Oppanna.com

ಮನಸ್ಸು – ಮದ್ದು

ಬರದೋರು :   ಪುಟ್ಟಬಾವ°    on   21/09/2010    20 ಒಪ್ಪಂಗೊ

ಪುಟ್ಟಬಾವ°

ಇನ್ನು ಮದ್ದು ಬಿಡದ್ದರೆ ಆಗ ಮಗಾ!!!
ಕೆಳಣ ಮನೆ  ಶಂಕರಣ್ಣನಲ್ಲಿ ಕೊಳೆ ರೋಗ ಬೈಂದು…!
ಚೂರು ಸಮಯ ಕಳದರೆ ನಮ್ಮ ತೋಟಕ್ಕೂ ಬಕ್ಕು! ಹೇಂಗಾರು ಮಾಡಿ ಬೆಳಿಕ್ಕಿರಿ ಇಪ್ಪಗ ಮದ್ದು ಬಿಡೆಕ್ಕು ಪುಟ್ಟ!!

ಆನು ಊರಿಂಗೆ ಹೋದ ಕೂಡ್ಲೆ ಅಪ್ಪ ಸುರು ಮಾಡಿದ್ದು ಮದ್ದು ಬಿಡುವಲ್ಲಿಂದಲೇ!
ಯಬ್ಬಾ!! ಈ ಬೆಂಗ್ಳೂರಿನ ಟೆನ್ಶನ್ ಎಲ್ಲ ಮರದು, ಊರಿಲಿ ನಾಲ್ಕು ದಿನ ರೆಶ್ಟು ತೆಕ್ಕೊಂಬ ಹೇಳಿ ಗ್ರೇಶಿರೆ….ಎಲ್ಲಾ ಪ್ಲಾನು ಹಾಳಾತು!!!!
ಮಗ ಹೇಂಗಾರು ಇದ್ದ, ತೋಟದ್ದು ಎಲ್ಲಾ ಕೆಲಸ ಮುಗುಶಲಕ್ಕು ಹೇಳಿ ಅಪ್ಪಂದು ಪ್ಲಾನು ಇದಾ!!!
“ಸರಿ ಬಿಡಿ, ಎಲ್ಲಾ ಮಾಡುವ ” ಹೇಳಿದೆ ಆನು; ಅಂಗಡಿ ಪ್ರಸಾದಂಗೆ ಹೇಳಿ ಸುಣ್ಣ, ಮೈಲುತುತ್ತು ತರ್ಸಿ ಆತು.!
* * * *
ಎಲ್ಲರ ಬಾಯಿಲಿ ಒಂದೆ ಮಾತು..” ಇನ್ನು ಇನ್ನು ಕೃಷಿ ಕಷ್ಟ ಬಾವ!!! ಕೆಲಸದವ್ವೇ ಇಲ್ಲೆ! ಹೀಂಗೆ ಆದರೆ ಜಾಗೆ ಮಾರಿಕ್ಕಿ ಪೇಟೆಲಿ ಕೂರೆಕ್ಕಷ್ಟೆ!!”
ಎಂತರ ಮಾಡುದು; ಚೂರು ಓದಿದ ನಾಯ್ಕಂಗೊಕ್ಕೆ, ಹೊಲೆಯರಿನ್ಗೆ ಗವರ್ಮೆಂಟು ಕೆಲಸ ಕೊಡ್ತು!
ಅವರ ಕೆಳ ನಾವು ಕೆಲಸ ಮಾಡುವ ಪರಿಸ್ಥಿತಿ ಇಪ್ಪಗ ಅವು ನಮ್ಮಲ್ಲಿಗೆ ಕೆಲಸಕ್ಕೆ ಬಪ್ಪದು ಅಷ್ಟ್ರಲ್ಲೆ ಇದ್ದು…
ಇನ್ನು ನಾವೇ ಸ್ವತಃ ಮಾಡುವ ಹೇಳಿರೆ – ಪಾಪ!! ಎರಡೇ ದಿನಕ್ಕೆ ಮೈ ಕೈ ಬೇನೆ ಎಲ್ಲಾ ಸುರು ಆತು, ಎಂತ ಮಾಡುದು ಹೇಳಿ ಎಲ್ಲರಿಂಗೂ ತಲೆ ಬೆಶಿ ಇದಾ!
ಇನ್ನು ಇಪ್ಪ ಕೆಲವು ಕೆಲಸದವು ಭಯಂಕರ ಬ್ಯುಸಿ!!!. ಅವಕ್ಕೆ ಪಶ್ಟಿಂಗೆ ಅವರ ಬಾಗಿಲಿಂಗೆ ಹೋಗಿ ಹೇಳೆಕ್ಕು!
ಮಧ್ಯಾಹ್ನ ಮೇಲೆ ತೀರ್ಥ ಕುಡುದು ಎಂತ ಮಾತಾಡ್ತವು ಹೇಳಿ ಅವಕ್ಕೇ ಗೊಂತಿರ್ತಿಲ್ಲೆ ,”ಎಲ್ಲೆ ಬರೊಡು!” ಹೇಳಿ ಹೇಳಿರೆ “ಆವು ಆವು” ಹೇಳಿ ತಲೆ ಆಡುಸುಗು!!. ಮರದಿನ ನೋಡಿರೆ ಒಬ್ಬಂದೂ ಪತ್ತೆಯೇ ಇಲ್ಲೆ.
ಅವಕ್ಕೆ ಹೇಳಿ ಚಾಯ, ತಿಂಡಿ ಎಲ್ಲ ಮಾಡಿದರೆ ನಾವೇ ತಿನ್ನೆಕ್ಕಷ್ಟೇ!!
ಕೆಲವು ಸರ್ತಿ ಮನೇಲಿಯೇ ಕೂದುಗೊಂಡಿದ್ದರೂ  “ಆಪೆದ ಇಲ್ಲಡ್ ಬೇಲೆ ಉಂಡು,  ಗೊಬ್ಬರ ತುಂಬ್ಯರ ಉಂಡು” ಹೇಳಿ ಲೊಟ್ಟೆ ಹೇಳುಗು!  ಇನ್ನು ಅವರ ಬೈದರೆ ಮತ್ತೆ ಬಪ್ಪಲೇ ಬಾರವು!!
ಬಂದರೂದೆ ಅವಕ್ಕೆ ಚಾಯ, ಊಟ, ರೆಸ್ಟು…ಇದಕ್ಕೆ ಅರ್ಧ ದಿನ, ಇನ್ನು ಅರ್ಧ ದಿನ ಮಾತ್ರ ಕೆಲಸ (ಕೆಲಸ ಮಾಡಿದರೆ ಮಾಡಿದವು!! ಕಂಡು ಕಟ್ಟಿದರೆ ಅದುದೆ ಇಲ್ಲೆ..ವ್ರಥಾ ಕಾಲಕ್ಶೇಪ!!!)….
ಒಟ್ಟಿಂಗೆ ೧೫೦-೨೦೦ ಸಂಬಳ! ನಮಗೆ ಟೆನ್ಶನ್ ಆಗದ್ದೆ ಇಕ್ಕೊ!!!!
* * * *
ನಿನ್ನೆ ಬೆಂಗ್ಳೂರಿಂದ ಬಪ್ಪಗ ಚನಿಯನ ಮಗ ಶೇಖರ ಸಿಕ್ಕಿತ್ತು.
ಅದು ಎನ್ನ ಕ್ಲಾಸು ಮೇಟು 5ನೇಲಿ.(ಮತ್ತೆ ಅದು ಅಲ್ಲೆ ಬಾಕಿ ಆತು, ಅದು ಬೇರೆ ಸಂಗತಿ!!)
“ಏನು ಗನೇಸ, ಈಗ ಬರುದಾ!!ಬೆಂಗ್ಳೂರಿಂದ” ಹೇಳಿ ಕೇಳಿತ್ತು.  ಒಟ್ಟಿಂಗೆ ಇತ್ತ ಕಾರಣ ಅದಕ್ಕೆ ಎನ್ನ ಹತ್ರೆ ಚೂರು ಸಲುಗೆ ಇತ್ತು.!
” ನಾನು ಈಗ ತಾಲುಕು ಆಪೀಸಲ್ಲಿ ಕೆಲಸ ಮಾಡುದು, ನಿಂಗೆ ಎನ್ತಾದ್ರು ಬೇಕಾದ್ರೆ ಯೇಲು, ಮಾಡಿ ಕೊಡುವ……!!!!!!!”
ಅದರ ಮಾತಿಲಿ ಇಪ್ಪ ಒಂದು ಒಣ ಜಂಭ ವ್ಯಕ್ತ ಆತು; ಎಂಗಳುದೆ ಈಗ ಎಂತ ಕಡಮ್ಮೆ ಇಲ್ಲೆ ಹೇಳುವ ಅರ್ಥಲ್ಲಿ!!
ರಜ್ಜ ಮಾತಾಡಿದ ಮತ್ತೆ “ಆಯ್ತು ಬರ್ತೇನೆ” ಹೇಳಿ ಆನು ಹೆರಟೆ!!!
* * * *
ನಾಳಂಗೆ ಮದ್ದು ಬಿಡ್ಲೆ ಚನಿಯನ ಬಪ್ಪಲೆ ಹೇಳ್ಲೆ ಹೇಳಿ ಅಪ್ಪ ಹೋದವು. ಆನು ಉಂಡ್ಲ ಕಾಳು ತಿಂದುಗೊಂಡು ಕೂದೆ!!!
ಅಪ್ಪ ಬಪ್ಪಗ ಕಸ್ತಲೆ ಆಗಿತ್ತು. ಮಿಂದು, ಪೂಜೆ ಮಾಡಿ ಉಂಡು ಮಾತಾಡಿಗೊಂಡು ವರಗಿಯಪ್ಪಗ ಗಂಟೆ ಹತ್ತು!
* * * *
ಮರದಿನ ಉದಿಯಪ್ಪಗ ಎದ್ದಂಗೆ, ಮದ್ದು ಕಲಸುವ ಕೆಲಸ!, ಮೈಲುತುತ್ತು ಹೊಡಿ ಮಾಡಿ, ಸುಣ್ಣವ ಬೆಶ್ನೀರಿಂಗೆ ಹಾಕಿ, ಎಲ್ಲಾ ಆತು!
ಒಳ್ಳೆ ಬೆಳಿಕ್ಕಿರಿ ನೋಡಿ ಅಪ್ಪಂಗೆ ಕೊಶಿಯೋ ಕೊಶಿ! ಎನಗುದೆ!!
ಆದರೆ ಗಂಟೆ ಒಂಬತ್ತು ಆದರೂ ಚನಿಯನ ಪತ್ತೆಯ ಇಲ್ಲೆ.!! ಇನ್ನೆಂತ ಮಾಡುದು ಹೇಳಿ ಅಪ್ಪ ಅದಕ್ಕೆ ಫೋನು ಮಾಡಿದವು!!
“ಚನಿಯನ ಮಗ ಇನ್ನು ಕೆಲಸಕ್ಕೆ ಹೋಪದು ಬೇಡ ಹೇಳಿ ಹೇಳಿದ್ದಡ..ಹಾಂಗೆ ಅದು ಬೈಂದಿಲ್ಲೆ! ಇನ್ನು ಮದ್ದಿನ ಅಡಕ್ಕೆ ಮರದ ಬುಡಕ್ಕೆ ಎರೆಯಕ್ಕಷ್ಟೆ…!”
ಅಪ್ಪನ ಕೆಂಪು ಕಣ್ಣು ನೋಡಿ ಎನಗೇ ಹೆದರಿಕೆ ಆತು!!!
* * * *
ಕೆಳಣ ಮನೆ ಶಂಕರಣ್ಣನಲ್ಲಿ ಮಾತ್ರ ಅಲ್ಲ..ಎಂಗಳ ತೋಟಲ್ಲಿಯೂದೇ ಅಡಕ್ಕೆ ಉದುರ್ತಾ ಹೇಳಿ ಎನಗೆ ತಲೆ ಬೆಶಿ ಆತು!!!!!
ಅದಾ . . . !
ಬೆಂಗ್ಳೂರಿಂದ ಎಂಗಳ ರಾಜಮಾವ ಬೈಂದವು!!! ಅವಕ್ಕೆ ಬೆಂಗ್ಳೂರಿಲಿ ಇದ್ದರುದೆ ಕೃಷಿಲಿ ಅಸಕ್ತಿ!! ಕೆಲಸಂಗಳೂ ಗೊಂತಿದ್ದು!
ಅವು ಮದ್ದು ಆನು ಬಿಡ್ತೆ ಹೇಳಿಗೊಂಡು ಮಣೆ ಹಿಡ್ಕೊಂಡು ಬಂದು, ಮದ್ದು ಒಂದು ದಿನಲ್ಲಿ ಬಿಟ್ಟೂ ಆತು!!!
ಯಬಾ!!! ಎನ್ನ ಅಪ್ಪನ ಮೋರೆಲಿ ಕೊಶಿ ನೋಡೆಕ್ಕಿತ್ತು! ಇನ್ನು ಚನಿಯಂಗೆ ದಮ್ಮಯ್ಯ ಹಾಕೆಕ್ಕು ಹೇಳಿ ಇಲ್ಲೆನ್ನೆ!!
ಆನು ಹೇಳಿದೆ ” ಇನ್ನು ರಾಜ ಮಾವ ಬೆಂಗ್ಳೂರಿಲಿ ಜೋಬು ಮಾಡುದು ಬೇಡ!, ಇಲ್ಲಿಯೇ ಮದ್ದು ಬಿಡ್ಲೆ, ಅಡಕ್ಕೆ ತೆಗವಲೆ ನಮ್ಮ ಬೈಲಿಂಗೆ ಒಂದು ಗಟ್ಟಿ ಜೆನ ಆತು..!!”
ರಾಜಮಾವ ನೆಗೆ ಮಾಡಿದವು!!..ಅಷ್ಟೊತ್ತಿಂಗೆ ಬೆಶಿ ಬೆಶಿ ಚಾಯ, ಹಪ್ಪಳ ಬಂತು!!!
ಮದ್ದು ಬಿಡುವ ಕಾರ್ಯಕ್ರಮಕ್ಕೆ ಮಂಗಳ ಹಾಡಿತ್ತು!!!
“ಅಂತ್ಯಾ”ಕ್ಷರ:- ಮದ್ದು ಬಿಡೆಕ್ಕಾದ್ದು ಅಡಕ್ಕೆಗೆ ಮಾತ್ರ ಅಲ್ಲ, ಮನುಷ್ಯರ ಮನಸ್ಸಿಂಗುದೆ!!; ಮನಸ್ಸಿದ್ದರೆ ಮಾರ್ಗ ಅಲ್ಲದಾ!!!!!

20 thoughts on “ಮನಸ್ಸು – ಮದ್ದು

  1. The agriculture sector has been hit by various factors,eg.NREGA,higher education and indifference of younger generation towards it due to the low returns,need of status in the society,problems during matrimonial alliances and so on.If we compare rate of areca and other goods now with the situation in1994-95,we will find the answer.How to solve this problem?Kalaya tasmey namaha.But,I am sure if areca rates are coming up,our people will not leave agriculture.

  2. ಬಟ್ಯ, ಚನಿಯ ಎಲ್ಲ ಇನ್ನು ನಮ್ಮವರಲ್ಲಿಗೆ ಕೆಲಸಕ್ಕೆ ಬರೆಕು ಹೇಳಿ ಏನೂ ಇಲ್ಲೆನ್ನೆ. ಅವಕ್ಕೆ ಸರಕಾರ ಒಳ್ಳೆ ಕೆಲಸ್ ಕೊಡ್ತಲ್ದಾ? ಪಂಚಾಯತಿನ ಕೆಲಸ ಹೇಳಿ ಒಂದೇ ಕಡೆ ೩೦-೪೦ ಆಳುಗೊ ಪಟ್ಟಾಂಗ ಹಾಕ್ಯೊಂಡು ಕೂದೊಂಡು ಇಪ್ಪದರ ನೋಡುವಗ ಬೇಜಾರಾವುತ್ತು. ಒಂದು ಕಡೆಂಗೆ ೫-೬ ಜೆನಂದ ಹೆಚ್ಚಿಗೆ ಕಳುಸಲಾಗ ಆಳುಗಳ. ಹೆಚ್ಚು ಜೆನ ಆದಷ್ಟು ಅವು ಕಳ್ಳಕಟ್ಟುವದು ಜಾಸ್ತಿ.

  3. ಈ ಸಹಕಾರಿ ಕೃಷಿ ಯ ಒ೦ದು ಇಪ್ಪತ್ತು ವರ್ಷಮದಲೆ ಕೋಡಿಮುಲೆ ವೆ೦ಕಟ್ರಮಣನ ನೇತ್ರತ್ವಲ್ಲಿ ಎ೦ಗಳಲ್ಲಿ ಪ್ರಯೋಗ ಮಾಡಿದ್ದಿಯೊ೦.ಅ೦ದಿ೦ಗೆ ಅದು ಒಳ್ಳೆದಾಗಿ ನೆಡದ್ದು.ಆಳುಗೊ ಅ೦ದು ಬಗ್ಗಿದ್ದವು ಆದರೆ ಇ೦ದ್ರಣ ಸ್ಥಿತಿ ಎ೦ತ ಹೇಳಿರೆ ಎ೦ಗಳ ಗ್ರಾಮಲ್ಲಿಪ್ಪ ಬ್ರಾಹ್ಮಣರ ಸರಾಸರಿ ಪ್ರಾಯ ಅರುವತ್ತುದಾ೦ಟಿದ್ದು.ಮತ್ತೆ ಶರ್ಮಪ್ಪಚ್ಚಿಹೇಳಿದ ಹಾ೦ಗೆ ಮನಸ್ಸು ಹೇಳಿರು ಶರೀರ ಕೇಳ್ತಿಲ್ಲೆ.ಹಾ೦ಗಾಗಿ ಪರಿಹಾರ ಸುಲಭ ಇಲ್ಲೆ.ಅಲ್ಲದ್ದೆ ಎ೦ಗಳಲ್ಲಿ HALನ್ನವರ Helicopter ಘ್ಘಟಕ ಒ೦ದು ಬತ್ತದ, ಅವು ದಿನಕ್ಕೆ ನಾನ್ನುರು ರುಪಾಯಿ ಕೊಡ್ತವು ಇದೆಲ್ಲ ಒಟ್ಟಗಿ ಸಮಸ್ಯೆ ಹೆಳಿದಷ್ಟು ಸುಲಭಲ್ಲಿ ಮುಗಿತ್ತಿಲ್ಲೆ.ಮತ್ತೆ ಬೋಸಭಾವ೦ಗೆ ತೀರ್ಥ ಬೇಕಾರೆ ಎ೦ಗಳ ಮಾಯಿಪ್ಪಾಡಿಲಿ ಸಿಕ್ಕುತ್ತು ಇದು ತಿರ್ಥದ್ದೇ ಜಾಗೆ.ಬದುಕ್ಕಲೆ ರಜ ರಜ ತಮಾಷೆಯೂದೆ ಬೇಕಲ್ಲದೋ?ಬೋಸಭಾವ ಹಿ೦ಗೆಲ್ಲ ಕೇಳುವಾಗ ಒಳ್ಳೆದಾವುತ್ತಲ್ಲದೊ?ಆರಾರ ಮಕ್ಕೊಗೆ ಮರುಳು ಹಿಡುದರೆ ನೋಡುತ್ತವಕ್ಕೆ ಚೆ೦ದ ಹೇಳುಗು ಎನ್ನಪ್ಪ೦.ಒಪ್ಪ೦ಗಳೊಟ್ಟಿ೦ಗೆ.

  4. ಪುಟ್ಟ ಭಾವ ನಿಂಗಳ ಲೇಖನ,ತುಂಬಾ ಒಳ್ಳೆದಾಯಿದು ಹಾಂಗೆ ಕೃಷಿಕನ ಸ್ಥಿತಿ ಗೊಂತಾಗಿ ಬೇಜಾರ ಆತು !!
    ಆದರೆ ಒಂದು ವಿಷಯ ಆನು ಈ ಬಯಲಿಲಿ ತಿಳುಸುಲೆ ಇಷ್ಟಪಡುತ್ತೆ! ಇತ್ತೀಚೆ ಆನು ಊರಿಲಿ ಇಪ್ಪಗ ವಿಟ್ಲ ಸೀಮೆಲಿ ಎನ್ನ ಒಂದು ಅತ್ತಿಗೆ ಮನೆಗೆ ಹೋಗಿತ್ತಿದ್ದೆ.ಅಲ್ಲಿ ನಮ್ಮ ಬ್ರಾಹ್ಮಣರ ಸಂಪ್ರದಾಯ ಪ್ರಕಾರ ಆಸರಿಂಗೆ ಎಲ್ಲಾ ಕುಡುದು,ನಮ್ಮ ಕಷ್ಟ ಸುಖಂಗಳ ಎಲ್ಲ ಮಾತಾಡಿಯೋಂದು ಇದ್ದ ಹಾಂಗೆ ನಮ್ಮ ಕೃಷಿಕರು ಈಗ ಅನುಭವಿಶುವ ಸುದ್ದಿಯೂ ಬಂತು !! ಅತ್ತಿಗೆ ಗೆಂಡ ಅಣ್ಣ ಹೇಳಿದ; ಅವಂಗೆ ಕೆಲಸಕ್ಕೆ ಆಳು ಸಿಕ್ಕುತ್ತಿಲ್ಲೇ ಹೇಳಿ ಏನೂ ಬೇಜಾರು ಇಲೇಡ!!! ಆನು ಎಂತ ಅಣ್ಣ ಹೀಂಗೆ ಹೇಳ್ತೆ ಕೇಳಿರೆ
    ಅವ ಹೇಳ್ತಾ ,ಅಲ್ಲಿಯಾಣವು ನೆರೆಕರೆಯ ೭ (ಏಳು) ಮನೆಯವು ಸೇರಿ ಒಂದು ತೀರ್ಮಾನಕ್ಕೆ ಬಂದವದ!!!.ಎಂಥಾ ಕೇಳಿರೆ ಏಳೂ ಮನೆಯ ಯೆಜಮಾನಂಗೋ ಒಂದೊಂದು ದಿನ ಒಬ್ಬೊಬ್ಬನ ಮನೆಗೆ ಹೋಗಿ ಅಲ್ಲಿಯಾಣ ಕೆಲಸವ ಮಾಡೋದದ!!! ಎಲ್ಲೋರೂ ಏನೂ ದಾಕ್ಷೀಣ್ಯ ಇಲ್ಲದ್ದೆ ಚೆಂದಕ್ಕೆ ಆಯೆಕ್ಕಾದ ಕೆಲಸವ ಎಲ್ಲಾ ಚೆಂದಕ್ಕೆ ಮುಗುಷಿ ಒತ್ತಿನ್ಗೆ ಉಂಡು ಕಸ್ತಲೇ ಅಪ್ಪಗ ಚಾಯವೂ ಕುಡುದು ನಾಳಾಣ ಕೆಲಸ ಎಲ್ಲಿ ಹೇಳಿ ತೀರ್ಮಾನ ಮಾಡಿ ಅವರವರ ಮನೆಗೆ ಹೋಪದದ!!!!!!.
    ಹೀನ್ಗಿಪ್ಪ ಒಂದು ಒಳ್ಳೆಯ ಕ್ರಮವ ನಮ್ಮ ನೆರೆಕರೆಲಿಯೂ ಕೃಷಿಕರ ಸೇರಿಸಿಗೊಂಡು ನವಗೂ ಹೀಂಗೆ ಕೆಲಸ ಮಾಡ್ಲೆ ಏಡಿಗಾರೆ ಯಾವ ಕೆಲಸದ ಆಳೂ ಬಾರದ್ದರೂ ನಾವು ಹೆದರೆಕ್ಕಾದ್ದಿಲ್ಲೇ !!!!!!!!!!!!!!!!

    1. ಭಾವಯ್ಯ ! ನಿಂಗ ಇಷ್ಟ ಪಟ್ಟ ವಿಷಯ ತಿಳಿಸಿದ್ದು ಭಾರೀ ಒಳ್ಳೇದಾತು!
      ಈ ಕ್ರಮವ ನಮ್ಮವು ಎಲ್ಲರುದೆ ಅಳವಡಿಸಿಗೊಂಡರೆ ಬೇರೆ ಆಳುಗಳ ಅವಲಂಬನೆ ಕಡಮ್ಮೆ ಅಕ್ಕು! ಅಲ್ಲದ್ದೆ ನಮ್ಮವಕ್ಕೆ ಪರಸ್ಪರ ಸಹಕಾರಲ್ಲಿ, ಒಳ್ಳೆದರ್ಲಿ ಇಪ್ಪಲೂ ಅನುಕೂಲ! (ಈಗಾಗಲೇ ಆಳುಗ “ಗ್ರೂಪುತ ಬೇಲೆ” ಹೇಳಿ ಆದಿತ್ಯವಾರ ಮಾಡ್ತವು!, ನಿಂಗಳ ಐಡಿಯಾ ಅಲ್ಲಿ ಇದ್ದು!! )
      ಧನ್ಯವಾದಂಗೋ

    2. ಈ ಸಹಕಾರ ಪದ್ಧತಿ ಭಾರೀ ಒಳ್ಳೆದು. ನಮ್ಮವಕ್ಕೆ ಹೋಗಿ ಒಂದು ಅಧ್ಯಯನ ಮಾಡ್ಲೆ ಯೋಗ್ಯ ವಿಶಯ.

      1. ಶರ್ಮಪ್ಪಚ್ಚಿ; ಇಂತಹ ಒಂದು ಒಳ್ಳೆಯ ಪದ್ದತಿಯ ಕ್ರಿಷಿಕರೆ ಇಪ್ಪ ಈ ಬಯಲಿಲಿ ವಿಮರ್ಶೆಗೆ ಬಾರದ್ದೆ ಇದ್ದದರಲ್ಲಿ ಎನಗೆ ತುಂಬಾ ಬೇಜಾರಾವುತ್ತು !!
        ಎನಗೆ ಕಾಣ್ತು ನಾವು ಬ್ರಾಹ್ಮಣರು ಮಾತಾಡ್ಲೆನೂ ಕಮ್ಮಿ ಇಲ್ಲೇ !! ಆದರೆ ಪ್ರಾಯೋಗಿಕವಾಗಿ ಮುಂದುವರಿವಳೇ ಆರೂ ಮುಂದೆ ಬತ್ತವಿಲ್ಲೇ ಎಂತ ??

        1. ಭಾವಯ್ಯ , ನಿಂಗ ಹೇಳಿದ ಸಹಕಾರ ಪದ್ಧತಿ, ನಮ್ಮ ಶಿರಸಿ ಕಡೆ ಹವ್ಯಕರಲ್ಲಿ ಇದ್ದು! ಎನ್ನ ಸುಮಾರು ಜನ ಗೆಳೆಯರ ಬಳಗಲ್ಲಿ ಆನು ಇದರ ಕೇಳಿದ್ದೆ ! ಭಾರೀ ಅನುಕೂಲ ಇದ್ದು ಹೇಳಿ ಹೇಳ್ತವು! ಗೊಬ್ಬರ ಹೊರುದರಿಂದ ಹಿಡುದು, ತೋಟಕ್ಕೆ ಸೊಪ್ಪು, ಎಲ್ಲ (ಸೀಸನ್ ಲಿ ) ಮಾಡ್ತವು!

  5. ಪುಟ್ಟ ಭಾವನ ಅಂತ್ಯಾಕ್ಷರ ಲಾಯಿಕ್ ಆಯಿದು.
    ಮನಸ್ಸೊಂದಿದ್ದರೆ ಮಾರ್ಗ ಇದ್ದು ಹೇಳಿ ಗಾದೆ ಇದ್ದು.
    ಆದರೆ ಪೇಟೆಲಿ ಹೋಗಿ ಕೂದ ಎನ್ನ ಹಾಂಗಿಪ್ಪವಕ್ಕೆ ಮನಸ್ಸಿದ್ದರೂ ಕೆಲಸದ ಅಂದಾಜು ಇರ್ತಿಲ್ಲೆ ಮತ್ತೆ ಶರೀರ ಹಾಂಗಿಪ್ಪ ಕೆಲಸಕ್ಕೆ ಸಹಕಾರ ಕೊಡುವದು ರೆಜ ಬಙ ಹೇಳಿ ಕಾಣುತ್ತು. ಕೆಲಸದವರ ಅವಸ್ತೆಯ ಬರದ್ದು ಸರಿಯಾಗಿಯೇ ಇದ್ದು.
    [ಇನ್ನು ರಾಜ ಮಾವ ಬೆಂಗ್ಳೂರಿಲಿ ಜೋಬು ಮಾಡುದು ಬೇಡ!]-ಪರಿಸ್ಥಿತಿ ಅಲ್ಲಿಗೆ ಎತ್ತಿದ್ದು ಹೇಳಿ ಎಲ್ಲರೂ ಹೇಳ್ತವು

    1. ಅಪ್ಪಚ್ಚಿ! ನಿಂಗಳ ಒಪ್ಪ ಭಾರೀ ಲಾಯ್ಕಯ್ದು! ಪ್ರಾಯ ಆದರೂ ಜೀವನೋತ್ಸಾಹಕ್ಕೆ ಮೆಚ್ಚೆಕ್ಕಾದ್ದೆ!

  6. ಪುಟ್ಟ ಭಾವಾ,ಒಳ್ಳೆ ಕಲ್ಪನೆ.
    ನಮ್ಮಲ್ಲಿ ಎಷ್ಟು ಜೆನ ರಾಜ ಮಾವನ ಹಾಂಗಿದ್ದೆಯ° ಹೇಳುತ್ತ ಪ್ರಶ್ನೆಯೂ ಮೂಡಿತ್ತು.
    ಅಂತ್ಯಾಕ್ಷರ ಅತಿಸುಂದರ.

    1. {ನಮ್ಮಲ್ಲಿ ಎಷ್ಟು ಜೆನ ರಾಜ ಮಾವನ ಹಾಂಗಿದ್ದೆಯ° ಹೇಳುತ್ತ ಪ್ರಶ್ನೆಯೂ ಮೂಡಿತ್ತು.}
      ಭಾವಾ! ಪ್ರಶ್ನೆ ಎನ್ನ ಮನಸ್ಸಿಲಿಯೂ ಇದ್ದು!! ಕಲ್ಪನೆಲಿ ಎಲ್ಲವೂ ಸುಲಭ! ಆದರೆ ಮಾಡುದು ಚೂರು ಕಷ್ಟವೇ ಆದರೂ ಮಾಡಲೇ ಎಡಿತ್ತು ಹೇಳುದಂತೂ ಸತ್ಯ!
      ಒಳ್ಳೆ ಒಪ್ಪ ಕೊಟ್ಟಿದಿ!:D

  7. {…..ಮೇಲೆ ತೀರ್ಥ ಕುಡುದು ಎಂತ ಮಾತಾಡ್ತವು ಹೇಳಿ ಅವಕ್ಕೇ ಗೊಂತಿರ್ತಿಲ್ಲೆ…..}
    ಅದು ಎ೦ಥಾ ತೀರ್ಥ ಭವಾ….!!! ಹಾ೦ಗಿಪ್ಪದು?? ಯೆವ ದೇವಸ್ಥನದ್ದು ??? ಅನು ಕ೦ಡಾ೦ಗೆ.. ಮಧ್ಯಾಹ್ನ ದೇವಸ್ಥಾನ ಬಾಗಿಲು ಹಾಕ್ರಿತ್ತು…. ಮತ್ತೆ ತೀರ್ಥ ಎಲ್ಲಿಯದ್ದು?? 😀

    1. ಏ ಬೋಸ ! ತೀರ್ಥ ಕುಡಿವದು ಮಧ್ಯಾಹ್ನ ಅಲ್ಲ , ಮಧ್ಯಾಹ್ನ ಮೇಲೆ!! ಹೇಳಿ ಹೇಳ್ತವು!! ಉಮ್ಮಪ್ಪ, ನವಗರಡಿಯ!!

      1. ಹಾ, ಎ೦ತದೆ ಇರಲಿ.. ಅದು ಎ೦ಥಾ ತೀರ್ಥ ಹೇಳಿ ಮಾತ್ರ ಗೊ೦ತಾಯಿದಿಲ್ಲೆ…!!! 😀

        1. ಬೋಸ ಭಾವಾ,
          ಅದೂ ,ವಿಜಯತೀರ್ಥ ಹೇಳಿ .ಗೊಂತಾತೋ?

          1. ಹೊ… ವಿಜಯತೀರ್ಥ??? ಹಾ೦ಗೆಲ್ಲಾ ಇದ್ದಾ?? ಯಾವ ದೇವಸ್ಥಾನದ್ದು?? 😀

          2. ಏ ಬೋಸ ನೀನು ಹೀನ್ಗೆಲ್ಲ ಎಲ್ಲೋರೆದುರು ಮಾತಾಡ್ಲಾಗಾತ!
            ನಿನಗೆ ಒಪ್ಪಕುನ್ಹಿ ಆಯೆಕ್ಕು ಹೇಳಿ ಇಲ್ಲೆಯ ? ನಿನಗೆ ಗೊಂತಾಯೇಕ್ಕು ಹೇಳಿಯೇ ಇದ್ದರೆ ನೀನು ಆ ಬಟ್ಯನ ಹತ್ರೆ ಪುರುಸೋಥಿಲಿ ಕೇಳು !!
            ಅದು ಹೇಳಿ ಕೊಡುಗು !! ಅದರತ್ರೆ ಕೇಳಿ ತಿಳ್ಕೊಂಡು ಬೇರೆನ್ತಾರು ಮಾಡಿಕ್ಕೆದ!ಮತ್ತೆ ನಿನ್ನ ಎಲ್ಲೋರು ಬೋಸ ಹೇಳಿ ಅಲ್ಲದ್ದೆ ಇನ್ನೆನ್ತಾರು ಹೆಸರಿಲಿ ದಿನೆಳುಗು

          3. “ತಿಂಡಿ ಬೇಕಾ ತೀರ್ಥ ಬೇಕಾ” ಪದ್ಯ ಕೇಳಿದ್ದೆಯಾ?
            ತಿಂಡಿ ತಿಂದ ಮತ್ತೆ ತೀರ್ಥದ ಅಲೋಚನೆ ಮಾಡು ಆತಾ?
            ಇವೆಲ್ಲಾ ಬೋಸ ಹೇಳಿ ಎಂತೆಂತಾರೂ ಹೇಳಿ ಕೊಡ್ತವಿದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×