ಜೀವನ ಚೈತ್ರ ೧ : ಪಂಚ ಕೋಶಂಗೊ

ಬೈಲಿಂಗೆ ಆತ್ಮೀಯ ನಮಸ್ಕಾರಂಗೊ. 🙂

ಮೊನ್ನೆ ಹುಣ್ಣಿಮೆಗೆ ಮಂಗಳೂರಿನ ಕದ್ರಿ ಹೇಳುವಲ್ಲಿ ಒಂದು ಧ್ಯಾನ ಶಿಬಿರ ಇತ್ತು. ಹೋಗಿತ್ತಿದ್ದೆ.

ಅಲ್ಲಿ ಕೆಲವು ವಿಷಯಂಗೊ ಬಂತು, ಬೈಲಿಂಗೆ ಹೇಳುವೋ° ಹೇಳಿ ಕಂಡತ್ತು..

ನಮ್ಮ ದೇಹ ಸರಿಯಾಗಿ ಕೆಲಸ ಮಾಡೆಕ್ಕಾರೆ ಅದಕ್ಕೆ ಬೇಕಾದ ಎಲ್ಲಾ ರೀತಿಯ ಶಕ್ತಿಯುದೇ ಸಿಕ್ಕಿಯೋಂಡು ಇರೆಕಾವ್ತು, ಇಲ್ಲದ್ದರೆ, ದೇಹದ ಪ್ರತಿಯೊಂದು ಅಂಗಂಗೊಕ್ಕುದೇ ಅದರ ಪೂರ್ಣ ಪ್ರಮಾಣಲ್ಲಿ ಕೆಲಸ ಮಾಡ್ಲೆ ಎಡಿತ್ತಿಲ್ಲೆ..

ದೇಹಕ್ಕೆ ಶಕ್ತಿ ಸಿಕ್ಕುಲೆ ಎಂತ ಮಾಡೆಕ್ಕು?

ಉಂಡರೆ ಸಾಕೋ? ಸಾಲಡ.

ನಮ್ಮ ದೇಹ ಈ ನಮ್ಮ ಸುತ್ತಲಿನ ಪ್ರಕೃತಿಂದಲೂ ಶಕ್ತಿಗಳ ತೆಕ್ಕೊಳ್ತಡ.

ಹೇಂಗೆ?

ಈ ಗಾಳಿ, ಬೆಳಕು, ನೀರು, ನಾವುಂಬ ಅಶನ ಎಲ್ಲವುದೇ ನಮ್ಮ ದೇಹಕ್ಕೆ ಶಕ್ತಿ ಕೊಡ್ತು. ಈ ಕ್ರಿಯೆ ನವಗೆ ಸರೀ ಅರ್ಥ ಅಯೆಕ್ಕಾರೆ ನಮ್ಮ ದೇಹದ ಬಗ್ಗೆ ನಾವು ತಿಳ್ಕೊಂಡಿರೆಕಾವುತ್ತು.

ಈ ನಮ್ಮ ದೇಹ ಹೇಳಿರೆ ಎಂತರ? ಇದರೊಳ ಎಂತಲ್ಲ ಇದ್ದು? ಹೇಳಿಪ್ಪದು ನವಗೆ ಗೊಂತಿದ್ದು, ನಾವದರ ಎಲ್ಲ ಶಾಲೆಲಿ ಕಲ್ತಿದು, ಈಗ ಮರದು ಹೋಗಿಕ್ಕು – ನವಗೆ ಅದು ಬೇಡ, ಆನು ಹೇಳ್ಲೆ ಹೆರಟದು ನಮ್ಮ ಕಣ್ಣಿಂಗೆ ಕಾಣದ್ದ ನಮ್ಮ ದೇಹದ ಬಗ್ಗೆ, ಯಾವುದೇ ಯಂತ್ರಕ್ಕೆ ಸಿಕ್ಕದ್ದ ನಮ್ಮ ದೇಹದ ಒಳಾಣ ಭಾಗಂಗಳ ಬಗ್ಗೆ. ಅದೇ ಪಂಚಕೋಶಂಗಳೂ ಮತ್ತು ಸಪ್ತ ಚಕ್ರಂಗಳೂ.

ಈ ಸರ್ತಿ ಪಂಚ ಕೋಶಂಗಳ ನೋಡುವೊ°.

ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಣೆ ಮಾಡ್ಲೆ ಕಾರಣ ನಮ್ಮ ಒಳ ಇಪ್ಪ ಪ್ರಾಣ ಶಕ್ತಿ. ಪ್ರಾಣ ಶಕ್ತಿ ಹೆಚ್ಚಿದ್ದಷ್ಟು ನಮ್ಮ ಶಕ್ತಿ ಹೆಚ್ಚಾವುತ್ತಾ ಹೋವುತ್ತು. ಪ್ರಾಣ ಶಕ್ತಿಯ ಪಡವಲೆ ತುಂಬಾ ವಿಧಾನಂಗೊ ಇದ್ದು. ಹೇಂಗೆ ಹೇಳಿ ಒಂದು ರಜ್ಜ ನೋಡುವೊ°.

ಪಂಚ ಕೋಶದ ಕಾಲ್ಪನಿಕ ಚಿತ್ರ

ನಮ್ಮ ದೇಹದ ಪಂಚ ಕೋಶಂಗೊ ಹೇಳಿರೆ

 • ಅನ್ನಮಯ ಕೋಶ
 • ಪ್ರಾಣಮಯ ಕೋಶ
 • ಮನೋಮಯ ಕೋಶ
 • ವಿಜ್ಞಾನಮಯ ಕೋಶ ಮತ್ತೆ
 • ಆನಂದ ಮಯ ಕೋಶ.

ಈ ಎಲ್ಲಾ ಕೋಶಂಗೊಕ್ಕೆ ಶಕ್ತಿ ಸಿಕ್ಕಿರೆ ಮಾತ್ರ ನಮ್ಮ ಆರೋಗ್ಯ ಸರಿ ಇರ್ತಷ್ಟೆ. ಇಷ್ಟರಲ್ಲಿ ಅನ್ನಮಯ ಕೋಶ ಮಾತ್ರ ನಮ್ಮ ಕಣ್ಣಿಂಗೆ ಕಾಂಗಷ್ಟೆ, ಒಳುದ್ದರ ನೋಡ್ಲೆ ನಮ್ಮ ಈ ಕಣ್ಣಿಂದ ಎಡಿಯ. ಈ ಎಲ್ಲದರಲ್ಲಿ

ಆನಂದಮಯ ಕೋಶ ಏವತ್ತೂ ಪರಿಶುಧ್ಧವಾಗಿ ಇರ್ತಡ, ನಾವು ಗೊಂತಿದ್ದೋ ಗೊಂತಿಲ್ಲದ್ದೆಯೋ ಎಂತದೇ ತಪ್ಪು ಮಾಡಿರೂ ಈ ಕೋಶ ಯಾವತ್ತೂ ಆನಂದವನ್ನೇ ಕೊಡ್ತಡ, ಯಾವುದೇ ವೈರಸ್ ಬಾರದ್ದ ಕಂಪ್ಯೂಟರಿನ ಹಾಂಗೆ.

ವಿಜ್ಞಾನಮಯ ಕೋಶ ಹೇಳಿರೆ ಬೌಧ್ಧಿಕ ಮೂಲ ಕೋಶ ಅಡ. ಇದರಲ್ಲಿ ನಮ್ಮ ಭಯಂಕರದ ಬುಧ್ಧಿಶಕ್ತಿ ಎಲ್ಲ ಸಂಗ್ರಹ ಆಗಿ ಇರ್ತಡ ಇದು ತುಂಬಾ ಶಕ್ತಿವಂತ ಕೋಶ, ಇದಕ್ಕೆ ಆಹಾರ ಕೊಡುದು ತುಂಬಾ ಮುಖ್ಯ, ಇಲ್ಲದ್ದರೆ ನಮ್ಮ ಬುಧ್ಧಿಗೆ ಎಂತದು ಗೊಂತಾಗ, ತುಕ್ಕು ಹಿಡುದ ಹಾಂಗೆ ಅಕ್ಕು. ಉಪಯೋಗುಸುಲೇ ಕಷ್ಟ ಅಕ್ಕು. ಇದಕ್ಕೆ ಆಹಾರ ಕೊಡೆಕಾರೆ ಇದು ಬಿಡುಸಿಯೊಂಬ ಹಾಂಗೆ ಮಾಡೆಕ್ಕಡ, ಅದಕ್ಕೆ, ಎನಗೆಂತ ಗೊಂತಿಲ್ಲೆ – ಗೊಂತಪ್ಪಲೆ ಸಾಧ್ಯವೂ ಇಲ್ಲೆ ಹೇಳ್ತ ಸತ್ಯ ಮನದಟ್ಟಾಯೆಕ್ಕಡ. ಅಷ್ಟಪ್ಪಗ ಈ ಕೋಶ ಬಿಡುಸಿಗೊಂಡು ಶಕ್ತಿವಂತ ಆವ್ತಡ. ಎಲ್ಲಾ ಪ್ರಶ್ನೆಗೊಕ್ಕೂ ಉತ್ತರ ಸಿಕ್ಕ, ಹಾಂಗೆ ಉತ್ತರ ಸಿಕ್ಕದ್ದೇ ಇಪ್ಪದೂ ಸರಿಯೇ ಹೇಳಿಪ್ಪ ಭಾವನೆ ಬಂದಪ್ಪಗ ಹೀಂಗೆ ಆವ್ತಡ. ಅದೇ ಎನಗೆಲ್ಲ ಗೊಂತಿದ್ದು ಹೇಳುವ ಭಾವನೆ ಮನಸ್ಸಿಂಗೆ ಬತ್ತೋ? ಅವಗ ಈ ಕೋಶ ಮುಚ್ಚಿಹೋಗಿ ನಮ್ಮ ಶಕ್ತಿ ಸಂಚಯ ಅಪ್ಪದು ನಿಲ್ತಡ.

ಮನೋಮಯ ಕೋಶ ಹೇಳಿರೆ ಮನಸ್ಸಿಂಗೆ ಸಂಬಂಧಿಸಿದ್ದು. ನಮ್ಮ ಮನಸ್ಸು ದಿನಕ್ಕೆ ಬೇಕಪ್ಪದಕ್ಕಿಂತ ಹೆಚ್ಚು ಬೇಡದ್ದಲ್ಲಿ ಎಲ್ಲಾ ತಿರುಗಿ ತಿರುಗಿ ಬಚ್ಚಿ ನಮ್ಮ ಶಕ್ತಿಯ ಎಲ್ಲ ಎಳಕ್ಕೊಂಡು ದಿನ ಮುಗಿವಂದ ಮೊದಲೇ ನಿತ್ರಾಣ ಅಪ್ಪ ಹಾಂಗೆ ಮಾಡ್ತು. ಆದರೆ ಯಾವಾಗ ನಾವು ಸಾಕ್ಷೀಭಾವಲ್ಲಿ ನಿಂದು ನೋಡ್ಲೆ ಕಲಿತ್ತೋ ಅವಗ ನಮ್ಮ ಮನಸ್ಸು ರಜ್ಜ ಹೊತ್ತು ಸುಮ್ಮನೆ ಕೂಪಲೆ ಕಲಿತ್ತು. ಈ ಸಾಕ್ಷೀಭಾವದ ಬಗ್ಗೆ ಗುರುಗೊ ಹೇಳಿದ್ದವಿದಾ, ಓ ಇಲ್ಲಿದ್ದು. ಇಲ್ಲಿ ಮತ್ತೆ ಇಲ್ಲಿದೇ. ಎಲ್ಲಾ ಸಂಗತಿಗಳೂ ಯಥಾರ್ಥವಾಗಿ ಅದರಷ್ಟಕ್ಕೇ ನೆಡವದು – ನಾವು ಮಾಡುದಲ್ಲ ಹೇಳುವ ಭಾವನೆಲಿ, ನಿಶ್ಚಿಂತೆಲಿ ಇದ್ದರೆ ಮನೋಮಯ ಕೋಶ ಗಟ್ಟಿ ಆವುತ್ತಾ ಹೋವುತ್ತಡ. ಮತ್ತಾಣಾದ್ದು

ಪ್ರಾಣಮಯ ಕೋಶ. ಇದು ನಾವು ಉಸುಲು ತೆಕ್ಕೊಂಬಗ, ಸಿಕ್ಕುವ ಶಕ್ತಿಂದ ಗಟ್ಟಿ ಆವುತ್ತು. ಒಂದು ಕಡೆ ಶ್ರದ್ಧೆಲಿ ಕೂದೊಂಡು ಪ್ರಾಣಾಯಾಮಂಗಳ ಮಾಡುದರಿಂದ ನಮ್ಮ ಈ ಕೋಶಕ್ಕೂ ಬಲ ಬತ್ತು ಹೇಳ್ತವು.

ಸನಾತನ ಧಾರ್ಮಿಕ ಗ್ರಂಥಂಗಳಲ್ಲಿ ಪ್ರಾಣಾಯಾಮದ ಮಹತ್ವಂಗೊ.

 • ಶ್ರೀ ಶಂಕರಾಚಾರ್ಯರ ಭಜಗೋವಿಂದಂ – “ಪ್ರಾಣಾಯಾಮಂ ಪ್ರತ್ಯಾಹಾರಂ, ನಿತ್ಯಾನಿತ್ಯ ವಿವೇಕ ವಿಚಾರಂ, ಜಪ್ಯ ಸಮೇತ ಸಮಾಧಿ ವಿಧಾನಂ ಕುರುವಿಧನಾ ಮಹದವದಾನಂ” – ಪ್ರಾಣಾಯಾಮ, ಇಂದ್ರಿಯಂಗಳ ಒಳಮುಖ ಅಪ್ಪಹಾಂಗೆ ಮಾಡುವ ಪ್ರತ್ಯಾಹಾರ ಸಾಧನೆ, ಯಾವುದು ನಿತ್ಯ ಯಾವುದು ಅನಿತ್ಯ ಹೇಳುದರ ವಿವೇಚನೆಯ ಒಟ್ಟಿಂಗೆ ಜಪಸಹಿತ ಸಮಾಧಿ ಅಭ್ಯಾಸವ ನಿತ್ಯ ಮಾಡೆಕು.
 • ಯೋಗ ಕುಂಡಲ್ಯೋಪನಿಷತ್ತು – “ಉಸುಲು ಮನಸ್ಸಿನ ನಿಯಂತ್ರಿಸುತ್ತು. ಉಸುಲು ಪ್ರಶಾಂತವಾಗಿತೆಕ್ಕೊಂಬಲೆ ಎಡಿಗಪ್ಪಗ ಮನಸ್ಸೂ ಪ್ರಶಾಂತ ಆವುತ್ತು”. ಕೊನೇದು
 • ಗೋಪಾಲ ಕೃಷ್ಣ ಮಾವ° ಇಲ್ಲಿ ಒಂದು ಶುದ್ದಿ ಹೇಳಿದವಿದಾ.. (ಇಲ್ಲಿ ಒತ್ತಿ)

ಅನ್ನಮಯ ಕೋಶ ಇದು ನಮ್ಮ ಕಣ್ಣಿಂಗೆ ಕಾಂಬ ಶರೀರ ಅಡ. ದಿನಾಗುಳೂ ಹೊತ್ತಿಂಗೆ ಸರಿಯಾಗಿ ಉಂಬದು, ಒರಗುದು, ಕೆಲಸಮಾಡುದು ಎಲ್ಲ ಮಾಡಿರೆ ನಮ್ಮ ದೇಹ ಆರೋಗ್ಯವಾಗಿ ಇರ್ತು.

ನಾವು ಸೇವಿಸುವ ಆಹಾರ ಮೊದಲು ನಮ್ಮ ಒಳ ಹೋಗಿ ( ತಿನ್ನಲ್ಪಟ್ಟು) ಮತ್ತೆ ನಮ್ಮ ಅದರ ಒಳ ತೆಕ್ಕೊಳ್ತಡ (ತಿನ್ನುತ್ತದೆ). ಹೇಳಿರೆ, ನಾವು ಒಳ್ಳೆಯ ಆಹಾರ ತಿಂದರೆ ನಮ್ಮ ದೇಹ ಮನಸ್ಸು ಒಳ್ಳೆದಾವುತ್ತು, ಹಾಳು ತಿಂದರೆ ಹಾಳಾವುತ್ತು. ಅಮೃತ ಆಹಾರವ ತಿಂದ ದೇಹ ಅಮೃತವೇ ಆವುತ್ತು, ಇಲ್ಲದ್ದೆ ಬೇರೆಂತಾರು ತಿಂದರೆ…

ಆಹಾರ ಹೇಳಿರೆ ಅಶನ ಮಾತ್ರ ಅಲ್ಲ – ಅಶನ ದೇಹಕ್ಕೆ, ಶುದ್ಧ ಗಾಳಿ – ಪ್ರಾಣಶರೀರಕ್ಕೆ, ಒಳ್ಳೆ ವಿಚಾರಂಗೊ – ಮನಸ್ಸಿಂಗೆ, ತಾಳ್ಮೆ, ಸಮಧಾನ – ಬುದ್ಧಿಗೆ. ಈ ಕ್ರಮಲ್ಲಿ ಆಹಾರ ತೆಕ್ಕೊಂಡರೆ ಮದಲು ದೇಹ, ಮತ್ತೆ ಉಸುಲು, ಮತ್ತೆ ಮನಸ್ಸು, ಮತ್ತೆ ಬುದ್ಧಿ ಶುಧ್ಧ ಆಗಿ ಆನಂದಮಯ ಕೋಶದ ಆ ಆನಂದದ ಅನುಭವ ಆವ್ತು ಹೇಳ್ತವು ತಿಳುದೋರು.

ಈ ಕ್ರಮಲ್ಲಿ ಪ್ರಾಣಶಕ್ತಿ ಹೆಚ್ಚಿಮಾಡ್ತಾ ಹೋದ ಹಾಂಗೇ, ಈಗ ನಮ್ಮ ನಿಯಂತ್ರಣಲ್ಲಿ ಇಲ್ಲದ್ದೇ ಇಪ್ಪ ನಮ್ಮ ಪ್ರಾಣ ಶಕ್ತಿ ನಿಧಾನಕ್ಕೆ ನಮ್ಮ ಕೈಗೆ ಬತ್ತು.

 • ಹೀಂಗೆ ಆದಪ್ಪಗ, ಅತ್ಯಂತ ಕೆಳಾಣ ಹಂತಲ್ಲಿ ಇದ್ದ ಪ್ರಜ್ಞಾ ಶಕ್ತಿ ರಜ್ಜ ಮೇಗಂಗೆ, ಹೇಳಿರೆ, ಕೆಳಾಣ ಹಂತಕ್ಕೆ ಬತ್ತು, ಆಷ್ಟಪ್ಪಗ, ಯಾವಾಗಲೂ ಗೋಶ್ಬಾರಿ ಆಗಿ ಜೀವನಕ್ಕೆ ಅರ್ಥವೇ ಇಲ್ಲೆ ಹೇಳಿ ಇದ್ದವ ರಜ್ಜ ಹುಶಾರಿ ಆಗಿ ಮೇಲೆ ಬತ್ತ°. ಕೊಟ್ಟಕೆಲಸ ಮಾಡ್ಲೆ ಸುರು ಮಾಡ್ತ°. 🙂
 • ಅಲ್ಲಿಂರ ರಜ್ಜ ಮೇಗೆ ಬಂದು ಸಾಮಾನ್ಯ ಹಂತಕ್ಕೆ ಪ್ರಜ್ಞಾ ಶಕ್ತಿ ತಲುಪಿಯಪ್ಪಗ ಅವ° ಸ್ವಯಂ ಪ್ರೇರಣೆಂದ ಕೆಲಸ ಸುರು ಮಾಡ್ತ°. ಅವನ ಮನಸ್ಸು ಪ್ರಶಾಂತ ಆಗಿ ಜೀವನ ಶಿಸ್ತು ಬದ್ಧ ಆವ್ತು. ಪ್ರಜ್ಞಾ ಶಕ್ತಿ ಮತ್ತೂ ರಜ್ಜ ಮೇಗೆ ಬಂದರೆ, ಅವ ಇನ್ನೊಬ್ಬರ ಜಾಗ್ರತೆ ಮಾಡ್ಲೆ ಸುರುಮಾಡ್ತ°, ಎಲ್ಲರನ್ನೂ ಪ್ರೀತಿಸ್ತಾ ಎಲ್ಲರೊಟ್ಟಿಂಗೆ ಕುಶಿ ಕುಶಿಲಿ ಇದ್ದೊಂಡು ಪರಿಪೂರ್ಣ ಆರೋಗ್ಯದ ಮಾದರಿ ಆವ್ತ. 🙂
 • ಪ್ರಜ್ಞಾ ಮಟ್ಟದ ವಿಕಾಸ ಇನ್ನೂ ಒಂದು ಹಂತ ಮೇಲೆ ಆತೂ ಹೇಳಿ ಆದರೆ, ಅವ ಯಾವುದೇ ಬೇಡಿಕೆ ಇಲ್ಲದ್ದೆ, ಯಾವುದಾದರೂ ಹೊಸ ಕೆಲಸ ಮಾಡಿಗೊಂಡು, ಇನ್ನೊಬ್ಬಂಗೆ ಉಪಕಾರ ಮಾಡ್ತಾ, ಪ್ರೀತಿಂದ ಎಲ್ಲರ ಸೇವೆ ಮಾಡಿಂಡು, ಮನುಕುಲದ ವಿಕಾಸದ ಕನಸು ಕಂಡೊಂಡು ಇರ್ತವಡ, ಇವ್ವು ಬದುಕಿಂಗೂ ಸಾವಿಂಗೂ ಅಂಟದ್ದೆ, ತುಂಬಾ ಕಾಲ ಬದುಕ್ಕುತ್ತವಡ, ಪ್ರಾಣಶಕ್ತಿ ತುಂಬಾ ಇಪ್ಪ ಇವ್ವು, ಕೇವಲ ತಮ್ಮ ಸ್ಪರ್ಶಂದ – ಅವರ ಇರುವಿಕೆಂದ ಇನ್ನೊಬ್ಬರ ತೊಂದರೆಯ ಗುಣ ಮಾಡ್ತವಡ. ಇದನ್ನೇ ಬ್ರಾಹ್ಮಣ್ಯ ಹೇಳುದಡ. 🙂

ಗಾಯತ್ರೀ ಮಂತ್ರವುದೇ ಅದನ್ನೇ ಹೇಳುದಿದಾ..

ಗಾಯತ್ರೀ ಮಂತ್ರ ಹೇಳಿರೆ ಈ ಪ್ರಕ್ರಿಯೆ ತುಂಬಾ ಬೇಗ ಆವುತ್ತು. ಅದು ನಮ್ಮ ಎಲ್ಲಾ ಕೋಶಂಗೊಕ್ಕೂ ಶಕ್ತಿ ಕೊಟ್ಟು, ನಮ್ಮ ಪ್ರಜ್ಞಾಮಟ್ಟವ ಮೇಲಕ್ಕೆ ತೆಕ್ಕೊಂಡು ಹೋವುತ್ತು..

ದಿನಾಗುಳೂ ಜೆಪ ಮಾಡೆಕು ಹೇಳಿ ಬಟ್ಟಮಾವ ಹೇಳಿದ್ದು ಸುಮ್ಮನೆ ಅಲ್ಲ,

ಜೆಪ ಮಾಡುವ ಕ್ರಮ ರಜ ನೆಂಪುಮಾಡಿಗೊಂಡರೆ, ಮೊದಲು ಮಿಂದು ದೇಹ ಶುದ್ಧ ಆವ್ತು, ಮತ್ತೆ ಧ್ಯಾನ ಶ್ಲೋಕ ಹೇಳಿ – ಗೋಪೀಚಂದನ ಧಾರಣೆಮಾಡಿ ಮನಸ್ಸು ಶುದ್ಧ ಮಾಡಿಗೊಳ್ತು (ಚೆನ್ನೈ ಭಾವ ಹೇಳಿದಾಂಗೆ), ಮತ್ತೆ ಚೆಂದಕೆ ಪ್ರಾಣಾಯಾಮ ಮಾಡ್ತು, ಮತ್ತೆ ಎನಗೆಂತ ಗೊಂತಿಲ್ಲೆ ಚಾಮಿ ದೇವರೆ, ನೀನೇ ಎಲ್ಲಾ ಹೇಳಿ ಅರ್ಘ್ಯೆ ಬಿಟ್ಟು – ಗಾಯತ್ರಿಜೆಪ ಮಾಡಿ, ಕೊನೇಗೆ

ಕಾಯೇನ ವಾಚಾ ಮನಸೇಂದ್ರಿಯೇರ್ವಾ

ಬುಧ್ಯಾತ್ಮನಾವಾ ಪ್ರಕ್ರುತೇ ಸ್ವಭಾವಾತ್

ಕರೋಮಿ ಯದ್ಯತ್ ಸಕಲಮ್ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ ಹೇಳಿ ದೇವರಿಂಗೆ ಶರಣಾವುತ್ತು.

ದಿನಾಗುಳೂ ಎರಡು ಹೊತ್ತು ನಮ್ಮ ದೇಹದ ಒಳಾಣ ವ್ಯವಸ್ಠೆಗಳ ನೋಡಿಗೊಂಡು ಇದ್ದರೆ ವೈರಸ್ ಬಪ್ಪದು ಹೇಂಗೆ ನೋಡ°. ದಿನಗುಳೂ ಜೆಪ ಮಾಡಿರೆ ಬ್ರಾಹ್ಮಣ್ಯ ಒಳಿಗು ಹೇಳುದು ಇದಕ್ಕೇ ಆದಿಕ್ಕು. ಇರಳಿ.

ಆನು ಹೇಳ್ಲೆ ಹೆರಟದು. ಈ ಪಂಚ ಕೋಶಂಗಳ ಶುದ್ಧಮಡಿಕ್ಕೊಂಡಷ್ಟು ನಮ್ಮ ಆರೋಗ್ಯ ಲಾಯಕಿರ್ತು ಹೇಳಿ. 🙂

ದಿನಕ್ಕೆರಡು ಸರ್ತಿ ಮಿಂದರೆ ದೇಹದ ಆರೋಗ್ಯ ಲಾಯಕಿರ್ತು. ಪ್ರಾಣಾಯಾಮಂದಾಗಿ ದೇಹ ಗಟ್ಟಿ ಆವುತ್ತು. ಧ್ಯಾನಂದಾಗಿ ಮನಸ್ಸು ನಮ್ಮಲ್ಲಿಯೇ ಇರ್ತು. ಇಷ್ಟಪ್ಪಗ ಆರೋಗ್ಯವೂ ನಮ್ಮ ಕೈಲಿಯೇ ಹೇಳಿ ಆತಿಲ್ಲೆಯಾ? ಕ್ರಮಲ್ಲಿ ದಿನಕ್ಕೆರಡು (ಕನಿಷ್ಠ ಒಂದಾದರೂ) ಜೆಪ, ವಾರಕ್ಕೊಂದು ೪-೫ ಮನೆಯವ್ವು ಸೇರಿ ಭಜನೆ, ತಿಂಗಳಿಂಗೊಂದು ಸರ್ತಿ ಸಮಾನ ಮನಸ್ಸಿನವ್ವೆಲ್ಲ ಸೇರಿ ೧ ಅರ್ಥ ೧ ಗಂಟೆಯ ಧ್ಯಾನ. ಇಷ್ಟು ಮಾಡಿರೆ ಡ್ರಾಕ್ಟ್ರ ಮಾವಂಗೆ ಸುಮ್ಮನೇ ಉಪದ್ರ ಕೊಡೆಕಾಗಿ ಬಾರ.

ಎಂತ ಹೇಳ್ತಿ? ಯೋಚನೆ ಮಾಡಿಗೊಂಡು ಹೋದರೆ ಇನ್ನೂ ಸುಮಾರಿದ್ದು..

ನಮ್ಮೊಳ ಇಪ್ಪ ಚಕ್ರಂಗಳಲ್ಲೂ ಸುಮಾರೆಲ್ಲ  ಬಗೆ ಇದ್ದಡ. ಅದರ ಬಗ್ಗೆ ಇನ್ನಾಣ ಸರ್ತಿ ತಿಳುಕ್ಕೊಂಬ°…

ಮಂಗ್ಳೂರ ಮಾಣಿ

   

You may also like...

22 Responses

 1. ಗಣೇಶ ಪೆರ್ವ says:

  ಒಳ್ಳೇ ಲೇಖನ ಮ೦ಗ್ಳೂರಣ್ಣ..
  ಪ್ರಾಣಾಯಾಮ, ಧ್ಯಾನ ಮೊದಲಾದ ವಿಷಯ೦ಗಳ ಅನುಭವಿಸಿದವ೦ಗೆ ಸರಿಯಾಗಿ ಗೊ೦ತಕ್ಕು. ತು೦ಬ ವಿಚಾರವ೦ತ, ಮಾಹಿತಿಯುಕ್ತ ಲೇಖನ.
  ಇನ್ನಾಣ ಲೇಖನಕ್ಕೆ ಕಾದುಕೂರ್ತ ಹಾ೦ಗೆ ಇದ್ದು.
  ಒಪ್ಪ೦ಗೊ.

 2. ಮಂಗಳೂರ ಭಾವ, ಲಾಯಕ್ಕಾಯ್ದು. ಈ ಶುದ್ದಿ ಮೂಲಕ ಪಂಚಕೋಶದ ಅರಿವು ಸಿಕ್ಕಿತ್ತಿದಾ. ಬೈಲಿಂಗೆ ಕೊಟ್ಟದಕ್ಕೆ ಧನ್ಯವಾದ. ಶುದ್ದಿ ಒಪ್ಪ ಆಯ್ದು ಎನಗೆಂತ ಡೌಟೂ ಇಲ್ಲೆ. ಎಲ್ಲ್ಯಾರು ಇದ್ದರೆ ಅದು ಬೋಸ ಭಾವಂಗೆ. ಬರ್ಲಿ ನೋಡ್ವ ಎಂತ ಹೇಳ್ತವು ಅವ್ವುದೇ ಅಪ್ಪೋ.

 3. ಶರ್ಮಪ್ಪಚ್ಚಿ says:

  ಶುದ್ದಿ ಲಾಯಿಕ ಆಯಿದು ಮಾಣಿ.
  ಪಂಚ ಕೋಶಂಗೊ, ಪ್ರತಿಯೊಂದು ಕೋಶಂಗಳ ವ್ಯಾಪ್ತಿ, ಅಲ್ಲಿ ಅಪ್ಪ ಚತುವಟಿಕೆಗೊ, ಅದರ ಸರಿಯಾಗಿ ಪೋಷಿಸಿಗೊಂಡರೆ ಸಿಕ್ಕುವ ಪ್ರಯೋಜನ, ಗಾಯತ್ರಿ ಮಂತ್ರ ಜಪಂದಾಗಿ ಕೋಶಂಗೊ ಹೇಂಗೆ ಬೇಗ ಚೈತನ್ಯಗೊಳ್ಳುತ್ತು, ಜೆಪಕ್ಕೆ ಕೂಬಗಾಣ ನಮ್ಮ ಪೂರ್ವ ತಯಾರಿಂದಾಗಿ ಎಂತೆಲ್ಲಾ ಪ್ರಯೋಜನ ಆವ್ತು ಎಲ್ಲವೂ ವಿವರವಾಗಿ ಕೊಟ್ಟಿದೆ.
  ಸಂಗ್ರಹಯೋಗ್ಯ ಶುದ್ದಿ.
  [ಈ ಪಂಚ ಕೋಶಂಗಳ ಶುದ್ಧಮಡಿಕ್ಕೊಂಡಷ್ಟು ನಮ್ಮ ಆರೋಗ್ಯ ಲಾಯಕಿರ್ತು]- ಈ ದಿಸೆಲಿ ಎಲ್ಲರ ಪ್ರಯತ್ನವೂ ಇದ್ದರೆ ಆರೋಗ್ಯದ ಭಾಗ್ಯ ನವಗೆ ಅನಾಯಾಸವಾಗಿ ಸಿಕ್ಕುಗು ಅಲ್ಲದಾ

 4. Suvarnini Konale says:

  ಲೇಖನ ತುಂಬಾ ಲಾಯ್ಕಾಯ್ದು 🙂 ಯೋಗಲ್ಲಿ[ನಮ್ಮ ದೇಶದ ಮೂಲ ತತ್ವಂಗಳೂ ಅದನ್ನೇ ಹೇಳುದು] ಹೇಳಿದ ಮಾತುಗಳ ತುಂಬಾ ಲಾಯ್ಕಕ್ಕೆ ವಿವರ್ಸಿದ್ದಿ. ಒಳ್ಲೆಯ ಲೇಖನಕ್ಕೆ ಧನ್ಯವಾದ…
  ಬೇಜಾರಪ್ಪ ವಿಷಯ ಎಂತರ ಹೇಳಿರೆ ಈಗಾಣವಕ್ಕೆ ಈ ವಿಚಾರಂಗಳ ಅರ್ಥ ಮಾಡ್ಸುದೇ ಕಷ್ಟ, ಅನ್ನಮಯಕೋಶವನ್ನೇ ಎಲ್ಲರೂ ಮುಖ್ಯವಾದ್ದು ಹೇಳಿ ಗ್ರೇಶುತ್ತವು, ಅದಕ್ಕೇ ಪ್ರಾಮುಖ್ಯತೆ… ಅದರಲ್ಲಿಯೇ ಆನಂದವನ್ನೂ ಹುಡುಕ್ಕುವ ಪ್ರಯತ್ನ ಜನರದ್ದು ! ಎಲ್ಲರೂ ಮೂಲ ತತ್ವಂಗಳ ಸರಿಯಾಗಿ ಅರ್ಥಮಾಡಿಗೊಂಡು ಜೀವನವ ಆನಂದಮಯ ಆಗಿಸಿಕೊಳ್ಳೆಕಾದ್ದು ಅಗತ್ಯ !

  • ಅಕ್ಕೋ.. ತುಂಬ ತುಂಬ ಧನ್ಯವಾದ:)
   ನಿಂಗೊ ಹೇಳಿದ ಹಾಂಗೇ ಎಲ್ಲ ಕೋಶಂಗೊಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದ್ದಿದಾ..
   ಅನ್ನಮಯ ಕೋಶ ಸರಿಯಾಗಿರೆಕು ಹೇಳಿ ಆದರೆ ಒಳುದ ಕೋಶಂಗೊ ಶುದ್ಧವಾಗಿರೆಕು; ಒಳುದ ಕೋಶಂಗಳ ಶುದ್ಧ ಮಾಡೆಕಾರೆ ಅನ್ನಮಯ ಕೋಶ ಸರಿಯಾಗಿರೆಕು..!!
   ಎಲ್ಲವೂ ಎಷ್ಟು inter-connected ಅಲ್ಲದಾ?

 5. ತೆಕ್ಕುಂಜ ಕುಮಾರ says:

  ಒಳ್ಳೆ ಮಾಹಿತಿ ಕೊಟ್ಟಿದಿ , ಧನ್ಯವಾದ
  ಲೇಖನ ಲಾಯಿಕ್ಕಾಯಿದು, ಇನ್ನಾಣದಕ್ಕೆ ಕಾದುಕೂಪ ಹಾಂಗೆ

 6. LN says:

  ಒೞೆ ಮಾಹಿತಿ… ವೇದಪಾಠಶಾಲೆಲಿ ಯೋಗ ಕಲ್ತದು ನೆಂಪಾತು….. ಸರಣಿಯ ಎರಡನೇ ಲೇಖನಕ್ಕೆ ಕಾಯ್ತಾ ಇರ್ತೆ

 7. ಬೊಳುಂಬು ಮಾವ says:

  ಒಳ್ಳೆ ಲೇಖನ. ಮಂಗಳೂರು ಮಾಣಿಗೆ ಧನ್ಯವಾದಂಗೊ.

 8. ಸುಭಗ says:

  ಮಂಗ್ಳೂರ್ ಮಾಣೀ, ಗಂಭೀರ ವಿಷಯವ ಸರಳವಾಗಿ ಆಸಕ್ತಿದಾಯಕವಾಗಿ ವಿವರುಸಿದ್ದೆ. ಅಭಿನಂದನೆಗೊ.
  ಇಷ್ಟೊಳ್ಳೆ ‘ಏಂಟಿ ವೈರಸ್’ ಫ್ರೀಯಾಗಿ ಸಿಕ್ಕುತ್ತರೆ ನಿಜಕ್ಕೂ ಅದರ ಎಲ್ಲೊರೂ ಇನ್ಸ್ಟಾಲ್ ಮಾಡೆಕ್ಕಾದ್ದೇ!

 9. Gopalakrishna BHAT S.K. says:

  ಇದರ ಮೂಲ ಯಾವ ಉಪನಿಷತ್ತಿಲಿ ಇದ್ದು?

 10. ಗಣೇಶ ಮಾವ° says:

  ಮಂಗ್ಳೂರು ಮಾಣೀ,
  ಪಂಚಕೋಶಂಗಳ ವಿಷಯವ ಬೈಲಿಲಿ ಶುದ್ಧಿ ಹೇಳುವ ಮೂಲಕ ಚೆಂದಕೆ ಎಲ್ಲೋರಿಂಗೂ ಅರ್ಥ ಅಪ್ಪ ರೀತಿಲಿ ವಿವರ್ಸಿದ್ದೆ,ಬರವಣಿಗೆಯ ಶೈಲಿ ಲಾಯ್ಕಿದ್ದು.ಹೀಂಗೇ ಮುಂದುವರಿಯಲಿ.ಒಳ್ಳೆಯದಾಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *