Oppanna.com

ಜನಂಗಳ ಪಟಂಗೊ #02

ಬರದೋರು :   ಹಳೆಮನೆ ಅಣ್ಣ    on   10/05/2010    12 ಒಪ್ಪಂಗೊ

ಹಳೆಮನೆ ಅಣ್ಣ

ಕಳುದ ಸರ್ತಿ ದೂರಂದ ತೆಗದ (ಕ್ಯಾಂಡಿಡ್) ಪಟಂಗಳ ರಜ್ಜ ನೋಡಿದ್ದಿ. ಈ ಸರ್ತಿ ಪೋರ್ಟ್ರೇಟ್ ಪಟಂಗಳ ನೋಡಿ. ಹಾಂಗೆ ಹೇಳಿ ಈ ಸರ್ತಿಯೂ ಕೆಲಾವು ಕ್ಯಾಂಡಿಡ್ ಪಟಂಗ ಇದ್ದು.
ಎನಗೆ ಮತ್ತೆ ಹಾಂಗೆ ದಾರಿಲಿ ಹೋಪಗ ಕೆಮರ ಹೆರ ತೆಗದು ಪಟ ತೆಗವಲೆ ಕಷ್ಟ ಆವುತ್ತು. ಕಳುದ ಸರ್ತಿ ಗೋಪಾಲ ಮಾವ° ಹೇಳಿದ ಹಾಂಗೆ ಅರಾದರೂ ಬಡಿವಲೋ ಮತ್ತು ಬಂದರೆ…? ಅಂದು ‘ಸುಧಾ’ಲ್ಲಿ ತಾಳಿಬೊಂಡದ ಬಗ್ಗೆ ಲೇಖನ ಬರವಲೆ ಹೇಳಿ ಕೊಡೆಯಾಲಲ್ಲಿ ತಮಿಳಂಗಳ ಮಾತಾಡ್ಸಿದ್ದು ಈಗಲೂ ನೆನಪಾವುತ್ತು. ಎನಗೆ ಅಂಬಗ ರಜ್ಜ ರಜ್ಜ ತಮಿಳು ಬಂದೊಂಡಿತ್ತು. ಹಾಂಗಾಗಿ ಬಚಾವ್…
ನಮ್ಮ ಊರಿಲ್ಲಿ ದಾರಿಲಿ ಹೋಪಗ ಕೆಮರ ಹೆರ ತೆಗದು ಪಟ ತೆಗವದು ಹೇಳಿರೆ ದೊಡ್ಡ ಸಂಗತಿಯೇ. ಅದರಲ್ಲೂ ದೊಡ್ಡ ಕೆಮರ ಹಿಡುದು ಪಟ ತೆಗವಲೆ ಹೋದರೆ ‘ಪೇಪರ್ದಾಯೆ ಬತ್ತೆ ಮಾರಾಯ’ ಹೇಳಿಗೊಂಡು ಓಡುವವೇ ಇಪ್ಪದು ನಮ್ಮ ಊರಿಲ್ಲಿ. ನಮ್ಮ ಪೇಪರಿನವು ಮಾಡುದೂ ಹಾಂಗೇ. ಬೇಕಾದರೂ ಬೇಡದ್ದರೂ ವರದಿ ಬರದು ಹಾಕಿ ಕೆಲವು ಸರ್ತಿ ಪ್ರಿಂಟ್ ಅಪ್ಪಗ ಅದರ ಮೂಲ ಸ್ವರೂಪವೇ ಬದಲಾಗಿರ್ತು. ಅಷ್ಟಪ್ಪಗ ಅದರ ಓದುವವನ ತಲೆ ಓಡುದು ಈ ಪೇಪರಿನವು ಹೇಳಿರೆ ಇಷ್ಟೇ… ಇವರತ್ರೆ ಎಂತ ಹೇಳುಲಾಗ… ಹೇಳ್ತ ಭಾವನೆ ನಮ್ಮ ಜನಂಗಳ ಮನಸ್ಸಿಲ್ಲಿ ಬಂದು ಬಿಡುತ್ತು.
ನಿಜ ಹೇಳೆಕ್ಕಾ? ನಿಂಗೊ ಟೂರ್ ಎಲ್ಲ ಹೋಪದಿದ್ದರೆ ದೊಡ್ಡ ಕೆಮರಕ್ಕಿಂತಲೂ ಸಣ್ಣ ಕೆಮರ ಒಳ್ಳೆದು. ಲಗೇಜ್ ಕಮ್ಮಿಯೂ ಅವುತ್ತು, ಬೇಕಾದ ಹಾಂಗಿಪ್ಪ ಪಟ ತೆಗವಲೂ ಆವುತ್ತು. ದೊಡ್ಡ ಕೆಮರ (SLR ಕೆಮರ ಹೇಳ್ತವು) ಕೊಂಡೋಪಲೆ ಬಾದಿಯೂ ಆವುತ್ತು, ಜನಂಗೊಕ್ಕೆ ಬೇಗ ಕಾಂಬಲೂ ಸಿಕ್ಕುತ್ತು.(ಜನಂಗೊ ಬೇಗ ನೋಟ್ ಮಾಡ್ತವು). ಹಾಂಗಾಗಿ ಜನಂಗಳ ಪಟ ತೆಗವದಿದ್ದರೆ ಸಣ್ಣ ಕೆಮರಂಗಳೇ ಒಳ್ಳೆದು. ಒಂದು ಫೊಟೋಗ್ರಫಿ ಪತ್ರಿಕೆಲಿ ಕಂಡ ಹಾಂಗೆ ಕಪ್ಪು ಬಣ್ಣದ ಕೆಮರಂಗಳ ಜನಂಗೊ ಹೆಚ್ಚು ನೋಟ್ ಮಾಡ್ತವಡ. ಅಂಬಗ ಜನ ಹೆಚ್ಚು ನೋಟ್ ಮಾಡದ್ದೆ ಇರೆಕಾದರೆ? ಕೆಂಪು ಬಣ್ಣವೋ, ಅರಸಿನ ಬಣ್ಣದ್ದೋ ಕೆಮರ ತೆಕ್ಕೊಂಡು ಹೋಯೆಕ್ಕಡ. ಇದು ಮನುಷ್ಯರ ಸೈಕಾಲಜಿ. ಎಂತಕೆ ಹೇಳಿ ಎನ್ನತ್ರೆ ಕೇಳೆಡಿ ಮತ್ತೆ…
ಜನಂಗೊ ಕೆಮರ ಹೆಚ್ಚು ನೋಟ್ ಮಾಡಿದ ಹಾಂಗೆ ಕಳ್ಳಂಗಳೂ ನೋಕ ಹಾಕ್ಯೊಂಡು ಇರ್ತವು. ಹಾಂಗಾಗಿ ದೊಡ್ಡ ಕೆಮರ ಟೂರ್ ಹೋಪಗ ಅಷ್ಟು ಸೇಫ್ ಅಲ್ಲ. ಗೋಣಿ ಚೀಲದ ಹಾಂಗಿಪ್ಪ ಕೆಮರ ಚೀಲಲ್ಲಿ ಹಾಕ್ಯೊಂಡು ಹೋದರೆ ಅದು ಕೆಮರ ಹೇಳಿ ಅಷ್ಟು ಸುಲಭಲ್ಲಿ ಗೊಂತಾಗ. ದೊಡ್ಡಕೆ ‘ಕೆಮರಾ’ ಹೇಳಿ ಬರಕ್ಕೊಂಡು ಇಪ್ಪ ಬೇಗು ಹಾಕ್ಯೊಂಡು ಹೋದರೆ ಕಳ್ಳಂಗಳೂ ಅದನ್ನೇ ನೋಡ್ತಾ ಇರ್ತವು, ನೆನಪಿರ್ಲಿ…
ಹಳೆಮನೆ ಅಣ್ಣ
http://www.drishyaphotos.blogspot.com

12 thoughts on “ಜನಂಗಳ ಪಟಂಗೊ #02

  1. ಶೇಣಿ ಅಜ್ಜನ ಪಟಂಗಳಲ್ಲಿ ಬಲು ಅಪರೂಪದ್ದು ಈ ಪಟ.

  2. ಹೆಚ್ಚಿನದ್ದೂ SLR ಕೆಮರಲ್ಲಿ ತೆಗದ್ಸು. ಸಣ್ಣ ಕೆಮರಂಗಳಲ್ಲಿ ತೆಗದ್ಸೂ ಇದ್ದು. ಅದು ಯಾವುದು ಹೇಳಿ ಹೇಳಲೆಡಿಗೋ?

  3. ಫಟ೦ಗ ಬಾರೀ ಲಾಯ್ಕ ಆಯ್ಡು. ಇದು ಯಾವ ಕ್ಯಾಮರಲ್ಲಿ ತೆಗದ್ದು ಫೊಟೊ? SLR ಅಥವಾ ಸಣ್ಣ
    ಕೆಮರಲ್ಲಿಯೊ?

  4. ಪಟ೦ಗೋ ಭಾರಿ ಲಾಯಿಕೆ ಇದ್ದು .. ಬಾವ..

  5. ..ಫೋಟೋ ನೋಡಿಯೇ ಜನಂಗಳ ಭಾವನೆಗಳ ಅರ್ಥ ಮಾಡಿಗೊಂಬ ಹಾಂಗೆ ಫೋಟೋ ತೆಗದ್ದು ಲಾಯ್ಕಯ್ದು…

  6. ಹರೀಶಣ್ಣೊ…ಪಟಂಗೊ ಲಾಯ್ಕ ಇದ್ದು ಮಿನಿಯಾ○…
    ಒಹೋ… ಹಾಂಗಾರೆ ಕಪ್ಪು ಬಣ್ಣದ್ದು ಒಳ್ಳೆದಲ್ಲೊದೋ….

  7. ಫೋಟೊಂಗೊ ಸೂಪರ್ ಆಯಿದು ಹರೀಶ. ಇನ್ನೂ ಬರಲಿ ಹೀಂಗಿಪ್ಪದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×