ಜನ್ಮೋತ್ಸವ – ಜಯಂತಿ – ವರ್ಧಂತಿ

ಸುಡುಗಾಡ್ ಹತ್ರ ಬಂಪ್ದಕ್ಕೆ ಸಡಗರ ಎಂಥಕ್ಕೆ ?

“ಆನೋ ಭದ್ರಾಃ ಕೃತವೋ ಯಂತು ವಿಶ್ವತಃ ||
ಅಂದ್ರೆ ಚೆಲೋ ಇಪ್ಪ್ದು ಯಲ್ಲಾಕಡೆಗಿಂದ್ಲೂ ಬರಲಿ ಹೇಳಿ, ಹಿಂದ್ರಣವು ಹೇಳಿದ್ದ.
ಹಾಂಗ್ಹೇಳಿರೆ ಅಲ್ಲಿಂದಿಲ್ಲಿಂದ ಬಪ್ಪುದೆಲ್ಲದೂ ಇಲ್ಲಿಪ್ಪುದ್ನ ಗುಡಸಿ ಗುಂಡಾರ ಮಾಡ್ಬುಡ್ಳಿ ಹೇಳಲ್ಲ. ಆ ಆರ್ಷೇಯ ವಾಕ್ಯ ಪಶ್ಚಿಮದ ಜೀವನ ವಿಧಾನವ ಅನುಸರಣೆ ಮಾಡ್ಕಂಬು ಸಮರ್ಥಗೆ ಗುರಾಣಿ ಅಲ್ಲ.
ಆನೋ ಭದ್ರಾಃ… ನೆನಪ್ ಮಾಡ್ಕಂಡು ಆ ದೇಶದ ಸ್ವಚ್ಛತೆ ಅನುಶಾಸನ, ಶಿಸ್ತು, ಸಮಯಪ್ರಜ್ಞೆ, ದೇಶಾಭಿಮಾನ ಇದ್ರನೆಲ್ಲ ರೂಢಿಗೆ ತರವೇ ಹೊರ್ತು ಅತ್ಲಗಣ ವೇಶ ಭೂಷ್ಣ, ಆಹಾರವಸ್ತು, ಆಹಾರಕ್ರಮ, ಜೀವನಶೈಲಿ, ಹಬ್ಬ, ಉತ್ಸವ, ಈ ’ಡೇ’ ಗಳ ಆಚರಣೆ ಇದೆಲ್ಲ ಇದ್ದಲಿ ಅದ್ನೆಲ್ಲ ಮಾಡುಲಿಲ್ಲೆ.

ಅದು ನಮ್ಮ ದೇಶಕ್ಕೆ ಅಜಿಬಾತ್ ಒಪ್ತಿಲ್ಲೆ.
ಅದ್ರಲ್ಲೂ ಯಂಗಕ್ಕೆ ಹವ್ಯಕರಿಗಂತೂ ಹರ್ಗೀಸ್ ಬೇಡ. ಈಗಿತ್ಲಾಗಿ (ನಂಗ್ಳ ಸಮಾಜದಲ್ಲೂ) ಜೋರಾಗಿ ಬೀಸ್ತ್ನೇ ಇಪ್ಪು ಗಾಳಿ ಅಂದ್ರೆ ಅದು.
ವಂದದಕ್ಕೆ ವದೊಂದ್ ಆಚಿಥಿ ಆಚರಣೆ. ಅದ್ರಲ್ಲೂ ಈ birthday ಅಂತೂ ಅದೆಲ್ಲಿ ವರೆಗೆ ಬಂಜು ಹೇಳಿರೆ ಗುರುಗಳ ಬರ್ತಡೇ ದಿವ್ಸ ಹೊಸ ಯೋಜನೆ ಘೋಷ್ಣೆ ಮಾಡಿದ್ದ.
ಅದೇ ದಿನ ನಾವ್ ಒಂದೆನರು ಮಾಡ್ವ ಹೇಳಿ ಶಿಷ್ಯರೇ ಮಾತಾಡ್ತ. ಯತಿಗಳಿಗೆಲ್ಲ ಹುಟ್ಟಿದ ದಿನ ಅಂದ್ರೆ ಅದು, ಅವು ಸನ್ಯಾಸ ತೆಕ್ಕಂಡ್ ದಿನ ಹೇಳು ಸಾಮಾನ್ಯ ಕಲ್ಪನೆಯೂ ಇಲ್ಲಿಗಿದ್ದ ಪರಿಸ್ಥಿತಿ ಬಂಜು.

ಅಲ್ಲ ಹುಟ್ಟಿದ ತಾರೀಖು ತೆಳದಿಟ್ಗಳವು ಅದು ಸರ್ಟಿಫಿಕಿಟ್ನಲ್ಲಿ ಇರ್ತಪ.
ಎಷ್ಟ್ ವರ್ಷಾತು ಯಂಗೆ ಹೇಳಿ ಆಗಾಗ ನೆನಪು ಮಾಡ್ಕಂಡು, ಯೇನರು ಚೆಲೋ ಕೆಲ್ಸ ಮಾಡುಲೆ ಇನ್ನೆಷ್ಟು ಕಾಲ ವಳತ್ತು ಹೇಳಿ ಯೋಚ್ನೆ ಮಾಡುದೇನೋ ಸರಿ ಇದ್ದಪ. ಅದ್ರ ಬಿಟ್ಟಕ್ಕಿ.
ಆ ದಿನಕ್ಕಾಗಿ ಬಕಪಕ್ಷಿ ಹಾಂಗೆ ಕಾದ್ಕಂಡಿದ್ಕಂಡು ಸತ್ನಾರ್ಣಕತೆ ಪೂಜೆಗಿಂತ ಸಂಭ್ರಮ ಪಟ್ಕಂಡು ಅಂಡಪಿಂಡಗಳ ಕೇಕ್ ಹಂಚ್ಗಂಡು, ಹಲವಾರ್ ಜನರಿಂದ ವಿಶ್ (ಆಶೀರ್ವಾದ ಅಲ್ಲ) ಮಾಡ್ಸ್ ಮಾಡ್ಸಗಂಡು ಥ್ಯಾಂಕ್ಸ್ ಹೇಳ್ತ ಹೇಳ್ತ ನೆಲನೇ ಬಿಟ್ ಓಡಾಡುದ ನೋಡ್ದ್ರೆ,
ನಗೆಯು ಬರುತಿದೆ ಯನಗೆ ನಗೆಯು…
ನಂಗ ಹವ್ಯಕ್ರು ತಾರ್ಕಿರು, ವಿಚಾರವಂತರು ಹೇಳ್ತ ಬೇರೆ ಸಮಾಜದವೆಲ್ಲ.
ಇಂಥ ಅನುಕರಣೆ ವಿಚಾರಲ್ಲಿ ಮಾತ್ರ ಯೆಂಥಕ್ಕೆ ಹಳ್ಳಕ್ ಬಿಜ್ಜ ಹೇಳಿ ಗುತ್ತಾಗ್ತಿಲ್ಲೆ.
ಇನ್ನೊಂದ್ ನಮೂನಿ ಜನನೂ ಇದ್ದ. ಈ ಕೇಕು ಕ್ಯಾಂಡ್ಳು ಎಲ್ಲ ವಿದೇಶಿ ಶೈಲಿ ಅಲ್ದಾ ಅದ್ಕೆಯ, ಈ ಹುಟ್ಟಿದ ಹಬ್ಬ ಹೇಳು ಬರ್ತಡೇ ದಿನ (ಕ್ರಿಶ್ಚಿಯನ್ ಕ್ಯಾಲೆಂಡರ್ನ ಲೆಖ್ಖದಲ್ಲಿ) ಮಾಣಿ/ಕೂಸಿ ಗೆ ಹೊಸಬಟ್ಟೆ ಹಾಕ್ಸಿ, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಸಿ, ಅಥವಾ ಮನೇಲೇ ಶೀಂಕಜ್ಜಾಯ ಮಾಡಿ, ದೀಪ ಹಚ್ಸಿ (ಆರ್ಸಿಅಲ್ಲ ಮತ್ತೆ) ಆ.. ಪದ್ಯ ಹೇಳಿ ಚಪ್ಪಾಳೆ ಹಾಕ್ಸಿ, ಉಡ್ಗರೆ ತೆಕ್ಕಂಡು ಆಚರಣೆ ಮಾಡ್ತ.
ಅಂದ್ರೆ ವಿದೇಶೀ ಪರಿಲ್ಪನೆ ಸ್ವದೇಶೀ ಶೈಲಿಯಲ್ಲಿ. ನಂಗಂತೂ ಇದು ಪಂಚಪಾತ್ರೆ ಉದ್ಧರಣೆ ಬಳ್ಶಕಂಡು ತೀರ್ಥದ್ಹಾಂಗೆ ವೈನ್ ಕೊಟ್ಟಾಂಗ್ ಕಾಣ್ತು.
ಈಗಿತ್ಲಾಗಿ ಕೆಲವರು ಸಾಹಿತಿ ಹೇಳ್ಕಂಡು ಇಂಗ್ಲಿಶ್ನಲ್ಲಿ ಯೋಚನೆ ಮಾಡ್ಕಂಡು ಕನ್ನಡದಲ್ಲಿ ಬರೆತ್ವಲಿ ಹಾಂಗಾತು ಇದು.
ನಂಗ ತೀರಾ ಆಳಕ್ಕೆ ಯೋಚನೆ ಮಾಡುದು ಬೇಡ್ದಪ್ಪ ಇದ್ಕೆ.
ನೋಡಿ, ಮನುಷ್ಯ ಹುಟ್ದಾಗಿಂದ್ಲೇ ಒಂದ್ ಸರತಿಸಾಲಿಗೆ ಸೇರ್ಕತ್ತ ಅಲ್ದಾ ?
ಅದ್ಯಾವ್ ಟಿಕೆಟ್ ಸಾಲು ಅಂದ್ರೆ.. ಈ ಲೋಕ ಬಡುಲೆ ಹೋಗ್ತಾ ಇಪ್ಪು ಸಾಲು. ಪ್ರತಿ ವರ್ಷ ನಾವ್ ಹುಟ್ಟಿದ ಕ್ಯಾಲೆಂಡರ್ ದಿನಾಂಕ ಬಂದಾಗ ಭಗವಂತ್ ಕೊಟ್ ಆಯುಷ್ಯದಲ್ಲಿ ಒಂದ್ವರ್ಷ ಕಮ್ಮಿ ಆತು ಹೇಳಿ ಅರ್ಥ ಅಲ್ದಾ ?
ಈ ಕೌಂಟ್ಡೌನ್ ಆಟಕ್ಕೆ ಖುಷಿ ಪಡುಲೆಂಥ ಇದ್ದು ಹೇಳೇ ಯಂಗೆ ಅರ್ಥ ಆಗ್ತಿಲ್ಯಪ.
ಪ್ರತಿ ಸಲಿನೂ ಯಂಗತೂ ಆ ದಿನ ಬಂದಾಗ ಅಯ್ಯೋ ಯೆಂಥ ಹೇಳ್ಕಂಬು ಸಾಧ್ನೆನೂ ಮಾಡಿಗಿದ್ದೆಯಾ ಇನ್ನೊಂದ್ ವರ್ಷ ಕಳ್ದಹೋತಲಾ ಹೇಳಿ ಪಶ್ಚಾತ್ತಾಪ ಪಟ್ಗಂಬನ ಹೇಳಿ ಕಾಣ್ತು.
ಯಾವಾಗೂ ಸಕಾರಾತ್ಮಕ ಧೋರಣೆ (ಪೊಜಿಟಿವ್ ಥಿಂಕಿಂಗ್) ಮಾಡವು ಹೇಳ್ತ ಇಪ್ಪು ಅಕ್ಕಯ್ಯ ಒಂದ್ ಹೇಳ್ತಿತ್ತು.
ಇಷ್ಟವರ್ಷ ಬದ್ಕಿದ್ವಲ ಅದೇ ಖುಷಿಗೆ ಸ್ವೀಟ್ ಹಂಚುದು ಮಾರಾಯ ಹೇಳಿ. ಧನಾತ್ಮಕ ಮನೋಧರ್ಮ ಇರವು ಆದ್ರೆ ಶೂರ್ಪಣಖಿಯ ಸೀತೆ ಹೇಳಿ ತಿಳ್ಕಂಬುದು ಹೇಂಗೆ ? ಜಾತಸ್ಯ ಹಿ ಮರಣಂ ಧ್ರುವಮ್ ಅಲ್ದಾ ?
ಸುಣ್ಣಬಣ್ಣ ಮಾಡ್ಕಂಡು ತೋರಿಕೆಗೆ ವಯಸ್ ಮರೆಸ್ಗಂಡ್ರೂ ಅವಂಗೆ ಮೋಸಮಾಡಿಕ್ಕಿ ಇಲ್ಲೇ ಝಾಂಡಾ ಹೂಡುಲೆ ಆಗ್ತಾ ?
ಹಾಂಗೂ ನಮ್ಮಂಥ ಸಾಮಾನ್ಯ ಜನರ ಹುಟ್ಟೆಂಥ ಹುಟ್ಟಾ ಅದು !
” ಸ ಜಾತೋ ಯೇನ ಜಾತೇನ ಯಾತಿ ದೇಶಸ್ಸಮುನ್ನತಿಮ್ |
ಹೇಳಿ ತಿಳ್ದವು ಹೇಳಿದ್ದ. ಹೌದು ಖಂಡಿತ ಈ ಬರ್ತಡೇ ಆಚರಣೆ ಮಾಡವು ಆದ್ರೆ ಯಾರದ್ದು ? ನಾಳೆ ಹತ್ರ ಬಂತಲಿ..
ಬಾಲಮುಕುಂದ, ಗೌರಿಕಂದ ಅವರ ಜನ್ಮೋತ್ಸವನ ಮಾಡವು ವಿಜ್ರಂಭಣೆಯಿಂದ.
ದೇವರನ್ನು ತೋರ್ಸಗೊಡುವ ಮಹಾತ್ಮರು ಪುಣ್ಯಾತ್ಮರು ಇದ್ವಲ್ದಾ, ನಮ್ಮ ಗುರುಗಳಂಥವರು, ಸಂನ್ಯಾಸಿಗಳು, ಸಾಧುಸಂತರು, ಅವರ ವರ್ಧಂತಿ ಜೋರಾಗೇ ಮಾಡವು.

ಋಷಿಮುನಿಗಳು, ಯತೀಶ್ವರರು, ಪುಣ್ಯಚೇನರು, ಸಾಧಕಕೀರ್ತಿಶೇಷರು ಮುಂತಾದವರ ಜಯಂತಿಯ ಜರ್ಬದಸ್ತಾಗೆ ಮಾಡವು.
ನಮ್ಮ ದೇಶ್ದಲ್ಲನ್ಕೂ ವಾಲ್ಮೀಕಿ, ವ್ಯಾಸ, ವಿಶ್ವಾಮಿತ್ರ, ದೈವರಾತ, ಭಗತ್ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ ಆಜಾದ್, ಸುಭಾಷ್ಚಂದ್ರಬೋಸ್, ಲಕ್ಷ್ಮೀಬಾಯಿ, ರಾಮಕೃಷ್ಣರು, ಅರವಿಂದಘೋಷರು ಮುಂತಾದ ಸಹಸ್ರ ಸಹಸ್ರ ಕೀರ್ತಿಶೇಷ ಹೆಸರುಗಳು ಸಿಗ್ತು ಈ ವರ್ಧಂತಿ ಜಯಂತಿ ಆಚರಣೆ ಮಾಡುಲೆ.
ಹಾಂಗ್ ಮಾಡಿರೆ ಈ ಆಚರ್ಣೆಗೂ ಒಂದ್ ಅರ್ಥ ಇರ್ತು, ನಂಗಕ್ಕೂ ಪುಣ್ಯಸಂಚಯ ಆಗ್ತು.
ನಂಗ್ಳ ಮೂಲ ಪರಂಪರೆ, ಸಾಂಪ್ರದಾಯ, ಸಂಸ್ಕೃತಿ, ಒಟ್ಟಾರೆ ಧರ್ಮಕ್ಕೆ ಭಂಗಬರದಾಂಗೆ ಹಿತವೂ ಮನೋಹರವೂ ಆಗಿದ್ರೆ ಅತ್ಲಾಗಂದನ್ನೂ ತೆಕ್ಕಂಬ.
ಹೊಸತು ಹಳತು ಎಂದು ಭೇದ ಮಾಡಿಗಿದ್ದೆಯಾ ಒಳ್ಳೆದು ಕೆಟ್ಟದ್ದು ಅಂತಷ್ಟೇ ಯೋಚನೆ ಮಾಡಿ,
’ ನೀರಕ್ಷೀರ ವಿಭಾಗೇನ ಹಂಸೋ ಹಂಸಃ | ಎಂಬತ್ತಪ್ಪ ಏನಂಬ್ರಿ.
(ಖಂಡಿತಾ ಮಥನಕ್ಕೆ ಅವಕಾಶಿದ್ದು, ಮೊಸರನ್ನೇ ಕಡೆವ, ಮಜ್ಗೆನೋ, ನೀರ್ನೋ, ಅಥವಾ ಕೆಸರನ್ನೋ ಬೇಡ)

ಕಾಂತಣ್ಣ

   

You may also like...

8 Responses

 1. Krishnamohana Bhat says:

  Wah!Kantannange oppa kodadre tappagi hooku.enta vichaara estu chendake helidavu jai kantanna.oodi elloru aalochane maadi.oppangalottinge

 2. ಕುವೈತ್ ಭಾವ says:

  ಹಾಯ್ ಶ್ರೀಕಾಂತಣ್ಣ, ವಿಚಾರ ಚಲೋ ಇದ್ದು. ಚಿಂತಿಸೆಕ್ಕಾದ್ದೆ ಸರಿ. ಎಲ್ಲಿಂದ ಆರಂಭ ಮಾಡೋವ ?

 3. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಚಿಂತನೆಗೆ ಹಚ್ಚಿಸುವ ಲೇಖನ. ನಾವು ಎಷ್ಟು ವರ್ಷ ಬದುಕಿದ್ದು ಹೇಳ್ವದಕ್ಕಿಂತಲೂ ಹೇಂಗೆ ಬದುಕಿದ್ದು ಹೇಳ್ವದು ಮುಖ್ಯ. ನಮ್ಮ ಹುಟ್ಟು ಹಬ್ಬವ ಬೇರೆಯವು ಆಚರಿಸುವ ಹಾಂಗಿಪ್ಪ ಕೆಲ್ಸ ಮಾಡ್ಲೆ ಪ್ರಯತ್ನ ಮಾಡೆಕ್ಕು ಹೇಳುವ ಒಂದು ಸಂದೇಶ ಕೊಟ್ಟ ಲೇಖನ.
  ಮನಸ್ಸಿಂಗೆ ಹಿಡಿಸಿದ ಮಾತುಗೊ:
  “ಅಲ್ಲಿಂದಿಲ್ಲಿಂದ ಬಪ್ಪುದೆಲ್ಲದೂ ಇಲ್ಲಿಪ್ಪುದ್ನ ಗುಡಸಿ ಗುಂಡಾರ ಮಾಡ್ಬುಡ್ಳಿ ಹೇಳಲ್ಲ”
  “ಆ ದೇಶದ ಸ್ವಚ್ಛತೆ ಅನುಶಾಸನ, ಶಿಸ್ತು, ಸಮಯಪ್ರಜ್ಞೆ, ದೇಶಾಭಿಮಾನ ಇದ್ರನೆಲ್ಲ ರೂಢಿಗೆ ತರವೇ ಹೊರ್ತು ಅತ್ಲಗಣ ವೇಶ ಭೂಷ್ಣ, ಆಹಾರವಸ್ತು, ಆಹಾರಕ್ರಮ, ಜೀವನಶೈಲಿ, ಹಬ್ಬ, ಉತ್ಸವ, ಈ ’ಡೇ’ ಗಳ ಆಚರಣೆ ಇದೆಲ್ಲ ಇದ್ದಲಿ ಅದ್ನೆಲ್ಲ ಮಾಡುಲಿಲ್ಲೆ”

 4. vishnandana says:

  Thumba olle tharkika lekhana. Kelavu varshada hinde “Ajatha Sharu” manya AB Vajapayee PM agippaga avara huttu habbda dina ide reethiya ondu thrakika mathanna helidru. Ondondu huttu habba bandagalu navu savinge innashtu hathra avuttheyo.
  Yentha madudu… Aaringude yengala hangippa jenakke huttu habba aacharane ishta ille. Adarallu ee IT compnili kelsa maduvavu summane ishta illadru idara aacharane madekkavutthu. Sankochakke kkati biddu yeshtu jana hingippa havyakaru “Cake” thindidavo yeno. Bejaravutthu. Birthday party heli 2000-3000 kharchu madsutthavu.

 5. ಅಜ್ಜಕಾನ ಭಾವ says:

  ಲಾಯ್ಕಾಯಿದು ಕಾಂತಣ್ಣ.. ನಿಂಗಳ ಉದ್ದೇಶ ಬೇಗ ಈಡೇರಲಿ..

 6. raghumuliya says:

  ಕಾಂತಣ್ಣಾ.. ಮುತ್ತಿನಂತಾ ಮಾತುಗೋ.
  ಮನುಷ್ಯ ಹುಟ್ಟೋಗಳೇ ಸಾವು ಹೇಳ್ತದು ಒಟ್ಟಿ೦ಗೆ ಬತ್ತು ,ಬಸವನ ಹಿಂದೆ ಬೀಲದ ಹಾಂಗೆ. ಹುಟ್ಟಿದ ಮತ್ತೆ ಕಳಿವ ಪ್ರತಿದಿನವೂ ಸಾವಿನ ಮನೆಯ ಹತ್ತರಂಗೆ ನೂಕುತ್ತು.ಈ ಸತ್ಯ ಗೊಂತಿದ್ದ ಮೇಲೆ ಈ ಆಚರಣೆಗೋ ಎಲ್ಲ ಅರ್ಥಹೀನ ಹೇಳೋದು ಸತ್ಯವೇ.ಆದರೂ ಮನುಷ್ಯ ಬದುಕ್ಕಿದ್ದಷ್ಟು ದಿನ ಆನು,ಎನಗೆ,ಎನ್ನಂದ ಮದಲಾದ ಅಹಂಭಾವವ ಮಡಿಕ್ಕೊಂಡು ಎಷ್ಟೋ ಅಸಂಬದ್ಧವ ಮಾಡಿಗೊಂಡಿಲ್ಲೆಯಾ, ಬದುಕ್ಕೊದೆ ಒಂದು ಸಾಧನೆ ಹೇಳುತ್ತ ಹಾಂಗೆ ಆಚರಿಸುತ್ತು, ನಾವಿಂದು.
  ಕೊಳ್ಳುಬಾಕತನವ ಹೆಚ್ಚಿಸುತ್ತಾ ಇಪ್ಪೊದು ಈ ಡೇ ಗಳೇ .ಭಾರತದ ಸಂಸ್ಕಾರ ಆಯವ ಕಲಿಸಿದ್ದು ,ವ್ಯಯವ ನಾವು ಇಂದು ಕಲಿತ್ತಾ ಇದ್ದು.ಇನ್ನೊಬ್ಬ ಖರ್ಚು ಮಾಡೊಗ ನಾವೆಂತಗೆ ಕಮ್ಮಿ ಇರೆಕ್ಕು ಹೇಳ್ತ ಮೂರ್ಖತನಲ್ಲಿ ಮೆರವಲೆ ಪ್ರಯತ್ನ ಮಾಡುತ್ತಾ ಇದ್ದು.
  ನಿಜ ಅರ್ಥಲ್ಲಿ ನೋಡಿರೆ,ಬದುಕ್ಕಿಪ್ಪಗ ಮಾಡುವ ತಿಥಿ ಅಲ್ಲದೋ ಈ ಬರ್ತಡೇ ಹೇಳುವ ಹಬ್ಬ?
  ನಿಂಗೊ ಹೇಳಿದ ಹಾಂಗೆ ನಾವು ನಮ್ಮ ಜೀವನದ ಸಿಂಹಾವಲೋಕನ ಮಾಡಿ ನಿನ್ನೆ ಮಾಡಿದ ತಪ್ಪುಗಳ ಮುಂದೆ ಮಾಡದ್ದ ಹಾಂಗೆ,ನಿನ್ನೆ ಮಾಡದ್ದ ಒಳ್ಳೆ ಕೆಲಸಂಗಳ ನಾಳೆಂದ ಮಾಡುವ ಹಾಂಗೆ ಪ್ರೇರಣೆ ಕೊಡುವ ಆಲೋಚನೆಗಳ,ಕಾರ್ಯಂಗಳ ಮಾಡಿರೆ ಈ ದಿನಕ್ಕೊಂದು ಅರ್ಥ ಬಕ್ಕು.

  ಬದುಕ್ಕಿದರೆ ದೀಪದ ಹಾಂಗೆ ಬದುಕ್ಕೆಕ್ಕು ಹೇಳ್ತ ಮಾತು ಎಷ್ಟು ಸತ್ಯ ಅಲ್ಲದೋ? ತಾನು ಹೊತ್ತಿ ಉರಿದು ಭಸ್ಮ ಆದರೂ ತನ್ನ ಸುತ್ತಲೂ ಬೆಣಚ್ಚಿಯ ಪಸರಿಸುವ ದೀಪದ ಗುಣ ನವಗೆ ಬಂದರೆ ಜೀವನ ಪಾವನ ಅಕ್ಕು.

 7. ಕಾಂತಣ್ಣಾ..

  ಸತ್ಯವಾದ ಮಾತು..!
  ಮಸಣಕ್ಕೆ ಹತ್ತರೆ ಅಪ್ಪ ವಿಚಾರಕ್ಕೆ ಸಂತೋಷದ ಆಚರಣೆ ಎಂತಕೆ?

  ಪ್ರಸ್ತುತಾ ದೀರ್ಘಮಧ್ವಾನಂ…
  ಪ್ರತಿದಿನ ನಮ್ಮ ಆಯುಷ್ಯ ಕಳೆತ್ತಾ ಹೋವುತ್ತು. ಅದರ್ಲಿ ಏನಾರು ಒಂದು ಒಳ್ಳೆದರ ಸಾಧುಸುಲೆ ಎಡಿತ್ತರೆ ಒಳ್ಳೆದು. ಅಲ್ಲದೋ?
  ಒಳ್ಳೆ ಲೇಖನ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *