ಬರದೋರು :   ಗಣೇಶ ಮಾವ°    on   10/07/2010    13 ಒಪ್ಪಂಗೊ

ಗಣೇಶ ಮಾವ°

ವೈದಿಕ ಶಾಸ್ತ್ರಲ್ಲಿ ಕಲಶ ಪೂಜೆಗೆ ಅತ್ಯಂತ ಮಹತ್ವ ಇದ್ದು.
ದೇವತಾ ಚೈತನ್ಯವ ನಾವು ಮೂರ್ತಿ,ಅಗ್ನಿ,ಮಂಡಲ ಮತ್ತೆ ಕಲಶಂಗಳಲ್ಲಿ ನಮ್ಮ ಹಿರಿಯರು ಆರಾಧನೆ ಮಾಡುವ ಪದ್ಧತಿ ಇಂದಿನ ವರೆಗೆ ಅನೂಚಾನವಾಗಿ ಬೆಳಕ್ಕೊಂಡು ಬಯಿಂದು.
ಇದರ ಆರಾಧನೆಲಿ ರಜ್ಜ ಲೋಪದೋಷ ಬಂದರೂ ಅದರ ಪರಿಣಾಮ  ಬೇರೆ ಆಗಿರ್ತು- ಹೊಟ್ಟೆ ಬೇನೆಗೆ ಜ್ವರದ ಮಾತ್ರೆ ತಿಂದ ಹಾಂಗೆ.
ಹಾಂಗಾದ ಕಾರಣ ಅದರ್ಲಿ ಸುದಾರ್ಸುವದು ಹೇಳಿ ಗೊಂಡು ಕುರೆಕಟ್ಟಿದರೆ ಅದರ ಫಲಲ್ಲಿಯೂ ವ್ಯತ್ಯಾಸ ಆವ್ತು ಖಂಡಿತಾ..!!!
ಹಾಂಗಾದ ಕಾರಣ ನಾವು ದೇವರ ಚೈತನ್ಯವ ನಮ್ಮ (ಮನುಷ್ಯ )ರೂಪಕ್ಕೆ ಕಲ್ಪನೆ ಮಾಡಿಗೊಂಡು ಆರಾಧನೆ ಮಾಡಿದರೆ ಜೀವ ದೇವರ (ಸಂಪರ್ಕ)ಸಂಬಂಧ ಆವ್ತು.

ಕಾಯಾರದ ಬಟ್ಟಮಾವ ಕಲಶ ಪೂಜೆ ಮಾಡುವದು
ಕಾಯಾರದ ಬಟ್ಟಮಾವ ಕಲಶ ಪೂಜೆ ಮಾಡುವದು

ಅದು ಹೇಂಗೆ ಹೇಳಿರೆ ಸ್ವಿಚ್ಚು ಹಾಕಿಯಪ್ಪಗ ಕರೆಂಟು ವಯರಿಲಿ ಹೋಗಿ ಹೇಂಗೆ ಬಲ್ಬು ಹೊತ್ತುತ್ತೋ ಹಾಂಗೆ ನಮ್ಮಲ್ಲಿಪ್ಪಂತಹ ಭಾವನೆಯೆಂಬ (infrared ray) ಚೈತನ್ಯವ ದರ್ಭೆಯ  ಮೂಲಕ ಕಲಶಕ್ಕೆ ಸಂಪರ್ಕ ಮಾಡಿಯಪ್ಪಗ ಅಲ್ಲಿ ಜೀವ ದೇವರ ಸಂಬಂಧ ಆವ್ತು. ಆ ಕಲಶವ ಸ್ನಾನ,ಪ್ರೋಕ್ಷಣೆಗಳ ಮೂಲಕ ನಾವು ಉಪಯೋಗಿಸಿಗೊಂಬಗ ನಮ್ಮಲ್ಲಿ ಚೈತನ್ಯ ವೃದ್ಧಿ ಆವ್ತು..ಇದನ್ನೇ ಶಾಂತಿ ಹೇಳಿ ಹೇಳುವದು..ಇದರ ವಿಧಂಗ ಸುಮಾರು ರೀತಿಲಿ ಇದ್ದು..ಸಂಧಿ ಶಾಂತಿ,ಗ್ರಹ ಶಾಂತಿ ಮೃತ್ಯುಂಜಯ ಶಾಂತಿಹೇಳಿ ಹಲವು ಹೆಸರುಗಳ ಮೂಲಕ ನಾವು  ಶಾಂತಿಯ ಮಾಡ್ತು. ಹಾಂಗೆಲ್ಲ ಇಪ್ಪಗ ಕಲಶ ಹೆಂಗಿರೆಕ್ಕು ಹೇಳಿ ಈ ಮುಂದಾಣ ಶ್ಲೋಕದ ಮೂಲಕ ವಿವರಣೆ ಕೊಡ್ತೆ.
ಪದ್ಮಂ ಯದ್ಗೃಹಮುಚ್ಯತೇ ಪದಯುಗಂ ಶಾಲೀ ತಥಾ ತಂಡುಲಂ
ಜಾನೂದ್ವೌ  ಕೂರ್ಚಲಿಂಗೇ ಘಟಮಪಿಚ ತನುಃ ಚರ್ಮ ವಸ್ತ್ರೇಚ ನಾಡ್ಯಃ|
ತಂತುಂ ತನ್ಮಾಂಸಯುಕ್ತಂ ಜಲಮಪಿಚ ರುಧಿರಂ ಸ್ವರ್ಣಕಂ ಪ್ರಾಣರೂಪಂ
ರತ್ನಾನ್ಯ ಸ್ಥೀನಿ ಚಾಸ್ಯುಃ ಫಲಮಪಿಚ ಶಿರಃ ಕೂರ್ಚಾನಾಂ ಕೇಶಜಾಲಾ: ||

ಅಷ್ಟದಳ ಪದ್ಮ ಮಂಡಲವ ಭೂಮಿ ಮೇಲೆ  ಬರದು ಅದರಮೇಲೆ ಅಕ್ಕಿಯ ಹಾಕಿ, ಎರಡು ದರ್ಭೆಯ ಕೂರ್ಚೆಯ ಮಡುಗಿ, ಮತ್ತೆ ಕಲಶ ಪಾತ್ರವ ಮಡುಗೆಕ್ಕು.
ಮತ್ತೆ ಓಶಧಿಯುಕ್ತ ನೀರಿನ (ಕೆತ್ತೆ ಕಷಾಯ) ಕಲಶ ಪಾತ್ರಕ್ಕೆ ಹಾಕೆಕ್ಕು. ಮತ್ತೆ ಸ್ವರ್ಣ ಹಾಕಿ ಕಲಶದ ಮೇಲೆ ತೆಂಗಿನಕಾಯಿ ಮಡುಗೆಕ್ಕು. ಅದರ ಮೇಲೆ ವಸ್ತ್ರ ಮಡುಗಿ ವಸ್ತ್ರದ ಮೇಲೆ ಪುನಃ ರತ್ನವ ಮಡುಗಿ ಐದರ ಕೂರ್ಚೆ ಅಥವಾ ೧೮, ಅಲ್ಲದ್ರೆ ೧೦೮  ಮಡುಗೆಕ್ಕು.
ಇಷ್ಟು ಮಾಡಿಯಪ್ಪಗ ಕಲಶ ಹೇಳುವದು ಪೂರ್ತಿ ಆವ್ತು.
ಇದರ ಬಗ್ಗೆ ರಜ್ಜ ವಿವರಣೆ ಕೊಡ್ತೆ. ಮಂಡಲ ಹೇಳುವದು ದೇವರ ಮನೆ, ಅಕ್ಕಿಲಿ ಪಾದ,ಅದರ ಮೇಲೆ ಮಡುಗಿದ ಎರಡು ದರ್ಭೆಯ ಕೂರ್ಚೆ ದೇವರ ಕಾಲು, ಕಲಶ ಪಾತ್ರೆ ಶರೀರ, ಓಶಧಿ ಕೆತ್ತೆ=ಅತ್ತಿ, ಇತ್ತಿ(ಕಿನ್ನಿಗೋಳಿ) ಗೋಳಿ, ಅಶ್ವತ್ಥ, ಪಾಲಾಶ ಇದಕ್ಕೆ ಪಂಚ ಪಲ್ಲವಂಗ ಹೇಳಿ ಹೇಳ್ತವು.
ಮನುಷ್ಯನ ಶರೀರ ನಿರ್ಮಾಣಲ್ಲಿಯೂ ಪಂಚಭೂತಂಗಳ ಸಾಂಕೇತಿಕವಾಗಿ ಪಂಚ ಇಂದ್ರಿಯಂಗ ಇರ್ತಲ್ಲದಾ!!
ಹಾಂಗೆ ಈ ಪಂಚೇಂದ್ರಿಯದ  ಸಾಂಕೇತಿಕವಾಗಿ ಪಂಚಪಲ್ಲವಂಗ.
ಆ ಕಷಾಯ ರಕ್ತ(ನೆತ್ತರು), ಸ್ವರ್ಣ ಪ್ರಾಣರೂಪ, ತೆಂಗಿನಕಾಯಿ ಶಿರಸ್ಸು, ಮತ್ತೆ ಅದರ ಮೇಲೆ ಮಡುಗಿದ ಕೂರ್ಚೆ ಕೂದಲು.. ಇಂತಹ ಭಾವನೆಯ ನಾವು ಕಲಶಲ್ಲಿ ಕಾಣೆಕ್ಕು.
ಮತ್ತೂ ಕಲಶದ ಬಗ್ಗೆ ಬಟ್ಟಮಾವ ಹೇಳ್ತವು.
ಕಲಶಸ್ಯ ಮುಖೇ  ವಿಷ್ಣುಃ, ಕಲಶದ ಮೋರೆಲಿ ವಿಷ್ಣು, ಕೊರಳಿಲಿ ಶಿವ ಕಲಶದ ಕೆಳ ಬ್ರಹ್ಮ.
ಹೀಂಗೆ ತ್ರಿಮೂರ್ತಿ ಸ್ವರೂಪಲ್ಲಿಯೂ ಕಲಶವ ಆರಾಧನೆ ಮಾಡುವ ಪದ್ಧತಿ.
ನಾಲ್ಕು ವೇದಂಗ, ವೇದ ಮಾತೆಗ ಗಾಯತ್ರೀ, ಸಾವಿತ್ರೀ, ನಮ್ಮ ದೇಶಲ್ಲಿ ಹರಿವ ಗಂಗಾ, ಯಮುನಾ, ನರ್ಮದಾ, ಗೋದಾವರೀ, ಸರಸ್ವತೀ, ಸಿಂಧೂ, ಕಾವೇರಿ – ಇಷ್ಟು ಪುಣ್ಯ ನದಿಗಳ ಕಲಶಲ್ಲಿ ಪ್ರಾರಂಭಿಕವಾಗಿಯೇ ಆರಾಧನೆ ಮಾಡ್ತು.
ಬಟ್ಟಮಾವ  ನಮ್ಮತ್ರೆ “ಮಮ“ಹೇಳು  ಹೇಳಿ ಹೇಳ್ತವು.
ನವಗೆ ಅಷ್ಟೇ ಗೊಂತು. ಮತ್ತೆ ಇದರ ಅರ್ಥ ತಿಳುಸೆಕ್ಕು ಹೇಳಿ ಕೇಳಿದೆ. ಅಂಬಗ ಇದರ ಬಗ್ಗೆ ಹೀಂಗೆ ಹೇಳಿದವು..
ಇನ್ನು ಬಟ್ಟ ಮಾವನ ಹತ್ರೆ ಹೀಂಗಿಪ್ಪ ಅಮೂಲ್ಯ ವೈದಿಕ ವಿಚಾರಂಗ ಕೇಳಿ ತಿಳುದು ಹೇಳ್ತೆ.
ಕೇಟತ್ತೋ??
ಏ…??

13 thoughts on “ಕಲಶ

  1. namma hiriyaru nirina bagge yestondu pujaniya bhavaneli ittiddavu heli Gonthavtallada Ganeshamava ???

  2. ಗಣೇಶಣ್ಣ, ಲಾಯ್ಕ ಬರದ್ದಿ. ಇನ್ನುದೆ ಹೀಂಗಿಪ್ಪ ವಿಷಯಂಗಳ ಬರೆಯಿರಿ.ಯೆಲ್ಲರಿಂಗೂ ತುಂಬಾ ಉಪಯೋಗ ಆವುತ್ತು …

  3. ಕಲಶ ಸ್ಥಾಪನೆ ಮಾಡಿ ಬಟ್ಟ ಮಾವ ಹೇಳ್ತ “ಉದಕ ಶಾಂತಿ ” ಪ್ರಯೋಗ ಮಂತ್ರಂಗೋ ಅತ್ಯಂತ ಸ್ವಾರಸ್ಯ ಪೂರ್ಣವಾಗಿದ್ದು . ಅದರಲ್ಲಿ ಬಪ್ಪ ವಿವಿಧ ಮಂತ್ರ ಸಮುಚ್ಚಯಂಗೋ ಪಾರಾಯಣ ಮಾಡುಲೆ ಹಾಂಗೆ ಕೆಳುಲೇ ಕೊಶಿ ಅವುತ್ತು.

  4. ದೇವರ ಚೈತನ್ಯಕ್ಕೆ ಮನುಷ್ಯರ ರೂಪ ಕಲ್ಪಿಸಿ, ಕಲಶಲ್ಲಿ ದೇವರ ಸ್ವರೂಪವ ಕಾಂಬದು, ಅದಕ್ಕೆ ಪೂಜೆ ಮಾಡುವದು, ಕಲಶ ಸ್ನಾನ ಮಾಡುವದು…. ಹಿಂದಾಣವರ ಅಲೋಚನೆಗೊ ಯಾವ ಎತ್ತರಲ್ಲಿ ಇತ್ತಿದ್ದು ಹೇಳಿ ಗೊಂತಾವುತ್ತು. ಇದರ ಬಗ್ಗೆ ವಿವರಣೆ ಕೊಟ್ಟದು ಲಾಯಿಕ್ ಆಯಿದು. ಹೀಂಗಿಪ್ಪ ವಿಶಯಂಗೊ ಇನ್ನೂ ಬರೆತ್ತಾ ಇರಿ. ನಮ್ಮವಕ್ಕೆ ಇದರ ಬಗ್ಗೆ ತಿಳುವಳಿಕೆ ಮೂಡಲಿ.

  5. ಗಣೇಶ ಮಾವ°,
    ಕಲಶಕ್ಕೆ ಬೇಕಾದ ಪಾತ್ರ ಯಾವ ಲೋಹಂದ ತಯಾರಾದ್ದದು ಆಯೆಕಡ?

    1. ಚಿನ್ನ,ಬೆಳ್ಳಿ,ತಾಮ್ರ~ಸಾತ್ವಿಕ = ದೇವರ ಪೂಜೆಗೆ
      ಮಣ್ಣಿನ ಕಲಶ ~ರಾಜಸ = ಭೂತಂಗೊಕ್ಕೆ
      ಕಬ್ಬಿಣ,ಸ್ಟೀಲು ~ತಾಮಸ =ದೋಷ ನಿವೃತ್ತಿಗೆ,ಮಂತ್ರವಾದ ದ ಉಪಯೋಗಕ್ಕೆ

  6. ನಾವು.., ನಮ್ಮ ಎಲ್ಲಾ ವೈದಿಕ ಕ್ರಿಯೆಲಿ ಕಲಶ ಮಡುಗುದು ಕಾಣ್ತು.. ಅದರ ಉದ್ದೇಶವ ಆರೂ ಬಿಡುಸಿ ಹೇಳ್ತವಿಲ್ಲೇ… ಗಣೇಶ ಮಾವ° ಹೇಳಿದ ಹಾಂಗೆ ಬಟ್ಟಮಾವ° ಹೇಳುವಾಗ ‘ಮಮ’ ಹೇಳಿ.. ಅವು ಹೇಳಿದ ಹಾಂಗೆ ಮಾಡಿದರೆ ಆತು… ನಿಂಗೊ ಕಲಶದ ಬಗ್ಗೆ ಹೇಳಿದ ಕಾರಣ ಇದೊಂದು ಲಾಯ್ಕಲ್ಲಿ ಗೊಂತಾತದಾ… ಇನ್ನು ನಮ್ಮ ಲ್ಲಿ ಕಾರ್ಯಕ್ರಮ ಅಪ್ಪಗ ಕಲಶದ ಬಗ್ಗೆದೆ ಎಂಗಳೆಲ್ಲರ ಗಮನ ಇಕ್ಕಲ್ಲದಾ? ಹೀಂಗೆ ನಮ್ಮ ವೈದಿಕ ಕ್ರಮಲ್ಲಿ ಬಪ್ಪ ಎಲ್ಲಾ ವಿಧಾನಂಗಳದ್ದೂ ಬಟ್ಟ ಮಾವನ ಹತ್ತರೆದೆ ಕೇಳಿಗೋನ್ದು ವಿವರಣೆ ಕೊಡಿ ಗಣೇಶ ಮಾವ° ಆತಾ…

  7. ಆಯುರ್ವೇದಲ್ಲಿ ಪಂಚವಲ್ಕಲಕ್ಕೆ ತುಂಬಾ ಪ್ರಾಮುಖ್ಯತೆ ಇದ್ದು. ಪಂಚವಲ್ಕಲಂದ ಮಾಡಿದ ಕಷಾಯ ಚರ್ಮರೋಗಂಗಳ ಗುಣ ಮಾಡುತ್ತು.. ಮೈಲಿ ತೊರ್ಸಿ ಸಣ್ಣ ಸಣ್ಣ ದಡಿಕ್ಕೆ ಬಂದಿದ್ದರೆ ಪಂಚವಲ್ಕಲ ಕಷಾಯಲ್ಲಿ ದಿನಕ್ಕೆ ೨-೩ ಸರ್ತಿ ತೊಳದರೆ ಉಪಕಾರ ಆವುತ್ತು… ವೈದಿಕ ಶಾಸ್ತ್ರಂಗಳ ಈಗಾಣೋರು ಗೊಡ್ದು ಸಂಪ್ರದಾಯಂಗೊ ಹೇಳ್ತವು.. ಆದರೆ ಅದು ಸತ್ಯ ಅಲ್ಲ.. ಪ್ರತಿಯೊಂದು ಸಂಪ್ರದಾಯಂಗಳಲ್ಲಿಯೂ ಎಂತಾರು ಒಂದು ಅರ್ಥ ಇದ್ದೇ ಇರ್ತು.. ಕಲಶ ಮೀವದು ಶುದ್ದೀಕರಣಕ್ಕಾದರೂ ಕಲಶದ ಓಷಧಿ ನೀರು ಚರ್ಮ ರೋಗ ಬಪ್ಪದರ ತಡೆತ್ತು.. ಇದೇ ರೀತಿ ನರಕಚತುರ್ದಶಿ ಸಮಯಲ್ಲಿ ಎಣ್ಣೆ ಕಿಟ್ಟಿ ಮೀವ ಮೊದಲು ನೀರಿನ ಮಂಡಗೆಗೆ ಈ ಕೆತ್ತೆಗಳ ಹಾಕಿ ನೀರು ಕಾಸುತ್ತವು..ಈ ನೀರಿಲಿ ಮಿಂದರೆ ಚರ್ಮಕ್ಕೆ ತುಂಬಾ ಒಳ್ಳೆದು… 🙂

  8. ಇದರ ಓದಿ ಅಪ್ಪಗ ಆನು ಕಲಶ ಮಿಂದದು ನೆಂಪಾತು… ಗಣೇಶ ಮಾವ ಲಾಯಿಕ್ಕಲಿ ಬರದ್ದಿ..
    ಎನಗೊಂದು ಸಂಶಯ.. ಕಲಶಕ್ಕೆ ಹಾಕುವ ಓಷಧಿ ಕೆತ್ತೆಗೊಕ್ಕೆ ಪಂಚ ವಲ್ಕಲ ಹೇಳಿ ಹೇಳುದಲ್ಲದಾ?? ಪಂಚ ವಲ್ಕಲ(೫ ನಮುನೆಯ ಕೆತ್ತೆಗೊ) ಹೇಳಿದರೆ-ವಟ(ಗೋಳಿ),ಉದುಂಬರ(ಅತ್ತಿ),ಅಶ್ವತ್ಥ,ಪಾರಿಷ,ಪ್ಲಕ್ಷ.. ಎನಗೆ ಗೊಂತಿಪ್ಪ ಪ್ರಕಾರ ಪಂಚ ಪಲ್ಲವ(೫ನಮುನೆಯ ಚಿಗುರುಗೊ) ಹೇಳಿದರೆ-ಆಮ್ರ(ಮಾವಿನಕೊಡಿ),ಜಂಬೂಕ(ನೇರಳೆಕೊಡಿ),ಕಪಿತ್ಥ(ಬೇಲದ ಕೊಡಿ),ಬೀಜಪೂರಕ(ಮಾದಲ ಕೊಡಿ),ಬಿಲ್ವ(ಬಿಲ್ವಪತ್ರೆ ಕೊಡಿ).. ಎಂಗೊ ಮದ್ದಿಂಗೆ ಉಪಯೋಗ ಮಾಡುದು ಇವುಗಳ.. ವೈದಿಕ ಶಾಸ್ತ್ರದ ಪ್ರಕಾರ ಬೇರೆ ಇದ್ದಾ ಗೊಂತಿಲ್ಲೆ… 🙂

    1. ಈ ಬಗ್ಗೆ ಎನಗೆ ಬೋಧಾಯನೋಕ್ತ ವೆಂಕಟೇಶ ಪ್ರಯೋಗಲ್ಲಿ ಕಂಡ ಹಾಂಗೆ ಆನು ಇಲ್ಲಿ ವಿವರಣೆ ಕೊಟ್ಟದು.ಈ ಬಗ್ಗೆ ಬಟ್ಟ ಮಾವನ ಹತ್ರೆ ವಿಮರ್ಶೆ ಮಾಡಿ ತಿಳಿಸುತ್ತೆ ಸೌಮ್ಯಕ್ಕ…

      1. ನಿಂಗೊ ಕೇಳಿದ ಒಂದು ವಿಮರ್ಶೆಗೆ ಬಟ್ಟ ಮಾವ ಉತ್ತರ ಕೊಟ್ಟಿದವು.ಪಲ್ಲವ ಹೇಳಿದರೆ ಚಿಗುರು ಹೇಳಿ ಅರ್ಥ ಇದ್ದು.ಆದರೆ ವಲ್ಕಲದ ಬಗ್ಗೆ ಮಾಹಿತಿ ಸಿಕ್ಕಿದ್ದಿಲ್ಲೆ.. ಮತ್ತೆ ಪಂಚ ವೃಕ್ಷಂಗ ಅದುವೇ ಹೇಳಿ ಹೇಳಿದವು..ಅತ್ತಿ,ಇತ್ತಿ,ಗೋಳಿ.ಅಶ್ವತ್ಥ,ಪಾಲಾಶ. ಶಾಸ್ತ್ರ ವಿಧಿ ಪ್ರಕಾರ ಚಿಗುರೇ ಆಯೆಕ್ಕಡ.. ಈಗ ಅದರ ಬಗ್ಗೆ ಹೆಚ್ಚಿನವಕ್ಕೂ ಶ್ರದ್ಧೆ ಕಡಮ್ಮೆ ಆದ ಕಾರಣ ಮರದ ಕೊಡಿಲಿ ಇಪ್ಪ ಚಿಗುರಿನ ಮಹತ್ವ ಬುಡದ ಕೆತ್ತೆ ಕೊಯ್ಯುವಲ್ಲಿವರೆಗೆ ಬಂತು. ನಿಂಗ ವಿಮರ್ಶೆ ಮಾಡಿದ ಕಾರಣ ಎನಗೂ ಗೊಂತಾತು.ನಿಂಗಳಿಂದ ಇನ್ನಷ್ಟು ವಿಮರ್ಶೆಯ ನಿರೀಕ್ಷೆ ಮಾಡ್ತೆ. ಧನ್ಯವಾದಂಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×