ಇಂಟರ್ನೆಟ್ ಬೇಂಕಿಂಗ್-ಮನೆಂದಲೇ ವ್ಯೆವಹಾರ

ಮಳೆಗಾಲ ಮುಗುದತ್ತು ಹೇಳಿ ಜಾನ್ಸಿದ ಹಾಂಗೆ ಮೊನ್ನೆ ಮಧ್ಯಾಹ್ನ ಇದ್ದಕ್ಕಿದ್ದ ಹಾಂಗೆ ಮಳೆ ಬಂತು.
ಅನಿರೀಕ್ಷಿತ ಮಳೆ ಮಾತ್ರ ಅಲ್ಲ, ಅದರೊಟ್ಟಿಂಗೆ ನಮ್ಮ ಶ್ರೀಶನೂ ಕೀರ್ತಿಮಾಣಿಯೂ ಬಂದವು.
ಅವೂದೆ ರೆಜ ಅಪರೂಪವೇ. ಕಾಣದ್ದೆ ರೆಜ ಸಮಯ ಆತು, ಎಂತ ಕತೆ ಕೇಳಿದೆ ಇಬ್ರನ್ನೂ ಕೂಬಲೆ ಹೇಳಿಕ್ಕಿ.

ವರ್ಷದ ಅಕೇರಿ ಅಲ್ಲದಾ, ಎಲ್ಲರೂ ಮುಗುಶಲೆ ಹೇಳಿ ರಜೆ ಹಾಕ್ತಾ ಇದ್ದವು ಅಪ್ಪಚ್ಚಿ, ರೆಜಾ ಪೈಸೆ ಮಾಡುವೊ ಹೇಳಿ ಸಿಕ್ಕಿಪ್ಪಗ ಕಂಪೆನಿಲಿ ಓವರ್ ಟೈಂ ಮಾಡ್ತಾ ಇದ್ದೆ, ಪುರುಸೊತ್ತೇ ಇಲ್ಲೆ ಹೇಳಿದ ಶ್ರೀಶ.

ಚಿಕ್ಕಮ್ಮ ಇಲ್ಲೆಯಾ ಅಪ್ಪಚ್ಚಿ,  ಅಂಬಗ ನಿಂಗೊಗೆ ಆನು ಹಸಿರು ಚಾಯ ಮಾಡ್ತೆ ಹೇಳಿದವನೇ ಸೀದಾ ಅಡಿಗೆ ಕೋಣೆಗೆ ಹೋದ. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಅದೇ ಹೇಳ್ತ ಹಾಂಗೆ ಆತು ಎನ್ನ ಪರಿಸ್ಥಿತಿ. ಚಾಯ ಮಾತ್ರ ಅಲ್ಲ ಇಂದ್ರಾಣ ಅಡಿಗೆಯೂ ನಿನ್ನದೇ. ನಿನಗೆ ಪರಿಕರ್ಮಿ ಕೆಲಸಕ್ಕೆ ಇಂದು ಕೀತಿಯೂ ಇದ್ದ,  ಮೂರೂ ಜೆನಂಗೊ ಒಟ್ಟಿಂಗೆ ಕುದೊಂಡು ಉಂಬೊ ಹೇಳಿದೆ.

ಶರ್ಮ ಮಾವ, ಪರೀಕ್ಷೆಗೆ ಓದ್ತ ಗಡಿಬಿಡಿಲಿ ಇತ್ಲಾಗೆ ಬಪ್ಪಲೇ ಆಯಿದಿಲ್ಲೆ. ಅಮ್ಮ ಊರಿಂಗೆ ಹೋಯಿದು. ಶ್ರೀಶಣ್ಣನ ಅಡಿಗೆ ರುಚಿ ಎನಗೂ ನೋಡೆಕ್ಕು ಹೇಳಿ ಇತ್ತು. ಎಲ್ಲಾ ಒಟ್ಟಿಂಗೆ ಕೂಡಿ ಬಂತು ಹೇಳಿದ ಕೀರ್ತಿ ಮಾಣಿ. ಹೋಟ್ಲಿಂಗೆ ಹೋಗದ್ದೆ ಸುದರಿಕೆ ಆವ್ತನ್ನೆ, ಇಬ್ರು ಜೌವನಿಗರು ಇದ್ದವು, ಪಾತ್ರ ತೊಳತ್ತ ಕೆಲಸವೂ ಇಲ್ಲೆ ಹೇಳಿ ಕೊಶೀ ಆತು.

***

ತಿರುಗಿಂಡು ಇತ್ತಿದ್ದ ಫೇನ್ ನಿಂದಪ್ಪಗ ಶ್ರೀಶಂಗೆ ಕರೆಂಟ್ ಬಿಲ್ ಕಟ್ಟಿ ಆಯಿದಿಲ್ಲೆ ಹೇಳಿ ನೆಂಪಾತು ಕಾಣ್ತು. ಇಲ್ಲಿ ಕರೆಂಟ್ ಹೋತದ, ಎಂಗಳಲ್ಲಿ ಇನ್ನು ಬಂದು ಕನ್ನೆಕ್ಷನ್ ತೆಗೆಯವಾಯಿಕ್ಕು ಹೇಳಿದ ಶ್ರೀಶ.

ಅಲ್ಲ ಮಾರಾಯ, ನೀನು ಹೋಗಿ ಕ್ಯೂ ಲ್ಲಿ ನಿಂದು ಬಿಲ್ ಕಟ್ಟುವದಾ? ಕೇಳಿದೆ.

ಬೇರೆ ಎಂತ ವೆವಸ್ಥೆ ಇದ್ದು, ಪುರುಸ್ತೊತ್ತು ಇಪ್ಪಗ ಹೋಗಿ ಕಟ್ಟಿಕ್ಕಿ ಬಪ್ಪದು ಹೇಳಿದ.

ಬೇಂಕಿನ ಮೂಲಕ ಕಟ್ಟಲೆ ವೆವಸ್ಥೆ ಇದ್ದು. KEB ಗೆ ಹೋಗಿ ಒಂದು ಅರ್ಜಿ ಪೋರ್ಮ್ ತುಂಬುಸಿ ಕೊಡು. ಪ್ರತಿ ತಿಂಗಳು ನಮ್ಮ ಖಾತೆಂದ ಅವರ ಖಾತೆಗೆ ಸೀದಾ ಕರೆಂಟ್ ಬಿಲ್ ನ ಪೈಸೆ ಜಮೆ ಆವ್ತು ಹೇಳಿದೆ.

ಆದರೂ…. ರಾಗ ಎಳದ.

***

ECS (Electronic Clearing System) ಹೇಳುವ ಒಂದು ವೆವಸ್ಥೆ ಹೆಚ್ಚಿನ ಎಲ್ಲಾ ಬೇಂಕುಗಳಲ್ಲಿ ಇದ್ದು. ಪ್ರತಿ ತಿಂಗಳು ಕಟ್ಟೆಕ್ಕಾದ ಬಿಲ್ (ಕರೆಂಟ್, ಪೋನ್, ತಿಂಗಳ ವಾಯಿದೆಗೆ ಕಟ್ಟುವ ಬೇಂಕಿನ ರಿಕರಿಂಗ್ ಡೆಪೋಸಿಟ್, ಮ್ಯೂಚುವಲ್ ಫಂಡ್ ನವರ SIPSystematic Investment Plan, ಇತ್ಯಾದಿ) ಗಳ ಇದರ ಮುಖಾಂತರ ಕಟ್ಟಲೆ ಅಕ್ಕು. ಕಟ್ಟಲೆ ವಾಯಿದೆ ಆದ್ದರ ನೆಂಪು ಮಾಡಿ ಕ್ಯೂ ವಿಲ್ಲಿ ಹೋಗಿ ನಿಂಬದು, ಸರಿಯಾದ ಚಿಲ್ಲರೆ ಕೊಡಿ ಹೇಳ್ಸಿಗೊಂಬದು, ಹೀಂಗಿಪ್ಪ ತಲೆಬೆಶಿ ಇಲ್ಲದ್ದ  ನೆಮ್ಮದಿಯ ವ್ಯೆವಹಾರ.

ನಾವು ಆರಿಂಗೆ ಪಾವತಿ ಮಾಡೆಕ್ಕೊ, ಅಲ್ಲಿಂದ ಅರ್ಜಿ ನಮೂನೆ ತಂದು ಅದರಲ್ಲಿ ಕೇಳಿದ ವಿವರಂಗಳ ತುಂಬಿಸಿ, ಈ ವೆವಸ್ತೆಗೆ ಬೇಂಕಿನವರ ಅನುಮತಿ ಇದ್ದು ಹೇಳಿ ಅವರ ದಸ್ಕತ್ತು, ಸೀಲ್ ಹಾಕ್ಸಿ, ಒಂದು cancel ಮಾಡಿದ ಚೆಕ್ ಕಾಗದವನ್ನು ಸೇರಿಸಿ ಅರ್ಜಿ ಸಲ್ಲಿಸಿರೆ ಆತು. ಪ್ರತಿ ತಿಂಗಳು ಅದು ಅದರ ಕೆಲಸ ಮಾಡಿಂಡು ಇರ್ತು. ಬಿಲ್ ನ ಮೂಲ ಪ್ರತಿ ನವಗೆ ಬತ್ತ ಕಾರಣ ಎಷ್ಟು ಕಟ್ಟೆಕ್ಕಾದ್ದು ಹೇಳಿ ಗೊಂತಾವ್ತು. ಬೇಂಕಿನ ಪಾಸ್ ಪುಸ್ತಕಲ್ಲಿ ಪಾವತಿ ಮಾಡಿದ ವಿವರ ದಾಖಲು ಆವ್ತು. ಈ ವ್ಯೆವಹಾರಕ್ಕೆ ಬೇಂಕ್ ಯಾವುದೇ ಕಮಿಷನ್ ವಸೂಲು ಮಾಡ್ತಿಲ್ಲೆ.

ಇದೇ ರೀತಿ ನವಗೆ ಬೇರೆ ಬೇರೆ ಕಂಪನಿಗಳಿಂದ ಬರೆಕ್ಕಾದ ಡಿವಿಡೆಂಡ್, ನಮ್ಮ ಖಾತೆಗೆ ಸೀದಾ ಬತ್ತ ಹಾಂಗೆ ಕೂಡಾ ಇದೇ ವೆವಸ್ಥೆ ಉಪಯೋಗ ಆವ್ತು. ಇಲ್ಲಿ ನವಗೆ ಅನುಕೂಲ ಎಂತ ಹೇಳಿರೆ ಡಿವಿಡೆಂಡ್ ನ ಚೆಕ್ ಬಯಿಂದೋ ಇಲ್ಲೆಯೋ, ಪೋಸ್ಟಿಲ್ಲಿ ಕಾಣೆ ಆದಿಕ್ಕಾ, ಹೀಂಗಿಪ್ಪ ಸಂಶಯಂಗೊಕ್ಕೆ ಆಸ್ಪದ ಇಲ್ಲೆ.

ಖಾಲಿ ಚೆಕ್ ಕಾಗದವ cancel ಮಾಡಿ ಕೊಟ್ಟರೆ ಅದರ ದುರುಪಯೋಗ ಆಗದಾ? ಕೇಳಿದ ಕೀರ್ತಿ ಮಾಣಿ. ಅವಂಗೆ ಹೀಂಗಿಪ್ಪ ಸಂಶಯ ಬಪ್ಪದು ಬೇಗ.

ತಿಳುವಳಿಕೆ ಸಿಕ್ಕಿಕ್ಕಾರೆ ಸಂಶಯ ಬಂದು, ಅದು ನಿವಾರಣೆ ಆಯೆಕ್ಕು. ಮಕ್ಕಳಲ್ಲಿ ಇದು ಒಳ್ಳೆ ಲಕ್ಷಣ.

ಚೆಕ್ ಕಾಗದದ ಕೆಳಾಣ ಲೈನಿಲ್ಲಿ ನಂಬರ್ ಇರ್ತಲ್ಲದಾ, ಅದು ನಮ್ಮ ಬೇಂಕಿನ ವಿವರ ಕೊಡ್ತು. ಅದಕ್ಕೆ ಬೇಕಾಗಿ ಅವು ಕೇಳುವದು.
MICR
[Magnetic Ink Character Recognition]
ಹೇಳ್ತ ವ್ಯವಸ್ಥೆಲಿ ಈ ನಂಬರಿನ (9 ಅಂಕೆಯ ಸಂಖ್ಯೆ) ನಾವು ಅರ್ಜಿಲಿ ಕೊಟ್ಟ ವಿವರಂಗಳ ಒಟ್ಟಿಂಗೆ ದಾಖಲು ಮಾಡ್ತವು. Cancel  ಮಾಡಿದ ಚೆಕ್ ದುರುಪಯೋಗ ಅಪ್ಪ ಸಾಧ್ಯತೆ ಇಲ್ಲೆ ಹೇಳಿದೆ.

ಶ್ರೀಶಂಗೂ ಇದೇ ವ್ಯೆವಸ್ಥೆ ಅಕ್ಕು ಹೇಳಿ ನಿಜ ಮಾಡಿಗೊಂಡ.

ಬೇಂಕಿನ ಬಯಲಿಂಗೆ ಲಾಗ ಹಾಕಲಿಪ್ಪ ಏರ್ಪಾಡು

***

ಮೊನ್ನೆ ಎನ್ನ ಫ್ರೆಂಡಿಂಗೆ ಪೀಸ್ ಕಟ್ಟಲೆ ಅರ್ಜೆಂಟಾಗಿ ಪೈಸ ಬೇಕಿತ್ತು. ಅದರ ಅಪ್ಪ ಬೆಂಗಳೂರಿಲ್ಲಿ ಹಾಕಿದ ಪೈಸೆ ಇದರ ಅಕ್ಕೌಂಟಿಂಗೆ ಕೆಲವೇ ಗಂಟೆ ಸಮಯಲ್ಲಿ ಕ್ರೆಡಿಟ್ ಆಯಿದಡ. ಅದು ಹೇಂಗೆ ಮಾವ ಕೇಳಿದ ಕೀರ್ತಿ ಮಾಣಿ.

ಈಗ ಇಲೆಕ್ಟ್ರೋನಿಕ್ ಮಾಧ್ಯಮ ತುಂಬಾ ಮುಂದೆ ಹೋಯಿದು. ಬೇಂಕಿನವು ಅದರ ಸದುಪಯೋಗ ಮಾಡ್ತವು. ನವಗೂ ಅನುಕೂಲಂಗೊ ತುಂಬಾ. ಮನೆಂದಲೇ ಬೇಂಕಿನ ವ್ಯವಹಾರ ಮಾಡ್ಲಕ್ಕು ಹೇಳಿದೆ.

***

NEFT (National Electronic Fund Transfer): ಇಲೆಕ್ಟ್ರೋನಿಕ್ಸ್ ಮಾಧ್ಯಮದ ಮೂಲಕ ಪೈಸೆಯ ಒಂದು ಬೇಂಕಿನ ಖಾತೆಂದ ಇನ್ನೊಂದು ಬೇಂಕಿನ ಖಾತೆಗೆ ವರ್ಗಾವಣೆ ಮಾಡುವ ವ್ಯವಸ್ಥೆ. ರಿಸರ್ವ ಬೇಂಕಿನ ಪ್ರಕಟಣೆ ಪ್ರಕಾರ ಸುಮಾರು 70 ಸಾವಿರ ಬ್ರೇಂಚ್ ಇದರಲ್ಲಿ ಭಾಗವಹಿಸುತ್ತವು.  ಇದರ ಮೂಲಕ ವ್ಯೆವಹಾರ ಮಾಡ್ಲೆ, ನಾವು ಎಂತ ಮಾಡೆಕ್ಕು ನೋಡುವೊ°

ನಮ್ಮ ಖಾತೆ ಇಪ್ಪ ಬೇಂಕಿಲ್ಲಿ, ಇಂಟರ್ನೆಟ್ ಬೇಂಕಿನ ವ್ಯೆವಸ್ಥೆ ಇದ್ದಾ ತಿಳ್ಕೊಂಡು, ನವಗೆ ಅದರಲ್ಲಿ ವ್ಯೆವಹಾರ ಮಾಡ್ಲೆ ಬೇಕಾದ ಅನುಮತಿ ಕೊಡೆಕು ಹೇಳಿ ಒಂದು ಅರ್ಜಿ ಸಲ್ಲುಸೆಕ್ಕು. ಇದರಲ್ಲಿ ನವಗೆ ಅನುಕೂಲ ಅಪ್ಪ ಹಾಂಗೆ ಒಂದು Log on ID (ಅವರ ಬಯಲಿಂಗೆ ಲಾಗ ಹಾಕಲೆ ಗುರ್ತ ಹೇಳುವ ಒಂದು ಹೆಸರು) ಕೊಡೆಕು.

ಇದಾದ ಕೆಲವು ದಿನ ನಂತ್ರ, ಡೆಬಿಟ್ ಕಾರ್ಡಿಂಗೆ ಬಂದ ಹಾಂಗೆ ಇದಕ್ಕೂ  ಒಂದು ಗುಟ್ಟು ಸಂಖ್ಯೆ ಬತ್ತು. ಇದಾದ ನಂತ್ರ ಮನೆಲಿ ಕೂದೊಂಡು ಇದರಲ್ಲಿ ವ್ಯೆವಹಾರ ಸುರು ಮಾಡ್ಲೆ ಆವುತ್ತು. ಸುರುವಾಣ ಸರ್ತಿ ಲಾಗ ಹಾಕಿ ಅಪ್ಪಗ ಅದರಲ್ಲಿ ನಮ್ಮ ಗುಟ್ಟು ಶಬ್ದವ (log on password) ಬದಲುಸುವದರೊಟ್ಟಿಂಗೆ ಇನ್ನೊಂದು ಗುಟ್ಟು ಶಬ್ದವನ್ನು (Authorisation Password) ದಾಖಲು ಮಾಡೆಕ್ಕು. ಮೊದಲಾಣ ಗುಟ್ಟುಶಬ್ದ ಲಾಗ ಹಾಕಲೆ, ಮತ್ತಾಣ ಗುಟ್ಟುಶಬ್ದ ಪೈಸೆ ವ್ಯೆವಹಾರ ಮಾಡುವಾಗ ಒಪ್ಪಿಗೆ ಕೊಡಲೆ, ದಸ್ಕತ್ತು ಹಾಕುತ್ತಕ್ಕೆ ಪಗರ. ಇದರ Electronic Signature ಹೇಳ್ಲಕ್ಕು.

ಇದು ಅಜ್ಜ ಕವಾಟಿಂಗೆ ಬೀಗ ಹಾಕುತ್ತ ಹಾಂಗೆ ಆತನ್ನೆ. ಕವಾಟಿನ ಬಾಗಿಲು ತೆಗವಲೆ ಒಂದು ಬೀಗದ ಕೈ, ಪೈಸೆ ತೆಗವಲೆ ಇನ್ನೊಂದು ಹೇಳಿದ ಕೀರ್ತಿ ಮಾಣಿ. ಅರ್ಥ ಆಯಿದು ಮಾಣಿಗೆ.

ನಮ್ಮ ಖಾತೆಂದ ಇನ್ನೊಬ್ಬರ ಖಾತೆಗೆ ಪೈಸೆ ವರ್ಗಾವಣೆ ಮಾಡುವದು ಹೇಂಗೆ?:

ಬೇಂಕಿನ ಇಂಟರ್ನೆಟ್ ಬಯಲಿಂಗೆ ಲಾಗ ಹಾಕಿ ಅದರಲ್ಲಿ Fund Transfer ಹೇಳ್ತಲ್ಲಿಂಗೆ ಹೋಗಿ ಹೊಸತ್ತಾಗಿ ಸದಸ್ಯತ್ವ ಮಾಡೆಕ್ಕು (enrol). ಪ್ರತಿಯೊಂದು ಬೇಂಕಿಂಗೂ 11 ಅಂಕೆ ಸಂಖ್ಯೆ ಇಪ್ಪ ಒಂದು IFSC (Indian Financial System Code) ನಂಬ್ರ ಇರ್ತು. ಖಾತೆ ಪುಸ್ತಕಲ್ಲಿ (Pass Book) ಇದರ ವಿವರ ಇರ್ತು. ಗೊಂತಿಲ್ಲದ್ದರೆ ರಿಸರ್ವ್ ಬೇಂಕಿನ http://www.rbi.org.in/scripts/neft.aspx. ಸೈಟಿಲ್ಲಿ ಪಡಕ್ಕೊಂಬಲೆ ಅಕ್ಕು. ಇದರೊಟ್ಟಿಂಗೆ, ಸಂದಾಯ ಆಯೆಕ್ಕಾದವನ ಖಾತೆಯ ನಂಬ್ರ, ಬೇಂಕಿನ ವಿಳಾಸ, ಅವರ ವಿಳಾಸ, ಮತ್ತೆ ಪೋನ್ ನಂಬ್ರ ದಾಖಲಿಸೆಕ್ಕು. ಇಷ್ಟು ಮಾಡಿ confirm ಮಾಡೆಕ್ಕು. ಇಲ್ಲಿಗೆ ಸೈಟಿಲ್ಲಿ ಸದಸ್ಯತ್ವ ಮಾಡ್ತ ಕೆಲಸ ಆತು.

ಇದಾದ ಕೂಡ್ಲೇ ನಮ್ಮ ಮಿಂಚಂಚೆಗೆ (e-mail ) ಒಂದು ಗುಟ್ಟು ಸಂಖ್ಯೆ ಬತ್ತು. ಆ ಗುಟ್ಟು ಸಂಖ್ಯೆಯ ಪುನಃ ಸೈಟಿಲ್ಲಿ ದಾಖಲು ಮಾಡಿರೆ, ಆ ಖಾತೆ ಚುರುಕು (Activate) ಆವುತ್ತು.

ಬೇರೆವಕ್ಕೆ ಪೈಸೆ ಕಳುಸುದರಿಂದ ಮದಲು ಅವರ ವಿವರ ಭರ್ತಿ ಮಾಡೆಕ್ಕು

ಚುರುಕು ಆಗದ್ದೆ ಅದರಲ್ಲಿ ವ್ಯೆವಹಾರ ಮಾಡ್ಲೆ ಎಡಿಯ.

ಮುಂದೆ ನಮ್ಮ ಪ್ರಯಾಣ ಬಯಲಿಲ್ಲಿ Fund Transfer Request ಇಪ್ಪಲ್ಲಿಗೆ. ಆ ಪುಟವ ಬಿಡುಸಿ ಅಪ್ಪಗ ಅದರಲ್ಲಿ ನಮ್ಮಯಾವ ಖಾತೆಂದ ಪೈಸೆ ಸಂದಾಯ ಆಯೆಕ್ಕಾದ್ದು ಅದರ ವಿವರ, ಜಮೆ ಮಾಡೆಕ್ಕಾದವನ ಹೆಸರು, ಮೊತ್ತ ಇಷ್ಟು ಹೇಳ್ತ ವಿವರಂಗಳ ಕೊಟ್ಟು submit ಮಾಡೆಕ್ಕು. ನಮ್ಮ Authorisation Password ಕೊಟ್ಟಪ್ಪಗ ಅವನ ಖಾತೆಗೆ ಹಣ ಸಂದಾಯ ಆವುತ್ತು.

ಇಲ್ಲಿ ಸಂದಾಯ ಮಾಡಿದ ಕೂಡ್ಲೇ ಅಲ್ಲಿಗೆ ಎತ್ತುತ್ತೋ? ಕೇಳಿದ ಶ್ರೀಶ, ಅಡಿಗೆ ಕೋಣೆಂದಲೇ. ಕೆಲಸ ಅಲ್ಲಿ ಆದರೂ ಅವನ ಕೆಮಿ ಪೂರಾ ಇಲ್ಲಿಯೇ, ಆನು ಹೇಳುವದರ ಕೇಳ್ತಲ್ಲಿಯೇ.

ನಾವು ಕಳಿಸಿದ ಬೇಡಿಕೆ (request), ರಿಸರ್ವ್ ಬೇಂಕಿಲ್ಲಿ ಅದಕ್ಕೆ ಹೇಳಿಯೇ ಪ್ರತ್ಯೇಕ ವಿಭಾಗ ಇದ್ದು. ಅಲ್ಲಿಗೆ ಹೋವುತ್ತು. ಅಲ್ಲಿ ವಾರದ ದಿನಂಗಳಲ್ಲಿ ಆದರೆ ಉದಿಯಪ್ಪಗ 9 ಘಂಟೆಂದ ಹೊತ್ತೋಪಗ 7 ಘಂಟೆ ವರೆಗೆ , ಪ್ರತಿ ಘಂಟೆಗೊಂದರಿ ವರ್ಗಾವಣೆ ಮಾಡ್ತವು. ಶನಿವಾರಂಗಳಲ್ಲಿ ಉದಿಯಪ್ಪಗ 9 ಘಂಟೆಂದ, ಮಧ್ಯಾಹ್ನ 1 ಘಂಟೆವರೆಗೆ ಪ್ರತಿ ಘಂಟೆಗೊಂದರಿ ಈ ಕೆಲಸ ನೆಡೆತ್ತು. ಹಾಂಗಾಗಿ ನಾವು ಇಲ್ಲಿ ಕಳುಸಿದ ಕೂಡ್ಲೆ ಸಿಕ್ಕದಿದ್ದರೂ ಒಂದೆರಡು ಘಂಟೆಂದ ಒಳ ಸಿಕ್ಕುಗು.

ಇದರ ಲಾಭ ಎಂತ ಹೇಳಿರೆ:

 • ಇದರ ಮೂಲಕ ಎಷ್ಟು ಪೈಸೆ ಬೇಕಾರು ಕಳುಸಲೆ ಆವುತ್ತು.
 • ಈ ವ್ಯೆವಹಾರಕ್ಕೆ ಬೇಂಕ್ ಯಾವುದೇ ಕಮಿಷನ್ ತೆಕ್ಕೊಳ್ತಿಲ್ಲೆ (31 March 2011 ರ ವರೆಗೆ)

  Fund Transfer : ಪೈಸೆ ಕಳುಸುತ್ತ ಪುಟ

 • ಪೈಸೆ ಸಿಕ್ಕೆಕ್ಕಾದವಂಗೆ ತುರ್ತಾಗಿ ಒದಗಿಸಲೆ ಆವುತ್ತು.
 • ನಮ್ಮ ವ್ಯೆವಹಾರ ಆದ್ದರ ಬಗ್ಗೆ ನಮ್ಮ ಮಿಂಚಂಚೆಗೆ ಮತ್ತೆ ಮೋಬೈಲ್ ಪೋನಿಂಗೆ ಬೇಂಕಿಂದ ಸಮೋಸ (message) ಅಂಬಗಳೇ ಬತ್ತು.
 • ವ್ಯೆವಹಾರ ಆದ್ದರ ಬಗ್ಗೆ ಅಂಬಗಳೇ ರಶೀದಿಯ ಪ್ರಿಂಟ್ ಮಾಡಿ ಮಡ್ಕೊಂಬ ವ್ಯೆವಸ್ಥೆ ಇದ್ದು.
 • ಯಾವುದೇ ಕಾರಣಕ್ಕೆ ನಾವು ಕಳಿಸಿದ ವಿವರ ಸರಿ ಇಲ್ಲದ್ದರೆ, ಹಣ ಅಂಬಗಳೇ ವಾಪಾಸ್ ಬಂದು ನಮ್ಮ ಖಾತೆಗೆ ಜಮೆ ಆವುತ್ತು.
 • ಚೆಕ್ ಕಳುಸಿದ್ದು ಎತ್ತಿದ್ದೋ ಇಲ್ಲೆಯೋ, ಸರಿ ಇದ್ದೋ ಇಲ್ಲೆಯೋ, ಹೀಂಗಿಪ್ಪ ಸಂಶಯಂಗೊಕ್ಕೆ ಆಸ್ಪದ ಇಲ್ಲೆ
 • ರಿಸರ್ವ್ ಬೇಂಕಿನ ಪ್ರಕಾರ ಈ ವ್ಯೆವಹಾರ ತುಂಬಾ ಸುರಕ್ಷಿತ.

***

RTGS (Real Time Gross Settlement) ಹೇಳುವ ಇನ್ನೊಂದು ವ್ಯೆವಸ್ಠೆ ಕೂಡಾ ಇದೇ ರೀತಿ ಕೆಲಸ ಮಾಡುತ್ತು. ಇಲ್ಲಿ ಒಂದು ಲಕ್ಷಕ್ಕಿಂತ  ಜಾಸ್ತಿ ಹಣ ಇದ್ದರೆ ಮಾತ್ರ ಆವ್ತಷ್ಟೆ. ಅದಕ್ಕಿಂತ ಹೆಚ್ಚು ಎಷ್ಟು ಬೇಕಾರೂ ಸಂದಾಯ ಮಾಡ್ಲೆ ಆವುತ್ತು

ಇದರ ಲಾಭಂಗೊ:

 • ಇಲ್ಲಿ NEFT ನ ಹಾಂಗೆ ಘಂಟೆಗೆ ಒಂದು ಸರ್ತಿ ವರ್ಗಾವಣೆ ಹೇಳ್ತ ನಿಯಮ ಇಲ್ಲೆ.
 • ಹಾಂಗಾಗಿ ನಮ್ಮ ಖಾತೆಂದ ಹಣ ಸಂದಾಯ ಆದ ಕೂಡ್ಲೆ, ಸಂದಾಯ ಆಯೆಕ್ಕಾದವರ ಖಾತೆಗೆ ವರ್ಗಾವಣೆ ಆವುತ್ತು.
 • ಆದರೆ ಇದಕ್ಕೆ ಬೇಂಕ್ ಒಂದು ಸಣ್ಣ ಮೊತ್ತವ ಕಮಿಷನ್ ಆಗಿ, ಹಣ ಕಟ್ಟುತ್ತವನ ಖಾತೆಂದ ಪಡೆತ್ತು.
 • ಸದ್ಯಕ್ಕೆ ಇದು 5 ಲಕ್ಷದ ವರೇಗೆ ಪ್ರತಿ ವರ್ಗಾವಣೆಗೆ ರೂ 25/= ಮತ್ತೆ ಅದಕಿಂತ ಮೇಲ್ಪಟ್ಟದಕ್ಕೆ ರೂ 50/=.
 • ಇದರ ವ್ಯೆವಹಾರದ ಸಮಯ ವಾರದ ದಿನಂಗಳಲ್ಲಿ ಉದಿಯಪ್ಪಗ 9:00 ರಿಂದ ಹೊತ್ತೋಪಗ 4:30 ವರೆಗೆ ಮತ್ತೆ ಶನಿವಾರ 9:00 ರಿಂದ 12:30 ವರೆಗೆ ಮಾತ್ರ.
 • ಬಾಕಿ ಎಲ್ಲಾ ಲಾಭಂಗೊ NEFT ವರ್ಗಾವಣೆಲಿ ಇಪ್ಪ ಹಾಂಗೆ.

***

ಇಂಟರ್ನೆಟ್ ಬೇಂಕಿಲ್ಲಿ ಇನ್ನು ಹಲವಾರು ನಮೂನೆಯ ವ್ಯೆವಹಾರಂಗಳ ಮಾಡ್ಲೆ ಆವುತ್ತು:

 • ನಮ್ಮ ಖಾತೆಂದ ಸಂದಾಯ ಆದ ಅಥವಾ ಖಾತೆಗೆ ಜಮೆ ಅದ ವಿವರಂಗಳ ಮನೆಲಿ ಇದ್ದೊಂಡು ನೋಡ್ಲೆ ಅಕ್ಕು
 • ನಮ್ಮ ಜೀವ ವಿಮೆ ಪೋಲಿಸಿಯ ಕಂತಿನ ಇದರ ಮೂಲಕ ಕಟ್ಟಲೆ ಸುಲಭ ಆವುತ್ತು. ಒಂದರಿ ಪೋಲಿಸಿಯ ನಂಬ್ರಂಗಳ  ದಾಖಲಿಸಿರೆ, ಯಾವಾಗ ಕಟ್ಟೆಕ್ಕು ಹೇಳಿ ಅದುವೇ ನೆನಪು ಮಾಡಿ ಕೊಡ್ತು.
 • ಕಟ್ಟಿದ್ದಕ್ಕೆ ರಶೀದಿ ಪ್ರಿಂಟ್ ತೆಗವದರ ಒಟ್ಟಿಂಗೆ, ನಮ್ಮ ಪಾಸ್ ಪುಸ್ತಕಲ್ಲಿಯೂ ಪ್ರತಿಯೊಂದು ವ್ಯೆವಹಾರದ  ವಿವರ ದಾಖಲು ಆವ್ತು.
 • ಯಾವುದೇ ಹಣ ಸಂದಾಯ ಆಯೆಕ್ಕಾದ್ದರ, ಬೇಡ ಹೇಳಿ ನಿಲ್ಲಿಸೆಕ್ಕಾರೆ (stop payment) ಮನೆಂದಲೇ ಸೂಚನೆ ಕೊಡ್ಲೆ ಆವ್ತು
 • ಆದಾಯ ತೆರಿಗೆ ಕಟ್ಟಲೆ ಮತ್ತೆ ಅದರ ಕಟ್ಟಿದ ವಿವರಕ್ಕೆ 26AS ಹೇಳ್ತ  ಪೋರ್ಮಿನ ಇದರಲ್ಲಿ ನೋಡಿ ಖಚಿತ ಮಾಡಿಗೊಂಬಲೆ ಆವ್ತು.

***

ಹೊತ್ತು ಸುಮಾರು ಆತು.
ಅಡಿಗೆ ಮಾಡಿದ್ದರ ಹೊಟ್ಟೆಗೆ ವರ್ಗಾವಣೆ ಮಾಡುವ ಕಾರ್ಯಕ್ರಮ ಸುರು ಮಾಡುವನೋ ಕೇಳಿದೆ. ಇದಕ್ಕೆ password ಎಂತ ಬೇಡನ್ನೆ, ಕೇಳಿದ ಕೀರ್ತಿ ಮಾಣಿ.
ಕೈ ಕಾಲು ಮೋರೆ ತೊಳಕ್ಕೊಂಡು ಬಪ್ಪದೇ ಇದಕ್ಕಿಪ್ಪ password ಹೇಳಿದೆ.
ಪುಳಿಯೋಗರೆ, ಅಶನ, ಮೊಸರು ಉಪ್ಪಿನಕಾಯಿಲಿ ಎಲ್ಲರ ಹೊಟ್ಟೆ ಖಾತೆ ಭರ್ತಿ ಆತು. ರಶೀದಿ ಬಂತು.

***

ಶರ್ಮಪ್ಪಚ್ಚಿ

   

You may also like...

23 Responses

 1. JAYASHRI says:

  DEAR SIR

  WHAT LANGUAGE THIS IS ? SORRY I HAVE NOT UNDERSTAND.

  • s.k.sharma says:

   ಇದು ಹವ್ಯಕ ಭಾಷೆ. ಕನ್ನಡ ಭಾಷೆಯದೇ ಒಂದು ಪ್ರಬೇಧ.
   ವೆಬ್ ಸೈಟ್ ಹೇಳುವಂತೆ ಇದು ಹವ್ಯಕ ಬ್ಲೋಗುಚ್ಛ

 2. ಭಾರೀ ಚೆ೦ದದ ವಿಷಯವ ಹೇಳಿದ್ದಿ ಅಪ್ಪಚ್ಚಿ…ಎನಗೂ ಎನ್ನ ಮಗ೦ಗು ಒಳ್ಳೆ ಪಾಠ ಆಯಿದು.
  ಆದರೆ ಎನ್ನ ಇ೦ದ್ರಾಣ ಅನುಭವ ಕೇಳಿ..ಭಾರೀ ಅರ್ಜೆ೦ಟ್ ಪೈಸೆ ಬೇಕಾತು, ಒಬ್ಬರು ಚೆಕ್ ಕೊಟ್ಟವು.ಭಾರೀ ಕೊಶಿಲಿ ತ೦ದು ಬೇ೦ಕಿ೦ಗೆ ಕೊಟ್ಟಪ್ಪಗ ಅವು ಹೇಳಿದವು “ನಾಕು ದಿನ ಕಳುದು ಹೇಳಿರೆ ಮ೦ಗಳವಾರ ಸಿಕ್ಕುತ್ತು, ಎ೦ಗ ಇದರ ಕಲೆಕ್ಷನ್ ೦ಗೆ ಹಾಕುದು ” ಹೇಳಿ. ತಲೆ ಅಡಿಯ೦ಗೆ ಹಾಕಿ ನಡೆದೆ.ಹಾ೦ಗಾಗಿ ಇದೆಲ್ಲ ವೆವಸ್ಥೆ ಇಪ್ಪಾದು ಕಾರ್ಪರೇಶನ್,ಕೆನರಾ ಮತ್ತೆ ಈಗಾಣ ಹೊಸ ಬೇ೦ಕುಗಳಲ್ಲಿ ಮಾತ್ರ ಹೇಳಿ ಎನ್ನ ಅನುಭವ…ಎನ್ನ ಪ್ರಶ್ನೆ..ಎಲ್ಲಾ ವೆವಸ್ಥೆ ಇಪ್ಪ ರಾಷ್ಟ್ರೀಕೃತ ಬೇ೦ಕಿಲಿ ಹಾ೦ಗೆ ಎ೦ತಕೆ ಹೇಳಿದವು?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *