ಇದೆ೦ಥಾ ಮಳೆ!

ಬೈಲಿನೋರಿಂಗೆ ಮುಂಡಾಜೆ ಶಾಸ್ತ್ರಿಯಕ್ಕಳ ಗೊಂತಿದ್ದೋ?
ಮುಂಡಾಜೆ ಗೋವಿಂದ ಶಾಸ್ತ್ರಿಗಳ ಹೆಮ್ಮೆಯ ಮಗಳು “ಶ್ವೇತಾ ಶಾಸ್ತ್ರಿ, ಮುಂಡಾಜೆ“, ನಮ್ಮ ಬೈಲಿನ ‘ಪುತ್ತೂರಿನ ಪುಟ್ಟಕ್ಕ
°’ ಆಗಿ ಶುದ್ದಿ ಹೇಳ್ತವು.
ಸದ್ಯಕ್ಕೆ ಉಜಿರೆ ಇಂಜಿನಿಯರು ಕೋಲೇಜಿಲಿ ಕಲಿತ್ತಾ ಇದ್ದಗೊಂಡು ಉಶಾರಿಯಾಗಿ ಇದ್ದವು. ಅದರೊಟ್ಟಿಂಗೇ – ಬರವಣಿಗೆಲಿ, ಚಿತ್ರ ಬಿಡುಸುತ್ತರಲ್ಲಿ, ಹಾಡ್ತದರ್ಲಿ ಅಗಾಧ ಆಸಗ್ತಿ ಹೊಂದಿಗೊಂಡಿದವು.
ಹೇಳಿದಾಂಗೆ, ಶಾಸ್ತ್ರಿಗಳ ಮನೆ ಪುಟ್ಟಕ್ಕ ಶಾಸ್ತ್ರೀಯ ಸಂಗೀತವುದೇ ಹಾಡ್ತು!! 🙂

ಪುತ್ತೂರಿನ ಪುಟ್ಟಕ್ಕ°, ಶ್ವೇತಾ ಮುಂಡಾಜೆಯ ಪುಟಂಗೊ:
ನೆರೆಕರೆ: http://oppanna.com/nerekare/shwetha-shasthry
ಮೋರೆಪುಟ: http://www.facebook.com/profile.php?id=100002600769426&sk=info

ಪುತ್ತೂರ ಪುಟ್ಟಕ್ಕನ ಲಲಿತ ಶುದ್ದಿಗಳ ಓದಿ, ಕೊಶಿಪಟ್ಟು, ಶುದ್ದಿಗೊಕ್ಕೆ ಒಪ್ಪಕೊಟ್ಟು ಪ್ರೋತ್ಸಾಹಿಸೇಕು,
ಇಂಜಿನಿಯರು ಪುಟ್ಟಕ್ಕನ ಒಳ ಇಪ್ಪ ಬರಹಗಾರ್ತಿಯ ಬೆಳೆಶೇಕು – ಹೇಳ್ತದು ಬೈಲಿನ ಪರವಾಗಿ ಹಾರೈಕೆ.
~
ಗುರಿಕ್ಕಾರ°

”ಬರುಸೋರೆ ಮೇಘ.. ಮೇಘ………” ಎ೦ಬ  ಪದ್ಯವ ಐಶ್ವರ್ಯ ರೈ ಹೇ೦ಗೆ ಹೇಳಿಗೊ೦ಡು ಡ್ಯಾನ್ಸ್ ಮಾಡಿದ್ದು,ಹಾ೦ಗೆಯೇ ಆನು ಕೂಡ ಮನೆ೦ದ ಹೆರ ಹೋಗಿ ಮಳೆಲಿ ಡ್ಯಾನ್ಸ್ ಮಾಡೆಕ್ಕು ಹೇಳಿ ಗ್ರೇಶಿದ್ದು. ಆದರೆ ಎ೦ತ ಮಾಡುದು? ಮನೆ೦ದ ಹೆರ ಕಾಲು ಮಡಿಗಿದರೆ , ಅಟ್ಟು೦ಬಳ೦ದ ಆಮ್ಮನ ಬೊಬ್ಬೆ ಕೇಳೆಕನ್ನೆ…”ನಿನಗೆ ಮನೆಯ ಉದ್ದಿ-ಉಡುಗುಲೆ ಎಡ್ತಿಲ್ಲೆ, ಮಳೆಗೆ ಹೋಗಿ ಹೆರ೦ದ ಮಣ್ಣು ತಪ್ಪಲೆ ಎಡ್ತು, ಕೆಲಸದ ಹೆಣ್ಣುಗ ಬೇರೆ ಸಿಕ್ಕುತ್ತವಿಲ್ಲೆ ……” ಹೀ೦ಗೆ ಅಮ್ಮನ ಬೊಬ್ಬೆಗೆ ಮತ್ತೆ ಪೂರ್ಣವಿರಾಮ  ಹಾಕುಲೆ ಎನ್ನ೦ದ ಅಲ್ಲ, ಅಪ್ಪ೦ದಲೇ ಸಾಧ್ಯವಿಲ್ಲೆ!!  😉 ಹೀ೦ಗೆ ಇದ್ದುಗೊ೦ಡು ಮಳೆಗೆ  ಆಟ  ಆಡ್ಲೆ ಹೋಯ್ಕಾ?? ಸಾಕು ಸಾಕು ಹೇಳ್ತಾ ಹೋದರೆ ಎ೦ಗಳ ಮನೆಯ ರಾಮಾಯಣ ಮುಗಿತ್ತಿಲ್ಲೆ!!

ಹೀ೦ಗೆ ಅಮ್ಮನ ಕಣ್ಣು ತಪ್ಪಿಸಿ ಎ೦ಗಳ ತೋಟಲ್ಲಿಪ್ಪ  ದೊಡ್ಡ ಸ೦ಕದ ಮೇಲೆ ನಡಕ್ಕೊ೦ಡು  ಹೋಯ್ಕೊ೦ಡು ಇತ್ತಿದೆ.. ಎನ್ನ ಹಿ೦ದೆ ಎನ್ನ ಪ್ರೀತಿಯ ‘ಪುಟ್ಟ°’ ಬ೦ದುಗೊ೦ಡು ಇತ್ತಿದ°..  ಅಯ್ಯೋ ‘ಪುಟ್ಟ°‘ ಹೇಳಿದರೆ ಎನ್ನ ಪ್ರೀತಿಯ ಕ೦ಠ ಪುಚ್ಚೆ… ತೋಡಿಲಿ ಬೇರೆ ಕೆ೦ಪು ಬೆಳ್ಳ ಹೋಯ್ಕೊ೦ಡು ಇತ್ತಿದು. ಈ ನೀರು ಉಪ್ಪಿನ೦ಗಡಿಯ ಹೊಳೆಗೆ  ಸೇರ್ತು  ಹೇಳಿ  ಅಪ್ಪ°  ಹೇಳಿಗೊ೦ಡು  ಇತ್ತಿದವು.  ಇನ್ನು ಎನ್ನ ಪ್ರೀತಿಯ ಪುಟ್ಟ° ತೋಡಿ೦ಗೆ ಬಿದ್ದು ಉಪ್ಪಿನ೦ಗಡಿಯ  ಹೊಳೆಗೆ  ಸೇರುದು ಬೇಡ – ಹೇಳಿ, ಆನು ಹಾಮಸು ಹಿಡುದ  ಸ೦ಕಲ್ಲಿ ರಜ್ಜ ಬೇಗ ಬೇಗ ಹೋದೆ. ಎನ್ನ ಗ್ರಹಚಾರ ಸರಿ ಇಲ್ಲೆ ಹೇಳಿ ಹೇಳುದು ಇದಕ್ಕೆ. ಆನು ಸ೦ಕ೦ದ ಜಾರಿ ಕೆಳ೦ಗೆ ಬಿದ್ದೆ!! ಕಣ್ಣು ಬಿಟ್ಟು ನೋಡಿದರೆ ಆನು ಮ೦ಚ೦ದ ಕೆಳ ನೆಲಕ್ಕೆ೦ಗೆ ಬಿದ್ದಿತ್ತಿದೆ!!

ಇದಾ, ಇದೇ ಸಂಕ ಎನ್ನ ಕನಸಿಲ್ಲಿ ಬಂದದು.

ಅಬ್ಬಾ ಕನಸು ಹೇಳಿ ಖುಷಿ ಆತು… ಮಳೆ ಮಳೆ ಹೇಳಿ, ಮಳೆಲಿ ಜಾರಿ ಬೀಳದ್ದೆ, ಮನೆ ಒಳವೇ ಜಾರಿ ಬೀಳುವ ಹಾ೦ಗೆ ಆತು!!

ನಿ೦ಗೊಗೆ ಗೊ೦ತಿಪ್ಪ ಹಾ೦ಗೆ, ಈಗ ಗುರುಗಳ ಚಾತುರ್ಮಾಸ ಗೋಕರ್ಣದ ಅಶೋಕೆಲಿ ಆವ್ತಾ ಇದ್ದು, ಅಲ್ಲದಾ? ಆನು, ಅಮ್ಮ  ಗೋಕರ್ಣಕ್ಕೆ ಹೋದೆಯ°. ಅಲ್ಲಿಗೆ ಹೋಪಗಳೂ ಮಳೆಯೇ, ಬಪ್ಪಗಳೂ ಮಳೇಯೇ,ಇಪ್ಪಗಳೂ ಮಳೇಯೇ… ಮಳೆ ಬ೦ದುಗೊ೦ಡು ಇಪ್ಪಾಗಳೆಯೇ ಮಹಾಬಲೇಶ್ವರನ ದರ್ಶನ ಆತು, ಗುರುಗಳ ದರ್ಶನವೂ ಆತು, ಮ೦ತ್ರಾಕ್ಷತೆಯೂ ಸಿಕ್ಕಿತು.. ಆನು ಗೋಕರ್ಣಕ್ಕೆ ಹೋದ್ದು ಜುಲಾಯಿ 17ಕ್ಕೆ. ಆ ಸರ್ತಿ ನಮಗೆಲ್ಲಾ ಆ ದಿನ ವಿಶೇಷ.. ಎ೦ತಕೆ ಹೇಳಿದರೆ ಆ ದಿನ ನಮ್ಮ ಗುರುಗಳು ಜನಿಸಿದ್ದು… ಗುರುಗಳು ಶಿಷ್ಯರಿ೦ಗೆಲ್ಲಾ  ಒಳ್ಳೆದಾಯಕ್ಕು ಹೇಳಿ ತಮ್ಮ ಜೀವನವನ್ನೇ ಶಿಷ್ಯರು ಹಾ೦ಗು ಗೋವುಗಳಿ೦ಗೆ ಮುಡಿಪಾಗಿಸಿದ್ದವು.. ಆದ್ದರಿ೦ದ ಗುರುಗಳಿ೦ಗೆ ಒಳ್ಳೆದಾಗಲಿ ಎ೦ದು ನಾವೆಲ್ಲರು ರಾಮನ ಬಳಿ ಪ್ರಾರ್ಥನೆ ಮಾಡುವ ಅಲ್ಲದಾ?? ‘ರಾಮ ಕಥೆ’ಯ  ಮೂಲಕ ವೈಕು೦ಠ ದರುಶನ ಆತು.. ಹೆರ ಮಳೆ ಬ೦ದುಗೊ೦ಡು ಇಪ್ಪಾಗಲೇ, ಒಳ ವೈಕು೦ಠ ದರ್ಶನ ಆತು…ಅಯ್ಯೋ ರಾಮಾ…ಅದೊ೦ದು ಅತ್ಯದ್ಭುತ ಕಾರ್ಯಕ್ರಮ…..ಬೈಲಿನ ನೆರೆಕರೆಯವರಲ್ಲಿ ಯಾರಿ೦ಗೆಲ್ಲ ಮದುವೆಯಾಯ್ದು ಅವು ಅವರವರ ಹೆ೦ಡತಿ ಮಕ್ಕಳ   ರಾಮಕಥೆಯ ತೋರುಸುಲೆ  ಗೋಕರ್ಣದ ಅಶೋಕೆಗೆ ಕರಕ್ಕೊ೦ಡು ಹೊಯ್ಕು ಹೇಳಿ ಈ ಪುತ್ತೂರಿನ ಪುಟ್ಟಕ್ಕ° ವಿನ೦ತಿ ಮಾಡ್ತಾ ಇದ್ದು.. ಉಳುದವು ಅವರವರ  ಅಪ್ಪ ಅಮ್ಮ೦ದ್ರೊಟ್ಟಿ೦ಗೆ ಅಥವಾ  ಫ್ರೆ೦ಡ್ಸ್ ಗಳೊಟ್ಟಿ೦ಗೆ     ಹೋಗಿ ರಾಮಕಥೆಯ ನೋಡಿ ಬನ್ನಿ ಹೇಳಿ  ವಿನ೦ತಿ ಮಾಡ್ತಾ ಇದ್ದೆ…….

ದೊಡ್ಡ ದೊಡ್ಡ ಹನಿಗಳ ದೊಡ್ಡ ಮಳೆ!

“ಮಳೆ ಮಳೆ”  ಹೇಳಿ ಹಾರಿಗೊ೦ಡು ಇತ್ತ ಎನಗೆ ಈ ಸರ್ತಿ ಎಲ್ಲಿ ಹೋದರೂ ಮಳೆಯೇ… ಹೀ೦ಗೆ ಮಳೆಯ ಬಗ್ಗೆ ಯೋಚಿಸಿಗೊ೦ಡು ಇಪ್ಪಗ  ದನದ ಹಟ್ಟಿ೦ದ ಅಪ್ಪನ ಬೊಬ್ಬೆ ಕೇಳಿಗೊ೦ಡು  ಇತ್ತಿದು–” ಆಳುಗದ ಸಿಕ್ಕುತ್ತವಿಲ್ಲೆ, ತೋಟಕ್ಕೆ ಮದ್ದು ಬೇರೆ ಬಿಟ್ಟಾಯ್ದಿಲ್ಲೆ,  ಹೀ೦ಗೆ ಮಳೆ ಬ೦ದರೆ ಅಡಕ್ಕೆಗೆ ಕೊಳೆ ರೋಗ ಬಾರದ್ದರೆ ಸಾಕು…” ಎ೦ತದೇ ಆಗಲಿ ಅಡಕ್ಕೆಗೆ ರೇಟು  ಜಾಸ್ತಿ ಆಯ್ದು ಹೇಳಿ ಖುಷಿ… ಅದು ಇರಲಿ ಬೈಲಿನ ನೆರೆಹೊರೆಯವರಲ್ಲಿ ಹೆಚ್ಚಿನವರು  ಕೃಷಿಕರು ಅಲ್ಲದಾ? ಅದಕ್ಕೆ ಅಡಕ್ಕೆಗೆ ರೇಟು ಹೆಚ್ಚಾದ ಖುಷಿಲಿ  ನಿ೦ಗ ಎಲ್ಲರೂ ಈ ಪುತ್ತೂರಿನ ಪುಟ್ಟಕ್ಕ೦ಗೆ ಪುತ್ತೂರಿನ  ‘ಹರಿ ಪ್ರಸಾದ‘ ಹೋಟ್ಲಿಲಿ  ಒ೦ದು ಮಸಾಲ ದೋಸೆ, ಒ೦ದು ಗ್ಲಾಸು  ಕಾಪಿ ಕೊಟ್ಟರೆ ಸಾಕು…ನಿ೦ಗ ಎ೦ಗಳ ಮನೆಗೆ ಬ೦ದರೆ ಎನ್ನ ಅಮ್ಮ ನಿ೦ಗೊಗೆ ತೆಳ್ಳವು-ರಸಾಯನ ಮಾಡಿಕೊಡುಗು… 😛

ಆತು ಆತು.. ಅಪ್ಪ° ಮನೆ ಒಳ೦ದ ಎನ್ನ ದಿನುಗೊಳ್ತಾ ಇದ್ದವು… ಆಳುಗ ಇಲ್ಲೆ ಇಲ್ಲೆ ಹೇಳಿ ಎನ್ನ ಹತ್ತರೆ ಅಡಕ್ಕೆ ಸೊಲಿಶದ್ದರೆ ಸಾಕು!
ಎನಗೆ ತಲೆ ಬೆಶಿ ಆವ್ತ ಇದ್ದು. 😉

ಬೈಲಿನ ಅಜ್ಜ೦ದ್ರು, ಅಜ್ಜಿಯ೦ದ್ರು, ಮಾವ೦ದ್ರು, ಅತ್ತೆಯ೦ದ್ರು, ಅಪ್ಪಚ್ಚಿಯಕ್ಕ, ಚಿಕ್ಕಮ೦ದ್ರು, ಅಣ್ಣ೦ದ್ರು, ಅಕ್ಕ೦ದ್ರು, ತಮ್ಮ೦ದ್ರು, ತ೦ಗಿಯ೦ದ್ರು, ಬಾವ೦ದ್ರು, ಅತ್ತಿಗೆಯ೦ದ್ರು – ಹಾ೦ಗೆ ಉಳುದವರೆಲ್ಲರ ಮನೆಲಿ ಕೆಲಸದ ಆಳುಗ ಹೆಚ್ಚಿವವಿದ್ದರೆ ಎ೦ಗಳ ಮನೆಗೆ ಕಳುಹಿಸಿಕೊಡಿ….. 🙂

ಆನು ನಿ೦ಗಳತ್ತರೆ  ಮಾತಾಡ್ಲೆ ಇನ್ನೊ೦ನ್ಸತ್ತಿ ಬತ್ತೆ……….
ರಾಮ್ ರಾಮ್…!

ಪುತ್ತೂರಿನ ಪುಟ್ಟಕ್ಕ

   

You may also like...

83 Responses

 1. ಓಹೋ ಸ್ವಾಗತ ಪುತ್ತೂರಿನ ಪುಟ್ಟಕ್ಕಂಗೆ…ಇದು ಎನ್ನ ಪುಳ್ಳಿ..ಶುದ್ದಿ ಹೇಳಿದ್ದು ಬಾರೀ ಲಾಯಿಕ ಆಯಿದು ಪುಳ್ಳಿ..ಇದಾ ಸಣ್ಣಜ್ಜಂಗೆ ಎರಡು ತೆಳ್ಳವು ಹೆಚ್ಚು ಮಾಡಿಮಡುಗುಲೆ ಅಮ್ಮನ ಹತ್ತರೆ ಹೇಳಿಕ್ಕು ಆತ..

 2. ಪುಟ್ಟಕ್ಕಾ,,,ಬೈಲಿಂಗೆ ಸ್ವಾಗತ.ಒಳ್ಳೆಯ ಬರವಣಿಗೆ.ಈಗ ಹೀಂಗಿಪ್ಪ ಸಂಕಂಗ ಕಡಮ್ಮೆ ಆಯಿದು ಅಲ್ದಾ?.ನಮ್ಮ ಮುಂದಾಣವು ಇನ್ನು ಕನಸಿಲಿ ಬೀಳೆಕ್ಕಾರೆ ಕಾಂಕ್ರೀಟು ಸಂಕಂದ ಹಾರಿ ಬೀಳೆಕ್ಕಷ್ಟೇ ಹೇಳಿ ಹೇಳ್ತ ಬೋಸಭಾವ!!!

  • ಧನ್ಯವಾದ೦ಗೊ ಗಣೇಶ ಮಾವ…….
   ಎಂಗಳ ಮನೆಗೆ ನಿ೦ಗದೆ, ಬೋಸ ಬಾವ೦ದೆ ಬನ್ನಿ… ಸ೦ಕ ನೋಡಿದ ಹಾ೦ಗೆದೆ ಆತು……ತೆಳ್ಳವು ರಸಾಯನ ತಿ೦ದಾ೦ಗೂ ಆತು………

   • ಗಣೇಶ ಮಾವ° says:

    ಅಪ್ಪೂ!!!!ಅವನ ಕರಕ್ಕೊಂಡು ಬರೆಕಾರೆ ಪೆಂಗಣ್ಣನೇ ಆಯೆಕ್ಕಷ್ಟೆ.

 3. ಚುಬ್ಬಣ್ಣ says:

  ಪುಟ್ಟಕ್ಕ೦ಗೆ ಬೈಲಿಂಗೆ ಸ್ವಾಗತ..
  ಸಂಕವ ಕನಸಿಲ್ಲಿ ದಾ೦ಟಿರೆ ಅಡ್ಡಿ ಇಲ್ಲೆ.. ಆದರೆ ಒರಗೆ೦ಡು ಆ ಸ೦ಕ ದಾ೦ಟಿರೆ ಕಷ್ಟವೇ.. 😉

  • ಧನ್ಯವಾದ೦ಗೊ ಚುಬ್ಬಣ್ಣ………
   ಅಪ್ಪು ಅಪ್ಪು ನಿ೦ಗ ಹೇಳಿದ್ದು ನಿಜ……….
   (ಈಗಳೂ ಹೆಚ್ಚಾಗಿ ಸ೦ಕವ ದಾ೦ಟುವಾಗ ಎನ್ನ ಕೈಯಿಯ ಅಪ್ಪನೇ ಹಿಡ್ಕೊ೦ಡು ಹೋಪದು!!!!!!!!!!!!)

 4. ಶ್ಯಾಮಣ್ಣ says:

  (ಈಗಳೂ ಹೆಚ್ಚಾಗಿ ಸ೦ಕವ ದಾ೦ಟುವಾಗ ಎನ್ನ ಕೈಯಿಯ ಅಪ್ಪನೇ ಹಿಡ್ಕೊ೦ಡು ಹೋಪದು!!!!!!!!!!!!)
  ಅಂಬಗ ಇಲ್ಲಿ ಹೆದರಿಕೆ ಆರಿಂಗಪ್ಪಾ? ಅಪ್ಪಂಗೋ? ಮಗಳಿಂಗೋ?

 5. Suvarnini Konale says:

  ಪುಟ್ಟಕ್ಕ :), ನಿನ್ನ ಹೆಸರೇ ಇಷ್ಟು ಚೆಂದ ಇದ್ದನ್ನೇ … ನೀನು ಶುದ್ದಿ ಹೇಳಿದ ಶೈಲಿ ಲಾಯ್ಕಿದ್ದು 🙂 ಮಳೆಯ ಬಗ್ಗೆ ಬರದಷ್ಟೂ, ಹೇಳಿದಷ್ಟೂ ಮುಗಿಯ, ಎಂತಗೆ ಹೇಳಿರೆ ಅದು “ಮಳೆ” !! ಪುತ್ತೂರಿನ ಹೋಟೆಲ್, ತೋಟಕ್ಕೆ ಮದ್ದುಬಿಡುವ ಶುದ್ದಿ , ಮಳೆ, ಗೋಕರ್ಣ… ಒಂದಕ್ಕೊಂದು ಸಂಬಂಧವೇ ಇಲ್ಲದ್ದ ಹಾಂಗಿಪ್ಪ ಶುದ್ದಿಗಳ ಒಂದಕ್ಕೊಂದು ಹೊಂದಿಸಿಗೊಂಡು ಲಾಯ್ಕಕ್ಕೆ ಬರದ್ದೆ, ಬೇರೆ ಬೇರೆ ಹೂಗಿನ ಒಂದೇ ಬಳ್ಳಿಲಿ ಕಟ್ಟಿ ಚಂದದ ಮಾಲೆ ಮಾಡಿದ ಹಾಂಗೆ 🙂
  ಒಳ್ಳೆದಾಗಲಿ ಪುಟ್ಟಕ್ಕ………………………….

 6. ವಿದ್ಯಾ ರವಿಶಂಕರ್ says:

  ಲಾಯಿಕ ಆಯಿದು ಪುಟ್ಟಕ್ಕೋ

 7. ವೈ ವಿ ಭಟ್ says:

  ಲಾಯಕಾಯಿದು. ತಿಳಿ ಹಾಸ್ಯ್ಸದ ಮಳೆಯ ತಂಪು ಒಳ್ಳೇದಿತ್ತು. ಕನ್ನಡಲ್ಲಿ ಹೆಚ್ಚು ಬರವಲೆ ಆವುತ್ತಿಲ್ಲೆ. ಪುಟ್ಟಕ್ಕನ ಬರವಣಿಗೆ ಕುಶಿಯಾತು. ತುಂಬ ಕನಸು ಕಾಣು .ಪುತ್ತೂರು ಬಿಟ್ಟೂ ತುಂಬ ಸಮಯ ಆತು. ಈ ಸರ್ತಿ ಗೋಕರ್ಣಕ್ಕೆ ಹೋಪಲೆ ಆಯಿದಿಲ್ಲೆ. ರಾಮ ಕಥೆ ಕೇಳೆಕ್ಕು ಹೇಳಿ ಅಶೆ ಇದ್ದು. ಆಗೊಸ್ತು ತಿಂಗಳಲ್ಲಿ ಹೋಯೆಕ್ಕು.

  Wish you all the best.

 8. Anagha R Bhat B C Road says:

  ಅತ್ತಿಗೆ, ನಿನ್ನ ಕತೆ ಓದಿ ಎನಗೆ ತು೦ಬಾ ಕುಶಿಆತು, ನೀನು ಮನೆಗೆ ಬ೦ದಪ್ಪಗ ಇನ್ನೂ ಕಥೆ ಹೇಳೆಕ್ಕು, ಬರೆತ್ತಾ ಇರು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *