ಮದುವೆ ಸೀಸನ್ನಿನ ಸ್ವಾರಸ್ಯಂಗೊ…

ಆಟಿ ತಿಂಗಳು ಶುರು ಆತು ಹೇಳಿರೆ ಮದುವೆ ಇತ್ಯಾದಿ ಸಮಾರಂಭಂಗಳ ಗೌಜಿಯೂ ತತ್ಕಾಲಕ್ಕೆ ನಿಲ್ಲುತ್ತು. ಒಪ್ಪಣ್ಣ ಬರದ ಹಾಂಗೆ ಆಟಿಲಿ ಎಲ್ಲೋರಿಂಗೂ ಪುರುಸೊತ್ತೇ. ಈಗ ಪಟ, ವೀಡ್ಯದ ಕೆಲಸಂಗಳ ಎಲ್ಲ ಮುಗುಶಿಯಪ್ಪಗ ರಜ್ಜ ಪುರುಸೊತ್ತು ಆತು.

ಪಟ, ವೀಡ್ಯ ತೆಗದರೆ ಸಾಲ. ಅದರ Post processing ಕೆಲಸವೇ ಹೆಚ್ಚು ಸಮಯ ತೆಕ್ಕೊಂಬದು. ಪಟ ಆದರೆ ತೆಗದ ಪಟಂಗಳಲ್ಲಿ ಬೇಕಾದಷ್ಟರ ಹೆರ್ಕಿ ತೆಗದು, ಬೇಕಾದ ಹಾಂಗೆ ಚೆಂದ ಮಾಡಿ, ಆಲ್ಬಮ್ ಡಿಸೈನ್ ಮಾಡೆಕ್ಕು. ಇಷ್ಟು ಮಾಡ್ಳೆ ಪಟ ತೆಗದಷ್ಟು ಸುಲಾಬ ಅಲ್ಲ.  ಮತ್ತೆ ವೀಡ್ಯದ್ದು ಮತ್ತೊಂದು ಕತೆ. ಮದುವೆ ಇತ್ಯಾದಿ ಸಮಾರಂಭಂಗಳಲ್ಲಿ ವೀಡ್ಯ ತೆಗವಗ ಕೆಮರದ ಎದುರಂದ ಅಡ್ಡ ಓಡ್ತವರಿಂದಾಗಿ ಉಪದ್ರ ಆವುತ್ತು. ಹಾಂಗೆ ಅಡ್ಡ ಬಂದದು, ಮತ್ತೆ ಅನಗತ್ಯ ತುಣುಕುಗಳ ತುಂಡುಸಿ, ಪದ್ಯಕ್ಕೆ ಸರಿ ಆವುತ್ತ ಹಾಂಗೆ ಜೋಡಿಸಿಯೊಂಡು ಸಂಕಲನ ಮಾಡ್ಳೆ ಸುಮಾರು ಕೆಲಸ ಹಿಡಿತ್ತು. ಅದಾಗಿ ಅದರ ಡಿವಿಡಿಗೆ ಬರವಲೆ ಎಡಿತ್ತ ನಮೂನೆಗೆ ಬದಲಾಯಿಸೆಕ್ಕು. ಇದಕ್ಕೆ ೧ ಗಂಟೆ ವೀಡ್ಯಕ್ಕೆ ೧.೩೦ ಗಂಟೆ ಬೇಕು. ಈ ಕೆಲಸದ ಮಧ್ಯಲ್ಲಿ ಕರೆಂಟ್ ಕೈಕೊಡ್ಲಾಗ. ಹಾಂಗೇನಾದರೂ ಆಗಿ ಕಂಪ್ಯೂಟರ್ ಆಫ್ ಆದರೆ ಆ ಕೆಲಸ ಪುನಃ ಶುರುವಿಂದ ಮಾಡೆಕ್ಕು.  ಮಳೆಗಾಲ ಆದರೆ ಕರೆಂಟ್ ಕೈಕೊಡುವದು ಹೆಚ್ಚು.

ಮದುವೆಯ ಗೌಜಿಯ ಎಡೆಲಿ ಸುಮಾರು ಸ್ವಾರಸ್ಯದ ಸಂಗತಿಗೊ ನೆಡೆತ್ತು. ಪಟ ತೆಗವಲೆ ಹೋದವಕ್ಕೆ ಆ ಎಲ್ಲ ಸಂಗತಿಗೊ ಗೊಂತಾವುತ್ತು. ಕೆಲವು ವಿಷಯಂಗೊ ನೆಗೆ ತರುಸಿರೆ, ಮತ್ತೆ ಕೆಲವೊಂದು ಘಟನೆಗಳಿಂದಾಗಿ ಬೇಜಾರೂ ಆವುತ್ತು. ನೆನಪಾದ ಹಾಂಗೆ ಕೆಲವು ಘಟನೆಗಳ ಹೇಳ್ತೆ.

1. ಅದೊಂದು ಶೆಟ್ರುಗಳ ಮದುವೆ. ಕುಂಬಳೆ ಪೇಟೆಗೆ ಹತ್ರಾಣ ಹಾಲ್. ಶೆಟ್ರುಗಳ ಮದುವೆ ಹೇಳಿರೆ ಕೇಳೆಕ್ಕೊ? ಭಾರೀ ಗೌಜಿಲಿ ಮದ್ಮಾಯನ ದಿಬ್ಬಣ ಬಂತು. (ಅವರದ್ದರ್ಲಿ ಮದ್ಮಾಯ, ಮದ್ಮಾಳು ಎರಡೂ ಕಡೆದು ದಿಬ್ಬಣ ಬಪ್ಪದೇ ಅಲ್ದೋ?) ಸ್ವಾಗತ ಎಲ್ಲ ಆಗಿ ಹಾಲ್‌ನ ಒಳಂಗೆ ಹೋದವು. ಒಳ ಡ್ರೆಸಿಂಗ್ ರೂಮಿಲ್ಲಿ ಎಂತದೋ ಗುಸು ಗುಸು. ಇವಕ್ಕೆ ಎಂತ ಆತಪ್ಪ ಹೇಳಿಯೊಂಡು ಅತ್ಲಾಗಿ ಹೋದರೆ ಸಂಗತಿ ಬಟಾಟೆ! ಮದ್ಮಾಯನ ಮದುವೆ ಅಂಗಿ ಮನೆಲೇ ಬಾಕಿ! ಮನೆಗೆ ಹೋಗಿ ತಪ್ಪಲೆ ಸಮಯ ಇಲ್ಲೆ. ಹಾಂಗಾಗಿ ಪೇಟೆಗೆ ಹೋಗಿ ಒಂದು ರೆಡೀಮೇಡ್ ಅಂಗಿ ತೆಕ್ಕೊಂಡು ಬಂದು ಡ್ರೆಸಿಂಗ್ ಮಾಡಿದವು. ಅಂತೂ ಮದುವೆ ಕಳುದತ್ತು.

2. ಒಂದು ಉಪ್ನಾನದ ಮನೆ. ಜಾಲಿಂಗೆ ದೊಡ್ಡ ಚಪ್ಪರ ಹಾಕಿದ್ದವು. ಚಪ್ಪರದ ನಡೂಕೆ ಮೇಲ್ಕಾಪು ಕಟ್ಟಿದ್ದವು. ಅದರಿಂದ ರಜ್ಜ ದೂರಲ್ಲಿ ಒಂದು ತೋಟಕ್ಕೆ ಮದ್ದು ಬಿಡ್ಳೆ ಉಪಯೋಗಿಸುತ್ತ ಹಾಂಗಿಪ್ಪ ಬ್ಯಾರೆಲ್ ಕವುಂಚಿ ಹಾಕಿ ಚೆಂದಕ್ಕೆ ಹೊದಕ್ಕೆ ಹಾಕಿ ಮುಚ್ಚಿದ್ದವು. ಇದು ಎಂತ ಸಂಗತಿ ಅರ್ಥ ಆಯಿದಿಲ್ಲೆ ಎನಗೆ. ಉಪ್ನಾನ ಮುಹೂರ್ತಂದ ರಜ್ಜ ಮದಲು ಅದರ ಮೇಲೆ ನೀರು ತುಂಬುಸಿದ ಉರುಳಿ ಮಡುಗಿ ಹೂಗು ಎಲ್ಲ ಹಾಕಿ ’ಉರುಳಿಕ್ಕಳಂ’ ತಯಾರು ಮಾಡಿದವು. ಅದರಲ್ಲಿ ಹಣತೆಯೂ ಹೊತ್ತುಸಿ ಮಡುಗಿದವು. ಒಳ್ಳೆ ಚೆಂದ ಕಂಡೊಂಡಿದ್ದತ್ತು. ಅದಾ, ಅರ್ಧ ಗಂಟೆಯೂ ಕಳುದಿರ, ಒಬ್ಬ ಬಿಂಗಿ ಮಾಣಿ ಬಂದು ಉರುಳಿಯ ನೀರಿಂಗೆ ಕೈ ಹಾಕಿದ°! ಹಣತೆಗೊ ನೀರಿಲ್ಲಿ ಮುಂಗಿತ್ತು.

ಆದರೆ ಈ ಬ್ಯಾರೆಲ್ ಕವುಂಚಿ ಹಾಕಿದ್ದರ ರಹಸ್ಯ ಗೊಂತಾದ್ದದು ಮತ್ತೆ ಆ ಮನೆಗೆ ಆಲ್ಬಮ್ ಕೊಡ್ಲೆ ಹೋದಪ್ಪಗಳೇ. ಅಲ್ಲಿ ನೆಡೂ ಜಾಲಿಲ್ಲಿ ‍ಬೋರ್ ವೆಲ್ ಹಾಕಿದ್ದವು. ಅದರ ಪೈಪ್ ಇತ್ಯಾದಿ ಕಾಣ್ತದಕ್ಕೆ ಬೇಕಾಗಿ ಹಾಂಗೆ ಉರುಳಿಕ್ಕಳಂ ಮಾಡಿದ್ದದು!

3. ಇದು ಕುಶಾಲಿನ ಘಟನೆ ಅಲ್ಲ. ಮಂಗ್ಳೂರಿನ ವಿಮಾನ ನಿಲ್ದಾಣಕ್ಕೆ ಹತ್ರೆ ಇಪ್ಪ ಒಂದು ದೇವಸ್ಥಾನಲ್ಲಿ ಮದುವೆ. ಮದುವೆ ಕಾರ್ಯಕ್ರಮಂಗೊ ಎಲ್ಲ ಹೆಚ್ಚಿನದ್ದು ಮುಗುದತ್ತು. ಹೆಮ್ಮಕ್ಕೊ ಎಲ್ಲ ಸೇರಿಯೊಂಡು ಶೋಭಾನೆ ಪದ್ಯ ಹೇಳ್ತಾ ಇದ್ದಿದ್ದವು. ಮದ್ಮಾಳಿನ ಅಬ್ಬೆಯೂ ಅವರೊಟ್ಟಿಂಗೆ ಸೇರಿಯೊಂಡತ್ತು. ವೇದಿಕೆ ತುಂಬ ಇಕ್ಕಟ್ಟಿನದ್ದು. ಕಬ್ಬಿಣದ ಪಟ್ಟಿಗಳ ಜೋಡುಸಿ ಅದರ ಮೇಲೆ ಮರದ ಹಲಗೆ ಹಾಕಿ ಮಾಡಿದ್ದದು. ಅದರ ಮೇಲೆ ಅತ್ತಿತ್ತೆ ಹೋಪಗ ದಡಬಡ ಆಗಿಯೊಂಡು ಇದ್ದತ್ತು. ಮದ್ಮಾಳ ಅಬ್ಬೆ ಕೂದೊಂಡಿತ್ತಿದ್ದದು ಅಲ್ಲಿಗೇ ಸೊಂಟ ಸರಿ ಮಾಡಿಯೊಂಬಲೆ ರಜ್ಜ ಅಲುಗಾಡಿತ್ತು, ಅಷ್ಟೇ. ಧಡಕ್ಕನೆ ವೇದಿಕೆ ಮೇಲಂದ ಕೆಳಾಂಗೆ ಬಿದ್ದತ್ತು. ತಲೆಗೆ ರಜ್ಜ ಪೆಟ್ಟಾದ್ದದು ಬಿಟ್ರೆ ಬೇರೆಂತ ಆಯಿದಿಲ್ಲೆ ಪುಣ್ಯಕ್ಕೆ. ಆ ವೇದಿಕೆಯ ಕರೆಂಗೆ ವಸ್ತ್ರ ಕಟಿದ್ದದು ಬಿಟ್ರೆ ಬೇರೆಂತ ತಡೆಯೂ ಇತ್ತಿದ್ದಿಲ್ಲೆ. ಅದುವೇ ಹಾಂಗಪ್ಪಲೆ ಕಾರಣ. ಆನು ವೀಡ್ಯ ತೆಗವಲೆ ಹೋದವಂಗೂ ಎರಡು ಸರ್ತಿ ಕಾಲು ಅಡಿ ತಪ್ಪಿದ ಹಾಂಗೆ ಆಯಿದು.

4. ಶಿವಳ್ಳಿ ಭಟ್ಟಕ್ಕಳ ಮನೆಲಿ ಷಷ್ಟ್ಯಬ್ಧ ಪೂರ್ತಿ ಸಮಾರಂಭ. ಆನು ವಿಡಿಯೋ ತೆಗವಲೆ ಹೋದವನತ್ರೆ ’ನೀವು ಪ್ಯಾಂಟ್ ಹಾಕಿಕೊಂಡು ದೇವರಕೋಣೆಗೆ ಹೋಗುವ ಹಾಗಿಲ್ಲ. ದಯವಿಟ್ಟು ವೇಷ್ಟಿ ಧರಿಸಿ’ ಹೇಳಿದವು. ಎನಗೆ ಆ ಬಗ್ಗೆ ಮದಲೇ ಸಂಶಯ ಇತ್ತಿದ್ದ ಕಾರಣ ವೇಷ್ಟಿ ಒಟ್ಟಿಂಗೇ ತೆಕ್ಕೊಂಡು ಹೋಗಿತ್ತಿದ್ದೆ. ವಸ್ತ್ರ ಸುತ್ತಿಯೊಂಡು ವಿಡಿಯೋ ತೆಗವಲೆ ಭಾರೀ ಕಷ್ಟ. ಆದರೂ ಹೇಂಗೆಲ್ಲ ಕಸರತ್ತು ಮಾಡಿಯೊಂಡಿತ್ತಿದ್ದೆ. ಒಳ ಕಾರ್ಯಕ್ರಮ ಶುರು ಆತು. ಭಾರೀ ಗಡದ್ದಿಲಿ ಮಂತ್ರ ಹೇಳ್ತಾ ಇತ್ತಿದ್ದವು ಪುರೋಹಿತರು, “ಮಾರ್ಕಂಡೇಯ ಮಹಾಭಾಗ….” ಹೇಳಿ. ಎನಗೆ ಅಷ್ಟಪ್ಪಗ ಅದೇ ಪುರೋಹಿತರ ಕೈ ಮೇಲೆ ಗಮನ ಹೋತು. ಅವು ಚೆಂದಕೆ ಎಡಕೈಲಿ ಕಾಲಿನ ನೊರಪ್ಪುತ್ತಾ ಇದ್ದವು! (ಪಟ ನೋಡಿ). ಶುದ್ಧ ಶುದ್ಧ ಹೇಳಿಯೊಂಡು ಪ್ಯಾಂಟ್ ಹಾಕಲೆ ಬಿಡವು. ಆದರೆ ಕಾಲು ನೊರಪ್ಪಿದ ಕೈಲಿ ಪೂಜೆ ಮಾಡ್ಲಕ್ಕು, ತೀರ್ಥ ಪ್ರಸಾದ ಕೊಡ್ಲಕ್ಕು! ಹೀಂಗೆ ಮಾಡ್ತ ಜೆನಂಗೊ ಕೆಲವು ದೇವಸ್ಥಾನಂಗಳಲ್ಲಿಯೂ ಪ್ರಸಾದ ಕೊಡ್ಲೆ ಕೂರ್ತವು. ಗಂಧ ತೆಗದು ಕೊಡುವದು ತಟ್ಟೆಂದಲೋ, ಕಾಲಿಂದಲೋ ಹೇಳಿ ಸಂಶಯ!

ಕೆಲವು ಒಳ್ಳೊಳ್ಳೆ ಸ್ವಾರಸ್ಯಕರವಾದ ಘಟನೆಗೊ ಇದ್ದು. ಈಗ ಪಕ್ಕನೆ ನೆಂಪಾವುತ್ತಿಲ್ಲೆ. ಮುಂದೆ ನೆನಪಪ್ಪಗ ಬರೆತ್ತೆ.

ವಸಂತರಾಜ್ ಹಳೆಮನೆ

   

You may also like...

30 Responses

 1. ಕಳಾಯಿ ಗೀತತ್ತೆ says:

  ಲಾಯಕ ಆಯ್ದು …ಎಲ್ಲಾರೂ ಹೀಂಗಿಪ್ಪದರ ಹಂಚಿಗೊಂಡರೆ ಒಳ್ಳೆ ಗಮ್ಮತ್ತು ಓದ್ಲೇ ..

  • ವಸಂತರಾಜ್ ಹಳೆಮನೆ says:

   ಕಳಾಯಿ ಅತ್ತೆಗೆ ಧನ್ಯವಾದಂಗೊ.

 2. ಶುದ್ದಿ ಹೇಳಿದ್ದು ಲಾಯಿಕ ಆಯಿದು..ಮದುವೆ ಮನೆಲಿ ನಡವ ಸ್ವಾರಸ್ಯಂಗಳ Photographer ಗೊಕ್ಕೆ ದಾಖಲೆ ಮಾಡಿಗೊಂಬಲೆ ಬಾರೀ ಸುಲಭ ಇರುತ್ತು ಇನ್ನೂ ಹೀಂಗಿಪ್ಪ ಶುದ್ದಿಗ ಬರಲಿ…ಒಂದು ಒಪ್ಪ..ಅಳಿಯೋ..

 3. ಬೊಳುಂಬು ಮಾವ says:

  ವಸಂತರಾಜನ ಕೆಮರಾದ ಹಿಂದಾಣ ಸ್ವಾರಸ್ಯಕರ ಅನುಭವಂಗೊ ಲಾಯಕಿತ್ತು. ಈಗಾಣ ಡಿಜಿಟಲ್ ಫೊಟೊ ಯುಗಲ್ಲಿ, ಹೀಂಗಿಪ್ಪ ಸ್ವಾರಸ್ಯಕರ ಪಟಂಗಳ ಹಿಡುದು ಮಡಗಲೆ ಸುಲಭ . ಆಲ್ಬಂಲ್ಲಿ ಹಾಕಲೆ ಎಡಿಯದ್ದ ಹಾಂಗಿಪ್ಪ unedited ಫೊಟೋಂಗಳನ್ನೆ ಸೇರುಸಿದರೆ ಒಳ್ಳೆ ತಮಾಷೆ ವಸ್ತುಗೊ ಸಿಕ್ಕುಗು. ಬರಳಿ, ಇನ್ನುದೆ ಬರಳಿ ಹೀಂಗಿಪ್ಪ ಅನುಭವ ಸರಣಿ.

  • ವಸಂತರಾಜ್ ಹಳೆಮನೆ says:

   ಫೊಟೋ ಹಾಕಿ ಬರವಗ ಜಾಗ್ರತೆ ಮಾಡದ್ದರೆ ಅದರಲ್ಲಿಪ್ಪ ವ್ಯಕ್ತಿಗಳದ್ದು ಆಕ್ಷೇಪ ಬಪ್ಪಲೂ ಸಾಕು. ಬರವಣಿಗೆ ಮಾಂತ್ರ ಆದರೆ ವ್ಯಕ್ತಿಗತ ವಿವರ ಕೊಡದ್ದೆ ಬರವಲೆ ಆವುತ್ತು. ಆದರೂ ಸಂದರ್ಭ ನೋಡ್ಯೊಂಡು ಫೊಟೋ ಹಾಕಲೆಡಿತ್ತರೆ ಹಾಕುತ್ತೆ.

 4. ಗಣೇಶ ಮಾವ° says:

  ಹಾಸ್ಯಪೂರಿತ ಶುದ್ಧಿ ಲಾಯಿಕ ಆಯಿದು.ಧನ್ಯವಾದ.

 5. ಸುಭಗ says:

  ಒಳ್ಳೆ ಶುದ್ದಿ.ಅಭಿನಂದನೆಗೊ.
  ಉರುಳಿಕ್ಕಳ ಮಾಡಿ ಬೋರ್ ವೆಲ್ ಹುಗ್ಗುಸಿದವನ ತಲಗೆ ಕೊಡೆಕು!

 6. ವಸಂತರಾಜ್ ಹಳೆಮನೆ says:

  ಒಪ್ಪ ಕೊಟ್ಟು ಪ್ರೋತ್ಸಾಹ ಮಾಡಿದ ಎಲ್ಲರಿಂಗೂ ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *