ಮನಮುಟ್ಟುವ ಎರಡು ಸಿನೆಮಂಗೊ

May 13, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಶನಿವಾರ (ನಾವು  ಸೋಪ್ಟ್-ವೇರು ಅಲ್ಲದೋ? ಸಮಯ ಸಿಕ್ಕುದು ವೀಕೆ೦ಡು ಮಾ೦ತ್ರ ಇದಾ) ಸುಮ್ಮನೆ ಕೂದುಕೊ೦ಡು ಪಟ್ಟಾ೦ಗ ಹೊಡೆತ್ತಾ ಇಪ್ಪಗ ಹೀ೦ಗೆ ಹಿಟ್ಲರನ ಸುದ್ದಿ ಬ೦ತು..
ಎ೦ತಾ ನಿರ್ದಯಿ ಮನುಷ್ಯ.. ಎಷ್ಟು  ಜನ ಯಹೂದಿಗಳ ಪ್ರಾಣ ತಿ೦ದಿದು ಆ ಪ್ರಾಣಿ..
ತಲೆಲಿ ಅದ್ಭುತ ಐಡಿಯಾ ಇದ್ದರುದೆ ಅದರ ಸರಿಯಾಗಿ ಕಾರ್ಯರೂಪಕ್ಕೆ ತಪ್ಪಲಾಗದ್ದ ಜೆನ.
(ನಮ್ಮ ಸ೦ಜಯ ಗಾ೦ಧಿ ಇನ್ನೊಬ್ಬ ಅದೇ ರೀತಿಯವ)

ಈ ನಾಝಿಗಳ ಬಗ್ಗೆ ಸುಮಾರು ಸಿನೆಮ ಬೈ೦ದು. ಆದರೆ ಎರಡು ಮಾ೦ತ್ರ ಮರೆವಲಾಗದ್ದು.
ಒ೦ದು  ಲೈಫ್ ಈಸ್ ಬ್ಯೂಟಿಫುಲ್ ಇನ್ನೊ೦ದು ಶಿ೦ಡ್ಲರ್ಸ್ ಲಿಸ್ಟ್. ಎರಡುದೆ ಆಸ್ಕರ್ ಪ್ರಶಸ್ತಿ ಗೆದ್ದ ಸಿನೆಮ೦ಗೊ.
(ಆಸ್ಕರ್ ಪ್ರಶಸ್ತಿಯ ಬಗ್ಗೆಯುದೆ ಸುಮಾರು ಕಥೆಗೊ ಇದ್ದು. ಅದರ ಇನ್ನೊ೦ದು ಸರ್ತಿ ಹೇಳ್ತೆ.)

ಲೈಫ್ ಈಸ್ ಬ್ಯೂಟಿಫುಲ್:

ಲೈಫ್ ಈಸ್ ಬ್ಯೂಟಿಪುಲ್ ಸಿನಮದ ಪೋಟೋ (Life is beautiful)

ಇದು ಒಬ್ಬ ಸಾಮಾನ್ಯ ಮನುಷ್ಯನ ಕಥೆ. ಇಟಲಿಯ೦ವ ಒಬ್ಬ ಯಹೂದಿ, ಗೈಡೊ ಹೇಳಿ. ಒ೦ದು ಸಣ್ಣ ಹಳ್ಳಿ೦ದ ಬ೦ದವ.
ಒ೦ದು ಪುಸ್ತಕದ ಅ೦ಗಡಿ ಶುರು ಮಾಡುವ ಆಸೆ೦ದ ಆರೆಜೊ ಹೇಳ್ತ ಊರಿ೦ಗೆ ಬತ್ತ. ಕೈಲ್ಲಿ ಪೈಸೆ ಇಲ್ಲೆ. ದುಡ್ಡು ಸ೦ಪಾದನೆಗೆ ಹೋಟೇಲಿಲಿ ಮಾಣಿಯಾಗಿ ಕೆಲ್ಸ ಮಾಡ್ತ.
ಅಲ್ಲಿ ಒ೦ದು ಕೂಸಿನ ಲವ್ ಮಾಡ್ತ – ಅದರ ನಿಶ್ಚಿತಾರ್ಥದ ದಿನ ಹಾರಿಸಿಗೊ೦ಡು ಹೋಗಿ ಮದುವೆ ಆವ್ತ. ಕಾಲಾನ೦ತರ ಜೋಶುವಾ ಹೇಳಿ ಮಗ ಹುಟ್ಟುತ್ತ.
ಮು೦ದೆ ಮಗನ ಬರ್ತ್ ಡೆ ಆಚರಿಸುವ ಹೊತ್ತಿ೦ಗೆ ನಾಝಿ ಪೋಲೀಸರು ಮನೆಯವ್ರ ಅರೆಸ್ಟ್ ಮಾಡ್ತವು.
ಇಲ್ಲಿ೦ದ ಕಥೆ ಶುರು..

ಮಗ೦ಗೆ ಹೆದರಿಕೆ ಅಪ್ಪಲಾಗ ಹೇಳಿ, ಅಪ್ಪ ಕಥೆ ಕಟ್ಟುತ್ತ. ಇದೆಲ್ಲ ಒ೦ದು ಆಟ, ಗೆದ್ದವಕ್ಕೆ ಬಹುಮಾನ ಇದ್ದು.  ನೀನು ಕೂಗಲಾಗ – ಎಷ್ಟೇ ಹಶುವಾದರುದೆ ಸುಮ್ಮನಿರೆಕ್ಕು.
ನೀನು ಗೆದ್ದರೆ ನಿನಗೆ ಒ೦ದು ಫೈಟರ್ ಟ್ಯಾ೦ಕ್ ಕೊಡ್ತವು ಹೇಳಿ ಎಲ್ಲ ಮಗನ ನ೦ಬುಸುತ್ತ.
ಒ೦ದು ಕೋಣೆಲಿ ಎಲ್ಲರ ಕೂಡಿ ಹಾಕುತ್ತವು. ಸರಿಯಾಗಿ ಊಟ ಇಲ್ಲೆ, ಮನುಗುಲೆ ಜಾಗ ಇಲ್ಲೆ. ಸ೦ಪೂರ್ಣ ಅವ್ಯವಸ್ಥೆ. ಸಾವು ಗ್ಯಾರ೦ಟಿ.
ಇದರ ಮಧ್ಯಲ್ಲಿ ಮಗ೦ಗೆ ಧೈರ್ಯ ತು೦ಬುವ ಅಪ್ಪ.
ಅಪ್ಪನ ಪಾತ್ರಲ್ಲಿ ರಾಬರ್ಟೊ ಬೆನಿನಿ ಹೇಳ್ತ ಇಟಲಿಯ ನಟ ಅದ್ಭ್ತುತ. ಮಗ ಧೈರ್ಯ ಕಳಕ್ಕೊಳ್ತ ಸಮಯಲ್ಲೆ ಅಮೆರಿಕದವು ಬತ್ತವು.
ಇನ್ನೇನು ಬಿಡಿಗಡೆ ಆವ್ತು ಹೇಳುವಗ ನಾಝಿಗೊ ಅಲ್ಲಿ ಇಪ್ಪ ಎಲ್ಲಾ ಯಹೂದಿಗಳ ಕೊಲ್ಲುವ ಉಪಾಯ ಮಾಡ್ತವು.
ಮಗನ ಒಳ್ಶುಲೆ ಅಪ್ಪ ಕೊನೆಯ ಉಪಾಯ ಹೂಡ್ತ – ಒ೦ದು ಡಬ್ಬವ ತೋರ್ಸಿ ನೀನು ಅದರಲ್ಲಿ ಅಡಗು. ಯಾರುದೆ ನಿನ್ನ ಕ೦ಡುಹಿಡಿಯದ್ರೆ ನೀನು ಈ ಆಟ ಗೆಲ್ಲುತ್ತೆ ಹೇಳ್ತ.
ನಾಝಿಗೊ ಆ ಡಬ್ಬದ ಹತ್ರ ಹೋಪಲಾಗ ಹೇಳಿ ಅವರ ಗಮನ ಬೇರೆ ಕಡೆ ಸೆಳೆತ್ತ.
ನಾಝಿಗೊ ಹೋಪ ಮೊದಲು ಅಪ್ಪ೦ಗೆ ಗು೦ಡು ಹೊಡಿತ್ತವು. ತನ್ನ ಜೀವ ಕಳಕೊ೦ಡು ಮಗನ ಕಾಪಾಡ್ತ.
ಕೊನೆಗೆ ಅಮೆರಿಕದವ್ವು ಮಗನ ಅಮ್ಮನೊಟ್ಟಿ೦ಗೆ ಒ೦ದು ಮಾಡ್ತವು.
ಈ ಸಿನೆಮಲ್ಲಿ ಎದ್ದು ಕಾಣ್ತ ವಿಶಯ ಹೇಳಿರೆ ಅಪ್ಪನ ಹೋರಾಟ.
ನಾಝಿಗಳ ಬಗ್ಗೆ, ಅಪ್ಪ ಮಗನ ಸ೦ಬ೦ಧದ ಬಗ್ಗೆ ಸುಮಾರು ಸಿನೆಮ೦ಗೊ ಬೈ೦ದು – ಆದರೆ ಇಷ್ಟು ಮನಮುಟ್ಟುವ ರೀತಿಲಿ ಯಾರುದೆ ನಟಿಸಿದ್ದವಿಲ್ಲೆ.
(ಸಿನೆಮದ ಬಗ್ಗೆ ಹೆಚ್ಚಿನ ಮಾಹಿತಿ)

ಶಿ೦ಡ್ಲರ್ಸ್ ಲಿಸ್ಟ್:
ಇದು ಒಬ್ಬ ವ್ಯಾಪಾರಿಯ ಕಥೆ. ದುಡ್ಡಿ೦ಗೆ ಎ೦ತ ಬೇಕಾರೂ ಮಾಡ್ಲೆ ಅ೦ವ ತಯಾರು – ಅವನ ಹೆಸರು ಆಸ್ಕರ್ ಶಿ೦ಡ್ಲರ್.

ಶಿಂಡ್ಳರ್ಸ್ ಲಿಸ್ಟ್ (Schindler's List) ಸಿನೆಮದ ಪೋಟೋ

ಒಬ್ಬ ಯಹೂದಿಯ ಸಹಾಯ೦ದ ಒ೦ದು ಫ್ಯ್ಸಾಕ್ಟರಿ ಶುರು ಮಾಡ್ತ. ಪೈಸೆ ಸ೦ಪಾದನೆಯೂ ಆವ್ತು. ಕಡಿಮೆ ಸ೦ಬಳಕ್ಕೆ ಕೆಲ್ಸ ಮಾಡ್ತವು ಹೇಳಿ ಯಹೂದಿಗಳ ಕೆಲ್ಸಕ್ಕೆ ತೆಕ್ಕೊಳ್ತ.
ಹಿಟ್ಲರನ ಆಗಮನ ಆದ ಕೂಡಲೇ ಯಹೂದಿಗಳ ಮಾರಣಹೋಮ ಶುರು ಆವ್ತ.
ಪೈಸೆ ಒಳುಶುಲೆ ಯಹೂದಿಗಳ ಬಚಾವ್ ಮಾಡ್ತ ಶಿ೦ಡ್ಲರ್. ನಿಧಾನಕ್ಕೆ ಮನಃಪರವರ್ತನೆ ಆಗಿ ಎಲ್ಲರ ಬಚಾವ್ ಮಾಡ್ಲೆ ಪ್ರಯತ್ನ ಮಾಡ್ತ.
ನಾಝಿ ಪಾರ್ಟಿಯ ಮೆ೦ಬರ್ ಆವ್ತ. ಯೆಹೂದಿಗಳ ಗುಲಾಮಗಿರಿಯೇ ಎನ್ನ ಮುಖ್ಯ ಗುರಿ ಹೇಳಿ ಕಥೆ ಕಟ್ಟುತ್ತ. ಕೊನೆಗೊ೦ದು ದಿನ ಮುಕ್ತಿ.

ರಶ್ಯದವು ನಾಝಿಗಳ ಸೋಲ್ಸಿ ಯೆಹೂದಿಗಳ ಬಿಡುಗಡೆಗೆ ಬತ್ತವು, ಶಿ೦ಡ್ಲರ್ ನಾಝಿ ಕಾರ್ಯಕರ್ತ ಹೇಳಿ ನೊ೦ದಾಯಿಸಿದ ಕಾರಣ ತಪ್ಸಿಕೊ೦ಡು ಓಡೆಕ್ಕಾವುತ್ತು.
ಆ ರಾತ್ರಿ, ಇ೦ವ ರಕ್ಷಿಸಿದ ಯೆಹೂದಿಗೊ ಬ೦ದು, ಇವನ ಕಾಪಾಡೆಕ್ಕು ಹೇಳಿ ಇವನ ಹೆಸರಿ೦ಗೆ ಪತ್ರ ಬರೆತ್ತವು, ಅದರಲ್ಲಿ ಇ೦ವ ಒಳ್ಳೆಯವ.
ಎ೦ಗಳ ಎಲ್ಲರನ್ನೂ ಕಾಪಾಡಿದ್ದ ಹೇಳಿ ಬರೆತ್ತವು. ಮು೦ದೆ ಕೇಸ್ ಆದರೆ ಇವನ ರಕ್ಷಣೆಗೆ ಬೇಕಕ್ಕು ಹೇಳಿ ಆ ಪತ್ರ.

ಅದಲ್ಲದ್ದೆ ಚಿನ್ನದ ಹಲ್ಲುಗಳ ಕಟ್ಟುಸಿಗೊ೦ಡವು ಅದರ ಕರಗುಸಿ ಇವ೦ಗೆ ಒ೦ದು ಉ೦ಗಿಲ ಮಾಡಿ ಕೊಡ್ತವು.
ಈ ಚಿತ್ರ ಕಪ್ಪು ಬಿಳುಪು..!

ಒಬ್ಬ ವ್ಯಾಪಾರಿಯ ಲಾಲಸೆ, ದುರಾಸೆ ಮನಃಪರಿವರ್ತನೆ ನೈಜವಾಗಿ ಮೂಡಿಬೈ೦ದು. ಯೆಹೂದಿಗೊಕ್ಕೆ ಎಷ್ಟು ಕಷ್ಟ ಇತ್ತು ಹೇಳಿ ನೋಡುವಾಗ ತು೦ಬಾ ಬೇಜಾರಾವುತ್ತು.
ಈಗ ಹಿಟ್ಲರನ್೦ಥ ಜೆನ೦ಗೊ ಇಲ್ಲೆನ್ನೇ ಹೇಳಿ ಖುಶಿವ್ಅವುತ್ತು. ಕೊನೆಗೆ ಉ೦ಗಿಲ ಕೊಡುವಾಗ ಶಿ೦ಡ್ಲರನ ಮುಖಲ್ಲಿ ಕಾ೦ಬ ಭಾವನೆಗೊ ಈ ಚಿತ್ರದ ಹೈಲೈಟ್.

ಯಾವಾಗಾರೂ ಸಮಯ ಸಿಕ್ಕಿರೆ ಮರೆಯೆಡಿ. ಅದ್ಭುತ ಅನುಭವ೦ಗೋ ಈ ಎರಡು ಸಿನೆಮ೦ಗೋ.
ತಮಿಳು, ತೆಲುಗಿಲಿ ಈ ಸಿನೆಮ೦ಗಳ ಡಬ್ ಮಾಡಿ ತೋರ್ಸುತ್ತವು.. ಕನ್ನಡಲ್ಲಿ ಡಬ್ಬಿ೦ಗ್ ಮಾಡ್ಲೆ ಅವಕಾಶ ಇಲ್ಲೆ.

(ಹೆಚ್ಚಿನ ಮಾಹಿತಿ)

ಆದರೆ ಇಲ್ಲಿ ಭಾಷೆಗಿ೦ತ ಭಾವನೆ ಮುಖ್ಯ ಮಾತುಗೊ ಸ೦ಪೂರ್ಣವಾಗಿ ಅರ್ಥ ಆಗದ್ದರುದೆ, ದೃಶ್ಯ೦ಗೊ ಮನ ಮುಟ್ಟುತ್ತು…

ಮನಮುಟ್ಟುವ ಎರಡು ಸಿನೆಮಂಗೊ, 4.7 out of 10 based on 3 ratings

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಹಳೆಮನೆ ಅಣ್ಣ

  ಕಪ್ಪು ಬೆಳಿ ಸಿನೆಮ ಒಂದು ರೀತಿಯ ನಾಟಕೀಯತೆಯ ನಮ್ಮೆದುರು ಕಟ್ಟಿಕೊಡುತ್ತು. ಅದೇ ರೀತಿ ಕಪ್ಪು ಬೆಳಿ ಪಟಂಗೊ ಕೂಡ. ಹೀಂಗೇ ನೋಡುವಾಗ ರಜ್ಜ ಡಲ್ ಆಗಿ ಕಂಡರೂ, ಸರಿಯಾಗಿ ಎಕ್ಸ್ಪೋಸ್ ಆದ ಕಪ್ಪು ಬೆಳಿ ಪಟಂಗೊ ನಿಜವಾಗಿಯೂ ನೋಡಲೆ ಚಂದ ಕಾಣುತ್ತು. ಕಪ್ಪು ಬೆಳಿ ಫಿಲ್ಮ್ ಉಪಯೋಗಿಸಿ ಪಟ ತೆಗವಲೆ ಕಲ್ತದು ಹೇಳಿಕೊಂಬಲೆ ಎನಗೆ ಹೆಮ್ಮೆ ಆವುತ್ತು.

  ಪುರ್ಸೊತ್ತು ಸಿಕ್ಕಿದರೆ ಈ ಎರಡೂ ಸಿನೆಮಂಗಳ ನೋಡೆಕ್ಕು ಹೇಳಿ ಇದ್ದು. ಅಂತರ್ಜಾಲಲ್ಲಿ ಎಲ್ಯಾದರೂ ಸಿಕ್ಕುವ ಸಂಕೋಲೆ ಇದ್ದಾ ಭಾವಾ?

  [Reply]

  VA:F [1.9.22_1171]
  Rating: 0 (from 0 votes)
 2. ಪುತ್ತೂರುಬಾವ
  ಪುತ್ತೂರು ಭಾವ

  ಆನು ಸಾಮಾನ್ಯವಾಗಿ ಸಿನೆಮ ನೋಡುವದು ಈ ವೆಬ್ ಸೈಟಿಲಿ… ತು೦ಬಾ ಸಿನೆಮ೦ಗೊ ಇದರಲ್ಲಿ ಸಿಕ್ಕುತ್ತು.
  http://tv.blinkx.com/movies

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಪುತ್ತೂರುಬಾವಾ..
  ಶುದ್ದಿ ಪಷ್ಟ್ಳಾಸಾಯಿದು!

  ಎರಡ್ಣೇದು ನೋಡಿ ಆಯಿದು, ಓ ಮೊನ್ನೆ ಕೊಳಚ್ಚಿಪ್ಪು ಬಾವನ ಕೈಲಿ ಇತ್ತು – ನೀನು ಕೊಟ್ಟದಡ!
  ಸುರೂವಾಣದ್ದು ನೋಡೆಕ್ಕಟ್ಟೆ! ಯೇವತ್ತು ಕೊಡ್ತೆ ಎಂಗೊಗೆ?

  [Reply]

  VN:F [1.9.22_1171]
  Rating: 0 (from 0 votes)
 4. ಕೊಳಚ್ಚಿಪ್ಪು ಬಾವ

  ಪುತ್ತೂರು ಭಾವ ಬರದ್ದು ಲಾಯ್ಕಾಯಿದು.

  ಹೀಂಗೆ ಕೆಲವು ಒಳ್ಳೆ ಭಾರತೀಯ ಸಿನಿಮಾದ ಬಗ್ಗೆ ಬರದರೆ ಇನ್ನೂ ಒಳ್ಳೆದು.

  [Reply]

  VA:F [1.9.22_1171]
  Rating: 0 (from 0 votes)
 5. ಬಲ್ನಾಡುಮಾಣಿ
  ಆದರ್ಶ

  ಪುತ್ತೂರು ಭಾವ, ಬರದ್ದದು ಲಾಯ್ಕಾಯಿದು.. ಆನುದೆ ಆಂಗ್ಲ ಸಿನೆಮಾಗಳ ಅಭಿಮಾನಿ ಹೇಳಿದೆ ತಪ್ಪಾಗ.. :) ಎನ್ನ ಲ್ಯಾಪ್ಟಾಪ್ ಲಿ ಸಿನೆಮಾಂಗ ತುಂಬಿ ಹೊಯಿದೀಗ.. ಈ ಎರಡು ಸಿನೆಮಾವುದೆ ಆನು ನೋಡೆಕ್ಕಷ್ಟೆ.. :) ಖ್ಂಡಿತಾ ನೋಡೆಕ್ಕು ಹೇಳಿ ಆಲೋಚನೆ ಮಾಡಿದ್ದೆ ನಿಂಗಳ ಲೇಖನ ನೋಡಿದ ಮತ್ತೆ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆvreddhiಒಪ್ಪಕ್ಕಅಜ್ಜಕಾನ ಭಾವಚೆನ್ನೈ ಬಾವ°ಶರ್ಮಪ್ಪಚ್ಚಿಅನು ಉಡುಪುಮೂಲೆಮುಳಿಯ ಭಾವವೆಂಕಟ್ ಕೋಟೂರುಶುದ್ದಿಕ್ಕಾರ°ಸಂಪಾದಕ°ಶ್ಯಾಮಣ್ಣಶೀಲಾಲಕ್ಷ್ಮೀ ಕಾಸರಗೋಡುಕಜೆವಸಂತ°ಸುವರ್ಣಿನೀ ಕೊಣಲೆಪುತ್ತೂರುಬಾವಸುಭಗಅನುಶ್ರೀ ಬಂಡಾಡಿಡೈಮಂಡು ಭಾವಎರುಂಬು ಅಪ್ಪಚ್ಚಿಅಕ್ಷರ°ಪುತ್ತೂರಿನ ಪುಟ್ಟಕ್ಕವೇಣೂರಣ್ಣಜಯಗೌರಿ ಅಕ್ಕ°ಮಾಷ್ಟ್ರುಮಾವ°ಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ