ಹಾಳೆಚೋಲಿಲಿ ಹೂಗರಳಿತ್ತು!

July 2, 2011 ರ 9:30 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಅಡಕ್ಕೆ ಹಾಳೆಯ ಹಲವು ಉಪಯೋಗಂಗಳ ಬಗ್ಗೆ ನಾವು ಅಂದೇ ಒಪ್ಪಣ್ಣ ಹೇಳಿದ ಶುದ್ದಿ ಕೇಳಿದ್ದು. (http://oppanna.com/oppa/hale-tattenda-hale-patra)
ಹಾಳೆ ಮಾತ್ರ ಅಲ್ಲ, ಹಾಳೆ ಚೋಲಿಯೂ ಉಪಯೋಗಕ್ಕೆ ಬತ್ತು. ಅದರಲ್ಲಿ ಚೆಂದದ ಹೂಗು ಮಾಡುಲಾವುತ್ತು.
ಮಾಡುದು ಹೇಂಗೇಳಿ ನೋಡುವ.
ಇದಕ್ಕೆ ಬೇಕಪ್ಪದು:
 • ಹಾಳೆ ಚೋಲಿ
 • ಪೈಂಟುಗೊ, ಬ್ರೆಶ್ಶುಗೊ
 • ಕತ್ತರಿ
 • ಒಂದು ಬಳೆ
 • ನೂಲುಂಡೆ
 • ಕೆಮಿ ಕ್ಲೀನು ಮಾಡ್ತ ಈಯರು ಬಡ್ಡು
 • ಕರಟವೊ ಅತವಾ ಬೇರೆಂತಾರು, ಹೂಗಿನ ಮಡುಗುಲೆ ಹೂದಾನಿ.
ಹೀಂಗೆ ಮಾಡಿ:
ಮೊದಾಲಿಂಗೆ ತೋಟಂದ ಲಾಯ್ಕದ ಅಡಕ್ಕೆ ಹಾಳೆ ಸಂಗ್ರಹಿಸೇಕು.
ಹಸಿ ಹಾಳೆಯ ಚೋಲಿ ಸುಲಾಬಲ್ಲಿ ತೆಗವಲೆ ಬತ್ತಿದಾ; ಅಜ್ಜಿಯತ್ರ ಹೇಳಿರೆ ಲಾಯ್ಕಕ್ಕೆ ತೆಗದು ಕೊಡ್ತವು 😉
ಈಗ ಮಳೆಗಾಲಲ್ಲಿ ಮಾತ್ರ ಹಿಸ್ಕು ಇಪ್ಪದುದೇ ಇದ್ದು, ಸರಿ ನೋಡಿಗೊಳ್ಳೆಕ್ಕಾವುತ್ತು.
ಆ ಚೋಲಿಯ ಒಂದು ರಜ್ಜ ಒಣಗ್ಸೆಕ್ಕು – ತುಂಬ ಒಣಗುಲಾಗ.
ಅದರ ಮೇಲೆ ಬಳೆ ಮಡುಗಿ  ಒಂದು ಉರುಟು ಬಿಡ್ಸೆಕ್ಕು  ಪೆನ್ಸಿಲಿಲಿ. ಆ ಉರುಟಿನ ಕತ್ತರ್ಸಿ ತೆಗೆಯೆಕ್ಕು. (zig-zak ಕತ್ತರಿ ಇದ್ದರೆ ಅದ್ರಲ್ಲಿ ಕತ್ತರ್ಸಿರೆ ಲಾಯ್ಕಾವುತ್ತು)
ಮತ್ತೆ ಅದಕ್ಕೆ ಬೇಕಾದ ಬಣ್ಣ ಕೊಟ್ಟು, ನಡುಕೆ ಒಂದು ಸಣ್ಣ ಒಟ್ಟೆ ತೆಗದು ಬಿಡೆಕ್ಕು. ನಮ್ಮ ಎಸಳು ತಯಾರಾತೀಗ.
ಇನ್ನು ತೊಟ್ಟಿಂಗೆ – ಈಯರ್ ಬಡ್ಡಿನ ಅರ್ದ ತುಂಡು ಮಾಡಿರೆ ಅದ್ರಲ್ಲಿ ಎರಡು ತೊಟ್ಟು ಮಾಡ್ಳಕ್ಕು.
ಅದ್ರಲ್ಲಿಪ್ಪ ಹತ್ತಿಯ ಭಾಗ ಹೋಗಿನ ಕುಸುಮದ ಹಾಂಗೆ. ಬೇಕಾದರೆ ಅದಕ್ಕು ಬಣ್ಣ ಕೊಡ್ಳಕ್ಕು.
ಉರುಟು ಹಾಳೆ ಎಸಳಿನ ಈ ಕಡ್ಡಿಯ ಒಳ ಸುರುದು ನೂಲಿಲಿ ಕಟ್ಟೆಕ್ಕು. ಒಂದೇ ಸಾಕಾದರೆ ಸಾಕು, ಇಲ್ಲದ್ರೆ ಇನ್ನೊಂದು ಎಸಳುದೇ ಕಟ್ಳಕ್ಕು, ರಜ ಸಣ್ಣದು ಮಾಡಿ.
ಅದಾ ಹಾಳೆ ಚೋಲಿಲಿ ಚೆಂದದ ಹೂಗರಳಿತ್ತು!
ಬೇಕಾದಷ್ಟು ಹೂಗುಗಳ ಮಾಡಿ, ಒಂದು ಕರಟಲ್ಲಿಯೋ ಅತವಾ ಬೇರೆ ಯಾವ್ದಾರೂ ಹೂಕುಂಡಲ್ಲಿ ಜೋಡಣೆ ಮಾಡಿ ಮಡುಗಿರೆ ನೋಡ್ಳೆ ಚೆಂದ.
ಹೇಳಿದಾಂಗೆ, ಈ ಹೂಗು ತುಂಬ ಸಮಯ ಒಳಿಯೆಕ್ಕಾದರೆ ಅದಕ್ಕೆ woodfin ಮಣ್ಣ ಕಿಟ್ಟಿ ಮಡುಗಿರೆ ಒಳ್ಳೆದಾವುತ್ತು. :-)
ಮಾಡಿನೋಡಿ, ಹೇಂಗಾಯಿದು ಹೇಳಿ ಆತಾ?
~*~*~
ಆನು ಮೊನ್ನೆ ಮಾಡಿಪ್ಪಗ ತೆಗದ ಪಟಂಗೊ ಇಲ್ಲಿದ್ದು:
ಹಾಳೆಚೋಲಿಲಿ ಹೂಗರಳಿತ್ತು!, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಕಲಾವಿದನ ಕೈಗೆ ಬಂಡೆಕ್ಕಲ್ಲಿಂದ ಹಿಡುದು ಮರದ ಬೇರು ಸಹಿತ ಹಾಳೆ ಬಾಳೆ ಕುಂಬಾಳೆಯೂ ಕಥಾವಸ್ತು ಆವ್ತಪ್ಪೋ. ಸಿಕ್ಕಿರೆ ಬೋಸ ಭಾವನ ಹಳೆ ಅಂಗಿಯನ್ನೂ ಬಿಡ ಅಲ್ಲದೋ.

  ಅಪ್ಪೋ ಅಕ್ಕೋ ., ಹೆಮ್ಮಕ್ಕೊಗೆ ಅಂತೇ ಚಂದಕ್ಕೆ ಹಾಕಲೆ ಕೆಮಿಗೆ ಮೂಗಿಂಗೆ ಕೊರಲಿನ್ಗೆ ಕೈಗೆ ಇತ್ಯಾದಿ ಇದರಿಂದ ತಯಾರು ಮಾಡ್ತ ಕ್ರಮ ಸುರುವಕ್ಕೋ. ಗಾಜಿನ ಬಳೆ ಒಡೆತ್ತು, ಪ್ಲಾಸ್ಟಿಕ್ ಬಳೆ ಹಳೆ ಪಾಶನ್ ಆತು. ರಬ್ಬರು ಬಳೆ ಬಯಿಂದೋ ಗೊಂತಿಲ್ಲೆ. ನಿಂಗಳ ಈ ಇಕ್ಣೀಸು ಏನಾರು ಉಪಯೋಗ ಆಗಿಕ್ಕುಗೋ. ಸ್ವೋದ್ಯೋಗ ಯೋಜನೆ ಹೇಳಿ ಸರಕಾರ ನೆರವು ಕೊಡುಗೊ. ಉಮ್ಮಾ, ಗುಣಾಜೆ ಮಾಣಿಯೋ, ವಜ್ರಾಂಗಿ ಸೂರ್ಯಣ್ಣನೋ ಥಿಂಕ್ ಮಾಡಿರಕ್ಕಾಯ್ಕು

  ಒಳ್ಳೆ ಕುಶಲತೆ, ಆಸಕ್ತಿ . ಚೆಂದ ಆಯ್ದು ಹೇಳಿ ನಮ್ಮ ಒಪ್ಪ. ಶುಭವಾಗಲಿ.

  [Reply]

  ಬೋಸ ಬಾವ

  ಬೋಸ ಬಾವ Reply:

  ಅಪ್ಪುಳಿ..!! ಎನ್ನ ಹಳೇ ಅ೦ಗಿಯ “ನೆಗೆ ಮಾಣಿ” ಹೇಳುವ ಕಲೆಗಾರ ಈಗ ನೆಲಕ್ಕ ಉದ್ದುಲೆ ಹಾಕಿದ್ದ.. :)
  ಈಗ ಕಲೆ ಉದ್ದುಲೆ ಕಲೆಗಾರ ಉಪಯೋಗಿಸುತ್ತಾ… 😉

  [Reply]

  VN:F [1.9.22_1171]
  Rating: 0 (from 0 votes)
  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದಂಗೊ ಚೆನ್ನಯಿಯಣ್ಣಂಗೆ. :)
  ಅದಾ ಇಂದು ಒಳ್ಳೆ ಐಡಿಯ ಸಿಕ್ಕಿತ್ತು. ಹೆಮ್ಮಕ್ಕೊಗೆ ಹಾಕುಲಲ್ಲದ್ರೂ ಚೆಂದಕ್ಕೆ ಮಡುಗುಲಾದರೂ ಮಾಡ್ಳಕ್ಕೊ ಹೇಳಿ. ಪ್ರಯತ್ನ ಮಾಡುವೊ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಪ್ಲಾಸ್ಟಿಕ್ ಉಪಯೋಗಿಸಿ ಹೂಗು ಮಾಡುದರಂದ ಇದು ಎಷ್ಟೋ ಒಳ್ಳೆದು.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  :)

  [Reply]

  VA:F [1.9.22_1171]
  Rating: 0 (from 0 votes)
 3. Harish kevala

  Chenda aiduu…

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದಂಗೊ :)

  [Reply]

  VA:F [1.9.22_1171]
  Rating: 0 (from 0 votes)
 4. ದೀಪಿಕಾ
  ದೀಪಿಕಾ

  ಹೂಗುಗ ಚೆ೦ದ ಆಯ್ದು ಅನುಶ್ರಿ ಅಕ್ಕ.
  ear bud ನ ಬದಲು pollen ಹೇಳಿ ಸಿಕ್ಕುತ್ತಲ್ದ ಅದರ ಬ೦ಚ್ ಮಾಡಿ ಕಟ್ಟಿರೆ ಇನ್ನೂ ಚೆ೦ದ ಅಕ್ಕಾ ಹೇಳಿ ಅ೦ಸಿತ್ತು.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಹಾ ಹಾಂಗೂ ಮಾಡ್ಳಕ್ಕು. ಸಲಹೆಗೆ ಧನ್ಯವಾದಂಗೊ. ನಿಂಗಳೂ ಕರಕುಶಲಲ್ಲಿ ಕೈ ಆಡ್ಸಿದಾಂಗಿದ್ದು. ಎಂತಾರು ಹೊಸತ್ತು ಗೊಂತಿದ್ದರೆ ಎಂಗೊಗೂ ತಿಳುಶಿಕೊಡಿ. :)

  [Reply]

  VA:F [1.9.22_1171]
  Rating: +1 (from 1 vote)
 5. ಲಕ್ಷ್ಮಿ ಭಟ್ಟ

  ಹೂ ಮಾಡಿದ್ದು ಚ೦ದ ಆಯ್ದು…ಎಷ್ಟ್ ವರ್ಷ ಇಟ್ರೂ ಬಾಡ್ತಿಲ್ಲೆ, ಹಾಳಾಗ್ತಿಲ್ಲೆ..ಆ ಹೂವಿಗೆ ಇನ್ನೂ ಒ೦ದೆರಡು ಚಿಕ್ಕ ಎಸಳು ಮಾಡಿದ್ರೆ ಇನ್ನೂ ಚ೦ದ..(ನ೦ಗೆ ಅನಿಸ್ತು)

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಖಂಡಿತ ನಿಂಗೊಗೆ ಚಂದ ಕಾಂಬ ಹಾಂಗೆ ಮಾಡಿ, ಚಂದಕ್ಕೆ ಮಡುಗಿ.
  ಧನ್ಯವಾದಂಗೊ. :)

  [Reply]

  VA:F [1.9.22_1171]
  Rating: 0 (from 0 votes)
 6. ಕೇಶವ ಕುಡ್ಲ
  keshava kudla

  ಅಡಿಕೆ ಹಾಳೆ ಚೋಲಿಲಿ ಹೂ ನೋಡಿ ಕೋಶಿ ಆತು. ನೋಡಲೇ ಭಾರಿ ಚಂದ.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದಂಗೊ. :)

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಮಾವ

  ಹಾಳೆಯ ಹಾಳು ಮಾಡದ್ದೆ ಹೂಗರಳಿಸಿದ್ದು ಲಾಯಕಾಯಿದು. ಕಸಂದ ರಸಕ್ಕೆ ಮತ್ತೊಂದು ಸೇರ್ಪಡೆ ಇದು. ತೋರುಸಿಕೊಟ್ಟ ಅನುಶ್ರೀಗೆ ಧನ್ಯವಾದಂಗೊ.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದಂಗೊ ಬೊಳುಂಬುಮಾವ. :)

  [Reply]

  VA:F [1.9.22_1171]
  Rating: 0 (from 0 votes)
 8. ನೆಗೆಗಾರ°

  ಅಜ್ಜಿ ಮಳೆಗಾಲಕ್ಕೆ ಬೇಕು ಹೇಳಿ ಮಡುಗಿದ ಹಾಳೆಯ ಪೂರ ಹೀಂಗೆ ಮುಗುಶಿರೆ ಅಕ್ಕ?
  ಆನು ಮಾಡ್ತಿಲ್ಲೆ ಹೀಂಗಿಪ್ಪದು, ಪಾಪ ಅಜ್ಜಿಗೆ ತೊಂದರೆ ಕೊಡ್ಳಾಗ ನಾವು! 😉

  [Reply]

  ಸುಭಗ

  ಸುಭಗ Reply:

  ‘ಮಾಷ್ಟ್ರುಮಾವನತ್ರಂಗೆ ಇಂಗ್ಲೀಶು ಕಲಿವಲೆ ಹೋಪಗ ಬೆನ್ನಿಂಗೆ ಕಟ್ಟಿಯೊಂಬಲೆ ಬೇಕು’ ಹೇಳಿ ಬಾಯಿಬಿಟ್ಟು ಹೇಳ್ಳಾಗದೋ ನಿನಗೆ? ಅಜ್ಜಿ ಮೇಗೆ ಭಾರಿ ಪಾಪ ಪುಣ್ಯ ತೋರ್ಸುತ್ತ!

  ಅನು ಅಕ್ಕಾ, ನೆಗೆಮಾಣಿ ಎಂತಬೇಕಾರು ಹೇಳ್ಳಿ. ಅವ ಹೇಳಿದ ಹೇಳಿ ನಿಂಗೊ ಹೀಂಗಿಪ್ಪದರ ಮಾಡದ್ದೆ ಕೂರೆಡಿ. ಲಾಯ್ಕಾಯ್ದು. ಪಷ್ಟಾಯ್ದು. ಮತ್ತೆ ಆ ರಜಾ ಕುಜುಂಬಟೆ ನಮೂನೆ ಅಡಕ್ಕೆಸೊಪ್ಪು ಇರ್ತನ್ನೆ- ಅದಕ್ಕೂ ಬಣ್ಣ ಗಿಣ್ಣ ಕೊಟ್ಟು ಚೆಂದದ ಹೂಗಿನಾಂಗೆ ಮಾಡ್ಳೆ ಎಡಿತ್ತಡ. ನಿಂಗಳೂ ಮಾಡಿನೋಡಿ. ಪಟ ತೆಗದು ಬೈಲಿಂಗೆ ಹಾಕಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕನೀರ್ಕಜೆ ಮಹೇಶವಿಜಯತ್ತೆಕಾವಿನಮೂಲೆ ಮಾಣಿಸಂಪಾದಕ°ಜಯಗೌರಿ ಅಕ್ಕ°ಪೆರ್ಲದಣ್ಣಹಳೆಮನೆ ಅಣ್ಣಅಕ್ಷರ°ಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಎರುಂಬು ಅಪ್ಪಚ್ಚಿಪಟಿಕಲ್ಲಪ್ಪಚ್ಚಿಬೊಳುಂಬು ಮಾವ°ಬೋಸ ಬಾವದೊಡ್ಡಭಾವಅಡ್ಕತ್ತಿಮಾರುಮಾವ°ಶರ್ಮಪ್ಪಚ್ಚಿಚುಬ್ಬಣ್ಣಪುತ್ತೂರುಬಾವಪ್ರಕಾಶಪ್ಪಚ್ಚಿಅಕ್ಷರದಣ್ಣಚೆನ್ನೈ ಬಾವ°ಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ