‘ಜಂತೂನಾಂ ನರ ಜನ್ಮ ದುರ್ಲಭಂ’.

March 19, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅವನ ಹೆಸರು ಶಂಬಟ್ಟ. ಆನು ಕಾಂಬಗ ಅವಂಗೆ ಪ್ರಾಯ 40ಕ್ಕೆ ಕಮ್ಮಿ ಅಲ್ಲ.
ಒಳ್ಳೇ ಘಟ್ಟಿಗ. ಏವ ಕೆಲಸಕ್ಕೂ ರೆಡಿ. 4 ಜೆನ ಅಣ್ಣ ತಮ್ಮಂದಿರು ಇಪ್ಪ ಬಡ ಕುಟುಂಬ. ಆದರೆಂತ ಬಾಯಿ ಬತ್ತಿಲ್ಲೆ (ಉಂಬಲೆ ಬತ್ತು).

ಕೆಮಿ ಸರೀ ಕೇಳುತ್ತು. ಕಣ್ಣು ಮೂಗು ಕೈ ಕಾಲು ಎಲ್ಲಾ ಸರೀ ಕೆಲಸ ಮಾಡುತ್ತು. ಕಾಂಬಲೆ ನಮ್ಮ ಹಾಂಗೆ ಚುರುಕು. ಶಾಲಗೆ ಹೋಯಿದ ಇಲ್ಲ್ಯೋ? – ಹೋಯಿದನಡಾ ಅಂಬಗಾಣ ೪ನೇ ಕ್ಲಾಸು.
ಮನೇಲಿ ಕಸವು ಉಡುಗುದು, ಜಾಲು ಕೆತ್ತೋದು, ಹುಲ್ಲು ಕೆರಸೋದು, ಸೊಪ್ಪು ಕಡಿವದು  – ಕೊಚ್ಚೋದು, ಸೌದಿ ಒಡವದು, ನೀರು ತೋಕುವದು ಎಂತಕೆ ಪೇಟಗೆ ಹೋಗಿ ಸಾಮಾನು ತಪ್ಪಲೂ ಹುಷಾರಿ.
ದಿನಕ್ಕೊಂದರಿ ಆದರೂ ನೆರೆಕರೆ 2 ಮನಗೆ ಹೋಗಿ ಅಡಿಗೆ ಒಳ ಎಂತ ಬೆಂದಿ ಮಾಡಿದ್ದಿ ಹೇಳಿಯೂ  ಹೆಮ್ಮಕ್ಕಳತ್ರ ತಿಳ್ಕೋಳ್ಳೆಕು ಅವಂಗೆ.
ನೆರಕರೆ ಮನಗೆ ನೆಂಟ್ರು ಬಂದರೂ, ಇವನ ಮನಗೆ ನೆಂಟ್ರು ಬಂದಿದ್ದರು ಆಚೀಚವರತ್ರೆ ಹೇಳದ್ದೆ ಒರಕ್ಕು ಬಾರ ಇವಂಗೆ.

ಬಂದವರತ್ರೆಯೂ ಏನು ತಾನು ಎಲ್ಲಾ ಅವನದ್ದೇ ಭಾಷೆಲಿ ಮಾತಾಡಿ ತಿಳ್ಕೊಂಬ ಸಹೃದಯಿ. ಬುದ್ಧಿ ಸೂಕ್ಷ್ಮ ಹೇಳಿರೆ ಅಬ್ಬಾ., ನಾವೂ ಕೂಡ ಸೋಲೆಕೆ.
ಎಲ್ಲಿಂದಾರು ಜೆಂಬ್ರ ಹೇಳಿಕೆ ಬಂದರೆ ಅದು ಎಂತರ ಇಲ್ಲಿ ಹೇಳಿ ನಿಂಗೊ ಹೇಳದ್ರೂ ಹೇಳಿಕೆ ಕಾಗದ ನೋಡಿ ಅವನ ಮಂಡೆಲಿ ಎಂಟ್ರಿ ಮಾಡಿಯೋಳ್ತ.
ಮತ್ತೆ ದಿನಾ ಕಾಲೆಂಡೆರ್ ನೋಡೋದೇ. ಜೆಂಬ್ರಕ್ಕೆ ಹೋದರೆ  ಬೆಂದಿಗೆ ಕೊರವಲ್ಲಿಂದ ಬಡುಸಲೂ ರೆಡಿ. ಸಂಜ್ಞೆಲೇ ಒಬ್ಬೊಬ್ಬಂಗೆ ಒಂದೊಂದು ಗುರ್ತ ಅವಂಗೆ. ಊರಿಂಗೂ ಅಷ್ಟೇ.
ನಿಂಗಳ ಮದುವೆ  ಮಡಿಕೇರಿಲಿ  ಆಗಿರಲಿ ಉಪ್ಪಿನಂಗಡಿಲಿ  ಆಗಿರಲಿ ಅವಂಗೆ ಗೊಂತಾವ್ತು. ಹೋದರೆ ಮತ್ತೆ ಸಭೆಲಿ ಎದೂರು ಕೂರೆಕ್ಕುದೆ.
ನಿಂಗಳ ಧಾರೆ ಸರಿಯಾಗಿ ನೋಡೆಕು, ಮದಿಮ್ಮಾಯ ಮದಿಮ್ಮಾಳು ಎಷ್ಟು ಎತ್ತರ ಕುಂಟು , ಹೂಮಾಲೆ ಸರೀ ಗಡಿ ಬಿಡಿ ಹೆದರಿಕೆ ಮಾಡದ್ದೆ ಹಾಕಿದ್ದವೋ, ಭಟ್ರು ಹೆಂಗೆಲ್ಲಾ ಮಾಡುಸುತ್ತವು ಎಲ್ಲಾ ನೋಡಿ ಅರಡಿಯೆಕು. ಮತ್ತೆ ಬಂದಿಕ್ಕಿ ವಿಮರ್ಶೆ ಮಾಡ್ವ ಕ್ರಮವೂ ಇದ್ದು.
ನಿಂಗೊ ಎಲ್ಯಾರು ಎಂತಾರು ಸಣ್ಣ ಕೊಮೇಡಿ ಮಾಡಿದಿ – ಆತದು, ನಾಳಂಗೆ ಅವನ ಕೈಲಿ ನಿಂಗೊ ಬಲಿ ಪಶು. ಹಿಡುದು ಹಿಡುದು ನೆಗೆ ಮಾಡುಗು ಅವನೇ.
ಮದುವೆ ದಿಬ್ಬಾಣಕ್ಕೆ ನಿಂಗೊ ಅವನ ಬಿಟ್ಟಿಕ್ಕಿ ಹೋದೀ ಮತ್ತೆ ಎರಡು ದಿನಕ್ಕೆ ಸ್ಟ್ರೈಕೇ. ಗುಡಿ ಹೆಟ್ಟಿ ಮನಿಗಿಗುಕ್ಕುಗು. ಊಟವೂ ಬೇಡ ತಿಂಡಿಯೂ ಬೇಡ.

ಜಂತೂನಾಂ ನರ ಜನ್ಮ ದುರ್ಲಭಂ’. ಪ್ರಪಂಚಲ್ಲಿ ಹುಟ್ಟೋದೇ ಒಂದು ವಿಶೇಷ, ಅದರಲ್ಲಿ ಮನುಷ್ಯನಾಗಿ ಹುಟ್ಟುವದು ಭಾಗ್ಯವೇ ಸರಿ.
(ಇದರಲ್ಲಿ ಮತ್ತೆ ಚಾತುರ್ವರ್ಣ್ಯ ಬೇರೇ . ಅದಿರಲಿ ಕರೇಲಿ ಈಗಂಗೆ). ಮನುಷ್ಯನಾಗಿ ಹುಟ್ಟಿ ಮನುಷ್ಯನಾಗಿ ಬಾಳಿ ಮನುಷ್ಯನಾಗಿ ಅಂತ್ಯ ಕಾಣೆಕು.
ಹುಟ್ಟಿದ ಎಲ್ಲಾ ಶಿಶುವೂ ಒಂದೇ ಹಾಂಗೆ. ಗಂಡು ಹೆಣ್ಣು ಅಷ್ಟೇ ವ್ಯತ್ಯಾಸ. ಮುಂದೆ ಆಯಾ ಧರ್ಮಕ್ಕೆ ಸಂಸ್ಕಾರ ಮಾಡಿ ದೊಡ್ಡವನಾಗಿ ನಾಗರಿಕನಾಗಿ (ನಗರಲ್ಲಿಪ್ಪವ ಮಾತ್ರ ನಾಗರಿಕ ಹೇಳಿ ಅಲ್ಲನ್ನೇ) ಬಾಳೆಕು ಹೇಳಿ ಪ್ರತಿಯೊಬ್ಬ ಹೆತ್ತವನ ಆಶೆ.
ಹೆತ್ತವಂಗೆ ಹೆಗ್ಗಣವೂ ಮುದ್ದೇ.

ಆದರೇ .,
ಯಾವುದೇ ಒಂದು ಜನ್ಮ ಜನ್ಮಾಂತರದ ದೋಷ ಫಲವಾಗಿ ಕೆಲವರು ನ್ಯೂನತೆಂದ ಹುಟ್ಟುತ್ತವು.
ಅದು ಜೀರ್ಣಿಸಲಾಗದ ತುತ್ತು. ಹುಟ್ಟಿದವಂಗೆ ಸಾವು ನಿಶ್ಚಿತ ಆದರೂ ಅದು ಯಾವಾಗ ಹೇಳಿ ಆರ ಕೈಲೂ ಇಲ್ಲೆ. ಕೆಲವು ಅಲ್ಪಾಯುಶಿಯೂ ಅಪ್ಪೋದಿಕ್ಕು.
ನಾವಿಲ್ಲಿ ಚಿಂತುಸಲೆ ಹೆರಟದೀಗ ನ್ಯೂನತೆಂದ ಹುಟ್ಟಿದ್ದರ ಬಗ್ಗೆ. ಕೆಲವರಿಂಗೆ ಅಂಗ ವೈಕಲ್ಯ – ಕೈ ಕಾಲು ಬಾಯಿ ಕೆಮಿ ಕಣ್ಣು ವಾ ಶರೀರದ ಇನ್ನಿತರ ಯಾವುದೇ ಅವಯವಂಗೊ, ಇನ್ನು ಕೆಲವು ಬುದ್ದಿ ವೈಕಲ್ಯ.
ಹಾಂಗೆ ಹೇಳಿ ಅವರ ನಾವೂ ಎಂತ ಮಾಡ್ಲೆ ಯೆಡಿಯ. ಅಂದರೂ ಅವಕ್ಕೆ ನಮ್ಮಂದ ಎಡಿಗಪ್ಪ ಮಾನಸಿಕ ಸ್ಪೂರ್ತಿ, ಪ್ರೇರಣೆ, ಆತ್ಮ ಸ್ಥೈರ್ಯ  ಕೊಟ್ಟು ಪ್ರೋತ್ಸಾಹಿಸಲೆ ಎಡಿಯದ್ದಿಲ್ಲೆನ್ನೆ.
ಅವಕ್ಕೂ ಅವರ ಮನಸಿನ ಅಂತರಾಳಲ್ಲಿ ಭಾವನೆ ಹೇಳಿ ಒಂದು ಇದ್ದು ಹೇಳಿ ನವಗೂ ಜ್ಞಾನ ಇರೆಕು. ಅವರ ಕಂಡಪ್ಪಗ ನಾವೂ ಅವರ ತಮಾಷೆ ಮಾಡೋದು , ದೂರ ಮಾಡೋದು , ಹೀಯಾಳ್ಸೋದು , ಬೈವದು ಮಾಡಿ ಅವನ ಮನಸ್ಸಿಂಗೆ ಬೇನೆ ಮಾಡೋದು ನಾವು ಮಾಡುವ ಅಕ್ಷಮ್ಯ ಅಪರಾಧ. ಏವುದೋ ಒಂದು ದುರ್ಘಟನೆಂದ ನವಗೂ ಅದೇ ಗತಿ ಬಂದರೆ!. ಎಂದಾರು ನಾವು ಹಾಂಗೆ ಯೋಚಿಸಿದ್ದಿಕ್ಕೋ?!!

ಕಣ್ಣು ಕಾಣದ್ದವನೋ, ಕೆಮಿ ಕೇಳದ್ದವನೋ , ಬಾಯಿ ಬಾರದ್ದವನೋ, ಕೈ ಕಾಲು ಕುಂಟನೋ ಸಮಾಜಲ್ಲಿ ನಮ್ಮ ಹಾಂಗೆ ಬಾಳಲೆ ಎಡಿಯದ್ದರೂ  ನಮ್ಮಂದ ಏನೂ ಚಿಲ್ಲರೆ ಅಲ್ಲಾ ಹೇಳಿ ಸಾಧನೆ ಮಾಡಿದವು ಅದೆಷ್ಟೋ ಮಂದಿ ಇದ್ದವು.
ಹೆರ ಹೋಗಿ ನಮ್ಮ ಹಾಂಗೆ ಕೆಲಸ ಮಾಡಿ ಜೀವನ ಮಾಡ್ತವು ಇದ್ದವು. ಮನೇಲಿ ಇದ್ದೊಂಡು ಮನೆ ಕೆಲಸ , ಹಟ್ಟಿ ಕೆಲಸ , ತೋಟದ ಕೆಲಸ ಮಾಡಿ ಕುಟುಂಬಕ್ಕೆ ಭಾರ ಆಗದ್ದಂಗೆ ಬದುಕಿದವು ಹಲವು ಜನಂಗೊ.
ನಾವು ಅವರ ಕಂಡು (ನೋಡಿ) ಅದೆಷ್ಟು ಸರ್ತಿ ಮಂಗ ಮಾಡಿದ್ದಿಲ್ಲೆ!,  ತಮಾಷೆ , ಕೊಂಗಿ , ಬೈದು ಮಾಡಿದ್ದಿಲ್ಲೆ ಅವರ!!
ನವಗೆ ಎಂದಾರು ಛೆ ಅವಕ್ಕೆ ಅದು ಬೇನೆ ಆದಿಕ್ಕು ಹೇಳಿ ಕಂಡಿದೋ?!. ಎಲ್ಲಾದಕ್ಕೂ ನಾವೇ ಕಾರಣ. ಅವರ ಹಾಂಗೆ ನಾವಾದರೆ ಹೇಳಿ (ಆಯೆಕ್ಕು ಹೇಳಿ ಅಲ್ಲ)  ಒಂದು ಕ್ಷಣ ಯೋಚಿಸಿ ನೋಡೆಕು.
ನಾವೆಲ್ಲಾ ಮನುಷ್ಯರಾಗಿ ಬಾಳುವೋ.
ಇತರರನ್ನೂ ಮನುಷ್ಯನ ಹಾಂಗೆ ಕಾಂಬೊ. ಆರನ್ನೂ ಹೀಯಾಳ್ಸಿಕ್ಕೇಡಿ .

‘ಲೋಕಾ ಸಮಸ್ತಾಃ ಸುಖಿನೋ ಭವಂತು.’

ಅಖೆರಿಗೆ ಬಸವಣ್ಣನ ಈ ಹಾಡು ಒಂದಾರಿ ನೆಂಪು ಮಾಡಿಕ್ಕುವೋ –

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸಬೇಡ ಇತರರ ಹಳಿಯಲು ಬೇಡ
ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ಕೂಡಲ ಸಂಗಮನೋಲಿಸುವ ಪರಿ.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನಿಡಿಯೊಳಗಾಗಿ ನಡೆಯದಿದ್ದವರ ಮೆಚ್ಚ ಕೂಡಲ ಸಂಗಮದೇವ

~*~*~*~

‘ಜಂತೂನಾಂ ನರ ಜನ್ಮ ದುರ್ಲಭಂ’. , 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಸುಭಗ
  ಸುಭಗ

  ತುಂಬ ಮಾರ್ಮಿಕವಾದ ಲೇಖನ ಭಾವಯ್ಯಾ.. ಅಭಿನಂದನೆಗೊ.

  ಯೇವದೇ ತಪ್ಪು ಮಾಡದ್ದೆ ಇದ್ದರೂ ಜೀವನಪೂರ್ತಿ ಶಿಕ್ಷೆಯ ಅನುಭವಿಸುತ್ತಾ ಇಪ್ಪ ಶಂಬಟ್ಟನಾಂಗಿಪ್ಪ ಜೆನರ ನಾವು ನೋಡುವ ದೃಷ್ಟಿಕೋನ ಬದಲಾಯೆಕ್ಕು ಹೇಳ್ತ ನಿಂಗಳ ಕಳಕಳಿ ನಿಜಕ್ಕೂ ಸ್ವಾಗತಾರ್ಹ.

  ಹತ್ತಿಪ್ಪತ್ತು ವರ್ಷ ಮದಲೆ ವಿಕಲಾಂಗರು ಹೇಳಿರೆ ಅಪಹಾಸ್ಯ, ತಾತ್ಸಾರ ಮಾಡಿಂಡಿದ್ದದು ನಿಜ; ಆದರೆ ನಮ್ಮ ಈಗಾಣ ತಲೆಮಾರಿನ ಜೆನಂಗಳ ಮನೋಭಾವನೆಲಿ ತುಂಬ ಸುಧಾರಣೆ ಆಯಿದು. ಅವರಲ್ಲಿಪ್ಪ ಸಾಮರ್ಥ್ಯಂಗಳ; ಅವರ ಆಶಯಂಗಳ ಗುರುತಿಸಿ ಪ್ರೋತ್ಸಾಹಿಸಿ ‘ಅವು ಸಮಾಜಕ್ಕೆ ಹೊರೆ ಅಲ್ಲ’ ಹೇಳಿ ಮಾಡಿತೋರ್ಸುವ ಕೆಲಸವ ಸರ್ಕಾರದವೂ ಸ್ವಯಂಸೇವಾ ಸಂಸ್ಥೆಗಳೂ ಆಲ್ಲಲ್ಲಿ ಮಾಡ್ತಾ ಇದ್ದವು. ಇವರೊಟ್ಟಿಂಗೆ ನಾವೂ ಕೈಸೇರ್ಸೆಕ್ಕು.

  ವಿಕಲಚೇತನರಲ್ಲಿ ಕಾಂಬ ಒಂದು ಅದ್ಭುತ ಶಕ್ತಿ ಎಂತರ ಹೇಳಿರೆ- ಅವರ ನ್ಯೂನತೆ ಇಪ್ಪ ಅಂಗ ಹೊರತು ಬಾಕಿ ಎಲ್ಲ ಅಂಗ/ ಇಂದ್ರಿಯಂಗಳ ಸಾಮರ್ಥ್ಯ ಸಾಮಾನ್ಯ ಮನುಷ್ಯರಿಗಿಂತ ತುಂಬ ಹೆಚ್ಚಿಗೇ ಇರ್ತು!

  ಕುಂಬ್ಳೆ ಹತ್ರೆ ನಮ್ಮವರ ಒಂದು ಮನೆಲಿ ಮೂರು ಜೆನ ದೃಷ್ಟಿಭಾಗ್ಯ ಇಲ್ಲದ್ದ ಅಣ್ಣತಮ್ಮಂದಿರು ಇದ್ದವು. ಹುಲ್ಲು ಕೆರಸುದು, ಅಡಕ್ಕೆ ಸೊಲಿವದು, ದನಗಳ ಚಾಕರಿ ಇತ್ಯಾದಿ ಎಲ್ಲಾ ಕೃಷಿಕೆಲಸಂಗಳನ್ನೂ ಅಚ್ಚ್ಕಟ್ಟಾಗಿ ಅವು ಮಾಡ್ತವು. ಮನ್ನೆ ಅವರಲ್ಲಿಗೆ ಪಾದುಕಾಪೂಜೆಗೆ ಶ್ರೀಗುರುಗೊ ಅವರಲ್ಲಿಗೆ ಬಂದಿಪ್ಪಗ ಒಬ್ಬ ಸ್ವತಃ ಕೈಯಾರೆ ಬೊಂಡ ಕೆತ್ತಿ ಕೊಟ್ಟಪ್ಪಗ ಗುರುಗಳಿಂಗೇ ಆಶ್ಚರ್ಯ ಆತಡ!

  [Reply]

  VN:F [1.9.22_1171]
  Rating: +1 (from 1 vote)
 2. ತುಪ್ಪೆಕ್ಕಲ್ಲ ತಮ್ಮ
  ತುಪ್ಪೆಕ್ಕಲ್ಲ ತಮ್ಮ

  ಅಪ್ಪು ಭಾವ ಆನು ಸಣ್ಣಾದಿಪ್ಪಗ ಶಂಬಜ್ಜ ಎಂಗಳ ಮನಗೆ ಬಕ್ಕು ಮನಗೆ ಬಂದರೆ ಮೊದಾಲು ಕೆಲೆಂಡರು ನೋಡುಗು ಎಲ್ಲೆಲ್ಲ ಕಾರ್ಯಕ್ರಮ ಇದ್ದು, ಬರದು ಹಾಕಿದ್ದವು ಹೇಳಿ.ಎಲ್ಲಿಯಾರು ಹತ್ತರೆ ಕರ್ಯಕ್ರಮ ಇದ್ದರೆ ಎನಗು ಬಪ್ಪಲಿದ್ದು ಹೆದು ಬೆರಳಿಲಿ ಸಡುದು ತೋರ್ಸುಗು ಮತ್ತೆ ಕಷಾಯ ಕುಡಿಯದ್ದೆ ಹೋಗವು. ಮನೇಲಿ ಲೊಟ್ಟೆ ಹೇಳಿಕ್ಕಿ ಬಕ್ಕು ಆನು ಬಜವಿಂಗೆ ಹೊವುತ್ತೆ ಹೇದು ಹೇಳಿಕ್ಕಿ ಮನಗೆ ಬಕ್ಕು. ಕೈಲಿ ಒಂದು ಗೋಣಿಯೂ ಇಕ್ಕು.ಮನಗೆ ಬಂದು ಎಂಗಳ ಕೊಂಗಿ ಕಟ್ಲೂ ಇದ್ದು ಅವರ ಕಂಡ್ರೆ ಎಂಗೊಗೆ ಹೆದರಿಕೆ. ಅವು ಬನ್ದಪ್ಪಗ ಎಂಗೋ ಓಡಿ ಹೋಗಿ ಉಗ್ರಾಣಲ್ಲಿ ಹುಗ್ಗಿಕುಉಪೆಯೋ.ಲೆಖನ ಭಾರಿ ರಸವತ್ತಾಗಿ ಇದ್ದು.ಲೇಖನಂಗೊ ಇನ್ನೂಹೆಚ್ಚು ಬತ್ತಾ ಇರಳಿ ಭಾವ.

  [Reply]

  VA:F [1.9.22_1171]
  Rating: -1 (from 1 vote)
 3. ಮುಳಿಯ ಭಾವ
  ರಘುಮುಳಿಯ

  ಚೆನ್ನೈ ಭಾವ,ಮನಮುಟ್ಟುವ ಲೇಖನ.
  ದೇವರು ಒ೦ದು ಕೊರತೆ ಕೊಟ್ಟರೆ ಅರದರ ಒಟ್ಟಿ೦ಗೆ ಅದೆಷ್ಟೋ ಪ್ರತಿಭೆಯನ್ನೂ ಕೊಟ್ಟಿರುತ್ತವು.ಅದರ ಗುರುತಿಸಿ,ಪ್ರೋತ್ಸಾಹಿಸೊದು ನಮ್ಮ ಧರ್ಮ ಆಗಿರೆಕ್ಕು.ಚಿ೦ತನೆಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಸುಭಗಣ್ಣನ ಒಪ್ಪ ಓದಿ ಭಾರೀ ಖುಶಿ ಆತು. ಇಲ್ಲಿ ನಮ್ಮೊನ್ದಿನ್ಗೆ ಹನ್ಚಿಕೊಮ್ದದಕ್ಕೆ ಧನ್ಯವಾದ.

  ಮುಣ್ಚಿಕ್ಕಾನ ಭಾವನ ಒಪ್ಪಕ್ಕೆ ಧನ್ಯವಾದ.

  ತುಪ್ಪೆಕ್ಕಲ್ಲ ತಮ್ಮನ ಒಪ್ಪ ಮೆರುಗುಗೊಳಿಸಿತ್ತು.

  ಮುಳಿಯ ಭಾವನ ಚಿಮ್ತನಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 5. ವಿವೇಕ ಮುಳಿಯ

  ಚೆನ್ನೈ ಭಾವ ನಿ೦ಗಳ ಈ ಲೇಖನ ಮನ ತಟ್ಟುವ ಹಾ೦ಗಿಪ್ಪೊದು.
  “ಸರ್ವೇ ಜನಾಃ ಸುಖಿನೋ ಭವ೦ತು”
  ನಿ೦ಗಳ ಈ ಉತ್ತಮ ಬರಹ೦ಗಳ ಸರಣಿ ಮು೦ದುವರಿಸಿ ಭಾವ :).
  —————–
  ಪ್ರೀತಿ ಇರಳಿ,
  ವಿವೇಕ ಮುಳಿಯ
  —————–

  [Reply]

  VN:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ವಿವೇಕ ಭಾವ, ನಿನ್ಗಳ ಪ್ರೀತಿ ಪ್ರೊತ್ಸಾಹಕ್ಕೆ ಸದಾ ಧನ್ಯವಾದಗಳು

  [Reply]

  VA:F [1.9.22_1171]
  Rating: 0 (from 0 votes)
 7. suhaa...s

  ನಿಂಗಳ ಒಪ್ಪ ಓದುಲೆ ತುಂಬಾ ಖುಷಿ ಆವುತ್ತು ಎಲ್ಲ್ಲಿಯೂ ಕೂಡ ಬೇಜಾರಾವುತ್ತಿಲ್ಲೆ…ಎಂಗಗೂ ಬರವಲೆ ಪ್ರೇರಣೆ ಹೇಳಿ ಹೇಳುಲಕ್ಕು….

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತಮಾಸು ಮತ್ತು ಮಾಡುತ್ತಲ್ಲನ್ನೇ ಭಾವ!!

  ಧನ್ಯವಾದಂಗೊ ಖಂಡಿತಾ ನಿಂಗೊಗೆ .

  ಮತ್ತೆ ಎಂತ ಇದ್ದು ಹೇಳಿ ಜೀವನಲ್ಲಿ. ಎಲ್ಲೋರು ಖುಶೀಲಿ ಇರೆಕು. ಬೇನೆ ಅಪ್ಪಲಾಗ ಅಷ್ಟೇ ಹೇಳ್ವೆ ಆನು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿವೇಣೂರಣ್ಣಒಪ್ಪಕ್ಕಕಾವಿನಮೂಲೆ ಮಾಣಿವಾಣಿ ಚಿಕ್ಕಮ್ಮಕೊಳಚ್ಚಿಪ್ಪು ಬಾವರಾಜಣ್ಣವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿvreddhiಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿಸಂಪಾದಕ°ಡಾಮಹೇಶಣ್ಣಅಡ್ಕತ್ತಿಮಾರುಮಾವ°ವಿಜಯತ್ತೆಜಯಗೌರಿ ಅಕ್ಕ°ಪುತ್ತೂರಿನ ಪುಟ್ಟಕ್ಕಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ವೆಂಕಟ್ ಕೋಟೂರುಬಂಡಾಡಿ ಅಜ್ಜಿಕೇಜಿಮಾವ°ಬೋಸ ಬಾವಸುವರ್ಣಿನೀ ಕೊಣಲೆಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ