ಪುತ್ತೂರು ಬಾವಂದು ಹತ್ತೂರ ಮುತ್ತುಗೊ!

May 12, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪುತ್ತೂರುಬಾವನ ಗುರ್ತ ಮಾಡ್ಳೆ ಕಷ್ಟ ಏನಿಲ್ಲೆ!
ಈಗ ಇಪ್ಪದು ಅಷ್ಟು ದೂರದ ಅಮೇರಿಕಲ್ಲಿ ಆದರೂ ಅವರ ಮೂಲ ಪುತ್ತೂರು.
ಮಯೂರ ಟಾಕೀಸಿನ ಒರಿಂಕಿನ ಮಾರ್ಗಲ್ಲಿ ಹೋಗಿ, ಉರುಳಾಂಡಿಲಿ ಗುಡ್ಡೆಹತ್ತಿ ಇಳುದರೆ ಪೊಟ್ಟುಬಾವಿಯ ಕರೆಲಿ ಇಪ್ಪದೇ ಇವರ ಮನೆ!
ಬಾಳೆಕಾನದ ಬಾಳೆಸೆಸಿ ಬಗ್ಗಿರೆ ಇವರ ಒಳಚ್ಚಲಿಂಗೇ ಬೀಳುದು! ಅರೆವಾಶಿ ಬಾಳೆಗೊನೆ ಇದೇ ಪುತ್ತೂರುಬಾವಂಗೆ ಸಿಕ್ಕುಗೊಂಡಿತ್ತು!
ಇದೇ ಕಾರಣಕ್ಕೆ ಅವಕ್ಕೆ ಯೇವತ್ತುದೇ ಜಗಳ ಆಯ್ಕೊಂಡಿತ್ತಿದ್ದು, ಮದಲಿಂಗೆ .
(ಇಬ್ರಮನೆಲಿಯೂ ಬೈದಕಾರಣ ಒಬ್ಬ° ಅಮೇರಿಕಕ್ಕುದೇ, ಇನ್ನೊಂದು ಹಾಸನಕ್ಕುದೇ ಪದುರಾಡು!, ಅದು ಬಿಡಿ!)

ಅಮೇರಿಕಕ್ಕೆ ಎತ್ತುವ ಮದಲು ಹತ್ತೂರು ಕಂಡಿದವು.
ಸುರೂವಿಂಗೆ ಪುತ್ತೂರು, ಮತ್ತೆ ಕಲುಮಡ್ಕ, ಮತ್ತೆ ಮಾಡಾವು, ಅದಾಗಿ ಮಯಿಸೂರು, ಅದರ ಸುತ್ತುಮುತ್ತ ಹಲವಾರು ಊರುಗೊ 😉 , ಅದಾಗಿ ಬೆಂಗುಳೂರು- ಮತ್ತೂ ಯೇವದೇವದೋ ಊರುಗೊ! – ಈಗ ಅಮೇರಿಕ, ಮಾಷ್ಟ್ರುಮಾವನ ಮಗನ ಊರು!!
(ಮಯಿಸೂರಿಲಿಪ್ಪಗ ಕೊಳಚ್ಚಿಪ್ಪು ಬಾವ ಕೆಲಾವುಸರ್ತಿ ಕಾಂಬಲೆ ಹೋಗಿಯೊಂಡಿತ್ತಿದ್ದನಾಡ! )

ಅದೆಲ್ಲ ಇರಳಿ,
ಓ ಮೊನ್ನೆಪುತ್ತೂರತ್ತೆಮನಗೆ  ಹೋಗಿಪ್ಪಗ ಈ ಪುತ್ತೂರುಬಾವಂಗೆ ಪೋನು ಮಾಡಿತ್ತಿದ್ದವು. ಬಾವ° ತೆರಕ್ಕಿಲಿದ್ದರುದೇ ಒಂದು ಗಳಿಗೆ ಮಾತಾಡ್ಳೆ ಸಿಕ್ಕಿದವು – ಅವಕ್ಕೆ ಒಳ್ಳೆತ ಮಾತಾಡೆಕ್ಕಿದಾ..
ಸುಮಾರು ಊರು ಅರಡಿಗು, ಸುಮಾರು ಸಂಗತಿಗೊ ಅರಡಿಗು, ಸುಮಾರು ಪುಸ್ತಕ ಅರಡಿಗು, ಸುಮಾರು ಸಿನೆಮಂಗೊ ಅರಡಿಗು, ಸುಮಾರು ಬಾಶೆ ಅರಡಿಗು!
ಇವೆಲ್ಲದರನ್ನುದೇ ಸೇರುಸಿ ಶುದ್ದಿ ಬರವಲೆಡಿಗೋ ಹೇಳಿ ಒಪ್ಪಣ್ಣ ಕೇಳಿಯಪ್ಪಗ ಸಂತೋಷಲ್ಲಿ ಅಕ್ಕು – ಹೇದವು.
ಕೊಳಚ್ಚಿಪ್ಪು ಬಾವಂದು ಚಿಪ್ಪಿನ ಒಳಾಣ ಮುತ್ತುಗೊ ಆದರೆ ಪುತ್ತೂರು ಬಾವಂದು ಹತ್ತೂರ ಮುತ್ತುಗೊ.

ದೂರದ ಅಮೇರಿಕಲ್ಲಿ ನೆಡಿರುಳು ನೋಡಿಗೊಂಡು ಬರದು ಕೊಡ್ತದು ನೋಡಿರೆ ಸಂತೋಷ ಅಪ್ಪದು!
ಆಗಲಿ, ಅವಕ್ಕೆ ಇಷ್ಟಬಂದ ವಿಶಯಂಗಳ ಮೇಲೆ ಶುದ್ದಿಗಳ ಚೆಂದಲ್ಲಿ ಹೇಳ್ತವು, ಆತಾ?
ಪುತ್ತೂರುಬಾವನ ಶುದ್ದಿಗಳ ಓದುವ, ನಮ್ಮ ನಮ್ಮ ಅನಿಸಿಕೆಗಳ ಹಂಚಿಗೊಂಬ, ಹತ್ತೂರ ಮುತ್ತುಗಳ ತಿಳುಕ್ಕೊಂಬ.
ಆಗದೋ? ಏ°?

ನಿಂಗಳ,
~
ಒಪ್ಪಣ್ಣ

ಪುತ್ತೂರು ಬಾವನ ಹತ್ತೂರಿನ ಅನುಬವದ ಶುದ್ದಿಗೊ “ಹತ್ತೂರ ಮುತ್ತು” ಆಗಿ ಸದ್ಯಂದಲೇ ಈ ಅಂಕಣಲ್ಲಿ ಸುರು ಆವುತ್ತು.

ಅದರೊಟ್ಟಿಂಗೇ, ಬೈಲಿನವರ ಬುದ್ಧಿ ಬೆಳವಲೆ “ರಸಪ್ರಶ್ನೆ“ದೇ ಸುರು ಮಾಡ್ತವಡ!!
ಕಾದೊಂಡಿರಿ, ಆತೋ?

~

ಪುತ್ತೂರು ಬಾವಂದು ಹತ್ತೂರ ಮುತ್ತುಗೊ!, 4.5 out of 10 based on 4 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವವಾಣಿ ಚಿಕ್ಕಮ್ಮಬಟ್ಟಮಾವ°ಅಜ್ಜಕಾನ ಭಾವಹಳೆಮನೆ ಅಣ್ಣಕಾವಿನಮೂಲೆ ಮಾಣಿದೊಡ್ಮನೆ ಭಾವನೆಗೆಗಾರ°ಮುಳಿಯ ಭಾವಶ್ಯಾಮಣ್ಣಸುಭಗದೊಡ್ಡಭಾವಚೆನ್ನೈ ಬಾವ°ಡಾಗುಟ್ರಕ್ಕ°ಶುದ್ದಿಕ್ಕಾರ°ಅಕ್ಷರದಣ್ಣಮಾಷ್ಟ್ರುಮಾವ°ಅಕ್ಷರ°ಶೇಡಿಗುಮ್ಮೆ ಪುಳ್ಳಿಪ್ರಕಾಶಪ್ಪಚ್ಚಿಪುಟ್ಟಬಾವ°ಯೇನಂಕೂಡ್ಳು ಅಣ್ಣವೆಂಕಟ್ ಕೋಟೂರುಮಾಲಕ್ಕ°ವಿದ್ವಾನಣ್ಣಸಂಪಾದಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ