ಕಡಾರು ಪುಟ್ಟಭಾವನ ’ಹಾಲುಮಜಲು’…

July 27, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಪುಟ್ಟಭಾವನ ಪರಿಚಯ ಮಾಡುದು ಹೇಳಿರೆ ಹೋಳಿಗೆ-ಕಾಯಾಲು ತಿಂದಷ್ಟು ಕೊಶಿ ಒಪ್ಪಣ್ಣಂಗೆ!

ದೈಹಿಕವಾಗಿ ಇಪ್ಪದು ಬೆಂಗುಳೂರಿಲಿ ಆದರೂ ಮಾನಸಿಕವಾಗಿ ಇಪ್ಪದು ನಮ್ಮ ಊರಿಲಿಯೇ.
ಒಂದು ನಮೂನೆ ನಮ್ಮ ನೀರ್ಕಜೆ ಅಪ್ಪಚ್ಚಿಯ ಹಾಂಗೆ, ಊರೇ ಚೆಂದ ಹೇಳಿಗೊಂಡು ನಂಬುತ್ತ ಜೆನ.
ನಮ್ಮ ಹಳೇ ಕ್ರಮಂಗೊ, ಸಂಪ್ರದಾಯಂಗೊ, ಜೆನಂಗೊ, ಕಲೆಗೊ – ಇದರ ಬಗ್ಗೆ ವಿಶೇಷ ಆಸಗ್ತಿ ಇಪ್ಪ ಜೆನ ಇವು.

ಇಂಜಿನಿಯರು ಕಲ್ತು ಬೆಂಗುಳೂರಿಲಿ ಟಾಟಾದವರ ಎಂತದೋ ಕಂಪೆನಿಲಿ ಕೆಲಸ, ವಾರ ಇಡೀಕ ಹಗಲೊತ್ತು.
ಹೊತ್ತೋಪಗ ಬಂದು ಮನೆಲಿ ಕೂದಂಡು ಕೊಳಲು ಉರುಗುಗು, ಚೆಂದಕೆ – ಹೊಟ್ಟೆ ಹಶುಅಪ್ಪನ್ನಾರ.
ಹಶು ಅಪ್ಪಗ ಎಂತಾರು ಬೇಶಿ ತಿಂಗು, ಅಡಿಗೆಲಿ ಒಂದು ಕೈ ಮೇಲೆ ಇದಾ!!

ಒಳ್ಳೆ ಚಿಂತನೆಗೊ ಇದ್ದು ಇವಕ್ಕೆ. ಒಬ್ಬನೇ ಕೂದಂಡು ಕೆಲವು ಯೋಚನೆಗೊ ಮಾಡ್ತವು – ಭಾರೀ ಒಳ್ಳೆ ಆಲೋಚನೆಗೊ.
ನಮ್ಮ ಸಮಾಜವ ತಿದ್ದುತ್ತ ನಮುನ ಚಿಂತನೆಗೊ.
ನಮ್ಮೊಳ ಇಪ್ಪ ಹಾಳುಮಜಲಿನ ಹಾಲುಮಜಲು ಮಾಡ್ತದು ಹೇಂಗೆ – ಹೇಳಿ ಯೋಚನೆ ಮಾಡ್ತ ಮನಸ್ಸು.
ಮನೋಶಾಸ್ತ್ರದ ಬಗ್ಗೆ ವಿಶೇಷ ಆಸಗ್ತಿ. ಪುರುಸೊತ್ತಿಪ್ಪಗ ಮನಃಶಾಸ್ತ್ರದ ಬಗ್ಗೆ ತಿಳಿಗು, ಬೆಳಗು.

ಪುಟ್ಟಬಾವ ಅಂಬೇಡ್ಕರಿನ ಮೂರ್ತಿಯ ತೋರುಸುದು
ಪುಟ್ಟಬಾವ ಅಂಬೇಡ್ಕರಿನ ಮೂರ್ತಿಯ ತೋರುಸುದು...

ಗುರ್ತದೋರು ಎಲ್ಲಿ ಸಿಕ್ಕಿರೂ ಮಾತಾಡುಸುಗು, ಅದು ತುಂಬಾ ಕೊಶಿ ಅಪ್ಪದಿದಾ..
ಓ ಮೊನ್ನೆ ಬೇಂಕಿನ ಪ್ರಸಾದನ ಬಿಡ್ಳೆ ಪುತ್ತೂರು ಬಷ್ಟೇಂಡಿಂಗೆ ಹೋಗಿತ್ತಿದ್ದೆಯೊ
° – ಆನುದೇ ಗಣೇಶಮಾವಂದೆ.
ಅಷ್ಟಪ್ಪಗ ದೂರಲ್ಲಿ ಒಂದು ಪೋನುತುಂಡಿನ ಕೆಮಿಗೆ ಮಡಿಕ್ಕೊಂಡು ಮಾತಾಡಿಗೊಂಡಿತ್ತಿದ್ದವು ಇವು!
ಸೀತ ಬಂದು ಎಂಗಳತ್ತರಂಗೆ ಮಾತಾಡುಸಿದ್ದಲ್ಲದೋ – ಒಪ್ಪಣ್ಣಂಗೆ ಹಾಲುಕುಡುದ ಹಾಂಗಾತು.

ಚೆಂದಕೆ ನೆಗೆನೆಗೆಮಾಡಿ ಮಾತಾಡುಸುವಗ ಪಕ್ಕನೆ ಕೇಳಿಹೋತು – ಬೈಲಿಂಗೆ ಬಂದು ಶುದ್ದಿಯೋ ಮಣ್ಣ ಹೇಳ್ತಿರೋ – ಹೇಳಿಗೊಂಡು.
ಸಂತೋಷಲ್ಲಿ “ಅಕ್ಕಕ್ಕು” – ಹೇಳಿದವು, ಬೆಳೀಹಲ್ಲಿನ ತೋರುಸಿಗೊಂಡು.
ಎಂಗೊಗೆಲ್ಲ ಕೊಶಿ ಆತು, ಹತ್ತರೆ ಇದ್ದ ಉದಯಣ್ಣಂಗುದೇ!

ಹ್ಮ್, ಇವರ ಚಿಂತನೆಗೊ ಬೈಲಿಲಿ ಕತೆ ಆಗಿ ಹರುದು ಬಕ್ಕು.
ಅದು ಕೇವಲ ಕತೆ ಅಲ್ಲ, ನಮ್ಮ ಸಮಾಜದ ವ್ಯಥೆಯೂ ಆಗಿಕ್ಕು.
ಅವರ ಮನಸ್ಸಿಂಗೆ ಕಂಡ ಅನಿಸಿಕೆಗಳೂ ಆಗಿಕ್ಕು..
ಹಾಳುಮಜಲಿಪ್ಪದರ ಹಾಲುಮಜಲು ಮಾಡ್ಳೆ ಹೇಳ್ತ ಶುದ್ದಿ ಆಗಿಕ್ಕು..
ನಾವೆಲ್ಲರೂ ಓದುವೊ, ಅಕ್ಕಾದರೆ ಸಂತೋಷಲ್ಲಿ ಸ್ವೀಕರುಸುವೊ°.
ಶುದ್ದಿಗೊಕ್ಕೆ ಮನಸಾರೆ ಒಪ್ಪ ಕೊಟ್ಟು ಅವರನ್ನೂ ಬೆಳೆಸುವೊ°, ಆಗದೋ?

ಏ°?
~
ಒಪ್ಪಣ್ಣ

ನಮಸ್ಕಾರ,
ಪುಟ್ಟಭಾವನ ಓರುಕುಟ್ಟುತ್ತ ಪುಟ ಇಲ್ಲಿದ್ದು: (http://www.orkut.co.in/Main#Profile?uid=6333187300139247358 )
ಪುಟ್ಟಭಾವ ಬರದ ಶುದ್ದಿಗೊ ಸದ್ಯಲ್ಲೇ “ಹಾಲುಮಜಲು” ಅಂಕಣಲ್ಲಿ ಮೂಡಿಬತ್ತು.
ಕಾದೊಂಡಿರಿ, ಆತೋ?
~
ಗುರಿಕ್ಕಾರ°

ಕಡಾರು ಪುಟ್ಟಭಾವನ ’ಹಾಲುಮಜಲು’..., 5.0 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಇದು ಒಳ್ಳೆ ಶುದ್ದಿ. ಪುಟ್ಟಭಾವಯ್ಯನ ಚಿಂತನೆಗಳ ಎದುರು ನೋಡುವ..

  [Reply]

  VA:F [1.9.22_1171]
  Rating: +1 (from 1 vote)
 2. ಕಳಾಯಿ ಗೀತತ್ತೆ
  ಕಳಾಯಿ ಗೀತತ್ತೆ

  ಬೈಲಿಂಗೆ ಸ್ವಾಗತ ..ಒಳ್ಳೆ ಲೇಖನ ಬರೆಯಿರಿ ..

  [Reply]

  ಪುಟ್ಟಬಾವ°

  ಕಡಾರು ಪುಟ್ಟಬಾವ Reply:

  ಖಂಡಿತಾ ನಿಂಗಳ ಎಲ್ಲರ ನಿರೀಕ್ಷೆಯ ಈಡೆರ್ಸುವ ಭರವಸೆ ಇದ್ದು!!
  ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಡೆಲ್ಲಿಲಿಪ್ಪ ಮಾಪಣ್ಣಪ್ಪಚ್ಚಿ ಹೇಳುಗು – ವಾಯಿದೇ ಅಕ್ಸರ್ ಟೂಟ್ ಜಾತೆ ಹೈ. ಲೇಕಿನ್ ಕೋಶಿಶ್ ಕಾಮ್ಯಾಬ್ ಹೋತೇ ಹೈ ಹೇಳಿ. ಹಿಂದಿ ಎನಗರಡಿಯ ಆದರೆ ಅರ್ಥ ಹೇಳಿತ್ತುಕಂಡ್ರೆ ಭರವಸೆ ಹುಸಿ ಅಪ್ಪಲೆ ಸಾಧ್ಯ ಇದ್ದಡ ಆದರೆ ಪ್ರಯತ್ನ ಮಾಡಿದರೆ ಸಫಲತೆ ಖಂಡಿತ ಸಿಕ್ಕುಗಡ.
  ಪುಟ್ಟ ಭಾವ,ಲಗೇ ರಹೋ…

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಚುಬ್ಬಣ್ಣವೆಂಕಟ್ ಕೋಟೂರುಅಕ್ಷರ°ಗಣೇಶ ಮಾವ°ಚೆನ್ನಬೆಟ್ಟಣ್ಣಸಂಪಾದಕ°ಗೋಪಾಲಣ್ಣಹಳೆಮನೆ ಅಣ್ಣಶಾ...ರೀಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಅನಿತಾ ನರೇಶ್, ಮಂಚಿವೇಣೂರಣ್ಣಪಟಿಕಲ್ಲಪ್ಪಚ್ಚಿಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುನೀರ್ಕಜೆ ಮಹೇಶನೆಗೆಗಾರ°ವಿದ್ವಾನಣ್ಣಚೆನ್ನೈ ಬಾವ°ಕಜೆವಸಂತ°ಪ್ರಕಾಶಪ್ಪಚ್ಚಿಮಾಲಕ್ಕ°ಉಡುಪುಮೂಲೆ ಅಪ್ಪಚ್ಚಿಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ