ಜನಂಗಳ ಪಟಂಗೊ #02

May 10, 2010 ರ 8:00 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಸರ್ತಿ ದೂರಂದ ತೆಗದ (ಕ್ಯಾಂಡಿಡ್) ಪಟಂಗಳ ರಜ್ಜ ನೋಡಿದ್ದಿ. ಈ ಸರ್ತಿ ಪೋರ್ಟ್ರೇಟ್ ಪಟಂಗಳ ನೋಡಿ. ಹಾಂಗೆ ಹೇಳಿ ಈ ಸರ್ತಿಯೂ ಕೆಲಾವು ಕ್ಯಾಂಡಿಡ್ ಪಟಂಗ ಇದ್ದು.

ಎನಗೆ ಮತ್ತೆ ಹಾಂಗೆ ದಾರಿಲಿ ಹೋಪಗ ಕೆಮರ ಹೆರ ತೆಗದು ಪಟ ತೆಗವಲೆ ಕಷ್ಟ ಆವುತ್ತು. ಕಳುದ ಸರ್ತಿ ಗೋಪಾಲ ಮಾವ° ಹೇಳಿದ ಹಾಂಗೆ ಅರಾದರೂ ಬಡಿವಲೋ ಮತ್ತು ಬಂದರೆ…? ಅಂದು ‘ಸುಧಾ’ಲ್ಲಿ ತಾಳಿಬೊಂಡದ ಬಗ್ಗೆ ಲೇಖನ ಬರವಲೆ ಹೇಳಿ ಕೊಡೆಯಾಲಲ್ಲಿ ತಮಿಳಂಗಳ ಮಾತಾಡ್ಸಿದ್ದು ಈಗಲೂ ನೆನಪಾವುತ್ತು. ಎನಗೆ ಅಂಬಗ ರಜ್ಜ ರಜ್ಜ ತಮಿಳು ಬಂದೊಂಡಿತ್ತು. ಹಾಂಗಾಗಿ ಬಚಾವ್…

ನಮ್ಮ ಊರಿಲ್ಲಿ ದಾರಿಲಿ ಹೋಪಗ ಕೆಮರ ಹೆರ ತೆಗದು ಪಟ ತೆಗವದು ಹೇಳಿರೆ ದೊಡ್ಡ ಸಂಗತಿಯೇ. ಅದರಲ್ಲೂ ದೊಡ್ಡ ಕೆಮರ ಹಿಡುದು ಪಟ ತೆಗವಲೆ ಹೋದರೆ ‘ಪೇಪರ್ದಾಯೆ ಬತ್ತೆ ಮಾರಾಯ’ ಹೇಳಿಗೊಂಡು ಓಡುವವೇ ಇಪ್ಪದು ನಮ್ಮ ಊರಿಲ್ಲಿ. ನಮ್ಮ ಪೇಪರಿನವು ಮಾಡುದೂ ಹಾಂಗೇ. ಬೇಕಾದರೂ ಬೇಡದ್ದರೂ ವರದಿ ಬರದು ಹಾಕಿ ಕೆಲವು ಸರ್ತಿ ಪ್ರಿಂಟ್ ಅಪ್ಪಗ ಅದರ ಮೂಲ ಸ್ವರೂಪವೇ ಬದಲಾಗಿರ್ತು. ಅಷ್ಟಪ್ಪಗ ಅದರ ಓದುವವನ ತಲೆ ಓಡುದು ಈ ಪೇಪರಿನವು ಹೇಳಿರೆ ಇಷ್ಟೇ… ಇವರತ್ರೆ ಎಂತ ಹೇಳುಲಾಗ… ಹೇಳ್ತ ಭಾವನೆ ನಮ್ಮ ಜನಂಗಳ ಮನಸ್ಸಿಲ್ಲಿ ಬಂದು ಬಿಡುತ್ತು.

ನಿಜ ಹೇಳೆಕ್ಕಾ? ನಿಂಗೊ ಟೂರ್ ಎಲ್ಲ ಹೋಪದಿದ್ದರೆ ದೊಡ್ಡ ಕೆಮರಕ್ಕಿಂತಲೂ ಸಣ್ಣ ಕೆಮರ ಒಳ್ಳೆದು. ಲಗೇಜ್ ಕಮ್ಮಿಯೂ ಅವುತ್ತು, ಬೇಕಾದ ಹಾಂಗಿಪ್ಪ ಪಟ ತೆಗವಲೂ ಆವುತ್ತು. ದೊಡ್ಡ ಕೆಮರ (SLR ಕೆಮರ ಹೇಳ್ತವು) ಕೊಂಡೋಪಲೆ ಬಾದಿಯೂ ಆವುತ್ತು, ಜನಂಗೊಕ್ಕೆ ಬೇಗ ಕಾಂಬಲೂ ಸಿಕ್ಕುತ್ತು.(ಜನಂಗೊ ಬೇಗ ನೋಟ್ ಮಾಡ್ತವು). ಹಾಂಗಾಗಿ ಜನಂಗಳ ಪಟ ತೆಗವದಿದ್ದರೆ ಸಣ್ಣ ಕೆಮರಂಗಳೇ ಒಳ್ಳೆದು. ಒಂದು ಫೊಟೋಗ್ರಫಿ ಪತ್ರಿಕೆಲಿ ಕಂಡ ಹಾಂಗೆ ಕಪ್ಪು ಬಣ್ಣದ ಕೆಮರಂಗಳ ಜನಂಗೊ ಹೆಚ್ಚು ನೋಟ್ ಮಾಡ್ತವಡ. ಅಂಬಗ ಜನ ಹೆಚ್ಚು ನೋಟ್ ಮಾಡದ್ದೆ ಇರೆಕಾದರೆ? ಕೆಂಪು ಬಣ್ಣವೋ, ಅರಸಿನ ಬಣ್ಣದ್ದೋ ಕೆಮರ ತೆಕ್ಕೊಂಡು ಹೋಯೆಕ್ಕಡ. ಇದು ಮನುಷ್ಯರ ಸೈಕಾಲಜಿ. ಎಂತಕೆ ಹೇಳಿ ಎನ್ನತ್ರೆ ಕೇಳೆಡಿ ಮತ್ತೆ…

ಜನಂಗೊ ಕೆಮರ ಹೆಚ್ಚು ನೋಟ್ ಮಾಡಿದ ಹಾಂಗೆ ಕಳ್ಳಂಗಳೂ ನೋಕ ಹಾಕ್ಯೊಂಡು ಇರ್ತವು. ಹಾಂಗಾಗಿ ದೊಡ್ಡ ಕೆಮರ ಟೂರ್ ಹೋಪಗ ಅಷ್ಟು ಸೇಫ್ ಅಲ್ಲ. ಗೋಣಿ ಚೀಲದ ಹಾಂಗಿಪ್ಪ ಕೆಮರ ಚೀಲಲ್ಲಿ ಹಾಕ್ಯೊಂಡು ಹೋದರೆ ಅದು ಕೆಮರ ಹೇಳಿ ಅಷ್ಟು ಸುಲಭಲ್ಲಿ ಗೊಂತಾಗ. ದೊಡ್ಡಕೆ ‘ಕೆಮರಾ’ ಹೇಳಿ ಬರಕ್ಕೊಂಡು ಇಪ್ಪ ಬೇಗು ಹಾಕ್ಯೊಂಡು ಹೋದರೆ ಕಳ್ಳಂಗಳೂ ಅದನ್ನೇ ನೋಡ್ತಾ ಇರ್ತವು, ನೆನಪಿರ್ಲಿ…

ಹಳೆಮನೆ ಅಣ್ಣ

http://www.drishyaphotos.blogspot.com

ಜನಂಗಳ ಪಟಂಗೊ #02, 4.3 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಶೇಣಿ ಅಜ್ಜನ ಪಟಂಗಳಲ್ಲಿ ಬಲು ಅಪರೂಪದ್ದು ಈ ಪಟ.

  [Reply]

  VA:F [1.9.22_1171]
  Rating: 0 (from 0 votes)
 2. prashanth kuwait

  kodappana maruva “virama” olledagi bayindu.. hats off… Harish anna

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣವಸಂತರಾಜ್ ಹಳೆಮನೆಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶಚೆನ್ನಬೆಟ್ಟಣ್ಣಪುತ್ತೂರುಬಾವನೆಗೆಗಾರ°ಗಣೇಶ ಮಾವ°ಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಕಾವಿನಮೂಲೆ ಮಾಣಿಬಟ್ಟಮಾವ°ಮಾಷ್ಟ್ರುಮಾವ°ಸುಭಗಅಕ್ಷರದಣ್ಣಪುಟ್ಟಬಾವ°ಚೆನ್ನೈ ಬಾವ°ಕೊಳಚ್ಚಿಪ್ಪು ಬಾವಮುಳಿಯ ಭಾವದೊಡ್ಡಭಾವಸರ್ಪಮಲೆ ಮಾವ°ಪುತ್ತೂರಿನ ಪುಟ್ಟಕ್ಕದೊಡ್ಮನೆ ಭಾವಕಜೆವಸಂತ°ಎರುಂಬು ಅಪ್ಪಚ್ಚಿದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ