Oppanna.com

ಜೆಂಬಾರದ ಮನೆಯ ಶಬ್ದಮಾಲಿನ್ಯ..!

ಬರದೋರು :   ಗಣೇಶ ಮಾವ°    on   12/02/2010    7 ಒಪ್ಪಂಗೊ

ಗಣೇಶ ಮಾವ°

ನಮ್ಮ ಹತ್ತರಾಣವು ಹೇಳಿ ಗ್ರೇಶಿಗೊಂಬವರೊಟ್ಟಿಂಗೆ ಸಂತೋಷಂದ ಕಾಲ ಕಳವಲೆ – ಮದುವೆ, ಉಪ್ನಾಯನ ಹೇಳ್ತ ಜೆಂಬಾರಂಗೊ ಒಳ್ಳೆ ಛಾನ್ಸು ಹೇಳಿ ಕೆಲವು ಜನ ಲೆಕ್ಕ ಹಾಕುತ್ತವು.
ಇದರಿಂದಾಗಿ ಕೆಲವು ಸರ್ತಿ ಎಲ್ಲೋ ಒಂದು ದಿಕ್ಕೆ ದೃಶ್ಯಮಾಲಿನ್ಯ ಅಥವಾ ಶಬ್ದಮಾಲಿನ್ಯ ಆವ್ತು ಹೇಳಿ ನವಗೆ ಅನಿಸುತ್ತೇ ಇಲ್ಲೆ.
ದೃಶ್ಯಮಾಲಿನ್ಯ ಆದರೂ ತಡವಲಕ್ಕು, ಶಬ್ದಮಾಲಿನ್ಯ ಹೇಳ್ತದು ನಮ್ಮ ಕೆಮಿಗೆ ಬಿದ್ದರೆ ಮುಗುದತ್ತು ಕತೆ..!
ಇಷ್ಟಕ್ಕೂ ಮೊನ್ನೆ ಎಂತಾತು ಹೇಳಿದರೆ. . .
ನಮ್ಮ ಆಚಕರೆ ಗೋಪಾಲ ಮಾವನ ಮನೇಲಿ ಅವರ ಮಗಂಗೆ ಉಪ್ನಾಯನ.
ಕೋಣಮ್ಮೆ ಭಟ್ರು ಹೋಮ ಮಾಡಿಗೊಂಡು ಇತ್ತಿದ್ದವು.
ಅಷ್ಟೊತ್ತಿಂಗೆ ಅಲ್ಲಿ ಬ್ರಹ್ಮತ್ವಕ್ಕೆ ಕೂದ (ಮಾಣಿಯ )ಸೋದರ ಮಾವನ ಕಂಡಪ್ಪಗ ಮೇಗಾಣ ಮನೆಯ ಪುಟ್ಟತ್ತೆಗೆ ಕೊಶಿಯಾಗಿ (ಸೌಂಡು ಬೋಕ್ಸಿನ ಹಾಂಗೆ ) “ಏ ಶ್ಯಾಮಾ. . . ಏವಾಗ ಇಲ್ಲಿಗೆ ಬಂದರೂ ಏನಾರು ನೆವನ ಹೇಳಿ ತಪ್ಪಿಸಿಗೊಂಡು ಹೋವ್ತೆ ಶಾಮ ನೀನು. . .! ಈ ಸರ್ತಿ ಎಂಗಳಲ್ಲಿಗೆ ಬಪ್ಪಲೇ ಬೇಕು” ಹೇಳಿತ್ತು. ಬಟ್ಟಮಾವಂಗೆ ಪಿಸುರು ಬಂದು ತಡೆಯ – ಶಾಮ ಮಾವಂಗೆ ಭಟ್ರ ಮೋರೆ ನೋಡಿಯಪ್ಪಗ ಅಂದಾಜಾತು. ಪುಟ್ಟತ್ತೆಯ ಮೋರೆ ನೋಡಿ ತಲೆ ಆಡ್ಸಿದ . . . !

ಪ್ರಣವಸ್ಯ ಪರಬ್ರಹ್ಮ ಋಷಿಃ..!
ಪ್ರಣವಸ್ಯ ಪರಬ್ರಹ್ಮ ಋಷಿಃ..!

ಮೊದಲೇ ಕೆದೂರು ಗುಡ್ಡೆ ಹತ್ತಿ ಕಳತ್ತೂರಿಂಗೆ ಬಂದ ಬಚ್ಚೆಲು ಶಾಮ ಮಾವಂಗೆ. ಅದರೆಡಕ್ಕಿಲಿ ಪುಟ್ಟತ್ತೆಯ ಸ್ವರ ಕೇಳಿಯಪ್ಪಗಂತೂ ಪಿಸ್ರು ಏರಿ ತಡೆಯ..
ತುಳುಕಿದ ಮನೆಮಟ್ಟಿನ ಆ ಕಾರ್ಯಕ್ರಮಲ್ಲಿ ಮಾತೋಮಾತು . .
ಊಟೋಪಚಾರದ ವಿಷಯಂಗ , ಮಕ್ಕಳ ಆಟ, ಜವ್ವನಿಗರ ಬೆಳವಿನ ಆಟಂಗ, ದೊಡ್ಡವರ ಅಡಕ್ಕೆ ವೈವಾಟು, ಕೂದಲ್ಲಿಂದಲೇ ಅತ್ತೆ – ಮಾವ – ಚಿಕ್ಕಮ್ಮ, ಹೆಮ್ಮಕ್ಕಳ ಪಟ್ಲಾಮು, ಪಟ್ಟೆ ಸೀರೆ – ಜರಿಸೀರೆ -ಜವ್ವಂತಿಗಳ ಫ್ಯಾನ್ಸಿ ಸೀರೆ – ಹೀಂಗೆಲ್ಲ ಹೆಮ್ಮಕ್ಕಳ ವಿಷಯ, ಪುಳ್ಳರುಗ ಅವರ ಅಪ್ಪಂದ್ರ ಹತ್ತರಂದಲೋ, ಅಲ್ಲದ್ರೆ ಈಗಾಣ ಹೊಸ ಜವ್ವನಿಗರ ಹತ್ರೆ ಇಪ್ಪ ಹೊಸ ನಮೂನೆಯ (ಟಿ.ವಿ. ಕಂಪ್ಯೂಟರು ಇಪ್ಪ ) ಮೊಬೈಲ್‌ ಫೋನ್‌ ಹಿಡ್ಕೊಂಡು ಗುರುಟಿಗೊಂಡು ಇಪ್ಪದು, ೫೦ ಕಂಡಿ ಅಡಕ್ಕೆ ಅಪ್ಪ ಮಾವಂದ್ರ ಹೊಸ ನಮೂನೆಯ ಕಾರಿನ ರಿವರ್ಸ್ ಗೇರಿನ ಶಬ್ದ ಹೆರಡುಸುವದು,  ಪಾತ್ರ ತೊಳವಲ್ಲಿ ಪಾತ್ರವ ಎತ್ತಿ ಮಡುಗುವಾಗ ಅಪ್ಪ ಶಬ್ದ, ತೋಟಲ್ಲಿ ಸಿಗರೇಟ್ ಎಳಕ್ಕೊಂಡು ದೊಡ್ಡ ವೈವಾಟಿನ ಮಾತುಕತೆ (ಅದರ್ಲಿಯೂ ಗೋರ್ಮೆಂಟಿನ ವಿಷಯ; ಹಾಂಗಾತದ – ಹೀಂಗಾತದ ಹೇಳಿ ದೊಡ್ಡಕ್ಕೆ ಮಾತಾಡುವದು..), ಒಪ್ಪಕ್ಕನ ಹಾಂಗಿಪ್ಪವು ಆಸರಿಂಗೆ ಕೊಡ್ಲೆ ನಿಂದುಗೊಂಡಿಪ್ಪಗ ಜಿಗ್-ಜಾಗ್ ಸೀರೆ ಸುತ್ತಿಗೊಂಡು ತಲೆ ಕೂದಲಿನ ಅಮ್ಬಗಮ್ಬಗ ಸರಿ ಮಾಡಿಗೊಂಡು ಸ್ಟೀಲ್‌ ತಟ್ಟೇಲಿ ಗಡ- ಗಡ ಶಬ್ದ ಮಾಡಿಗೊಂಡು ಕಾಪಿ, ಚಾಯ (ಅದರ್ಲಿಯೂ ಚಪ್ಪೆ ಸೀವು ಹೇಳಿ ಮತ್ತೆ ಚರ್ಚೆ) ಹೇಳಿ ಗ್ಲಾಸುಗಳ ಮೆರವಣಿಗೆ,
ಹೀಂಗೆ ಇನ್ನೂ ಸುಮಾರು ರೀತಿಲಿ ನವಗೆ ಜೆಂಬಾರಲ್ಲಿ ಶಬ್ದ ಕೇಳ್ತಾ ಇರ್ತು..
ಬೇಕಾದರೆ ಇನ್ನೊಂದರಿ ಹೀಂಗಿಪ್ಪ ಜೆಂಬಾರಲ್ಲಿ ಇದೆಲ್ಲಾ ಒಂದೇ ದಿಕ್ಕೇ ಸಿಕ್ಕುತ್ತಾ ನೋಡಿ. ಶಬ್ದಂಗೊ ಬಿಟ್ಟುಹೋದ್ದದಿದ್ದರೆ ನಿಂಗಳೂ ಹೇಳಿ. . .!
ಮೇಲ್ನೋಟಕ್ಕೆ ನಮ್ಮವು, ಆತ್ಮೀಯರು ಹೇಳಿಗೊಂಬವರ ಜೊತೆ ಸಂತೋಷಂದ ಕಾಲ ಕಳವಲೆ ಇಂಥ ಫಂಕ್ಷನ್‌ಗಳ ಒಳ್ಳೆ ಛಾನ್ಸು ಹೇಳಿ ಗ್ರೇಶಿಗೊಂಡರೂ – ಎಲ್ಲೋ ಒಂದು ದಿಕ್ಕೆ ದೃಶ್ಯ ಮಾಲಿನ್ಯ, ಶಬ್ದಮಾಲಿನ್ಯ ಅಪ್ಪದು ನಿಘಂಟು ಅಲ್ದಾ?
ಜೆಂಬಾರದ ಮನೆಲಿ ಆಗಲೀ ಅಥವಾ ಹೆರ ಆಗಲೀ ಎಲ್ಲಾದರೂ ಆಗಲಿ, ಒಂದು ಕಾರ್ಯಕ್ರಮಕ್ಕೆ ಒಂದು ಸ್ವರೂಪ, ಒಂದು ಚೌಕಟ್ಟು , ಅದರದ್ದೇ ಆದ ಅರ್ಥ ಇರ್ತಲ್ದಾ ?
ಆ ಚೊಕ್ಕಟವ ಮೀರಿ ವರ್ತಿಸಿದರೆ ಆಭಾಸ ಆವ್ತು . .
ಅನುಭವಿಸುವವು ಆರೋ.
ಅದರ ತಪ್ಪುಸುವುದು ಜಾಣ ಜಾಣೆಯರ ಲಕ್ಷಣ.
ಇಲ್ಲದಿದ್ದರೆ ಕೈತೋರಿಸಿ ಅವಲಕ್ಷಣ ಆವ್ತು . . ಅಲ್ದಾ . . ?

7 thoughts on “ಜೆಂಬಾರದ ಮನೆಯ ಶಬ್ದಮಾಲಿನ್ಯ..!

  1. ಅರೆ.ಅದಕ್ಕೆ ಅಲ್ದಾ ಜಂಬ್ರದ ಮನೆ ಹೇಳುದು. ಜಂಬ್ರ, ಸಂತೆಲಿ ಶಬ್ದ ಇಪ್ಪಲಾಗ ಹೇಳಿರೆ ಹೇಂಗೆ? ಸುಮಾರು ದಿನದ ನಂತರ ಸಿಕ್ಕುವ ನೆಂಟರ ಒಟ್ಟಿಂಗೆ ಮಾತಾಡದ್ದೆ ನಿಂದರೆ ಅಕ್ಕೋ? ಅದರಲ್ಲೂ ಸೈಕೋಲೊಜಿ ಇದ್ದು ಹೇಳಿ ಹೇಳುಗು ಡಾಗುಟ್ರುಗೊ. ಶಬ್ದಮಾಲಿನ್ಯ ಅಪ್ಪದು ಕಿರುಚ್ಚಿ, ಬೊಬ್ಬೆ ಹೊಡದು ನ್ಯೂಸೆನ್ಸ್ ಮಾಡಿರೆ. ಮಾತಾಡಿದರೆ ಅಲ್ಲ.ಅಲ್ಲದೋ ಮಾವ?:-)

    1. ಅಪ್ಪು ಕೂಸೇ,,ಎಲ್ಲೋರು ನಿನ್ನ ಹಾಂಗೆ ಚಾಮಿ ಕುoಞಯ ಹಾಂಗೆ, ಒಪ್ಪಕ್ಕನ ಹಾಂಗೆ ಕೂದರೆ ಅಕ್ಕು.. ಇಲ್ಲದ್ದರೆ ಎಡಿಯ… ಹಾಂಗಿಪ್ಪವಕ್ಕೆ ಆನು ಹೇಳಿದ್ದು..

  2. ವಸಂತಣ್ಣ ನ ಅಭಿಪ್ರಾಯ ನೂರಕ್ಕೆ ನೂರರಷ್ಟು ಸತ್ಯ..ಲೇಖನಕ್ಕೆ ಪುಷ್ಟಿ ಕೊಟ್ಟದಕ್ಕೆ ಧನ್ಯವಾದಂಗ……………

  3. ಗಣೇಶಮಾವº ಬರದ್ದದು ಎಲ್ಲೋರ ಮನಸ್ಸಿಲ್ಲಿ ಬರೆಕಾದ್ದದು!

  4. ಗಣೇಶ ಮಾವ° ಬರದ್ದು ನಿಜ. ಆದರೆ ಈ ಗೌಜಿಯ ಎಂತ ಮಾಡಿರೂ ನಿಲ್ಸುಲೆ ಎಡಿಯ ಹೇಳಿ ಎನ್ನ ಅಭಿಪ್ರಾಯ.
    ಜೆಂಬಾರದ ಮನೆ ಹೇಳಿರೆ ನೆಂಟ್ರು, ಆಪ್ತರು ಸೇರ್ತ ಜಾಗೆ. ಒಪ್ಪುವ. ಕಾಣದ್ದೆ ತುಂಬ ಸಮಯ ಆತು ಹೇಳಿಗೊಂಡು ಎಲ್ಲೊರೂ ಪಟ್ಟಾಂಗ ಹಾಕ್ಲೆ ಸುರು ಮಾಡ್ತವು. ರಜ್ಜ ಹಳಬ್ಬರಾದರೆ ಅಡಕ್ಕೆಗೆ ರೇಟು ಡೌನು ಆದ ಸಂಗತಿಯೋ, ಚಿಕುನ್ ಗುನ್ಯ ಬಂದು ಸುರು ಆದ ಮೊಳಪ್ಪು ಬೇನೆ ಇನ್ನೂ ಗುಣ ಆಗದ್ದ ವಿಷ್ಯವೋ, ಬೆಂಗ್ಳೂರಿಲ್ಲಿಪ್ಪ ಮಗ(ಮಗಳು) ಇನ್ಫೋಸಿಸ್ಸಿಂಗೆ ಸೇರಿ ೪ ತಿಂಗಳು ಆದ ಶುದ್ದಿಯೋ, ತೋಟದ ಕೆಲಸಕ್ಕೆ ಆಳುಗೊ ಸಿಕ್ಕದ್ದ ನರಕ್ಕವೋ… ಹೀಂಗೆಂತಾರು ಮಾತಾಡುಗು. ಹೆಮ್ಮಕ್ಕೊ 4 ಜನ ಒಟ್ಟಿಂಗೆ ಸೇರಿದರೆ ಮತ್ತೆ ಅಲ್ಲಿ ಬೆಡಿ ಹೊಟ್ಟುಸಿರೂ ಕೇಳ! ಈಗ ಮತ್ತೆ ಶಾಲಗೆ, ಕೋಲೇಂಜಿಂಗೆ ಹೋಪ ಮಕ್ಕೊ ಜೆಂಬಾರಕ್ಕೆ ಬಪ್ಪದು ಭಾರೀ ಕಡಮ್ಮೆ ಆಯಿದು. ಎಲ್ಯಾರು ಬಂದರೆ ಆದಿತ್ಯವಾರ ಇಪ್ಪ ಜೆಂಬಾರಕ್ಕೆ ಬಕ್ಕು. ಅವು ಬಂದರೂ ಮೊಬೈಲಿಲ್ಲಿ ಗುರುಟಿಗೊಂಡು ಬ್ಲೂಟೂತಿಲ್ಲಿ ಎಂತಾರು ಕಾಟಂಕೋಟಿ ಪದ್ಯವೋ, ಮತ್ತೊಂದೋ ಪಗರ್ಸಿಯೋಂಡು ಇಕ್ಕು.
    ಕೆಲವು ಜನಂಗೊ ಇದ್ದವು, ಅವಕ್ಕೆ ಫೋನ್ ಮಾಡಿ ಮಾತಾಡ್ಲೆ ನೆಂಪಾವುತ್ತಿಲ್ಲೆ. ಎದುರು ಕಂಡಪ್ಪಗ ಎಷ್ಟೂದೆ ಮಾತಾಡುಗು. (ಮತ್ತೊಂದು ವರ್ಗದವು ಕೂಡ ಇದ್ದವು – ಎದುರಂದ ನುಣ್ಣಂಗೆ ಮಾತಾಡಿ ನಿಂಗಳ ವಿಷ್ಯ ಪೂರ ತಿಳ್ಕೊಂಗು. ಆಹಾ, ಎಷ್ಟು ಚೆಂದಕೆ ಮಾತಾಡ್ತ° ಇವ° ಹೇಳಿ ನಿಂಗೊ ಗ್ರೇಶುದು. ಆದರೆ ಅವು ಒಳಾಂದ ಮಡುಗುದು ಕತ್ತರಿ!)
    ಪಟ ತೆಗವಲೆ ಹೋದರೆ ಈ ಗೌಜಿ ಅಷ್ಟು ಉಪದ್ರ ಆವುತ್ತಿಲ್ಲೆ. ವೀಡ್ಯ ತೆಗವಲೆ ಹೋದರೆ ಇದು ಮಹಾ ಉಪದ್ರ. ಕಡೆಂಗೆ ವೀಡ್ಯ ನೋಡಿ ಪೈಸೆ ಕೊಡ್ಲಪ್ಪಗ “ಅಣ್ಣೋ, (ಅಥವಾ ಭಾವಾ) ವೀಡ್ಯಲ್ಲಿ ಭಟ್ಟ ಮಾವನ ಮಂತ್ರ ಬಯಿಂದಿಲ್ಲೆನ್ನೆ?” ಹೇಳಿ ಕಂಪ್ಲೇಂಟು. ಜೆಂಬಾರದ ಮನೆಲಿ ಪುರೋಹಿತರ ಮಂತ್ರ ಹೆಮ್ಮಕ್ಕಳ ಗೌಜಿಲಿ ನಮ್ಮ ಕೆಮಿಗೆ ಕೇಳುದೇ ಕಷ್ಟಲ್ಲಿ. ಅಂತಾದ್ರಲ್ಲಿ ಭಟ್ರ ಮಂತ್ರವ ಮಾಂತ್ರ ಹೆರ್ಕಿ ತೆಗದು ರೆಕಾರ್ಡು ಮಾಡುದು ಹೇಂಗೆ ಈ ಕೆಮರ? ಎಂಗೊಗೆ ಮಂತ್ರ ತಯಾರಿಸಿ ಹಾಕ್ಲೆ ಎಡಿತ್ತೋ?
    ಕೆಲಾವು ಜೆನ ವೀಡ್ಯ ತೆಗವ ಹಳಬ್ಬರು ತಾಳಿ ಕಟ್ಟುತ್ತ ಹೊತ್ತಿಂಗೆ ’ಸಪ್ತಪದಿ’ ಹೇಳ್ತ ಅಂಬರೀಶನ ಸಿನೆಮದ ಪದ್ಯದ ತುಂಡನ್ನೇ ಹಾಕುಗು ಈಗಳೂ, (ಊಟದ ಹೊತ್ತಿಂಗೆ ಸರಿಯಾಗಿ 1957ನೇ ಇಸವಿಯ ’ಮಾಯಾಬಜಾರ್’ ಸಿನೆಮದ ’ವಿವಾಹ ಭೋಜನವಿದು’ ಪದ್ಯ!). ಅಷ್ಟು ಬಿಟ್ರೆ ಆ ಮದುವೆಯ ಇಡೀ ವೀಡ್ಯಲ್ಲಿ ಭಟ್ರ ಮಂತ್ರ ಇರ. ಆ ತುಂಡು ಪದ್ಯ ಹಿಂದಾಣ ನಾಗಸ್ವರದ ಮೇಲಂದಲೇ ಹಾಕುಗು. ಅದು ಅಷ್ಟಪ್ಪಗ ಬೆಣ್ಣೆ ಮಧ್ಯಲ್ಲಿ ಕಲ್ಲು ಸಿಕ್ಕಿದ ಹಾಂಗೆ ಆವುತ್ತು. ಸರ್ವೀಸು ಆದ ಜೆನ ಅಲ್ಲದೋ ವೀಡ್ಯ ತೆಗದ್ದದು? ಮಾತಾಡ್ಳೆ ನಿವುರ್ತಿ ಇದ್ದೋ? ಜೆನಂಗೊ ತಳೀಯದ್ದೆ ಕೂರ್ತವು.
    ಜೆಂಬಾರದ ಎಡೆಲಿ ಈ ಪಟ್ಟಾಂಗದ ಗೌಜಿ ಕಡಮ್ಮೆ ಆದರೆ ಭಟ್ಟ ಮಾವನ ಮಂತ್ರ ಎಲ್ಲೋರಿಂಗೂ ಕೇಳುಗು. ವೀಡ್ಯಲ್ಲಿಯೂ ಬಕ್ಕು.

    1. ಅದೆಲ್ಲ ಸರಿ ಅಣ್ಣೋ. ವೀಡಿಯದವು ಒಂದೇ ದಿನ ಏಳೆಂಟು ಕಾರ್ಯಕ್ರಮ ಒಪ್ಪಿಗೊಂಡು ಯಾವುದನ್ನೂ (ಸ್ವಂತ ತೆಗದ್ದು ಕೂಡ) ಬರ್ಕತ್ತು ಮಾಡದ್ದೆ ಕೊಡುದು ಎಂತಕೆ? ಕಾರ್ಯಕ್ರಮದ ಗಂಧಗಾಳಿ ಗೊಂತಿಲ್ಲದ್ದವರ ಪಟ, ವೀಡಿಯ ತೆಗವಲೆ ಕಳುಸುದು ಎಂತಕೆ?

      1. ಹಾಂಗೆ ಎಲ್ಲೊರನ್ನೂ ಸೇರ್ಸಿ ಜನರಲ್ ಅಭಿಪ್ರಾಯಕ್ಕೆ ಬರೆಡಿ. ಎಂಗೊ° ಹಾಂಗೆ ಮಾಡಿದ್ದಿಲ್ಲೆ, ಮಾಡ್ತೂ ಇಲ್ಲೆ. ಹಾಂಗೆ ಮಾಡುವವು ಧಾರಾಳ ಇದ್ದವು, ಒಪ್ಪುತ್ತೆ. ಅದು ಪಟ, ವೀಡ್ಯಕ್ಕೆ ಹೇಳುವವು ಹೇಳುವಗಳೇ ಆಲೋಚನೆ ಮಾಡ್ಯೋಳೆಕ್ಕು. ಬೇರೆ ಜೆನ ಕಳುಸುತ್ತರೆ ಆ ಜೆನ ಆರು? ಅವಕ್ಕೆ ಆನೇ ಹೇಳ್ತೆ ಹೇಳಿ ಹೇಳಲಕ್ಕು.
        ಎಂಗೊ° ಎರಡು ಜೆನ ಇಪ್ಪದು. ಹರೀಶಣ್ಣ ಪಟ ತೆಗವಲೆ ಹೋದರೆ ಆನು ವೀಡ್ಯಕ್ಕೆ. ಎಷ್ಟೇ ರಶ್ಶಿದ್ದರೂ ಎಂಗೊ° ಎಡಿತ್ತಷ್ಟೇ ಒಪ್ಪ್ಯೊಂಬದು. ಆರನ್ನೋ ಹೇಳಿ ಪಟ ತೆಗವಲೆ ಕಳುಸುವ ಕ್ರಮ ಇಲ್ಲೆ. ಬೇಕು ಹೇಳಿ ಇಪ್ಪವು ಮೊದಲೇ ಹೇಳಿ ಮಡುಗುತ್ತವು, ಮಡುಗುಲಕ್ಕು.
        ಇಲ್ಲಿ ಚರ್ಚೆ ಇತ್ತಿದ್ದದು ಜೆಂಬಾರದ ಮನೆಯ ಗೌಜಿಯ ಬಗ್ಗೆ. ನಿಂಗ ವಿಷಯಾಂತರ ಮಾಡಿದ್ದು ಎಂತಕೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×