ಜ್ಞಾನದ ದೀಪ-ಧರ್ಮಭಾರತೀ

February 19, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಏಳ್ಕಾನದ ಡಾಗುಟ್ರು ರವಿಶಂಕರ ಬಾವನ ಮನೆಯೋರು ವಿದ್ಯಾರವಿಶಂಕರ್ – ನಮ್ಮ ಮಠದ ನಿಷ್ಠಾವಂತ ಕಾರ್ಯಕರ್ತೆ.
ನಮ್ಮ ಬೈಲಿಂಗೆ ಶುದ್ದಿ ಹೇಳುಲೂ ಅದೇ ಮಠದ ಧರ್ಮಭಾರತೀ ಪತ್ರಿಕೆಯ ಬಗ್ಗೆ ಮಾತಾಡಿಗೊಂಡೇ ಸುರು ಮಾಡಿದ್ದವು.
ಬನ್ನಿ, ವಿದ್ಯಕ್ಕನ ಎಲ್ಲಾ ಶುದ್ದಿಗಳ ಓದುವೊ
°, ಶುದ್ದಿಗೆ ಒಪ್ಪ ಕೊಟ್ಟೂ ಪ್ರೋತ್ಸಾಹಿಸುವೊ°.

|| ಹರೇರಾಮ ||

ಇಡೀ ವಿಶ್ವಕ್ಕೆ ಧಾರ್ಮಿಕತೆ, ಆಧ್ಯಾತ್ಮಿಕತೆ, ಆಚಾರ, ವಿಚಾರ, ಸಂಸ್ಕೃತಿಗಳ ಬೋಧಿಸಿದ ಭಾರತ ಇಂದು ದೇವರು ಧರ್ಮಂಗಳಿಂದ ದೂರ ಸರಿತ್ತಾ ಇದ್ದು.
ಆಧುನಿಕ ಸಂಸ್ಕೃತಿ, ತಂತ್ರಜ್ಞಾನಂಗಳ ಬೆನ್ನತ್ತಿ, ಸನಾತನ ಧರ್ಮ, ಸಂಸ್ಕೃತಿ, ಕಲೆಂಗಳ ಮರತ್ತು ನಾಶದಂಚಿಂಗೆ ಹೋವುತ್ತಾ ಇದ್ದು. ಕಾಲಧರ್ಮದ ಹಾಂಗೆ ಧರ್ಮ ಹಂತಹಂತವಾಗಿ ಮರೆಯಾವುತ್ತಾ ಅಧರ್ಮ ಹೆಚ್ಚಾವುತ್ತಾ ಇದ್ದು.
ಇಂತಾ ಈ ಸಂದಿಗ್ಧ ಕಾಲಲ್ಲಿ ನಮ್ಮ ಧರ್ಮ-ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಂಗಳ ಜನಂಗೊಕ್ಕೆ ತಿಳಿಶುವ ನಿಟ್ಟಿಲಿ ನಮ್ಮ ಸಂಸ್ಥಾನ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗೊ “ಧರ್ಮಭಾರತೀ” ಹೇಳುವ ಮಾಸಿಕ ಪತ್ರಿಕೆಯ ೧೫-೧೦-೨೦೦೦ ದಂದು ಶ್ರೀ ರಾಮಚಂದ್ರಾಪುರ ಮಠ ಗಿರಿನಗರ , ಬೆಂಗ್ಳೂರಿಲಿ ಲೋಕಾರ್ಪಣೆ ಮಾಡಿದವು.
ಈ ಮಾಸಪತ್ರಿಕೆಲಿ ಪ್ರಸಿದ್ಧ ವಿದ್ವಾಂಸರು, ತಜ್ಞರು ಬರೆದ ಧರ್ಮಸಂದೇಶಂಗೊ ಜನರ ಧರ್ಮಾಭಿಮಾನಿಗಳ ಮನಮುಟ್ಟುವ ರೀತಿಲಿ ಪ್ರಕಟವಾವುತ್ತಾ ಇದ್ದು.
ಇದಲ್ಲದ್ದೆ ಮುಖ್ಯವಾಗಿ ಇದರ್ಲಿ ಬಪ್ಪ ನಮ್ಮ ಗುರುಗಳ ಸಂದೇಶಂಗೊ, ಲೇಖನಂಗೊ, ಆಶೀರ್ವಚನದ ತುಣುಕುಗೊ, ಸಾಮಾನ್ಯ ಮನುಷ್ಯಂಗೂ  ಧರ್ಮದ ಬಗ್ಗೆ ಅರಿವು ಮೂಡುಸುವಹಾಂಗಿದ್ದು.
ಮೂಲೆಗೆ ಸೇರಿದ ಪುರಾಣ-ಪುಣ್ಯ ಕಥೆಗೊ “ಪುನರಪಿಜನನಂ” ಹೇಳಿ ಬೆಳಕಿಂಗೆ ಬತ್ತಾ ಇದ್ದು. ಇದಲ್ಲದ್ದೆ ಇದರ್ಲಿ ಶ್ರೀ ರಾಮಾಯಣ ದರ್ಶನ, ಶ್ರೀಕೃಷ್ಣಲೀಲಾವಳಿ, ಗೋವಂಶವೈಭವ, ವನೌಷಧಿ ಸಸ್ಯಂಗೊ, ಸನಾತನ ಭಾರತ, ಪ್ರಾಚೀನ ಶಿಕ್ಷಣ ವಿಧಾನ, ಸುಭಾಷಿತ, ಬಾಲಭಾರತಿ, ಇತ್ಯಾದಿಗಳಿಂದ ಕೂಡಿದ ಓದುಗರಿಂಗೆ ತೃಪ್ತಿ ಅಪ್ಪ ಲೇಖನಂಗಳೇ ಬತ್ತಾ ಇದ್ದು. ಒಟ್ಟಿಲಿ ಹೇಳ್ತರೆ ಮನುಷ್ಯನ ಆಧ್ಯಾತ್ಮದ ಹಸಿವು ನೀಗುವ ತಾಣವೇ ಈ “ಧರ್ಮಭಾರತೀ”.

ಈ ಮಾಸಪತ್ರಿಕೆ ದಿನಂದ ದಿನಕ್ಕೆ, ವರ್ಷಂದ ವರ್ಷಕ್ಕೆ ಹೆಚ್ಚು ಆಕರ್ಷಣೀಯವಾಗಿ, ಜನಪ್ರಿಯವಾಗಿ ಮೂಡಿಬತ್ತಾ ಇಪ್ಪದು ಸಂತೋಷವಾದ ವಿಷಯವೇ ಸರಿ.
ನಮ್ಮ ಋಷಿಮುನಿಗೊ ಹೇಳಿದ ವೇದ, ಶಾಸ್ತ್ರ, ಇತಿಹಾಸ, ಪುರಾಣ, ಕಾವ್ಯ, ಸಾಹಿತ್ಯ, ಇತ್ಯಾದಿಗಳೇ ಧರ್ಮಭಾರತಿಯಾದ್ದರಿಂದ ಈ ಎಲ್ಲಾ ವಿಚಾರಂಗಳ ಜನಸಾಮಾನ್ಯರಿಂಗೆ ತಿಳಿಶುವ ಉದ್ದೇಶಂದ ಹುಟ್ಟಿದ ಮಾಧ್ಯಮ ಇದು.
ಇದರ್ಲಿ ಧರ್ಮದ ತಿರುಳಿನ ಸುಲಭವಾಗಿ ಜನಂಗೊಕ್ಕೆ ತಿಳಿಶುವ ಪ್ರಯತ್ನ ಆವುತ್ತಾ ಇದ್ದು. ಇದರ ಮರ್ಮವ ಆದಷ್ಟು ಬೇಗ ತಿಳಿವ ಪ್ರಯತ್ನ ಮಾಡುವ ಅಲ್ಲದಾ?
ಬೇರೆ ಬೇರೆ ಅಭಿರುಚಿ ಇಪ್ಪ ಜೆನಂಗೊಕ್ಕೆ ತೃಪ್ತಿ ಅಪ್ಪ ಹಾಂಗೆ ಉಣುಸುದು ಸುಲಭದ ಕೆಲಸ ಅಲ್ಲ. ಒಬ್ಬಂಗೆ ರುಚಿ ಅಪ್ಪದು ಇನ್ನೊಬ್ಬಂಗೆ ರುಚಿ ಆಗದ್ದಿಕ್ಕು.
ಎಲ್ಲೋರನ್ನೂ ತೃಪ್ತಿಪಡುಸುವ ಆಶೆ ಈ ಧರ್ಮಭಾರತಿ ಸಂಪಾದಕರದ್ದು. ಈ ದೆಶೆಲಿ ಹೇಳ್ತರೆ ಈ ಮಾಸಪತ್ರಿಕೆ ಆಬಾಲವೃದ್ಧರಿಂಗುದೇ ತೃಪ್ತಿ ಅಪ್ಪ ಸಾಹಿತ್ಯ ಕೊಟ್ಟು ಚೆಂದಕ್ಕೆ ಬತ್ತಾ ಇದ್ದು.
ಸಾಮಾನ್ಯವಾಗಿ ದಿನಪತ್ರಿಕೆಗೊಕ್ಕೆ ದಿನದ ಆಯುಷ್ಯ, ವಾರಪತ್ರಿಕೆಗೊಕ್ಕೆ ವಾರದ ಆಯುಷ್ಯ, ಮಾಸಿಕಕ್ಕೆ ಮಾಸಿಕ. ಆದರೆ ಈ ಧರ್ಮಭಾರತಿ ಇಡೀ ಜೀವಮಾನಕ್ಕೆ ಅಮೂಲ್ಯವಾದ ನೀತಿ, ತತ್ವ, ಧರ್ಮಗಳ ಮೌಲ್ಯಂಗಳ ಅಪೂರ್ವವಾಗಿ ಉಣ್ಣುಸುವ ಪತ್ರಿಕೆ.
ಒಟ್ಟಿಂಗೆ ಹೇಳ್ತರೆ ವಾಮನನ ಹಾಂಗೆ ಹುಟ್ಟಿದ ಈ ಪತ್ರಿಕೆ ಇಂದು ತ್ರಿವಿಕ್ರಮನ ಹಾಂಗೆ ಬೆಳೆತ್ತಾ ಇದ್ದು. ಸಮಾಜದ ಎಲ್ಲಾ ಜನಕ್ಕೂ ಅವರ ಜೀವನ ಮೌಲ್ಯಂಗಳ ತಿಳಿಸುತ್ತಾ ಇದ್ದು.
ಮುಖ್ಯವಾಗಿ ಗುರುಗೊ ಹೇಳಿದ “ಗೋವಿಗಾಗಿ ಧರ್ಮಯುದ್ಧ” ಹೇಳುವ ಸಂದೇಶ ಜನಂಗಳಲ್ಲಿ ಸ್ಪೂರ್ತಿತುಂಬಿ ಜಾಗೃತಿಗೆ ನಾಂದಿಆತು. ಇದರಿಂದಾಗಿ “ವಂದೇ ಗೋಮಾತರಮ್” ನಾಡಿಲಿ ಮೊಳಗುವದಿನ ದೂರ ಇಲ್ಲೆ.
ಇದಲ್ಲದ್ದೆ ಭಾರತೀಯ ಹಬ್ಬ ಹರಿದಿನಂಗಳ ಹಾಂಗೂ ಶಿಕ್ಷಣಕ್ಷೇತ್ರಕ್ಕೆ ಹೊಸತ್ತಾದ ನೋಟಕೊಟ್ಟ ಕೀರ್ತಿ ಧರ್ಮಭಾರತಿಗೆ ಸಲ್ಲೆಕ್ಕು. ಇದರಿಂದಾಗಿ ಈ ಧಾರ್ಮಿಕ ಪತ್ರಿಕೆ ಸಮಾಜಲ್ಲಿ ಆರೊಗ್ಯಕರ ಪರಿಸರ ನಿರ್ಮಾಣ ಮಾಡುತ್ತಾ ಇದ್ದು ಹೇಳಿ ಹೇಳಿದರೆ ತಪ್ಪಾಗ.
ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ ಹಳೆತತ್ವ ದೊಡಗೂಡಿಧರ್ಮ |
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ -ಮಂಕುತಿಮ್ಮ ||

ಹೀಂಗೆ ಸಾಹಿತ್ಯ ಲೋಕದ ಒಬ್ಬ ಅನರ್ಘ್ಯ ರತ್ನನೇ ಆದ ಡಿ.ವಿ.ಜಿ. ಅಜ್ಜನ ಕವಿವಾಣಿ ನೆನಪಾತು.
ಇಂದು ಆಧುನಿಕ ಸಮಾಜಲ್ಲಿ ಪ್ರಾಚೀನ ಸಂಸ್ಕೃತಿ ಸಂಪ್ರದಾಯಂಗಳೆಲ್ಲಾ ಮೂಢನಂಬಿಕೆಗೊ ಹೇಳಿ ಅಪಹಾಸ್ಯಕ್ಕೊಳಗಾವುತ್ತಾ ಇದ್ದು. ಹಿರಿಯರು ಮಾಡಿದ, ಆಚರಿಸಿಗೊಂಡು ಬಂದ ಸಂಪ್ರದಾಯಂಗಳ ಪರಾಂಬರಿಸಿ ನೋಡಿದರೆ ಅದರ ಹಿಂದೆ ವೈಜ್ಞಾನಿಕ ಮೌಲಿಕ ಸತ್ಯ ಅಡಗಿಪ್ಪದು ಬೆಳಕಿನಷ್ಟೇ ಸತ್ಯ ಅಲ್ಲದಾ?
ಈ ವೈಜ್ಞಾನಿಕ ಮೌಲಿಕ ಸತ್ಯವ ಇಂದು ಧರ್ಮಭಾರತಿ ಮಾಸಪತ್ರಿಕೆ ಬೆಳಕಿಂಗೆ ತತ್ತಾ ಇದ್ದು. ಆದಕಾರಣ ಜೀವನವ ಧನ್ಯತೆಯ ಮಾರ್ಗಲ್ಲಿ ಕೊಂಡೋವ್ತಾ ಇಪ್ಪ ಈ ಧರ್ಮಭಾರತಿಯ ಬೆಳಕಿನಡಿಲಿ ನಾವೆಲ್ಲಾ ಹೋಪ ಅಲ್ಲದಾ?
ಲೋಕವ ಕಸ್ತಲೆಂದ ಬೆಳಕಿನ ದಾರಿಲಿ ಕೊಂಡೋವ್ತಾ ಇಪ್ಪ ಈ “ಧರ್ಮಭಾರತೀ”ಗೆ ಅನಂತ ನಮನಂಗೊ.


Vidya Ravishankar

W/o Dr Ravishankar Yelkana
Savanoor,
Puttur Taluk
Dakshina Kannada
Pin-574202
ಜ್ಞಾನದ ದೀಪ-ಧರ್ಮಭಾರತೀ , 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಇನ್ನೂ ಇಂತ ಆಧ್ಯಾತ್ಮಿಕ ಪ್ರಕಟಣೆಗಳ ಬಗ್ಗೆ ಬರೆಯಿರಿ.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ವಿದ್ಯಾ, ಬೈಲಿಂಗೆ ಸ್ವಾಗತ.
  ನಿನ್ನ ಮೊದಲನೇ ಶುದ್ದಿಯಾಗಿ ಗುರುಗಳ ಅನುಗ್ರಹ ಆಶೀರ್ವಾದವ, ಅವರ ಮಾರ್ಗದರ್ಶನವ, ಅನುಭವಸ್ಥರ ಅನುಭವದ ಮಾತುಗಳ, ಮನೆ ಮನೆಗೆ ಮುಟ್ಟುಸುವ ಮಾಸಪತ್ರಿಕೆ ‘ಧರ್ಮ ಭಾರತಿ’ ಯ ಬಗ್ಗೆ ಬರದ್ದದು ತುಂಬಾ ಚೆಂದ ಆಯಿದು.

  ನೀನು ಹೇಳಿದ ಹಾಂಗೆ ಎಲ್ಲಾ ರೀತಿಲೂ ಮಠಂದ, ಮಠದ ಶಿಷ್ಯವರ್ಗಕ್ಕೆ ದಾರಿ ತೋರ್ಸುತ್ತಾ, ಅವರ ಸನ್ಮಾರ್ಗಲ್ಲಿ ನಡೆಶುವ ಈ ಪತ್ರಿಕೆ ಎಲ್ಲೋರ ಬಾಳಿಂಗೂ ಬೆಳಕು ತೋರಲಿ.
  ಒಳ್ಳೆ ಶುದ್ದಿ ಕೊಟ್ಟದಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ನೀರ್ಕಜೆ ಮಹೇಶಅನು ಉಡುಪುಮೂಲೆಸಂಪಾದಕ°ಅಜ್ಜಕಾನ ಭಾವದೊಡ್ಡಭಾವವೇಣೂರಣ್ಣಶೇಡಿಗುಮ್ಮೆ ಪುಳ್ಳಿಗಣೇಶ ಮಾವ°ವಾಣಿ ಚಿಕ್ಕಮ್ಮಮಾಷ್ಟ್ರುಮಾವ°ಅಕ್ಷರದಣ್ಣಅನಿತಾ ನರೇಶ್, ಮಂಚಿಚೆನ್ನಬೆಟ್ಟಣ್ಣದೊಡ್ಮನೆ ಭಾವಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿದೇವಸ್ಯ ಮಾಣಿಪಟಿಕಲ್ಲಪ್ಪಚ್ಚಿಒಪ್ಪಕ್ಕನೆಗೆಗಾರ°ಚೂರಿಬೈಲು ದೀಪಕ್ಕಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ