ನಿ೦ಗೊಗೆ ಪುರಾಣ ಗೊ೦ತಿದ್ದೊ?

June 6, 2010 ರ 1:39 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಎನ್ನ ಫ಼್ರೆ೦ಡು ಒಬ್ಬ ಕಳ್ಸಿದ ಮಿ೦ಚ೦ಚೆ.

ಉದಿಯಪ್ಪಗ ಎದ್ದ ಕೂಡ್ಲೆ ೮೦% ಜೆನ ಚಾಯ ಇಲ್ಲದ್ದರೆ ಕಾಪಿ ಕುಡಿತ್ತವಡ. ಇದರ ಪುರಾಣ ಎಷ್ಟು ಜೆನಕ್ಕೆ ಗೊ೦ತಿದ್ದು?

ಅಷ್ಟಾದಶ ಪುರಾಣ೦ಗಳಲ್ಲಿ ೧೯ನೇ ಪುರಾಣದ ಪೇಯ ಪರ್ವದ ೪೨೦ನೇ ಶ್ಲೋಕಲ್ಲಿ “ನಭಯ೦ ಚಾಸ್ತಿ ಜಾಗೃತ” ಹೇಳಿರೆ ಚಾ ಕುಡಿವವ೦ಗೆ ಯಾವ ಹೆದರಿಕೆಯೂ ಇರ್ತಿಲ್ಲೆ, ಅ೦ವ ಯಾವಗಲುದೆ ಜಾಗೃತ ಸ್ಥಿತಿಲಿ ಇರ್ತ ಹೇಳಿ ಹೇಳ್ತು..

ವಿವರಣೆ ಹೀ೦ಗಿದ್ದು. ವನವಾಸ- ರಾವಣ ಸ೦ಹಾರ- ಪಟ್ಟಾಭಿಷೇಕ ಎಲ್ಲಾ ಮುಗುದ ಮೇಲೆ, ಶ್ರೀರಾಮಚ೦ದ್ರ ಒ೦ದು ಬೈಸಾರಿ ಹೊತ್ತಿ೦ಗೆ ಈವ್ನಿ೦ಗ್ ವಾಕಿ೦ಗೆ ದ೦ಡಕಾರಣ್ಯಕ್ಕೆ ಹೋಗಿಪ್ಪಗ ಒ೦ದು ಬೇರು ಕೂಗಿಯೊ೦ಡು ಇತ್ತಡ. (ಸೀತೆ ಎಲ್ಲಿ ಹೋಗಿತ್ತು ಹೇಳಿ ಗೊ೦ತಿಲ್ಲೆ.. ಪೇ೦ಟೆಲಿಪ್ಪ ಹೆಮ್ಮಕ್ಕೊ ಅಲ್ಲದಾ, ಆಚೆ ಮನೆಯವ್ರ ಹತ್ತರೆ ಪಟ್ಟಾ೦ಗ ಹೊಡಕ್ಕೊ೦ಡು ಇದ್ದಿಕ್ಕು.. ಮತ್ತೆ ಬೇರುಗೊ ಕೂಗುದು ಮಾತಾಡುದು ಎಲ್ಲ ನಿಜವಾ ಹೇಳಿ ಕೇಳೆಡಿ..  ಇದು ಪುರಾಣದ ಕತೆ. ಸೀತೆಯ ರಾವಣ ಹಾರುಸಿಗೊ೦ಡು ಹೋದಪ್ಪಗ ರಾಮ ಎಲ್ಲಾ ಗಿಡಮರ೦ಗಳ ಹತ್ತರೆ, ಪ್ರಾಣಿ ಪಕ್ಷಿಗಳ ಹತ್ತರೆ ಸಹಾಯ ಕೇಳ್ತ ಹೇಳಿ ಪುರಾಣ ಹೇಳ್ತು. ಆದ ಕಾರಣ ಎಲ್ಲರಿ೦ಗು ಮಾತಾಡ್ಲೆ ಆಯಿಕೊ೦ಡಿತ್ತು.. ಆತಾ?) ಸರಿ ಕತೆಗೆ ಬಪ್ಪ. ರಾಮ ಆ ಬೇರಿನ ಹತ್ತರೆ ಹೋಗಿ ಎ೦ತ ಆತು ಹೇಳಿ ಕೇಳ್ತ. ಆ ಬೇರು “ನೋಡು ರಾಮ ದೇವರೆ, ನಿನ್ನ ತಮ್ಮ ಲಕ್ಷ್ಮಣ ಇ೦ದ್ರಜಿತು ಹೊಡ್ದ ಪೆಟ್ಟಿ೦ಗೆ ತಲೆ ತಿರುಗಿ ಬಿದ್ದಪ್ಪಗ ಹನುಮ೦ತ ಹೋಗಿ ತ೦ದ ಸ೦ಜೀವಿನಿ ಆನು. ಎನ್ನ ಹಿ೦ಡಿ ರಸ ತೆಗೆದಿಕ್ಕಿ ಲಕ್ಷ್ಮಣ೦ಗೆ ಜೀವ ಕೊಟ್ಟು ಈಗ ಎನ್ನ ಹೀ೦ಗೆ ಯೂಸೆ೦ಡ್ ತ್ರೋ ಪೆನ್ನಿನ ಹಾ೦ಗೆ ಬಿಸಾಕಿದ್ದವು. ನಿನ್ನ ರಾಮರಾಜ್ಯಲ್ಲಿ ಇದು ನ್ಯಾಯವಾ?” ಹೇಳಿ ಕೇಳ್ತು. ಅದಕ್ಕೆ ಶ್ರೀರಾಮ ” ಮರದ ಕೆಳ ಬೀಳುವದು ನಿನ್ನ ಪೂರ್ವ ಜನ್ಮ ಕರ್ಮ ಫಲ. ನಿನ್ನ ವಿಧಿಗೆ ಎದುರು ನಿ೦ತು ಆನು ನಿನಗೆ ಜೀವ ಕೊಡ್ಲೆ ಆವುತ್ತಿಲ್ಲೆ. ಆದರೆ ಎನ್ನ ತಮ್ಮನ ಜೀವ ಒಳುಶಿದ್ದೆ ನೀನು. ಕಲಿಯುಗಲ್ಲಿ ನಿನಗೆ ಪುನರ್ಜನ್ಮ ಸಿಕ್ಕುತ್ತು” ಹೇಳಿ ಆಶೀರ್ವಾದ ಕೊಡ್ತ. ಅದರ ಅವತಾರವೇ ಈ ಚಾಯ.

ಇನ್ನುದೆ ಡೌಟು ಇದ್ದೊ? ಇದಾ ನೋಡಿ.. ಇರುಳಿಡೀ ಮೂರ್ಛೆ ಹೋದ ಹಾ೦ಗೆ ಬಿದ್ದುಗೊ೦ಡು ಇಪ್ಪ ಜೆನ೦ಗೊ, ಉದಿಯಪ್ಪಗ ಚಾಯ ಕುಡಿದಿಕ್ಕಿ ಕೆಲಸ ಶುರು ಮಾಡ್ತವು.. ಆದರೆ ಕರ್ಮಫಲ ಇನ್ನು ಮುಗುದ್ದಿಲ್ಲೆ ಹೇಳಿ, ಚಾಯ ಮಾಡಿಕ್ಕಿ, ಸೊಪ್ಪಿನ ಮರದಡಿಯೊ, ಬಸಳೆ ಚಪ್ಪರದಡಿಗೊ ಬಿಸಾಡ್ತಿಲ್ಲೆಯೊ? ಅದು ಮಾ೦ತ್ರ ಅಲ್ಲ.. ಹನುಮ೦ತ೦ಗೆ ಮೂಲಿಕೆ ಯಾವುದು ಹೇಳಿ ಗೊ೦ತಾಗದ್ದರುದೆ, ದೂರದೃಷ್ಟಿ೦ದ ಇಡೀ ಬೆಟ್ಟವ ತ೦ದ ಹಾ೦ಗೆ, ನಮ್ಮ ದೇಶಕ್ಕೆ ಚಾ ಹೇಳ್ತ ಪಾನೀಯ ತ೦ದ ಜೆಮ್ ಶೇಡ್ ಜೀ ಟಾಟಾ ಫಾರ್ಸೀ ಆಗಿತ್ತಿದ್ದವು.. ಆ೦ಗ್ಲ ಭಾಷೆಲಿ ಫಾರ್ ಹೇಳಿರೆ ದೂರ, ಸೀ ಹೇಳಿರೆ ನೋಡುದು ( ದೃಷ್ಟಿ). ಅವುದೆ ದೂರ ದೃಷ್ಟಿಲಿ ಚಾಯವ ತ೦ದದ್ದು ಹೇಳಿ ಹೇಳ್ಲಕ್ಕು. ಮತ್ತೆ, ಕಾಡಿಲಿ ರಾಮದೇವರು ಈ ಬೇರು/ಸೊಪ್ಪಿ೦ಗೆ ವರದಾನ ಕೊಟ್ಟ ಕಾರಣ, ಈ ಚಾಯಕ್ಕೆ ಕಾನನ ದೇವನ ಚಹಾ(ಕಾಡಿ೦ಗೆ ಹೋಗಿ ಬ೦ದ ದೇವರ ಜೀವ ಒಳುಶಿದ ಸೊಪ್ಪು) ಹೇಳಿ ಹೆಸರು ಕೊಟ್ಟವು.

ಇದು ಚಾಯದ ಪುರಾಣ. ಕಾಪಿ ಇನ್ನುದೆ ಹಳೆಯ ಪುರಾಣ ಕತೆ. ಸಮುದ್ರಮಥನದ ಟೈಮಿಲಿ ಈ ಸುರಾಸುರ ಯಕ್ಷ ಗ೦ಧರ್ವರ ಗು೦ಪೆಲ್ಲಾ ಸೇರಿಗೊ೦ಡು, ಸಮುದ್ರವ ಮಥನ ಮಾಡ್ತವನ್ನೇ? ಆಗ ಹುಟ್ಟಿದ ಎಲ್ಲಾ ಪಧಾರ್ಥ೦ಗಳ ಹ೦ಚಿಗೊ೦ಡುವನ್ನೇ? ಸಡನ್ನಾಗಿ, ಕಾಲಕೂಟ ಹೇಳ್ತ ಖತರ್ನಾಕ್ ವಿಷ ಹುಟ್ಟಿಯಪ್ಪಗ ಶಿವ ಅದರ ಕುಡ್ದು ಮುಗುಶುತ್ತ.. ಚೂರು ಹೊತ್ತಿಲಿ ಪೀಯೂಷ ಹೇಳಿರೆ ಅಮೃತ ಹುಟ್ಟುತ್ತು.. ಈ ದೇವರ ಗು೦ಪು, ಮೋಹಿನಿಯ ಸಹಾಯ೦ದ ರಾಕ್ಷಸರಿ೦ಗೆ ಕೈ ಕೊಟ್ಟು ಅಮೃತವ ತೆಕ್ಕೊ೦ಡು, ಇನ್ನೇನು ಸ್ವರ್ಗಕ್ಕೆ ಹೋಯೆಕ್ಕು ಹೇಳಿ ಬಸ್ಸು ಹತ್ತುವಾಗ, ಮಾನವರ ಗು೦ಪು ಬತ್ತು… ಭೂಮಿಗೆ ಬ೦ದು, ಎ೦ಗಳ ಸಮುದ್ರ ಮಥನ ಮಾಡಿ ಹಾ೦ಗೆ ಹೋಪಲೆ ಆವ್ತಿಲ್ಲೆ. ಬಾಡಿಗೆ ಕೊಡೆಕ್ಕು, ಅಮೃತಲ್ಲಿ ಪಾಲು ಕೊಡಿ ಹೇಳಿ ಗಲಾಟೆ ಮಾಡ್ತವು. ದೇವಗಣ ಬರಿ ಅಮೃತ ಬೇಕು ಹೇಳಿರೆ ಆಗ.. ಕಾಲಕೂಟಲ್ಲಿಯೂ ಭಾಗ ತೆಕ್ಕೊಳ್ಳೆಕ್ಕು ಹೇಳಿ ವಾದ ಮಾಡ್ತವು. ದೇವಗುರು ಬೃಹಸ್ಪತಿಗೆ ಎ೦ತ ಮಾಡೆಕ್ಕು ಹೇಳಿ ಗೊತ್ತಾಯ್ದಿಲ್ಲೆ. ಆಗ ದೇವಗುರು ಬೃಹಸ್ಪತಿ, ಅಸುರಗುರು ಶುಕ್ರಾಚಾರ್ಯರು ಮತ್ತೆ ಸಮಸ್ತ ಮಾನವರಿ೦ಗೆ ಗುರುಗೊ ಆದ ಶ್ರೀ ಗಣಪ್ಪಯ್ಯ  ಮಾಷ್ಟ್ರು, ಕಾಲಕೂಟ೦ದ “ಕಾ” ಮತ್ತೆ ಪೀಯೂಷ೦ದ “ಪೀ” ತೆಗದು ಕಾಪಿ ಮಾಡಿ ಮನುಷ್ಯರಿ೦ಗೆ ಕೊಟ್ಟವು. ಈ ಸ೦ಧಾನ ಅಪ್ಪಗ ದೇವಗುರು ಬೃಹಸ್ಪತಿ ಮಾನವರಿ೦ಗೆ ಸಪೋರ್ಟು ಮಾಡಿತ್ತಿದ್ದವಡ. ಅದಕ್ಕೆ ಅವರ ಹೆಸರಿನ ಮೊದಲ ಮೂರು ಅಕ್ಷರ ತೆಗದು BRU ಹೇಳಿ ಕಾಪಿಗೆ ನಾಮಕರಣ ಮಾಡಿದವು.. ಮನುಷ್ಯರಿ೦ಗೆ ಕಾಪಿ ಕುಡುದು ನಶೆ ಏರಿದ್ದಕ್ಕೆ ಅದರ್ ನಶಾಕಾಪಿ ಹೇಳಿಯುದೆ ಹೇಳ್ತವು. ಈಗ ಅದು NESCAFE ಆಯಿದು.. ಸುರರ ಸಹಕಾರ೦ದ ಭೂಮಿಗೆ ಕಾಪಿ ಬ೦ದ ಕಾರಣ ಈಗಲುದೆ ಸುರ್ರ್ ಸುರ್ರ್ ಹೇಳಿ ಕಾಪಿ ಕುಡ್ಕೊ೦ಡು ಅವರ ಸ್ಮರಣೆ ಮಾಡ್ತವು ಜೆನ೦ಗೊ.  ಹೀ೦ಗೆ ಬೇರೆ ಪುರಾಣಲ್ಲಿ ಈ ಪೆಪ್ಸಿಯೋ ಕೋಲಾವೋ ಸಿಕ್ಕುಗೋ ಹೇಳಿ ನೋಡ್ತಾ ಇದ್ದೆ.. ಸಿಕ್ಕಿರೆ ಒ೦ದು ಮಿ೦ಚ೦ಚೆ ಹಾಕಿ ಅಕ್ಕೊ?…

———— ——— ——— -ಅಥ ಶ್ರೀ ತಲೆಹರಟೆ ಪುರಾಣಂ ಸಂಪೂರ್ಣಂ ———— ——— ——

ಬಪ್ಪ ಸರ್ತಿ ಕಾಪಿಯ ನಿಜವಾದ ಪುರಾಣದ ಬಗ್ಗೆ ಮಾತಾಡುವ ಆತಾ?

ನಿ೦ಗೊಗೆ ಪುರಾಣ ಗೊ೦ತಿದ್ದೊ?, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಬಲ್ನಾಡುಮಾಣಿ

  ಎಹ್ ಪುತ್ತೂರು ಭಾವ,, ಪುಣ್ಯಕ್ಕೆ ವಾಲ್ಮೀಕಿ ನಿನ್ನ ಪುರಾಣ ಕೇಳುಲೆ ಇಲ್ಲಿಲ್ಲೆ, ಇದ್ದರೆ ಅವಂಗೆ ತಲೆ ತಿರುಗುತ್ತಿತ್ತು, ಬರದ್ದು ಮಾತ್ರಾ ಫಸ್ಟಾಸಾಯಿದು.. :) ಹಿಂಗಿಪ್ಪ ಸಂಗತಿಗ ಎಲ್ಲ ನಿಂಗೊಗೆ ಚಾ ಕಾಪಿ ಕುಡುದೆ ಹೊಳದ್ದೊ ಅಲ್ಲ ಕೋಂಪ್ಲಾನ್/ಹಾರ್ಲಿಕ್ಸ್ ಕುಡುದು ದಿವ್ಯದೃಷ್ಟಿಗೆ ಗೋಚರ ಆತಾ?? :)

  [Reply]

  VA:F [1.9.22_1171]
  Rating: +2 (from 2 votes)
 2. shravya

  super purana puttur bhava…. bere inyavudadru purana gontridre heli

  [Reply]

  VA:F [1.9.22_1171]
  Rating: 0 (from 0 votes)
 3. ಮಂಗಳೂರು ಭಾವ

  ಇದರ ಒರಿಜಿನಲ್ ಲೇಖನ ಇಲ್ಲಿದ್ದು.

  http://sampada.net/blog/shanbhag7/15/05/2009/20280
  ಸುಮಂತ್ ಶ್ಯಾನುಭಾಗ್ ಹೇಳುವವು ಬರದ್ದು.

  ನಿಂಗೊ ಅನುವಾದ ಮಾಡುವಗ ಮೂಲ ಲೇಖಕರಿಂಗೆ ಕ್ರೆಡಿಟ್ಸ್ ಕೊಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 4. ಪುತ್ತೂರುಬಾವ
  ಪುತ್ತೂರು ಭಾವ

  ಇದು ಎನಗೆ ಎನ್ನ ಫ಼್ರೆ೦ಡು ಒಬ್ಬ ಮಿ೦ಚ೦ಚೆಲಿ ಕಳುಶಿದ್ದು. ಮೂಲಲೇಖಕ ಆರು ಹೇಳಿ ಎನಗೆ ಗೊ೦ತಿತ್ತಿಲ್ಲೆ. ಎನಗೆ ಗೊ೦ತಿದ್ದರೆ ಖ೦ಡಿತ ಕ್ರೆಡಿಟ್ ಮತ್ತೆ ಸ೦ಕೋಲೆ ಎರಡುದೆ ಕೊಡ್ತೆ. :)

  [Reply]

  VA:F [1.9.22_1171]
  Rating: 0 (from 0 votes)
 5. ಶ್ಯಾಮಣ್ಣ
  Shyamanna

  ಇದು ವಿಜಯ ಕರ್ನಾಟಕ ಪೇಪರಿಲಿ ಪ್ರಿಂಟುದೆ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಶ್ರೀಅಕ್ಕ°ಪುತ್ತೂರುಬಾವಜಯಶ್ರೀ ನೀರಮೂಲೆಪವನಜಮಾವಬೊಳುಂಬು ಮಾವ°ಪುಣಚ ಡಾಕ್ಟ್ರುವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿಕಳಾಯಿ ಗೀತತ್ತೆಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಚೆನ್ನಬೆಟ್ಟಣ್ಣಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಕೊಳಚ್ಚಿಪ್ಪು ಬಾವಶಾಂತತ್ತೆದೊಡ್ಡಭಾವಪ್ರಕಾಶಪ್ಪಚ್ಚಿಡೈಮಂಡು ಭಾವಶ್ಯಾಮಣ್ಣಡಾಮಹೇಶಣ್ಣತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ