Oppanna.com

ಹೂಗು ಕಟ್ಟುವ ನಮುನೆಗೊ – 2

ಬರದೋರು :   ಬಂಡಾಡಿ ಅಜ್ಜಿ    on   31/12/2010    20 ಒಪ್ಪಂಗೊ

ಚಳಿ ಸುರು ಆಯಿದದ… ಗೆಂಟುಬೇನೆಗೊ ಎಲ್ಲ ಎದ್ದರೆ ಪಕ್ಕನೆ ಕಮ್ಮಿಯೇ ಆವುತ್ತಿಲ್ಲೆ… ಆ ನೆಗೆಮಾಣಿಗೆ ಉದಿಯಪ್ಪಾಗ ಗಂಟೆ ಹತ್ತಾದರುದೇ ಏಳುಲೆ ಮನಸ್ಸೇ ಬಾರ.. ಚಳಿ ಬಿಡುಸಲೆ ಕಾಸಿಮಡಗೆಕ್ಕಷ್ಟೆ ಇನ್ನು…

ಹ್ಮ್.. ಹೇಳಿದಾಂಗೆ ಕಳುದ ಸರ್ತಿ ಹೂಗು ಕಟ್ಟುವ ಬಗೆಗಳ ಹೇಳಿತ್ತಿದ್ದೆ ಅಲ್ಲದೋ..? ಕಲ್ತುಗೊಂಡಿರೋ..? ಮೊನ್ನೆ ಹೇಳುಲೆ ಬಿಟ್ಟೋದ್ದದು ಕೆಲವು ನೆಂಪಾತು.. ಹಾಂಗೆ ಅದರನ್ನೂ ಹೇಳಿಕ್ಕುವ ಹೇಳಿ ಬಂದದು….
ಶಿರೀಶ ನೆನಪ್ಪು ಮಾಡಿದ ಹಾಂಗೆ, ಹಸಿ ಮಡಲಿನ ಸಪೂರ ಕಡ್ಡಿಲಿ ಹೂಗಿನ ಮಾಲೆ ಮಾಡ್ತ ಕ್ರಮ ಇದ್ದು. ಹೆಚ್ಚಾಗಿ ರೆಂಜೆ ಹೂಗಿನ ಹೀಂಗೆ ಸುರಿತ್ತದು…
ರೆಂಜೆ ಹೂಗು ಹೇಳುವಾಗ ಎಂಗೊ ಸಣ್ಣಾದಿಪ್ಪಾಗ ಆ ಹೂಗು ಹೆರುಕ್ಕುಲೆ ಹೋಗಿಯೊಂಡಿದ್ದದು ನೆನಪ್ಪಾವುತ್ತದ… ಉದೆಕಾಲ ಬೆಳ್ಳಿ ಕಾಂಬಗಳೇ ಎದ್ದು ಹೋಪದು… ಆಚಕರೆ ಆಟದ ಬಟ್ಟನ ಮಕ್ಕ ಬಂದು ಹೆರುಕ್ಕುವ ಮೊದಲು ಎಂಗೊ ಹೆರುಕ್ಕೆಕ್ಕು ಹೇಳಿಗೊಂಡು ಓಡುದು… ಆ ಸಂಬ್ರಮವೇ ಬೇರೆ… ಹೆರುಕ್ಕಿದ್ದರ ತಂದು, ಕೂದುಗೋಂಡು ಸುರಿವದು ಹಸಿ ಮಡಲಿನ ಕಡ್ಡಿಲಿ… ಅದು ದೇವರ ಪಟಕ್ಕೆ ಮಡುಗಲೂ ಆವುತ್ತು, ಸೂಡುಲೂ ಆವುತ್ತು….  ಘಮ್ಮನೆ ಪರಿಮ್ಮಳ… ಕಾಂಬಲುದೇ ಭಾರೀ ಚೆಂದ…
ಈಗ ರೆಂಜೆ ಮರ ಕಾಂಬಲೇ ಸಿಕ್ಕ… ಓ ಆ ತೋಟದ ತಲೇಲಿ ಒಂದು ಇದ್ದು… ಎಷ್ಟೋ ಜನ ಪುಳ್ಯಕ್ಕೊಗೆ ಅದರ ಹೂಗಿನ ಕಂಡುದೇ ಗೊಂತಿರದೋ ಏನೊ…

ಹೂಗಿನ ಸುರುದು ಮಾಲೆ ಮಾಡ್ತದು ಸುಲಾಬ… ಆರಿಂಗೂ ಮಾಡುಲಕ್ಕು… ತಾಳ್ಮೆ ಬೇಕು ಮಾಂತ್ರ…

ಮೊನ್ನೆ ಗೆಂಟಿಗೆಯ ನೈವದು ಹೇಳಿದ್ದೆ ಅಲ್ಲದೋ… ಅದರ ಇನ್ನೊಂದು ನಮುನೆಲಿ ಕಟ್ಟುಲಾವುತ್ತು…. ಇದು ಕಾಲಿಲಿ ಕಟ್ಟುತ್ತ ಕ್ರಮ….
ಕಾಲ ಹೆಬ್ಬೆರಳಿಂಗೆ ಬಾಳೆ ಬಳ್ಳಿಯ (ಅತವಾ ನೂಲಿನ) ಒಂದು ಸುತ್ತು ಸುತ್ತಿ, ಎರಡು ಎಳೆ ಸಿಕ್ಕುವಾಂಗೆ ಮಾಡಿಗೊಂಡು, ಈಚ ಕೊಡಿಲಿ ಗೆಂಟಾಕಿ, ಸೀರೆಗೆ ಗಟ್ಟಿಗೆ ಕಟ್ಟಿಗೊಳೆಕ್ಕು… ಇನ್ನು ಒಂದೊಂದೇ ಗೆಂಟಿಗೆ ತೆಕ್ಕೊಂಡು, ಆಚೊಡೆ-ಈಚೊಡೆ ಮಡಿಕ್ಕೋಂಡು ಹೋಪದು… ಮಡುಗುವಾಗ ಒಂದು ಕ್ರಮಲ್ಲಿ ಮಡಿಕ್ಕೊಂಡು ಹೋಯೆಕ್ಕು… ಬಳ್ಳಿಯ ಎರಡೆಳೆಯ ನಡೂಕೆ ಹೂಗಿನ ತೊಟ್ಟು ತಂದು, ಬಲದೊಡೆಂದಾದರೆ ಎಡದೊಡೇಣ ಎಳೆಗೂ, ಎಡದೊಡೇಂದಾದರೆ ಬಲದೊಡೇಣ ಎಳೆಗೂ ಒಂದು ಸುತ್ತು ಹಾಕೆಕ್ಕು… ಕೆಳಾಣ ಪಟ ನೋಡಿದರೆ ಅಂದಾಜಿ ಅಕ್ಕು… ಹೀಂಗೆ ಮಾಡಿಗೋಂಡು ಹೋಪದು… ಎಲ್ಲ ಹೂಗು ಮುಗುದ ಮತ್ತೆ ಅಕೇರಿಗೆ ಬಳ್ಳಿಯ ಕಾಲಿಂದ ತೆಗದು ಎರಡು ಎಳೆಯನ್ನೂ ಸೇರುಸಿ ಒಂದು ಗೆಂಟಾಕಿತ್ತು…
ಹೂಗು ಹತ್ತರತ್ತರೆ ಆಗಿ ಬಾರೀ ಚೆಂದ ಕಾಣ್ತು ಈ ಮಾಲೆ… ಅದರ ತೊಟ್ಟುದೇ ಚೆಂದಕೆ ನಿಂಗು ಒಂದೇ ರೀತಿಲಿ…. ನಿಂಗಳೂ ಕಲ್ತುಗೊಳ್ಳಿ… ಈ ಮಾಲೆ ಕಟ್ಟಿನೋಡಿ… ಕುಶೀ ಆವುತ್ತು….

ಗೆಂಟಿಗೆ ಕಟ್ಟುತ್ತ ಕ್ರಮ...

ಗೆಂಟಿಗೆ ಮಾಲೆ.. ಕಟ್ತಿದ ಮತ್ತೆ....

ಇನ್ನು, ಶಂಖಪುಷ್ಪ ಹೂಗಿನ ಮಾಲೆದೇ ಮಾಡುಲಾವುತ್ತು… ವಿಶೇಷ ಏನಿಲ್ಲೆ… ಮಲ್ಲಿಗೆಯ ಕಾಲಿಲಿ ಕಟ್ಟುತ್ತ ಕ್ರಮವೇ….
ಬಳ್ಳಿಯ ಹೆಬ್ಬೆರಳಿಂಗೆ ಸುತ್ತಾಕಿಯೊಂಡು, ಬಳ್ಳಿಯ ಅರ್ದಂದ ಮತ್ತೆ ಹೂಗಿನ ಮಡುಗಿ, ಈಚ ಕೊಡಿಯ ಆಚೊಡೆಂಗೆ ಮಾಡಿ ಎಳದು ಗೆಂಟಾಕೆಕ್ಕು ಹೂಗನ್ನೂ ಸೇರುಸಿಗೊಂಡು… ಹೀಂಗೆ ಕಟ್ಟಿಗೋಂಡು ಹೋಪದು… ಮುದ್ದೆ ಶಂಕಪುಷ್ಪ ಆದರೆ ಮುದ್ದೆ ಮುದ್ದೆ ಮಾಲೆ ಆವುತ್ತು… ಈಚದಾದರೆ ತೆಳ್ಳಂಗೆ ಮಾಲೆ ಆವುತ್ತು…

ಶಂಕಪುಷ್ಪದ ಮಾಲೆ...

ಶಂಕಪುಷ್ಪದ ಹಾಂಗೆಯೇ ಅಗಸೆ ಹೂಗಿನ ಮಾಲೆದೇ ಮಾಡುಲಾವುತ್ತದ… ಆ ಹೂಗೇ ಒಂದು ಚೆಂದ ಅಲ್ಲದೋ…. ಈ ಮಾಲೆ ಇನ್ನೂ ಚೆಂದ…. ಆದರೆ ಹೂಗು ಬಾಡುದು ರಜ್ಜ ಬೇಗ..
ದೇವರ ಅಲಂಕಾರಕ್ಕೆ ಹೀಂಗೆ ಮಾಲೆ ಮಾಡಿ ಮಡುಗಿದರೆ ಬಾರೀ ಚೆಂದ ಕಾಂಗು… ಸೂಡುಲುದೇ ಆವುತ್ತು… ಈಗಾಣ ಮಕ್ಕೊಗೆ ಮಾಂತ್ರ ಯಾವುದೂ ಆಗ… ಎಂತ ಮಾಡುದು..

ಅಗಸೆಯ ಅಂದದ ಮಾಲೆ...

ಮಲ್ಲಿಗೆಯ ಕಟ್ಟುತ್ತ ಇನ್ನೊಂದು ಬಗೆ ಇದ್ದು… ಅದು ಮೂರು ಬಳ್ಳಿಲಿ… ನಾವು ಜೆಡೆ ನೈತ್ತಲ್ಲದೋ ಅದೇ ನಮುನೆಲಿ… ಈಗ ಜೆಡೆ ನೈವೋರಾದರೂ ಆರಿದ್ದವು ಬೇಕೆ… ಹಿಡಿಸೂಡಿಯ ಕಟ್ಟಿದಾಂಗೆ, ಎಲ್ಲ ತಲೆಕಸವಿನ ಒಟ್ಟುಸೇರುಸಿ ಬುಡಕ್ಕೆ ಒಂದು ಬೇಂಡು ಹಾಕಿಬಿಟ್ಟವು ಅತ್ಲಾಗಿ… ಇಲ್ಲದ್ದರೆ ಒಂದು ನಾಕು ತಲೆಕಸವಿಂಗೆ ಮಾಂತ್ರ ಕಿಲಿಪ್ಪು ಹಾಕಿ ಒಳುದ್ದದರ ಹಾಂಗೇ ಬಿಟ್ಟವು, ಗಾಳಿಗೆ ಹಾರುಲೆ…. ಅದು ಎಂತ ಚೆಂದವೋ ದೇವರಿಂಗೇ ಗೊಂತಪ್ಪ… ಹ್ಮ್.. ಅದಿರಳಿ…
ಈಗ ಈ ಹೂಗಿನ ನೈತ್ತದರ ನೋಡುವೊ…. ಮೂರು ಒಂದೇ ರೀತಿಯ ಬಳ್ಳಿಗಳ ತೆಕ್ಕೊಂಡು ಒಂದು ಕೊಡಿಲಿ ಮೂರನ್ನೂ ಸೇರುಸಿ ಗೆಂಟಾಕೆಕ್ಕು… ಮತ್ತೆ, ಒಂದು ಹೂಗು ತೆಕ್ಕೊಂಡು ಕರೇಣ ಎರಡು ಬಳ್ಳಿಯ ನಡುಕೆ ಮಡುಗಿ, ಆಚೊಡೇಣ ಬಳ್ಳಿಯ ಈಚೊಡೇಂಗೂ, ಈಚೊಡೇಣ ಬಳ್ಳಿಯ ಆಚೊಡೇಂಗೂ ಮಾಡೆಕ್ಕು.. ಇನ್ನು ಈಚ ಕರೇಣ ಎರಡು ಬಳ್ಳಿಯ ನಡುಕೆ ಇನ್ನೊಂದು ಹೂಗು ಮಡುಗಿ ಪುನಾ ಹಾಂಗೇ ಮಾಡುತ್ತದು… ಹೀಂಗೇ ಒಂದೊಂದೇ ಹೂಗು ಮಡುಗಿ ಮಾಡಿಗೋಂಡು ಹೋತು…
ಈ ಮಾಲೆ ಉದ್ದ ಆಯೆಕ್ಕಾರೆ ಸುಮಾರು ಹೂಗು ಬೇಕು… ತುಂಬ ಹತ್ತರತ್ತರೆ ಬತ್ತಿದಾ ಹೂಗುಗೊ… ರಜ್ಜ ಹೂಗಿಪ್ಪದಾದರೆ ಒಂದು ಮುದ್ದೆಯಾಂಗೆ ಅಕ್ಕು ಅದು….
ಇದೂ ಒಂದು ಚೆಂದವೇ ಹೇಳುವ…. ಸುರೂವಿಂಗೆ ಕಲಿವಾಗ ರಜ ಬಂಙ ಅಕ್ಕು… ಕಲ್ತಾದ ಮತ್ತೆ ಅಬ್ಯಾಸ ಆವುತ್ತತ್ಲಾಗಿ….

ಮೂರು ನೂಲಿಲಿ ಮಲ್ಲಿಗೆ ನೈತ್ತದು...
ನೆಯಿದಪ್ಪಾಗ ಹೀಂಗಾತು....

ಕಲ್ತುಗೊಂಡು ಹೋದಾಂಗೆ ಮತ್ತೆ ಹೊಸ ಹೊಸ ಆಲೋಚನೆಗೊ ಬತ್ತು…. ಇದಾ, ಪುಳ್ಳಿ ಒಂದು ಪ್ರಯೋಗ ಮಾಡಿದ್ದು… ಗೆಂಟಿಗೆಯ ತೊಟ್ಟಿನ ನೈವಾಂಗೆ, ಕಶಿ ಕೇಪುಳದ ತೊಟ್ಟಿನ ನೈದ್ದು… ಸಪೂರ ನೈಯ್ಗೆಯಾಂಗೆ ಬತ್ತು ಅದು…

ಪುಳ್ಳಿಯ ಪ್ರಯೋಗ... ಮುಳಿಯ ರಗು ಬೆಂಕಿಕಡ್ಡಿ ಗೀರದ್ದರೆ ಸಾಕು...

ಆಗಲಿ, ಪುರುಸೋತಿಲಿ ಒಂದೊಂದನ್ನೇ ಕಲ್ತುಗೊಳ್ಳಿ…. ಗೊಂತಾಗದ್ದರೆ ಇನ್ನೊಂದರಿ ಹೇಳಿಕೊಡುವೊ ಆತೊ….

20 thoughts on “ಹೂಗು ಕಟ್ಟುವ ನಮುನೆಗೊ – 2

  1. ಅಜ್ಜೀ..
    ಹೂಗು ಕಟ್ಟುಲೆ ಹೆರಟ್ರೆ ಎಂಗಳ ಬೆರಳಿಂಗೇ ಸುಂದುತ್ತು ನೂಲು! 🙁
    ಎನ್ನಂದಾಗ ಅದೆಲ್ಲ..

    ಸದ್ಯ ಎಂತಾರು ಅಡಿಗೆ ಮಾಡ್ಳಿದ್ದೋ ವಿಶೇಷದ್ದು? 😉

    1. ಅಪ್ಪಪ್ಪು….
      ಹೂಗು ಕಟ್ಟದ್ದರೂ ಅಡ್ಡಿ ಇಲ್ಲೆ.. ಹೋಪಾಗ ಬಪ್ಪಾಗ ಆ ಸೇವಂತಿಗೆ ಸೆಸಿ ಹರುಂಬುತ್ತದು ಎಂತಕೆ ನೋಡೊ… ಹೂಗು ಪೂರ ಹಾಳಾಯಿದು….
      ತಿಂಬದು ಒಂದೇ ಆಲೋಚನೆ ನಿನಗೆ… ವಿಶೇಷದ ಅಡಿಗೆ ಮಾಡಿರೂ ನಿನಗೆ ಹೇಳುಲಿಲ್ಲೆ ಹೇಳಿ ಮಾಡಿದ್ದೆ ಈ ಸರ್ತಿಲಿ…

  2. ನಿ೦ಗೊ, ಮಾಲೆ ಪಟ್ಟಾಕಿ ಹೇ೦ಗೆ ಕಟ್ಟುಸ್ಸು ಅದರನ್ನು ಕೂಡ ಹೇಳಿ ಕೊಡಿ ಅಜ್ಜಿ….
    ಬಲ್ಲಾಡು ಮಾಣಿ ಬೀಲಕ್ಕೆ ಕಟ್ಟೆಕು ಎನಗೆ.. 😛

  3. ಕೆಮಿ ತಿರ್ಪೇಕಪ್ಪಗ ತಿರ್ಪದ್ದ್ರೆ ಒಪ್ಪಕು೦ಞಿಗೆ ಬುದ್ದಿ ಸರಿ ಬಾರ ಅದ ಹಾ೦ಗಾಗಿ ಭೋಸ ಭಾವ ಒ೦ದಾರಿ ಕೆಮಿಹಿಡುದು ನೋಡ್ಲಕ್ಕು.ಈ ಅಬ್ಬೆಕ್ಕಳ ರಜ ಜಾಗ್ರತೆ ಬೇಕು.ಅವ್ವು ಮಕ್ಕಳ ಎಷ್ಟು ಬಡುದರೂ ಇನ್ನೊಬ್ಬ ಕಣ್ಣು ಕೆ೦ಪು ಮಾಡಿ ನೋಡ್ಲೂ ಬಿಡವು.ಹಾ೦ಗಾಗಿ ನಿನ್ನ ಜಾಗ್ರತೇಲಿ ನೀನು ಇದ್ದುಗೊ.ವಾಲಗ ಊದುವನ್ನ ಮದಲೇ ಜಾಗೆ ಖಾಲಿ ಮಾಡಿಗೊ.ಒಪ್ಪ೦ಗಳೊಟ್ಟಿ೦ಗೆ.

  4. ಅಜ್ಜಿ,ನಿಂಗಳ ಕಾಲದ ಕ್ರಮವೇ ಲಾಯಿಕಲ್ಲದೋ? ಚೆಂದಕೆ ಎಣ್ಣೆ ಹಾಕಿ ಜೆಡೆ ನೇಯ್ದು ಜುಟ್ಟು ಕಟ್ಟಿ,ಮುಳ್ಳು ಕುತ್ತಿ ಅದಕ್ಕೆ ಹೀಂಗಿಪ್ಪ ಹೂಗಿನ ಮಾಲೆಯ ಕಟ್ಟಿ ಮೊರಲೇ ಒಪ್ಪ ಬೊಟ್ಟು ಹಾಕಿ ಹೆರಟರೆ ಕಣ್ಣು ತುಂಬುಗದಾ.ಈಗ ಬಾಬು ಕಟ್ಟು ,ಜೀನ್ಸು ಪೇಂಟು ಹಾಕಿರೆ ಮಾಣಿಯೋ ಕೂಸೋ ಗೊಂತಾಗ.

    ಆಗಲಿ,ಪುಳ್ಲ್ಯಕ್ಕೊ ಕಲ್ತು ಮತ್ತೆ ನಿಂಗಳ ಕ್ರಮಲ್ಲಿ ಬದುಕ್ಕಿರೆ ನೆಮ್ಮದಿ ಅಕ್ಕಲ್ಲದೋ?

    1. ಅಪ್ಪಡ… ಕೊಡೆಯಾಲದ ಹೊಡೆಲಿ ಕೂಸುಗಳೂ ಪೇಂಟಂಗಿ ಹಾಕುತ್ತವಡ… ಶಿವ ಶಿವಾ ಎಂತ ಕಾಲ ಬಂತಪ್ಪಾ…

  5. ಅಜ್ಜೀ, ಇನ್ನೊಂದು ಭಾಗ ಹೂಗು ಕಟ್ಟುದು ಹೇಳಿ ಕೊಟ್ಟದು ಲಾಯ್ಕಾಯಿದು.. ಮೂರು ಬಳ್ಳಿಲಿ ಮಲ್ಲಿಗೆ ಕಟ್ಟುತ್ತದು ಹೇಳಿ ಕೊಟ್ಟದು ಒಳ್ಳೇದಾತು.. ಕಲ್ತುಗೊಂಬಲೆ ಆತು…
    ಧನ್ಯವಾದ ಅಜ್ಜೀ…

    1. ಆಗಲಿ ದೇವೀ.. ಎಲ್ಲೊರೂ ಕಲುತ್ತುಗೊಂಡರೆ ಅದೇ ಕುಶಿ…

  6. ಅಗಸೆ ಹೂಗು ಈಗರಜ ಅಪ್ರೂಪ ಆಯಿದು ಮದಲಿ೦ಗೆಲ್ಲ ಹೆಚ್ಹಿನ ಮನಗಳಲ್ಲೂ ಇತ್ತಿದ್ದು.ಬ೦ಡಾಡಿ ಅಜ್ಜಿಯತ್ರೆ ರಜ ಕೋಪವೂ ಬತ್ತು ಇದರ ನೋಡಿ ಕೂಸುಗೊ ಎಲ್ಲ ಓದುತ್ತದು ಬಿಟ್ಟು ಹೂಗು ಕಟ್ಲೆ ಕೂದೊ೦ಗೋ ಹೇಳಿ?ನಮ್ಮ ಸಣ್ಣ ಪ್ರಾಯಲ್ಲೆಲ್ಲ ಆದರೆ ಕೂಸುಗೋಕ್ಕೆಲ್ಲ ಎ೦ತಕೆ ಬರಾ ಹೇಳಿಯೊ೦ಡಿತ್ತಿದ್ದವದ ಅ೦ಬಗ ಅವಕ್ಕೆ ಸಮಯವೂಇತ್ತಿದ್ದು.ಈಗ ಹಾ೦ಗಲ್ಲಾನೆ.ಅಜ್ಜಿ ಹೇಳೀರೆ ಅಜ್ಜಿಗೆ ಕೋಪ ಬಾರಾನೆ ಅಲ್ಲ ಈ ತೊ೦ಡನೂ ಎನ್ನ ಅಜ್ಜಿ ಹೇಳಿದ್ದು ಹೇಳಿ.ಒಪ್ಪ೦ಗಳೊಟ್ಟಿ೦ಗೆ.

    1. ಈಗಾಣ ಕೂಸುಗೊಕ್ಕುದೇ ಪುರುಸೊತ್ತಿಂಗೆ ಏನೂ ಕಮ್ಮಿ ಆಯಿದಿಲ್ಲೆ ಕಿಟ್ಟಣ್ಣೊ… ಮೂರು ಹೊತ್ತುದೆ ಆ ಟೀವಿ ಬುಡಲ್ಲಿ ಕೂಪಲೆ ಪುರುಸೊತ್ತು ಇದ್ದಡ… ಅಂಬಗ ಇದರ ಎಲ್ಲ ಕಲಿವಲೆ ಪುರುಸೊತ್ತು ಸಿಕ್ಕದೋ… ಏ?

  7. ಆಹಾ,, ಪೀಪಿ ಚೆಂದ ಇದ್ದು ಅಜ್ಜಿ! ಆನುದೆ ಮನೆಲಿ ಅಮ್ಮ ಪೀಪಿ ಕಟ್ಟುವಾಗ ಸಕಾಯ ಮಾಡ್ತೆ ಗೊಂತಿದ್ದಾ?? 😉

    1. {..ಪೀಪಿ ಕಟ್ಟುವಾಗ ಸಕಾಯ ಮಾಡ್ತೆ }

      ಎನಗೆ ಇದು ಸ೦ಶಯಾ…!!

        1. ಅವ ಮಾಹಾ ಲೂಟಿ ಕಾರ.. ನೀನು ಹೋಗಿ ಅವನ ಕೆಮಿ ತಿರ್ಪ್ಪು.. ಅಲ್ಲ ಆನೇ ಬರೆಕ್ಕೊ?? 😉

          1. ಏಯಿ, ಅವ° ಲೂಟಿ ಎಲ್ಲ ಮಾಡ್ತಾ ಇಲ್ಲೆಡ, ಶರ್ಮಪ್ಪಚ್ಚಿ ಹೇಳಿಗೊಂಡಿತ್ತಿದ್ದವು.. ಅವ° ಒಪ್ಪಕುಞಿ , ಬರೇ ಪಾಪದ ಮಾಣಿ ಹೇಳಿ.. ಎಂತ್ಸಕೆ ಸುಮ್ಮನೆ ಕೆಮಿ ತಿರ್ಪಿ ಕೂಗ್ಸುತ್ತು ಅವನ?? 🙂 ಬೇಡ ಭಾವ,, 🙂

  8. ಪಟ ಸಮೇತ, ಕ್ರಮ ಪ್ರಕಾರ ಭಾರೀ ಲಾಯಕಿಲ್ಲಿ ವಿವರುಸಿದ್ದೆ ಅಕ್ಕಾ ! ನೀನು ರೆಂಜೆ ಹೂಗು ಹೇಳುವಗ ಕೊಡೆಯಾಲದ ಭಾರತೀ ಕಾಲೇಜಿನ ನೆಂಪು ಆವುತ್ತು ನೋಡು. ಅಲ್ಲೊಂದು ರೆಂಜೆ ಮರ ಇದ್ದು. ಗಾಳಿ ಬೀಸುವಗ ಎಂತಾ ಪರಿಮಳ. ಎಂತಾ ಪರಿಮಳ. ಕಾಲೇಜಿನ ಎರಡನೇ ಮಾಳಿಗೆಲಿ ಕತ್ಲೆ ಅಪ್ಪಗ ನಿಲ್ಲೆಕು. ಓಹ್. ಅಲ್ಯಾಣ ಕೂಸುಗೊ ಎಲ್ಲ, ಅಲ್ಲಿ ಬಿದ್ದ ರೆಂಜೆ ಹೂಗಿನ ಹೆರ್ಕಿ ಮಾಲೆ ಕಟ್ಟಿದ್ದವೋ ಎನಗೆ ಗೊಂತಿಲ್ಲೆ. ಅಜ್ಜಕಾನದ ಅಳಿಯಂಗೆ ಖಂಡಿತಾ ಗೊಂತಿಕ್ಕು. ಮತ್ತೆ, ಅಸಗೆ ಹೂಗಿನ ಹೆಮ್ಮಕ್ಕೊ ಸೂಡುವಗ, ತಲೆಲಿ ಕತ್ತಿ ನೇಲುಸಿದ ಹಾಂಗೆ ಕಾಂಗು. ಆನು ಅಗಸೆ ಹೂಗು ಕಾಣದ್ದೆ ತುಂಬಾ ವರ್ಷಂಗಳೇ ಕಳುದತ್ತು. ಹೇಳಿದ ಹಾಂಗೆ ನಾಡ್ದು ಜನವರಿ 9ಕ್ಕೆ ಮಂಗಳೂರು ಹವ್ಯಕ ಸಭಾದ ವಾರ್ಶಿಕೋತ್ಸವ, ಭಾರತೀ ಕಾಲೇಜಿನ ಆವರಣಲ್ಲಿ ನೆಡೆತ್ತಾ ಇದ್ದು. ಇರುಳು ಊಟವುದೆ ಇದ್ದು, ಬತ್ತಿಯೊ ?

    1. {ಅಜ್ಜಕಾನದ ಅಳಿಯಂಗೆ ಖಂಡಿತಾ ಗೊಂತಿಕ್ಕು.}
      ಉಮ್ಮಪ್ಪಾ.. ಆನಂತೂ ಕಂಡಿದಿಲ್ಲೆ ಕೂಸುಗೊ ಹೂಗು ಕಟ್ಟುದು.. ಪನೂರು ಟೀಚರುದೆ. ರಾಜಿ ಟೀಚರುದೆ ಹೆರ್ಕ್ಯೋಂಡು ಇತ್ತದ್ದು ನೋಡಿದ್ದೆ..

      ನಾಡುದ್ದು ಬರೇಕು ಹೇಳಿ ಇದ್ದೆ ಎಂತ ಆವುತ್ತು ನೋಡೆಕ್ಕು..

    2. ಓ! ಅಪ್ಪೋ..? ಶೆ ಬಪ್ಪಲಾವುತಿತ್ತು ಅಣ್ಣೊ… ಆದರೆ ಪುಳ್ಳಿಗೆ ಅದೆಂತದೋ ಶೇಮಿಷ್ಟರು ಪರೀಕ್ಷೆ ಅಡ.. ಹಾಂಗಾಗಿ ಎನ್ನ ಕರಕ್ಕೊಂಡು ಹೋಪಲೆ ಎಡಿಯ ಹೇಳಿತ್ತು… ಎನಗೆ ಒಬ್ಬಂಗೇ ಬಪ್ಪಲೆ ಅರಡಿಯ ಇದಾ… ಇನ್ನೊಂದರಿ ನೋಡುವೊ.. ಆಗದೋ…

      1. ನಿಂಗೊಗೆ ಬರೆಕು ಹೇಳ್ತ ಆಸಕ್ತಿ ಇದ್ದರೆ, ಬೇಕಾರೆ ಕಾರು ಕಳುಸುತ್ತ ವ್ಯವಸ್ಥೆ ಮಾಡುವೊ. ಅಜ್ಜ್ಯಕ್ಕೊ ಎಲ್ಲ ಮನಸ್ಸಿಲ್ಲೇ ಮಡಗೆಂಡು ಬೇಜಾರು ಮಾಡ್ಳಾಗ ಇದಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×