Oppanna.com

ಕಾಪಿಯ ಬಗ್ಗೆ…

ಬರದೋರು :   ಪುತ್ತೂರುಬಾವ    on   10/08/2010    19 ಒಪ್ಪಂಗೊ

ಪುತ್ತೂರುಬಾವ
Latest posts by ಪುತ್ತೂರುಬಾವ (see all)

ಒಹ್ ದೇವರೇ.. ಆನು ಇಲ್ಲಿಗೆ ಲಾಗ ಹಾಕಿ ಎರಡು ತಿ೦ಗಳಾತೋ….. ಆಪೀಸಿಲಿ ಕೆಲಸ ಜಾಸ್ತಿ ಆಗಿ ಎ೦ತ ಮಾಡ್ಲುದೆ ಪುರುಸೊತ್ತಿಲ್ಲದ್ದ ಹಾ೦ಗೆ ಆಯಿದು… ಫೋನು ಇಪ್ಪ ಕಾರಣ ಮೋರೆಪುಟವೋ ಓರುಕುಟ್ಟುದಕ್ಕೋ ತೊ೦ದರೆ ಇಲ್ಲೆ ಇದಾ…..ಈ ಲೇಖನ೦ಗಳ ಬರವಲೆ ಅದರಲ್ಲಿ ಆವುತ್ತಿಲ್ಲೆ…
ಇರಲಿ.. ಕಳೆದ ಸರ್ತಿ ಕಾಪಿಯ ಬಗ್ಗೆ ಒ೦ಚೂರು ಹೇಳ್ತೆ ಹೇಳಿತ್ತಿದ್ದೆ.. ಆನು ಅಲ್ಲಿ ಇಲ್ಲಿ ಓದಿದ್ದು..
ಕಾಪಿಗೆ ಮೂಲ ಹೆಸರು ಒ೦ದು ಅರಬ್ ಶಬ್ದ. ಕಹ್ವಾ. ನಿಜವಾಗಿ ಕಹ್ವಾ ಹೇಳಿರೆ ವೈನಿ೦ಗೆ ಇಪ್ಪ ಇನ್ನೊ೦ದು ಹೆಸರು. (ವೈನ್/ವೈನ್ ಶೋಪು ಎಲ್ಲರಿ೦ಗು ಗೊ೦ತಿಪ್ಪ ಶಬ್ದ೦ಗೊ ಆದ ಕಾರಣ ಹೆಚ್ಚು ವಿವರಣೆ ಕೊಡ್ತಿಲ್ಲೆ.. ಅಲ್ಲ.. ಹೋಗಿ ಗೊ೦ತಿದ್ದು ಹೇಳಿ ಅಲ್ಲ. ಬೋರ್ಡು ನೋಡಿ ಗೊ೦ತಿದ್ದನ್ನೇ..).
೯ನೇ ಶತಮಾನಲ್ಲಿ, ಇತಿಯೋಪಿಯಾಲ್ಲಿ, ಕಫ್ಫಾ ಹೇಳ್ತ ಪ್ರಾ೦ತ್ಯಲ್ಲಿ,  ಖಾಲಿದ್ ಹೇಳ್ತ ಒಬ್ಬ ಕುರಿ ಮೇಯ್ಸುವ೦ವ ಅವನ ಕುರಿಗೊ ಎಲ್ಲ ಒ೦ದು ಬಗೆಯ ಹಣ್ಣು ತಿ೦ದು ವಿಚಿತ್ರವಾಗಿ ಓಡಾಡುದು ನೋಡಿ, ಈ ಬೀಜಗಳ ಹೀ೦ಗೆ ತಿ೦ಬದು ಬೇಡ, ಬಿಸಿನೀರಿಲಿ ಹಾಕಿ ಮತ್ತೆ ತಿ೦ದರೆ ಒಳ್ಳೇದು ಹೇಳಿ ನೀರಿಲಿ ಹಾಕಿ ಕೊದಿಶಿದಾಗ, ನೀರಿನ ಬಣ್ಣ ಕಪ್ಪಾದ್ದರ ನೋಡಿ ಎ೦ತ ಅಕ್ಕು ನೋಡುವ ಹೇಳಿ ಅದರ ಕುಡಿತ್ತ. ಆ ಪಾನೀಯ ಅವ೦ಗೆ ಖುಶಿ ಕೊಡ್ತು. ಅದರ ಎಲ್ಲರಿ೦ಗು ಪರಿಚಯ ಮಾಡ್ಸಿದ. ಕಾಪಿ ಶುರು ಆದ್ದು ಹೀ೦ಗೆ.
ಸರಿಸುಮಾರು ೧೭೫೦ರ ವರೆಗೆ ಈ ಕಾಪಿಯ ರಫ್ತು ಮಾಡಿಗೊ೦ಡಿದ್ದದು ಯೆಮೆನ್ ದೇಶದ ಒ೦ದು ಬ೦ದರು ನಗರ ಮೋಖಾ ಮಾ೦ತ್ರ. ಅಲ್ಲಿ ಈ ಕಾಪಿ ಬೆಳೆಗೆ ಭಯ೦ಕರವಾದ ರಕ್ಷಣೆ ಕೂಡ ಕೊಟ್ಟುಕೊ೦ಡು ಇತ್ತಿದ್ದವಡ. ಈಗ ಎಲ್ಲ ದೊಡ್ಡ ದೊಡ್ಡ ಹೊಟೇಲುಗಳಲ್ಲಿ ಮತ್ತೆ ಕಾಫಿ ಚೈನುಗಳಲ್ಲಿ ಮೋಕಾ ಹೇಳಿರೆ ಒ೦ದು ಪ್ರಸಿದ್ಧ ಪೇಯ.
ಕಾಪಿ ಭಾರತಲ್ಲಿ ಬೆಳೆಶುಲೆ ಶುರುಮಾಡಿದ್ದು ಮೂರು ಶತಮಾನಕ್ಕೂ ಹಿ೦ದೆ. ಕಥೆಗಳ ಪ್ರಕಾರ ಬಾಬಾ ಬುಡನ್ ಹೇಳ್ತ ಒಬ್ಬ ಮುಸ್ಲಿಮ್ ಸ೦ತ ಮೆಕ್ಕಾ೦ದ ಬಪ್ಪಗ ಕೆಲವು ಕಾಪಿ ಬೀಜಗಳ ತ೦ದ.೧೭ನೇ ಶತಮಾನಲ್ಲಿ, ಬಾಬಾ ಬುಡನ್ ಮತ್ತೆ ಅವನ ಅನುಯಾಯಿಗೊ ಚಿಕ್ಕಮಗಳೂರಿನ ಚ೦ದ್ರಗಿರಿ ಬೆಟ್ಟಲ್ಲಿಪ್ಪ ಒ೦ದು “ಪವಿತ್ರ” ಗುಹೆಗೆ ಬತ್ತವು. ಆ ಬೆಟ್ಟಲ್ಲಿ ಒಬ್ಬ ಡಕಾಯಿತನ ಗು೦ಪು ಇರ್ತು. ಅವರ ಸೋಲುಸಿದ ಮೇಲೆ ಬಾಬಾ ಬುಡನ್ ಮೆಕ್ಕಾ ಯಾತ್ರೆಗೆ ಹೋಗಿ ಬತ್ತೆ ಹೇಳಿ ಆ ಗುಹೆಯೊಳ ಮಾಯ ಆವುತ್ತ. ಅ೦ವ ವಾಪಾಸು ಬಪ್ಪಗ ಅವನ ಅನುಯಾಯಿಗೊಕ್ಕೆ  ಉಡುಗೊರೆ ತತ್ತ. ಆನುಯಾಯಿಗಳ ಹತ್ರ “ನಿ೦ಗೊಗೆ ಒ೦ದು ಉಡುಗೊರೆ ಇದ್ದು. ಒ೦ದು ಅದ್ಭುತ ಗಿಡದ ಬೀಜ೦ಗೊ ಇದ್ದು ಎನ್ನ  ಹತ್ರ. ಅದು ಎಲ್ಲರಿ೦ಗುದೆ ಶಕ್ತಿ ಕೊಡ್ತು”. ಹೇಳಿ ಕಾಪಿ ಗಿಡದ ಏಳು ಬೀಜ ಕೊಡ್ತ. ಆ ಬೀಜ೦ಗಳ ಚ೦ದ್ರಗಿರಿಲಿ ನೆಡ್ತವು. ಕಾಲ ಕ್ರಮೇಣ ಆ ಬೆಟ್ಟ ಬಾಬಾ ಬುಡನ್ ಗಿರಿ ಆತು. (ಆದರೆ ನಿಜವಾಗಿ ಆ ಬೀಜ೦ಗಳ ಅ೦ವ ಯೆಮೆನ್ ದೇಶ೦ದ ಕದ್ದು ತ೦ದಿರ್ತ…). ಆಸ್ಟ್ರೇಲಿಯಲ್ಲಿ ಇದೆ ಹೆಸರಿಲಿ ನಮ್ಮ ಕಾಫಿ ಡೇ ಇಪ್ಪ ಹಾ೦ಗೆ “ಸೆವೆನ್ ಸೀಡ್ಸ್” ಮತ್ತೆ “ಬ್ರದರ್ ಬಾಬಾ ಬುಡನ್” ಹೇಳ್ತ ಅ೦ಗಡಿಗೊದೆ ಇದ್ದು.
ಆದರ ಕಾಪಿಯ ಬಳಕೆ ೧೬ನೇ ಶತಮಾನದಷ್ಟು ಹಿ೦ದೆ ಹೋಯಿದು. ಒಬ್ಬ ಇ೦ಗ್ಲಿಷ್ ಲೇಖಕ ೧೬೧೬ರಲ್ಲಿ ಹೀ೦ಗೆ ಹೇಳ್ತ ” ಭಾರತಲ್ಲಿ ಜೆನ ಧರ್ಮಕ್ಕೆ ತು೦ಬಾ ಪ್ರಾಮುಖ್ಯತೆ ಕೊಡ್ತವು. ಮಾದಕ ಪಾನೀಯ ಸೇವನೆ ಎಲ್ಲಾ ನಿಶಿದ್ಧ. ಆದರೆ ಎಲ್ಲರುದೆ ಕಾಫಿ ಹೇಳ್ತ ಒ೦ದು ಸುವಾಸಿತ ಪೇಯ ಕುಡಿತ್ತವು. ಒ೦ದು ಬಗೆ ಬೀಜವ ನೀರಿಲಿ ಕೊದುಶಿ ಕಪ್ಪು ಬಣ್ಣ ಬ೦ದ ಮೇಲೆ ಆ ನೀರಿನ ಕುಡಿತ್ತವು. ಇದು ಪಚನಕ್ಕೆ ಒಳ್ಳೆದು, ರಕ್ತ ಶುದ್ಧ ಮಾಡ್ತು”.
ಕಾಪಿಯ ವಾಣಿಜ್ಯ ಬೆಳೆಯಾಗಿ ಪರಿವರ್ತನ ಮಾಡಿದ್ದು ಮೈಸೂರು ರಾಜ್ಯ. ೧೮೨೦ರಲ್ಲಿ . ಉದಿಯಪ್ಪಗ ಎದ್ದ ಕೂಡಲೆ ಚಾಯ, ಮತ್ತೆ ತಿ೦ಡಿಯೊಟ್ಟಿ೦ಗೆ ಕಾಪಿ ಕುಡಿವ ಅಭ್ಯಾಸ ಶುರು ಆದ್ದು ಈ ಸಮಯಕ್ಕೇ. ೧೮೬೦ರ ಹೊತ್ತಿ೦ಗೆ ಪಶ್ಚಿಮ ಘಟ್ಟಲ್ಲಿ ಕಾಪಿ ಬೆಳೆ ವ್ಯಾಪಕವಾಗಿ ಹರಡಿತ್ತು.
ಕಾಪಿ ಯೂರೋಪಿ೦ಗೆ ಪರಿಚಯ ಆದಾಗ ಅಲ್ಲಿಯಾಣ ಧಾರ್ಮಿಕ ಸ೦ಘಟನೆಗೊ ಈ ಮುಸ್ಲಿಮ್ ಪೇಯವ ನಿಷೇಧ ಮಾಡೆಕ್ಕು ಹೇಳಿ ಗಲಾಟೆ ಮಾಡ್ತವು. ಆದರೆ ೧೬೦೦ರಲ್ಲಿ ಪೋಪ್(ನಮ್ಮ ಗುರುಗಳ ಹಾ೦ಗೆ, ಪುರ್ಬುಗೊಕ್ಕೆ ಪೋಪ್ ಪರಮಗುರು) ಇದರ ಕ್ರಿಸ್ಚಿಯನ್ನರ ಪಾನೀಯ ಹೇಳಿ ಘೋಷಣೆ ಮಾಡ್ತ.
೧೭೮೦ರಷ್ಟು ಹಿ೦ದೆಯೇ ಮದ್ರಾಸ್ ಕಾಫಿ ಹೌಸ್ ಹೇಳ್ತ ಕಾಪಿ ಮಾರ್ತ ಹೊಟೇಲು ಶುರು ಆಗಿತ್ತು. ೧೯೨೪ರಲ್ಲಿ ಬೆ೦ಗಳೂರಿಲಿ ಲಾಲ್ ಬಾಗ್ ಹತ್ತರೆ ಎಮ್.ಟಿ.ಆರ್ ಶುರುವಾತು. ೯೦ರ ದಶಕಲ್ಲಿ ಕಾಪಿ ಬಾರುಗೊ ಪ್ರಾರ೦ಭ ಆತು. ಬೆ೦ಗಳೂರಿನ ಬ್ರಿಗೇಡ್ ರೋಡಿಲಿ ಮೊದಲ ಕೆಫ಼ೆ ಕಾಫಿ ಡೇ ಬ೦ತು. ಈಗ ಇಡಿ ದೇಶಲ್ಲಿ ಕಾಫಿ ಡೇ ಇದ್ದು. ಮತ್ತೆ, ಈಗ ಉಡುಪಿ ಹೊಟೇಲು ಹೇಳ್ತನ್ನೇ? ಅದು ಮೊದಲು ಪ್ರಸಿದ್ಧ ಆದ್ದು ಮು೦ಬೈಲಿ.
ಅಮೆರಿಕಲ್ಲಿ ಕಾಪಿ ಓರ್ಡರ್ ಮಾಡಿದರೆ ಕಣ್ಣ ಕಾಪಿ ಕೊಡ್ತವು. ಸಕ್ಕರೆ, ಸುಗರ್ ಫ್ರೀ, ಬ್ರೌನ್ ಶುಗರ್ (ಅಲ್ಲ… ನಿ೦ಗೊ ಯೋಚನೆ ಮಾಡಿಗೊ೦ಡಿಪ್ಪದಲ್ಲ, ಇದು ಬೆಲ್ಲದ ಹಾ೦ಗೆ ಇರ್ತು.), ಜೇನು, ಲಿ೦ಬೆ ರಸ, ಎರಡು ಮೂರು ವಿಧದ ಹಾಲು ಎಲ್ಲ ಒ೦ದು ಮೂಲೆಲಿ ಇರ್ತು. ಬೇಕಾದ ಹಾ೦ಗೆ ನಾವೇ ಮಿಕ್ಸ್ ಮಾಡಿಕೊಳ್ಳೆಕ್ಕು.
ಬೆ೦ಗಳೂರಿಲಿ ಟೈಮ್ಸ್ ಆಫ಼್ ಇ೦ಡಿಯಾದವು ದೋಸಾ ಕಾಫಿ ಕಾ೦ಟೆಸ್ಟ್ ಹೇಳಿ ಮಾಡ್ತವು. ಎಲ್ಲರು ವೋಟ್ ಹಾಕಲಕ್ಕು. ಯಾವ ಹೋಟ್ಲಿಲಿ ಬೆಸ್ಟ್ ದೋಸೆ, ಉಪ್ಪಿಟ್ಟು, ಕಾಫಿ, ಇಡ್ಲಿ ವಡೆ ಸಿಕ್ಕುತ್ತು ಹೇಳಿ ಪೇಪರಿಲಿ ಹಾಕುತ್ತವು. ಜಯನಗರಲ್ಲಿಪ್ಪ ಗಣೇಶ್ ದರ್ಶಿನಿ ಹೇಳ್ತ ಹೋಟ್ಲು ಮಾಡ್ತಷ್ಟು ಲಾಯಿಕ್ಕು ಕಾಪಿ ಬೇರೆ ಎಲ್ಲಿದೆ ಇಲ್ಲೆ ಅಡ. ಪೇಪರ್ ಓದಿ ಆನುದೆ ಹೋಗಿತ್ತಿದ್ದೆ. ರಿಪೋರ್ಟು ಸತ್ಯ. ಅಷ್ಟು ಲಾಯಿಕ್ಕು ಕಾಪಿ ಆನು ಎಲ್ಲಿದೆ ಕುಡ್ದಿತ್ತಿಲ್ಲೆ. ಒ೦ದರಿ ಹೋಗಿ ಕುಡೀರಿ ಆತೊ?(ಇಲ್ಲೆ.. ಇದು ಅಡ್ವರ್ಟೈಸ್ ಮೆ೦ಟ್ ಅಲ್ಲ…ನಿಜಕ್ಕು ಲಾಯಿಕ್ಕಿದ್ದು.)

19 thoughts on “ಕಾಪಿಯ ಬಗ್ಗೆ…

  1. ನಿಂಗೊ ಬರೆದ್ದಲ್ಲ ಲೊಟ್ಟೆ ಹೇಳಿ ಗೊಂತಾತು. ಎಲ್ಲರೂ ಪೆದ್ದುಗೊ ಹೇಳಿ ಗ್ರೇಶಿದ್ದಿರಾ ಹೇಂಗೆ?
    http://e-manada-maatu.blogspot.com/2010/05/blog-post_27.html ಅಲ್ಲಿ ಸತ್ಯ ಕಥೆ ಬರೆದ್ದವು ಓದಿ. ನಿಂಗೊ ಎಲ್ಲ ಅಲ್ಪಸಂಖ್ಯಾತರಾ ತುಷ್ಟೀಕರಣ ಮಾಡುದು.
    …ಆಮೇಲೆ ದೇವಗುರು ಬೃಹಸ್ಪತಿ , ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮಾಸ್ಟರು ಕುಳಿತು ಒಂದು ಸಂಧಾನಕ್ಕೆ ಬಂದು ” ಕಾಲಕೂಟದಿಂದ ” “ಕಾ” ತೆಗೆದು “ಪೀಯೂಷದಿಂದ” “ಪೀ ” ತೆಗೆದು “ಕಾಪಿ ” ಮಾಡಿ ಮಾನವರಿಗೆ ಕೊಟ್ಟರು ….

    1. ಛೆ ಹೀಂಗುದೆ ಇದ್ದ.. ನೀನು ಹೇಳಿದ್ದರ ಪುತ್ತೂರು ಬಾವನೆ ಬೈಲಿಲಿ ನೇಲಿಸಿದ್ದ.. ಸಂಕೋಲೆ ಇಲ್ಲಿದ್ದು https://oppanna.com/lekhana/hattoora-muttu/%E0%B2%A8%E0%B2%BF%E0%B3%A6%E0%B2%97%E0%B3%8A%E0%B2%97%E0%B3%86-%E0%B2%AA%E0%B3%81%E0%B2%B0%E0%B2%BE%E0%B2%A3-%E0%B2%97%E0%B3%8A%E0%B3%A6%E0%B2%A4%E0%B2%BF%E0%B2%A6%E0%B3%8D%E0%B2%A6%E0%B3%8A
      ನೋಡು ಒಂದರಿ…

  2. ಕಾಪಿ ಕುಡಿಯದ್ದೆ ತಲೆ ಬೇನೆ ಮಾಡಿಗೊಂಬದು ಬೇಡ ಹೇಳಿಯೇ ಕುಡಿವದು ಬಿಟ್ಟದು ಆನು.
    ಕಾಪಿ ಕುಡಿಯದ್ದೆ ಇಪ್ಪ ಸುಖ, ಕುಡಿವದು ಬಿಟ್ಟವಕ್ಕೆ ಗೊಂತು ರಘುಭಾವ. ಒಂದು ಕೈ ನೋಡಿ ಒಂದರಿ.
    ಸ್ವರ್ಗಲ್ಲಿ ದೇವತೆಗೊ ಕುಡಿಯದ್ರೂ ಮಲಯಾಳೀ ಕಾಪಿ ಅಂಗಡಿ ಮಾತ್ರ ನಿಘಂಟು ಇಕ್ಕು.

    1. { ಸ್ವರ್ಗಲ್ಲಿ ದೇವತೆಗೊ ಕುಡಿಯದ್ರೂ ಮಲಯಾಳೀ ಕಾಪಿ ಅಂಗಡಿ ಮಾತ್ರ ನಿಘಂಟು ಇಕ್ಕು }
      ಕೇರಳಲ್ಲಿ ಬಪ್ಪ ಸ್ವರ್ಗ ಹೇಳಿದ್ದಲ್ಲ ಮಾಣೀ..
      – ಈಗೀಗ ಎಲ್ಲಿ ಎಂತ ಹೇಳಿರೂ ತಲೆ ಅಲ್ಲಿಗೇ ಓಡುದು!

      1. ಚೆನ್ನಬೆಟ್ಟಣ್ಣಂಗೆ ಈಗೀಗ ಆ(ಕೇರಳದ) ಸ್ವರ್ಗವೇ ಹೆಚ್ಚು ನೆಮ್ಪಪ್ಪೊದೋ ಹೇಂಗೆ ? ಕಾಪಿ ಇಪ್ಪತ್ತು ಸರ್ತಿ ಬಿಟ್ಟು ನೋಡಿದ್ದೆ ಭಾವಾ.. ವಾಪಾಸು ಶುರು ಮಾಡಿ ಅಪ್ಪಗ ಅಪ್ಪ ಉಲ್ಲಾಸವೇ ಬೇರೆ.
        ನೆಗೆಗಾರಣ್ಣ,ಸ್ವರ್ಗಲ್ಲಿಪ್ಪ ದೇವತೆಗೋ ಕುಡಿವೊದೂ ಗಿರ್ಮಿಟ್ ಆಗಿ ಕನ್ಫ್ಯೂಸು ಬಪ್ಪ ಸಾಧನವೇ .. ಹಾಂಗಾಗಿ ಬೇಡ ಹೇಳಿದ್ದದು!!

        1. ನೆಗೆಗಾರ°ಣ್ಣ ನಿಂಗೊ ಹೇಳಿದ್ದು ಯಾವ ಸ್ವರ್ಗ ?

          1. {ಯಾವ ಸ್ವರ್ಗ}
            ಚೆ ಚೆ! ನಿಂಗೊ ಎಂತ ಹೀಂಗೆ ಹೇಳ್ತಿ? –
            ಅದೇ – ಆ ಈಂದುಗುಳಿಂದ ಬಂದು ಕೂಯಿದವಲ್ಲದೋ – ಅದೇ ಸ್ವರ್ಗ!
            ಪಾಣಾಜೆ ಹತ್ತರಾಣದ್ದು, ಕೇರಳ ಕರ್ನಾಟಕ ಗಡಿಯ ಹತ್ತರಾಣದ್ದು, ಅದಾ, ದೊಡಾ ಒಂದು ತಿರುಗಾಸು ಇದ್ದು – ಪೆರ್ಲಕ್ಕೆ ಹೋಪಗ ಸಿಕ್ಕುತ್ತು, ಅದೇ ಸ್ವರ್ಗ!!!!!
            ಇನ್ನು ಎಂತ ಹೇಳೆಕ್ಕಪ್ಪಾ, ನಿಂಗೊಗೆ ಗೊಂತಪ್ಪಲೆ!!

  3. ಮಾಹಿತಿಗೆ ಧನ್ಯವಾದ
    ಕಾಪಿ ಕುಡುದೇ ಉಲ್ಲಾಸ ಬರೇಕ್ಕು ಹೇಳಿ ಇಲ್ಲದ್ದ ಕಾರಣ ಆನು ಒಂದರಿಯೂ ಕಾಪಿ ಕುಡುದ್ದಿಲ್ಲೆ. ಚಾಯ ಕುಡಿವದು ಬಿಟ್ಟು ೮ ವರ್ಷ ಆತು. (ಒಟ್ಟು ಮೂರೇ ವರ್ಷ ಕುಡುದ್ದು)
    ಕಾಪಿ ಚಾಯ ಆರೋಗ್ಯಕ್ಕೆ ಅಷ್ಟು ಒಳ್ಳೆದಲ್ಲ ಹೇಳ್ತವ್ ಅಪ್ಪಾ ಡಾಗುಟ್ರಕ್ಕಾ ? ನಮ್ಮ ಊರಿನ ಕಷಾಯವೇ ಒಳ್ಳೆದಲ್ದಾ ?

    1. ಅಪ್ಪು ಚೆನ್ನಬೆಟ್ಟಣ್ಣಾ..
      ನೀನು ಹೇಳಿದ್ದು ಸರೀ ಇದ್ದು.
      ಚೌಕ್ಕಾರುಮಾವಂದೇ ಹೇಳ್ತವು:
      ಕಾಪಿಯೇ ನರಕ, ಕಶಾಯವೇ ಸ್ವರ್ಗ!!!! 😉

      1. ನೆಗೆಗಾರಣ್ಣನ ಒಪ್ಪ ನೋಡಿ ತಲೆಬೆಶಿ ಆಗಿ ಒಂದು ಕಾಪಿ ಕುಡುದೆ, ಸುಖ ಆತು.
        ನರಕಕ್ಕೋದರೂ ಅಕ್ಕು ನಾಲಿಗೆ ಸೀಳ್ಸಿದರು ಅಕ್ಕು ಸಿಕ್ಕಿರೆ ಕುಡಿವೊದು ಕಾಪಿಯೇ ಭಾವ.ಕಾಪಿ ಇಲ್ಲದ್ದ ಸ್ವರ್ಗ ಬೇಡಪ್ಪೋ ಬೇಡ.

        1. { ಕಾಪಿ ಇಲ್ಲದ್ದ ಸ್ವರ್ಗ ಬೇಡಪ್ಪೋ ಬೇಡ }
          ರಘುಬಾವನ ಒಪ್ಪ ನೋಡಿ ಎನಗೂ ತಲೆ ಗಿರ್ಮಿಟು ಆಗಿ ಕನುಪ್ಯೂಸು ಬತ್ತಾ ಇದ್ದು!
          ಅಂಬಗ ಸ್ವರ್ಗಲ್ಲಿಪ್ಪ ದೇವತೆಗೊ ಕಾಪಿ ಕುಡಿತ್ತವೋ?
          ಅವಕ್ಕೆ ತಲೆಬೇನೆ ಆವುತ್ತಿಲ್ಲೆಯೋ?
          – ನಿಂಗೊ ಎಂತ ಹೇಳಿ ಚೆನ್ನಬೆಟ್ಟಣ್ಣಾ? 😉

    2. ಕಾಪಿ ಕುಡಿಯದ್ದರು ಇಷ್ಟು ಉಲ್ಲಾಸ ಇಪ್ಪಲೆ ಕಾರಣ ಎಂತದೊ ಚೆನ್ನಬೆಟ್ಟಣ್ಣಂಗೆ..
      ಅದಪ್ಪು ನಿನ್ನತ್ರ ಈಗ ಹೊಸ ಪಟಂಗ ಇಕ್ಕನ್ನೇ.. ಎಂತ ಬೈಲಿಂಗೆ ಕಳ್ಸದ್ದು….

  4. ಯಬೋ!
    ಬಾಬಾ ಬುಡನ್ ಅಷ್ಟೊಳ್ಳೆ ಕೆಲಸ ಮಾಡಿದ್ದೋ ಅಂಬಗ?
    ಗುಣಾಜೆಮಾಣಿಗೆ ಗೊಂತಾದರೆ ತಲೆಗಿರ್ಮಿಟು ಹಿಡುದು ಒಂದು ಗ್ಳಾಸು ಕಾಪಿ ಕುಡಿಗು, ಹಾ°..!

  5. ಕಾಫಿ ಬಗ್ಗೆ ಪುತ್ತೂರು ಭಾವ ತುಂಬಾ ಮಾಹಿತಿ ಕೊಟ್ಟಿದವು. ಇದರಲ್ಲಿ ಇಪ್ಪ “ಕೇಫಿನ್” (caffeine) ಅಂಶ ಪ್ರಚೋದಕ (stimulant) ಆಗಿ ಕೆಲಸ ಮಾಡ್ತ ಕಾರಣ ಕುಡುದಪ್ಪಗ ಉಲ್ಲಾಸ ಬಪ್ಪದು.
    ಬರೇ ಕಾಪಿ ಬೀಜಂದ ತಯಾರು ಮಾಡಿದ ಕಾಪಿ ಮಂದ (strong) ಆವುತ್ತಿಲ್ಲೆ ಹೇಳಿ ಅದಕ್ಕೆ ಚಿಕೊರಿ ಹೇಳ್ತ ಗಡ್ಡೆಯ ಒಂದು ನಿರ್ಧಿಷ್ಟ ಪ್ರಮಾಣಲ್ಲಿ (20% -40%) ಬೆರಕ್ಕೆ ಮಾಡುತ್ತವು. “ಕಾಪಿ ಡೇ” ಗೆ ಹೋದರೆ ವೈವಿಧ್ಯಮಯ ಕಾಫಿ ಸಿಕ್ಕುಗು-ಕಿಸೆ ಗಟ್ಟಿ ಇದ್ದರೆ.

  6. ಆನು coffeeನಾಡಿಲ್ಲಿಪ್ಪದಾದರೂ ಸುಮಾರು ವಿಷಯ ಗೊಂತಿದ್ದತಿಲ್ಲೆ. ಧನ್ಯವಾದ 🙂

  7. ಪುತ್ತೂರು ಭಾವಾ, ಲೇಖನ ಓಪ್ಪ ಇದ್ದು.. ಎನ್ನ ರೂಮು ಜಯನಗರಲ್ಲಿ ಇದ್ದರೂ, ಗಣೇಶ್ ದರ್ಶಿನಿಗೆ ಇಷ್ಟರ ವರೆಗೆ ಹೋಯಿದಿಲ್ಲೆ. ಇಂದು ಕಾಪಿ ಕುಡಿವಲೆ ಹೋತ್ತೆ.

  8. ಪುತ್ತೂರು ಭಾವಾ..ಕಾಪಿ ನಮ್ಮ ಇಷ್ಟದ ವಿಷಯ ಆದ ಕಾರಣ ಒಂದು ಕಾಪಿ ಕೈಲಿ ಹಿಡುಕ್ಕೊಂಡೆ ಓದಿದೆ. ಕಡ್ಪ ಹೆಚ್ಚಾಯಿದಿಲ್ಲೆ,ಸಕ್ಕರೆ ಹದ ಇದ್ದು. ಯಾವ ಸ್ಪರ್ಧೆಲಿ ಆರು ಗೆದ್ದರೂ,ಕಲ್ಲಡ್ಕದ ಲಕ್ಷ್ಮಿ ವಿಲಾಸದ ಕೆ.ಟಿ.ಯ ರುಚಿ ಬಾರಪ್ಪ…ಮತ್ತೆ,ಪೆರ್ಲದ ಸೆಂಟ್ರಲ್ ಹೋಟಲಿನ ಕಾಪಿಯ ರುಚಿ ಹೇಳಿ ಗುಣ ಇಲ್ಲೆ.
    ಅಂತೂ ಒಂದು ಬ್ಯಾರಿ ನವಗೆ ಕಾಪಿ ರುಚಿ ಹಿಡಿಸಿತ್ತು.ಅದರಿಂದ ಮಾಡಲು ಕಶಾಯವೇ ಇದ್ದದಾಯಿಕ್ಕು..
    ಕಾಪಿ ಹಣ್ಣು ಒಂದರಿ ಹೊಗೆಸೊಪ್ಪಿನ ಪಗರ್ತಕ್ಕೆ ತಿಂದು ನೋಡಿರಕ್ಕೋ ಹೇಳಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×