Oppanna.com

ಮೂರು ಮುತ್ತು.. ಸ೦ಚಿಕೆ ಮೂರು..

ಬರದೋರು :   ಪುತ್ತೂರುಬಾವ    on   06/06/2010    1 ಒಪ್ಪಂಗೊ

ಪುತ್ತೂರುಬಾವ
Latest posts by ಪುತ್ತೂರುಬಾವ (see all)

ಕಳದ ವಾರ ಎನಗೆ ಉತ್ತರ೦ಗಳ ಕೊಡ್ಲೆ ಆಯಿದಿಲ್ಲೆ. ಆನು ಎನ್ನ ಕೆಲವು ಫ಼್ರೆ೦ಡ್ಸುಗಳ ಒಟ್ಟಿ೦ಗೆ ಅಮೆರಿಕದ ರಾಜಧಾನಿಗೆ ಸಣ್ಣ ಟ್ರಿಪ್ಪು ಹೋಗಿತ್ತಿದ್ದೆ..  ವಾಪಸು ಬ೦ದ ಮೇಲೆ ಕೆಲಸದ ರಾಶಿ…. ಇರಲಿ.. ಕಳದ ಸರ್ತಿಯಾಣ ಪ್ರಶ್ನೆಗೊಕ್ಕೆ ಉತ್ತರ ಇಲ್ಲಿದ್ದು..
೧. ಪುರಾತನ ಗ್ರೀಸಿಲಿ ೬೦೦ ಗಜ ಹೇಳಿರೆ ಒ೦ದು ಸ್ಟೇಡಿಯಾ.. ಇದರಿ೦ದಲೆ ನಮ್ಮ ಸ್ಟೇಡಿಯಮ್ ಹೇಳ್ತ ಶಬ್ದ ಬ೦ದದ್ದು.
೨. ೨೦೦೭ರಲ್ಲಿ ಆದ ಒಪ್ಪ೦ದ ನಮ್ಮ ದೇಶ೦ದ ಮಾವಿನ ಹಣ್ಣು ರಫ಼್ತು ಮಾಡಿರೆ ಅಮೆರಿಕದವು ಹಾರ್ಲಿ ಡೇವಿಡ್ಸನ್ ಹೇಳ್ತ ಕ೦ಪನಿಯ ಬೈಕು ಕಳುಶುಲೆ ಒಪ್ಪಿತ್ತಿದ್ದವು. ಆದರೆ ಈ ಒಪ್ಪ೦ದ ಜಾಸ್ತಿ ದಿನ ನಡದ್ದಿಲ್ಲೆ. ಬೈಕಿ೦ಗೆ ೯೦% ಶುಲ್ಕ ಜಾಸ್ತಿ ಕೊಡೆಕ್ಕು ಹೇಳಿ ಹಾರ್ಲಿ ಡೇವಿಡ್ಸನ್ ಕ೦ಪನಿಯವರ ಬೇಡಿಕೆ. ಅದು ಭಾರತಕ್ಕೆ ಒಪ್ಪಿಗೆ ಆಯಿದಿಲ್ಲೆ.
೩. ಈ ಚಿತ್ರಲ್ಲಿಪ್ಪದು ೫ ಎಮ್.ಬಿ. ಹಾರ್ಡ್ ಡ್ರೈವ್. ೧೯೫೬ ರ ಚಿತ್ರ ಇದು. ಅ೦ದ ಹಾ೦ಗೆ ಕ೦ಪ್ಯೂಟರು ಬ೦ದ ಶುರುವಿ೦ಗೆ ಐ.ಬಿ.ಎಮ್ ಕ೦ಪನಿಯ ಅಧ್ಯಕ್ಷ ಹೇಳಿತ್ತಿದ್ದ ಅಡ. ಒಬ್ಬ ಮನುಷ್ಯ೦ಗೆ ೨೫೬ ಕೆ.ಬಿ ಡೇಟಾ ಇದ್ದರೆ ಸಾಕು ಹೇಳಿ. ಈಗ ನವಗೆ ಒ೦ದು ಟೆರಾ ಬೈಟ್ ಇದ್ದರು ಕಡಮ್ಮೆ ಹೇಳಿ ಆಯಿದು..
ಭಾಗವಹಿಸಿದವಕ್ಕೆಲ್ಲಾ ಧನ್ಯವಾದ…..
ಈ ಸರ್ತಿಯಾಣ ಪ್ರಶ್ನೆಗೊ…
೧. ಪೋರ್ಚುಗೀಸಿನ ಒ೦ದು ಕುಟು೦ಬದವ್ವು, ಮಾದ್ರೆ ದೆ ದೆವುಸ್ ಚರ್ಚಿನ ೧೫೭೫ರಲ್ಲಿ ಕಟ್ಟಿದವು. (ಪುತ್ತೂರಿಲಿದೆ ಒ೦ದು ಹೀ೦ಗಿಪ್ಪ best replica rolex watches ಚರ್ಚು ಇದ್ದು. ಬಸ್ಟೇ೦ಡಿನ ಹತ್ತರ ಇಪ್ಪ ವಿಕ್ಟರ್ಸ್ ಶಾಲೆಯ ಚರ್ಚು.)
ದಾಮರ್ಲ ಚೆನ್ನಪ್ಪ ನಾಯಕನ ಮಗ ವೆ೦ಕಟಪತಿ ನಾಯಕ ಹೇಳ್ತ೦ವ ಪೊರ್ಚುಗೀಸಿನ ಒಬ್ಬ ಗುರಿಕಾರ ಡಿ ಫ಼್ರಾನ್ಸಿಸ್ ಹೇಳುವವನ ಒಟ್ಟಿ೦ಗೆ ೧೬೪೦ರಲ್ಲಿ ಒ೦ದು ಒಪ್ಪ೦ದಕ್ಕೆ ಬತ್ತ..
ಈ ಎರಡು ವಿಷಯಕ್ಕೆ ಸ೦ಬ೦ಧ ಎ೦ತ ಹೇಳಿ ಹೇಳ್ತೀರಾ?
೨. ೨೦ನೇ ಶತಮಾನದ ಪ್ರಮುಖ ವ್ಯಕ್ತಿಗಳ ಪಟ್ಟಿಲಿ ಕೇವಲ ಮೂರು ಜೆನ ಮಾ೦ತ್ರ ಭಾರತದವು ಇದ್ದದ್ದು. ಅದು ಯಾರೆಲ್ಲಾ ಹೇಳಿ ಗೊ೦ತಿದ್ದಾ?
೩.ಈ ಚಿತ್ರಲ್ಲಿ ಇಪ್ಪದು ಯಾರು ಹೇಳಿ ಗೊ೦ತಿದ್ದಾ? ನವಗೆಲ್ಲ ತು೦ಬಾ ಉಪಕಾರ ಮಾಡಿದ ಮನುಷ್ಯ ಇದು…..

ಉತ್ತರ ಬಪ್ಪ ವಾರ…

One thought on “ಮೂರು ಮುತ್ತು.. ಸ೦ಚಿಕೆ ಮೂರು..

  1. ೧.ಪೋರ್ತುಗೀಸ್ ನ ವಸಹಾತಿನ ಉನ್ನತ ಅಧಿಕಾರಿಯ ಹೆಸರು ಮಾದ್ರ ದೆ ಸಾಯ್ಸ್ ಇವನಿಂದಾಗಿ ಮದರಾಸು ಹೇಳುವ ಹೆಸರು ಬಂತು ಹೇಳಿ ಒಂದು ವಾದ ಇದ್ದು. ಮದ್ರಾಸು’ ಎಂಬ ಹೆಸರು ‘ಮದ್ರಾಸುಪಟ್ನಂ’ಪದದ ಬಂದದು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯೋರು ‘ಮದ್ರಾಸುಪಟ್ನಂನ ಖಾಯಂ ನೆಲೆಗಾಗಿ ೧೬೩೯ರಲ್ಲಿ ಆಯ್ಕೆ ಮಾಡಿಕೊಂಡತ್ತು. . ಮದ್ರಾಸು ನಗರದ ಹತ್ತರೆ ‘ಚೆನ್ನಪಟ್ಟಣಂ’ ಎಂಬ ಪೇಟೆ ಇತ್ತು. ಈ ಪಟ್ಟಣವ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶಾಶ್ವತ ವಸಾಹತು ಮಾಡ್ಲೆ, ದಮೆರ್ಲ ವೆಂಕಟಾದ್ರಿ (ದಾಮರ್ಲ ಚೆನ್ನಪ್ಪ ನಾಯಕನ ಮಗ ವೆ೦ಕಟಪತಿ ನಾಯಕ) 22ನೇ ಆಗಸ್ಟ್ 1639ರಂದು ಈ ಪ್ರದೇಶವನ್ನು ಕ್ರಯಕ್ಕೆ ತೆಗೆದುಕೊಂಡವು. ಬ್ರಿಟಿಷರು ಈ ಜಾಗಗೆ ಮದ್ರಾಸೆಮನ್ ಹೇಳಿ ಹೆಸರು ಕೊಟ್ಟವು. ‘ಚೆನ್ನಪಟ್ಟಣಂ’ ಮತ್ತು ದಾಮರ್ಲ ಚೆನ್ನಪ್ಪ ನಾಯಕನ ಮಗ ವೆ೦ಕಟಪತಿ ನಾಯಕ ಇವರಿಂದಾಗಿ ಚೆನೈ ಹೆಸರು ಬಂತು. ಮದ್ರಾಸುಪಟ್ನಂ ಮದ್ರಾಸಾತು. ‘ಚೆನ್ನಪಟ್ಟಣಂ ಚೆನೈ ಆತು.
    ೨. ಮಹಾತ್ಮ ಗಾಂಧಿ, ಮದರ್ ಥೆರೆಸಾ,ನೆಹರು
    ೩.ಡಾ. ಡೊಗ್ಲಾಸ್ ಏಂಗೆಲ್ಬರ್ಟ್.(Dr.Douglas Engelbart). He is best known for inventing the computer mouse,
    ವಿ.ಸೂ.
    ಸಂಚಿಕೆ ೨ ರ ಬಗ್ಗೆ:
    ೬೦೦ ಪೀಟ್ (607 feet) = Stadia or Stadion (Ref:Any Oxford Dictionary)
    ಒಂದು ಗಜ = ೧ ಪೀಟ್ ಅಲ್ಲ. ೧ ಗಜ = ಸುಮಾರು ೧ ಮೀಟರ್. (ಸುಮಾರು ೩ ಅಡಿ) (Ref:ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು). ನಿಂಗಳ ಅಭಿಪ್ರಾಯ ಏನು ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×