ಹೀಂಗೆಂತಕ್ಕೆ..!!

May 31, 2010 ರ 8:30 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನಮಂದಿಗೆಲ್ಲ ಮನದಾಳದ ನಮನಳು.

ಒಪ್ಪಂಗಳಲ್ಲಿ ಕಾಸರಗೋಡು /ದ.ಕ. ಹವಿಗನ್ನಡ ಭಾಷೆಲಿ ಮಾತ್ರ ಲೇಖನಂಗಳು ಬರ್ತಾ ಇಪ್ಪಾಗ, ಆನೇ ಹೇಳಿದ್ನಾಗಿತ್ತು, ಯಂಗಳ ಭಾಷೆಲೂ ಬಂದ್ರೆ ಚೆಲೋ ಆಗಿತ್ತು ಹೇಳಿ.
ಮದ್ವೆಯಾಗೋ ಬ್ರಾಹ್ಮಣ ಅಂದ್ರೆ ನೀನೇ ಎನ್ನ ಹೆಂಡ್ತ್ಯಾಗು’ ಅಂದಾಂಗೆ ಆತು. ಯನಗೆ ಬರುಲೆ ಹೇಳ್ದ ಈ ಒಪ್ಪಣ್ಣ. ಯನಗೂ ಇದು ಖುಷಿ ವಿಷ್ಯವೇ ಬಿಡಿ.
ಯನ್ನದು ಉತ್ತರಕನ್ನಡದ ಕುಮಟಾ ಊರು. ಆದ್ರೆ ಶ್ರೀಮಠದ, ಹವ್ಯಕಮಹಾಸಭೆಯ ಕಾರ್ಯದಲ್ಲಿ ಎಲ್ಲ ಸೀಮೆಯ ಜನರ ಜೊತೆ ಬೆರ್ತು ಯನ್ನಭಾಷೆ ವಿಭಿನ್ನ ಹವಿಗನ್ನಡ ಮಿಶ್ರಣ ಆಗೋಯ್ದು.
ಒರಿಜಿನಲ್ ಕುಮಟೆ ಹೊಡೆ ಹವಿಗನ್ನಡ ಬರಲಿಕ್ಕಿಲ್ಲೆ ಇಲ್ಲಿ ಸಹಿಸ್ಗಳಿ.

ಈಗಿತ್ಲಾಗಿ ಯೆನ್ನ ಗಮನಕ್ಕೆ ಬಂದ ಒಂದ್ಕೇಸಲ್ಲಿ ಯೆಂಥ ಆತು ಹೇಳಿರೆ ; ………
ಓದುಲೆ ಹೇಳಿ ಯಂಗ್ಳಹೊಡೆ ಕೂಸಂಗೊ – ಮಾಣ್ಯಂಗೋ ಎಲ್ಲ ಬೆಂಗಳೂರಿಗೆ ಬತ್ತೇ ಇದ್ದ ಹೇಳಿ ಯೆಲ್ಲವುಕ್ಕೂ ಗೊಂತ್ತಿಪ್ಪ ವಿಷ್ಯ.
ಸಾಮಾನ್ಯವಾಗಿ ಕೂಸಂಗ ಊರ್‌ಕಡೆ ಯಾವ ಶಿಕ್ಷಣ ಸಿಗ್ತಿಲ್ಯೊ ಅಂಥ ಮೇಲ್ಮೇಲಣ ಕಾಲೇಜಿಗೆ ಹೋಪವು ಈ ಬದಿಗೆ ಬತ್ತ.
ಆದ್ರೆ ಈಗಿತ್ಲಾಗಿ ಎಂಥ ಆಯ್ದು ಅಂದ್ರೆ, ಪಿಯುಸಿ ಓದುಲೇ ! ಕೂಸ್ಗ ಮಾಣ್ಯಕ್ಕೋ ಬೆಂಗಳೂರ್ ದಾರಿ ಹಿಡದ್ದ !

ಇವೇ ಬತ್ವ ಅಥವಾ ಇವರಪ್ಪ ಅಬ್ಬೆ ಹೀಂಗ್ಮಾಡ್ತ್ವ ಯೇನನ. ಊರ‍್ಬದಿಗೆ ಎಂಥ ಹಳ್ಳಿಯಾದ್ರು ಬಸ್ಪಾಸ್ ವ್ಯವಸ್ಥೆ ಮಾಡ್ಸಕಂಡ್ರೆ ಭಾಳ್ ಸೋವಿಲಿ ಎಂಥೆಂತ ಕಾಲೇಜಿದ್ದು ಅಲ್ದ ?
ಅದ್ರ ಬಿಟ್ಟಿಕ್ಕಿ ಈ ಪಟ್ಣದಲ್ಲಿಪ್ಪ ಕಾಲೇಜಿಗೆಂಥ ಬೆಲ್ಲ ಹಚ್ಚಿದ್ವ. ‘ದೂರತಃ ಪರ್ವತೋ ರಮ್ಯಃ’ ಅಂದಾಗಾದಿಕ್ಕು.
ಇದರಿಂದ ಎಂಥ ಆಗ್ತು ಅಂದ್ರೆ..  ಅಪ್ಪ ಅಬ್ಬೆ ನಝರ್ ನಿಂದ ಈ ಮಕ್ಕ ಹೊರ‍್ಗಿತ್ವಲಿ; ಮತ್ತೆ ಹೈಸ್ಕೂಲಿಂದ ಸೀದಾ ದೊಡ್ಡ ಪಟ್ಣಕ್ಕೆ ಬಂದಾಗ ಈ ಸಣ್ಣ ಕರುವಿಗೆ (ಕಂಜಿಗೆ) ಕೊಟ್ಗಿಂಜ (ಹಟ್ಟಿಲಿಂದ) ಹೊರಗೆ ಬಿಟ್ಟಾಗ ಕೆಮಿಲಿ ಗಾಳಿ ಸಿಕ್ಕಿ ಹಾರ‍್ತು ನೋಡಿ ನೋಡಿ ಹಾಂಗೇ ಆಗ್ತು ಕಾಣ್ತು. ಶಿಕ್ಷಣ ಅಷ್ಟಕ್ಕಷ್ಟೇ ಆಗೋವ್ತು.

ಯಂಗ್ಳ ಘಟ್ಟದ ಕೆಳಗಣ ಒಂದೂರಿಂದ ಒಂದ್ಕೂಸು ಪಿ.ಯು.ಸಿ. ಓದುಲೆ ಹೇಳಿ ಬೆಂಗಳೂರಿಗೆ ಬಂತು.
ಅಪ್ಪ ಕಳ್ಸದ್ನ, ಅಣ್ಣ ಕರ‍್ಕಂಡ್ ಬಂದ್ನ ! ಅದೇ ಹಠಮಾಡ್ಕಂಡು ಬಂತ ! ಯೇನನ. ವಟ್ಟಾರೆ ದೊಡ್ಡ ಹೆಸರಿಪ್ಪ ಕಾಲೇಜಿಗೆ ಸೇರ‍್ಕಂಡ್ತು ಹೇಳಾತು. ಎಸ್ಸೆಸ್ಸೆಲ್ಸಿಲಿ ಚೆಲೋ ಮಾಡಿದ್ದು ೯೦ – ೯೫ ಪರ್ಸಂಟ್ ಆಯ್ದು ಬಿಲ್ರ,
ಫಸ್ಟಿಯರ್ ಪಿಯೂಸಿಲೇ ಕಣ್ಣಿಬಿಚ್ಚದ ಕಂಜಿಗೆ ಆದಾಂಗಾತು. ಇಲ್ಲಿ ಶ್ರೀಮಂತ್ರಮನೆ ಹೆಣ್ಣಕ್ಕಳಸಂತಿಗೆ ಸೇರ‍್ಕಂಡು ಕ್ಲಾಸಿಗೆ ಚಕ್ಕರ್ ಹೊಡುದು, ಸೈಬರ್ ಕೆಫೆ, ಕಾಫಿಡೇ, ಸಿನೇಮಾ, ಬಾಯ್ ಪ್ರೆಂಡ್ಸು ಎಲ್ಲಾ ಶುರವಾಗಿ ಪಿಯುಸಿ ಸೆಕೆಂಡ್ ನಲ್ಲಿ ೬೦ % ಗೆ ಇಳ್ದೋತು. ಪಾಸಾಜಲಿ ಹೇಳಿ ಖುಷಿ ಪಟ್ಗಳ ಅಷ್ಟೆಯ.

ಯೆಲ್ಲವೂ ಹೀಂಗೇ ಇರ‍್ತ ಹೇಳಲ್ಲ ; ಹೀಗಪ್ಪೂ ಚಾನ್ಸೂ ಇರ‍್ತು ಅಲ್ದನ್ರಾ ?
ಈ ಹದಿ ಹರಯದಲ್ಲಿ ಮನ್ಸು, ಬುದ್ಧಿ ಹೇಳ್ದಂಗೆ ಕೇಳ್ತಿಲ್ಲೆ, ಇಂದ್ರಿಯಗಳೇ ಬಲವಾಗಿ ಕೆಲ್ಸ ಮಾಡ್ತು.
ಅದ್ರೊಟ್ಟಿಗೆ ಇಲ್ಲಿ ಸರಿಯಾಗಿ ದೇಖರೇಖ ತೆಕಂಬವೂ ಯಾರೂ ಇರ‍್ತ್ವಿಲ್ಲೆ. ಇಷ್ಟ್ರ ಸಂಗ್ತಿಗೆ ಮೊಬೈಲು ಸಾಕಷ್ಟು ದುಡ್ಡು ಎಲ್ಲಾ ಕೊಟ್ಬುಟ್ರೆ ಮರ್ಕಟಸ್ಯ ಸುರಾಪಾನಂ ……..
ಅಂದ್ಹಾಂಗೆ ಅಯ್ಯೋ ಶಿಂವನೆ ಹೀಂಗಾಗೋತಲಿ ಹೇಳ್ಕಂಬು ಪರಿಸ್ಥಿತಿ ಬತ್ತು.

ಈ ಡಾಕ್ಟರಿ, ಇಂಜಿನಿಯರು ಇಂಥ ದೊಡ್ಡದೊಡ್ಡ ಕೋರ್ಸಿಗೆ ಬಂದಾಗ ಕಂಡಾಬಟ್ಟೆ ಕೆಲಸ ಇರ‍್ತು ಹಾದಿತಪ್ಪು ಸಂದರ್ಭ ಕಮ್ಮಿ ಇರ್ತು.
ಹಾಂಗಾಗಿ ಯಂಗ ಪಾಲಕರು ಎಂಥ ಮಾಡಕು ಅಂದ್ರೆ ಊರ‍್ಕಡೆಗೆ ಯಾವ ಶಿಕ್ಷಣದ ತಂಕ ಚೆಲೋದೇ ಸಿಗ್ತೋ ಅದ್ಕೆ ಒಂಚೂರ್ ಹೆಚ್ಚುಕಮ್ಮಿ ಆದ್ರೂ ಸುಧಾರ್ಸ್ಕೆಂಡು ಅಲ್ಲೇ ಸೇರ‍್ಸಕು, ಬುದ್ಧಿ ಪಕ್ವ ಆಪಲ್ಲಿವರೆಗೆ ಕಣ್ಮುಂದೇ ಇದ್ದಾಂಗಾವ್ತು.
ಕಡೆಗೆ ಉನ್ನತ ವ್ಯಾಸಂಗಕ್ಕೆ ಮಹಾನಗರದ ಬದಿಗೆ ನೋಡ್ಳಕ್ಕು. ಆದ್ರೆ ಆವಾಗ್ಳು ಒಂದ್ಕಣ್ಣಿಡುಲೆ, ಮಾರ್ಗದರ್ಶನ ಮಾಡುಲೆ ಒಂದ್ವಿಶ್ವಾಸಿ ಜೆನ ಮಾಡೆಕ್ಕು.
ಮಕ್ಕಳಮೇಲೆ ವಿಶ್ವಾಸಿಲ್ಲೆ ಹೇಳಲ್ಲ. ವಯಸ್ ನಂಬುಲೆಡಿಯ ಹೇಳಿ.
ಅಖೈರಿಗೆ ಯಂಗ್ಳ ಮಕ್ಕ ಮುಂದ್ಬರ, ಅಪ್ಪ ಅಬ್ಬೆ ಜೀವನಕ್ಕೆ ಆಧಾರ ಆಗ, ಊರ‍್ಮನೆಗಳು ವೃದ್ಧಾಶ್ರಮ ಅಪ್ಪುಲಿಲ್ಲೆ, ತೋಟ್ಮನೆ / ಮನಮಾರ‍್ಗೆ ಗಂಡ್ಮಕ್ಕಗೂ ಹವ್ಯಕಹೆಣ್ಣೇ ಹೆಂಡ್ತ್ಯಾಗವು.
ಯನ್ನ ಹೆಬ್ಬಾಶೆ ಅಷ್ಟೆ.

– ಕಾಂತಣ್ಣ

***

ಹೀಂಗೆಂತಕ್ಕೆ..!!, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ ಮಾವ ಬೊಳುಂಬು

  ಕಾಂತಣ್ಣನ ಕಳಕಳಿಯ ಲೇಖನ ವಿಚಾರಪೂರ್ಣವಾಗಿ ಇದ್ದು. ಎಲ್ಲೋರು ಈ ಬಗ್ಗೆ ಆಲೋಚನೆ ಮಾಡ್ಳೇ ಬೇಕು.
  ಉತ್ತರಕನ್ನಡದ ಹವ್ಯಕ ಭಾಷೆ, ಮಾತಾಡುವ ಶೈಲಿ ತುಂಬಾ ಚೆಂದ. ಕಾಂತಣ್ಣ ಇನ್ನುದೆ ಹೀಂಗೆ ಬರೆತ್ತಾ ಇರಲಿ.

  [Reply]

  VA:F [1.9.22_1171]
  Rating: +3 (from 3 votes)
 2. ಕಳಾಯಿ ಗೀತತ್ತೆ
  ಕಳಾಯಿ ಗೀತತ್ತೆ

  The same theory holds good even for boys….

  [Reply]

  ಕಾಂತಣ್ಣ

  ಸಿರಿರಮಣ Reply:

  ಖಂಡಿತಾ ಅದು ಅಪ್ಪು.

  [Reply]

  VA:F [1.9.22_1171]
  Rating: -1 (from 1 vote)
 3. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಕಾಂತಣ್ಣ ಬರದ ವಿಷಯ ಎಲ್ಲೋರಿಂಗೂ ಯೋಚನೆಗೆ ಹಾಕುವಂತದ್ದೆ … ಹುಡುಗಿಯರಾಗಲಿ,ಹುಡುಗರಾಗಲಿ ಆ ಹದಿ ಹರೆಯಕ್ಕಪ್ಪಗ ದಾರಿ ತಪ್ಪುದು ಇದ್ದೇ ಇರ್ತು .. ಇದಕ್ಕೆ ಒಂದು ಕಾರಣ ಮನೆಲಿ ಸಿಕ್ಕುವ ಪ್ರೀತಿ ಕಮ್ಮಿ ಅಪ್ಪದೂ ಆಗಿರ್ತು… .. ಪ್ರೀತಿ ಹೇಳಿರೆ ಮುದ್ದು ಮಾಡಿ ಹಾಳು ಮಾಡುವ ಪ್ರೀತಿ ಅಲ್ಲ ಅಥವಾ ಬೇಕು ಬೇಕಾದ್ದದರ ತೆಗದು ಕೊಡುವ ಪ್ರೀತಿದೇ ಅಲ್ಲ…ಮಕ್ಕಳ ಮನಸ್ಸರ್ತು ಅವರ ಸರಿ ತಪ್ಪುಗಳ ಉದಾಹರಣೆ ಸಹಿತ ತಿದ್ದಿ ಹೇಳಿ ಅವು ಅವರ ಜವಾಬ್ದಾರಿ ಅರ್ತುಗೊಂಬಲೆ ಸಹಾಯ ಮಾಡುದೇ ನಿಜವಾದ ಪ್ರೀತಿ… ಈಗ ಎಲ್ಲೋರಿಂಗೂ ಪೇಟೇಲಿ ಕಲಿವ, ಇಂಗ್ಲಿಷ್ ಲಿ ಕಲಿವ ವ್ಯಾಮೋಹ ಜಾಸ್ತಿ ಅಲ್ಲದಾ? ಹಾಂಗೆ ಮಕ್ಕೋ ಹೆಂಗಿದ್ದರೂ ಸರಿ.. ಒಳ್ಳೆ ಕಾಲೆಜಿಂಗೆ ಹಾಕಿರೆ ಜವಾಬ್ದಾರಿ ಮುಗುತ್ತು ಹೇಳಿ ಗ್ರೇಶುವ ಅಬ್ಬೆ ಅಪ್ಪ ಇರ್ತವು.. ಅವಕ್ಕೆ ಮಕ್ಕಳ ಭವಿಷ್ಯಂದಲೂ ಹೆಚ್ಚು ಅವರ ಪ್ರತಿಷ್ಠೆ ಹೆಚ್ಚಾಯೇಕ್ಕು ಹೇಳಿ ಇರ್ತು… ಅದಕ್ಕೆ ಪೂರಕ ಆಗಿ ಅವಕ್ಕೆ ಮೊಬೈಲ್, ಪೈಸೆ ಎಲ್ಲಾ ಬೇಕಾದ ಹಾಂಗೆ ಕೊಟ್ಟು ದಾರಿ ತಪ್ಪುಲೇ ಸುಲಭ ಮಾಡಿ ಕೊಡ್ತವು… ಕಾಂತಣ್ಣ ಹೇಳಿದ ಹಾಂಗೆ.. ಮಕ್ಕಳ ಮೇಲೆ ನವಗೆ ನಂಬಿಕೆ ಇರ್ತು ಆದರೆ ಅವು ಇಪ್ಪ ಪ್ರಾಯಲ್ಲಿ ಅಲ್ಲನ್ನೇ !!!!! ಕಾಂತಣ್ಣನ ಹೆಬ್ಬಾಶೆ ಈಡೇರಲಿ….

  [Reply]

  VA:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶ್ರೀ ಅಕ್ಕ ಹೇಳಿದ್ದು ಸರಿಯಾಗಿ ಇದ್ದು. ಮಕ್ಕಳ ಮೇಲೆ ಯವಾಗಲೂ ಒಂದು ನಿಗಾ ಇರೆಕು. ಮಾಣಿಯಂಗಳೂ ಪೇಟೆಗೆ ಕಲಿವಲೆ ಹೋಗಿ ಹಾಳಾದವು ಇದ್ದವು. CET ಲಿ ಒಳ್ಳೆ ರೇಂಕ್ ಸಿಕ್ಕಿದ್ದು ಹೇಳಿ ಬೆಂಗಳೂರಿನ ಒಳ್ಳೆ ಕಾಲೇಜಿಂಗೆ ಹಾಕಿರೆ ಅಲ್ಲಿ subject complete ಮಾಡದ್ದವು ಇದ್ದವು. ಮಕ್ಕೊಗೆ ಸಣ್ಣ ಇಪ್ಪಗ ಹೇಂಗೆ ಸಂಸ್ಕಾರ ಕೊಡೆಕು ನಾವು ಹೇಳಿ ಆಲೋಚನೆ ಮಾಡೆಕ್ಕು. ಎಳೆ ವಯಸ್ಸಿಲ್ಲಿ ಒಳ್ಳೆ ಸಂಸ್ಕಾರ ಕೊಟ್ಟರೆ, ದೊಡ್ಡ ಅಪ್ಪಗ ದಾರಿ ತಪ್ಪುವದು ಕಮ್ಮಿ ಅಕ್ಕು. ಅಪ್ಪ ಸಿಗರೇಟ್ ಎಳಕ್ಕೊಂಡು ಮಗಂಗೆ ಸಿಗರೇಟ್ ಎಳವಲೆ ಆಗ ಹೇಳಿ ಬುದ್ಧಿವಾದ ಹೇಳ್ಲೆ ಹೋದರೆ ಹೇಂಗೆ ಅಕ್ಕು?. ಹೆತ್ತವು ಮಕ್ಕೊಗೆ ಮಾದರಿ ಆಗಿ ಇರೆಕು.

  [Reply]

  VA:F [1.9.22_1171]
  Rating: +1 (from 3 votes)
 5. ಡಾ.ಸೌಮ್ಯ ಪ್ರಶಾಂತ

  ಮಕ್ಕೊ ಕಲಿವಲೆ ದೂರ ಹೋಪದು ತಪ್ಪಲ್ಲ… ಮನೆಂದ ದೂರ ಹೋದರೆ ಎಲ್ಲಾ ತರದ ಜವಾಬ್ದಾರಿಗಳನ್ನೂ ತೆಕ್ಕೊಂಬಲೆ ಕಲಿತ್ತವು… ಎಲ್ಲಾ ತರದ ಕೆಲಸಂಗಳನ್ನೂ ಸ್ವಂತ ಅನುಭವಿಸಿ ಕಲಿತ್ತವು.. ವಿದ್ಯಾರ್ಥಿ ಭವನಂಗಳಲ್ಲಿ ಇದ್ದರಂತೂ,ಬೇರೆ ಬೇರೆ ಜಾಗೆಂದ ಬಂದ ವಿದ್ಯಾರ್ಥಿಗಳ ಸ್ನೇಹಂದ ಬೇರೆ ಊರುಗಳ ಆಚಾರ ವಿಚಾರ ಕಲಿವಲೆ ಅವಕಾಶ ಸಿಕ್ಕುತ್ತು… ಅಂತೋರಿಂಗೆ ಲೋಕದ ಯಾವುದೇ ಭಾಗಲ್ಲೂ ಬದುಕುಲೆ ಸುಲಭ ಆವುತ್ತು…
  ಮಕ್ಕಳ ಪೇಟೆಗೆ ಕಲಿವಲೆ ಕಳ್ಸಿ,ಕೇಳಿದಷ್ಟು ಪೈಸೆ ಕೊಟ್ಟು ಬಿಟ್ಟರೆ ಅಬ್ಬೆ-ಅಪ್ಪನ ಜವಾಬ್ದಾರಿ ಮುಗುತ್ತಿಲ್ಲೆ.. ಆವಗಾವಗ ಅವು ಇಪ್ಪಲ್ಲಿಯಂಗೆ ಹೋಗಿ,ಹೇಂಗಿದ್ದವು ಹೇಳಿ ನೋಡೆಕ್ಕು..ಅವು ಕಲಿವಲ್ಲಿಯಂಗೆ ಹೋಗಿ ಗುರುಗಳ ಹತ್ತರೆ ಮಕ್ಕಳ ಅಭಿವೃದ್ಧಿಯ ಬಗ್ಗೆ ವಿಚಾರ್ಸೆಕ್ಕು..ಮಕ್ಕಳ ಸ್ನೇಹಿತರು ಅಥವಾ ಸ್ನೇಹಿತೆಯರ ಭೇಟಿ ಮಾಡಿ ಅವರನ್ನೂ ನಮ್ಮ ಮಕ್ಕಳ ಹಾಂಗೆ ಮಾತಾಡ್ಸೆಕ್ಕು..ಅಷ್ಟಪ್ಪಗ ಮಕ್ಕೊ ಅಬ್ಬೆ-ಅಪ್ಪನ ಹತ್ತರೆ ಯಾವುದನ್ನೂ ಮುಚ್ಚಿ ಮಡುಗುತ್ತವಿಲ್ಲೆ…ಹೀಂಗೆ ಅಬ್ಬೆ-ಅಪ್ಪಂಗೆ ಮಕ್ಕಳ ಚಟುವಟಿಗೆಗೊ ಗೊಂತ್ತಾವುತ್ತು..ಮಕ್ಕೊ ದೊಡ್ಡ ಆದ ಹಾಂಗೇ ಅವರ ಸ್ನೇಹಿತರ ಹಾಂಗೆ ನೋಡಿಗೊಳ್ಳೆಕ್ಕು ಹೇಳ್ತವು..ನಾವು ಮಕ್ಕಳ ಹತ್ತರೆ ಎಷ್ಟು ಸ್ನೇಹಂದ ಇರ್ತೋ,ಅವು ಅಷ್ಟೇ ಅಬ್ಬೆ-ಅಪ್ಪನ ಹತ್ತರೆ ಹೆದರಿಕೆ ಬಿಟ್ಟು ಬತ್ತವು…. ಮಾಣಿ-ಕೂಸು ಸ್ನೇಹಿತರಾಗಿ ಇಪ್ಪದು ತಪ್ಪಲ್ಲ..ಆದರೆ ಅದು ಇತಿ-ಮಿತಿಯೊಳ ಇದ್ದರೆ ಚೆಂದ..ಈ ಇತಿ-ಮಿತಿಗಳ ತಿಳಿ ಹೆಳುವ ಕರ್ತವ್ಯ ಅಬ್ಬೆ-ಅಪ್ಪಂದು…. :)

  [Reply]

  VA:F [1.9.22_1171]
  Rating: +1 (from 1 vote)
 6. ಬರೀ ಕೂಸುಗಳ ಮಾತ್ರ ಹೇಳೆಡಿ ಕಾಂತಣ್ಣ. ಈಗಾಣ ಮಾಣಿಯಂಗೊ ಎಂತ ಕಮ್ಮಿಯಾ? ಪೇಟೆಲಿ ಓದುಲೆ ಹೋದವು ಮಾತ್ರವಾ ಹಾಳಪ್ಪದು? ಜೋಬಿಂಗೆ ಹೇಳಿ ಹೋದವು ಹಾಳಾವುತ್ತವಿಲ್ಲೆಯಾ? ಅದರಲ್ಲೂ ಮನೆಂದ ದೂರ ಇಪ್ಪಗ, ಕೈತುಂಬ ಸಂಬಳ ಬಪ್ಪಾಗ ಅದರ ಹೇಂಗೆ ಖರ್ಚು ಮಾಡುತ್ತದು ಹೇಳಿ ಗೊಂತಾಗದ್ದೆ ಒಂದೊಂದು ದುರ್ಬುದ್ಧಿ ಕಲಿತ್ತವು. ಸೋಫ್ತ್‌ವೇರ್ ಕೆಲಸಕ್ಕೆ ಹೋಪವರಲ್ಲಿ ಸಿಗರೇಟು ಹೇಳಿರೆ ಭಾರೀ ಸಾಮಾನ್ಯ ಸಂಗತಿ ಆಯಿದು. ಮತ್ತೆ ಮೆಲ್ಲಂಗೆ ಬೀರಿನ ರುಚಿ ನೋಡ್ತವು. ಮತ್ತೆ ಅದರಿಂದ ಮೇಲಂಗೆ ಭಡ್ತಿ ಆವುತ್ತು. ಸಂಬಳ ಹೆಚ್ಚಿಯಪ್ಪಗ ಇವರ ಹಿಂದೆ ಬೀಳ್ತ ಹೆಣ್ಣುಗಳೂ ಜಾಸ್ತಿ ಆವುತ್ತು. ಹಾಂಗೆ ಆ ಮರುಳೂ ಸುರು ಆವುತ್ತು. ಪುಕ್ಸಟ್ಟೆ ಸಿಕ್ಕುವಗ ಆರು ಬಿಡ್ತವು ಹೇಳಿ? ಮನೆಯವಕ್ಕೆ ಗೊಂತಾಗಿ ಮದುವೆ ಮಾಡ್ಸಿದವು ಹೇಳಿ ಮಡಿಕ್ಕಳಿ. ಬೇಗ ಡೈವೋರ್ಸೂ ಆವುತ್ತು. ಕಾರಣ ಇದುವೇ. ದೊಡ್ಡ ಸಂಬಳ ಅಪ್ಪಗ ಹೇಂಗೆ ಖರ್ಚು ಮಾಡಿದ್ದ ಹೇಳಿ ನೋದ್ಳೆ ಯಾರಿದ್ದ? ಬೆಂಗ್ಳೂರಿಲ್ಲಿ ಕೆಲಸಕ್ಕೆ ಹೇಳಿ ಸೇರಿದ ಕೂಸುಗಳೂ ಅಷ್ಟೇಯ. ದೊಡ್ಡ ಸಂಬಳದ ಮಾಣಿಯಂಗಳನ್ನೇ ನೋಡಿ ಪಟಾಯಿಸುತ್ತವು. ಅದೂ ಪುಕ್ಸಟ್ಟೆ ಎಂಜಾಯ್ ಮಾಡ್ಲೆ ಮಾತ್ರ. ಪಬ್, ಬಾರ್, ರೆಸ್ಟ್ರಾಂಟ್ ಹೇಳಿ ನಮ್ಮ ಕೂಸುಗೊ ಎಷ್ಟು ಜನ ತಿರುಗುತ್ತವಿಲ್ಲೆ ಹೇಳಿ ನೋಡುವಾ.ಬೇರೆ ಜಾತಿ ಆದರೂ ಪರವಾಗಿಲ್ಲೆ ಅವಕ್ಕೆ. ಒಟ್ಟಾರೆ ಹಳ್ಳಿ ಬೇಡ, ನಮ್ಮ ಸಂಸ್ಕೃತಿ ಬೇಡ ಹೇಳಿ ಹೇಳಿ ಎಲ್ಲೆಲ್ಲಿಗೋ ಬಂದು ತಲುಪಿತ್ತು. ಎಲ್ರಿಂಗೂ ಬೆಂಗ್ಳೂರು ಹುಚ್ಚು ಸುರು ಆಗಿ ಬಿಟ್ಟಿದು. ಅಷ್ಟು ಸುಲಾಭಲ್ಲಿ ಅದು ಕಮ್ಮಿ ಆಗ ಹೇಳಿ ಕಾಣ್ತು. ಎಂತ ಮಾಡ್ಲಿ?

  [Reply]

  ಕಾಂತಣ್ಣ

  ಸಿರಿರಮಣ Reply:

  ಕೂಸಂಗ ಬೆಂಕಿ ಕಡ್ಡಿ ಇದ್ದಂಗೆ, ಮಾಣಿಗಳು ಬೆಂಕಿ ಪೆಟ್ಟಿಗೆ ಇದ್ದಂಗೆ, ಹಾಂಗಾಗಿ ಮಾಣಿಗಳೂ ಅಡ್ಡದಾರಿ ಹಿಡದ್ದು ತಪ್ಪೇ ಅದರಲ್ಲಿ ಸಂಶಯವಿಲ್ಲ. ಆದ್ರೆ ಹೆಚ್ಚು ತೊಂದರೆ ಪಡುವವು ಕೂಸಂಗಳೇ ಅಲ್ದಾ ?

  [Reply]

  ಕಳಾಯಿ ಗೀತತ್ತೆ

  ಕಳಾಯಿ ಗೀತತ್ತೆ Reply:

  ಬೆಂಕಿ ಕಡ್ಡಿ ಆದರೂ ,ಬೆಂಕಿ ಪೆಟ್ಟಿಗೆ ಆದರೂ …ದಾರಿ ತಪ್ಪಿ ಹೊದ್ದು ಹೋದ್ದೆ…..
  ಅಪ್ಪ ಅಮ್ಮಂಗೆ ..ಹೆಂಗೆ ಆದರೂ ನಷ್ಠವೇ…ಒಂದು ಒಳ್ಳೆ ನಾಗರೀಕ ..ಮನುಷ್ಯನ ಕಳಕ್ಕೊಂಡ ಹಾಂಗೆ ಆತು …

  [Reply]

  VA:F [1.9.22_1171]
  Rating: +2 (from 2 votes)
 7. ಕಾಂತಣ್ಣ

  ಅದಪ್ಪು ಗೀತತ್ತೆ, ಆದರೂ… ವಿನಾಶ ಪ್ರಮಾಣ ಎಲ್ಲಿ ಜಾಸ್ತಿ ನೋಡೆಕ್ಕನ್ನೆ. ಯಂಗೆ ಇಬ್ಬರ ಏಳ್ಗೆಯೂ ಸಮವೇ.

  [Reply]

  VN:F [1.9.22_1171]
  Rating: 0 (from 0 votes)
 8. ಕಾಂತಣ್ಣ

  ಪ್ರತಿಕ್ರಿಯೆ ಜೀವಂತಿಕೆಯ ಲಕ್ಷಣ, ಯನ್ನ ಕುಮಟಾ ಹೊಡೆಯ ಭಾಷೆ ಒಪ್ಪಂಗೂ ಸ್ಪಂದಿಸಿದ್ದಕ್ಕೆ ಕೃತಜ್ಞತೆಗಳು, ಮುಂದಿನವಾರ ನಿರೀಕ್ಷಿಸಿ ಇನ್ನೊಂದು ಒಪ್ಪ ಓರಣದ ಒಪ್ಪ ಬಯಲಿಗೆ ಬಕ್ಕು.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕವೇಣಿಯಕ್ಕ°ಗೋಪಾಲಣ್ಣಕೆದೂರು ಡಾಕ್ಟ್ರುಬಾವ°ಶಾಂತತ್ತೆಜಯಶ್ರೀ ನೀರಮೂಲೆವಸಂತರಾಜ್ ಹಳೆಮನೆಉಡುಪುಮೂಲೆ ಅಪ್ಪಚ್ಚಿಪ್ರಕಾಶಪ್ಪಚ್ಚಿಕೊಳಚ್ಚಿಪ್ಪು ಬಾವಡೈಮಂಡು ಭಾವರಾಜಣ್ಣಪುತ್ತೂರುಬಾವಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°vreddhiಶ್ರೀಅಕ್ಕ°ಶುದ್ದಿಕ್ಕಾರ°ಕಾವಿನಮೂಲೆ ಮಾಣಿಪವನಜಮಾವಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿನೆಗೆಗಾರ°ಶಾ...ರೀಪಟಿಕಲ್ಲಪ್ಪಚ್ಚಿಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ