ಮದುರೈ ಮೀನಾಕ್ಷಿ ದೇವಾಲಯದ ದೃಶ್ಯಂಗೊ…

ಈ ಸರ್ತಿ ತಮಿಳುನಾಡಿನ ಇನ್ನೊಂದು ಪ್ರಮುಖ ದೇವಸ್ಥಾನ ಮದುರೈ ಮೀನಾಕ್ಷಿ ದೇವಾಲಯದ ದೃಶ್ಯಂಗಳ ನೋಡುವೊ°. ಮದುರೈ ಜಿಲ್ಲೆ ಕೂಡ ತಂಜಾವೂರಿನ ಹಾಂಗೆ ತಮಿಳುನಾಡಿನ ಮಧ್ಯಭಾಗಲ್ಲಿ ಇಪ್ಪ ಜಿಲ್ಲೆ. ಇದರಲ್ಲಿ ಕೂಡ ಸುಮಾರು ಪ್ರವಾಸೀ ತಾಣಂಗೊ ಇದ್ದು. ಪ್ರವಾಸೋದ್ಯಮಲ್ಲಿ ಈ ಜಿಲ್ಲೆ ತುಂಬ ಹೆಸರುವಾಸಿ.

ಮೀನಾಕ್ಷಿ ದೇವಿಯ ಮೂಲ ಗುಡಿಯ ಕುಲಶೇಖರ ಪಾಂಡ್ಯ ಕಟ್ಟುಸಿದ್ದು ಹೇಳಿ ಹೇಳ್ತವು. ಅದರ ಸುತ್ತಲೂ ಇಪ್ಪ ದೇವಾಲಯ ಸಮುಚ್ಚಯ ವಿಶ್ವನಾಥ ನಾಯಕ ಪೂರ್ತಿ ಮಾಡಿದ್ದದು ಹೇಳ್ತವು. ಮೀನಾಕ್ಷಿ-ಸುಂದರೇಶ ದೇವಾಲಯಂಗಳಲ್ಲಿ ಒಟ್ಟು ನಾಲ್ಕು ದೊಡ್ಡ ಗೋಪುರಂಗೊ ಇದ್ದು. ಸಣ್ಣ ಸಣ್ಣ ಬೇರೆ ಗೋಪುರಂಗಳೂ ಇದ್ದು. ದಕ್ಷಿಣದ ಗೋಪುರಲ್ಲಿ ಸಂಗೀತದ ಏಳು ಸ್ವರ ಬತ್ತ ಕಂಬಂಗೊ ಇದ್ದು. ಈ ದೇವಾಲಯ ಸಮುಚ್ಚಯಲ್ಲಿ ಇಪ್ಪ ಕಲ್ಲಿನ ಕಂಬಂಗಳ ಕುಸುರಿ ಕೆತ್ತನೆ ಕೆಲಸ ಅದ್ಭುತ. ಈ ಭಾಗಲ್ಲಿ ರಾಜ್ಯಭಾರ ಮಾಡಿದ ಪಾಂಡ್ಯಂಗಳ ಕಾಲಲ್ಲಿ ಈ ರಾಜ್ಯಲ್ಲಿ ಎಷ್ಟು ಸಂಪತ್ತು ಇದ್ದಿಕ್ಕು ಹೇಳಿ ಈ ದೇವಾಲಯದ ನಿರ್ಮಾಣ ನೋಡಿದರೆ ಅಂದಾಜು ಅಕ್ಕು.

ಇಡೀ ದೇವಾಲಯ ಸಮುಚ್ಚಯಲ್ಲಿ 33000 ಶಿಲ್ಪಂಗೊ ಇದ್ದು ಹೇಳಿ ಹೇಳ್ತವು. ಏಪ್ರಿಲ್ ತಿಂಗಳಿಲ್ಲಿ ‘ಮೀನಾಕ್ಷಿ ಶ್ರೀಕಲ್ಯಾಣ’ ಹೇಳ್ತ ಉತ್ಸವ ಇಲ್ಲಿ ನೆಡೆತ್ತು. ನವರಾತ್ರಿ, ಶಿವರಾತ್ರಿಗೆ ಕೂಡ ವಿಶೇಷ ಆಚರಣೆ ಇದ್ದು. ಈ ದೇವಸ್ಥಾನದ ಸ್ವರ್ಣ ಕಮಲದ ಸರೋವರ ಎಂಗೊ° ಹೋದ ಸಮಯಲ್ಲಿ ಖಾಲಿ ಆಗಿದ್ದತ್ತು ( ಚಿತ್ರ ನೋಡಿ. ಬಹುಶಃ ದುರಸ್ತಿ ಕಾರ್ಯ ಇದ್ದಿಕ್ಕು.) ದಕ್ಷಿಣ ಭಾಗಲ್ಲಿಪ್ಪ ಗೋಪುರ 170 ಅಡಿ ಎತ್ತರ ಇದ್ದು. ಸಾವಿರ ಕಂಬದ ಮಂಟಪ, ನಟರಾಜ ಮಂಟಪ, ಸಪ್ತ ಸ್ವರ ಮಂಟಪ ಎಲ್ಲವೂ ಇಲ್ಲಿ ನೋಡಲೇ ಬೇಕಾದಂಥವು.

ಈಗ ದೇವಸ್ಥಾನಲ್ಲಿ ಸುರಕ್ಷಾ ವ್ಯವಸ್ಥೆ ತುಂಬಾ ಕಠಿಣ ಮಾಡಿದ್ದವು. ಪ್ರವೇಶ ದ್ವಾರಲ್ಲಿ ‘ಲೋಹ ಶೋಧಕ’ ಮಾತ್ರ ಅಲ್ಲದ್ದೆ ಬ್ಯಾಗ್, ಪರ್ಸ್ ಇತ್ಯಾದಿಗಳ ಪೂರ್ತಿ ಬಿಡುಸಿ ನೋಡಿ ಪರೀಕ್ಷೆ ಮಾಡಿಯೇ ಒಳ ಬಿಡ್ತ ಕ್ರಮ. ಎಂಗಳ ಬ್ಯಾಗಿಲ್ಲಿ ಇತ್ತಿದ್ದ ಕೆಮರವ ತೆಗಶಿ ‘On’ ಮಾಡಿ ಪಟ ತೆಗದು ತೋರುಸಲೆ ಹೇಳಿದವು! ಭಯೋತ್ಪಾದಕಂಗಳ ಪಟ್ಟಿಲಿ ಈ ದೇವಸ್ಥಾನದ್ದೂ ಹೆಸರಿಪ್ಪದೇ ಇದಕ್ಕೆ ಕಾರಣ.

ವಸಂತರಾಜ್ ಹಳೆಮನೆ

   

You may also like...

6 Responses

 1. ತೆಕ್ಕುಂಜ ಕುಮಾರ ಮಾವ° says:

  ಅತಿ ಮನೋಹರ ಫಟಂಗೊ. ೨,೬,೧೩ & ೧೪ ಭಾರಿ ಚೆಂದ ಬಯಿಂದು.
  ಫೊಟೊಗ್ರಫಿ ಕಲೆ ನಿಂಗೊಗೆ ಒಲುದ್ದು.

 2. jayashree.neeramoole says:

  ಒಂದಕ್ಕಿಂತ ಒಂದು ಅದ್ಭುತವಾದ ಪಟ೦ಗೋ… ಧನ್ಯವಾದ…

  “ದಕ್ಷಿಣದ ಗೋಪುರಲ್ಲಿ ಸಂಗೀತದ ಏಳು ಸ್ವರ ಬತ್ತ ಕಂಬಂಗೊ ಇದ್ದು”… ಅಧುನಿಕ ವಿಜ್ಹಾನವ ಬಳಸಿ ಹೀಂಗಿದ್ದರ ನೋಡಿದ್ದೇ… ಶಿಲ್ಪ ಕಲೆಯ ನೈಪುಣ್ಯವ ಬಳಸಿ ಇಪ್ಪದರ ನೋಡಿದ್ದಿಲ್ಲೇ…

 3. ಹರೇ ರಾಮ ಅಣ್ಣ………
  ಫೋಟೊ ತೆಗವದುದೆ ಒ೦ದು ಕಲೆ…ನಿ೦ಗಳ ಈ ಪ್ರತಿಭೆಯ ಮೆಚ್ಚೆಕ್ಕಾದ್ದೆ!!! ಅದ್ಭುತ!!!!!

 4. ಚೆನ್ನೈ ಭಾವ says:

  ಕುಮಾರಮಾವನ ಪುಸ್ತಕಪರಿಚಯದ ರೀತಿಲಿ ಇನ್ನೊಂದು ಮನಮೆಚ್ಚುವ ಶುದ್ದಿ ನಮ್ಮ ಬೈಲಿಲಿ ಇದು. ನೋಡಿ ಖುಶಿಪಟ್ಟತ್ತು ಹೇಳಿತ್ತು – ‘ಚೆನ್ನೈವಾಣಿ’

 5. ಪಟಂಗೊ ಸೂಪರ್ ಬಯಿಂದು.

 6. ಒಳ್ಳೇದಿದ್ದು
  ಧನ್ಯವಾದ೦ಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *