ಕೇಜಿಮಾವನ ಷ್ಟ್ರೋಂಗು ಇಂಜೆಕ್ಷನುಗೊ

October 2, 2010 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೇಜಿಮಾವನ ಒಂದರಿ ಗೊಂತಾದರೆ ಮತ್ತೆ ಗುರ್ತ ಮರೆಯ.
ಎದುರು ಆರೇ ಆಗಿರಳಿ, ನೇರವಾಗಿ ಮಾತಾಡ್ತ ಜೆನ. ಅಕ್ಕಾರೆ ಅಕ್ಕು, ಆಗದ್ರೆ ಆಗ – ಖಡಾಖಡಿ!

ಕೆಲವು ಜೆನಕ್ಕೆ ಅದು ಕೊಶಿ ಅಕ್ಕು, ಕೆಲವು ಜೆನಕ್ಕೆ ಅದು ಹಿತ ಆಗ – ಏನೇ ಆದರೂ ಅವಕ್ಕದು ಸಾರವೇ ಇಲ್ಲೆ!
ನೇರ ಮಾತಾಡ್ತವಕ್ಕೆ ಲೊಟ್ಟೆ ಇರ, ಲೊಟ್ಟೆ ಹೇಳ್ತವರ ಕಂಡ್ರೂ ಆಗ, ಹೊಗಳಿರೆ ಕೊಶಿ ಆಗ, ಬೈದರೆ ಬೇಜಾರಾಗ – ಆದರೆ ಅಂತಾ ನಿಷ್ಠುರ ಮಾತುಗಳ ಹಿಂದೆ ಒಂದು ಮೃದು ಮನಸ್ಸು ಇರ್ತು!
ಆ ಮನಸ್ಸು ನಮ್ಮ ತಟ್ಟುತ್ತು.

ಕೇಜಿಮಾವ° ಪಟಕ್ಕೆ ತಲೆ ಓರೆಮಾಡಿದ್ದು!

ನಮ್ಮ ಬೈಲಿಲಿಯೂ ಹಾಂಗೇ, ಕೇಜಿಮಾವನ ಕೆಲವು ಒಪ್ಪಂಗೊ ನೋಡಿ ಬೆಗರು ಇಳುಶಿಗೊಂಡವು ಎಷ್ಟೋ ಜೆನ ಇದ್ದವು.
ಅಪ್ಪು, ಅವು ಬರದ ಒಪ್ಪಂಗಳಲ್ಲಿ ಸತ್ವ ಇರ್ತು, ಕೈಕ್ಕೆ ಸತ್ಯಂಗೊ ಇರ್ತು.
ಬೇಗ ಜೀರ್ಣ ಆಗದ್ದರೂ ಚಿಂತೆ ಇಲ್ಲೆ, ಆರೋಗ್ಯಕ್ಕೆ ಒಳ್ಳೆದಾಗಿರ್ತು.

ಮೊನ್ನೆ ವಿಟ್ಳಲ್ಲೆ ಆಗಿ ನೀರ್ಕಜೆಗೆ ಹೋಪಗ ಒಂದರಿ ಕೇಜಿಮಾವನ ಷೋಪಿಂಗೆ ಹೋಪದೋ ಯೋಚನೆ ಮಾಡಿದೆ.
ಹಾಂಗೆ ದಾರಿಲಿ ಹೋಪವು ಎಲ್ಲ ಇವರ ಶೋಪಿಂಗೆ ಬಂದರೆ ಅವಕ್ಕೆ ಕೊಶಿ ಆವುತ್ತಿಲ್ಲೆ!
ಆದರೂ ಒಪ್ಪಣ್ಣ ರಜ ಸಮದಾನಲ್ಲಿ ಮಾತಾಡುಸುದು ಇದಾ – ಹಾಂಗಾಗಿ ಒಂದರಿ ಹೋಯಿಕ್ಕಿ ಬತ್ತೆ – ಹೇಳಿ ಗ್ರೇಶಿದೆ.
ಕಂಪ್ಯೂಟರಿಲಿ ಮೋರೆಪುಟ ಎಂತದೋ ಗುರುಟಿಗೊಂಡು ಇತ್ತಿದ್ದವು ಒಂದರಿಯೇ ಒಪ್ಪಣ್ಣನ ಕಂಡು – ಓ, ಎಂತಾ! ಕೇಳಿದವು.

ರಜ ಹೊತ್ತು ಶುದ್ದಿ ಮಾತಾಡಿಗೊಂಡು ಕೂದು, ಹೆರಡ್ಳಪ್ಪಗ ಮೆಲ್ಲಂಗೆ ಕೇಳಿದೆ, ಮಾವಾ-ಬೈಲಿಂಗೆ ಶುದ್ದಿ ಹೇಳುವಿರೋ – ಹೇಳಿಗೊಂಡು.
ಎಡಿಯದ್ದೆ ಇಲ್ಲೆ! ಸಂತೋಷಲ್ಲಿ ಹೇಳಿದವು. ಕೊಶೀ ಆತು ಒಪ್ಪಣ್ಣಂಗೆ.
ಇವುದೇ ಡಾಗುಟ್ರೇ, ಆದರೆ ಇವು ಹೇಳುವ ಶುದ್ದಿ ಮದ್ದಿಂದು ಮಾಂತ್ರ ಅಲ್ಲ, ಸಾಮಾಜಿಕ ಜೀವನವೂ ಆಗಿಕ್ಕು.
ಈ ಬಗ್ಗೆ ಎಂತದೋ ಮಾತಾಡಿಗೊಂಡು ಹೋಪಗ ಬೆಂಗುಳೂರಿಂದ ಆರೋ ಪೋನು ಮಾಡಿದವು.
ರಪರಪ ಇಂಗ್ಳೀಶಿಲಿ ಮಾತಾಡ್ಳೆ ಸುರು ಮಾಡಿದವು.
ಅಕ್ಕಂಬಗ, ಬೈಲಿಲಿ ಕಾಂಬೊ’ ಹೇಳಿ ಕೈಬಾಶೆಲೇ ಹೇಳಿಕ್ಕಿ ನಾವು ಹೆರಟತ್ತು.
ಬನ್ನಿ, ಕೇಜಿಮಾವನ ಶುದ್ದಿಗಳ ಕೇಳುವೊ°..
ಷ್ಟ್ರೋಂಗು ಇಂಜೆಕ್ಷನುಗಳ ತೆಕ್ಕೊಂಡು ಗಟ್ಟಿಗ° ಅಪ್ಪೊ°!
~
ಒಪ್ಪಣ್ಣ

ಕೇಜಿಮಾವನ ಮೋರೆಪುಟದ ಸಂಕೊಲೆ: http://www.facebook.com/profile.php?id=1280530173
ಇವರ ಶುದ್ದಿಗೊ ಸದ್ಯಲ್ಲೇ ಬೈಲಿಲಿ ಬತ್ತು.
ಕಾದೊಂಡಿರಿ.
~

ಗುರಿಕ್ಕಾರ°

ಕೇಜಿಮಾವನ ಷ್ಟ್ರೋಂಗು ಇಂಜೆಕ್ಷನುಗೊ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಕೇಜಿಮಾವ°

  ಗುರಿಕ್ಕಾರ್ರೆ,ಅಷ್ಟೆಲ್ಲಾ ಕೋಪ ಆಗಲೀ ತಾಳ್ಮೆ ತಪ್ಪುದಾಗಲೀ ಮಾವನ ಅಭ್ಯಾಸ ಅಲ್ಲ.ಅಳಿಯಂದ್ರು ಸೊಸೆಯಕ್ಕೊ ಎಷ್ಟು ಸಲಿಗೆ ತೆಕ್ಕೊಂಡರೂ ಸಂತೋಷವೇ.
  ಮತ್ತೆ ಬೈಲಿಲ್ಲಿ ಮಾತಾಡುವ ವಿಶಯ ರಜ ಸಮಸ್ಯೆದೇ.ಇಂದು ಕಂಡದರ ಕಂಡ ಹಾಂಗೇ ಹೇಳಿರೆ ಹಿತ ಅಪ್ಪದು ಕಮ್ಮಿಯೇ.ಈ ಅಭಿಪ್ರಾಯ ಸುಮ್ಮನೇ ಬಂದದಲ್ಲ.ಕಳುದ ಮೂವತ್ತು ವರ್ಷಂದ ಸಾರ್ವಜನಿಕ ಜೀವನಲ್ಲಿಪ್ಪವ° ಅನುಭವಿಸಿದ ವಿಷಯ.ಮದ್ದಿನ ಶುದ್ದಿಯ ಹೀಂಗಿಪ್ಪ ವೇದಿಕೆಗಳಲ್ಲಿ ಹೇಳುದು ಮಾಂತ್ರ ಸರಿಯಲ್ಲ,ಅದು ದಾರಿ ತೋರುಸುವ ಬದಲು ದಾರಿ ತಪ್ಪುಸುವ ಸಾಧ್ಯತೆಯೇ ಜಾಸ್ತಿ ಹೇಳುತ್ತದು ಅನುಭವ ವೇದ್ಯ.
  ಬೈಲಿಂಗೆ ಬಪ್ಪಲೆ ಸಂತೋಷವೇ,ಆದರೆ ಜವ್ವನಿಗರ ಎಡೆಲಿ ಹೇಂಗಪ್ಪಾ ಹೇಳಿ ಯೊಚನೆ,ಇರಳಿ ನೋಡುವೊ°

  [Reply]

  VA:F [1.9.22_1171]
  Rating: +1 (from 1 vote)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಣ್ಣಂಗೆ ಬಯಲಿಂಗೆ ಸ್ವಾಗತ. ಈ ಕೇಜಿ ಅಣ್ಣ ಯಾವಾಗ ಬತ್ತವಿಲ್ಲೆ ಹೇಳಿ ಜಾನ್ಸಿಂಡು ಇತ್ತಿದ್ದೆ.
  [ಆದರೆ ಜವ್ವನಿಗರ ಎಡೆಲಿ ಹೇಂಗಪ್ಪಾ ಹೇಳಿ ಯೊಚನೆ]-ಪ್ರಾಯ ಆದ ಎನ್ನ ಹಾಂಗಿಪ್ಪವೂದೆ ಇದ್ದೆಯೊ.
  ನಿಂಗಳ ನೇರ ಮಾತುಗಳ ಕೇಳುವ ಅವಕಾಶ ಜಾಸ್ತಿ ಅತದ. ಸಂತೋಷ.

  [Reply]

  ಕೇಜಿಮಾವ°

  ಡಾ.ಕೆ.ಜಿ.ಭಟ್. Reply:

  ಸಮಪ್ರಾಯದವರ ಎದುರು ಹೆದರಿಕೆಯೇ.ಜವ್ವನಿಗರಾದರೆ ಮತ್ತೂ ಕಷ್ಟ.ಅಂತೂ ಬರೆಕಾದರೆ ಆರೂ ಇಲ್ಲದ್ದಲ್ಲಿ ಬಂದೆಂತರ ಮಾಡುಸ್ಸು?
  ಈ ಗುರಿಕ್ಕಾರ ನೇರ,ಕಡ್ಪ ಇತ್ಯಾದಿ ಹೇಳಿ ಬರವಗ ಭಾರೀ ಕಷ್ಟವೇ.
  ಆನು ಅಷ್ಟೆಲ್ಲ ವಿಶೇಷಣಂಗಳ ವಾರಸುದಾರ° ಅಲ್ಲಪ್ಪ.

  [Reply]

  VA:F [1.9.22_1171]
  Rating: +1 (from 1 vote)
 3. ಗಣೇಶ ಮಾವ°

  ಕೇಜಿ ಮಾವ,,,ಬೈಲಿಂಗೆ ಸ್ವಾಗತ,ನಿಂಗಳ ಶುದ್ಧಿಗಳ ನಿರೀಕ್ಷೆಲಿ ಇರ್ತೆಯ!!!

  [Reply]

  ಕೇಜಿಮಾವ°

  ಡಾ.ಕೆ.ಜಿ.ಭಟ್. Reply:

  ಶುದ್ದಿ ಹೇಳುವ ಪ್ರಯತ್ನ ಮಾಡ್ತೆ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಕೇಜಿ ಮಾವಂಗೆ ಆತ್ಮೀಯ ಸ್ವಾಗತ.

  [Reply]

  ಕೇಜಿಮಾವ°

  ಡಾ.ಕೆ.ಜಿ.ಭಟ್. Reply:

  ಆತ್ಮೀಯ ಹೇಳುತ್ತ ಶಬ್ದವೇ ಕೇಳ್ಲೆ ಲಾಯಕ.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಕೇಜಿ ಮಾವ.., ನಿಂಗೊ ಬೈಲಿಂಗೆ ಹೊಸಬರಲ್ಲ.. ಆದರೆ ಶುದ್ದಿ ಹೇಳುವ ಲೆಕ್ಕಲ್ಲಿ ನಿಂಗೊಗೆ ಸ್ವಾಗತ..
  ವೈದ್ಯ ವೃತ್ತಿಯ ವಿಷಯಲ್ಲಿ ನಿಂಗಳ ಜ್ಞಾನ ಭಂಡಾರ ದೊಡ್ಡದು ಹೇಳಿ ಇವು, ಹೇಳಿದರೆ ಎನ್ನ ಯೆಜಮಾನ್ರು ಯಾವಾಗಲೂ ಹೇಳ್ತವು ನಿಂಗಳ.
  ಬೇರೆ ವಿಷಯಲ್ಲಿದೆ ನಿಂಗಳ ಜ್ಞಾನದ ಆಳವ ಎಂಗೊಗೆ ತೋರ್ಸಿದ್ದಿ… ನಿಂಗಳಿಂದ ತುಂಬಾ ವಿಷಯದ ಪ್ರಸಾರ ಎಂಗೊಗೆ ಆಗಲಿ…
  ನಿಂಗಳ ಶುದ್ದಿ ಓದಿ ವಿಚಾರಂಗಳ ತಿಳ್ಕೊಳ್ತೆಯಾ°.. ಬೆಳೆತ್ತೆಯಾ° ಆಗದಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿದೀಪಿಕಾಚೂರಿಬೈಲು ದೀಪಕ್ಕಡಾಮಹೇಶಣ್ಣಬೋಸ ಬಾವvreddhiಶ್ರೀಅಕ್ಕ°ವೆಂಕಟ್ ಕೋಟೂರುನೆಗೆಗಾರ°ಕೇಜಿಮಾವ°ಅಕ್ಷರದಣ್ಣಬಂಡಾಡಿ ಅಜ್ಜಿರಾಜಣ್ಣಚೆನ್ನೈ ಬಾವ°ಪುಣಚ ಡಾಕ್ಟ್ರುಜಯಶ್ರೀ ನೀರಮೂಲೆಶೀಲಾಲಕ್ಷ್ಮೀ ಕಾಸರಗೋಡುಎರುಂಬು ಅಪ್ಪಚ್ಚಿಹಳೆಮನೆ ಅಣ್ಣವೇಣಿಯಕ್ಕ°ಯೇನಂಕೂಡ್ಳು ಅಣ್ಣಶೇಡಿಗುಮ್ಮೆ ಪುಳ್ಳಿಶಾ...ರೀಪುತ್ತೂರಿನ ಪುಟ್ಟಕ್ಕಗೋಪಾಲಣ್ಣಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ