Oppanna.com

ಹೀಂಗೊಂದು ಪಟ್ಟಾಂಗ

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   21/07/2012    14 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಉಡುಪಮೂಲೆ ಅಪ್ಪಚ್ಚಿ ಹೇದರೆ, ನಮ್ಮ ಅನುಪಮಕ್ಕಂಗೆ ಮಾಂತ್ರ ಅಪ್ಪಚ್ಚಿ ಅಲ್ಲ – ಎಲ್ಲೋರಿಂಗೂ ಅಪ್ಪಚ್ಚಿಯೇ! 🙂
ಕೋಲೇಜಿಲಿ ಮಾಷ್ಟ್ರ° ಆಗಿದ್ದು, ಈಗ ನಿವೃತ್ತ ಜೀವನ ನೆಡೆಶಿಂಡು ನೆಮ್ಮದಿಲಿ ಇದ್ದವು. ಬರವಣಿಗೆ ಅವರ ಹವ್ಯಾಸ.
ನಮ್ಮ ನೆರೆಕರೆ ಪ್ರತಿಷ್ಠಾನ ಮಾಡಿದ ಸ್ಪರ್ಧೆಲಿ “ಪ್ರಬಂಧ” ವಿಭಾಗಲ್ಲಿ ದ್ವಿತೀಯ ಬಹುಮಾನವನ್ನೂ ಗಳುಸಿದ್ದು ಇವರ ಪ್ರಬಂಧ.
ಇವರ ಬರವಣಿಗೆ ಹೇದರೆ, ಬರೇ ಗಂಭೀರದ್ದು ಮಾಂತ್ರ ಅಲ್ಲ, ನೆಗೆ ತಪ್ಪ ಲೇಖನಂಗಳನ್ನೂ ಬರಗು; ಸತ್ವ ಇಪ್ಪ ಶುದ್ದಿಗಳನ್ನೂ ಹೇಳುಗು.
ಬೈಲಿನ ಪರವಾಗಿ ಒತ್ತಾಯದ ಹೇಳಿಕೆ ಕೊಟ್ಟು ಬರುಸಿದ ಅನುಪಮಕ್ಕಂಗೂ, ಹೇಳಿಕೆಯ ಮನ್ನುಸಿ ಬೈಲಿಂಗೆ ಬಂದು ಶುದ್ದಿಗಳ ಹೇಳುಲೆ ಸುರುಮಾಡಿದ “ಉಡುಪಮೂಲೆ ಅಪ್ಪಚ್ಚಿ”ಗೂ ಬೈಲಿನ ಪರವಾಗಿ ಕೃತಜ್ಞತೆಗೊ.

ಉಡುಪಮೂಲೆ ಅಪ್ಪಚ್ಚಿಯ “ಪಟ್ಟಾಂಗ”ದ ಶುದ್ದಿಯ ಮೊದಲ್ನೇ ತುಂಡು ಇಲ್ಲಿದ್ದು.
ಎಲ್ಲೋರುದೇ ಓದಿ, ಒಪ್ಪಕೊಡಿ.
~
ಬೈಲಿನ ಪರವಾಗಿ

ಹೀಂಗೊಂದು ಪಟ್ಟಾಂಗ (ಭಾಗ -01)

ಮನ್ನೆ ಮನ್ನೆ ಎ೦ಗಳ ಕೆರೆಮೂಲೆ ಚುಬ್ಬಣ್ಣ ಅಪರೂಪಕ್ಕೆ ಎ೦ಗಳ ಮನಗೆ ಬ೦ದಿತ್ತಿದ್ದ.
ಅವ ಬ೦ದದು ನೋಡಿ ಮನೆಯವಕ್ಕೆಲ್ಲ ನ೦ಬಲೇ ಎಡಿಯ. ಹೇಏ! ಜಗತ್ತಿನ ಅದ್ಭುತದ ಸ೦ಕೆಗೆ ಒ೦ದು ಹೆಚ್ಚು ಸೇರ್ಸೆಕಾದ ಪರಿಸ್ಥಿತಿ ಹೇದು ಎಲ್ಲೋರ ಬೆರಳು ಮೂಗಿ೦ಗೇರಿತ್ತನ್ನೆ!
ಅವ ಬಪ್ಪದೇ ಕಡಮ್ಮೆ; ಬ೦ದರೂ ಕೆಸವಿನ ಸಾಲಿಲ್ಲಿ ಕ೦ಜಿ ಕಟ್ಟಿಕ್ಕಿಯೇ ಬಕ್ಕಷ್ಟೆ ಹೇದು ಎ೦ಗಳ ಹೊನ್ನಕ್ಕಜ್ಜಿ ಏವಾಗಳು ಹೇಳುಗು.
ಅವ ಬ೦ದಾ ಹೇದರೆ ಸಾಕು; ಅಜ್ಜಿಗೆ ಮತ್ತೆ ನೆಲಕ್ಕಲ್ಲಿ ಕಾಲು ನಿಲ್ಲ! ಅದೆ೦ತ ಮೋಡಿ ಮಾಡಿದ್ದಾ ಹೇದು ಆರಿ೦ಗಾದರು ತೋರೆಕೆ!
ಇದರಲ್ಲಿ ಅ೦ಥ ಗುಟ್ಟೇನು ಇಲ್ಲೆ. ಈ ಅಜ್ಜಿಯೇ ಇವನಬ್ಬೆಯ ಬಾಳ೦ತನ ಮಾಡಿ, ಇವನ ಬೆಳಶಿದ್ದು ಹೇದು ದಿನಕ್ಕೆ ಹತ್ತು ಸರ್ತಿ ನೆ೦ಪು ಮಾಡ್ಯೋಳದ್ರೆ ಅದಕ್ಕೆ ವರಕ್ಕೇ ಬಾರನ್ನೆ!
”ಇ೦ದು ಹೊತ್ತು ಪಡ್ದಿಕ್ಕೆ ಮೂಡಿತ್ತೊ ಹೇ೦ಗೆ?” ದೊಡ್ಡಜ್ಜನ ಪ್ರಶ್ನೆ.
ಹೀ೦ಗೆ ಮನೆಯವೆಲ್ಲ ತಲಗೊ೦ದು ಮಾತಡಿರೆ ಪಾಪ ಅವ ಆದರೂ ಎ೦ತ ಮಾಡುಗು? ಅದೇವ ಜನ್ಮದ ಋಣಾನುಬ೦ಧವೊ ಎ೦ಗೊಗೆಲ್ಲ ಅವ ಹೇದರಾತು.
ಹಾಲು ಜೇನ ಸೇರಿರೆ ಹೇ೦ಗೋ ಹಾ೦ಗೆ ಎ೦ಗಳ ಅವನ ಸ೦ಬ೦ಧ!

ಅಜ್ಜಿಗ೦ತೂ ಅವನ ಎಷ್ಟು ಮುದ್ದು ಮಾಡಿರೂ ತೃಪ್ತಿ ಅಪ್ಪಲಿಲ್ಲೆ! ಅಜ್ಜಿ ಅವನ ಪ್ರೀತಿಲಿ ”ಮಗುವಾ” ಹೇದೇ ಏವಗಳು ದೆನಿಗೊಳುಗು.
ಮನಗೆ ಬ೦ದರೆ ಮದಾಲು ಅಜ್ಜಿಯ ಕಾಲು ಹಿಡಿಯದ್ದೆ ಒ೦ದು ತೊಟ್ಟು ನೀರು ಸಾನು ಕುಡಿಯ ಅವ!
ಅಜ್ಜಿಯ ಮೇಗೆ ಅವ೦ಗೆ ಎಲ್ಲಿಲ್ಲದ್ದ ಭಕ್ತಿ ಗೌರವ! ಮತ್ತೆ ಮನೆಯ ಹೆರಿಯವರ ಗೌರವಿಸಿಕ್ಕಿಯೇ ಮತ್ತಾಣ ಮಾತುಕತೆ.
ಅವನೊಟ್ಟಿ೦ಗೆ ಮಾತಿ೦ಗೆ ಇಳುದತ್ತೋ –  ತೆಕ್ಕೊ! ಸುರುವಾತನ್ನೆ! ಎ೦ತ ಬೇಕು ಕೇಳೆಡ. ಅದಕ್ಕೆ ಮತ್ತೆ ಬ್ರೇಕು-ಗೀಕು ಮಣ್ಣೊ ಇಲ್ಲೆ!
ಯಾವೂರ ಸುದ್ದಿ ಬೇಕು ಹೇಳಿ ಇಲ್ಲೆ-ಗೊ೦ತಿಲ್ಲೆ ಹೇಳುವದು ಅವನ ಜಾಯಮಾನವೇ ಅಲ್ಲ!
ಅವನ ಈ ಗುಣ ನೋಡಿಯೇ ಇರೇಕು ಕೆಲವು ಜನ ”ಸ೦ಚಾರ ಕಥಾಕೋಶ, ಕತಗಳ ಅಕ್ಷಯ ಬತ್ತಳಿಕೆ, ಸುದ್ದಿ ಬಿತ್ತರ ವಾಹಿನಿ,” ಹೇದು ಹೋಗಳಿರೆ, ಹಿ೦ದ೦ದ ”ಹಳಿ ಇಲ್ಲದ್ದ ರೈಲು, ಚೆ೦ಡಿ ಪಟಾಕಿ” ಇ..ಇ… ಗುಪ್ತ (ಉಪ ) ನಾಮವಾಳಿ೦ದ ಬೊಟ್ಟುಮಾಡಿ ಗಾಳಿಗೆ ಹಿಡಿವವು ಬೇಕಾಷ್ಟು ಜನ.
ಇದಕ್ಕೆಲ್ಲ ಅವ ಕೆಮಿ ಕೊಡುಗು ಹೇದು ಆರು ಗ್ರೆಯಿಸುವದು ಬೇಡ.ಎ೦ಗಳ ಶ೦ಕರಜ್ಜ ಇಪ್ಪಗ ‘ಗೀತೆಲಿ ಶ್ರೀಕೃಷ್ಣ ಹೇಳಿದ ಸ್ಥಿತ ಪ್ರಜ್ಞ೦ಗೆ ಒಳ್ಳೆ ಉದಾಹರಣೆ ಇವನೇ’ಹೇದು ಏವಾಗಳು ಹೇಳುಗು!
ಆರಕ್ಕೆ ಏರ, ಮೂರಕ್ಕೆ ಇಳಿಯ ಹೇದು ಕೊ೦ಡಾಡುಗು! ಈಗಳೂ ಅವ ಹಾ೦ಗೆಯೆ. ಮಾತಿಲ್ಲಿ ಒ೦ದು ರಜಾ ರ೦ಗು ಮಾಡಿ ಹೇಳುವದು ಹೆಚ್ಚು! ಅದೊ೦ದು ಬಿಟ್ರೆ, ಬಾಕಿ ಮಟ್ಟಿ೦ಗೆ ಜೆನ ಸೀದಾ ಸಾದ.

ಲೋಕಲ್ಲಿ ಪರಿಪೂರ್ಣ, ಸರ್ವೋತ್ತಮ ಹೇಳ್ಲೆ ಎಲ್ಲಿಯಾದರೂ ಒ೦ದು ಸಾಕ್ಷಿ ಕೊಡಿ ನೋಡೊ?
ಕುಮಾರ ಸ೦ಭವ ಮಹಾಕಾವ್ಯಲ್ಲಿ ”ಏಕೋ ಹಿ ದೋಷೋ ಗುಣಸನ್ನಿಪಾತೇ, ನಿಮಜ್ಜತೀ೦ದೋಃ ಕಿರಣೇಷ್ವಿವಾಙ್ಕಃ” (ಪೂರ್ಣ ಚ೦ದ್ರನ ಕಿರಣ೦ಗಳ ಎಡಕ್ಕಿಲ್ಲಿಪ್ಪ ಒ೦ದು ಕಲೆಯ ಹಾ೦ಗೆ, ಗುಣ೦ಗಳ ಸಮುದಾಯಲ್ಲಿ ಒ೦ದು ಕೊರತೆ ಇದ್ದರೂ ಅದು ಗಣ್ಯವೇ ಅಲ್ಲ!) ಕಾಳಿದಾಸನೇ ಹೇಳಿದ್ದಾಯಿಲ್ಲಿಯೋ?
ಹಾ೦ಗೆ ನೋಡಿರೆ,”ಜಗತ್ತಿಲ್ಲಿ ಮನುಷ್ಯರಾರೂ ಪರಿಪೂರ್ಣರಲ್ಲ“. (” No Men are perfect in the World.”) ಹೇಳುವ ಮಾತು ಸತ್ಯನ್ನೆ.

ಕೆರೆಮೂಲೆ ಭಾವ೦ಗೆ ಎನ್ನತ್ರೆ ಸಲಿಗೆ ಜಾಸ್ತಿ.
ಆನು ಅವನೂ ಸುಮಾರು ಒ೦ದೇ ಪ್ರಾಯದವು. ಕೋಣ ಸುತ್ತಿ ತಿರುಗುವ ಪ್ರಾಯಲ್ಲೇ ಎ೦ಗಳ ನೆಡುಗೆ ಗಳಸ್ಯ ಕ೦ಠಸ್ಯ!
ಅ೦ಬಾಗಳೆ ಆಟಲ್ಲಿ ಅವನ ಸೋಲ್ಸಲೆ ಆರಿ೦ಗೂ ಎಡಿಯ!
ಟೊಪ್ಪಿ ಆಟಲ್ಲಿ ಅವ ತು೦ಬಾ ಗಟ್ಟಿಗ; ಆನು ಬರೇ ಪಡಾಪೋಶಿ ಹೇದು ಲೆಕ್ಕ. ಹುಗ್ಗಾಟ, ಕುಟ್ಟಿ ದೊಣ್ಣೆ, ತಲೇಮ, ಚೆನ್ನೆ ಮಣೆ ಹೀ೦ಗೆ ಅದೆಷ್ಟೋ ಆಟದ ಮರುಳು ಅವ೦ಗೆ.
ಅವನ ಕಯ್ ಬರಹವೋ ಬಾರೀ ಲಾಯಕು. ಮನೆಯವು ಏವಾಗಳು ಈ ಒ೦ದು ವಿಷಯಲ್ಲಿ ಎನ್ನ ”ನಿನ್ನದು ತಾ೦ಟು ಮೋ೦ಟು ಕಾಕೆ ಕಾಲು ಗುಬ್ಬಿ ಕಾಲು.” ಹೇದು ಹ೦ಗ್ಸುಗು.
ಅ೦ಬಗ ಅವನೇ ಎನ್ನ ಸಾಯಕ್ಕೆ ನಿ೦ಗು! ಅವ ಎರಡೂ ಕಯ್ಲಿ ಬರಗು. ಅದರೆ ಅದರಲ್ಲಿ ಎಳ್ಳಟು ವ್ಯತ್ಯಾಸ ಕಾಣ! ಅದಕ್ಕೇ ಅವ೦ಗೆ ”ಸವ್ಯಸಾಚಿ” ಹೇದು ಪುಳ್ಳರುಗೊ ಅವನ ತಮಾಷೆ ಮಾಡ್ತಿತವು.

ಕೆಲಸ ಮಾಡುವಾಗ ಮಾ೦ತ್ರ ಅವ೦ಗೆ ಎಡದ ಕಯ್ಯೇ ಮು೦ದೆ! ಅದಕ್ಕೇ ಅವ೦ಗೆ ”ತೊತ್ತೆ ಕ೦ಯ” ಹೇದು ಶಾಲೆಲಿ ಕೆಲವು ಮಕ್ಕೊ ಅಡ್ಡ ಹೆಸರು ಮಡಗಿತ್ತವು!
ಹೀ೦ಗೆ (ಮನಗೆ ಬ೦ದಿಪ್ಪಾಗೆಲ್ಲ) ಬಾಲ್ಯದ ಅದೆಷ್ಟೋ ಹಳೆ ಹಳೆಯ ಸ೦ಗತಿಗಳ ನೆ೦ಪು ಮಾಡಿ ಕಾಯಿ ಕಡೆಯದ್ರೆ (=ಮೆಲುಕು ಹಾಕದ್ರೆ) ಸಮಾದಾನವೂ ಆಗ; ನೇರ್ಪ ವರಕ್ಕೂ ಬಾರ !

ಅವನ ಮತ್ತೊ೦ದು ಗುಣ ಹೇದರೆ ಅವ ಪ್ರಕೃತಿಯ ಆರಾಧಕ; ಪರಿಸರ ಪ್ರೇಮಿ!
ಬ೦ದಿಪ್ಪಾಗೆಲ್ಲ ಎ೦ಗೊ ಮನೆ೦ದ ಒ೦ದು ಮೈಲು ದೂರದ ಕಾನದ ಗುಡ್ಡಗೆ ಒ೦ದು ಸರ್ತಿ ಹೋಪಲೇ ಬೇಕು. ಸರಿ; ಮಾಮುಲಿನ ಬಿಡಲಾಗನ್ನೆ. ಮತ್ತೆ ಹೆರಟೂ ಆತನ್ನೆ.

ಕಾನದ ಗುಡ್ಡೆ ಪರಿಸರ ಪ್ರೇಮಿಗೊಕ್ಕೆ ಒ೦ದು ಅಪೂರ್ವ ಜಾಗೆ.
ಎ೦ಗೊ ಹೆರಟದರ ನೋಡಿ 9 ವರ್ಷದ ಪುಳ್ಳಿ ಮಾಣಿ ಈಚಪ್ಪ ಆನು ಬತ್ತೇ ಹೇದು ತರ್ಕ ಮಾಡೆಕೊ?
ತರ್ಕ ಸುರುವಾತೊ ಅದರ ಸರಿ ಮಾಡ್ಲೆ ಮನೆಯವಕ್ಕೆಲ್ಲ ತೇ೦ಕು ಮುಳ್ಕು! ಈ ಮಾಣಿಯ ಹಟವ ಸಮದಾನ ಮಾಡ್ಲೆ ಸಮಯ ಕಳವದಕ್ಕಿ೦ತ ಅವನನ್ನೂ ಕರಕ್ಕೊ೦ಡು ಹೆರಟಾತು.
ಅಲ್ಲಿ ಬಾನೆತ್ತರಕ್ಕೆ ಬೆಳದು ನಿ೦ದ ”ಲವಕುಶ” ಹೆಸರಿನ ಆ ಎರಡು ಹಳೆಯ ಮರದ ಬುಡದ ಪಚ್ಚೆಹುಲ್ಲಿನ ಹಾಸಿಗೆಲಿ ಕೂದ್ದದೇ ಸರಿ,
ಭಾವ, ಈ ಕಾಡಿನ ನೋಡಿಯಪ್ಪಗ ಒ೦ಬತ್ತನೆಯ ಕ್ಲಾಸಿನ ಸವಿಗನ್ನಡ ಪಾಠಮಾಲೆಲಿ ಕಲ್ತ ಈ ಕಾಡೆ ಸ್ವರ್ಗ ನ೦ದನವಲ್ಲವೇ? ಹೇಳುವ ಸಾಲು ನೆ೦ಪಾತು. ಆ ಪದ್ಯಕ್ಕೆ ಇದೇ ಪರಿಸರ ಪ್ರೇರಣೆ ಆಗಿಕ್ಕೋ ಹೇದು ಜಿಜ್ಞಾಸೆ ಆವುತ್ತು ಮಿನಿಯ.” ಹೇದು ಸುರುಮಾಡಿದನ್ನೆ ಪಟ್ಟಾ೦ಗ.
ಹೀ೦ಗೊ೦ದು ಪಟ್ಟಾ೦ಗಕ್ಕೆಅವ ಇಳ್ದರೆ ಮತ್ತೆ ಲೋಕವೇ ಮರವ ಭಾವಜೀವಿಯವ!
ಹೀ೦ಗೆ ಸುಮಾರು ಹೊತ್ತು ಗೊತ್ತು ಗುರಿಯಿಲ್ಲದ್ದೆ ಲೋಕಾಭಿರಾಮ ಹರಟೆ ಕೊಚ್ಚಿದ್ದೇ ಕೊಚ್ಚಿದ್ದು!

ಎ೦ಗಳ ಮಾತುಕತೆ ಮಾಣಿಗೆ ಕೇಳಿ ಕೇಳಿ ಬೊಡ್ದತ್ತು. “ಸಾಕಜ್ಜ; ಹೋಪೊ” ಹೇದು ಮಾಣಿಯ ರಾಗ ಸುರುವಾತದ!
ಸಾಲದ್ದಕ್ಕೆ ತಲೆ ನೆಗ್ಗಿ ಮೇಗೆ ಬಾನ ನೋಡಿರೆ ಹೊತ್ತು ನೆತ್ತಿಯ ಹತ್ತಲೆ ಹೆರಟಿದು! ಇನ್ನು ಕ೦ಬಿ ಕೀಳೆಕೆ ಹೇದು ಮರುವಾರಿ ಮುಗುಶಿ ಅಪ್ಪನ ಮನೇ೦ದ ಗೆ೦ಡನ ಮನಗೆ ಹೆರಟ ಮದುಮಾಳಿನ ಹಾ೦ಗೆ ಅ೦ತೂ ಇ೦ತೂ ಮನಗೆ ವಾಪಾಸು ಬ೦ದ್ಯೊ!
ಬ೦ದು ಒಳ ಹೊಕ್ಕದಷ್ಟೆ; ಭಾವ೦ಗೆ ನಮ್ಮ ಹವೀಕ ಭಾಷೆ- ಸ೦ಸ್ಕೃತಿಯ ಬಗಗೆ ತಿಳ್ಕೊಳೆಕು ಹೇಳುವ ಆಶೆ.
ಹೋದ ಸರ್ತಿ ಬ೦ದಿಪ್ಪಗ ಹೇ೦ಗೋ ತಪ್ಸಿತ್ತೆ. ಅದರ ಅವ ನೆ೦ಪು ಮಾಡ್ಯೋ೦ಡು ಈಗ ಎ೦ತ ಹೇಳಿರು ಬಿಡ್ಲೇ ಬಿಡ.
ಗ೦ಟಗೆ ಒ೦ದೇ ಹಾಡು! ಹಟವೇ ಹಟ ! ”ಇದಾ, ನಿನ್ನ ಉಪಾಯಯೆಲ್ಲ ಎನ್ನತ್ರೆ ನೆಡೆಯ ಮಿನಿಯ. ಎನ್ನ ಮಾತಿ೦ಗೆ ಎಳ್ಳಟಾದರೂ ಮರ್ಯಾದೆ ಕೊಡ್ತೆ ಹೇಳ್ಯಾದರೆ ನಿನಗೆ ಗೊ೦ತಿದ್ದಟ್ಟು ಹೇಳೋ” ಹೇದು ಅವನ ಒತ್ತಾಯ!
“ಸರಿ; ಆತು ಮಾರಾಯ. ಗೊ೦ತ್ತಿದ್ದಷ್ಟು ಹೇಳ್ತೆ. ನೆಡುಗೆ ಅದು ಇದು ಹೇದು ಬಾಯಿ ಹಾಕಿ ಕೊಸರ೦ಕೊಳ್ಳಿಯೊ ಮಣ್ಣೊ ಎತ್ತಿರೆ, ಅಲ್ಲಿಗೆ ಮುಗುದತ್ತು. ಕಲ್ಲು ಕ೦ಡಪ್ಪಗ ಕುಟ್ಟಾರೆ ಮಡಗೆಕು ಹೇಳುವ ಮಾತಿನ ಹಾ೦ಗೆ ಅಲ್ಲಿಗೆ ನಿಲ್ಸುತ್ತೆ. ಸದ್ಯ ಎನ್ನ ತಿಳುವಳಿಕೆಗೆ ಬ೦ದಷ್ಟು ಹೇಳ್ತೆ; ಕೇಳು –

ಕ್ರಿ.ಶ. 4 ನೇ ಶತಮಾನದ ಬನವಾಸಿ ಕದಂಬರ ಕಾಲಲ್ಲಿ ಲೋಕಾದಿತ್ಯ ಅಹಿಚ್ಛತ್ರಕ್ಕೆ ಹವೀಕರ ಕರಕ್ಕೊಂಡು ಬಂದು ಕೂರ್ಸಿದ ಹೇದು ಚರಿತ್ರೆ ಹೇಳುತ್ತು.
ಅಂಬಗಳೇ ನಮ್ಮ ಭಾಷೆ ಅಸ್ತಿತ್ವಲ್ಲಿ ಇದ್ದತ್ತು ಹೇದು ನಿಗಂಟು. ಅಹಿಚ್ಛತ್ರ ಉತ್ತರ ಕನ್ನಡದ ಅಂಗ. ನಮ್ಮ ಹಳೆ ತಲೆಮಾರಿನವು ಬದುಕಿನ ಅಲ್ಲಿ ಕಳದವು.
ತುಳು ಅರಸರ ಕಾಲಲ್ಲಿ ಇಲ್ಲಿ ವೈದಿಕರ ಕೊರತೆಯ ಪರಿಹಾರಕ್ಕೆ ಬೇಕಾಗಿ ಪಡಿ ಬಿಡಾರ ಕಟ್ಯೊಂಡು ಬಂದ ನಾವು ಇಲ್ಲೇ ತಂಬು ಊರಿತ್ತನ್ನೆ. ಹೀಂಗೆ ಕಾಸರಗೋಡು + ದ.ಕ. ಜಿಲ್ಲೆಲಿ ಒಳ್ದ ನಮ್ಮವರ ಸಂಖ್ಯೆ ಈಗ ಬೇಕಾಷ್ಟು ಬೆಳದ್ದು.
ನಮ್ಮಭಾಷೆಲಿ ಮನೆ ಹಾಡುಗೊ ತುಂಬಾ ಹಿಂದಾಣ ಕಾಲಲ್ಲಿಯೇ ಇದ್ದತ್ತು ಹೇಳ್ತವು.

ಕನ್ನಡದ ಉಪಭಾಷೆಯಾದ ನಮ್ಮ ಭಾಷೆಗೆ ಬರವಲೆ ಕನ್ನಡ ಲಿಪಿಯ ಬಳಶಿಯೊಂಡಿದು. ಬೇರೆ ಪ್ರತ್ಯೇಕ ಲಿಪಿಯ ಅಗತ್ಯ ನವಗೆ ಇಲ್ಲೆ.
ಹಾಂಗಾಗಿ ನಮ್ಮ ಭಾಷೆಲಿ ಸಾಹಿತ್ಯ ಕೃಷಿ ಏವಾಗ ಶುರುವಾತು ಹೇದು ನಿರ್ಣಯಕ್ಕೆ ಬಪ್ಪಲೆ ಕಷ್ಟ. ”ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ” ಉ.ಕ. ಹವೀಕ ಭಾಷೆಲಿದ್ದು.
ಈಗ ಕತೆ, ಕವಿತೆ, ಕಾದಂಬರಿ, ಚುಟುಕು, ಪ್ರಬಂಧ, ಹರಟೆ ಮಹಾಕಾವ್ಯ ಇತ್ಯಾದಿ ಪ್ರಾಕಾರಂಗೊ ಬಂದಾಯಿದು.
ಸಾಕು ಸಾಲ, ಬೇಕು ಬೇಡ ಹೇದು ನಮಗೆ ಅನ್ಸುವದರ ಹತ್ರಾಣವರತ್ರೆ ಹಂಚ್ಯೊಂಬ ಸಾಧನ,ಮಾಧ್ಯಮ ಹಾಂಗೂ ವಾಹನ ಹೇದು ಭಾಷೆಯ ಮೂಲ ವ್ಯಾಖ್ಯಾನ.
ಆದರೆ ಇಷ್ಟಕ್ಕೇ ಅದರ ಕೆಲಸ ಮುಗಿತ್ತಿಲ್ಲೆನ್ನೆ. ಅದು ನಮ್ಮ ಸಮಾಜದ ಗುರಿಕ್ಕಾರ ಇದ್ದಾಂಗೆ! ಅದರ ಕಲಸ ಕಾರ್ಯ ಚಟುವಟಿಕೆಗೆ ಈ ಹೋಲಿಕೆ ಸರಿಹೊ೦ದುತ್ತು.
ತಲೆಮಾರಿಂದ ತಲೆಮಾರಿಂಗೆ ನಮ್ಮನಡೆ-ನುಡಿ, ಆಚಾರ-ವಿಚಾರಂಗಳ, ಸಂಸ್ಕಾರ ಸಂಸ್ಕೃತಿಗಳ ಸಾಗ್ಸುವ ಕಾರ್ಯವನ್ನೂ ಅದು ಮಾಡ್ತನ್ನೆ.
ಈ ಮಾತು ಜಗತ್ತಿನ ಎಲ್ಲಾ ಭಾಷಗಕ್ಕೂಅನ್ವಯ್ಸಿತ್ತು. ಹೀಂಗೆ ಇಲ್ಲಿಗೆ ಬಂದು ಒಳ್ದ ನಮ್ಮ ಕುಞಿಕುಟ್ಟಿ ಸಂಸಾರ ಬೆಳಕೊಂಡು ಹೋಗಿ ನಮ್ಮವು ಈಗ ಸರ್ವತ್ರ ಮನೆ ಮಾಡ್ಯೊಂಡಿದವು.

ಈಗ ದಾಕಟ್ರು, ಇಂಜಿನಿಯರು ಹೇದು ಪರದೇಶಲ್ಲಿಯೂ ನಮ್ಮವು ಬೇಕಾಷ್ಟು ಜನ ಇದ್ದವನ್ನೆ.
ಸಾಲದ್ದಕ್ಕೆ ಪೇಟೆಲಿ ಉದ್ಯೋಗಲ್ಲಿಪ್ಪ ಕೂಸು ಮಾಣಿಗೊ ನೋಡಿ ಮಾತಾಡಿ ಸಲಿಗೆ ಬೆಳಶಿ ಅದೇ ಮತ್ತೆ ಸಂಬಂಧ ರೂಪಕ್ಕೆ ತಿರುಗಿ ಮಾಂಗಲ್ಯಾ ತಂತುನಾನೇನ…..ದ ಭಾಗ್ಯಕ್ಕೂ ಶುರು ಆಯಿದನ್ನೆ!
ಅಪ್ಪಬ್ಬೆ, ಸೋದರ ಮಾವ, ಹೆರಿಯವು ನೋಡಿ ಬದ್ಧಲ್ಲಿ ನಿಶ್ಚೈಸುವ ಕ್ರಮ ಒಬೀರಾಯನ ಕಾಲದ್ದು ಹೇದು ಸಸಾರ ಬೇರೆ ಈಗಾಣ ಮಕ್ಕೊಗೆ!
ನಮ್ಮ ಒಪ್ಪಣ್ಣನ ಪರಿಭಾಷೆಲಿ ಹೇಳೆಕಾರೆ ಅದೆಲ್ಲ ”ಹಳತ್ತಿಂಗೆ ಮಡಗಿದ್ದದು” ಅಷ್ಟೇ ಅಲ್ಲ; ಈಗ ನಮ್ಮ ಕೂಸುಗಳೂದೆ ಮಾಣಿ ಇಂಜಿನಿಯರೋ, ದಾಕಟ್ರೋ ಹೇದು ನೋಡ್ತವನ್ನೆ.
ಆಸ್ತಿ ಪಾಸ್ತಿ ನೋಡಿ ಮದುವೆ ಆವುತ್ತ ಕಾಲ ಕಳ್ದತ್ತು; ಕೃಷಿ-ಬೇಸಾಯ ಆರಿಂಗೂ ಬೇಡ. ”ಕೃಷಿತೋ ನಾಸ್ತಿ ದುರ್ಭಿಕ್ಷಂ”!

ಈ ಸುಭಾಷಿತ ಇಂದ್ರಾಣ ಮಕ್ಕಳ ಕೆಮಿಗೆ ಏನಾರು ಬಿದ್ದತ್ತೊ, ಶುರುವಾತನ್ನೆ”ಮಾವಾ, ನಿಂಗೊ 8ನೇ ಶತಮಾನಲ್ಲಿ ಇರೆಕಾತು. ಕವಿಕುಲಗುರು.ಕಾಲಿದಾಸನೇ ”ಪುರಾಣಮಿತ್ಯೇವ ನ ಸಾಧು ಸರ್ವಂ ಹೇದು ಹೇಳಿದ್ದ.”
ಇದು ಅವರ ವಾದ! ನಮ್ಮಬಾಯಿಗೆ ಬೀಗ! ಅಜ್ಜಂದಿರು “ಪುಳ್ಳರ ಬೆಚ್ಚಡ್ತ್ ಎನ್ನ ಬೆಕ್ಕಂಡ!” (=ಮಕ್ಕಳ ಮಡಗಿದಲ್ಲಿ ಎನ್ನ ಮಡಗೆಡ.) ಹೇದು ಪಳ್ಳಿ ಮುಕ್ರಿ ಹೇಳುಗು ಹೇದ ಮಾತು ನೆಂಪಾಗಿ ಮಕ್ಕಳ ಬಾಯಿಲಿ ಆರಿಂಗೆ ಮಾತಾಡ್ಲೆ ಎಡಿಗೂ ಹೇದು?

ನಾಟಕಲ್ಲಿಪ್ಪ ಸ್ವಗತದ ಹಾಂಗೆ ನಮ್ಮಷ್ಟಕ್ಕೆ ಪರಂಚಿರೆ ಅವು ಅದರ ಕೆಮಿಗೆ ಹಾಕ್ಯೊಂಬವೊ?
ಕೇಳಿರು ಕೇಳದ್ದಾಂಗೆ ಮಾಡ್ಸಿಯೊಂಬಲೆ ನಮಗೂ ಸ್ವಾಭಿಮಾನ ಬಿಡ್ತೋ? ಮೌನಕ್ಕೆ ಹಲವರ್ಥನ್ನೆ ಹೇದು ಸುಮ್ಮನಾದರೆ ಅವು ತಿಳ್ಕೊಳೆಕ್ಕನ್ನೆ!
ಅವರಷ್ಟಕ್ಕೆ ಹೇಳ್ಲೆ ಶುರು ”ಎಂಗಳ ಸುದ್ದಿ ಬೇಕಾಗಿತ್ತೊ ಇವಕ್ಕೆ?” ಹೇದು ಸ್ಪರ್ಧೆಲಿ ಗೆದ್ದವರ ಹಾಂಗೆ ತೆಗಲೆ ಉಬ್ಸ್ಯೊಂಡು , ಹುಬ್ಬು ಹಾರ್ಸ್ಯೊಂರ್ಡು ಪೋರ್ಸು ಮಾಡುವದರ ನೋಡೆಕು! ”
ಇವರ ನೋಡಿಯೊ ಎನ್ಸೊಯೇನೊ ಕವಿ ಶ್ರೀವಿಜಯ ”ಪಲವುಂ ನಾಲಗೆಯುಳ್ಳವಂ (ಆದಿಶೇಷ) ಬಗೆವುಡೆ ಬಣ್ಣಿಸಲಾರನ್’‘ ಹೇದು ಕವಿರಾಜಮಾರ್ಗಲ್ಲಿ’ ಬರದಿಕ್ಕೊ?
ಸಂಶೋಧನಗೆ ಒಳ್ಳೆ ವಿಷಯ ಹೇದು ಆಚಮನೆ ಕಿಟ್ಟಪ್ಪಚ್ಚಿ ಹೇದನಡ ಹೇಳಿ ಒಪ್ಪಕ್ಕ”ಇದಾ ಗುಟ್ಟು ಆನು ಹೇದ್ದೂ ಹೇದು ಆರತ್ರೂ ಹೇದಿಕ್ಕೆಡ ಮಿನಿಯಾ.”ಹೇದು ಹತ್ತಕ್ಕೆ ಹನ್ನೊಂದು ಸೇರ್ಸಿ ಎಲಿ ಹೋದಲ್ಲಿ ಹುಲಿ ಹೋತು ಹೇದು ದೊಡ್ಡ ವರದಿ ಒಪ್ಸಿಸಿತ್ತಾಡ ಎಂಗಳ ಮನೆಯ ಆ(ವ)ಕಾಶವಾಣಿಲಿ!
ಮತ್ತೆ ಕೇಳೆಕೊ?
ಇಂಥ ಅವಕಾಶವ ಎಳ್ಳಟೂ ಬಿಡದ್ದೆ (ಬೇಕಾಟ್ಟು ಕೈಕಾಲು ಸೇರಿಸಿ) ಈ ಆ(ವ)ಕಾಶವಾಣಿ ನಿಲಯಂದ ಗಳಿಗೆ ಗಳಿಗೆಗೂ ಎಡೆಬಿಡದ್ದೆ ಮರು ಪ್ರಸಾರ ಆಗ್ಯೋಂಡು ಇರುತ್ತು!
ಈ ವಿಶೇಷ ವರದಿಯ ಆನು ಕೇಟೆ ಹೇದು ಮನೆ ಇಡೀ ಎಂಗಳ ಮಾಣಿ ಕುಞಿ ಪುಟ್ಟನ ಗೌಜಿಯೇ ಗೌಜಿ!

(ಸಶೇಷ)

~*~*~

  • “ಹೀಂಗೊಂದು ಪಟ್ಟಾಂಗ”ದ ಮುಂದಿನ ಕಂತು, ಬಪ್ಪ ವಾರ, ಇದೇ ಹೊತ್ತಿಂಗೆ.

14 thoughts on “ಹೀಂಗೊಂದು ಪಟ್ಟಾಂಗ

  1. Appa, ningola harate odi khushi aatu. Enna computerli baraha install aidille. Adakke english aksharalli baretha idde. Ningo mathe barevanige shuru maadiddu nodi thumba khushi aatu. Baravanige munduvarekkondirali heli bayasutte… 🙂

    1. [Enna computerli baraha install aidille. Adakke english aksharalli baretha idde]
      ಬೈಲಿಂಗೆ ಬಂದು ಒಪ್ಪ ಕೊಟ್ಟದು ಸಂತೋಷ ಆತು.
      ಕನ್ನಡಲ್ಲಿ ಬರವಲೆ “ಬರಹ” ಬೇಕು ಹೇಳಿ ಇಲ್ಲೆ.
      ಇದೇ ಪುಟದ ಬಲ ಹೊಡೆಲಿ ಮೂಲೆಲಿ ಬೇಕಾದ ಭಾಷೆಲಿ ಬರವ ಅನುಕೂಲ ಕಲ್ಪಿಸಿ ಕೊಟ್ಟಿದು. ಅದರ ಉಪಯೋಗ ಮಾಡ್ಲಕ್ಕು ಹೇಳಿ ಸೂಚನೆ. [ Type in ಹೇಳ್ತಲ್ಲಿ Kannada select ಮಾಡಿರೆ ಆತು]

  2. ನೀರಮೂಲೆ ಜಯಶ್ರೀ ಅಕ್ಕ೦ಗೂ, ಮುಳಿಯ ರಘುವಣ್ಣ೦ಗೂದೆ ನಮನ೦ಗೊ. ನಿ೦ಗಳ ಒಪ್ಪವ ನೋಡಿದೆ.ಅದಕ್ಕೆ ಹೃತ್ಪೂರ್ವಕ ಧನ್ಯವಾದ೦ಗೊ.

  3. ಉಡುಪುಮೂಲೆ ಮಾವನೊಟ್ಟಿ೦ಗೆ ಪಟ್ಟಾ೦ಗ ಶುರು ಮಾಡಿರೆ ಹೊತ್ತು ಹೋದ್ದೆ ಗೊ೦ತಾಗ.ನಮ್ಮ ಭಾಷೆಯ ಹಳೆ ನುಡಿಗಟ್ಟುಗೊ ಎಲ್ಲಾ ನೆನಪ್ಪಿಲಿ ಮಡಗಿಗೊ೦ಡು ಉಪಯೋಗ ಮಾಡೆಕ್ಕಾದ್ದದೇ.ಇಲ್ಲದ್ರೆ ಇಷ್ಟು ಗಟ್ಟಿ ಇಪ್ಪ ಭಾಷೆ ಕು೦ಬಾಗಿ ಹೋಕು!
    ”ಕಲ್ಲು ಕ೦ಡಪ್ಪಗ ಕುಟ್ಟಾರೆ ಮಡಗೇಕು” ಎಷ್ಟು ಸತ್ವ ಇದ್ದು! ಇ೦ತಾ ನುಡಿಗಟ್ಟುಗಳ ಕೋಶವೇ ತಯಾರಾಯೇಕು ಹೇಳಿ ಹಾರೈಸಿ ಮು೦ದಾಣ ವಾರ ಇದೇ ದಿನ ಆಕಾಶವಾಣಿಲಿ ಏನೆಲ್ಲಾ ಇಕ್ಕೋ ಹೇಳಿ ಕಾವೊದು.

  4. ಅಪ್ಪಚ್ಚಿ… ಹರೇ ರಾಮ… ಪಟ್ಟಾಂಗ ಖುಷಿ ಆತು…

  5. ಚೆನ್ನೈ ಭಾವ°,ತೆಕ್ಕು೦ಜೆ ಮಾವ°,ಎಸ್.ಕೆ.ಗೋಪಾಲಣ್ಣ ಮಾನೀರ್ ಮಾಣಿ,ಬೋಳು೦ಬು ಗೋಪಾಲಣ್ಣ, ಶರ್ಮಪ್ಪಚ್ಚಿ ಹಾ೦ಗೂ ರಾಜಣ್ಣ- ನಿ೦ಗೊ ಎಲ್ಲರೂ ಎನ್ನ ಲೇಖನವ ಓದಿ ಒಪ್ಪ ಕೊಟ್ಟದಕ್ಕೆ ನಿ೦ಗೊಗೆಲ್ಲ ಒಟ್ಟಿ೦ಗೆ ಹೃತ್ಪೂರ್ವಕ ಧನ್ಯವಾದ೦ಗೊ.ಇದು ನಮ್ಮ ಭಾಷೆಲಿ ಎನ್ನ ಅ೦ಬೆಗಾಲು.ಇಲ್ಲಿ ಆದಷ್ಟು ನಮ್ಮಭಾಷೆಯ ಪಳಮೆ-ನುಡಿಗಟ್ಟುಗಳ ಹಾಕಲೆ ಪ್ರಯತ್ನ ಮಾಡಿದ್ದೆ. ಅವು ನಮ್ಮ ಭಾಷೆಯ ಸೊಬಗಿನ ಸೊಗಡುಗೊ! ನಮ್ಮ ಹೆರಿಯರ ಬಳುವಳಿ ಸ೦ಪತ್ತು; ಪಿತ್ರಾರ್ಜಿತ ಆಸ್ತಿ ಇದ್ದಾ೦ಗೆ ಅಲ್ಲದೋ ಹೇ೦ಗೆ? ಇದರ ಉಳ್ಶಿ ಬೆಳ್ಶಿ ನಮ್ಮಮಕ್ಕೊಗೆ ಒಪ್ಸುವ ಜೆವಾಬ್ದಾರಿ ನಾವು ಮಾದೆಕ್ಕನ್ನೆ.ಎ೦ತ ನಿ೦ಗಳೆಲ್ಲರ ಅ೦ಬೋಣ? ಇದರ ಮು೦ದಾಣ ಕ೦ತು ಈವಾರ ಬಕ್ಕು.ಅದರ ಓದಿಕ್ಕಿನಿ೦ಗೊ ಸೃಜನಾತ್ಮಕ ಸಲಹೆ, ಸೂಚನೆಗಳ ರೂಪಲ್ಲಿ ಓಪ್ಪ ಕೊಟ್ಟರೆ ಎನ್ನ ಬರವಣಿಗೆಯ ತಿದ್ದಿ ಬೆಳಶ್ಯೊ೦ಬಲೆ- (ಪಾಪು ದಾ೦ಟಲೆ ಕಯ್ತಾ೦ಗು,(= ಕಯ್ಮರ) ಬಾವಿಗೆ ಪಾಮರಾದಿಗೊ ಇದ್ದಾ೦ಗೆ) ಹೆಚ್ಚು ಸಾಯ ಆವುತ್ತು. ಈರೀತಿಲಿ ನಿ೦ಗೊ ಮು೦ದೆ ಎನಗೆ ಸ೦ಗಾತ ಕೊಡುವಿ ಹೇಳುವ ನ೦ಬಿಕೆಲಿ ಪುನರಪಿ ಧನ್ಯವಾದ ಸಹಿತ ಸದ್ಯ ಸಣ್ಣ ಒ೦ದು ಬ್ರೇಕ್;ಮತ್ತೆ ಕಾ೦ಬೊ. ಆಗದೋ?

  6. ಚೆನ್ನೈ ಭಾವ°,ತೆಕ್ಕು೦ಜೆ ಮಾವ°,ಎಚ್.ಕೆ.ಗೋಪಾಲಣ್ಣ,ಮಾನೀರ್ ಮಾಣಿ,ಬೋಳು೦ಬು ಗೋಪಾಲಣ್ಣ, ಶರ್ಮಪ್ಪಚ್ಚಿ ಹಾ೦ಗೂ ರಾಜಣ್ಣ- ನಿ೦ಗೊ ಎಲ್ಲರೂ ಎನ್ನ ಲೇಖನವ ಓದಿ ಒಪ್ಪ ಕೊಟ್ಟದಕ್ಕೆ ನಿ೦ಗೊಗೆಲ್ಲ ಒಟ್ಟಿ೦ಗೆ ಹೃತ್ಪೂರ್ವಕ ಧನ್ಯವಾದ೦ಗೊ.ಇದು ನಮ್ಮ ಭಾಷೆಲಿ ಎನ್ನ ಅ೦ಬೆಗಾಲು.ಇಲ್ಲಿ ಆದಷ್ಟು ನಮ್ಮಭಾಷೆಯ ಪಳಮೆ-ನುಡಿಗಟ್ಟುಗಳ ಹಾಕಲೆ ಪ್ರಯತ್ನ ಮಾಡಿದ್ದೆ. ಅವು ನಮ್ಮ ಭಾಷೆಯ ಸೊಬಗಿನ ಸೊಗಡುಗೊ! ನಮ್ಮ ಹೆರಿಯರ ಬಳುವಳಿ ಸ೦ಪತ್ತು; ಪಿತ್ರಾರ್ಜಿತ ಆಸ್ತಿ ಇದ್ದಾ೦ಗೆ ಅಲ್ಲದೋ ಹೇ೦ಗೆ? ಇದರ ಉಳ್ಶಿ ಬೆಳ್ಶಿ ನಮ್ಮಮಕ್ಕೊಗೆ ಒಪ್ಸುವ ಜೆವಾಬ್ದಾರಿ ನಾವು ಮಾದೆಕ್ಕನ್ನೆ.ಎ೦ತ ನಿ೦ಗಳೆಲ್ಲರ ಅ೦ಬೋಣ? ಇದರ ಮು೦ದಾಣ ಕ೦ತು ಈವಾರ ಬಕ್ಕು.ಅದರ ಓದಿಕ್ಕಿನಿ೦ಗೊ ಸೃಜನಾತ್ಮಕ ಸಲಹೆ, ಸೂಚನೆಗಳ ರೂಪಲ್ಲಿ ಓಪ್ಪ ಕೊಟ್ಟರೆ ಎನ್ನ ಬರವಣಿಗೆಯ ತಿದ್ದಿ ಬೆಳಶ್ಯೊ೦ಬಲೆ- (ಪಾಪು ದಾ೦ಟಲೆ ಕಯ್ತಾ೦ಗು,(= ಕಯ್ಮರ) ಬಾವಿಗೆ ಪಾಮರಾದಿಗೊ ಇದ್ದಾ೦ಗೆ) ಹೆಚ್ಚು ಸಾಯ ಆವುತ್ತು. ಈರೀತಿಲಿ ನಿ೦ಗೊ ಮು೦ದೆ ಎನಗೆ ಸ೦ಗಾತ ಕೊಡುವಿ ಹೇಳುವ ನ೦ಬಿಕೆಲಿ ಪುನರಪಿ ಧನ್ಯವಾದ ಸಹಿತ ಸದ್ಯ ಸಣ್ಣ ಒ೦ದು ಬ್ರೇಕ್;ಮತ್ತೆ ಕಾ೦ಬೊ. ಆಗದೋ?

  7. ಅಪ್ಪಚ್ಚಿಯ ಈ ಲೇಖನ ಹುಟ್ಟಿ ಬೆಳೆತ್ತಾ ಇಪ್ಪದರ ಎಲ್ಲಾ ಹಂತಲ್ಲೂ ನೋಡ್ತಾ ಇತ್ತಿದ್ದೆ. ಅಪ್ಪಚ್ಚಿಯ ವಿಚಾರಧಾರೆ ಈ ರೀತಿ ಹರುದು ಬರಲಿ.
    ಈ ಪ್ರಾಯಲ್ಲಿ ಕಂಪ್ಯೂಟರ್ ಕಲ್ತು ಬೈಲಿಂಗೆ ಬಂದು ಬರವ ಅವರ ಪ್ರಯತ್ನಕ್ಕೆ ಖುಶಿ ಆವುತ್ತು.

  8. ಉಡುಪಮೂಲೆ ಅಪ್ಪಚ್ಚಿಗೆ ಸ್ವಾಗತ.
    ಲೇಖನಲ್ಲಿ ಹಲವಾರು ಪಳಮೆಗೊ ಸಿಕ್ಕಿತ್ತು. ಹವ್ಯಕ ಹಳೆ ಶಬ್ದಂಗೊ ಸಿಕ್ಕಿತ್ತು.
    ಕ್ರಿ. ಶ. ೪ನೇ ಶತಮಾನದ ನಮ್ಮ ಐತಿಹ್ಯ ಸಿಕ್ಕಿತ್ತು.
    ಪಟ್ಟಾಂಗ ಮುಂದುವರಿಯಲಿ, ನಿಂಗಳ ಅನುಭವದ ಲಾಭ ಎಂಗೊಗೆಲ್ಲರಿಂಗೂ ಸಿಕ್ಕಲಿ
    ಧನ್ಯವಾದಂಗೊ

  9. ಮರದು ಹೋವ್ತಾ ಇಪ್ಪ ಹಳೆ ಶಬ್ದಂಗಳ ಮತ್ತೆ ಮತ್ತೆ ಮೆಲುಕು ಹಾಕುವ ಹಾಂಗೆ ಮಾಡಿತ್ತು ಪಟ್ಟಾಂಗ. ಅಪ್ಪಚ್ಚಿಯ ಲಘು ಪ್ರಬಂಧಂಗೊ, ಕಥಗೊ ಬೈಲಿಂಗೆ ಹರುದು ಬರಳಿ.

  10. ಅಪ್ಪಚಿ “ಪ್ರಬಂಧ” ವಿಭಾಗಲ್ಲಿ ಬಹುಮಾನವ ಪಡದ್ದು ಕೇಳಿ ಖುಶಿ ಆತು.
    ಮೊದಲನೆಯದಾಗಿ ಅಭಿನ೦ದನೆ ತಿಳಿಸ್ತಾ ಇದ್ದೆ.
    ಎರಡೆನೆಯದಾಗಿ ಪಟ್ಟಾ೦ಗ ಹಾಕಿದ್ದಕ್ಕೆ ಧನ್ಯವಾದ ತಿಳಿಸ್ತಾ ಇದ್ದೆ.ಪಟ್ಟಾ೦ಗದ ಹೆಳೆಯಲ್ಲಿ ಇತಿಹಾಸದ ಪಾಯಸ ಸಿಹಿ ಸಿಹಿ ಆಯ್ದು. ಚುಬ್ಬಣ್ಣನ ಚೊಲೋ ಮಾಡಿ ಗಮನಿಸ್ಕಳಿ. ಅವ ನಿ೦ಗಳ ಮನೆಗೆ ಬತ್ತಾ ಇದ್ರೆ ಯೆ೦ಗೋಕೆ ಹಬ್ಬದೂಟಕ್ಕೆ ಮೋಸ ಇಲ್ಲೆ.

    ಮು೦ದಿನ ವಾರ ನಿ೦ಗಳ ಮನೆಯ ಜಗಲಿಯಲ್ಲಿ ಯಾರು ಚಾಪೆ ಹಾಸ್ತೋ ಹೇಳುವ ಪ್ರಶ್ನಾರ್ಥಕದ ಕುತೂಹಲದೊ೦ದಿಗೆ – ಮಾನೀರ್ ಮಾಣಿ..

  11. ಅಪ್ಪಚ್ಚಿಯ ಸ್ಟಾಕ್ ದೊಡ್ದದಿಕ್ಕು.ಹರಿದು ಬರಲಿ,ಬೈಲಿಂಗೆ….
    ಸ್ವಾಗತ…

  12. ಉಡುಪಮೂಲೆ ಅಪ್ಪಚ್ಚಿಯೊಟ್ಟಿಂಗೆ “ಪಟ್ಟಾಂಗ” ಲಾಯಕ್ಕಾತು. ಬೈಲಿಂಗೆ ಬಂದುಗೊಂಡಿರಿ ಅಪ್ಪಚ್ಚಿ.

  13. ಅಪ್ಪಚ್ಚಿಗೆ ಬೈಲಿಂಗೆ ಸ್ವಾಗತ. ಬಹುಮಾನ ಗಳಿಸಿದ್ದಕ್ಕೆ ಅಭಿನಂದನೆಗೊ.

    ಅಪ್ಪಚ್ಚಿ ಪಟ್ಟಾಂಗಕ್ಕೆ ಸುರುಮಾಡಿರೆ ಬೇಗ ನಿಲ್ಲುಸುತ್ತವಿಲ್ಲೆ!. ಒಳ್ಳೆದಾತು ನವಗೂ. ಲಾಯ್ಕಾಯ್ದು. ವಾರ ವಾರ ಬರ್ಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×