಕ್ಕೆ ತಕ್ಕಾಂಗೆ’ ಹೇಳ್ತಿಲ್ಯೊ, ಅದಕ್ಕೆ ಇದೇ ದೃಷ್ಟಾಂತ ಅಕ್ಕು, ಅಲ್ಲದೊ?

****

ಅಷ್ಟಪ್ಪಗ ಅದ.., ಎನ್ನ ಹೆಂಡತಿಯೂ ಒಂದಾರಿ ಕೋಪುಸಿಂಡು ಅಪ್ಪನ ಮನೆಗೆ ಹೆರಟ ಸಂಗತಿ ನೆಂಪಾತು!
ಅದರ ಇನ್ನೊಂದಾರಿ ಹೇಳ್ತೆ- ಈಗ ಕತೆ ಹೇಳಿಂಡು ಕೂದರೆ ನಮ್ಮ ಕತೆ ಕೈಲಾಸ ಅಕ್ಕು!
ತ್ರೀಪೇಸು* ಆಗಳೆ ಬಯಿಂದಡ. ಹೋಗಿ ಸುಚ್ಚು ಹಾಯಿಕ್ಕಿ ಬತ್ತೆ. ಕಾಂಬೊ ಇನ್ನೊಂದಾರಿ…

ಸೂ:

 • ದೊಡ್ಡ ಕುಳ = ಶ್ರೀಮಂತರು
 • ಪತ್ತನಾಜೆ = ಮೇಷ ತಿಂಗಳ ಹತ್ತನೇ ದಿನ
 • ಹನಿಯೋತ್ತ = ಹನಿಯ + ಹೊತ್ತು – ರಜ್ಜ ಹೊತ್ತು
 • ಸಾರೀಟ = ಉದ್ದಕೆ
 • ತ್ರೀಪೇಸು = Three Phase – ಮೂರು ವಯರಿಲಿಯೂ ಕರೆಂಟು ಬಪ್ಪಗ ಹಳ್ಳಿಗಳಲ್ಲಿ ಪಂಪು ಸುಚ್ಚುಹಾಕುದು.

ಸುಭಗ

   

You may also like...

40 Responses

 1. Mohananna says:

  ಸುಭಗಣ್ಣೋ ಹೇಮಾರ್ಸಿ ಮಡಗಿದ್ದದೇನೋ ಇದ್ದು ಆದರೆ ಅದು ಸುಮಾರು ಪೊದಿಕ್ಕೆಯೊಳ ಆಗಿ ಬೇಗ ಹೆರ ತೆಗವಲೆ ಎಡಿತ್ತಿಲ್ಲೇನೇ.ನೋಡುವೊ೦ ಮೆಲಾ೦ಗೆ ನಿ೦ಗಳದ್ದೆಲ್ಲ ನೋಡಿಯ್ಒ೦ಡು ಪ್ರಯತ್ನ ಪಡುವೊನ್.ಒಪ್ಪ೦ಗಳೊಟ್ಟಿ೦ಗೆ

 2. shivakumar says:

  ಕತೆ ಲಾಯ್ಕಗ್ಯದೆ. ಕುಮಾರ ಮಡಿಕೇರಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *