ಮದುವೆ ಸೀಸನ್ನಿನ ಸ್ವಾರಸ್ಯಂಗೊ… #2

July 24, 2011 ರ 8:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿಲ್ಲಿ 998 ಶುದ್ಧಿಗೊ ಆತಡ. ಈಗ ಆನು ಹಾಕುತ್ತ ಶುದ್ದಿ 999ನೇದೋ ಅಲ್ಲ 1000ನೇ ಶುದ್ದಿಯೋ ಹೇಳಿ ಕುತೂಹಲ ಆವುತ್ತು.

ಜಂಬ್ರಂಗಳ ಶುದ್ದಿ ಹೇಳುವಗ ಎನಗೆ ಹಳೇ ಸಂಗತಿ ಒಂದು ನೆನಪಾತು. ಒಬ್ಬ ಅಡಿಗೆಯವ° ಇತ್ತಿದ್ದ° (ಈಗಳೂ ಇದ್ದ°, ಅಡಿಗೆಗೆ ಹೋಪದು ಕಮ್ಮಿ ಅಷ್ಟೆ). ಅವನತ್ರೆ 100 ಜನಕ್ಕೆ ಪಟ್ಟಿ ಮಾಡುಸಿರೆ 300 ಜನಕ್ಕೆ ಅಡಿಗೆ ಮಾಡ್ಲೆಡಿಗು. ಅದು ಅಲ್ಲ ವಿಷಯ, ಜಂಬ್ರದ ದಿನ ಒಂದಾರಿ ಆರನ್ನಾರು ಪೇಟೆಗೆ ಕಳುಸಿ ಎಂತಾರು ಒಂದು ಸಾಮಾನು ತಪ್ಪಲೆ ಹೇಳದ್ರೆ ಅವಂಗೆ ಸಮಾಧಾನ ಇಲ್ಲೆ!

1.  ಇದು ಜಂಬ್ರಕ್ಕೆ ಸಂಬಂಧಿಸಿದ ಶುದ್ದಿ ಅಲ್ಲ. ಆದರೂ ನೆಂಪಾದ ಕಾರಣ ಬರೆತ್ತಾ ಇದ್ದೆ. ಕೆಲವೊಂದು ಸನ್ನಿವೇಶಂಗಳಲ್ಲಿ ಪಟ ತೆಗವವು ಎಷ್ಟು ಜಾಗ್ರತೆ ಮಾಡಿರೂ ಸಾಕಾವುತ್ತಿಲ್ಲೆ. ಕಳುದ ಫೆಬ್ರವರಿಲಿ ಆನು ಮಂಗಳೂರಿನ ಪಿಲಿಕುಳಲ್ಲಿ ನೆಡದ ಕಂಬಳ ನೋಡ್ಲೆ ಹೋಗಿತ್ತಿದ್ದೆ. ಆ ಕಂಬಳದ ಆಯೋಜಕರು ಭಾರೀ ಪ್ರಚಾರ ಕೊಟ್ಟ ಕಾರಣ ಭಾರೀ ಹೇಳ್ತ ಪ್ರಮಾಣಲ್ಲಿ ಛಾಯಾಗ್ರಾಹಕರು ಸೇರಿತ್ತಿದ್ದವು. ಕರ್ನಾಟಕದ ಸುಮಾರು ಕಡೆಂದ ಕನ್ನಡದವೇ ಸುಮಾರು ಜೆನ ಇತ್ತಿದ್ದವು. ಅಲ್ಲದ್ದೆ ಕೇರಳದ ಕಾಸರಗೋಡು, ಕಣ್ಣನ್ನೂರು ಅಲ್ಲದ್ದೆ ಕೊಚ್ಚಿಂದ ಕೂಡ ಬಯಿಂದವು ಪಟ ತೆಗವಲೆ. ಅಂತಾರಾಷ್ಟ್ರೀಯ ಮಟ್ಟಲ್ಲಿ ಕೂಡ ಕಂಬಳವ ಪ್ರಸಿದ್ಧ ಮಾಡ್ತ ಹಾಂಗೆ ವಿದೇಶಂದ ಬಂದ ಕೆಲವು ಜೆನ ಛಾಯಾಗ್ರಾಹಕರೂ ಇತ್ತಿದ್ದವು. ಅವು ಬಪ್ಪಗ ಲಕ್ಷಗಟ್ಟಲೆ ಮೌಲ್ಯದ ಪಟ, ವಿಡಿಯೋ ಕೆಮರ ತೆಕ್ಕೊಂಡು ಬಯಿಂದವು.

ಕಂಬಳ ನೆಡೆತ್ತಾ ಇದ್ದತ್ತು. ಈ ವಿದೇಶಂದ ಬಂದದರ್ಲಿ ಒಂದು ಛಾಯಾಗ್ರಾಹಕ ದಂಪತಿ ಅಲ್ಲಿ ಕಂಬಳದ ಕರೆಯ ಅತೀ ಹತ್ರೆ ನಿಂದುಗೊಂಡು ವಿಡಿಯೋ, ಪಟ ತೆಗಕ್ಕೊಂಡು ಇತ್ತಿದ್ದವು.  ಕಂಬಳಲ್ಲಿ ಓಡಿಯೊಂಡು ಬಂದ ಒಂದು ಗೋಣಂಗಳ ಜೋಡಿ ಈ ಪಟ ತೆಗೆತ್ತವರ ಕಂಡು ಪೆರ್ಚಿ ಕಟ್ಟಿತ್ತು ಕಾಣ್ತು. ಕರೆಂದ ಮೇಲೆ ಹತ್ತಿ ಬಂದು ಇವರ ಹಿಂದಂದ ಕುಟ್ಟಲೆ ಬಂತು. ಅಷ್ಟಪ್ಪಗ ಪುಣ್ಯಕ್ಕೆ ಬೇರೆ ಆರೋ ಬೊಬ್ಬೆ ಹಾಕಿದ ಕಾರಣ ಅವು ತಪ್ಪಿಸಿಯೊಂಡವು.

2. ಒಬ್ಬ ವಿಡಿಯೋಗ್ರಾಫರ್ ನ ತಂಗೆಯ ಮದುವೆ ನಿಶ್ಚಯ. ಅವಂಗೆ ಕೆಲಸ ಇರ್ತ ಕಾರಣ ಆನು ವಿಡಿಯೋ ತೆಗವಲೆ ಹೋದೆ. ಅದು ಮಧ್ಯಾಹ್ನ ಮೇಲೆ. (ಕೋಟ, ಶಿವಳ್ಳಿ ಬ್ರಾಹ್ಮಣರಲ್ಲಿ ಊಟ ನಿಶ್ಚಿತಾರ್ಥ, ಕಾಫಿ ನಿಶ್ಚಿತಾರ್ಥ ಹೇಳಿ ಇದ್ದು. ಮಧ್ಯಾಹ್ನದ ಮದಲು ಮಾಡ್ತರೆ ಬದ್ಧ ಕಳುದು ಊಟ, ಮಧ್ಯಾಹ್ನದ ಮೇಲೆ ಮಾಡ್ತರೆ ಕಾಫಿ ಆಗಿ ಬದ್ಧ). ಹುಡುಗನ ಕಡೆಯವು ಬಂದವು. ಕಾಫಿ ಕುಡಿವಲೆ ಕೂದವು. ಒಟ್ಟಿಂಗೆ ಆನು ಕೂಡ. ಸೇಮಗೆ ಉಸುಳಿ, ಪೂರಿ, ಸಮೋಸ, ಮೈಸೂರು ಪಾಕು, ಲಾಡು, ಮಾಲ್ಪುರಿ, ಸಾಟು, ಇಡ್ಲಿ (ಅದಕ್ಕೆ ಕೂಟಿಂಗೆ ಚಟ್ನಿ, ಮೇಲಾರ, ಮೊಸರು!), ಚಿತ್ರಾನ್ನ, ಕಾಫಿ, ಚಾಯ, ಕಷಾಯ….! ಲಿಸ್ಟ್ ಲ್ಲಿ ಎಂತದೋ ಬಾಕಿ ಆಯಿದು ಹೇಳ್ತ ಸಂಶಯ ಇದ್ದು ಎನಗೆ. ಮದುವೆ ನಿಶ್ಚಯಕ್ಕೇ ನಾಲ್ಕು ಬಗೆ ಸ್ವೀಟು! ಅಂಬಗ ಮದುವೆಗೆ ಎಷ್ಟು ಮಾಡಿಕ್ಕು? ಉಮ್ಮಪ್ಪ… ಆ ಮದುವೆಗೆ ಎನಗೆ ಹೋಪಲೆ ಆಯಿದಿಲ್ಲೆ.

3. ಮದುವೆ ಕಾರ್ಯಕ್ರಮ ಕಳುದು ಊಟಕ್ಕೆ ಏರ್ಪಾಡು ಆಗಿಯೊಂಡಿದ್ದತ್ತು. ಜೆನ ಹೆಚ್ಚು ಸೇರದ್ದ ಕಾರಣ ಎನಗೆ ಕೆಲಸ ರಜ್ಜ ಕಮ್ಮಿ ಆತು. ಹಾಂಗೆ ಅಡಿಗೆ ಮಾಡ್ತದರ ಶೂಟಿಂಗ್ ಮಾಡ್ತೆ ಹೇಳಿಯೊಂಡು ಪಾಕಶಾಲೆಗೆ ಹೋದೆ. ಅಲ್ಲಿ ಹಪ್ಪಳ ಹೊರಿವಲೆ ಬಾಣಲೆ ಮಡುಗಿದ್ದವು. ಪ್ಯಾಕೆಟ್ ಎಣ್ಣೆಯ ಬಿಡುಸುಲೆ ಅಡಿಗೆಯವರತ್ರೆ ಬಹಳ ಸುಲಭದ ಉಪಾಯ ಕಂಡತ್ತು. ಕಾದ ಬಾಣಲೆಗೆ ಎಣ್ಣೆ ಪ್ಯಾಕೆಟಿನ ಒಂದು ಕರೆಯ ತಾಗುಸುದು! ಪ್ಲಾಸ್ಟಿಕ್ ಕರಗಿ ಎಣ್ಣೆ ಸೀದ ಬಾಣಲೆಗೆ! ಹಪ್ಪಳದ ಒಟ್ಟಿಂಗೆ ಪ್ಲಾಸ್ಟಿಕ್ ಕೂಡ ಉಣ್ತವರ ಹೊಟ್ಟೆಗೆ ಸೇರುತ್ತು ಹೇಳುದು ಆ ಅಡಿಗೆಯವಕ್ಕೆ ಸಂಗತಿ ಅಲ್ಲ! ಕಣ್ಣಾರೆ ಕಂಡ ಮೇಲೆ ಹಪ್ಪಳ ತಿಂಬಲೆ ಮನಸ್ಸು ಬಕ್ಕೋ?

4. ಬೊಳುಂಬು ಗೋಪಾಲ ಮಾವನೊಟ್ಟಿಂಗೆ ಮೊನ್ನೆ ಒಂದು ಮದುವೆ ವಿಡಿಯೋಕ್ಕೆ ಹೋಗಿತ್ತಿದ್ದೆ (ಮಾವ ಪಟ ತೆಗವಲೆ). ಮದುವೆ ಎಲ್ಲ ಮುಗುದ ಮೇಲೆ ಆರತಿ ಇದ್ದಲ್ಲದೋ? ಆರತಿ ಎತ್ತಲೆ ಬಂದ ಹೆಮ್ಮಕ್ಕೊ ಆರತಿ ಎತ್ತಿದ್ದು ಮಾಂತ್ರ ಉಲ್ಟಾ! ವಿಡಿಯೋ ತೆಗೆತ್ತ ಎನಗೆ ಅದು ಪಕ್ಕ ಗೊಂತಾತು. ಆದರೆ ಅಲ್ಲಿ ಹೇಳಲೆ ಎಡಿತ್ತಿಲ್ಲೆ. ಮದ್ಮಾಳ ಅಬ್ಬೆ-ಅಪ್ಪಂಗೆ ಆರತಿ ಮಾಡುವಗ ಭಟ್ರಿಂಗೆ ಗೊಂತಾಗಿ ಅವು ಸರಿ ಮಾಡ್ಲೆ ಹೇಳಿದವು. ಆದರೆ ವಧೂವರರಿಂಗೆ ಮಾಡಿದ ಆರತಿ ಉಲ್ಟಾ ಆಗಿಯೇ ರೆಕಾರ್ಡ್ ಆಗಿದ್ದತ್ತು. ಆನು ಮಾವನತ್ರೆ ಹೇಳಿದೆ ವಿಷಯವ. ಅಂಬಗ ಅದರ ಎಂತ ಮಾಡುದು? ಎಡಿಟಿಂಗ್ ಮಾಡುವಗ ಅಷ್ಟು ಕ್ಲಿಪಿಂಗ್ ನ ಉಲ್ಟಾ ಓಡುಸಿದೆ! ಎನ್ನ ಪುಣ್ಯಕ್ಕೆ ಅದರಲ್ಲಿ ಬೇರೆ ಆರದ್ದೂ ಚಲನೆ ಇದ್ದತ್ತಿಲ್ಲೆ.

5. ಕೆಲವು ವರ್ಷ ಮೊದಲು ಒಂದು ಉಪನಯನಕ್ಕೆ ಹರೀಶಣ್ಣನೂ ಅನೂ ಹೋಗಿತ್ತಿದ್ದೆಯೊ°. ಪಟ, ವಿಡಿಯೋ ಎರಡೂ ಇದ್ದತ್ತು. ಭಾರೀ ಗಡದ್ದಿನ ಉಪನಯನ. ಉಪ್ನಾನದ ಮಾಣಿಯ ಅಪ್ಪ° ನೇಪಾಳದ ಪ್ರಸಿದ್ಧ ದೇವಸ್ಥಾನಲ್ಲಿ ಅರ್ಚಕ. ಮುಹೂರ್ತದ ಹೊತ್ತಿಂಗೆ ಎಲ್ಲರಿಂಗೂ ಗೋಪಿ ತುಂಡು, ಜನಿವಾರ, ಮುಹೂರ್ತ ದಕ್ಷಿಣೆ ಕೊಟ್ಟೋಂಡು ಬಂದವು. ವಿಶೇಷ ಎಂತರ ಹೇಳಿರೆ ಅದರೊಟ್ಟಿಂಗೆ ಲಕ್ಷ್ಮಿಯ ಚಿತ್ರ ಇಪ್ಪ ಬೆಳ್ಳಿಯ ನಾಣ್ಯ ಕೂಡ ಇದ್ದತ್ತು! ಎಲ್ಲರಿಂಗೆ ಕೊಟ್ರೂ ಎಂಗೊ ಇಬ್ರಲ್ಲಿ ಆರಿಂಗೂ ಸಿಕ್ಕಿದ್ದಿಲ್ಲೆ. ಅದು ವಿಷಯ ಅಲ್ಲ, ಉಪ್ನಾನ ಭಾರೀ ಗೌಜಿಲಿ ಕಳಾತು. ಊಟವೂ ಹಾಂಗೆ. ಎಷ್ಟು ಬಗೆ ಮಾಡಿದ್ದವು ಹೇಳಿರೆ ಪಟ್ಟಿ ಮಾಡಿ ಬೊಡಿಗು. ಊಟದ ಮೇಲಂದ ಪ್ಯಾಕೆಟ್ ಸ್ವೀಟ್ ಹಂಚಿದವು, ಮನೆಗೆ ಕೊಂಡೋಪಲೆ. ಅದರ ಎಡೆಲಿ ಕಲ್ಲಡ್ಕದ ಗೊಂಬೆಗಳ ಡ್ಯಾನ್ಸ್ ಕೂಡ! ಆತು ಕಾರ್ಯಕ್ರಮ ಎಲ್ಲ ಮುಗುದು ಎಂಗೊ ಹೆರಡ್ಲಪ್ಪಗ ಮಾಣಿಯ ಅಪ್ಪ° “ನಿಲ್ಲಿ, ನಿಂಗಳತ್ರೆ ಮಾತಾಡಿ ಆಯಿದಿಲ್ಲೆ, ಈಗ ಬಂದೆ” ಹೇಳಿ ಒಳ ಹೋದವು. ವಾಪಾಸ್ ಬಂದು ಮುಹೂರ್ತಕ್ಕೆ ಕೊಟ್ಟ ಗೋಪಿ, ಜನಿವಾರ, ಬೆಳ್ಳಿ ನಾಣ್ಯ ಕೊಟ್ಟಿಕ್ಕಿ “ನಿಂಗೊಗೆ ಆನೇ ಕೊಡೆಕು ಹೇಳಿ ಗ್ರೇಶಿತ್ತಿದ್ದೆ. ಆಗ ಮುಹೂರ್ತದ ಅರ್ಜೆಂಟಿಲ್ಲಿ ಬೇರೆಯವರತ್ರೆ ಕೊಡ್ಲೆ ಹೇಳಿದೆ. ನಿಂಗೊ ಇಡೀ ಕಾರ್ಯಕ್ರಮವ ಚಿತ್ರಣ ಮಾಡ್ಲೆ ಬಂದವರ ಆನು ಮಾತಾಡುಸದ್ದರೆ ಹೇಂಗೆ? ಆಗ ಕೊಡದ್ದಕ್ಕೆ ಬೇಜಾರು ಮಾಡೆಡಿ” ಹೇಳಿದವು. ಅಲ್ಲದ್ರೂ ಪಟ ತೆಗೆತ್ತವಕ್ಕೆ ಮುಹೂರ್ತ ದಕ್ಷಿಣೆ ಆರೂ ಕೊಡ್ತವಿಲ್ಲೆ. ಈಗಂತೂ ಮುಹೂರ್ತ ದಕ್ಷಿಣೆ ಹೇಳಿರೆ ಭಟ್ರಿಂಗೂ, ಗುರಿಕ್ಕಾರ್ರಿಂಗೂ ಕೊಟ್ರೆ ಮುಗಾತು.

ಮದುವೆ ಸೀಸನ್ನಿನ ಸ್ವಾರಸ್ಯಂಗೊ… #2, 4.6 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಅದ್ವೈತ ಕೀಟ
  ಅದ್ವೈತ ಕೀಟ

  ಜೆಂಬ್ರದ ಸೀಸನ್ನಿಲಿ ಪಟ/ವೀಡ್ಯ ತೆಗವರ ಅನುಭವಂಗ ತುಂಬಾ ರೋಚಕವಾಗಿರ್ತು. ಆನೂ ಸಣ್ಣಾದಿಪ್ಪಗ ಒಂದೆರಡು ಜೆಂಬ್ರಲ್ಲಿ ವೀಡ್ಯ ಮಾಡಿದ್ದೆ. ಸ್ಲೀವ್ ಹಿಡಿವಲೂ ಹೋಗಿತ್ತಿದ್ದೆ ನೈತ್ತಡ್ಕ ಭಾವನೊಟ್ಟಿಂಗೆ. ಮಕ್ಕಳ ಉಪದ್ರ ಇರ್ತು ಕೆಲವು ಕಡೆಲಿ, ಅವು ಬಂದು ಬಂದು ಎದುರಿಂಗೇ ನಿಂಬದು. ಪಟ ಬರ್ಲಿ ಹೇಳಿ. ಹಾಂಗೇ ನಮ್ಮ ಒಪ್ಪಣ್ಣನ ನೆರೆಕರೆ ಉಪ್ರಂಗಡಿಲಿ ಒಬ್ಬ ಮಡಕುಳ್ಳಾಯ ಹೇಳಿ ಇದ್ದವು. ತುಂಬಾ ಗಿಡ್ಡ ಅವು. ಅವು ಪಟ ತೆಗವದು ತುಂಬಾ ಮಜಾ ಇರ್ತು. ಕಣ್ಣಿನತ್ರ ಕೆಮರಾ ಹಿಡುದು ಫೋಕಸ್ ಮಾಡಿ ಮೇಲೆ ನೆಗ್ಗಿ ಹಿಡುದು ’ಕ್ಲಿಕ್’. ಕೆಲವು ಸರ್ತಿ ಕುರ್ಶಿ ಮಡಗಿ , ಮೇಜು ಮಡಗಿ ಹತ್ತಿ ನಿಂದು ಪಟ ತೆಗವದು. ಆದರೆ ಸ್ಕಿಲ್ ಮಾತ್ರ ಎಕ್ಸಲೆಂಟ್. ಹಾ… ಒಳುದ್ದರ ಮತ್ತೆ ಬರೆತ್ತೆ. ಒಂದು ರಜಾ ರೆಫರೆಂಸ್ ಬಾಕಿ ಇದ್ದು. ನಾಳೆ ಒಂದು ಹೇರೆಂಗಿ ಇದ್ದಿದಾ…..

  [Reply]

  ವಸಂತರಾಜ್ ಹಳೆಮನೆ Reply:

  ಈ ನಿಂಗಳ ಹೆಸರಿನ ‘Decode’ ಮಾಡ್ಲೆ ಎನಗೆ ರಜ್ಜ ಸಮಯ ಹಿಡುದತ್ತಿದಾ. ಏನೇ ಆಗಲಿ, ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಜೆಂಬ್ರಂಗಳಲ್ಲಿ ನಮ್ಮ ಕಣ್ಣಿಂಗೆ ಕಾಣದ್ದ, ಕೆಮರ, ಕೆಮರದವರ ಕಣ್ಣಿಂಗೆ ಕಂಡ ಹಲವು ವಿಷಯಂಗೊ ತಮಾಷೆ ಕಂಡರೂ, ಯೇವುದರ ಹೇಂಗೆ ತೋರ್ಸೆಕ್ಕು ಹೇಳ್ತ ಜವಾಬ್ದಾರಿಯುತ ಕೆಲಸ ವೀಢ್ಯದವರದ್ದು – ಇದರ ನಿಂಗಳ ಕತೆಲಿ ಸೂಕ್ಶ್ಮಲ್ಲಿ ವಿವರಿಸಿದ್ದಿ, ಅಭಿನಂದನೆಗೊ.

  [Reply]

  ವಸಂತರಾಜ್ ಹಳೆಮನೆ Reply:

  ಧನ್ಯವಾದಂಗೊ ಕುಮಾರಣ್ಣ.

  [Reply]

  VN:F [1.9.22_1171]
  Rating: 0 (from 0 votes)
 3. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ವಸಂತಣ್ಣನ ಈ ಅನುಭವ ಲೇಖನ ಲಾಯ್ಕಾಯ್ದು.
  ಎಣ್ಣೆ ಪ್ಯಾಕೆಟ್ ಬಿಡುಸಿದ ಸಂಗತಿ ಓದ್ಯಪ್ಪಗ ಎನಗೊಂದು ಘಟನೆ ನೆಂಪಾತು. ಆನೂ ಒಂದರಿ ಅಡಿಗೆಕೊಟ್ಟಗ್ಗೆ ಪಟ ತೆಗವಾಳಿ ಹೋಗಿತ್ತಿದ್ದೆ. ಅಲ್ಲಿ ಹಾಲುಕಾಸುವ ರೀತಿ ನೋಡಿ ಆಶ್ಚರ್ಯ ಆತು. ಅದು ದನದ ಹಾಲು ಸಿಕ್ಕದ್ದ ಪೇಟೆಮನೆ, ಹಾಂಗೆ ತೊಟ್ಟೆ ಹಾಲೇ ಇದ್ದದು. ಒಂದು ಪಾತ್ರಲ್ಲಿ ನೀರು ಕೊದುಕ್ಕೊಂಡಿತ್ತು. ಅದಕ್ಕೆ ಎರಡು ಮೂರು ಹಾಲಿನ ಪ್ಯಾಕೆಟ್ ಗಳ ಹಾಂಗೇ ಹಾಕಿದವು. ಹಾಲು ಅಲ್ಲಿಗೇ ಕಾಯ್ತಡ. ರಪಕ್ಕನೆ ಕಾಯ್ತು, ಒಗ್ಗುವ ಮಂಡೆಬೆಶಿ ಇಲ್ಲೆ. ಪ್ಲಾಸ್ಟಿಕ್ ಕರಗುತ್ತಿಲ್ಯೊ ಕೇಳಿರೆ, “ಎಂ…ತಾವ್ತಿಲ್ಲೆ” ಹೇಳಿ ಭಾರೀ ಭರವಸೆಲಿ ಹೇಳಿದವು!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಹ್ಮ್ಮ್ಮ್… ಸುಬ್ರಹ್ಮಣ್ಯ ವೇದಪಾಠಶಾಲೆಯ ಭಟ್ರೂ ಹಾಂಗೆ ಮಾಡಿಗೊಂಡಿತ್ತಿದ್ದದು:):):):)

  [Reply]

  ಅದ್ವೈತ ಕೀಟ

  ಅದ್ವೈತ ಕೀಟ Reply:

  ಇಲ್ಲೆ ಮಕ್ಕಳೇ…. ಹಾಲಿನ ಪೆಕೇಟಿನ ವಿಶಯಲ್ಲಿ ರೆಜಾ ವೆತ್ಯಾಸ ಇದ್ದು.

  ಹಾಲ ಪೆಕೇಟಿನ ಇಡೀಯೆ ಬೆಶಿಮಾಡಿರೆ ಪ್ಲೇಶ್ಟಿಕ್ಕು ಕರಗುತ್ತಿಲ್ಲೆ. i mean ಪ್ಲೇಶ್ಟಿಕ್ಕು ನೀರಿಲಿ ಕರಗುತ್ತಿಲ್ಲೆ.

  ಅದರಿಂದ ಇನ್ನೊಂದು ಉಪಕಾರವೂ ಇದ್ದು. ತುಂಬಾ ಹಾಲು ಕೊದಿಶುವ ಟೈಮಿಲಿ ಎಲ್ಲಾದರೂ ಗ್ರಾಚಾರ ಕೆಟ್ಟು ಒಂದು ಪೆಕೇಟು ಹಾಳಾಗಿದ್ದರೂ ಇಡಿಕ್ಕಿಡೀ ಹಾಳಾವುತ್ತಲ್ಲದಾ? ಪೆಕೇಟು ಪೆಕೇಟೇ ಕೊದಿಶಿರೆ ಹಾಳಾದ ಹಾಲು ಗೊಂತಾವ್ತು ಮತ್ತು ಅದರ ಸೆಪರೇಟ್ ಮಾಡ್ಳಾವ್ತು. ಅಡಿಗೆಯೋರ ಮಂಡೆ ಮಂಡೆಯೇ…

  [Reply]

  ನೆಗೆಗಾರ°

  ನೆಗೆಗಾರ° Reply:

  ಕೀಟಭಾವಾ..
  ನಿಂಗೊ ಇಂಗ್ಳೀಶು ಕಲ್ತದೆಲ್ಲಿ? ಎನ್ನಂದಲೂ ಲಾಯ್ಕು ಮಾತಾಡ್ತಿ.
  ಅದೆಲ್ಲ ಅಪ್ಪು, ನಿಂಗೊ ಇಂಗ್ಳೀಶಿಲಿ ಒಪ್ಪ ಕೊಡುವಗ ನಮ್ಮ ಬಾಶೆ ಸೇರುಸುತ್ತದು ಎಂತ್ಸಕಪ್ಪಾ…? 😉

  ಅದ್ವೈತ ಕೀಟ

  ಅದ್ವೈತ ಕೀಟ Reply:

  ಇಂಗ್ಳೀಷು ಎಲ್ಲಿದ್ದು ನೆಗೆಭಾವಾ ಇದರ್ಲಿ….??????

  ನೆಗೆಗಾರ°

  ನೆಗೆಗಾರ° Reply:

  ಯೇ ಕೀಟಬಾವಾ,
  ಕನ್ನಡ ಅಕ್ಷರಲ್ಲಿ ಬರದ ಕೂಡ್ಳೇ ಇಂಗ್ಳೀಶು ಕನ್ನಡ ಆವುತ್ತೋ?
  ಅಂಬಗ ಎನಗೆ ಇಂಗ್ಳೀಶು ಕಲಿವಲೆ ಸುಲಾಬ ಆತು.

  {ಪೆಕೇಟಿನ}, {ಪ್ಲೇಶ್ಟಿಕ್ಕು }, { i mean}, {ಪ್ಲೇಶ್ಟಿಕ್ಕು}, { ಟೈಮಿಲಿ}, {ಸೆಪರೇಟ್ }..
  ಅಬ್ಬ! ನಿಂಗೊ ಒಕಾಲ್ತಿಕೆ ಮಾಡೇಕಾರೆ ಇದೆಲ್ಲ ಕಾಣೆಡದೋ?
  ಇಷ್ಟು ಸಣ್ಣ ಮಾಣಿಯ ಕೈಲಿ ಕೇಳುಸಿಗೊಂಬದೋ? ರಜ್ಜ ಪೀಸು ಕೊಡೇಕು ಆತೋ? 😉

  VA:F [1.9.22_1171]
  Rating: +1 (from 1 vote)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಓ ಅಪ್ಪನ್ನೇ??

  ಅದ್ವೈತ ಕೀಟ

  ಅದ್ವೈತ ಕೀಟ Reply:

  ಯೇವದು…….?

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಹಾಲಿನ ಪೆಕೇಟು..

  VN:F [1.9.22_1171]
  Rating: 0 (from 0 votes)

  ವಸಂತರಾಜ್ ಹಳೆಮನೆ Reply:

  ಅಪ್ಪು. ಸುಮಾರು ಕಡೆಲಿ ಆನು ಕೂಡ ಕಂಡಿದೆ. ಪ್ಲಾಸ್ಟಿಕ್ ಕರಗದ್ರೂ ಕೊದಿತ್ತ ನೀರಿಂಗೆ ಹಾಂಗೆ ಹಾಕಿರೆ ಅದರಿಂದ ವಿಷಾಂಶಂಗೊ ಬಿಡುಗಡೆ ಅಪ್ಪಲೆ ಸಾಧ್ಯತೆ ಇದ್ದು.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಹಳೆಮನೆ ಅಣ್ಣನ ಶುದ್ದಿ ಕೊಶಿ ಕೊಟ್ಟತ್ತು.
  ಆ ಹೆರದೇಶದವು ಕ೦ಬ್ಳದ ಗೋಣ೦ಗಳೊಟ್ಟಿ೦ಗೆ ಓಡಿದ ದೃಶ್ಯ ಗ್ರೇಶಿ ನೆಗೆ ಬ೦ತು.ಹೆಚ್ಚಿನ ಕಾರ್ಯಕ್ರಮ೦ಗಳಲ್ಲಿ ಪಟ ,ವಿಡಿಯೋ ತೆಗವವಕ್ಕೆ ಊಟ ತಿ೦ಡಿ ಆಯಿದೋ ಹೇಳಿ ಕೇಳುಲೆ ನೆ೦ಪಾಗದ್ದೆ ಇರ್ತು ಹೇಳಿ ಕೇಳಿದ್ದೆ. ಬೆ೦ಗಳೂರಿನ ಹೊಡೆಲಿ ಜೆ೦ಬ್ರ೦ಗಳಲ್ಲಿ ವಿಡಿಯೋ ತೆಗವವರದ್ದೇ ಅಬ್ಬರ.ಮದುವೆ ಮುನ್ನಾಣ ದಿನ ನೆಡವ ಸಟ್ಟುಮುಡಿ (!) ಹೇಳ್ತ ನಾಟಕಲ್ಲಿ ಇವ್ವೇ ಬಟ್ಟಮಾವನ ಕೆಲಸ ಮಾಡೊದು..

  [Reply]

  ವಸಂತರಾಜ್ ಹಳೆಮನೆ Reply:

  [ಹೆಚ್ಚಿನ ಕಾರ್ಯಕ್ರಮ೦ಗಳಲ್ಲಿ ಪಟ ,ವಿಡಿಯೋ ತೆಗವವಕ್ಕೆ ಊಟ ತಿ೦ಡಿ ಆಯಿದೋ ಹೇಳಿ ಕೇಳುಲೆ ನೆ೦ಪಾಗದ್ದೆ ಇರ್ತು ಹೇಳಿ ಕೇಳಿದ್ದೆ. ]
  ರಘು ಭಾವ, ನಿಂಗೊ ಹೇಳಿದ ಈ ಸಂಗತಿ ಎಲ್ಲ ಕಡೆಲಿ ಅಲ್ಲದ್ರೂ ಕೆಲವು ಸರ್ತಿ ಅಪ್ಪದು ನಿಜ.

  [Reply]

  VN:F [1.9.22_1171]
  Rating: 0 (from 0 votes)
 5. ಭೀಮಗುಳಿ ಶ್ಯಾಮ

  ಎಂಗಳ ಮದುವೆಯ ನೆಂಪಾದ ಕೂಡ್ಲೆ ಮದುವೆಗೆ ಬಂದೊರಿಂಗೆ ನೆಂಪಪ್ಪದು ಎಂಗಳ ಫೊಟೊಗ್ರಾಫರನ.ಕೂದೊಂಡು ,ಡಿಗ್ರೀ ಲೆಕ್ಕಲ್ಲಿ ಬಗ್ಗಿ,ಮನುಗಿ,ಇನ್ನು ಎಂತೆಂತದೊ ಕೋಲ ಮಾಡಿ, ಮದುವೆಗಿಂತ ಅವನ ನೋಡಿದ್ದ್ದೆ ಜಾಸ್ತಿ.ಮದುವೆ ಗವುಜಿಗಿಂತ ಫೊಟೊ ತೆಗವನ ಗವುಜಿ!

  [Reply]

  ವಸಂತರಾಜ್ ಹಳೆಮನೆ Reply:

  ಕೆಲಾವು ಮನುಷ್ಯರು ಜನರ ಗಮನ ತನ್ನ ಕಡೆಂಗೆ ಬತ್ತ ಹಾಂಗೆ ಮಾಡ್ಲೆ ಮಾಡುದಾದಿಕ್ಕು.

  [Reply]

  VN:F [1.9.22_1171]
  Rating: 0 (from 0 votes)
 6. ಶ್ರೀಅಕ್ಕ°

  ಹಳೆಮನೆ ತಮ್ಮ,
  ಪಟ, ವೀಡ್ಯ ತೆಗವ ಅಣ್ಣಂದ್ರ ಅನುಭವಂಗಳ ರೂಪಲ್ಲಿ ನಿಂಗಳ ಅನುಭವ ಲಾಯ್ಕ ಬರದ್ದಿ. ಪ್ರತಿ ದಿಕ್ಕೆಯೂ ಹೊಸ ಅನುಭವವೇ ಅಲ್ಲದಾ? ಪ್ರತಿ ಮನೆಯೋರ ಪ್ರತಿಕ್ರಿಯೆ ಬೇರೆ ಬೇರೆಯೇ ಅಲ್ಲದಾ? ಎಲ್ಲರ ಭಾವನೆಗಳ ಗೌರವಿಸಿಗೊಂಡು ತಾಳ್ಮೆಲಿ ಪಟ ತೆಗವ ಎಲ್ಲ ಮೂರನೆಯ ಕಣ್ಣಿಪ್ಪವಕ್ಕೆ ವಂದನೆಗಾ.

  ಜೆಂಬರದ ಪ್ರತಿ ಪಟಂಗಳಲ್ಲಿ ಕೊಶಿ ಹೇಂಗೆ ಇರ್ತೋ ಹಾಂಗೇ ಕೆಲವು ಪಟಂಗಳ ಹಿಂದೆ ಎಷ್ಟೋ ಕಹಿ ಘಟನೆಗಳೂ ಇಕ್ಕಲ್ಲದಾ? ಒಂದು ಕಾರ್ಯಕ್ರಮ ಆಯೆಕ್ಕಾದರೆ ಸುಮಾರು ಕೆಲಸಂಗ ಇರ್ತು. ಆ ಕೆಲಸಂಗ ಆಗದ್ದೆ ಗಡಿಬಿಡಿ ಅಪ್ಪದು, ಮಾಡಿ ಕೊಡದ್ದವನ ಪರಂಚುದು, ಹೀಂಗಿಪ್ಪದು ಎಲ್ಲ ಇಪ್ಪದಲ್ಲದಾ? ಒಬ್ಬಂಗೆ ಅದು ಸಿಹಿ ನೆನಪು ತಂದರೆ ಕೆಲವು ಜನಕ್ಕೆ ಅದು ಆ ಸಂದರ್ಭ ಅನುಭವಿಸಿದ ಯಾವುದಾದರೂ ಬೇಜಾರದ ಸನ್ನಿವೇಶವ ನೆನಪ್ಪಿಸುಗು ಅಲ್ಲದಾ?

  ಜೀವನದ ಕಹಿ ಸಿಹಿಯ ಹಾಂಗೆ ನಿಂಗಳ ಪಟವೂ ಎಲ್ಲ ಭಾವನೆಗಳ ಹಾಂಗೇ ಸೆರೆ ಹಿಡಿತ್ತನ್ನೆ!! ನಿಂಗಳ ಕೈಲಿ ಪಟ ತೆಗವಲೆ ಹೇಳಿದವರ ಸಂತೃಪ್ತಿ ಪಡಿಸಿ, ಅವರ ಕಾರ್ಯಕ್ರಮಂಗಳ ನೆನಪಿನ ಶಾಶ್ವತ ಮಾಡುವ ಹಾಂಗೆ ಆಗಲಿ.. ನಿಂಗಳ ಕೆಲಸಲ್ಲಿ ಒಳ್ಳೆದಾಗಲಿ..

  [Reply]

  ವಸಂತರಾಜ್ ಹಳೆಮನೆ Reply:

  ಧನ್ಯವಾದಂಗೊ ಶ್ರೀ ಅಕ್ಕ.

  [Reply]

  VN:F [1.9.22_1171]
  Rating: 0 (from 0 votes)
 7. ಒಪ್ಪಣ್ಣ

  ಹಳೆಮನೆ ತಮ್ಮಣ್ಣನ ಶುದ್ದಿಗೊ ಪಷ್ಟಾಯಿದು.
  ಕಳುದ ಸರ್ತಿ ಬಟ್ಟಮಾವ ಗಂಧ ಅರದ್ದರಿಂದ ಹಿಡುದು, ಈ ಸರ್ತಿ ಗೋಣ ಕುಟ್ಳೆ ಬಂದಲ್ಲಿ ಒರೆಂಗೆ ಪ್ರತಿಯೊಂದುದೇ ವಿವರಣೆ ಸಹಜವಾಗಿ ಬಯಿಂದು.
  ಆರತಿ ಪೆರಟ್ಟು ಎತ್ತಿದ್ದಕ್ಕೆ ಮಾಡಿದ ವೆವಸ್ತೆ ಭಾರೀ ಕೊಶಿ ಆತು.
  ಛಾಯಾಗ್ರಹಣಕಾರರು ಹಾಂಗೇ ಇರೆಕ್ಕುದೇ. ಒಂದು ಕ್ಷಣದ ಘಟನೆಯ ಅನಂತಕಾಲ ಬಾಳಿಕೆ ಬರುಸುದು ನಿಂಗಳೇ ಅಲ್ಲದೋ?

  ಇನ್ನೂ ಇನ್ನೂ ಸ್ವಾರಸ್ಯಂಗೊ ಸಿಕ್ಕಲಿ, ಬೈಲಿಂಗೆ ಬರಳಿ.
  ಹರೇರಾಮ

  [Reply]

  ವಸಂತರಾಜ್ ಹಳೆಮನೆ Reply:

  ಒಪ್ಪಣ್ಣನ ಒಪ್ಪದ ಒಪ್ಪಕ್ಕೆ ಒಪ್ಪಿದೆ.

  [Reply]

  VN:F [1.9.22_1171]
  Rating: 0 (from 0 votes)
 8. ದೊಡ್ಡಭಾವ

  ಸ್ವಾರಸ್ಯಂಗೊ ತುಂಬಾ ಖುಷಿ ಕೊಟ್ಟತ್ತು.
  ಇನ್ನಷ್ಟು ಬರಳಿ,
  ಆಗದೋ..?

  [Reply]

  VA:F [1.9.22_1171]
  Rating: 0 (from 0 votes)
 9. ಲಕ್ಷ್ಮಿ ಭಟ್ಟ

  ನ೦ಗ್ಳ ಕಡೆಗೂ (ಉತ್ತರ ಕನ್ನಡದ ಹೊನ್ನಾವರ ದ ಕಡೆ) ಕಾರ್ಯದ (ಮದುವೆ,ಮು೦ಜಿ ಇತ್ಯಾದಿ) ಮನೆಲಿ ಹಾಲು ಕಾಯಿಸೊ ರೀತಿ ಕ೦ಡು ನನ್ನ ಮಗಳು ಅಡುಗೆ ಭಟ್ಟರ ಹತ್ರ “ಹಾ೦ಗೆ ಮಾಡಡಿ..ಆರೋಗ್ಯಕ್ಕೆ ಒಳ್ಳೆದಲ್ಲ ” ಅ೦ದಿದ್ದಕ್ಕೆ “ತ೦ಗಿ, ಮೊದ್ಲಣ್ ಹಾಗೆ ಹಾಲು ಚೊಲೊ ಬತ್ತಿಲ್ಲೆ ಈಗ ..ಒ೦ದು ಹಾಲ್ ಕೊಟ್ಟೆ ಹಾಳ್ ಆದ್ರೂ ಎಲ್ಲವ್ದೂ ಹಾಳಾಗ್ತು..ಹಾಲ್ ಕಾಯಿಸ್ತಾ ಕೂತ್ಕ೦ಬ್ಲೆ ಹೊತ್ತೇ ಇಲ್ಲೆ .ನಿ೦ಗೊ ಹಾಲು ಕಾಸಿಕೊಟ್ರೆ ಅಡ್ಡಿಲ್ಲೆ ..” ಹೇಳಿದ್ವಡಾ..ಅದ್ಕೆ ಈ ಕಡೆ ಪರ್ಯಾಯ ವ್ಯವಸ್ತೆ ಇದ್ರೆ ತಿಳ್ಕ೦ಡು ನ೦ ಬದಿಯವ್ಕೆ ಹೇಳ್ಕೊಡ ಅ೦ದ್ಕ೦ಡಿದ್ದೆ.. ನೋಡಿದ್ರೆ ಇಲ್ಲೂ ಅದೇ ರೀತಿ ಅ೦ದಾತು..ಇನ್ನು ನ೦ ಕಡೆ ಎಣ್ಣೆ ಕೊಟ್ಟೆ ಹೆ೦ಗೆ ಕತ್ತರಿಸ್ತೊ ನೋಡಕಾತು… ಲೇಖನ ಖುಶಿ ಆತು..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣಶಾ...ರೀವೆಂಕಟ್ ಕೋಟೂರುದೊಡ್ಮನೆ ಭಾವಮುಳಿಯ ಭಾವಬಂಡಾಡಿ ಅಜ್ಜಿಶಾಂತತ್ತೆಜಯಶ್ರೀ ನೀರಮೂಲೆವಾಣಿ ಚಿಕ್ಕಮ್ಮಎರುಂಬು ಅಪ್ಪಚ್ಚಿಅಡ್ಕತ್ತಿಮಾರುಮಾವ°ಗಣೇಶ ಮಾವ°ಪ್ರಕಾಶಪ್ಪಚ್ಚಿಚೆನ್ನಬೆಟ್ಟಣ್ಣದೊಡ್ಡಭಾವವಿದ್ವಾನಣ್ಣಪವನಜಮಾವಬೊಳುಂಬು ಮಾವ°ಮಂಗ್ಳೂರ ಮಾಣಿವೇಣಿಯಕ್ಕ°ನೆಗೆಗಾರ°ಪುತ್ತೂರುಬಾವಹಳೆಮನೆ ಅಣ್ಣಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ