ಹೂಗು ಕಟ್ಟುವ ನಮುನೆಗೊ…

ಬೈಲಿಲಿ ಏವ ಮನೆಲೇ ಜೆಂಬ್ರ ಇದ್ದರೂ ಚೂರಿಬೈಲು ದೀಪನಲ್ಲಿಂದ ಘಮ ಘಮ ಮಲ್ಲಿಗೆ ಬಂದೇ ಬಕ್ಕು… ಪೇಟೆಗೊಬ್ಬರ ಎಲ್ಲ ಹಾಕದ್ದೆ ಲಾಯಿಕಲ್ಲಿ ಸಗಣ ನೀರು ಎಲ್ಲ ಹಾಕಿ ಬೆಳೆಶಿದ್ದು… ಹೆಮ್ಮಕ್ಕೊಗೆ ಮನೆ ಸುತ್ತ ಇಪ್ಪ ಹೂಗಿನ ಸೆಸಿಗಳೂ ಮಕ್ಕಳಾಂಗೇ ಇದಾ… ಮಕ್ಕಳಾಂಗೇ ಪೋಚಕಾನ ಮಾಡ್ತು ಅದರ… ಒಂದು ಸಣ್ಣ ಗೆಲ್ಲು ಮುರುದರುದೇ ನವಗೇ ಬೇನೆ ಆದಾಂಗೆ ಅಕ್ಕು.. ಅಲ್ಲದೋ… ಹೋದಲ್ಲಿ ಎಲ್ಲಿಯಾದರೂ ನಮ್ಮಲ್ಲಿ ಇಲ್ಲದ್ದ ಹೂಗಿನ ಸೆಸಿ ಕಂಡರೆ ಅದರದ್ದು ಒಂದು ಬುಡ ಮಾಡದ್ದೇ ಸಮಾದಾನ ಆಗ… ಓ ಹೇಳಿದಾಂಗೆ ಕಲುಮಡ್ಕ ಅಕ್ಕನತ್ತರೆ ನಾಮ ಗೆಂಟಿಗೆದು ಗೆಲ್ಲು ಕೇಳಿತ್ತಿದೆ.. ತಪ್ಪಲೆ ಮರದೇ ಹೋಯಿದದಾ…

ಹ್ಮ್.. ಅದಿರಳಿ… ನವಗೆ ಹೂಗಿನ ಸೆಸಿ ಮಾಡುದರಲ್ಲಿ ಆಸಗ್ತಿ ಇದ್ದಾಂಗೇ ಹೂಗು ಸೂಡ್ತದುದೇ ಬಾರೀ ಪ್ರೀತಿ ಅಲ್ಲದೋ… ಮೊದಲೆಲ್ಲ ಅಬ್ಬಲಿಗೆಯೋ ದಾಸನವೋ ಎಂತಾದರೂ ಒಂದು ಸೂಡದ್ದೆ ಇಲ್ಲೆ… ಈಗಾಣವಕ್ಕೆ ಅದೆಲ್ಲ ಆಗ.. ದಾಸನ ಸೂಡಿದರೆ ಮೈಕ್ಕ ಮಡಗಿದಾಂಗೆ ಕಾಣುತ್ತಡ.. ಉಮ್ಮ ಎಂತ ಕಲ್ಪನೆಯೋ ಈ ಪುಳ್ಯಕ್ಕಳದ್ದು…

ಈಗ ಈಗ ಗೆಂಟಿಗೆ ಸೂಡ್ತದುದೇ ಕಮ್ಮಿಯೇ… ಕಾಲಿ ಮಲ್ಲಿಗೆ ಮಾಂತ್ರ ಸೂಡುಗು.. ಅದುದೇ ಪರಿಮ್ಮಳ ಮಲ್ಲಿಗ ಆದರೆ ಅಕ್ಕು.. ಮುತ್ತು ಮಲ್ಲಿಗೆ, ಕಾಕಡ ಎಲ್ಲ ಆದರೆ ಮೋರೆ ಪೀಂಟುಸುಗು… ಸೇವಂತಿಗೆ ಸೂಡಿದರೆ ತಲೆಲಿ ತುಂಬ ಕಾಣ್ತಡ… ಹೂಗು ಸೂಡುಲೇಳಿ ಕಿಲಿಪ್ಪು ಕುತ್ತಿದರೆ ತಲೆ ಬೇನೆ ಆವುತ್ತಡ… ತಲೆಕಸವಿನ ಎಳೆ ತೆಗದು ಸೂಡುಲಾಗದೊ ಕೇಳಿದರೆ ತಲೆಬಾಚಿದ್ದದು ಹಾಳಾವುತ್ತಡ…. ಒಂದೊಂದು ಹೆಳೆಗೊ…
ಬ್ಯಾರ್ತಿಗಳ ಹಾಂಗೆ ಹೂಗು ಸೂಡದ್ದೆ ಬರೇ ತಲೆಲಿ ಹೋಪದೇ ಕುಶಿ ಕೆಲವು ಜನಕ್ಕೆ…

ಆಹಾ.. ಸೂಡದ್ದೆ ಇಪ್ಪಲೆ ಮನಸ್ಸು ಬಕ್ಕೊ ಇದರ....

ಹ್ಮ್.. ಎಲ್ಲೊರೂ ಹಾಂಗೇ ಅಲ್ಲ… ಹೂಗು ಸೂಡುದು ಕುಶಿ ಇಪ್ಪ ಕೂಸುಗಳೂ ಇದ್ದವು….
ಗುಲಾಬಿ ಎಲ್ಲ ಆದರೆ ಹಾಂಗೇ ಸೂಡುಲಕ್ಕು… ಮಲ್ಲಿಗೆ ಇತ್ಯಾದಿಗಳ ಕಟ್ಟೆಕ್ಕಿದಾ… ಈ ಹೂಗು ಕಟ್ಟುತ್ತದರಲ್ಲಿ ಸುಮಾರು ನಮುನೆಗೊ ಇದ್ದು…
ಅದರ ಎಲ್ಲ ಹೇಳುವೋಳಿ ಕಂಡತ್ತು… ಹಾಂಗೆ ರಜ್ಜ ಅಟ್ಟುಂಬೊಳಂದ ಹೆರ ಬಂದದು…

ಹೂಗು ಕಟ್ಟುಲೆ ಬಾಳೆಬಳ್ಳಿ ಇದ್ದರೆ ಭಾರೀ ಒಳ್ಳೆದು.. ಈಗ ಮತ್ತೆ ತೋಟಕ್ಕೆ ಇಳುದು ಬಾಳೆಬಳ್ಳಿ ಮಾಡಿ ತಪ್ಪಲೆ ಬಂಙ ಆವುತ್ತಿದಾ… ಹಾಂಗೆ ನೂಲಿಲೇ ಕಟ್ಟುದು ಆನು… ಆಚಮನೆ ವೆಂಕಟ ದನಕ್ಕೆ ಅದೆಂತದೋ ಫೀಡು ತಂದ ಗೋಣಿಲಿ ಬತ್ತ ನೂಲು ತಂದು ಕೊಡುತ್ತ.. ಅದು ಲಾಯಿಕಾವುತ್ತು ಹೂಗು ಕಟ್ಟಲೆ…

ಮಲ್ಲಿಗೆ ಮಾಲೆ (ಬಾಳೆಬಳ್ಳಿಲಿ ಕಟ್ಟಿದ್ದದು)

ಹ್ಮ್.. ಈಗ ಒಂದೊಂದೆ ಬಗೆಗಳ ನೋಡುವ ಅಲ್ಲದೋ…
ಇದರ ಹೀಂಗೆ ಬರದ್ದದರ ಓದಿ ಕಲಿವಲೆ ರೆಜ ಬಂಙ… ಕಟ್ಟುದರ ನೋಡಿ ಕಲಿವದೇ ಸುಲಾಬ…
ಈಗಾಣ ಕೂಸುಗೊಕ್ಕೆ ಹಾಂಗೆ ಕಲಿವಲೆಲ್ಲ ಪುರುಸೊತ್ತು ಎಲ್ಲಿದ್ದು ಬೇಕೆ… ಓ ಆ ಪೇಟೆಕರೆಲಿ ಬಾಯಮ್ಮ ಕಟ್ಟಿ ಮಡುಗಿದ್ದರ ಪೈಸೆ ಕೊಟ್ಟು ತೆಕ್ಕೊಂಡು ಸೂಡುತ್ತವತ್ಲಾಗಿ…
ಹೂಗು ಕಟ್ಟಿಗೊಂಡು ಕೂಪ ತಾಳ್ಮೆಯೂ ಇಲ್ಲೆ….

ಮಲ್ಲಿಗೆ ಕೊಯಿದು ಮಡುಗಿದ್ದದು..

ಅದಿರಳಿ… ಹೂಗಿನ ಕೈಲಿಯೂ ಕಟ್ಟಿಲಕ್ಕು, ಕಾಲಿಲಿಯೂ ಕಟ್ಟುಲಕ್ಕು…. ಕಾಲಿಲಿ ಕಟ್ಟುತ್ತದರಲ್ಲಿ ಎರಡು ನಮುನೆ ಇದ್ದು…
ಒಂದನೇದು, ಒಂದೇ ಬಳ್ಳಿಯ ಹಿಡ್ಕೊಂಡು ಕಟ್ಟುತ್ತದು..
ಎರಡ್ನೇದು, ಎರಡು ಬಳ್ಳಿ ಹಿಡ್ಕೊಂಡು ಕಟ್ಟುತ್ತದು…

ಮೊದಾಲಿಂಗೆ ಬಳ್ಳಿಯ ಒಂದು ಕೊಡಿಯ ಕಾಲಿನ ಹೆಬ್ಬೆರಳಿಂಗೆ ಸುಂದಿಗೊಳೆಕ್ಕು… ಬಳ್ಳಿಯ ಅರ್ದಂದ ಮತ್ತೆ ಹೂಗಿನ ಮಡುಗಿ, ಈಚ ಕೊಡಿಯ ಆಚೊಡೆಂಗೆ ಮಾಡಿ ಎಳದು ಗೆಂಟಾಕೆಕ್ಕು ಹೂಗನ್ನೂ ಸೇರುಸಿಗೊಂಡು… ಹೀಂಗೆ ಮಾಡಿಗೊಂಡು ಹೋಪದು… ಗೆಂಟಾಕುವಾಗ ಗಟ್ಟಿಗೆ ಹಾಕೆಕ್ಕು. ಇಲ್ಲದ್ದರೆ ಹೂಗು ಉದುರುಗು… ಹೀಂಗೆ ಕಟ್ಟಿದ್ದದು ಹತ್ತರತ್ತರೆ ಆವುತ್ತು… ಚೆಂದ ಕಾಣುತ್ತು ಮಾಂತ್ರ…
ಎರಡು ಬಳ್ಳಿ ತೆಕ್ಕೊಂಡು ಕಟ್ಟುತ್ತದುದೇ ಹೀಂಗೆಯೇ. ಆದರೆ ಅದಕ್ಕಪ್ಪಾಗ ಕಾಲಿಂಗೆ ಸುಂದಿಗೊಂಡ ಬಳ್ಳಿಯ ಈಚ ಕೊಡಿ ಸೀರೆಗೆ ಸುಂದಿಗೊಂಬದು.. ಹೂಗಿಂಗೆ ಗೆಂಟಾಕಲೆ ಇನ್ನೊಂದು ಬಳ್ಳಿಯ ತೆಕ್ಕೊಂಬದು….
ಬಳ್ಳಿಯ ಎರಡು ಎಳೆ ಬಪ್ಪಾಂಗೆ ಕಾಲಿಲಿ ಹಿಡ್ಕೊಂಡು, ಹೂಗಿನ ಅದರ ನಡೂಕೆ ಮಡಗಿ ಗೆಂಟಾಕಿಗೊಂಡು ಬಪ್ಪಲೂ ಅಕ್ಕು.. ಅದು ಇನ್ನೊಂದು ನಮುನೆ ಆವುತ್ತು….

ಕಾಲಿಲಿ ಕಟ್ಟುತ್ತದು

ಕಾಲಿಲಿ ಕಟ್ಟುತ್ತದು

ಹೀಂಗೆ ಗೆಂಟಾಕುತ್ತದು

ಕೈಲಿ ಕಟ್ಟುತ್ತದು ಸಾಮಾನ್ಯ ಎಲ್ಲೊರಿಂಗೂ ಗೊಂತಿದ್ದನ್ನೇ….
ಸುರು ಸುರೂವಿಂಗೆ ಕಟ್ಟುವಾಗ ಹೂಗಿನ ತೊಟ್ಟು ತುಂಡಪ್ಪದು, ಕಟ್ಟಿದ್ದು ದೂರ ದೂರ ಅಪ್ಪದು ಎಲ್ಲ ಆವುತ್ತು… ರಜ ಅಬ್ಬೆಸ ಅಪ್ಪಲ್ಲಿಯೊರೆಗೆ ಮಾಂತ್ರ… ಮತ್ತೆ ಸರೀ ಆವುತ್ತು….
ಕೈಲಿ ಕಟ್ಟುವಾಗ ನಾವು ಒಂದೊಂದು ಹೂಗಿಂಗೆ ಗೆಂಟು ಹಾಕಿಗೊಂಡು ಬಪ್ಪದಲ್ಲದೋ… ಹಾಂಗೆ ಮಾಡುವ ಬದಲು ಹಿಂದಾಣ ಹೂಗನ್ನೂ ಸೇರುಸಿ ಎರಡೆರಡು ಹೂಗಿಂಗೆ ಗೆಂಟು ಹಾಕಿಗೊಂಡು ಬಂದರೆ ಅದು ಚೆಂದಕೆ ಜೆಡೆ ನೈದ ಹಾಂಗೆ ಕಾಣುತ್ತು… ಬಾರೀ ಚೆಂದ ಆವುತ್ತು ಅದು… ಬಾಳೆಗುಂಡಿ ಅಕ್ಕ ಹೀಂಗೇ ಕಟ್ಟುತ್ತದು…
ಒಂದು ಎಂತರ ಹೇಳಿದರೆ… ಹೀಂಗೆ ಕಟ್ಟಿದ ಮಾಲೆಯ ನಡುಕೆ ತುಂಡುಸುಲೆ ಎಡಿತ್ತಿಲ್ಲೆ… ಬೇಕೂಳಿ ಆದರೆ ತುಂಡು ತುಂಡು ಮಾಲೆಯೇ ಕಟ್ಟೆಕ್ಕು…

ನೈದ ಮಾಲೆ(ಮೇಲಾಣೊಡೆ)

ನೈದ ಮಾಲೆ(ಅಡಿಯಾಣೊಡೆ)

ಸೇವಂತಿಗೆ ಮಾಲೆದೇ ಹೀಂಗೆ ಕೈಲಿ ಕಟ್ಟಿ ಮಾಡುಲಾವುತ್ತು ಗೊಂತಿದ್ದನ್ನೇ… ಪೇಟೆಲಿ ಸಿಕ್ಕುತ್ತ ಮಾಲೆಗಳ ನೋಡೆಕ್ಕು… ದೂರ ದೂರ ಕಟ್ಟಿರ್ತವು.. ಅವಕ್ಕೆಂತ ಪೈಸೆ ಆದರಾತನ್ನೆ….

ಸೇವಂತಿಗೆ (ಕೈಲಿ ಕಟ್ಟಿದ್ದದು)

ಹ್ಮ್… ಸೇವಂತಿಗೆ ಚಟ್ಟೆ ಮಾಲೆ ಬಾರೀ ಚೆಂದ… ಈಗ ಅದರ ಮಾಡುವೋರೇ ಇಲ್ಲೆ…
ಹೂಗು ರಜ್ಜ ಹಾಳಾಗಿದ್ದರುದೇ ಚಟ್ಟೆ ಮಾಲೆ ಮಾಡಿರೆ ಚೆಂದ ಕಾಂಗು… ಅದರ ಕಟ್ಟುಲೆ, ಹೂಗಿನ ತೊಟ್ಟು ತೆಗೆಯೆಕ್ಕು ಮೊದಾಲು…
ಇದು ಕಾಲಿಲಿ ಕಟ್ಟುತ್ತ ಕ್ರಮ… ಬಳ್ಳಿಯ ಒಂದು ಕೊಡಿಯ ಹೆಬ್ಬೆರಳಿಂಗೆ ಸುತ್ತು ತಂದು ಎರಡು ಎಳೆ ಬಪ್ಪಾಂಗೆ ಮಾಡಿ, ಒಂದಿಷ್ಟು ಉದ್ದ ಬಿಟ್ಟು ಗೆಂಟಾಕೆಕ್ಕು… ಒಂದೇ ಬಳ್ಳಿಲಿ ಮಾಡುಲೂ ಅಕ್ಕು, ಒಂದು ಬಳ್ಳಿಯ ಸೀರೆಗೆ ಗೆಂಟಾಕಿಗೊಂಡು ಹೂಗಿಂಗೆ ಗೆಂಟಾಕಲೆ ಇನ್ನೊಂದು ಬಳ್ಳಿಯ ತೆಕ್ಕೊಂಡು ಕಟ್ಟುಲೂ ಅಕ್ಕು…
ಬಳ್ಳಿ ತಯಾರಾದ ಮತ್ತೆ… ಹೂಗಿನ ಅಡಿಯಾಣ ಹೊಡೆಲಿ ಮೇಗೆ ಇಪ್ಪ ಎಸಳುಗಳ ಎಡಕ್ಕಂಗೆ ಬಳ್ಳಿಯ ಆಚೀಚೊಡೆಯ ಎರಡು ಎಳೆಗಳ ಮೆಲ್ಲಂಗೆ ಸೇರುಸಿ, ಗೆಂಟಾಕುತ್ತ ಬಳ್ಳಿಯ ಆ ಹೂಗಿನ ಮೇಗಂದ ತೆಕ್ಕೊಂಡೋಗಿ, ಎಳೆಗಳ ನಡುಕಂದ ತಂದು ಮೆಲ್ಲಂಗೆ ಗಟ್ಟಿಗೆ ಗೆಂಟಾಕೆಕ್ಕು… ಹೀಂಗೆ ಒಂದೊಂದು ಹೂಗಿನ ಹತ್ತರತ್ತರೆ ಮಡಿಕ್ಕೊಂಡು ಗೆಂಟಾಕಿಗೋಂಡು ಬಪ್ಪದು… ಗಟ್ಟಿಗೆ ಕಟ್ಟೆಕ್ಕು.. ಇಲ್ಲದ್ದರೆ ಪೂರ ಉದುರುಗು… ಎಲ್ಲ ಕಟ್ಟಿ ಆದ ಮತ್ತೆ ಅಕೇರಿಗೆ ಎರಡು ಎಳೆಯನ್ನೂ ಸೇರುಸಿ ಒಂದು ಗೆಂಟಾಕಿರೆ ಆತು…. ಚೆಂದದ ಚಟ್ಟೆಮಾಲೆ ತೆಯಾರಾತು….
ಕೆಲವು ಜೆನ ಗುಲಾಬಿಯನ್ನುದೇ ಹೀಂಗೆ ಕಟ್ಟುತ್ತವು…. ಅದುದೇ ಚೆಂದ ಕಾಣುತ್ತು….

ಚಟ್ಟೆಮಾಲೆ (ಮೇಲಾಣೊಡೆ)

ಚಟ್ಟೆಮಾಲೆ (ಅಡಿಯಾಣೊಡೆ)

ಇದೆಲ್ಲ ಬಳ್ಳಿ ಇದ್ದೊಂಡು ಹೂಗು ಕಟ್ಟುತ್ತ ಕ್ರಮ ಆತನ್ನೆ…
ಬಳ್ಳಿ ಇಲ್ಲದ್ದೆದೇ ಕಟ್ಟುಲಾವುತ್ತು…
ಕಿಸ್ಕಾರ ಹೂಗಿನ ತೊಟ್ಟನ್ನೇ ಸಣ್ಣಕ್ಕೆ ಸೀಳಿ, ಇನ್ನೊಂದು ಹೂಗಿನ ಅದರೊಳಂಗೆ ಸುರುದು, ಪುನಾ ಅದರ ತೊಟ್ಟಿನ ಸೀಳಿ, ಇನ್ನೊಂದು ಹೂಗಿನ ಅದಕ್ಕೆ ಸುರುದು… ಹೀಂಗೆ ಸುರುದು ಮಾಲೆ ಮಾಡುಲಾವುತ್ತು…. ಇದುದೇ ನೋಡುಲೆ ಬಾರೀ ಚೆಂದ… ಇದು ಸೂಡುಲಲ್ಲ… ದೇವರ ಪಟಕ್ಕೆ ಮಡುಗಲೆ… ತೊಳಶಿ ಪೂಜಗೆ ತೊಳಶಿಗೆ ಹಾಕಲೆ ಎಲ್ಲ ಚೆಂದ…

ಕಿಸ್ಕಾರ ಮಾಲೆ

ಕಿಸ್ಕಾರ ಮಾಲೆ

ಇನ್ನು ಗೆಂಟಿಗೆಯ ತೊಟ್ಟಿನ ನೈದು ಮಾಲೆ ಮಾಡುಲಾವುತ್ತು….. ಗೆಂಟಿಗೆಯ ತೊಟ್ಟು ಉದ್ದ ಇದಾ… ಹಾಂಗೆ… ಬೇರೆ ಹೂಗಿಂದೆಲ್ಲ ಹೀಂಗೆ ನೈದು ಮಾಲೆ ಮಾಡುಲೆ ಬಂಙ…

ಸುರೂವಿಂಗೆ ಎರಡು ಗೆಂಟಿಗೆಯ ಗುಣಿಸು ಗುರ್ತಲ್ಲಿ ಹಿಡುಕ್ಕೊಂಡು ಬಲದೊಡೇಣದ್ದರ ತೊಟ್ಟಿನ ಎಡದೊಡೇಣದ್ದಕ್ಕೆ ಒಂದು ಸುತ್ತು ಹಾಕೆಕ್ಕು… ಮತ್ತೆ ಅದರ ನಡುಕೆ ಇನ್ನೊಂದು ಹೂಗು ಮಡಗಿ, ಬಲದೊಡೇಣದ್ದರ ತೊಟ್ಟಿನ ಮೊದಲೇ ಇದ್ದ ಹೂಗಿನ ತೊಟ್ಟಿಂಗಾಗಿ, ಹೊಸ ಹೂಗಿನ ತೊಟ್ಟಿಂಗೂ ಸುತ್ತಿ ಗಟ್ಟಿ ಎಳೆಯೆಕ್ಕು… ಇನ್ನು ಪುನಾ ಇತ್ಲಾಗಿ ಇಪ್ಪ ಎರಡು ಹೂಗುಗಳ ತೊಟ್ಟುಗಳ ನಡುಕೆ ಇನ್ನೊಂದು ಹೂಗು ಮಡಗಿ ಮೊದಲಾಣ ಹಾಂಗೆಯೇ ನೈಕ್ಕೋಂಡು ಬರೆಕ್ಕು…
ತೊಟ್ಟುಗಳ ಆದಷ್ಟು ಉದ್ದ ಮಡಿಕ್ಕೊಳೆಕ್ಕು ಆತೊ.. ಇಲ್ಲದ್ದರೆ ನೈವಲೆ ಸಾಕಾವುತ್ತಿಲ್ಲೆ….
ಎಲ್ಲ ಆದ ಮತ್ತೆ ಅಕೇರಿಗೆ ತೊಟ್ಟಿಂದೇ ಗೆಂಟು ಹಾಕುಲಕ್ಕು… ಬಂಙ ಆವುತ್ತರೆ ಒಂದು ಬಳ್ಳಿಲಿ ಗೆಂಟಾಕಿತ್ತು…

ಗೆಂಟಿಗೆ ನೈದ್ದದು...

ಮತ್ತೆ, ಈ ದುಂಡು ಮಲ್ಲಿಗೆದು ತೊಟ್ಟು ಬರೇ ಸಣ್ಣ ಅಲ್ಲದೋ… ಅದರ ಕಟ್ಟುಲೆ ಬಂಙ… ಹಾಂಗೆ ಅದರ ಸೂಜಿ ನೂಲಿಲಿ ಸುರುದರೆ ಚೆಂದ ಆವುತ್ತು… ಉರುಟುರುಟು ಮಾಲೆ…. ಬಾರೀ ಚೆಂದ ಕಾಣುತ್ತು…..

ಹ್ಮ್… ಹೀಂಗೆ ಹೂಗು ಕಟ್ಟುತ್ತದರಲ್ಲಿ ನಮುನೆ ನಮುನೆ ಇದ್ದದಾ… ಬೇರೆ ಬೇರೆ ರೀತಿಲಿ ಕಟ್ಟುದೇ ಒಂದು ಕುಶಿ.. ಅದರ ಸೂಡ್ತದು ಮತ್ತೂ ಕುಶಿ….

ಕಳುದ ವರುಷ ಅಲ್ಲ ಆಚ ವರುಷ ಕೊಡೆಯಾಲದ ಸಂಗನಿಕೇತನಲ್ಲಿ ಹೂಗು ಕಟ್ಟುತ್ತ ಸ್ಪರ್ದೆ ಮಾಡಿತ್ತಿದ್ದವು.. ದೊಡ್ಡ ಪುಳ್ಳಿ ಹೋಗಿತ್ತಿದ್ದು….
ಅದುವೇ ಸುರು, ಅದುವೇ ಅಕೇರಿ… ಮತ್ತೆ ಮಾಡಿದ್ದವೇ ಇಲ್ಲೆ ಆ ಸ್ಪರ್ದೆಯ… ಎಂತಕೆ ಹೇಳಿದರೆ ಸ್ಪರ್ದೆಗೆ ಬಪ್ಪ ಜೆನಸಂಕೆ ಹತ್ತರಿಂದಲೂ ಕಮ್ಮಿ ಹೇಳಿ!
ಚೆ, ಹೀಂಗಪ್ಪಲಕ್ಕೋ….?

ಪುಳ್ಳಿ ಕಟ್ಟಿದ ಮಾಲೆ (ಮಲ್ಲಿಗೆ ಸಿಕ್ಕದ್ದದಕ್ಕೆ ಕೇಪುಳವನ್ನೇ ಕಟ್ಟಿದ್ದದು)

ಬಂಡಾಡಿ ಅಜ್ಜಿ

   

You may also like...

42 Responses

 1. ರಘುಮುಳಿಯ says:

  ಅಜ್ಜೀ,ಹೂಗು ಕಟ್ಟೊದರ್ಲಿಯೂ ಮುಂದೆ ನಿಂಗೋ, ಮಜ್ಜಿಗೆ ಕಡವ ಹಾಂಗೆ !! ಯಬ್ಬ.ಮಲ್ಲಿಗೆ ಒಳ್ಳೆ ಪಮ್ಮ ಬಂತದಾ.
  ನಿಂಗಳ ಪುಳ್ಳಿ ಕಟ್ಟಿದ ಮಾಲೆ ದೀಪಾವಳಿ ಮಾಲೆ ಪಟಾಕಿಂದ ಲಾಯಿಕ ಇದ್ದು. ಅಂಬ್ರೆಪಿಲಿ ಕೊಂಡು ಹೋದರೆ ಗೊಂತೆ ಆಗ,ಕಿಚ್ಚು ಕೊಡುವನ್ನಾರ. ಎನ್ನಂದ ಈ ನಾಜೂಕು ಕೆಲಸ ಎಡಿಯದೋ ಹೇಳಿ.ನೂಲಿಲಿ ಕಟ್ಟುಲೆಡಿಯದ್ದರೆ ಪಿರಿ ಬಳ್ಳಿಯೋ,ಬಕ್ಕಿನ ಬಳ್ಳಿಯೋ ತಂದು ಪ್ರಯತ್ನ ಮಾಡೊದೋ ಹೇಳಿ ಇದ್ದೆ,ಆಗದೋ.

  • ಶ್ರೀದೇವಿ ವಿಶ್ವನಾಥ್ says:

   ಓ! ಇನ್ನು ರಘು ಭಾವಂದು ಭಾಮಿನಿಯ ಪದಂಗಳ ಒಟ್ಟಿನ್ಗೆ ಹೂಗಿನ ಮಾಲೆ ಕಟ್ಟುತ್ತ ಏರ್ಪಾಡೋ ಎಂತ? ಹೊಸ ನಮುನೆದು ಏನಾರು? 😉

   • ರಘುಮುಳಿಯ says:

    ಡಾ.ಮಹೇಶಣ್ಣ ಹೇಳಿದ ಕವಿತಾ ಭಾಮಿನಿಗೆ ಹೂಗು ಸೂಡ್ಸಿರೆ ಎಂತ ಹೇಳಿ ಆಲೋಚನೆ ಆತದಾ..

  • ಬೋಸ... says:

   ಅದ ರಘು ಬಾವ ಹೇಲಿದಾ೦ಗೆ ಅಯಿದು ಮೊನ್ನೆ. 🙂 ದೀಪಾವಳಿ ಅ೦ದು ಕರೇ೦ಟು ಇಲ್ಲೇ ಇದ… 🙁
   ಆನು ನೆಲ ಚಕ್ರಾ ಹೇಲಿ ಉಗ್ರಾಣಲ್ಲಿದ್ದ ಚಕ್ಕುಲಿಯ ತ೦ದು ಕಿಚ್ಚು ಕೊಟಿದೆ… 😛 ಏನುಮಾದಿರು ಹೊತ್ತ..!
   ಮತ್ತೆ ಬೆಣುಚಿಲ್ಲಿ ನೊಡಿಯಪ್ಪ ಗೊ೦ತಾತು ಇದು ಬದಲಿತ್ತು ಹೇಳಿ… 😀

   • ಶ್ರೀಶಣ್ಣ says:

    [ನೆಲ ಚಕ್ರಾ ಹೇಲಿ ಉಗ್ರಾಣಲ್ಲಿದ್ದ ಚಕ್ಕುಲಿಯ ತ೦ದು ಕಿಚ್ಚು ಕೊಟಿದೆ]
    ಮಳೆ ನಿಂದಿದಿಲ್ಲೆ ಅಲ್ಲದಾ? ಸರಿ ನೋಡಿದ್ದೆ ಅನ್ನೆ. ಚಕ್ಕುಲಿಯ ಹಾಂಗೆ ಇಪದು ಬೇರೆ ಎಂತೋ ಅಲ್ಲನ್ನೆ.

    • ಬೋಸ... says:

     ಮಳೆಗು ಚಕ್ಕುಲಿಗು ಎ೦ತ ಸಂಭಂದ ?? ಚಕ್ಕುಲಿಯ ಹಾ೦ಗೆ ಬೇರೆ ಎ೦ತರಪ್ಪಾ?? 🙁

     • ರಘುಮುಳಿಯ says:

      (ಮಳೆಗು ಚಕ್ಕುಲಿಗು ಎ೦ತ ಸಂಭಂದ )
      ಮಳೆ ಬಂದುಗೊಂಡಿಪ್ಪಗ ಚಾವಡಿಯ ಕರೆಲಿ ಕೂದು ಚಕ್ಕುಲಿ ತಿಂದು ನೋಡು ,ನಿನ್ನ ಹಲ್ಲಿಲ್ಲದ್ದ ಬಾಯಿಲಿ,ಆವಗ ಗೊಂತಾವುತ್ತು.
      ಇನ್ನು,ಶ್ರೀಶಣ್ಣ ಹೇಳಿದ ಚಕ್ಕುಲಿ ಅಲ್ಲಾ !!

   • ಬಂಡಾಡಿ ಅಜ್ಜಿ says:

    ಬೋಸೊ.. ನಿನ್ನ ಬಾಯಿಪಟಾಕಿಯೇ ಸಾಕು, ಇನ್ನು ಬೇರೆ ಪಟಾಕಿ ಬೇಡ ಹೇಳಿ ಹಾಂಗೆ ಆದ್ದದು…

  • ಬಂಡಾಡಿ ಅಜ್ಜಿ says:

   ಇಷ್ಟು ಸಣ್ಣ ಹೂಗಿಂಗೆ ಪಿರಿಬಳ್ಳಿ, ಬಕ್ಕಿನ ಬಳ್ಳಿಯೋ…. ಶಿವನೇ… ಅರಡಿಯಪ್ಪಾ ಈ ಪುಳ್ಯಕ್ಕಳತ್ತರೆ…
   ಹೇಳಿದಾಂಗೆ ಪಿರಿಬಳ್ಳಿ ಇದ್ದರೆ ತೆಕ್ಕಂಡು ಬಾ ಆತೊ… ಬಾವಿಯ ಬಳ್ಳಿ ಕಡುದತ್ತು ನಿನ್ನೆ… ಈಗ ಅಲ್ಲಿಗೇ ಗೆಂಟಾಕಿ ಮಡಗಿದ್ದು…
   ಬಕ್ಕಿನ ಬಳ್ಳಿ ಅಡಕ್ಕೆ ಗೋಣಿಗೆ ಬಾಯಿಕಟ್ಟುಲಕ್ಕಷ್ಟೆ…
   ನೀನು ಹೂಗು ಕಟ್ಟುತ್ತದು ಬೇಡಪ್ಪ… ಲಾಯಿಕ ಪದಕಟ್ಟಿ ಹೇಳಿಗೊಂಡಿರು ಬೈಲಿಂಗೆ… ಆತೊ..

   • ರಘುಮುಳಿಯ says:

    ಆತಜ್ಜಿ,ನಿಂಗಳ ಆಶೀರ್ವಾದ.
    ಪಿರಿ,ಬಕ್ಕು ಸಾಕಾಗದ್ದರೆ ಗೋಣನ ಕಟ್ಟುವ ಬಳ್ಳಿ ತರೆಕ್ಕೋ ಹೇಳಿ ಗ್ರೇಶಿಗೊಂಡು ಇತ್ತಿದ್ದೆ. ಅದರ್ಲಿ ಬೋಸನ ಕಟ್ಟೊದು ಇನ್ನು,ಆಗದೋ,ಲೂಟಿ ತಡವಲೆಡಿಯ.

 2. [ಹೂಗಿನ ಕೈಲಿಯೂ ಕಟ್ಟಿಲಕ್ಕು, ಕಾಲಿಲಿಯೂ ಕಟ್ಟುಲಕ್ಕು]

  ಅದು ಹೇಂಗಜ್ಜೀ>>>>???? ಎನ್ನಮ್ಮ ಬಳ್ಳಿಲಯೇ ಕಟ್ಟುತ್ತದು! ನಿಂಗ ಬಿಡೆಯಿ, ಭಯಂಕರಪ್ಪಾ!! 🙂 😉

  • ಶ್ರೀಶ says:

   ನೀನು ಸಣ್ಣ ಇಪ್ಪಗ ನಿನ್ನ ಅಜ್ಜಿ ಬಳ್ಳಿಲಿ ಹೂಗನ್ನೂ ಕಟ್ಟಿಕ್ಕು , ನಿನ್ನನ್ನೂ ಕಟ್ಟಿಕ್ಕು, ಅಲ್ಲದಾ ಬಲ್ನಾಡು ಮಾಣಿ?

   • ಹೂಗು ಕಟ್ಯೊಂಡಿತ್ತು, ಎನ್ನ ಕಟ್ಟಿದ ನೆನಪ್ಪಿಲ್ಲೆ 🙂 ನೀನು ನಿನ್ನ ಅಜ್ಜಿ ನಿನ್ನ ಕಟ್ಟಿದ ನೆನಪ್ಪಿಲಿ ಹೇಳಿದ್ದೋ ಹೆಂಗೆ?? 😉

    • ಶ್ರೀಶಣ್ಣ says:

     [ಎನ್ನ ಕಟ್ಟಿದ ನೆನಪ್ಪಿಲ್ಲೆ]

     [ಎನ್ನ ಕಟ್ಟಿದ ನೆನಪ್ಪಿಲ್ಲೆ]- ನೆನಪು ಮಾಡ್ಸಿದ್ದು
     ಕೇಳ್ಲೆ ಎನ್ನ ಅಜ್ಜಿ ಇಲ್ಲೆ ನಿನ್ನ ಅಜ್ಜಿ?

  • ಬಂಡಾಡಿ ಅಜ್ಜಿ says:

   ನೀನೆಂತರ ಆದರುಶೊ.. ನೆಗೆಮಾಣಿಯ ಹಾಂಗೆ ಮಾತಾಡ್ತದು… ಓದುತ್ತರೆ ಪೂರ ಓದು… ಅರ್ದಂಬರ್ದ ಓದಿಗೊಂಡು ಏನಾರು ಹೇಳ್ತದಲ್ಲ….
   ಈ ಗೆರೆ ಕಂಡಿದಿಲ್ಲೆಯೊ ಅಂಬಾಗ…
   [ಹೂಗು ಕಟ್ಟುಲೆ ಬಾಳೆಬಳ್ಳಿ ಇದ್ದರೆ ಭಾರೀ ಒಳ್ಳೆದು]

   • ಓ ಅಪ್ಪಲ್ಲದೋ! 🙂 ಎನಗೆ ಕಂಡಿದಿಲ್ಲೆ ಇದಾ 🙂 ಏ ಅಜ್ಜೀ, ಆದರುದೆ ಅಷ್ಟು ಸಣ್ಣ ಹೂಗಿನ ಅಷ್ಟು ದೊಡ್ಡ ಕಾಲಿಲಿ ಕಟ್ಟುತ್ತದು ಹೇಂಗೆ ಹೇಳಿ!!!!!

   • ಹೇಳಿದಾಂಗೆ ಅಜ್ಜೀ! ಆನು ಮೊದಲು ಎಲ್ಲ ಸರೀ ಓದಿಗೊಂಡಿತ್ತಿದ್ದೆ.. ಈ ನೆಗೆಮಾಣಿಯ ಸಹವಾಸ ಆದ ಮತ್ತೆ ಹಿಂಗೆಲ್ಲ ಅಪ್ಪಲೆ ಸುರು ಆದ್ದದು! 😉

   • {ನೀನೆಂತರ ಆದರುಶೊ}
    ಈ ಜೆನ ರಜಾ ದುರುಸೆ ಕಾಣ್ತು

    • ಆನು ದುರುಸು ನೀನು ಪಟಾಕಿ 🙂 ದೀಪಾವಳಿ ಗಮ್ಮತಕ್ಕು! 🙂 ನೆಲೆಚಕ್ರಕ್ಕೆ ಬೋಸಬಾವ ಇದ್ದ° !!

     • ಬೋಸ... says:

      ಏ ಮಾಣಿ, ಹೀ೦ಗೆ ನೀನು ಬಿ೦ಗಿ ಮಾಡಿರೆ, ಮಾಲೆ ಪಟಾಕಿ ನಿನ್ನ ಹಿ೦ದ೦ಗೆ ಕಟ್ಟಿ ಹೋಟ್ಸುವೆ… ಹಾ… 😀 😛

     • ಶ್ರೀಶಣ್ಣ says:

      ಇದಾ… ನಿನ್ನ ತಲೆಗೆ ಕೇನೆ ಹೂಗು ಕಟ್ಟಲೆ ತಯಾರು ಮಾಡಿಂಡು ಇದವು.
      ಜಾಗ್ರತೆ

     • ಬೋಸಭಾವನ ತಲೆಯ ಪರಿಮಳಕ್ಕೆ ಕೇನೆ ಹೋಗಿಂಗೆ ತಲೆತಿರುಗುಗೋ ಹೇಳಿ ಸಂಶಯ ಎನಗೆ.. ಅವ° ಮಸಿ ತೊಳದ ನೀರಿಸಿ ಮೀತ್ಸು.. 🙂 ಅವನೇ ಹೇಳಿದ್ದು ಮೊನ್ನೆ 😉

 3. ಶ್ರೀದೇವಿ ವಿಶ್ವನಾಥ್ says:

  ಅಜ್ಜೀ, ಶುದ್ದಿ ಹೂಗಿನ ಮಾಲೆ ಕಟ್ಟಿದ ಹಾಂಗೆ ಶೋಕಾಯಿದು.
  ನಿಂಗಳ ಹಾಂಗಿದ್ದ ಅಜ್ಜಿಯಕ್ಕ ಇಪ್ಪಗ ಪುಳ್ಯಕ್ಕ ಪ್ರೈಸು ತಾರದ್ದೆ ಇಕ್ಕೋ? ತಪ್ಪಲೆ ಬೇಕನ್ನೇ…
  ಎಂಗೊಗುದೆ ಬೇರೆ ಬೇರೆ ಮಾಲೆ ಮಾಡ್ತ ವಿವರ ಕೊಟ್ಟದು ಒಳ್ಳೇದಾತು. ಕಲ್ತುಗೊಂಬಲೆ ಆತು. ಧನ್ಯವಾದಂಗ.
  ಚೂರಿಬೈಲು ದೀಪಕ್ಕ ಎಲ್ಲದರಲ್ಲಿಯೂ ಉಷಾರಿ ಅಲ್ಲದಾ? ಪ್ರತಿಯೊಂದನ್ನೂ ಕಾಳಜಿಲಿ ಮಾಡ್ತವಡ್ಡ.
  ಅದರಲ್ಲಿಯೂ ಹೂಗು ದೀಪಕ್ಕಂಗೆ ಪ್ರೀತಿ ಅಲ್ಲದೋ? ಹೂಗಿನ ಗೆಡುದೇ ಅಷ್ಟೇ ಪ್ರೀತಿಲಿ ಹೂಗು ಕೊಡ್ತಡ್ಡ ಅಲ್ಲಿ ಶಾಂತತ್ತೆ ಹೇಳಿಗೊಂಡಿತ್ತಿದ್ದವು.

  • ಬಂಡಾಡಿ ಅಜ್ಜಿ says:

   ಅಪ್ಪು ದೇವೀ… ಮೊದಲಿಂಗೆ ಎನಗುದೇ ಶಾಂತಕ್ಕ ಹೇಳಿಯೇ ಗೊಂತು… ಮತ್ತೆ ಅನುಬವಕ್ಕುದೇ ಬಂತಿದಾ…

 4. vaishali bedrady says:

  Bandadi ajji..great!!! kaalili hoogu katle gontippadu ajjiyakkoge mantra agikku heli grahisidde.eegana peeligeyavakke hoogu kattle gonte irtille.. peteli paise kotre tegevale sikkuttada.hangagi.. ee hoogu kattudara bagge tilisidakke ningoge tumba dhanyavango ajji…

  • ಬಂಡಾಡಿ ಅಜ್ಜಿ says:

   ಒಳ್ಳೆದು ಒಯಿಶಾಲೀ… ಎಲ್ಲೊರೂ ಕಲ್ತುಗೊಳ್ಳಲಿ ಹೇಳಿಯೇ ಬರದ್ದದು… ಮೊದಲಿಂಗೆ ಓದಿ ಕಲ್ತುಗೊಂಬಲೆ ಬಂಙವೇ.. ಬಂಡಾಡಿ ಹೊಡೇಂಗೆ ಬಂದರೆ ಕಲಿಶಿಯೂ ಕೊಡುಲಕ್ಕು….

 5. ಶ್ರೀಶಣ್ಣ says:

  ಅಜ್ಜಿ,… ಮಾಲೆ ಮಾಡುತ್ತರ ತಿಳಿಶಿ ಕೊಟ್ಟದು ಕೊಶಿ ಆತು.
  ಹಸಿ ಮಡಲಿನ ಸಪೂರದ ಕಡ್ಡಿ ಉಪಯೋಗಿಸಿ ಹೂಗಿನ ಮಾಲೆ ಮಾಡ್ತದರ ನೋಡಿದ್ದೆ.
  ಹಾಂಗೇ ಮದುವೆ ಮಕ್ಕೊಗೆ ಹಾರ ಬದಲುಸಲೆ ಸಿಂಗಾರಂದ ಚೆಂದಕೆ ಮಾಡಿದ ಮಾಲೆ ನೋಡಿದ್ದೆ. (ಇದರಲ್ಲಿ ಸಿಂಗಾರವ ∞ ಆಕಾರಲ್ಲಿ ಮಾಲೆ ಮಾಡ್ತವು. ತುಂಬಾ ಚೆಂದ ಕಾಣುತ್ತು)
  ಚಟ್ಟೆ ಮಾಲೆ ದೇವರ ಅಟ್ಟೆಗೆ ತುಂಬಾ ಶೋಭೆ ಕೊಡುತ್ತು.
  ಹೂಗಿನ ಮಾಲೆಗಳ ಬಗ್ಗೆಯೇ ಒಂದು research ಮಾಡ್ಲೆ ಅಕ್ಕೋ ಹೇಳಿ.

  • ಬಂಡಾಡಿ ಅಜ್ಜಿ says:

   ಅಪ್ಪನ್ನೇ.. ಅಜ್ಜಿಗೆ ಮರದತ್ತು ಮಡಲಿನ ಕಡ್ಡಿಲಿ ಕಟ್ಟುತ್ತದರ ಬರವಲೆ… ಈಗ ಸುಮಾರು ವರುಷ ಆತದಾ ಅದರ ಮಾಡಿಗೊಂಬಲೆ ಎಡಿಗಾಗದ್ದೆ ಆಗಿ… ಹಾಂಗೆ ಬರವಲೆ ಬಿಟ್ಟೋತು… ನೆಂಪು ಮಾಡಿದ್ದದು ಒಳ್ಳೆದಾತು…
   ಸಿಂಗಾರದ ಮಾಲೆ ಕೇರಳದ ಹೊಡೇಣ ದೇವಸ್ತಾನಂಗಳಲ್ಲಿ ಬಾರೀ ಚೆಂದಕೆ ಕಟ್ಟಿಕೊಡುತ್ತವಡ.. ಓ ಮೊನ್ನೆ ಗುರಿಕ್ಕಾರ ಹೇಳಿಗೊಂಡಿತ್ತಿದ…

 6. Harish kevala says:

  Olle Lekhana ajj…

 7. ಸುಮಾರು ದಿನ ಆತನ್ನೆ ಅಜ್ಜಿ ಕಾಣದ್ದೆ…

 8. ಅಜ್ಜೀ..
  ಶುದ್ದಿ ಲಾಯಿಕಂಗೆ ಹೇಳಿದ್ದಿ!!

  ಎನಗೆ ಕೇನೆ ಹೂಗಿನ ಮಾಲೆ ಕಟ್ಟೆಕ್ಕಾತನ್ನೇ.. ಬೋಸನ ತಲಗೆ ಮಡಗಲೆ.. 😉
  ಎಂತ ಮಾಡುಸ್ಸು?

  • ಕೇನೆ ತಲೆಲಿ ಮಡುಗಿ ಅಲ್ಲಿಗೇ ಕಟ್ಟಲಕ್ಕು, ಬಕ್ಕಿನ ಬಳ್ಳಿಲಿ, ಬೋಸನ ಪಟ ನೋಡಿದ್ದಿಲ್ಲೆಯಾ? ಆ ಕೂದಲಿಲಿ ಸುಮ್ಮನೆ ಮಡುಗಿರೂ ನಿಂಗು, ಕಟ್ಟೆಕ್ಕೂ ಹೇಳಿ ಇಲ್ಲೆ, ಅಜ್ಜಿಗೆ ಸುಮ್ಮನೆ ಎಂತ್ಸಕೆ ಕೆಲ್ಸ ಕೊಡ್ತದು ನೀನು!!?? 😉

  • ಬಂಡಾಡಿ ಅಜ್ಜಿ says:

   ಸುಮ್ಮನೆ ಕೂರುತ್ತೆಯೋ ಅಲ್ಲ ಕೆಮಿ ಹಿಂಡೆಕೋ….. ಕೇನೆ ಹೂಗಿನ ಮಾಲೆ ಅಡ… ಬೇರೆ ಎಂತ ಬೇಡದೋ…

  • ಶ್ರೀಶಣ್ಣ says:

   ಕೇನೆ ಹೂಗಿನ ನಾಥ ಹೆಚ್ಚೋ.. ತಲೆದು ಹೆಚ್ಚೋ ಹೇಳಿ ನೋಡ್ಲಾ!!!

 9. ನಿ೦ಗೊ ಆರೂ ಸ೦ಶಯ ಮಾಡೇಕೂ ಹೇಳಿಯೇ ಇಲ್ಲೆ ಮನ್ನೆ ಬೋಸ ಭಾವ ಕೇನೆ ಮಾಡಿದ ಗೆದ್ದೆ ಕರೇಲೇ ಹೊದ್ದಷ್ಟೆ ಆಡ ಮರದಿನ ನೋಡುವಾಗ ಮದ್ದಿ೦ಗೆ ಒ೦ದೂ ಇಲ್ಲದ್ದ ಹಾ೦ಗೆ ಎಲ್ಲಾ ಕೇನೇ ಹೂಗುಗಳೂ ಕೆಳ ಬಿದ್ದೊ೦ಡಿತ್ತಾಡ.ಹಾ೦ಗಾಗಿ ಏವದಕ್ಕೆ ಪರಿ೦ಮ್ಮಳ ಜಾಸ್ತಿ ಹೇಳಿ ಇನ್ನು ಚರ್ಚೆ ಮಾಡೇಡಿ.ಒಪ್ಪ೦ಗಳೊಟ್ಟಿ೦ಗೆ.

 10. ಗೋಪಾಲ ಮಾವ says:

  ಅಜ್ಜಿ, ಚೆಂದಕ್ಕೆ ಹೂಗು ಕಟ್ಟುವುದರ ವಿವರುಸಿ ಬರದ್ದವು. ಈ ಕೆಲಸವ ಮಾಡ್ಳೆ ಹಿಂದೆ ಮುಂದೆ ನೋಡ್ತ ಈಗಾಣ ಕೂಸುಗವಕ್ಕೆ ಹೇಳಿ ಬರದ ಹಾಂಗಿದ್ದು ಲೇಖನ. ಪಟಂಗಳೂ ಬಂದದು ಒಳ್ಳೆದಾತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *