Oppanna.com

ಕಾಲ – ಜನ್ಮ – ಜನ್ಮಾಂತರ: ಒಂದು ಹರಟೆ

ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   04/03/2013    7 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ನಮ್ಮ ಹಿಂದಾಣೋರು ಪ್ರಕೃತಿಯ ಆರಾಧನೆ ಮಾಡಿಗೊಂದಿತ್ತಿದ್ದವಡೊ. ಇಂದ್ರಾಣೋವಕ್ಕೆ ಅದುಮೂಢ ನಂಬಿಕೆ ಹೇಳಿ ಆಯಿದು.
ಪ್ರಕೃತಿಲ್ಲಿಸಿಕ್ಕಿದ ಅಲ ಫಲಂಗಳ ನಮ್ಮ ಆಹಾರ ವಸ್ತುವಾಗಿಉಪಯೋಗುಸುವಗ ಕೃತಜ್ಞತೆ ಸಮರ್ಪಣೆ ಮಾಡುವ ಲೆಕ್ಕಲ್ಲಿ ಬೇರೆ ಬೇರೆ ವಿಧದ ಮರಂಗೊಕ್ಕೆ ಪೂಜೆ ಮಾಡುವದು, ಹಾಂಗೆ ಅವಕ್ಕೂ ಅಶ್ವತ್ಥ ವಿವಾಹ ಇತ್ಯಾದಿ ಕರ್ಮಂಗಳನ್ನೂ ಮಾಡುಸಿಗೊಂಡಿತ್ತಿದ್ದಡೊ.
ಈಗಳೂ ಸಂಪ್ರದಾಯವಾದಿಗೊ ಹೇಳಿ ಗೊಂಡಿಪ್ಪವು ಭಟ್ರ ಬಪ್ಪಲೆ ಹೇಳಿ ಮಾಡುಸುವದಿದ್ದು. ಕೆಲವು ಜನ ದೋಷ ಕಾಣುತ್ತು ಹೇಳಿಗೊಂಡೋ ಅಥವಾಹೀಂಗೆ ಕರ್ಮಾಚರಣೆಗಳ ಮಾಡುವದರಿಂದ ತಾನೊಬ್ಬ ದೈವ ವಿಶ್ವಾಸಿ ಹೇಳುಸಿಗೊಂಬಲೋ ಅಂತೂ ಚಾಲ್ತಿಲ್ಲಿದ್ದು.
ಇಂದ್ರಾಣ ಹೊಸ ಜನಾಂಗಾದಕ್ಕೆ ಅಜ್ಜ ನೆಟ್ತ ಆಲದಮರಕ್ಕೆ ಸುತ್ತು ಬಪ್ಪದು ಹೇಳುತ್ತವು. ಮದಲು ಎಂಗಳ ಮನೆಲ್ಲಿ ಸಾಂಕಿದ ಪುಚ್ಚೆಯ ಕೋಣೆಯೊಳದಿಕ್ಕೆ ಹಾಕಿ ಮತ್ತೆಯೇ ತಿಥಿ ಮಾಡುಲೆ ಹೆರಡುಗು.
ಮತ್ತೆ ಮತ್ತೆ ಮನೆ ಪುಚ್ಚೆ ಇಲ್ಲದ್ದರೆ ಬೇರೆ ಮನೆದಾದರೂ ಪುಚ್ಚೆಯ ತಂದು ಕೋಣೆಯೊಳದಿಕ್ಕೆ ಹಾಕಿಕ್ಕಿಯೇ ಬಟ್ಟಕ್ಕೊಗೆ ಬಳುಸುವ ಕ್ರಮ ಮುಂದುವರುತ್ತು. ಈಗಳೂ ಬಟ್ಟಜ್ಜ ಬಂದರೆ ನೆಗೆ ಮಾಡಿಗೊಂಡುಪುಚ್ಚೆಯ ಕೋಣೆಯೊಳ ಹಾಕಿ ಆದರೆ ಇನ್ನು ಎಣ್ಣೆ ಕೊಡುಲಕ್ಕು ಹೇಳಿಗೊಂಡಿತ್ತಿದ್ದವು.
ಈಗ ತಿಥಿಮಾಡುಲೂ ಇಲ್ಲೆ. ಎಲ್ಲಿಯಾದರೂ ದೇವಸ್ಥಾನಲ್ಲಿ ಪೂಜೆ ಬಟ್ರತ್ರೆ ಹೇಳಿದರೆ ಎನಗೆ ಪಿಂಡ ಗಿಂಡ ಮಾಡುಲೂ ಗೊಂತಿಲ್ಲೆ. ಮಾಡುಲೂ ಆವುತ್ತಿಲ್ಲೆ. ಅಂತೇ ತಿಲ ತರ್ಪಣ ಬಿಟ್ಟರೆ ಸಾಕು ಹೇಳುತ್ತವು.
ಅಥವಾ ಮನೆಲ್ಲೇ ಹಿಂದಾಣ ಕ್ರಮಲ್ಲೇ ಆಯೆಕ್ಕಾದರೆ ಊರಿಂದ ಕ್ರಮ ಗೊಂತಿದ್ದ ಬಾಟ್ಟಕ್ಕಳ ಬರುಸೆಕ್ಕು. ಇಲ್ಲಿ ಪೇಟೆಲ್ಲಿ ಪುಚ್ಚೆ ಎಲ್ಲಿ ಸಿಕ್ಕುತ್ತು!
ಅಲ್ಲದ್ದರೆ ಕಾಕಗೆ ಬಲಿಬಾಳೆ ಹೇಳಿ ತಿಂಬಲೆ ಮಾಡಿದ್ದರ ಎಲ್ಲ ಹೆರ ಮಡುಗಿದರೆ, ಕಾಕೆ ಬಂದು ಬಾಯಿ ಹಾಕಿದರೆ ಪಿತೃಗೊಕ್ಕೆ ಸಿಕ್ಕಿತ್ತು ಹೇಳುವ ನಂಬಿಕೆ. ಮದಲಿಂಗೆ ಅಪ್ಪನ ಮನೆಲ್ಲಿ ಅಣ್ಣ ತಂಂಅಂದೊರು ಮಾಡುವ ತಿಥಿಗೆ ಮಗಳಕ್ಕೊ ಹೋಪಲಾಗದ್ದರೆ ಕಾಕಗೆ ಮಡಗುತ್ತವಿಲ್ಲೆಯೋ ಹಾಂಗೆ ಮಡಗಿದರೂ ಸಾಕು ಹೇಳುತ್ತವು.
ಒಟ್ಟಾರೆ ಸತ್ತೋರ ನೆಂಪು ಮಾಡುವದು ಮುಖ್ಯ. ಅವರ ನೆಂಪಿಲ್ಲಿ” ಅಪ್ಪಂಗೆ ಯಾ ಅಬ್ಬಗೆ ಲಾಡು ಇಷ್ಟ,ಹಾಂಗೆ ಇಂದು ಲಾಡು ಮಾಡಿದ್ದೆಯೋ ಹೇಳಿಯೋ ಮಬ್ಬಗೆ ಮೆಡಿ ಉಪ್ಪಿನಕಾಯಿ ಇಷ್ಟ ಹೇಳಿ ಸಂತೆಲ್ಲಿ ಸಿಕ್ಕದ್ದರೆ ಬೇರೆಲ್ಲಿಯಾರೂ ಹುಡುಕ್ಕಿ ಇದ್ದೋರತ್ರೆ ಕೇಳಿ ಹೊಸ ಉಪ್ಪಿನಕಾಯಿ ಹಾಕಿ, ಅಂದು ಬಟ್ಟಕ್ಕೊಗೆ ಬಳುಸಿದರೇ ತಿಥಿ ಮಾಡುವ ಮಕ್ಕೊಗೆ ತೃಪ್ತಿ.  ಒಟ್ಟಿಂಗೆ ಅವರ ಹೆಸರು ಹೇಳಿ ಉಂಬೋರಿಂಗೂ ಹೊಸ ಉಪ್ಪಿನ ಕಾಯಿ!

ಸತ್ಯನಾರಾಯಣ ದೇವರಿಂಗೆ ಸಪಾದ ಭಕ್ಷ್ಯವೇ ಆಯೆಕ್ಕು ಹೇಳುತ್ತವು. ಎನ್ನ ಅಪ್ಪ ಹೇಳುಗು. ಸಪಾದ ಬಕ್ಷ ತಿನ್ನೆಕ್ಕು ಹೇಳಿ ಅಪ್ಪಗ ಆನು ಸತ್ಯನಾರಾಯಣ ಪೂಜೆ ಮಾಡುಲೆ ಹೆರಡುವದು ಹೇಳೀ.
ಆದರೆ ಈಗ ಅಪ್ಪ ಇಲ್ಲೆ. ಅಪ್ಪನ ತಿಥಿ ದಿನಕ್ಕೆ ಅಪ್ಪನ ನೆಂಪಿಂಗೆ ಸಪಾದ ಭಕ್ಷವೂ ಮಾಡುವದೋ? ಅಂಬಗ ಅವರ ನೆಂಪಿಲ್ಲಿ ನಾವು ತಿಂಬದು.
ತಿಥಿ ದಿನವೇ ನಂಬ್ರದ ವಾಯಿದೆ ಆದರೆ ಹೇಂಗಾದರೂ ಸೂರ್ಯ ಮುಳುಗುವ ಮದಲೇ ಮಾಡಿದರೂ ಸಾಕು. ಎನ್ನ ಅಬ್ಬಗೆ ನಿತ್ಯ ಸೋಮವಾರ ಉಪವಾಸ ಇತ್ತು.

ಮನೆಯೋರಿಂಗೆಲ್ಲ ತಿಂಡಿ ಕಾಫಿ ಎಲ್ಲ ಕೊಟ್ಟಾಗಿ ಮತ್ತೆ ಮಿಂದೊಂಡು ಬಂದು ಒಂದು ಗ್ಲಾಸು ಕಾಫಿ ಕುಡಿವಗ ಹೇಂಗಾದರೂ ೧೧ ಗಂಟೆಆಯ್ಕೊಂಡಿತ್ತು. ಮತ್ತೆ ನಿತ್ಯದ ಅಡಿಗೆಯೂ ಆಯೆಕ್ಕು.
ಎಲ್ಲೋರ ಊಟ ಆದ ಮೇಲೆಯೇ ಅಬ್ಬೆಯ ಊಟ. ಹೇಂಗಾದರೂ ೩ ಗಂಟೆ ಅಪ್ಪದೂ ಇದ್ದು.  ದೊಡ್ಡಬ್ಬಗೆ ನಿತ್ಯ ಸೋಮವಾರದ ಉಪಾಸ ಇಲ್ಲೆ.
ತಾನು ಉಂಡದು ಕರಗಿ ಮತ್ತೆ ಅಬ್ಬೆಯೊಟ್ಟಿಂಗೆ ಉಂಡದೂ ಇದ್ದು. ಕಾರ್ತಿಕ ಮಾಸಲ್ಲಿಬಪ್ಪ ಎಲ್ಲ ಸೋಮವಾರಂಗಳಲ್ಲ್ಯೂ ಶಿವಪೂಜೆ ಮಾಡಿ ಆದಮೇಲೆಯೇ ಅಬ್ಬಗೂ ಅಪ್ಪಂಗೂ ಆಸರಿಂಗೆ ನೀರು.
ನಂಬ್ರದ ವಾಯಿದೆ ಇದ್ದರೆ ಅಪ್ಪ ತಪ್ಪುಸವು. ವಾಯಿದೆ ಆದಮೇಲೆಯೇ ಮನೆಗೆ ಬಂದೆತ್ತುವಗ ೬ ಗಂಟೆ ಆದ್ದೂ ಇದ್ದು. ಮತ್ತೆ ಮಿಂದು ಪೂಜೆ ಮುಗಿವಗ ಇರುಳಾಣ ಊಟ. ಅಲ್ಲಿ ವರೆಗೆಯೂ ಉಪವಾಸ.
ಬಾಣಂತಿಯಾಗಿ ಹಸೆ ಮಡುಸಿದಮೇಲೆ ಮತ್ತೆ ಉಪವಾಸ ಮುಂದುವರಿತ್ತು. ಹೊತ್ತು ಹೊತ್ತಿಂಗೆ ಆಹಾರ ತೆಕ್ಕೊಳ್ಳದ್ದೆ ಬಾಣಂತಿ ರೋಗವೇ ಜೋರಾಗಿ, ಮತ್ತೆ ಪೈವಳಿಕೆ ಬಲ್ಲಾಳ ಕೊಟ್ಟ ಜೀರಿಕಾರಿಷ್ಟ ಕುಡುದು ಬಾಣಂತಿ ರೋಗ ಗುಣವಾದರೂ ಮತ್ತೆ ಶುರುವಾತು, ಉಬ್ಬಸ ಉಸುಲಿ ಕಟ್ಟುವದು ಹೀಂಗೆಲ್ಲ.  ಸುಮ್ಮನೆ ಮೂಲೆಲ್ಲಿ ಕೂಪಲೂ ಗೊಂತಿಲ್ಲೆ. ಎಲ್ಲೋರಿಂಗೂ ಹೊತ್ತು ಹೊತ್ತಿಂಗೆ ಊಟ ತಿಂಡಿ ಸಿಕ್ಕೆಕ್ಕಾರೆ ಅಬ್ಬೆಯೇ ಆಯೆಕ್ಕು.
ಹೀಂಗಾದರೂ ಏಳೆಂಟು ಹೆತ್ತು ಮನುಗಿದ್ದೂ ಆತು. ಮತ್ತೆ ಶುರುವಾತು ಬಿ ಪಿಅಂತೂ ಜೀವಿತದ ಉದ್ದಕ್ಕೂ ಕಷ್ಟಂಗಳನ್ನೇ ಬಳುವಳಿಯಾಗಿ ಪಡಕ್ಕೊಂಡು ಬಂದದೋ ಏನೋ!
ಆದರೂ ಗೋವಿಂದ ಪೈಗಳ “ಇನ್ನಿನಿಸು ಮಹಾತ್ಮಾ ನೀ ಬದುಕಬೇಕಿತ್ತು” ಹೇಳಿದ ಹಾಂಗೆ ಕಡೇ ಕಾಲಲ್ಲಿ ರಜ ಒಳ್ಳೆದು ಮಾಡಿದರೆ ನಾವು ಸತ್ತ ಮೇಲೆ ಮಕ್ಕಳೋ ಪುಳ್ಯಕ್ಕಳೋ ಕೂಗುಗಡೊ.

ಅಜ್ಜ ಇತ್ತಿದ್ದರೆ ಕತೆ ಹೇಳುತ್ತಿತ್ತವು. ಬರವಲೆ ಓದುಲೆ ಹೆಲ್ಪ್ ಮಾಇಗೊಂಡಿತ್ತಿದ್ದವು. ಇನ್ನು ಹಾಂಗೆ ಹೆಲ್ಪ್ ಮಾಡುಲೆ ಆರಿದ್ದವು ಹೇಳಿದರೆ, ಮಕ್ಕಳೋ ಸೊಸೆಯಕ್ಕಳೋ ಇನ್ನು ಹತ್ತು ವರ್ಷ ಹೆಚ್ಚು ಬದುಕ್ಕುಲೆ ಎಂತಾವುತ್ತಿತ್ತು.
ಇನ್ನು ಪೆನ್ಶನ್ ಕೂಡಾ ಸಿಕ್ಕ ಹೇಳಿಯೋ ಅಲ್ಲದ್ದರೆ ಮತ್ತೆ ಹೀಂಗೂ ಹೇಳುಗು ಬದುಕ್ಕಿಪ್ಪಗ ಜಗಳ ಮಾಡಿಗೊಂಡಿದ್ದೋವು ಸತ್ತ ಮತ್ತೆ ಸತ್ತ ಎಮ್ಮಗೆ ಹತ್ತುಕುತ್ತಿ ಹಾಲಿತ್ತು.
ಆತನ್ನೆ ಇನ್ನು ಕರದುಂಬಲೂ ಗತಿಯಿಲ್ಲೆನ್ನೆ, ಹೇಳಿ ಬಂದಷ್ಟೂ ಬರಲಿ ಬರಡೆಮ್ಮೆ ಹಾಲು ಹೇಳಿ ಅವರ ಆಸೆ ಇಕ್ಕು. ಆದರೆ ನಾವು ಆ ದೇವರು ಮಡಗಿದ ಆಯುಸ್ಸು ಮುಗಿವಗ ಎದ್ದಿಕ್ಕಿ ಹೋಯೆಕ್ಕನ್ನೆ.
ಮಗನ ಅಥವಾ ಪುಳ್ಳಿಯ ಮದುವೆಯೋಉಪನಯನವೋ ಮುಗಿಶಿಕ್ಕಿ ಬತ್ತೆ ಹೇಳಿದರೆ ಕೇಳುಗೊ?
ಯಮ ದೂತರಿಂಗೆ ಕಿಂಚಿತ್ತೂ ಕರುಣೆ ಇಲ್ಲೆ ಹೇಳುತ್ತವಾದರೂ ನಾವು ಉಂಡುಗೊಂಡಿಪ್ಪಗ ಬಂದರೆ ಉಂಡಪ್ಪನ್ನಾರ ಕಾಯುತ್ತವಡೊ.
ಮತ್ತೆ ಅವಧಿ ಮುಗುದ ಮೇಲೆ ಆರ ಕಾವಲೂ ಇಲ್ಲೆ ಈಗ ಹೇಂಗೂ ೭೨ ವರ್ಷ ಕಳುತ್ತು. ಇನ್ನು ನಮ್ಮ ಆಯುಷ್ಯಲ್ಲಿ ಬೋನಸ್ ಇದ್ದಷ್ಟುಕಾಲ ಬದುಕ್ಕುವದು. ನಮ್ಮ ಕಣ್ಣೆದುರೆಯೇ ಮಕ್ಕೊ, ಸೊಸೆಯಕ್ಕೊ, ಪುಳ್ಯಕ್ಕೊ ಚೆಂದಕ್ಕೆ ಇಪ್ಪದರ ನೋಡಿದರೆ ಬೇರೆಂತ ಬೇಕು?
ಸುಖ ಕಷ್ಟ ಹೇಳುವದು ಅವರವರ ಅದೃಷ್ಟಡೋ.ಆದರೆ ಜೀವನ ಪೂರ್ತಿ ಸುಖವೇ ಆದರೆ ಕಾಷ್ಟದ ಅನುಭವವೂ ಬೇಡದೊ.

ಜವ್ವನಲ್ಲಿ ಕಷ್ಟ ಬಂದಿದ್ದರೂ ಕಡೆಕಾಲಲ್ಲಿ ಸುಖ ಸಿಕ್ಕಿದರೆ ಸಾಕು. ಇನ್ನೂ ಬೇಕು ಹೇಳುಲೆ ಇಲ್ಲೆ. ಸುಖವೋ ಕಷ್ಟವೋ ಅನುಭವಿಸಿಯೇ ತೀರೆಕ್ಕನ್ನೆ.
ಯಾವ ಅನುಭವ ಇದ್ದರೂ ನಾವು ಎದ್ದಿಕ್ಕಿ ಹೋಪಗ ನಾವು ಅದರ ಬಿಟ್ತಿಕ್ಕಿಯೇ ಹೋಪದು. ಇಲ್ಲಿ ಒಳುದವಕ್ಕೆ ಅದು ಪಾಠ ಆಗಿರುತ್ತು. ಅದನ್ನೇ ಹೇಳುತ್ತವಲ್ಲದೋ ಅಳಿವುದೇ ಕಾಲ ಒಳಿವದೇ ಕೀರ್ತಿ.
ಕೀರ್ತಿಗಾಗಿನಾವು ಎಂತ ಮಾಡೆಕ್ಕು ಹೇಳಿಲ್ಲೆ. ಮಾಡಿದ ಒಳ್ಳೆ ಕೆಲಸ ನಮಗೆ ಕೀರ್ತಿ ತಂದೇ ತರುತ್ತು. ಹಿಂದೆ ಸತ್ಪುರುಷರನೇಕ ಜನಂಗೊಮುಂದಾಣೊವಕ್ಕೆ ಆದರ್ಷವಾಗಿ ಅಲ್ಲ.
ಕರ್ತವ್ಯ ಹೇಳಿ ನಡಕ್ಕೊಂಡದರ ನೋಡಿದರೆ ಇಂದು ನಮಗೆ ದಾರಿ ದೀಪ ಆಗಿ ಸಿಕ್ಕಿದ್ದು. ಆಕಾಶಲ್ಲಿ ಎಷ್ಟು ನಕ್ಷತ್ರಂಗಳ ಬೆಣಚ್ಚು ಇದ್ದರೂ ಇರುಳು ದಾರಿ ನಡವೋರಿಂಗೆ ಒಂದು ಕೈದೀಪವೇ ಬೇಕಲ್ಲದೋ?ಒಂದು ದಾರಿ ಹಿಡುದು ಹೋಪಗ ಕವಲೊಡದ್ದಿದ್ದರೆ ಒಂದೋ ಆರತ್ರಾದರೂ ಕೇಳೆಕ್ಕು. ಇಲ್ಲದ್ದರೆ ನಮ್ಮ ಗುರಿ ಯಾವ ದಿಕ್ಕಿಲ್ಲಿದ್ದು ಹೇಳಿಗೊಂಡು ಸ್ವಂತ ಯೋಚನೆಂದ ಮುಂದುವರಿಯೆಕ್ಕು. ಕಡೆಂಗೆ ಹೋಪದೆಲ್ಲೋರು ಒಂದೇ ದಿಕ್ಕಂಗೆ ಆದರೂ ಇಲ್ಲಿಪ್ಪಗ ಮಾದಿದ ಒಳ್ಲೆ ಕೆಲಸ ನಮ್ಮ ಯಾವಾಗಳು ನೆನಸುವ ಹಾಂಗೆ ಮಾಡುತ್ತು. ಹೋಪಲೆ ಬೇರೊಂದು ಲೋಕ ಹೇಳುವದೆಲ್ಲ ಕಲ್ಪನೆಯೇ ಆಗಿರೆಕ್ಕು.  ಪಂಚಭೂತಂಗಿಳಿಂದಾದ ಈ ದೇಹ ಪಂಚ ಭೂತಂಗಳೇ ಆಧಾರವಾಗಿ ಕಡೆಂಗೆ ಪಂಚತ್ವವನ್ನೇ ಸೇರುತ್ತು ಖಂಡಿತ.
ವಾಯುಮಾಂಡಲಂದ ತೆಕ್ಕೊಂಡ ಗಾಳಿ. ವಾಯುಮ್ಂಡಲಕ್ಕೆ ಸೇರಿದರೆ, ಕಿಚ್ಚು ಈ ದೇಹವ ಸುಟ್ಟು ಬೂದಿ ಮಾಡುತ್ತು.  ನೀರು, ಆಕಾಶ,ಮತ್ತೆ ಮಣ್ಣಿಂದಾದ ದೇಹದ ಬೂದಿ ಮಣ್ಣಿಂಗೇ ಸೇರಿದರೆ ಒಳಿವಲೆ ಎಂತ ಇದ್ದು? ಎಲ್ಲವೂ ಕ್ಷಣಭಂಗುರ.

ಇಂದು ಇದ್ದೋರು ಇನ್ನೊಂದು ದಿನ ಕಾಣದ್ದೆ ಆವುತ್ತವು. ಇಪ್ಪ ಮೂರು ದಿನಲ್ಲಿ ನಾವು ಮಾಡಿಗೊಂಡಿದ್ದ ಒಳ್ಳೆ ಕೆಲ್ಸಂಗೊ ಮುಂದಾಣೋವು ನಮ್ಮ ವರ್ಷಕ್ಕೊಂದರಿ ಆದರೂ ನೆನಸುವ ಹಾಂಗೆ ಮಾಡ್ಗು.
ಪರಂಪರೆ ಹೀಂಗೆ ಮುಂದೆ ಹೋದರೆ ಮುಂದೆಯೂ ಇದುಮುಂದುವರಿಗು ಹೇಳಿ ಕಾಣುತ್ತು.ಹೆರಟದು ಎಲ್ಲಿಂದಲೋ? ಬಂದದುಎಲ್ಲಿಗೋ? ಒಟ್ಟಾರೆ ಒಂದು ವಾಖ್!
ಮುಗಿಶಿದ ಹಾಂಗೆ ಆತು. ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಂಗೆ.

ಮುಂದೆ ಹೋಪಗ ಹಿಂದೆ ತಿರುಗಿನೋಡೆಕ್ಕು ಹೇಳುವದು ಗುಡ್ಡೆ ಹತ್ತುವಗ ಅಡೊ.
ಸ್ವಾಮಿ ವಿವೇಕಾನಂದ ಹೇಳಿದ್ದವು. ಎದುರೆ ನೋಡಿದರೆ ಇನ್ನುದೇ ತುಂಬ ಮೇಲೆ ಹತ್ತುಲಿದ್ದನ್ನೆ. ಎನ್ನಂದ ಹತ್ತುಲೆಡಿಯ ಹೇಳಿ ಮನಸ್ಸಿಂಗೆ ಅಂಜಿಕೆ ಆಗಿ ಹೋಕು. ಹಿಂದೆ ತಿರುಗಿ ನೋಡುವಗ ಇಷ್ಟು ಮೇಲೆ ಹತ್ತಿಗೊಂಡು ಬಯಿಂದೆ ಹೇಳುವ ಧೈರ್ಯ ವಿಶ್ವಾಸ ಹೆಚ್ಚಾವುತ್ತು. ಅದಕ್ಕೆ ಹಿಂದೆ ನೋಡೆಕ್ಕು ಹೇಳುತ್ತವು. ಸಿಂಹಾವಲೋಕನ ಹೇಳಿ ಇದ್ದಡೊ.  ಸಿಂಹ ಮುಂದೆ ರಾಜ ಠೀವಿಲ್ಲಿ ಹೋಪಗ ಒಂದರಿ ಹಿಂದೆ ನೋಡುತ್ತಡೊ. ಹಾಂಗೆ ಕಳುದ ಜೀವನವ ಗ್ರೇಶಿದರೆ ಅಂದುಕಳುದ ಕಾಲವೇ ಒಳ್ಳೆದು ಹೇಳಿಕಾಣುತ್ತು.
ಮಕ್ಕೊಗೆ ನವು ಸರಿಯಾಗಿಕಲುಶಿದ್ದೆಯೊ ಹೇಳಿ ಆಯೆಕ್ಕಾರೆ ಅವರ ಪ್ರತಿಕ್ರಿಯೆ ಅವರತ್ರೆ ಪ್ರಶ್ನೆ ಕೇಳುವಗ ಗೊಂತಾವುತ್ತು.
ಉತ್ತರ ಬಾರದ್ರೆ ಅವು ಪಾಠಕ್ಕೆ ಕೆಮಿ ಕೊಟ್ಟಿದವಿಲ್ಲೆ ಹೇಳಿಲ್;ಎಕ್ಕ. ಮಕ್ಕಳ ಗಮನ ನಮ್ಮ ಕಡೆಂಗಿರೆಕ್ಕಾದರೆ ನಮ್ಮ ಪಾಠವೂ ಹಾಂಗಿರೆಕ್ಕು.
ಕೇಳಿದ ಪ್ರಶ್ನೆಗೆ ಉತ್ತರ ಬಾರದ್ರೆ ಕೋಪ ಬತ್ತು. ಒಂದೆರಡು ಬೈದೋ ಬಡುದೋ ಕಲಿಶಿದ್ದು ಇಂದು ಅವರ ಕಾಂಬಗ ಕೊಶಿ ಆವುತ್ತು.

ನೆಗೆ ಮಾಡಿಗೊಂಡು ಹೇಳುವದಾದರೂ ಅಂದ್ರಾಣ ಶಿಕ್ಷೆಯ ನೆಂಪು ಮಾಡಿದರೂ ಪಣಾಮ ತೃಪ್ತಿ ಕೊಡುತ್ತು. ಇಂದ್ರಾಣ ಮಾಷ್ಟ್ರಕ್ಕೊ ಪಾಪ ಮಕ್ಕೊಗೆ ಬಡಿವಲೋ,ಬೈವಲೋ ಸ್ವಾತಂತ್ರ್ಯ ಇಲ್ಲೆ. ನ್ಯಾಯಾಲಯವೇ ಹೇಳಿ ಆತು.
ಅವಕ್ಕೆ ಬೇಕಾದರೆ ಕಲಿತ್ತವು ಹೇಳಿ ಊದುವ ಶಂಖವ ಊದಿಕ್ಕಿ ಬರೆಕಷ್ಟೆ. ಎಲ್ಲ ಕಾಲದ ಲೀಲೆ!

ಮಳೆ ಬಂದ ಹಾಂಗೆ ಕೊಡೆ ಹಿಡುದರೂ ಸಾಲ. ಕಾಲಕ್ಕೆ ತಕ್ಕ ಕೋಲ ಕಟ್ತೆಕ್ಕಷ್ಟೆ.
ಹೋದಲ್ಲಿಯೇ ಎಬ್ಬೆಕಷ್ಟೆ! ಹೇಂಗಾದರೂ ಹರಟೆ ಬೇಜಾರು ತಪ್ಪಂದ ಮದಲೆ ನಿಲ್ಲುಸುತ್ತೆ!

 

7 thoughts on “ಕಾಲ – ಜನ್ಮ – ಜನ್ಮಾಂತರ: ಒಂದು ಹರಟೆ

  1. sapaada bhaksha, hindaanora upavaasa, meeyaana ella eega grenshikollakkashte. eega sapaada bhaksha helidare shiraa, upavaasa helidare odondu dajanu baalehannu tindu, meeyaana purusottinge. hEngiddu eegaana jeevana (mukhyavaagi peteli)

  2. ಹಲವು ಗಾದೆಗಳ ಸಂಗಮ ಈ ಹರಟೆ.

  3. ‘ಹರಟೆ’ ಹರಟೆ ಆಗದ್ದೆ ಓದಿಸಿಗೊಂಡು ಹೋತು. ಅಲ್ಲಲ್ಲಿ ನಿಲ್ಲುಸಿ ಆಲೋಚನೆಗೆ ದೂಡಿತ್ತು.

  4. ಒಂದು ದಿನ ಒಬ್ಬ ಬ್ರಿಟನ್ ದೇಶದವ ಒಬ್ಬ ಭಾರತದವನ ಮನೆಲಿ ಗಡದ್ದಾಗಿ ಉಂಡಿಕ್ಕಿ ಸಂತೋಷಂದ ಕೇಳಿದಡ: “ಊಟ ತುಂಬಾ ಒಳ್ಳೆಯದಾಯಿದು. ಇಂದು ಎಂತ ಸ್ಪೆಶಲ್ಲು?”
    ಅದಕ್ಕೆ ಭಾರತದವ: “ನಮ್ಮಪ್ಪನ ತಿಥಿ” ಹೇಳಿ ಹೇಳಿದಡ.
    ಅಷ್ಟಪ್ಪಗ ಆ ಬ್ರಿಟನ್ನಿನವ 5000 ರೂಪಾಯಿ ತೆಗದ್ದು ಕೊಟ್ಟು ಹೇಳಿದಡ: “ಹಾಂಗಾರೆ ನಾಳೆ ಎನ್ನ ತಿಥಿಯುದೇ ಮಾಡಿ” ಹೇಳಿ 😉 😀 😀
    ಈ ಲೇಖನ ಓದಿಯಪ್ಪಗ ಮೇಲಾಣ ಜೋಕು ನೆಂಪಾತು.
    ಲೇಖನ ತುಂಬಾ ಒಪ್ಪ ಆಯಿದು ಸುಬ್ಬಣ್ಣ ಮಾವ…

  5. [ಸಪಾದ ಬಕ್ಷ ತಿನ್ನೆಕ್ಕು ಹೇಳಿ ಅಪ್ಪಗ ಆನು ಸತ್ಯನಾರಾಯಣ ಪೂಜೆ ಮಾಡುಲೆ ಹೆರಡುವದು ಹೇಳೀ. ] – ಎನ್ನಪ್ಪಂಗೆ ಸತ್ಯನಾರಾಯಣ ಪೂಜೆ ಹೇಳಿರೆ ಬಲು ಇಷ್ಟ. ಹಾಂಗಾಗಿ ತಿಥಿಗೆ ಸತ್ಯನಾರಾಯಣ ಪೂಜೆ ಮಾಡಿದ್ದು, ಸಪಾದ ಭಕ್ಷ್ಯ ಮಾಡಿದ್ದದು ಹೇಳಿ ಸುರುವಕ್ಕೊ ಅಂಬಗ ಇನ್ನು !! 😀

    [ಅಳಿವುದೇ ಕಾಲ ಒಳಿವದೇ ಕೀರ್ತಿ] – ಲಾಯಕ ಆಯ್ದು ವಿಚಾರಮಂಡಣೆ.

    ಸ್ವಾರಸ್ಯವಾಗಿ ಹರಟೆಮಾಡಿದ ಅಪ್ಪಚ್ಚಿಗೊಂದು ‘ಹರೇ ರಾಮ’ ಹೇಳಿತ್ತು ಇತ್ಲಾಗಿಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×