ಕೈಗಾಲ್ಲಿ ಅನು(ಣು)ಸಂಧಾನ….

March 11, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೈಗಾ-ಈ ಹೆಸರು ನಮ್ಮವು ಬಹಳಷ್ಟು ಜೆನ ಕೇಳಿಕ್ಕು..

ಅಲ್ಲಿ ಎಂತ ಇದ್ದು ಹೇಳಿ ಗೊಂತಿದ್ದರೂ ಬೈಲಿಂಗೆ ವರ್ತಮಾನ ಹೇಳುವೋ° ಹೇಳಿದ ಒಪ್ಪಣ್ಣ..
~~~~
೧೯೮೫ ರ ಮೊದಲು ಉತ್ತರ ಕನ್ನಡದ ಯಾವುದೇ ಹಳ್ಳಿಯ ಹಾಂಗೆ ಕೈಗಾ ವೂ ಒಂದು ಹಳ್ಳಿ ಅಥವಾ ಕುಗ್ರಾಮ ಆಗಿತ್ತು. ಕಾರವಾರ-ಮಲ್ಲಾಪುರ-ಯಲ್ಲಾಪುರ ಮಾರ್ಗಲ್ಲಿ ಕಾರವಾರಂದ ೫೬ ಕಿ.ಮೀ ದೂರಲ್ಲಿ ಕಾಳೀ ನದಿಯ ಎಡದೊಡೆಂಗೆ ಇಪ್ಪ ಜಾಗೆ-ಕೈಗಾ. ಪ್ರಕೃತಿ ರಮಣೀಯವಾದ ಇದು ಸಹ್ಯಾದ್ರಿ ಪರ್ವತ ಸಾಲಿಲ್ಲಿ ನಡೂಕೆ ಒಂದು ಒರುಂಕು. ಕಾರವಾರದ ಕೋಡಿಭಾಗಂದ  ಕದ್ರಾವರೇಗೆ ಮೋಟರ್ ಬೋಟು ಬಂದೊಂಡಿತ್ತಡ. ೧೯೯೭ ರ ವರೆಗೂ ನದಿ ದಾಂಟ್ಲೆ ಕದ್ರಾ-ಕುರ್ನಿಪೇಟೆ ನೆಡುಕೆ ದೋಣಿ ಇದ್ದತ್ತು.  ಕದ್ರಾ, ಕುರ್ನಿಪೇಟೆಂದ ಕೈಗಾ ಮತ್ತೆ ದೇವಕಾರಕ್ಕೆ ನೆಡಕ್ಕೊಂಡೇ ಹೋಯೆಕ್ಕಾಗಿತ್ತು. ಕೆಲವು ಸರ್ತಿ ಮರದ ಲೋರಿ ಸಿಕ್ಕುಗಡ. ಕುಣಬಿ, ಹಾಲಕ್ಕಿಯೆವರ ಬೆದುರಿನ ಬುಟ್ಟಿ, ಹಸೆ, ಭತ್ತ, ಮತ್ತೆ ಕಾಡಿನ ಮರಂಗೊ ಎಲ್ಲ ಇಲ್ಲಿಂದ ಹೆರಹೋಗಿಯೊಂಡಿತ್ತಡ. ಇಲ್ಯಾಣವಕ್ಕೆ ಕಾರವಾರಂದ ಹೆಚ್ಚು ಯಲ್ಲಾಪುರ ಪೇಟೆಯ ಸಂಪರ್ಕ ಇದ್ದತ್ತು. ಅಲ್ಲಿಗೂ ಹಾಂಗೆ ಬಾರೆ, ಕಳಚೆವರೆಗೆ ನೆಡಕ್ಕೊಂಡು ಹೋಯೆಕಾಗಿತ್ತು, ಬಸ್ಸಿಂಗೆ ಹತ್ಲೆ. ಮಾನ್ಯ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗೊ ಆಗಿಪ್ಪಗ ಕರ್ನಾಟಕದವೇ ಆದ ಡಾ|ರಾಜಾರಾಮಣ್ಣ,  ಅಂಬಗ ಅಣು ಶಕ್ತಿ ಆಯೋಗದ ಅಧ್ಯಕ್ಷರು. ಅವರ ದೂರಾಲೋಚನೆಲಿ ಇಲ್ಲಿ ಅಣು ಸ್ಥಾವರ ಮಾಡುದು ಹೇಳಿ ಅಪ್ಪಗ ಸುದ್ದಿಯಾದ್ದದು.
ಅಂಬಗಳೇ ನಮ್ಮ ಬೇಳಲ್ಲಿಯೂ ಒಂದು ಅಣು ಸ್ಥಾವರ ಬತ್ತು ಹೇಳಿ ಹೀಂಗೇ ಒಂದು ಶುದ್ದಿ ಹಬ್ಬಿದ್ದದು, ಊರವು ಆ ನಂತ್ರ ಮಧೂರಿಲ್ಲಿ ಗೆಣಪ್ಪಂಗೆ ಮೂಡಪ್ಪ ಸೇವೆ ಎಲ್ಲ ಮಾಡುಸಿದ್ದದು ನಿಂಗೊಗೆಲ್ಲ ನೆಂಪಿದ್ದೋ? ಮತ್ತೆ ಅಲ್ಲಿ ಆಯಿದಿಲ್ಲೆ ಹೇಳುವೋ° !
~~~~
ಈಗ ಎನ್ನ ಕೆಲವು ಸಹೋದ್ಯೋಗಿಗೊ ನೆಂಪು ಮಾಡ್ಯೊಳ್ತವು.. ಅಂಬಗ ಪ್ರತಿಭಟನೆಲಿ ಭಾಗವಹಿಸಿದ್ದರ. ಅಪ್ಪು.. ಕೈಗಾಲ್ಲಿ ಅಣು ಸ್ಥಾವರ ಮಾಡ್ಲೆ ವಿರೋಧ ಇದ್ದತ್ತು. ಆ ವಿರೋಧಂಗೊ ಎಲ್ಲಾ ತಗ್ಗಿ ಅಕೇರಿಗೆ ಸುರು ಆತು ಕಟ್ಟುಲೆ. ಕಟ್ಟುತ್ತಾ ಇಪ್ಪಗಳೂ ಅಡಚಣೆಗೊ ಇಲ್ಲದ್ದೆ ಇತ್ತಿಲ್ಲೆ. ೧೯೯೨ ರಲ್ಲಿ ಒಂದಾರಿ ಡೋಮು – 1 ಮೀ ದಪ್ಪದ ಅರ್ಧಚಂದ್ರಾಕೃತಿಯ ಮಾಡು, ಬಿದ್ದತ್ತು ಹೇಳಿ (ಡೋಮಿನ 1 ಮೀ ಅಲಗಕೆ ಜೆರುದು ಬಿದ್ದದು) ಪುನಃ ವಿರೋಧಕ್ಕೆ ಚಾಲನೆ ಬಂತು.
ನಮ್ಮ ಊರಿನ ವಾರಪತ್ರಿಕೆ ಒಂದು ಭರ್ಜರಿ (ಲೊಟ್ಟೆ ಸೇರುಸಿ) ವರದಿ ಮಾಡಿತ್ತು. ಅದಿರಳಿ.. ಈಗಳೂ ಕೆಲವು ದಿಕ್ಕೆ ಸುದ್ದಿಗೋ ಬತ್ತಾ ಇರ್ತು.. ವಿರೋಧಿಸುವದು ಇಪ್ಪದೇ..
ಆರಿಂಗಾದರೂ ಅವರವರ ಅಜ್ಜ-ಮುತ್ತಜ್ಜನ ಕಾಲಂದ ಇದ್ದಿದ್ದ ಜಾಗೆಂದ ಏಳಿ ಹೇಳಿರೆ ? ಇಲ್ಲಿಯೂ ಹಾಂಗೇ ಆತು.. ಸುಮಾರು 40 ಕುಟುಂಬಂಗೊ ಅವರ ಆಸ್ತಿ ಬಿಡೆಕಾಗಿ ಬಂತು.
ಅವಕ್ಕೆ ಪರಿಹಾರವುದೇ, ವಾಸಕ್ಕೆ ಮಲ್ಲಾಪುರಲ್ಲಿ ಸೈಟುಗೊ ಮಾಡಿ ಕೊಟ್ಟತ್ತು, ಕುಟುಂಬಕ್ಕೆ 1 ರಿಂದ 4 ಜೆನರವರೇಗೆ ಅವರವರ ಕಲ್ತದಕ್ಕೆ ತಕ್ಕ ಉದ್ಯೋಗ ಕೊಟ್ಟತ್ತು ಇಲಾಖೆ (ಎನ್.ಪಿ.ಸಿ.ಐ.ಎಲ್) . ಕೆಲವು ಕುಟುಂಬಗಳಲ್ಲಿ ಅಣ್ಣಂಗೆ ಸಿಕ್ಕಿರೆ ತಮ್ಮಂಗಿಲ್ಲೆ, ತಮ್ಮಂಗೆ ಸಿಕ್ಕಿರೆ ಅಣ್ಣಂಗಿಲ್ಲೆ ಹೇಳಿ ಆತು.. ಹಾಂಗಿಪ್ಪ ಅಸಮಾಧಾನಂಗೊ ಇದ್ದು.
ಎಲ್ಲಾ ಯೋಜನೆಗಕ್ಕೂ ಅದು ಇಲ್ಲಿ ಬೇಡ ಹೇಳಿತ್ತು ಕಂಡ್ರೆ, ಮತ್ತೆಂತಮಾಡುವದು? ನಾವು ಕರೆಂಟಿಂಗೆಂತ ಮಾಡುವದು, ಉಮ್ಮಪ್ಪ – ಬೇಡಿಕೆ ಅಂತೂ ಹೆಚ್ಚುತ್ತಾ ಇರ್ತು. ನಾಕು ಪರಂಚಿತ್ತು..
ಗೋರ್ಮೆಂಟಿಂಗೆ. ವಿರೋಧಂದ ಕೆಲಾವು ಯೊಜನಗೊ ಗಂಟುಮೂಟೆ ಕಟ್ಟಿದ್ದು., ತದಡಿ, ಹಣಕೋಣ ಇತ್ಯಾದಿ..
~~~~
ಕೈಗಾ,  ಕಾರವಾರ-ಮಲ್ಲಾಪುರ-ಯಲ್ಲಾಪುರ ಮಾರ್ಗಲ್ಲಿ ಕಾರವಾರಂದ ೫೬ ಕಿ.ಮೀ ದೂರಲ್ಲಿ ಕಾಳೀ ನದಿಯ ಎಡದೊಡೆಂಗೆ ಇಪ್ಪ ಜಾಗೆ. ಪ್ರಕೃತಿ ರಮಣೀಯವಾದ ಇದು ಸಹ್ಯಾದ್ರಿ ಪರ್ವತ ಸಾಲಿಲ್ಲಿ ನಡೂಕೆ ಒಂದು ಒರುಂಕು. ಇಲ್ಲಿ ಒಟ್ಟು ನೂರ ಇಪ್ಪತ್ತೈದು ಹೆಕ್ಟೇರು ಭೂಮಿಯ ಅಣು ವಿದ್ಯುತ್ ನಿಗಮ ವಶಕ್ಕೆ ತೆಕ್ಕೊಂಡಿದು. ಅದರಲ್ಲಿ ೮೫ ಹೆಕ್ಟೇರ್ ೪ ರಿಯಾಕ್ಟರು ಕಟ್ಟಲೆ ಮುಗುದ್ದು. ರಿಯಾಕ್ಟರಿಂದ ೧.೬ ಕಿ.ಮೀ ತ್ರಿಜ್ಯ ದೂರದವರೆಗೆ ವಸತಿ ನಿಷೇಧಿತ ಪ್ರದೇಶ-ಮನ್ನೆಚ್ಚರಿಕೆಗಾಗಿ. ಕಾಳಿ ನದಿಗೆ ಕದ್ರಾಲ್ಲಿ ಅಣೆಕಟ್ಟು ಕಟ್ಟಿ ನೀರು ಎರ್ಕುಸಿದ ಮೇಲೆ (1997 ರಲ್ಲಿ) ಅದೇ ನೀರು ಕೈಗಾ ವಿದ್ಯುತ್ ಕೇಂದ್ರದ ಮುಖ್ಯ ನೀರಿನ ಆಸರೆ. ಹೇಳಿರೆ ಟರ್ಬೈನು ತಿರುಗುಸಿದ ಹಬೆಯ ತಣ್ಣಂಗೆ ಮಾಡ್ಳೆ (ಭಾಷ್ಪೀಬವನ).. ತಣ್ಣಂಗೆ ಮಾಡಿದ ಹಬೆ ತಿರೂಗ ಹಬೆ ಅಪ್ಪಲೆ ಹಬೆ ಯಂತ್ರಕ್ಕೆ ಕಳುಸುವದು, ಹೀಂಗೇ ಆವರ್ತನೆ ಆವ್ತು.ಈ ಕಾಳೀ ನದಿಯ ನೀರು ಹರಿವಾಗ ಕಾಂಬಲೆ ಕಪ್ಪು.  ಕಾಳೀ ನದಿ ಯೋಜನೆಲಿ 65 ಕಿ.ಮೀ ನದಿಯ ಹರಿವಿಲ್ಲಿ ಒಟ್ಟು 4 ಆಣೆಕಟ್ಟೆ ಕಟ್ಟಿದ್ದವು… ಈ ಕತೆ ಇನ್ನೊಂದಾರಿ ಹೇಳ್ತೆ.
ಎಲ್ಲಾ ಇಲಾಖೆಗಳ ಒಪ್ಪಿಗೆ ಸಿಕ್ಕಿ 1999 ನೇ ಇಸವಿಲಿ ಕಟ್ಟುಲೆ ಶುರು ಮಾಡಿದವು. ನಡುಕೆ ಕೆಲವು ವಿಘ್ಞಂಗೊ ಬಂತು. ಬಾಲಗ್ರಹ ಪೀಡೆ ಕಳುದು 1999 ರಲ್ಲಿ ಮೊದಲಾಣ ಘಟಕ ವಿದ್ಯುತ್ ಉತ್ಪಾದನೆ ಶುರು ಮಾಡಿತ್ತು. ಇಂದಿಂಗೆ ಇಲ್ಲಿ 220 ಮೆಗಾವ್ಯಾಟ್ ಸಾಮರ್ಥ್ಯದ 4 ಘಟಕಂಗೊ (ಪಿ.ಯಚ್.ಡಬ್ಲು.ಆರ್) ನಿರಂತರ ವಿದ್ಯುತ್ ಉತ್ಪಾದನೆ ಮಾಡ್ತಾ ಇದ್ದು. ದಿನಾಲೂ ಸುಮಾರು 19 ದಶಲಕ್ಷ ಯೂನಿಟ್ ದಕ್ಷಿಣ ಭಾರತದ ವಿದ್ಯುತ್ ಜಾಲಕ್ಕೆ ವಿತರಣೆ ಮಾಡ್ಲೆ ಹೋವುತ್ತಾ ಇದ್ದು. ಇದರಲ್ಲಿ ಕರ್ನಾಟಕದ ಪಾಲು 28%. ಒಂದು ಯುನಿಟಿಂಗೆ ಎರಡೂ ಮುಕ್ಕಾಲು ರೂಪಾಯಿಗೆ ಎಂಗೊ ಮಾರುವದು.. ಕರೆಂಟು.
~~~~
ಈಗಳೂ ಕೆಲವು ಜೆನ ಕೇಳುವದಿದ್ದು ಊರಿಲ್ಲಿ., ಕೈಗಾಲ್ಲಿ ಎಂತ ಮಾಡ್ತವೋ° ಅಲ್ಲಿ ಬೊ°ಂಬು ಮಣ್ಣ ಮಾಡ್ತವಾಯಿಕ್ಕು ನಿನಗೆ ಗೊಂತಿರ ಹೇಳ್ತವು..ಆತಪ್ಪಾ, ಅವಕ್ಕೆ ವಿವರಣೆ ಕೊಡುವದು ಸುಮ್ಮನೇ,.
ಇಂದ್ರಾಣ ಮಟ್ಟಿಂಗೆ ಆಣು ವಿದ್ಯುತ್ ನಿಗಮದ ರಿಯಾಕ್ಟರುಗಳ ಪೈಕಿ ವಿದ್ಯುತ್ ಉತ್ಪಾದನೆ, ಸುರಕ್ಷತೆ, ಪರಿಸರ ಸಂರಕ್ಷಣೆ,  ಕೆಲಸಗಾರನ ವಿಕಿರಣಕ್ಕೊಡ್ಡುವಿಕೆಯ ಕಮ್ಮಿ ಮಾಡ್ವದಲ್ಲಿ ಕೈಗಾ ಅಗ್ರ ಪಂಕ್ತಿಲಿ ಇದ್ದು.
ಈ ಯೋಜನೆಂದಾಗಿ ೧೬೧೫ ಜೆನಕ್ಕೆನೇರ ಉದ್ಯೋಗಾವಕಾಶ ಸಿಕ್ಕಿದ್ದು. ಉದ್ಯೋಗಿಗಳಲ್ಲಿ ೭೦% ಜೆನ ಕರ್ನಾಟಕದವು ಅದರಲ್ಲಿ ೩೭% ಜೆನ ಉತ್ತರ ಕನ್ನಡ ಜಿಲ್ಲೆಯವು. ನೆರೆಕರೆಲಿ ಸಾಕಷ್ಟು ಬದಲಾವಣೆಗೊ ಆಯಿದು. ಜೆನಂಗೊಕ್ಕೆ ಗೆಯ್ಯಲೆ ಮನೆ ಹತ್ತರೆ ಒಂದು ಅವಕಾಶ ಸಿಕ್ಕಿದ್ದು. ಅಲ್ಲದ್ರೆ ಮದಲಿಂಗೆ ಗೋವಾಕ್ಕೆ ಮಣ್ಣ ಹೋಯೆಕಾವುತ್ತಿತು. ಜೆನ ಗುತ್ತಿಗೆ ಆಧಾರಲ್ಲಿ ಬೇರೆ ಬೇರೆ ವಿಭಾಗಂಗಳಲ್ಲಿ ಕೆಲಸ ಮಾಡ್ತವು.  ಅಂಗಡಿ ಮುಂಗಟ್ಟುಗೋ ವಾಹನ ಇತ್ಯಾದಿ ಸ್ವಂತ ಉದ್ಯೋಗಂಗಳ ಮಾಡ್ತವು. ಇಲಾಖೆಯುದೇ ಸಾಮಾಜಿಕ ಜವಾಬ್ದಾರಿಯನ್ನೂ ಎಡಿಗಾಷ್ಟು ತೆಕ್ಕೊಂಡು ಮುಂದೆ ಹೋವುತ್ತಾ ಇದ್ದು.
~~~~
ಭಾರತದ ಪರಮಾಣು ವಿದ್ಯುತ್ತಿನ ಹರಿಕಾರ° ಹೋಮಿ ಜ್ಹಹಾಂಗಿರ್ ಬಾಬ. ಭಾರತದ ಪರಮಾಣು ಸಂಶೋಧನಾ ಸಂಸ್ಥಗೆ ಅವನ ಹೆಸರೇ ಮಡಗಿದ್ದವು. ಪರಮಾಣು ಇಂಧನವ ಪರಿಪೂರ್ಣವಾಗಿ ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡ್ಲೆ ಮೂರು ಹಂತಗಳ ಯೋಜಿಸಿದ್ದವು ಯೋಜನಾಕಾರರು..
 1. ಸ್ವಾಭಾವಿಕವಾಗಿ ಸಿಕ್ಕುವ ಯುರೇನಿಯುಂ-235+U-238 ರ ಬಳಕೆ ಮಾಡಿ ಥರ್ಮಲ್ ರಿಯಾಕ್ಟರ್ (ಪಿ.ಯಚ್.ಡಬ್ಲು.ಆರ್)ಗಳಲ್ಲಿ ವಿದ್ಯುತ್ ಉತ್ಪಾದನೆದೇ U-238 ರ ಪರಿವರ್ತನೆ
 2. ಮೊದಲನೇ ಹಂತಲ್ಲಿ ಬಳಕೆಯಾದ ಯುರೇನಿಯುಂ-238 ರ ಒಟ್ಟಿಂಗೆ ಥೋರಿಯುಂ-232 ರ ಉಪಯೋಗಿಸಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಎಫ್.ಬಿ.ಆರ್) ಲಿ ವಿದ್ಯುತ್ ಉತ್ಪಾದನೆಯೊಟ್ಟಿಂಗೆ ಯುರೇನಿಯುಂ-233 ಹೇಳ್ತ ಹೊಸ ಮೂಲವಸ್ತುವಿನ ಉತ್ಪಾದನೆ,
 3. ಎರಡನೇ ಹಂತಲ್ಲಿ ಉತ್ಪಾದನೆಯಾದ ಯುರೇನಿಯುಂ-233 ರ ಒಟ್ಟಿಂಗೆ ಥೋರಿಯುಂ-232 ರ ಉಪಯೋಗಿಸಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಎಫ್.ಬಿ.ಆರ್) ಲಿ ವಿದ್ಯುತ್ ಉತ್ಪಾದನೆಯುದೇ-ಯುರೇನಿಯುಂ-233 ಹೇಳ್ತ ಸ್ವಾಭಾವಿಕವಾಗಿ ಸಿಕ್ಕದ್ದ ಮೂಲವಸ್ತುವಿನ  ಉತ್ಪಾದನೆ ಮುಂದುವರಿಕೆ..
ಕೈಗಾಲ್ಲಿ ಅಲ್ಲದ್ದೇ ಭಾರತಲ್ಲಿಪ್ಪ ಎಲ್ಲ ರಿಯಾಕ್ಟರ್ರ್ಗಳಲ್ಲಿಯೂ (ತಾರಾಪುರ-1 ಮತ್ತು 2 ಬಿಟ್ಟು) ಮೊದಲನೆಯ ಹಂತದ ಪ್ರಕ್ರಿಯೆಂದಲೇ ವಿದ್ಯುತ್ ಉತ್ಪಾದನೆ ನೆಡೆತ್ತಾ ಇದ್ದು. ಎರಡನೇ ಹಂತದ ಪ್ರಕ್ರಿಯೆಯ ರಿಯಾಕ್ಟರ್ ತಮಿಳುನಾಡಿನ ಕಲ್ಪಾಕ್ಕಮ್ ಲ್ಲಿ ಕಟ್ಟೋಣ ಶುರು ಆಯಿದು.
 1. ತಾರಾಪುರ-1,2 (170 ಮೆ.ವ್ಯಾಟ್) — 1969 ರಲ್ಲಿ ಉತ್ಪಾದನೆ ಶುರು ಆದ್ದದು..
  ತಾರಾಪುರ-3,4 (ಭಾರತದ ಪ್ರಥಮ 540 ಮೆ.ವ್ಯಾಟ್ ಸಾಮರ್ಥ್ಯದ ರಿಯಾಕ್ಟರ್)
 2. ಕಲ್ಪಾಕ್ಕಮ್-1,2 (220 ಮೆ.ವ್ಯಾಟ್)
 3. ರಾವತ್ಭಾಟ-1 ರಿಂದ 6 (220 ಮೆ.ವ್ಯಾಟ್)
 4. ನರೋರ-1,2 (220 ಮೆ.ವ್ಯಾಟ್)
 5. ಕಕ್ರಪಾರ-1,2 (220 ಮೆ.ವ್ಯಾಟ್)
 6. ಕೈಗಾ-1 ರಿಂದ 4 (220 ಮೆ.ವ್ಯಾಟ್)
ಹೀಂಗೆ ಭಾರತಲ್ಲಿ ಈಗ ಒಟ್ಟು 20 ರಿಯಾಕ್ಟರುಗಳಿಂದ ಉತ್ಪಾದನಾ ಸಾಮರ್ಥ್ಯ 4560 ಮೆ.ವ್ಯಾಟ್ ಇದ್ದು..
ಭಾರತಲ್ಲಿ ರಿಯಾಕ್ಟರ್‍ಗಳ ತಂತ್ರಜ್ಞಾನದ ಅಭಿವೃಧ್ಧಿ, ಕಟ್ಟೋಣ, ಪೂರ್ವತಯಾರಿ, ವಿದ್ಯುತ್ ಉತ್ಪಾದನೆ, ನಿರ್ವಹಣೆಯ ಜವಾಬ್ದಾರಿಗೆ 1987, ಸೆಪ್ಟೆಂಬರಲ್ಲಿ ಅಣು ವಿದ್ಯುತ್ ನಿಗಮ ಅಸ್ತಿತ್ವಕ್ಕೆ ಬಂತು. ಈಗ ಇಪ್ಪ ಎಲ್ಲಾ ರಿಯಾಕ್ಟರುಗಳ ಜವಾಬ್ದಾರಿ ಅದರದ್ದೇ. ಮುಂದೆ ಸುಮಾರು ಹೊಸ ಯೋಜನೆಗಳೂ ಬತ್ತಾ ಇದ್ದು. ವಿವರವಾದ ಯೋಜನಾ ವರದಿ, ನಕ್ಷೆ ಎಲ್ಲಾ ಮಾಡಿ ಸರಕಾರದ ಅನುಮೋದನೆ ಆಯೆಕು. ಅಣು ವಿದ್ಯುತ್ ಉತ್ಪಾದನೆ, ದೊಡ್ಡ ಪ್ರಮಾಣದ ವ್ಯಾವಹಾರಿಕ ನ್ಯೂಕ್ಲಿಯರ್ ವಿದ್ಯುದಾಗಾರ ಕಟ್ಟುಲೆ ಹಂತ ಹಂತಲ್ಲಿ ಬೇರೆ ಬೇರೆ ಸರಕಾರಿ ಇಲಾಖೆ/ಸಚಿವಾಲಗಳ ಒಪ್ಪಿಗೆ ಬೇಕಾವುತ್ತು. ಮೊದಲನೆಯದಾಗಿ “ಸ್ಥಳ ಆಯ್ಕೆ ಸಮಿತಿ” ಜಾಗೆ ನೊಡಿಕ್ಕಿ ಪರಿಶೀಲನೆಗೆ ಸಚಿವಾಲಯಂಗೊಕ್ಕೆ ಕಳುಸುತ್ತವು. ಯೋಜನಾ ಆಯೋಗದ ಅನುಮೋದನೆ ಆದ ಮೇಲೆ ಪೈಸೆ ಬಿಡುಗಡೆ ಆವುತ್ತು.
~~~~
ರಿಯಾಕ್ಟರಿಲ್ಲಿ ಅಪ್ಪ ವಿದಳನ ಕ್ರಿಯೆ-ಸರಪಳಿ ಕ್ರಿಯೆಲಿ ಬಪ್ಪ ಬೆಶಿಯ ಭಾರಜಲಕ್ಕೆ- ಭಾರಜಲಂದ ಲವಣಾಂಶ ತೆಗದ ನೀರಿಂಗೆ ವರ್ಗಾವಣೆ ಮಾಡಿ- ನೀರು ಹಬೆ/ಉಗಿಯಾಗಿ- ಉಗಿ ಚಕ್ರವ (ಟರ್ಬೈನ್) ತಿರುಗುಸುವದು ಇದು ಕರೆಂಟು ತಯಾರುಸುವ ಪ್ರಕ್ರಿಯೆ.. ಇದರಲ್ಲಿ ಇಂಧನದ ಅವಶ್ಯಕತೆಯುದೇ ತ್ಯಾಜ್ಯಂಗಳೂ ಬಹಳ ಕಮ್ಮಿ, ಕಲ್ಲಿದ್ದಲಿಂಗೆ ಹೋಲುಸಿರೆ, ದಿನಕ್ಕೆ 5.28 ದಶಲಕ್ಷ ವಿದ್ಯುತ್ ಉತ್ಪಾದನೆ ಮಾಡ್ಲೆ 100 ಕಿಲೋ ಸ್ವಾಭಾವಿಕ ಯುರೇನಿಯುಮ್ ಸಾಕು. ವಿದಳನ ಅಪ್ಪದು ಕಣ್ಣಿಂಗೆ ಕಾಣ, ಆದರೆ ಅದರ ಪರಿಣಾಮ ಮಾಂತ್ರ ಗೊಂತಕ್ಕು-ಉಷ್ಣತೆ ರೂಪಲ್ಲಿ.
ಇಂಧನ ಎಲ್ಲಿಂದ ಬತ್ತು? ಭಾರತಲ್ಲಿ ಚತ್ತೀಸ್ಘಡ ದ ಜಾದೂಗುಡ ಲ್ಲಿ ಯುರೇನಿಯಮ್ ಕಾರ್ಪೋರೇಶನ್ ಗಣಿಂದ ತೆಗದು ಹೈದರಾಬಾದಿಲ್ಲಿ ಇಪ್ಪ ನ್ಯಾಶನಲ್ ಫ್ಯೂಯಲ್ ಕಾಂಪ್ಲೆಕ್ಸ್ (ಎನ್.ಎಫ್.ಸಿ) ಲ್ಲಿ ಇಂಧನದ ಕಟ್ಟು ಆಗಿ ಎಲ್ಲಾ ಕಡೆಂಗೆ ಹೋವ್ತು..ಲೋರಿಲಿ. ಕಳುದ ವರ್ಷ ಅಮೇರಿಕದೊಟ್ಟಿಂಗೆ 123 ಒಪ್ಪಂದ ಆತಿದಾ.,ಈಗ ಹೆರಂದಲೂ ಇಂಧನ ಬತ್ತು – ಒಪ್ಪಂದ ಮಾಡಿಕೊಂಡ ಒಟ್ಟು 14 ರಿಯಾಕ್ಟರುಗೊಕ್ಕೆ ಮಾತ್ರ.
ಪ್ರಕೃತಿಯ ವಿರುಧ್ಧ ಯೆವದೇ ಬದಲಾವಣೆಗೋ ಮಾಡಿರೂ ಅದಕ್ಕೆ ಪ್ರತಿಫಲ ಇಕ್ಕೇ, ಅಲ್ಲದೋ ? ಹಾಂಗೆ ಇಲ್ಲಿಯುದೇ ಕಡಮ್ಮೆ ಪ್ರಮಾಣಲ್ಲಿ ಘನ, ದ್ರವ ರೂಪದ ತ್ಯಾಜ್ಯಂಗಳೂ ಬತ್ತು.  ಆದರೆ ಪರಿಸರಕ್ಕೆ ತೊಂದರೆ ಆಗದ್ದ ಹಾಂಗೆ ಸರಿಯಾದ ವಿಲೇವಾರಿ ಮಾಡ್ಲೆ ವ್ಯೆವಸ್ತೆ ಇದ್ದು.
ಅಣುವಿಕಿರಣವುದೇ ತ್ಯಾಜ್ಯದ ಬಗ್ಗೆಯೂ ಗೊಂತಿಪ್ಪದಕ್ಕಿಂತ ಹೆಚ್ಚು ಉಹಾಪೋಹಂಗಳೇ ಇದ್ದು. ಸಾಮಾನ್ಯವಾಗಿ ಅಣು ವಿದ್ಯುತ್ ಕೇಂದ್ರಂದ ಸುತ್ತಮುತ್ತಲಿನ ಪರಿಸರಕ್ಕೆ ಯೇವದೇ ವಿಕಿರಣ ಬತ್ತಿಲ್ಲೆ. ಆದರೆ ವಿದ್ಯುದಾಗಾರಲ್ಲಿ ಕೆಲಸ ಮಾಡುವವಕ್ಕೆ ವಿಕಿರಣವ ತೆಕ್ಕೊಂಬಲೆ ಒಂದು ಮಿತಿ ಇರ್ತು. ಆ ಮಿತಿ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯ (ಐ.ಸಿ.ಆರ್.ಪಿ) ಸಂಶೋಧನೆಗೆ ಅನುಗುಣವಾಗಿ ಭಾರತಲ್ಲಿ ಅಣುಶಕ್ತಿ ಆಯೋಗ ಅಂಬಗಂಬಗ ನಿಗದಿ ಮಾಡ್ತು. ವಿಕಿರಣದ ಮಟ್ಟ ಅಳವಲೆ ಹಲವು ಉಪಕರಣಂಗೊ, ಮಾಪಕಂಗೊ ಇದ್ದು. ವಿಕಿರಣ ಇಪ್ಪಲ್ಲಿಗೆ ಹೋಪಗ ಮಾಪಕವ ಹಾಕಿಕೊಂಡು ಹೋಪ ಕ್ರಮ..ಅಲ್ಲಿ ಇಪ್ಪ ವಿಕಿರಣದ ಪ್ರಮಾಣ, ಕೆಲಸ ಮಾಡಿದ ಹೊತ್ತು, ವಿಕಿರಣ ಸೂಸುವ ಜಾಗೆಂದ ಇದ್ದ ದೂರಕ್ಕೆ ಅನುಗುಣವಾಗಿ ಹೋದವ ವಿಕಿರಣಕ್ಕೊಳಪಡ್ತ.
ನಿಘಂಟು ಇದರಿಂದಲೇ ಕ್ಯಾನ್ಸರ್ ಬಕ್ಕು ಹೇಳಿ ಇಲ್ಲೆ.. ರಿಯಾಕ್ಟರಿಲ್ಲಿ ಕೆಲಸ ಮಾಡದ್ದ ಎಷ್ಟು ಜೆನಕ್ಕೆ ಈಗ ಕ್ಯಾನ್ಸರ್ ಇಲ್ಲೆ? ಕಳುದ 40 ವರ್ಷಂದ ರಿಯಾಕ್ಟರಿಲ್ಲಿ ಕೆಲಸ ಮಾಡಿಕೊಂಡಿತ್ತಿದ್ದವು (ಮೊದಲಾಣ ರಿಯಾಕ್ಟರ್ ಶುರು ಆಗಿ ವರ್ಶ 42 ಆತು) ಎಲ್ಲಾ ಆರೋಗ್ಯಲ್ಲೇ ಇದ್ದವು. ವಿಕಿರಣಂದ ಕ್ಯಾನ್ಸರ್ ಬಪ್ಪ ಸಾಧ್ಯತೆ ಕೇವಲ ಪ್ರೊಬೇಬ್ಲಿಸ್ಟಿಕ್. ಇದು ವಿಕಿರಣದ ಪರಿಮಾಣ ಹೊಂದಿಕೊಂಡು ಇರ್ತು!
ಸಾಮಾನ್ಯವಾಗಿ ನವಗೆ ಕ್ಷ-ಕಿರಣ, ಸಿ.ಟಿ.ಸ್ಕ್ಯಾನ್ ಮಣ್ಣ ಮಾಡಿರೂ ವಿಕಿರಣ ತಟ್ಟುತ್ತು. ಪೋಕಿಲ್ಲದ್ದೆ ಅಪ್ಪಗ ಮಾಡುಸುತ್ತು ? ಆಲ್ಫ, ಬೀಟ, ಗಾಮಾ, ಕ್ಷ-ಕಿರಣ, ನ್ಯೂಟ್ರಾನು ಗಳಿಂದ ಬಂದ ವಿಕರಣಂಗೊ ದೇಹಲ್ಲಾಗಿ ಹೋಪಾಗ ನಮ್ಮ ಜೀವಕೋಶಂಗಳ ಹಾಳು ಮಾಡ್ತು. ಆದರೆ ದೇಹಲ್ಲಿ ಜೀವಕೋಶಂಗೊ ಪುನರುಜ್ಜೀವನ ಆವ್‍ತಾ ಇರ್ತು. ಇದರ ಮಿತಿ ಒಳವೇ ಇರೆಕು. ಅದಕ್ಕೇ ಕಾಯಿದೆ ಪ್ರಕಾರವೇ ವಿಕಿರಣಕ್ಕೊಳಪಡ್ಲೆ ಅನುಮತಿ..ಇಲ್ಯಾಣ ಕೆಲಸದವಕ್ಕೆ.
~~~~***~~~~
ಎಲ್ಲೊರಿಂಗೂ ಯೋಜನೆಯ ಉದ್ದೇಶ ಮುಟ್ಟುಸಲೆ ಪ್ರಯತ್ನ ನಿರಂತರ ನೆಡೆತ್ತು. ಶಾಲೆ ಮಕ್ಕೊಗೆ (12 ವರ್ಷಂದ ಮೇಲಾಣವು), ಆಸಕ್ತಿ ಇಪ್ಪವು ಆರುದೇ ಇಲ್ಲಿ ಬಂದು ನೋಡ್ಲಕ್ಕು. (ನಿರ್ದೇಶಕರ ಒಪ್ಪಿಗೆ ತೆಕ್ಕೊಂಡು) ಬೈಲಿನವಕ್ಕೆ ಆನು ಹೇಳಿಕೆ ಕೊಡ್ತಾ ಇದ್ದೆ, ಎಲ್ಲೋರು ಬನ್ನಿ. ಬಂದವಕ್ಕೆ ತೊರುಸಲೆ ರಿಯಾಕ್ಟರಿನ ಮಾದರಿ ಎಲ್ಲ ಇದ್ದು. ಎಲ್ಲಾ ವಿವರಣೆಗೊ ಬಂದವಕ್ಕೆ ಕೊಡ್ತು. ಆದರೆ ರಿಯಾಕ್ಟರ್ ಒಳ ಹೋಪೋ° ಹೇಳಿರೆ ಎಡಿಯ..ಕಾರಣ ವಿಕಿರಣವ ಕಾರಣಸಹಿತವಾಗಿ ಎಷ್ಟು ಕಮ್ಮಿ ತೆಕ್ಕೊಂಬಲೆ ಎಡಿಗೋ ಅಷ್ಟು ಕಮ್ಮಿ ಮಾಡುವ ಧ್ಯೇಯಂದ.,
~~~~***~~~~
ಇಲ್ಯಾಣ ಉದ್ಯೋಗಿಗೊಕ್ಕೆ ಇಪ್ಪಲೆ ಕೈಗಾಂದ 16 ಕಿ.ಮೀ ದೂರದ ಮಲ್ಲಾಪುರಲ್ಲಿ ಬೇಕಾದ ಎಲ್ಲಾ ವ್ಯೆವಸ್ತೆ ಮಾಡಿ ಕೊಟ್ಟಿದು., ನಿಗಮ. ಮಲ್ಲಾಪುರಂದ ನಿತ್ಯ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಗೆ ಬಸ್ಸು ಸೌಕ‍ರ್ಯ ಇದ್ದು. ಕೊಡೆಯಾಲ, ಗೋವಾಕ್ಕೆ ರೈಲು ಇದ್ದು-ಕಾರವಾರಂದ. ಈಗ ರೈಲು ಬೆಂಗ್ಳೂರಿಂಗೂ ಹೋವ್‍ತಡ..
ಆಣು ವಿದ್ಯುತ್ ಅಯೋಗ, BARC  ಪ್ರತಿ ವರ್ಷ 100 ರಿಂದ 200 ಜೆನರಿಂಗೆ ಉದ್ಯೋಗ ಕೊಡ್ತು. ವಿಜ್ಞಾನಲ್ಲಿ ಅಥವಾ ಇಂಜಿನಿಯರಿಂಗ್‍ಲ್ಲಿ ಪದವಿ, ಸ್ನಾತಕೊತ್ತರ ಪದವಿ ಆದವು ಅರ್ಜಿ ಹಾಕುಲಕ್ಕು. ಜುಲೈ-ಅಗೋಸ್ತು ತಿಂಗಳಿಲ್ಲಿ ದಿನಿಗೇಳ್ತವು. ಸಂಶೋಧನೆ, ವಿದ್ಯುತ್ ಉತ್ಪಾದನೆ, ಅಣು ಇಂಧನ ಪರಿಷ್ಕರಣೆ, ವಿಶೇಷ ಲೋಹ ತಯಾರಿ ಇತ್ಯಾದಿ.. ಕ್ಷೇತ್ರಂಗಳಲ್ಲಿ ಕೆಲಸ ಮಾಡ್ಳೆ ಅವಕಾಶ ಇದ್ದು. ನಮ್ಮವು ಆರೂ ಬಪ್ಪದು ಕಾಣ್ತಿಲ್ಲೆ. ಬಹುಶಃ ಬೆಂಗ್ಳೂರಿಲ್ಲೇ ಐ.ಟಿ/ಬಿ.ಟಿ ಹೇಳಿ ಹೋವ್ತವಾಯಿಕ್ಕು..
ಒಂದೊಪ್ಪ:
ಶಕ್ತಿಯ ಒಳುಶಿರೂ ಉತ್ಪಾದಿಸಿದಷ್ಟೇ ಫಲ..ಹಾಂಗಾಗಿ ನಾವೆಲ್ಲರೂ ಕರೆಂಟಿನ ಕಡಮ್ಮೆ ಉಪಯೋಗ ಮಾಡುವೋ, ಹೆಚ್ಚೆಚ್ಚು ಸೋಲಾರ್ ಶೆಕ್ತಿಯ ಉಪಯೋಗ ಮಾಡುವೋ.
ಪಟಂಗೊ:
ಕೈಗಾಲ್ಲಿ ಅನು(ಣು)ಸಂಧಾನ…., 5.0 out of 10 based on 3 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಹೇ ಕುಮಾರಣ್ಣ, ಇಷ್ಟು ವಿಷಯ ಎಲ್ಲಿಂದ ಹೊತ್ತೊಂಡು ಬಂದದು ಮಾರಾಯರೆ! ಕೂದು ಬರವಲೆ ಸುಮಾರು ಹೊತ್ತು ಹಿಡುದಿಕ್ಕು ಅಪ್ಪೋ.

  ಚೊಕ್ಕ ಆಯ್ದು ಆತೋ. ಅರ್ಥ ಆತು. ಎಂತರ ಕೇಳಿರೆ ಇನ್ನೊಂದರಿ ಓದಿಕ್ಕಿ ಹೇಳ್ತೆ ಆತೋ.

  ಈಗಂಗೆ ಒಂದು ಒಪ್ಪ.

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಒಪ್ಪ ಕೊಟ್ಟದಕ್ಕೆ ಧನ್ಯವಾದ ಭಾವ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಉ೦ಡೆಮನೆ ಭಾವನ ಶುದ್ದಿ ಓದಿ ಸುಮಾರು ಹೊಸ ವಿಷಯ ಸಿಕ್ಕಿತ್ತು.ಧನ್ಯವಾದ ಭಾವ.
  ಹೋಮಿ ಬಾಬ ಐವತ್ತು ವರುಷ ಮದಲೇ ಮಾಡಿದ ಮು೦ದಾಲೋಚನೆಯ ಫಲ ಅಲ್ಲದೋ ಇ೦ದು ನಮ್ಮ ದೇಶ ಅಣು ವಿದ್ಯುತ್ ನ ತಯಾರು ಮಾಡುವ ಸಾಮರ್ಥ್ಯ ಪಡವ ಹಾ೦ಗೆ ಆತು.ಕೈಗಾದ ಅಣುವಿದ್ಯುತ್ ಸ್ಥಾವರಕ್ಕೆ ವಿರೋಧ ಇದ್ದರೂ ಈಗ ಯಶಸ್ವಿಯಾಗಿ ನೆಡೆತ್ತಾ ಇದ್ದು ಹೇಳಿ ಅಪ್ಪಗ ಸ೦ತೋಷ ಆವುತ್ತು.
  ಶಕ್ತಿಯ ಒಳುಶಿರೆ ಉತ್ಪಾದಿಸಿದಷ್ಟೆ ಫಲ ಹೇಳುವ ಮಾತು ಕೊಶಿ ಕೊಟ್ಟತ್ತು.ನಾವು ಪ್ರಾಕೃತಿಕ ಸ೦ಪನ್ಮೂಲ೦ಗಳ ಎಡಿಗಾದಷ್ಟು ಉಳಿತಾಯ ಮಾಡಿ ನಮ್ಮ ಮು೦ದಾಣ ಪೀಳಿಗೆಗೂ ಸಿಕ್ಕುವ ಹಾ೦ಗೆ ಮಾಡುಲೆ ಪ್ರಯತ್ನ ಮಾಡೆಕ್ಕು.
  ಅಣುವಿದ್ಯುತ್ ತ೦ತ್ರಜ್ಞಾನದ ಸ್ಥೂಲ ಮಾಹಿತಿಯ ಚೆ೦ದಕೆ ವಿವರುಸಿದ್ದಿ.ವೈಜ್ಣಾನಿಕ ಲೇಖನ೦ಗಳ ನಮ್ಮ ಭಾಷೆಲಿ ಬರೆತ್ತಾ ಇರಿ,ಶರ್ಮಪ್ಪಚ್ಚಿಯ ಹಾ೦ಗೆ.

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಒಪ್ಪಕ್ಕೆ ಧನ್ಯವಾದ ಭಾವ

  [Reply]

  VA:F [1.9.22_1171]
  Rating: 0 (from 0 votes)
 3. ಅರ್ಗೆ೦ಟು ಮಾಣಿ
  ಅರ್ಗೆ೦ಟು ಮಾಣಿ

  ಅಣ್ಣಾ ಲಾಯ್ಕ ಆಯ್ದು. ಬಹಳಷ್ಟು ಮಾಹಿತಿ ಸಿಕ್ಕಿತ್ತು ನಿ೦ಗಳ ಈ ಲೇಖನ೦ದ :). ಹೀ೦ಗೇ ಬರೆತ್ತಾ ಇರಿ.
  ಹಾ೦ಗಾರೆ ಬೋ೦ಬು ಇಲ್ಯೊ ಅಲ್ಲಿ?(ತಮಾಶೆಗೆ)

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಅಣು ವಿದ್ಯುತ್ ಸ್ಥಾವರದ ಬಗ್ಗೆ ಬೆಳಕು ಚೆಲ್ಲಿದ ಲೇಖನ, ಲಾಯಕಾಯಿದು. ಒಳ್ಳೆ ಮಾಹಿತಿ ಕೊಟ್ಟತ್ತು. ಅಂಬಗ, ಕೈಗಾದ ಅಣು ವಿಕಿರಣಕ್ಕೆ ನಾವು ಹೆದರೆಕು ಹೇಳಿ ಇಲ್ಲೆ. ಪೂರಕವಾಗಿದ್ದ ಪಟಂಗಳು ಚೆಂದ ಬಯಿಂದು.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಾವೂ ಕೈಗಾಕ್ಕು ಹೆದರೆಕ್ಕಾದ್ದಿಲ್ಲೆ ಬೇಳಕ್ಕೂ ಹೆದರೆಕ್ಕಾತಿಲ್ಲೆ. ಆದರೆ ಎಂತ….. – ಇದು ಭಾರತ ಆಗಿಹೊತು. ಮಾರ್ಗಲ್ಲೇ ಹೆಗ್ಳ ಕಂಡತ್ತಿಲ್ಲ್ಯೋ ಮನ್ನೆ. ಗೋಡೆ ಕರೇಲಿ ಮಾಟೆ ಮಾಡಿರೆ?!!

  ಮತ್ತೆ ಪ್ರಕೃತಿ ವಿಕೋಪಕ್ಕೆ ಜಪಾನೂ ತತ್ತರಿಸಿದ್ದು ನಾವೂ ಕಂಡತ್ತೀಗ ಅಲ್ಲದೋ ಬೊಳುಂಬು ಮಾವ.

  [Reply]

  VA:F [1.9.22_1171]
  Rating: 0 (from 0 votes)
 5. ವೆಂಕಟೇಶ

  ಹೀಂಗಿಪ್ಪದರ ಒಂದರಿ ನೋಡೆಕ್ಕಾತನ್ನೇ..ಯಾವಾಗ ಹೋಪದು?

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ನಿಂಗಳ ಪುರುಸೊತ್ತು..

  [Reply]

  VA:F [1.9.22_1171]
  Rating: 0 (from 0 votes)
  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಂಬಾಗ ಅಲ್ಲಿ ಹೋಪಗ ಈ ಆನೆ ಎಂತ ಮಾಡೋದು? ಅಲ್ಲಾ ಅದರಲ್ಲಿ ಯೇರಿಗೊಂಡೇ…? !ತೊಂದರೆ ಇಲ್ಲೆ ಅಪ್ಪೋ . ಮಾರ್ಗದ ಎರಡೂ ಕಡೇಲಿ ಜೆನ ಸಾಲು ಗಟ್ಟಿ ನಿಂಗಪ್ಪೋ!! ಎಂತಕೂ ಒಂದು ಚೀಲ ಕೈಲಿ ಇರಲಿ ಭಾವ.

  [Reply]

  VA:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕುಮಾರ,
  ಅಣುಸ್ಥಾವರದ ಬಗ್ಗ್ಗೆ, ಅದರ ಹಿನ್ನೆಲೆ, ಕಾರ್ಯ ಎಲ್ಲವನ್ನೂ ತುಂಬ ವೈಜ್ಞಾನಿಕ ವಿವರಂಗಳೊಟ್ಟಿಂಗೆ ಕೊಟ್ಟದಕ್ಕೆ ಧನ್ಯವಾದಂಗೊ.
  ನಮ್ಮ ಭಾಷೆಲಿ ಹೀಂಗಿಪ್ಪ ವೈಜ್ಞಾನಿಕ ವಿವರಂಗಳ ಕೊಡ್ಲೆ ತುಂಬಾ ಪ್ರಯತ್ನ ಬೇಕಾವ್ತು.
  (ಪಿ.ಯಚ್.ಡಬ್ಲು.ಆರ್) ಹೇಳಿರೆ ಎಂತ ಹೇಳಿ ತಿಳಿಶುತ್ತಿರಾ?
  ದಿನಕ್ಕೆ 5.28 ದಶಲಕ್ಷ ವಿದ್ಯುತ್ ಉತ್ಪಾದನೆ ಮಾಡ್ಲೆ 100 ಕಿಲೋ ಸ್ವಾಭಾವಿಕ ಯುರೇನಿಯುಮ್ ಸಾಕು. ಎಷ್ಟೊಂದು ಶಕ್ತಿ ಇದ್ದಲ್ಲದಾ!!

  [Reply]

  ಉಂಡೆಮನೆ ಕುಮಾರ°

  ಉಂಡೆಮನೆ ಕುಮಾರ° Reply:

  ಧನ್ಯವಾದ ಅಪ್ಪಚ್ಚಿ..

  ರಿಯಾಕ್ಟರ್ ಲ್ಲಿ BWR (Boiling Water Reactor), VVER/LWR (Light Water Reactor)
  PHWR (Pressurized Heavy Water Reactor), FBR (Fast Breedar Reactor) ಹೇಳಿ ಇದ್ದು. PHWR ಲಿ ವಿದಳನ ಕ್ರಿಯೆಲಿ ಬಿಡುಗಡೆ ಆದ ಶಾಖ ವರ್ಗಾವಣೆಗೆ (Prymary Heat Transport) ಮತ್ತೆ ನ್ಯೂಟ್ರನಿನ ವೇಗ ಕಮ್ಮಿ ಮಾಡ್ಲೆ (Moderator) ಭಾರಜಲ (D2O) ಉಪಯೋಗುಸುತ್ತವು. BWR, LWR ಲ್ಲಿ (H2O) ಉಪಯೋಗುಸುತ್ತವು. ಆದರೆ ಅವುಗಳಲ್ಲಿ ಇಂಧನ enriched uranium.

  [Reply]

  VA:F [1.9.22_1171]
  Rating: +1 (from 1 vote)
 7. ಗೋಪಾಲಣ್ಣ
  Gopalakrishna BHAT S.K.

  ತುಂಬಾ ಒಳ್ಳೆ ಲೇಖನ.
  ಇದರ ವಿರೊಧಿಸಲೆ ಕಾರಂತರು ಓಟಿಂಗೆ ನಿಂದದು ಹೇಳಿ ಕಾಣುತ್ತು.
  ಜಪಾನಿಲಿ ಬಂದ ಹಾಂಗಿಪ್ಪ ಭೂಕಂಪ ಬಂದರೆ ಇಂತಾ ಸ್ಥಾವರ ಒಳಿವ ಹಾಂಗೆ ಎಂತ ವ್ಯವಸ್ಥೆ ಇದ್ದು-ಹೇಳಿ ತಿಳಿಸುತ್ತೀರಾ?

  [Reply]

  VA:F [1.9.22_1171]
  Rating: 0 (from 0 votes)
 8. ಈಚ ಭಾವ
  ಬೆತ್ತಸರವು ಈಚ ಭಾವ..

  ಕುಮಾರ ಮಾವ.. ಭಾರೀ ಲಾಯ್ಕಾದು ಬರದ್ದು… ಹೊಸ ತಂತ್ರಜ್ಞಾನ ಎಂತ ಬಂಯ್ದು ಹೇಳಿಕ್ಕಿ.. ಇನ್ನಾಣ ಸರ್ತಿ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮವೇಣೂರಣ್ಣಶೇಡಿಗುಮ್ಮೆ ಪುಳ್ಳಿಜಯಶ್ರೀ ನೀರಮೂಲೆಗೋಪಾಲಣ್ಣನೀರ್ಕಜೆ ಮಹೇಶಅನು ಉಡುಪುಮೂಲೆಶ್ಯಾಮಣ್ಣದೀಪಿಕಾಸಂಪಾದಕ°ಕೇಜಿಮಾವ°ಹಳೆಮನೆ ಅಣ್ಣರಾಜಣ್ಣಮಾಲಕ್ಕ°ದೊಡ್ಮನೆ ಭಾವಅಡ್ಕತ್ತಿಮಾರುಮಾವ°ಕಾವಿನಮೂಲೆ ಮಾಣಿಪುತ್ತೂರುಬಾವಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆಡಾಗುಟ್ರಕ್ಕ°ದೇವಸ್ಯ ಮಾಣಿಪವನಜಮಾವವಿಜಯತ್ತೆಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ