ಕೈಬೆರಳುಗೊ..

ಬಾಳಿಕೆ ಸುಬ್ಬಣ್ಣ ಮಾವ ನಮ್ಮ ಬೈಲಿಲೇ  ಮಾಷ್ಟ್ರ ಆಗಿ ನಿವೃತ್ತಿ ಹೊಂದಿ, ಈಗ ಪ್ರಸ್ತುತ ಅಮೇರಿಕಲ್ಲಿ ಮಕ್ಕಳೊಟ್ಟಿಂಗೆ ನೆಮ್ಮದಿಯ ಜೀವನ ನೆಡೆಶುತ್ತಾ ಇದ್ದವು.
ಭೌತಿಕವಾಗಿ ಅವು ದೂರಲ್ಲಿದ್ದರೂ, ಮಾನಸಿಕವಾಗಿ ಬೈಲಿಲೇ ಇದ್ದವು. ಹಲವು ಶುದ್ದಿಗೊಕ್ಕೆ ಒಪ್ಪ ಕೊಟ್ಟೊಂಡು, ಬೈಲಿಂಗೆ ಬಂದೋರ ನಾವೆಲ್ಲರುದೇ ಸ್ವಾಗತಿಸುವೊ.
ಸುಬ್ಬಣ್ಣಮಾವ ಹೇಳುವ ಶುದ್ದಿಗಳ ಕೇಳಿಗೊಂಡು, ಎಲ್ಲೋರೂ ಒಪ್ಪ ಕೊಡುವೊ.

ಕೈಬೆರಳುಗೊ..

ಕೈಬೆರಳುಗಳು
ಪಾಂಡವರು ಮಂಚದ ಕಾಲಿನ ಹಾಂಗೆ ಜನ ಹೇಳಿ ಹೇಳುತ್ತವು. ಮಂಚಕ್ಕಿಪ್ಪದು ನಾಲ್ಕು ಕಾಲು. ಪಾಂಡವರು ಐದು ಜನ.
ಇಲ್ಲಿ ಧರ್ಮರಾಯ ಧರ್ಮ,ಧರ್ಮ ಹೇಳಿ ಧರ್ಮಕ್ಕಾಗಿ ಇಡೀ ಜಿವಮಾನವನ್ನೇ ಮುಡಿಪಾಗಿ ಮಡುಗಿದೋನು.
ಅವನ ಧರ್ಮ ಪಾಲನೆ ಹೇಳುವ ಮಂಚಕ್ಕೆ ನಾಲ್ಕು ತಮ್ಮಂದಿರು ಆಧಾರ ಸ್ತಂಭಂಗಳ ಹಾಂಗೆ ಇತ್ತಿದ್ದವು ಹೇಳಿ ತೆಕ್ಕೊಂಡರೆ ಸರಿಯಾವುತ್ತೋ ನಿಂಗಳೇ ಹೇಳೆಕ್ಕು.

ಹಾಂಗೆ ನಮ್ಮ ಕೈ ಕಾಲುಗಳಲ್ಲಿ ಐದೈದು ಬೆರಳುಗೊ ಇಪ್ಪದು. ಎಲ್ಲ ಒಂದೇ ಹಾಂಗೆ ಇಲ್ಲೆ.
ಉದ್ದ ತೋರ ವ್ಯತ್ಯಾಸ ಇದ್ದಲ್ಲದೋ? ಹೆಬ್ಬೆರಳು ತೋರ ಇದ್ದು. ಉದ್ದ ಸಾಧಾರಣ ಒಂದೇ ಆದರೂ ತುಂಬ ಕೆಳ ಇಪ್ಪ ಕಾರಣ ತುಂಬ ಕುಂಟು ಕಾಣುತ್ತು. ಕೋಲು ಬೆರಳು,ಅದರ ತೋರು ಬೆರಳು ಹೇಳುತ್ತವು.
ಎಂತರನ್ನಾದರೂ ತೋರುಸೆಕ್ಕಾದರೆ ತೋರು ಬೆರಳು ಬೇಕಲ್ಲದೋ? ನಡು ಬೆರಳು.ಇದ್ದದರಲ್ಲಿ ಹೆಚ್ಚು ಉದ್ದ ಕಾಣುತ್ತಲ್ಲದೋ?
ಮಧ್ಯದ ಬೆರಳು ರಜ ತೋರವೂ ಇದ್ದು,ಉದ್ದವೂ ಇದ್ದು.
ಮತ್ತೆ ಪವಿತ್ರ ಬೆರಳು ಹೆಸರೇ ಹೇಳುವ ಹಾಂಗೆ ನಾವು ಪವಿತ್ರ ಹಾಕುವದು,ಪವಿತ್ರ ಉಂಗಿಲು ಹಾಕುತ್ತರೂ ಇದಕ್ಕೇ ಹಾಕುತ್ತು.
ಇನ್ನು ಕಿರು ಬೆರಳು.ಇದ್ದದರಲ್ಲಿ ಸಣ್ಣದು ಉದ್ದಲ್ಲಿ, ತೋರಲ್ಲಿ ಕಾಂಬಲೆ ಸಣ್ಣದು. ಇದು ಬೆರಳುಗಳ ವ್ಯತ್ಯಾಸ!
ಆದರೆ ನಾವು ದೇವರಿಂಗೆ ಕೈಮುಗಿವಗ ಅಥವಾ ಆರಿಂಗಾದರೂ ನಮಸ್ಕಾರ ಹೇಳಿ ಕೈಮುಗಿವಗ ಎದುರಿದ್ದೋರಿಂಗೆ ಮದಲು ಕಾಂಬದು ಈ ಸಣ್ಣ ಬೆರಳು!
ಹಾಂಗಾದರೆ ನಮಸ್ಕಾರ ಈ ಬೆರಳಿನ ಮೂಲಕ ಹೋಪದೋ? ಅಲ್ಲ.
ನಮಸ್ಕಾರ ಬಾಯಿಲ್ಲಿ ಮಾತ್ರ ಹೇಳುವದೇ ಆದರೆ ಪರವಗಿಲ್ಲೆ. ಕೈಮುಗಿತ್ತರೆ ಐದು ಬೆರಳುಗಳನ್ನೂ ಒಂದಕ್ಕೊಂದು ಜೋಡುಸಿಗೊಳ್ಳೆಕ್ಕು. ಒಂದು ಬೆರಳೂ ಅತ್ತಿತ್ತೆ ಅಪ್ಪಲಾಗ. ಅದು ಹೃತ್ಪೂರ್ವಕ ನಮಸ್ಕಾರ ಆವುತ್ತಷ್ಟೆ!

ಒಂದರಿ ಬೆರಳುಗೊಕ್ಕೆ ಅವರೊಳ ಜಗಳ ಅತಡೊ.ಆನು ಮೇಲು, ಆನು ದೊಡ್ಡವ ಹೇಳಿ ಮಾತಿಂಗೆ ಮಾತು ಬೆಳತ್ತಡೊ.
ಬಿಟ್ಟುಕೊಡ್ಳೆ ಆರೂ ತಯಾರಿಲ್ಲೆ. ಹೆಬ್ಬೆರಳು ಹೇಳುವದು “ಏನಾದರೂ ಒಂದು ಮುಖ್ಯ ವಿಷಯ ಚರ್ಚೆಗೆ ಬಪ್ಪಗ ಆನು ದೊಡ್ಡೋನು ಹೇಳಿ ಜನಂಗೊ ಹೇಳೆಕ್ಕಾರೆ ಕೈಮುಷ್ಟಿ ಹಿಡುದು ಹೇಳುವಗ ಮೇಲೆ ಎದ್ದು ಕಾಂಬದು ಆನಲ್ಲದೋ?
ಒಂದು ಜಾಗೆದು ಯಜಮಾನ ಆರು ಕೇಳುವಗ, ಈ ಕಾರ್ಯಕ್ರಮದ ಗುರಿಕ್ಕಾರ ಆರು ಕೇಳುವಗ ‘ಆನು’ ಹೇಳೆಕ್ಕಾರೆ ಕೈ ಮುಷ್ಟಿ ಹಿಡುದು ಹೇಳುವದಲ್ಲದೋ?
ಎನ್ನ ಸಹಾಯ ಇಲ್ಲದ್ದೆ ಅವಕ್ಕೆ ಎಂತ ಮಾಡುಲೂ ಆವುತ್ತಿಲ್ಲೆ. ಒಂದು ಸಾಮಾನು ಎತ್ತಿ ಹಿಡಿಯೆಕ್ಕಾರೂ, ಉಂಬಗಳೂ ತುತ್ತು ತುಂಬ ತುಂಬೆಕ್ಕಾದರೆ ಆನು ಇಲ್ಲದ್ದೆ ಆವುತ್ತೋ? ಕೆಲಸ ಮಾಡುವಾಗಳೂ ಎನ್ನ ಸಹಾಯ ಇಲ್ಲದ್ದೆ ಆವುತ್ತಿಲ್ಲೆ.
ಎನ್ನ ಹೆಬ್ಬೆರಳಿಂಗೆ ತಾಗಿದ್ದು ಹಾಂಗೆ ಎನಗೆ ಎಂತ ಮಾಡುಲೂ ಆವುತ್ತಿಲ್ಲೆ ಹೇಳುತ್ತವು. ತನ್ನ ಹೊಗಳಿಗೊಂಬಗ ಆನು ಕೈಯ ಹೆಬ್ಬೆರಳಿನ ಹಾಂಗೆ ಹೇಳಿಗೊಳ್ಲುತ್ತವಲ್ಲದೋ? ಎಲ್ಲೋರಿಂದಲೂ ಆನೇ ದೊಡ್ಡವ ಹೇಳಿತ್ತಡೊ.
ಕೋಲು ಬೆರಳು ಬಿಡುತ್ತೋ? ಅವಕ್ಕೇ ಎಂತರ ತೋರುಸೆಕ್ಕಾದರೂ ಆನು ಬೇಕು. ಅವ ಒಬ್ಬ ಏಕಿನಿ ಹೇಳಿ ಹೇಳುವಾಗಳೂ ಎನ್ನನ್ನೇ ಕುತ್ತ ನೆಗ್ಗಿ ತೋರುಸುತ್ತವು.

ನೀನು ಕರೆಲ್ಲಿಪ್ಪದಾದರೂಜನಂಗೊಕ್ಕೆ ಎನ್ನ ಸಹಾಯ ತುಂಬಾ ಬೇಕಾವುತ್ತು. ಈ ಜಾಗೆ ಅಥವಾ ಸಂಸ್ಥೆ ಆರದ್ದು ಕೇಳುವಗ ಎಲ್ಲವನ್ನೂ ತೋರುಸುವದು ಎನ್ನನ್ನೇ ತಿರುಗಿಸಿ ಅಲ್ಲದೋ? ಅಲ್ಲದ್ರೆ ಗೊಂತಾವುತ್ತೋ?
ಜನ ಆರಿಂಗಾದರೂ ಕೈ ಮುಷ್ಟಿ ಹಿಡುದು ಗುದ್ದೆಕ್ಕಾದರೆ ಹೆಬ್ಬೆರಳು ಮಡುಸಿ ಒಳ ಮಾಡೆಕ್ಕು. ಅಂಬಗ ನೀನು ಹುಗ್ಗಿ ಕೂಪದಲ್ಲದೋ? ಗುದ್ದು ಕಾಯೆಕ್ಕಾದರೆ ಆನೇ ಅಲ್ಲದೋ ಮುಂದೆ ನಿಲ್ಲೆಕ್ಕು.
ಆನೇ ದೋಡ್ಡೋನು ಹೇಳಿತ್ತಡೊ. ಅವ ಅಲ್ಲಿಂದ ಬಿಲ್ ಕುಲ್ ಹಂದಿದ್ದ ಇಲ್ಲೆ ಹೇಳುವಗ ಎನ್ನನ್ನೇ ಕುತ್ತ ಹಿಡುದು ಆಡಿಸ್ಯೊಂಡು ಹೇಳುಲೆ ಬೇಕಾವುತ್ತು ಹೇಳಿತ್ತಡೊ.

ನಡು ಬೆರಳು ಬಿಡುತ್ತೋ? ಕೈಮುಗಿವಾಗಳೂ ಆನು ಎಲ್ಲೋರಿಂದ ಎತ್ತರಕ್ಕೆ ಕಾಣುತ್ತೆ. ಎನ್ನ ಸಹಾಯ ಇಲ್ಲದ್ದರೆ ಇವರಿಂದ ಎಂತರ ಹಿಡಿವಲೂ ಎಡಿಯ.
ಎಂತ ಕೆಲಸವೋ ಊಟವೋ ಮಾಡೆಕ್ಕಾದರೆ ನಡುಕಿಪ್ಪ ಆನೇ ಬೇಕಾವುತ್ತು. ಇದ್ದುದರಲ್ಲಿ ಆನೇ ಹೆಚ್ಚು ಗಟ್ಟಿ. ಮತ್ತು ಹೆಚ್ಚು ಉದ್ದ, ಆನೇ ದೊಡ್ಡೋನು ಹೇಳಿತ್ತಡೊ.ಪಾಂಡವರಲ್ಲಿ ಮಧ್ಯ ಪಾಂಡವ ಇದ್ದ ಹಾಂಗೆ ಆನೇ ದೊಡ್ಡೋನು.
ಮುಷ್ಟಿಂದ ಗುದ್ದುವಗಳುದೆಹೆಬ್ಬೆರಳಿನ ಎನ್ನ ಎಡೆಲ್ಲಿ ತಂದರೇ ಪೆಟ್ಟು ಕಾವದು.ಬೆರಳುಗಳ ಪೈಕಿ ಎದ್ದು ಕಾಂಬೋನು ಆನೇ ಅಲ್ಲದೋ? ನಿಂಗೊ ಎನ್ನ ಎದುರಂಗೆ ಏನೂ ಅಲ್ಲ! ಹೇಳಿತ್ತಡೊ.
ಪವಿತ್ರ ಕಾರ್ಯಂಗಳಲ್ಲಿ ಪವಿತ್ರ ಧಾರಿಯಾಗಿ ಹೇಳಿದರೆ ಮುಖ್ಯಸ್ಥನಾಗಿ ಜನಂಗೊ ಕಾಂಬದು ಎನ್ನಂದಲೇ ಎನ್ನಂದ ದೊಡ್ಡೋರು ಆರೂ ಇಲ್ಲೆ ಹೇಳಿತ್ತಡೋ.
ಶುಭ ಕಾರ್ಯಂಗಳಲ್ಲಿ ಆನೇ ಅಲ್ಲದೋ ಬೇಕಾದ್ದು. ಆನೇ ದೊಡ್ಡೋನು ಹೇಳಿತ್ತಡೊ

ಕಿರುಬೆರಳು ಬಿಡುತ್ತೋ? ಜನಂಗೊ ನಮಸ್ಕಾರ ಮಾಡುವಗ ಆನು ಎದುರೆಯೇ ಕಾಣುತ್ತೆ ಮಾಂತ್ರ ಅಲ್ಲ. ಆನು ಸ ಸರಿ ಜೋಡ್ಯೊಂಡು ಇಲ್ಲದ್ದರೆ ನಮಸ್ಕಾರ ಸರಿಯಾಯಿದಿಲ್ಲೆ ಹೇಳಿ ಲೆಕ್ಕ.
ಪ್ರತಿ ನಮಸ್ಕಾರ ಕೊಡುವಗ ಮದಲು ಸಿಕ್ಕುವದು ಎನಗೆಲ್ಲದೋ?ಆನೇ ದೊಡ್ಡೋನು ಹೇಳಿತ್ತಡೋ.
ಇವರ ಜಗಳಮುಂದುವರುತ್ತಷ್ಟೆ ಹೊರತು ಮುಗುದ್ದಿಲ್ಲೆ. ಆಗ ಜನಕ್ಕೆ ಇದು ಗೊಂತಾಗಿ ಅವಕ್ಕೆ ಸಮಾಧಾನ ಹೇಳಿದವಡೋ.ಎಂಗೊಗೆ ಮನಸ್ಸಾದರೆ ಮಾಂತ್ರ ಎಲ್ಲ ನಿಂಗಳ ಉಪಯೋಗ.
ಈಗ ಎಲ್ಲ ತಿಂಬಲೆ ಚಮಚ ಇದ್ದು. ಮತ್ತೆ ಕೆಲಸಂಗೊ ಎಲ್ಲ ಯಂತ್ರದ ಮೂಲಕ ಆವುತ್ತು. ಮತ್ತೆ ನಮಸ್ಕಾರ ಬಾಯಿಲ್ಲಿ ಹೇಳಿದರೂ ಕೈಮುಗುದು ಹೇಳಿದರೂ ಅದು ಪ್ರೀತಿಂದಲೋ ಏನೋ ಕಾಟಾಚಾರಕ್ಕೋ ಹೇಳುವದು ಮೋರೆಲ್ಲಿ ಕಾಣುತ್ತು.
ಜನಂಗೊಕ್ಕೆ ಎಲ್ಲ ಬೆರಳುಗಳುದೆ ಬೇಕು. ತಿನ್ನೆಕ್ಕಾದರೂ ಬೆರಳುಗೊ ತುತ್ತು ಕೊಂಡೋಪಗ ವಾಸನೆ ಬಡುದ ಮೂಗು ಬೇಡ ಹೇಳಿರೆ ಅವಂಗೆ ಬೇಕಾವುತ್ತೋ?ಮತ್ತೆ ನಾಲಗ್ಗೆ ತಾಗುವಗ ಛೆ ಇದು ಬೇಡ ರುಚಿಯಿಲ್ಲೆ ಹೇಳಿರೆ ಮತ್ತೆ ತುತ್ತು ಬಾಯಿಗೆ ಹೋಕೋ?
ಮತ್ತೆ ಎಲ್ಲೋರುದೆ ಹೊಂದಿಗೊಂಡು ಇದ್ದರೆ ಮಾಂತ್ರ ಎಲ್ಲ ಸರಿ. ಎಲ್ಲ ಅವಯವವೂ ಅದರದರ ಪ್ರಾಶಸ್ತ್ಯ ಅದಕ್ಕದಕ್ಕೆ ಇದ್ದು.
ಮನ್ನೆ ನಯಾಗರ ಜಲಪಾತವ ಒಬ್ಬ ದಾಂಟಿದ ಅಲ್ಲದೋ? ದಾಂಟಿದ್ದು ಕಾಲಿಲ್ಲಿ ನಡೆದು ಆದರೂ ಅವನ ಕಾಲೇ ದಾಂಟಿದ್ದಲ್ಲ.
ದಾಂಟೆಕ್ಕಾರೆ ಮನಸ್ಸಿನ ಧೈರ್ಯ ಮುಖ್ಯ. ಮನುಷ್ಯರ ಯಾವುದೆ ಕಾರ್ಯಂಗಳಲ್ಲಿ ನಿಳ್ಗಳ ಎಲ್ಲೋರ ಸಹಾಯ ಒಟ್ಟಾಗಿ ಸೇರಿದರೇ ಅವು ಹಿಡುದ ಕಾರ್ಯವ ಜಯಿಸುಗು.

ಉಪಯೋಗುಸುವವನ ಮನಸ್ಸು ಸರಿಯಿಲ್ಲದ್ದರೆ ಪ್ರಯೋಜನ ಇಲ್ಲೆ ಮನೋಬಲವೇ ಎಲ್ಲಕ್ಕೂ ದೊಡ್ಡದು. ಈ ಹೆಳೆ ಹೇಳ್ಯೊಂಡು ಕಾದೆಡಿ ಹೇಳಿ ಒಪ್ಪಿಸಿದನಡೋ.
ಈ ದೈವ ಸೃಷ್ಟಿಲ್ಲಿ ಮನುಷ್ಯಂಗೆ ದೈವದತ್ತವಾಗಿ ಬಂದ ಎಲ್ಲ ಅಂಗಂಗಳೂ ಸರಿಯಾಗಿದ್ದರೆ ಸರಿ. ಒಂದಂಗ ಸಣ್ಣ ಅಂಗ ಶೂನ್ಯ ಆದರೂ ಹೇಂಗೋ ಜೀವನ ಮಾಡಿಕೊಂಡಿಪ್ಪಲಕ್ಕಾದರೂ ಎಲ್ಲ ಅಂಗಂಗಳೂ ಬೇಕೇಬೇಕು.
ಐದು ಬೆರಳುಗಳೂ ಉದ್ದ ಕುಂಟು ಹೇಳುವ ವಿಚಾರವೂ ಅಷ್ಟೆ ಎಲ್ಲ ಒಂದೇ ಸಮಾನ ಉದ್ದ ಆವುತ್ತಿತ್ತೀರೆ ಕೈಲಿ ಯಾವ ಕೆಲಸ ಮಾಡುಲೂ ಆವುತ್ತೀತಿಲ್ಲೆ.
ವಸ್ತುವಿನ ಹಿಡಿಯೆಕ್ಕಾದರೆಉದ್ದ ಕುಂಟು ಬೆರಳುಗೊ ಹೊಂದ್ಯೊಂಡು ಇದ್ದರೆ ಗಟ್ಟಿಯಾಗಿ ಹಿಡಿವಲಾವುತ್ತು. ಒಂದು ಬೆರಳು ಬೇನೆ ಆದರೂ ಹಿಡಿವಲೆ ಕಷ್ಟ ಆವುತ್ತಲ್ಲದೋ?
ಹಾಂಗೆ ಮನುಷ್ಯರಲ್ಲಿ ಬಡವ- ಶ್ರೀಮಂತ ವ್ಯತ್ಯಾಸ ಮತ್ತೆ ಚೆಂದ -ಬೆಳಿ- ಕಪ್ಪುಹೇಳುವ ವ್ಯತ್ಯಾಸ ಇದ್ದರೆ ಮಾಂತ್ರ ಜನಂಗೊಕ್ಕೆ ಸೃಷ್ಟಿ ವೈವಿಧ್ಯತೆಯ ಅರಿವು ಅಪ್ಪದು. ಒಳ್ಳೆದು ಯಾವದು ಗೊಂತಾಯೆಕ್ಕಾದರೆ ಕೆಟ್ಟದರ ಹೋಲಿಸೆಕ್ಕು.
ಉದ್ದ -ಕುಂಟು ತೋರ ಸಪುರ ಹೀಂಗೆಲ್ಲ ವ್ಯತ್ಯಾಸ ಸೃಷ್ಟಿಲ್ಲಿಪ್ಪ ವಿಚಿತ್ರಂಗಳ ತೋರುಸುತ್ತು. ಎಲ್ಲ ನಮಗೆ ಗೊಂತಿರೆಕ್ಕು ಮಾಂತ್ರ. ಎಲ್ಲ ನಾವು ಬದುಕ್ಕಿಪ್ಪ ವರೆಗೆ ನಮಗೆ ಗೊಂತಾವುತ್ತು. ಮತ್ತಾಣದ್ದು ದೇವರಿಂಗೇ ಗೊಂತು.
ಮತ್ತೆ ಬೆರಳುಗಳಲ್ಲಿಯೂ ವಿಶಿಷ್ಟ ತತ್ವಂಗಳನ್ನೂ ಕಾಂಡೋರಿದ್ದವು.

ನಮ್ಮ ಆರೋಗ್ಯವನ್ನೂ ಕಾಪಾಡಿಗೊಂಬಲೆ ಬೆರಳಿನ ಸಹಾಯ ಸಿಕ್ಕುತ್ತಡೋ.
ಹೆಬ್ಬೆರಳಿಲ್ಲಿ ಅಗ್ನಿ ತತ್ವ ಇಪ್ಪದಡೊ.
ಕೋಲು ಬೆರಳಿಲ್ಲಿ ವಾಯು ತತ್ವ.
ನಡುಬೆರಳು ಪೃಥ್ವಿ ತತ್ವ.
ಪವಿತ್ರ ಬೆರಳಿಲ್ಲಿ ನೀರಿನ ತತ್ವ.
ಕಿರುಬೆರಳಿಲ್ಲಿ ಆಕಾಶ ತತ್ವ ಹೇಳಿ ಹೇಳುತ್ತವು.

ಹೀಂಗೆ ಪಂಚಭೂತಂಗಳ ತತ್ವಂಗೊ ಬೆರಳುಗಳಲ್ಲಿದ್ದು ಹೇಳುತ್ತವು ನಮ್ಮ ಧಾರ್ಮಿಕ ಆಚರಣೆಗಳಲ್ಲಿಯೂ ಹಸ್ತ ಮುದ್ರೆಗಳ ಉಪಯೋಗ ಇದ್ದಲ್ಲದೋ?
ಬೆರಳುಗಳ ಕೊಡಿಲ್ಲಿ ಒಂದಕ್ಕೊಂದು ಜೋಡುಸಿಗೊಂಡರೆ ಆಯಾ ತತ್ವಂಗೊಕ್ಕೆ ಹೇಳಿದ ಬೆರಳುಗಳ ಸ್ಪರ್ಶಂದ ಒಂದಕ್ಕೊಂದು ಶಕ್ತಿಯ ವಿನಿಮಯ ಆವುತ್ತಡೊ. ಬುಡಲ್ಲಿ ಮುಟ್ಟಿದರೆಬಗ್ಗಿದ ಬೆರಳಿಂಗೆ ಸರ್ತ ಇಪ್ಪ ಬೆರಳಿನ ಶಕ್ತಿ ಹರುದು ಬತ್ತಡೊ.
ಜೀರ್ಣ ಶಕ್ತಿ ಹೆಚ್ಚಾಯೆಕ್ಕಾದರೆ ನಡು ಬೆರಳಿನ ಬಗ್ಗುಸಿ ಹೆಬ್ಬೆರಳಿನ ಬುಡಕ್ಕೆ ತಂದು ಅರ್ಧ ಗಂಟೆಯೊ ಮುಕ್ಕಾಲು ಗಂಟೆಯೋ ಹಡಿದರೆ ಸಾಕು ಹೇಳುತ್ತವು ಹಸ್ತ ಮುದ್ರಾ ಪರಿಣತಂಗೋ.
ಅದೇ ತತ್ವವನ್ನೇ ಆಧರುಸಿ ಪಂಚ ಪ್ರಾಣಾಹುತಿ ತೆಕ್ಕೊಂಬಗ ಹೆಬ್ಬೆರಳಿನ ಸಹಾಯಂದ ತೋರು ಬೆರಳು, ಮತ್ತೆ ನಡು ಬೆರಳು,ಮತ್ತೆ ಮೂರೂ ಬೆರಳುಗೋ, ನಾಲ್ಕೂ ಬೆರಳುಗೋ ಆಗಿ ಕಡೆಂಗೇ ಐದು ಬೆರಳೂ ಸೇರುಸಿ ಸಮಾನಾಯಸ್ವಾಹಾ ಹೇಳೆಕ್ಕಡೊ.

ಇದು ಗೊಂತಿದ್ದೋರು ಹೇಳಿದ ವಿಷಯ ಇನ್ನೂ ಹೆಚ್ಚು ಗೊಂತಿದ್ದೋರು ಹೆಚ್ಚು ವಿವರುಸಿದರೆ ಎಲ್ಲೋರಿಂಗು ಗೊಂತಕ್ಕಲ್ಲದೋ?

ಸುಬ್ಬಣ್ಣ ಭಟ್ಟ, ಬಾಳಿಕೆ

   

You may also like...

14 Responses

  1. ಅಂದು ಒಂದೇ ಬೆರಳಿಲ್ಲಿ ಬಡುದ್ದಲ್ಲ!

  2. ಸುಬ್ಬಣ್ಣ ಮಾವಾ°,
    ಬರದ್ದು ಲಾಯ್ಕಾಯಿದು 🙂

  3. ರಘು ಮುಳಿಯ says:

    ಒಗ್ಗಟ್ಟಿಲಿ ಬಲ ಇಪ್ಪದು ಹೇಳ್ತ ಸತ್ಯದ ಹಾ೦ಗೆ ಕೈಯ ಐದು ಬೆರಳುಗೊ ಒ೦ದಾದರೆ ಮುಷ್ಟಿಗೆ ಶಕ್ತಿ ಬಪ್ಪದು.ಬಾಳಿಕೆ ಮಾವನ ಸರಳ ತತ್ವ೦ಗಳ ಅರ್ಥ ಮಾಡಿಗೊ೦ಡು ನೆಡದರೆ ಬಾಳುವೆಲಿ ನೆಮ್ಮದಿ ಸಿಕ್ಕುಗು.ಒಳ್ಳೆ ಬರವಣಿಗೆ ಮಾವ°,ಧನ್ಯವಾದ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *