ದೇಶ

December 20, 2010 ರ 12:23 amಗೆ ನಮ್ಮ ಬರದ್ದು, ಇದುವರೆಗೆ 76 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ದೇಶ ಅಭಿವೃದ್ಧಿ ಆಯೆಕ್ಕು ಹೇಳಿ ಎಲ್ಲೋರ ಆಶೆ…
ಅದಕ್ಕೆ ನಮ್ಮ ಹಿಂದುಳುದ ವರ್ಗಂಗೊ ಮೊದಲು ಅಭಿವೃದ್ಧಿ ಅಯೆಕ್ಕಡ – ಹಾಂಗೆ, ದೊಡ್ಡ ಮನುಷ್ಯರು ಹೇಳಿದ್ದವಡ..
ಈಗಳೂ ಮೊದಲ ಆದ್ಯತೆಲಿ ಮುಸ್ಲಿಂ, ಹಿಂದುಳಿದ ವರ್ಗಂಗಳ ಅಭಿವೃದ್ಧಿ ಅಯೆಕ್ಕು ಹೇಳಿ ದೊಡ್ಡ ಮನುಷ್ಯರು ಹೇಳ್ತಾ ಇರ್ತವು, ಆವಾಗ ಆವಾಗ…

ಹಾಂಗೆ ದೇಶದ ದೊಡ್ಡ ಮನುಷ್ಯರು ಕಾಯಿಲೆ ಬಿದ್ದಪ್ಪಗ ಎಂತಕೆ ಹೆರ ದೇಶಕ್ಕೆ ಹೋಗಿ ಆಪರೇಷನ್ ಮಾಡ್ಸಿಗೊಂಡು ಬತ್ತವು …?!!!
ಅಲ್ಲದ್ರೆ ಬೊಂಬಾಯಿ ,ಬೆಂಗಳೂರು ಹೀಂಗೆ ದೊಡ್ಡ ದೊಡ್ಡ ಡಾಕ್ಟ್ರ ಹುಡ್ಕುತ್ತವು..ಎಂತಕೆ ಹೇಳುದು ಗೊಂತಾವ್ತಿಲ್ಲೆ…
ಅವೇ ಹೇಳುವ ಹಾಂಗೆ ಅವಕ್ಕೆ ಆಪರೇಷನ್ ಗೆ Reserved  Categoryಗೊಕ್ಕೆ ಮೊದಲ ಆದ್ಯತೆಲಿ ಕೊಡೆಕ್ಕಪ್ಪ.
ಹಾಂಗೆಯೇ, ದೊಡ್ಡ ಕೇಸ್ ಲಿ ಮುಳುಗಿ ಇಪ್ಪಗ, ಪೈಲೆಟ್, ಹೀಂಗೆ  ಎಲ್ಲದರಲ್ಲೂ  ಆದ್ಯತೆ ಕೊಡೆಕ್ಕಪ್ಪ..!
ಎಂತಕೆ ಹಾಂಗೆ ನಡೆತ್ತಿಲ್ಲೆ…???!!!!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 76 ಒಪ್ಪಂಗೊ

  1. Harish kevala

    Meesalathiya main uddesha rajakeeya vote bank.. Bare jathi onde mukhya alla heludu egina matadarige artha avta iddu.. Brahmanara, meljathiya mele- kela jathiyavara etti katti hana madida kala hovta iddu.. Road, current neerige jathi ille, ella jathiyavakku adu anivarya,, aa sathya uttara bharathada janagavakke artha apaple suru aidu!!, khandithavagi sampurna shikshitha yuva janathendagi reservation maya appa ella chances iddu.

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    ರಿಸರ್ವೇಶನ್ ಮಾಯ ಆದರೆ ಸಂತೋಶವೇ. ಆದರೆ ಅದರೊಟ್ಟಿಂಗೆ ಅವು ಹೋಲ್ ಸೇಲ್ ಆಗಿ ಬೇರೆ ಮತಕ್ಕೆ ಹೋಗದ್ದರೆ ಸಾಕು. ಬೌಧ್ಧ ಧರ್ಮಕ್ಕೋ ಮಣ್ಣು ಹೋದರೆ ಚಿಂತೆ ಇಲ್ಲೆ. ಬ್ಯಾರಿಗೊ ಪುರ್ಬುಗೊ ಆಗದ್ದರೆ ಸಾಕು.

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    ಒಬ್ಬ ಹಿಂದು ಕನ್ವರ್ಶನ್ ಆದರೆ ಒಬ್ಬ ಹಿಂದು ಕಮ್ಮಿ ಅಪ್ಪದು ಮಾತ್ರ ಅಲ್ಲ, ದೇಶಕ್ಕೆ, ಧರ್ಮಕ್ಕೆ ಒಬ್ಬ ಶತ್ರು ಹೆಚ್ಚು ಆದ ಹಾಂಗೆ ಅಲ್ಲದ?

    [Reply]

    Harish kevala Reply:

    Convertionige ennadu virodha iddu, adare obba converton ada koodle desha drohi avta heludu tappu.. tumba christians desha premigo iddavu..

    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    {tumba christians desha premigo iddavu}
    ಇದ್ದಿದ್ದರೆ ನಾಗಾಲ್ಯಾಂಡ್ ಮುಂತಾದ ಕ್ರಿಶ್ಚಿಯನ್ ಬಾಹುಳ್ಯದ ಪ್ರದೇಶಂಗೊ ಪ್ರತ್ಯೇಕ ದೇಶಕ್ಕೆ ಈ ನಮುನೆ ಹಿಂಸಾಚಾರಕ್ಕೆ ಇಳಿತಿತ್ತವ? ಅವು (ಮುಸ್ಲಿಮರುದೆ) ಅಲ್ಪ ಸಂಖ್ಯೆಲಿಪ್ಪಗ ನಮ್ಮ ಜೊತೆ ಲಾಯಿಕಲಿ ಇರ್ತವು. ಅವರ ಸಂಖ್ಯೆ ಹೆಚ್ಚಾದ ಹಾಂಗೆ ಅವರ ನಿಜ ಬಣ್ಣ ಹೆರ ಬತ್ತು.

    Harishkevala Reply:

    Keralalli christians sankhye tumba iddu.. but byarigalange desha droha madiddu kammi…Naanu christian para heli alla, just ippa vishaya heliddu..

    VA:F [1.9.22_1171]
    Rating: 0 (from 0 votes)

    Harish kevala Reply:

    Roga bandare maddu kodekkaddu adara moolakke, summane jathiyathe hogaladsekku heli eene kaanunu maadidaruu kaanunu tappadara badaluu, churchgalalli ade reethi madrsagalali koduva reethi vyavasthitha shikhsanada avakasha suru madire ella samasyego parihara akkulu kanuttu… namma prathi halligalallu devasthanago, bhajana mandirango estude iddu.. prati oorilide makkoge bekappa basic adhyatmika shikshana koduva hiriyoru estuu iddavu.. pratee bhanuvara at least 1-2 gante makkala sersi just namma dharmada bagge mahithi sikkuva vyavaste madire, ella samasyego parihara akku… nammatre ellavu iddu aadare adara vyavasthithavagi madudu onde baaki.. sheegralli suru akku heli haraike..

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    ಅಪ್ಪು ಆ ಕಾರ್ಯ ಆಯೆಕ್ಕಪ್ಪದು ಹೇಳಿಯೇ ಆನುದೆ ಹೇಳುತ್ತಾ ಇಪ್ಪದು. ಬಾಕಿಯೊರ ಸ್ಪರ್ಧಿ ಹೇಳಿ ಅಥವಾ ಶತ್ರು ಹೇಳಿ ನೋಡುದಕ್ಕಿಂತ ಅವಕ್ಕೆ ಧಾರ್ಮಿಕ ಶಿಕ್ಷಣ ಕೊಡುವ ಕೆಲಸ ತುರ್ತಾಗಿ ಆಯೆಕ್ಕು. ಕೊಡುವವರು ಆರು ಹೇಳಿಯೇ ಇಪ್ಪದು ಪ್ರಶ್ನೆ.

    ಕಳಾಯಿ ಗೀತತ್ತೆ

    ಕಳಾಯಿಗೀತತ್ತೆ Reply:

    ಬಾಕಿಯೋರ ಸ್ಪರ್ಧಿ ಹೇಳಿ ಖಂಡಿತ ಆಲೋಚನೆ ಮಾಡ್ತಾ ಇಲ್ಲೆ ..ನಮ್ಮ ಒಟ್ಟಿoಗೆ ಸ್ಪರ್ಧೆಗೆ ಅವುದೆ ಬರಲಿ ಹೇಳುದು ಆಶಯ ..ನೂಕಿ ಕೊಡೆಕ್ಕಾದ ಅಗತ್ಯ ಈಗದ ಪರಿಸ್ಥಿತಿಲಿ ಇಲ್ಲೆ ..

    Harish kevala Reply:

    Ene idadru hegiruva vishayalli leadership brahmanare tekkolekku..

    Harish kevala Reply:

    Ivaatigu kooda aneka vishayangala brahmanaru start madire uluda vargadavu follow madta ipapdu vastava, soo ee vishayakku idu anvaya khanditha akku..

    VA:F [1.9.22_1171]
    Rating: 0 (from 0 votes)
    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    ಹರೀಶಣ್ಣ, ಈಗ ಗೊಂತಾತು ನಿಂಗ ಹೇಳುದು ಎಂತರ ಹೇಳಿ.. ಮದಲು ಒಂದ್ ಚೂರು ಕನ್ಫ್ಯೂಸ್ ಆತು.. :)

    VA:F [1.9.22_1171]
    Rating: 0 (from 0 votes)
  2. ಸುಬ್ಬಯ್ಯ ಭಟ್ಟ ವರ್ಮುಡಿ

    ಒಳ್ಳೆಯ ಚರ್ಚೆ ನಡೆತ್ತಾ ಇದ್ದು.
    ಎಡೇಲಿ ಒಂದು ಸಲಹೆ= ಪಾದೂರು ಗುರುರಾಜ ಭಟ್ ಬರದ ಸಂಶೋಧನಾ ಗ್ರಂಥ ” ತುಳುನಾಡು” ಎಲ್ಲೋರೂ ಓದಿಕ್ಕಿ; ಇದರಲ್ಲಿ ಚರ್ಚೆಯ ವಿಷಯಂಗಳ ಒಟ್ಟಿಂಗೆ ಹಳ್ಳಿಲಿಪ್ಪ ಬ್ರಾಹ್ಮಣರ ಮಕ್ಕೊಗೆ ಮದುವೆ ಅಪ್ಪಲೆ ಕೂಸು ಸಿಕ್ಕದ್ದರ ಬಗ್ಗೆ, – ಚಾರಿತ್ರಿವಾಗಿ ಹವ್ಯಕರೂ ಸೇರಿ ಬ್ರಾಹ್ಮಣರು ಅನ್ಯ ಜಾತಿಂದ ತಂಬಾ ಮದುವೆ ಆದ್ದದರ ಬಗ್ಗೆ ಇದ್ದು.
    ಇಲ್ಲಿ ಬೈಲಿಲಿ ಚರ್ಚೆಲಿ ವಿಷಯ ಇಪ್ಪದು ಸರಳವಾಗಿಯೇ ಇದ್ದು.=
    ೧) ಈಗ ಬ್ರಾಹ್ಮಣರಲ್ಲಿ ಬ್ರಾಹ್ಮಣ್ಯ ಎಷ್ಟು ಇದ್ದು?
    ೨) ಶತಮಾನಂಗಳಿಂದಲೇ ಬ್ರಾಹ್ಮಣ್ಯ ನಿಜವಾಗಿ ಇತ್ತಿದ್ದೋ?
    ೩) ವೇದಾದಿ ಶಾಸ್ತ್ರಂಗಳ ಒಳುಶಿದ್ದದು ನಿಜವಾದರೂ ನಿಜವಾದ ಬ್ರಾಹ್ಮಣ ಮನೋಭೂಮಿಕೆ ಇತ್ತೋ?
    ಎಲ್ಲದಕ್ಕೂ ಬ್ರಾಹ್ಮಣರ ಬೇಜವಾಬ್ದಾರಿ ಮಾಂತ್ರ ಕಾರಣ ಅಲ್ಲ. ದೇಶ-ಕಾಲ ಸ್ಠಿತಿಯೂ ಕಾರಣವಾಗಿ ಇದ್ದು.
    ಆದರೆ, ಬಹುಪಾಲುದೇ ಬೇಜವಾಬ್ದಾರಿ, ಅಧರ್ಮದ ನಡವಳಿಕೆಯೇ ಕಾರಣ.
    ನೀರ್ಕಜೆ ಅಪ್ಪಚ್ಚಿ ಹೇಳಿದ್ದದು ಬಹುಪಾಲುದೇ ಸತ್ಯವೇ- ನಮ್ಮ ಹಿರಿಯರೇ ಬೇಕಾದಶ್ಟು ತಪ್ಪು ನಡವಳಿಕೆಲಿ ಇತ್ತಿದ್ದವು.(ಈಗಾಣವರ ನಡವಳಿಕೆ ಸರಿ ಕಂಡರೂ,ಅಜ್ಞಾನ ಭೂಯಿಷ್ಟವಾದ್ದದು; ತಮ್ಮತನದ ಅರಿವಿಲ್ಲದ್ದದು)
    ಒಂದೆರಡು ಭಿನ್ನಾಭಿಪ್ರಾಯಂಗೊ=
    @ನೀರ್ಕಜೆ ಅಪ್ಪಚ್ಚಿ{ಅವು ಕುಡುದು ತೊಳದ ಗ್ಲಾಸು ನವಗಾಗ. ಈಗ ಪೇಟೆಲಿಪ್ಪವು ಹೋಟ್ಲಿಲ್ಲಿ ಎಂಥೆಂಥಾ ಗ್ಲಾಸಿಲಿ ಕಾಪಿ ಕುಡುದರೂ ಹೇಸಿಗೆ ಆವುತ್ತಿಲ್ಲೆ. ಆಗ ಹಾಂಗಿತ್ತಿಲ್ಲೆ. ಆಳುಗಳೇ ಕಟ್ಟಿದ ದೇವರ ಕೋಣೆಲಿ ಆಳುಗೊಕ್ಕೆ ತಪ್ಪಿಯೂ ಪ್ರವೇಶ ಇಲ್ಲೆ.}- “ಅಸ್ಪೃಶ್ಯತೆ” ಒಂದು ವೈಜ್ಞಾನಿಕ ಶಾಸ್ತ್ರೀಯ ನಡವಳಿಕೆ; ಆದರೆ ಚಾರಿತ್ರಿಕವಾಗಿ ನಡವಳಿಕೆಲಿ ಇದ್ದಹಾಂಗೆ ಅಲ್ಲ.
    ಒಬ್ಬ ಬ್ರಾಹ್ಮಣ ಇನ್ನೊಬ್ಬ ಬ್ರಾಹ್ಮಣನನ್ನೇ ಆದರೂ ಅಯುಕ್ತ ಸ್ಪರ್ಶ ಮಾಡುಲಾಗ; ಈಗ ಕೂಪ ಹಾಂಗೆ ಒಂದೇ ಹಸೆಲಿ ಕೂಪಲೂ ಆಗ (ಏಕಾಸನ ದೊಷ).
    ಹಾಂಗೆಯೇ,
    ಸತ್ವ- ರಜ- ತಮ ಗುಣಂಗೊ ಮಿಶ್ರ ಅಪ್ಪಲಾಗ; ಹಾಂಗಾಗಿ ಬ್ರಾಹ್ಮಣರಲ್ಲದ್ದವಕ್ಕೆ ದೇವರಕೋಣೆಗೆ/ಮನೆಯೊಳಕ್ಕೂ ಪ್ರವೇಶ ಇಲ್ಲೆ. ಶಕ್ತಿಪೂಜೆಯ ಮನೆಗಳಿಂದ ಮದಲಿಂಗೆ ಬಾಕಿದ್ದವು ಕೂಸು ತಾರ, ಸಾಲಿಗ್ರಾಮ ಇಲ್ಲದ್ದ ಮನೆಲಿ ಉಣ್ಣ.
    ವರ್ಣಸಂಕರ ಹೇಳಿದರೆ ಕೇವಲ ಅನ್ಯಜಾತಿ ವಿವಾಹ ಅಲ್ಲ; ಸತ್ವ- ರಜ- ತಮ ಗುಣಂಗೊ ಮಿಶ್ರ ಅಪ್ಪದೇ ವರ್ಣಸಾಂಕರ್ಯ.
    “ಸತ್ವ ನಿಷ್ಠೆ” ಇಲ್ಲದ್ದರೆ ಬ್ರಾಹ್ಮಣ್ಯ ಇಲ್ಲೆ.
    ಇನ್ನು, ಆಚಾರ ಎಲ್ಲಿ ಇತ್ತಿದ್ದು?- “ದೊಡ್ಡ ಬ್ರಾಹ್ಮಣ ಆಯೆಕ್ಕಾದರೆ ಕುಣಿಯ ಹೊಗೆಸೊಪ್ಪು ಎರಡಿಂಚು ತಿನ್ನೆಕ್ಕು” ಹೀಂಗೆ ಅಮಲು ತಿಂಬವರ ಹತ್ರೆ ಎನಗೆ “ಸತ್ವ ನಿಷ್ಠೆ” ಕಾಂಬಲೆ ಸಿಕ್ಕಿದ್ದು ಕಮ್ಮಿ.(ಅಮಲು ತಿನ್ನದ್ದವರ ಹತ್ರೆ “ಸತ್ವ ನಿಷ್ಠೆ”ಇರೆಕ್ಕೂ ಹೇಳಿ ಇಲ್ಲೆ).
    @ನೀರ್ಕಜೆ ಅಪ್ಪಚ್ಚಿ{ಧರ್ಮದ ಪುನರುಥ್ಥಾನಕ್ಕೆ ಕಾರಣರಾದ ಮಹರ್ಷಿ ದಯಾನಂದ ಸರಸ್ವತಿ ಈ ಜಾತಿ, ಸ್ವಜನ ಪಕ್ಷಪಾತ ಇವೆಲ್ಲದರ ಖಡಾಖಂಡಿತವಾಗಿ ತಿರಸ್ಕರಿಸಿತ್ತಿದವು. ಅವರ ಪ್ರಖರತೆಯೇ ಮುಂದೆ ದೇಶಲ್ಲಿ ಹರಡಿ ನವಗೆ ಸ್ವಾತಂತ್ರ್ಯ ಬಂತೇ ಹೊರತಾಗಿ ಸ್ವಜನ ಪಕ್ಷಪಾತಿ ಬ್ರಾಹ್ಮಣರಿಂದ ದೇಶಕ್ಕೆ ಯಾವ ಉಪಕಾರವೂ ಆಯಿದಿಲ್ಲೆ. ಅವರಿಂದಾಗಿ ತೊಂದರೆಯೇ ಆಯಿದಷ್ಟೆ.. }- ನೀರ್ಕಜೆ ಅಪ್ಪಚ್ಚಿ ಹೇಳಿದ್ದು ಪೂರ್ತಿ ಸರಿ ಅಲ್ಲ, ಬ್ರಾಹ್ಮಣರು ಪ್ರತಿಯೊಂದು ಪುನರುತ್ಥಾನ ಪ್ರಯತ್ನಂಗಳಲ್ಲಿಯುದೇ ಮುಂಚೂಣಿಲಿಯೇ ಇತ್ತಿದ್ದವು. ಚರಿತ್ರೆಯ ಒಂದರಿ ನೋಡಿ.(ಕಮ್ಯುನಿಸ್ಟ್ ಚಳವಳಿಲಿಯೂ).ಮಹರ್ಷಿ ದಯಾನಂದ ಸರಸ್ವತಿಗಳ ಹಾಂಗೆ ತುಂಬಾ ಸಾಧಕರ ಪ್ರಯತ್ನ ಇತ್ತಿದ್ದು, ಅವು ಮಾತ್ರ ಪ್ರಧಾನ ಅಲ್ಲ.
    “ಮೀಸಲಾತಿ ಬೇಕು, ಆದರೆ ಈಗ ಇಪ್ಪಹಾಂಗೆ ಅಲ್ಲ”.- ” ಈಗ ಇಪ್ಪ ಸಾಮಜಿಕ – ರಾಜಕೀಯ ಸ್ಥಿತಿಲಿ ಸಾಮಾಜಿಕ ಸಾಮರಸ್ಯ, ಸಮತೋಲನ ತಪ್ಪಲೆ ಬೇಕಾದ ಹಾಂಗಿಪ್ಪ ಮೀಸಲಾತಿ ಬಾರ”. ಬ್ರಾಹ್ಮಣರೂ ಸಾಮಾಜಿಕ – ರಾಜಕೀಯ ಚಾಣಾಕ್ಷತನಂದ ಹಕ್ಕುಗಳ ಸಾಧನೆ ಮಾಡೆಕ್ಕು; ಒಟ್ಟಿಂಗೆ ಬ್ರಾಹ್ಮಣ್ಯವನ್ನೂ ಆಂತರಿಕವಾಗಿಯೂ ಅನ್ಯರ ಒಳಿತಿಂಗಾಗಿಯೂ ಬೆಳೆಶಿ ಒಳುಶಿ ಬಳಸೆಕ್ಕು.
    ಎಡೇಲಿ ಒಂದು ಸಲಹೆ= ಸಮಧಾನಲ್ಲಿ ಶತಾವಧಾನಿ ರಾ ಗಣೇಶರ ಗೀತಾ ಪ್ರವಚನ ಮಾಲಿಕೆಯ ಧ್ವನಿಮುದ್ರಿಕೆಯ ಕೇಳಿ ( ಗೋಖಲೆ ಸಂಸ್ಥೆ ಬೆಂಗಳೂರು ) .

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    ಅಮೂಲ್ಯ ಮಾಹಿತಿ ನೀಡಿದ ಸುಬ್ರಾಯ ಭಟ್ರಿಂಗೆ ಎನ್ನ ಧನ್ಯವಾದಂಗೊ. ಹಾಂಗೇ ಕೆಲವು ಸ್ಪಷ್ಟನೆಗೊ :
    {ಒಬ್ಬ ಬ್ರಾಹ್ಮಣ ಇನ್ನೊಬ್ಬ ಬ್ರಾಹ್ಮಣನನ್ನೇ ಆದರೂ ಅಯುಕ್ತ ಸ್ಪರ್ಶ ಮಾಡುಲಾಗ}
    ಇದು ಪೌರೋಹಿತ್ಯ ಉಳಿಶಿಕೊಂಡ ಬ್ರಾಹ್ಮಣರಿಂಗೆ ಅನ್ವಯ ಅಪ್ಪದು. ಅಲ್ಲದೋ? ನಮ್ಮ ಜಾತಿ ಬ್ರಾಹ್ಮಣರಲ್ಲಿ ಪ್ರತಿಶತ ಐದರಷ್ಟು ಹೆಚ್ಚು ಹೇಳಿರೆ ಹತ್ತರಷ್ಟು ಜನ ಹಾಂಗೆ ಕುಲಕಸುಬು ಪೌರೋಹಿತ್ಯವ ಉಳಿಶಿಕೊಂಡಿದವು. ಅವು ಅಸ್ಪೃಷ್ಯತೆ ಮಾಡಿದರೆ ಅದರ Technical grounds ಲಿ ಒಪ್ಪಿಕೊಳ್ಳತಕ್ಕದ್ದೇ. ಎರಡು ಮಾತಿಲ್ಲೆ. ಆದರೆ ಒಳುದೋರ ಕಥೆ ಎಂತ?

    {ಈಗಾಣವರ ನಡವಳಿಕೆ ಸರಿ ಕಂಡರೂ,ಅಜ್ಞಾನ ಭೂಯಿಷ್ಟವಾದ್ದದು; ತಮ್ಮತನದ ಅರಿವಿಲ್ಲದ್ದದು}
    ಒಪ್ಪತಕ್ಕದೇ. ಸಂಶಯ ಇಲ್ಲೆ ಇದರಲ್ಲಿ.

    {ಸತ್ವ- ರಜ- ತಮ ಗುಣಂಗೊ ಮಿಶ್ರ ಅಪ್ಪಲಾಗ; ಹಾಂಗಾಗಿ ಬ್ರಾಹ್ಮಣರಲ್ಲದ್ದವಕ್ಕೆ ದೇವರಕೋಣೆಗೆ/ಮನೆಯೊಳಕ್ಕೂ ಪ್ರವೇಶ ಇಲ್ಲೆ. ಶಕ್ತಿಪೂಜೆಯ ಮನೆಗಳಿಂದ ಮದಲಿಂಗೆ ಬಾಕಿದ್ದವು ಕೂಸು ತಾರ, ಸಾಲಿಗ್ರಾಮ ಇಲ್ಲದ್ದ ಮನೆಲಿ ಉಣ್ಣ}
    ಇದಕ್ಕುದೇ ಮೇಲಾಣ ವಾದ ಅನ್ವಯ ಆವುತ್ತಲ್ಲದ? ಅರ್ಹವಾದವ ಅಸ್ಪೃಷ್ಯತೆ ಮಾಡಿದರೆ ಅದಕ್ಕೆ ತಾನೇ ತಾನಾಗಿ ಬೆಲೆ ಬತ್ತು. ಅದಕ್ಕೆ ಆರಿಂದಲೂ ವಿರೋಧ ಬಪ್ಪದು ಎನಗೂ ಸಂಶಯ.

    {“ಮೀಸಲಾತಿ ಬೇಕು, ಆದರೆ ಈಗ ಇಪ್ಪಹಾಂಗೆ ಅಲ್ಲ”.- ” ಈಗ ಇಪ್ಪ ಸಾಮಜಿಕ – ರಾಜಕೀಯ ಸ್ಥಿತಿಲಿ ಸಾಮಾಜಿಕ ಸಾಮರಸ್ಯ, ಸಮತೋಲನ ತಪ್ಪಲೆ ಬೇಕಾದ ಹಾಂಗಿಪ್ಪ ಮೀಸಲಾತಿ ಬಾರ”. ಬ್ರಾಹ್ಮಣರೂ ಸಾಮಾಜಿಕ – ರಾಜಕೀಯ ಚಾಣಾಕ್ಷತನಂದ ಹಕ್ಕುಗಳ ಸಾಧನೆ ಮಾಡೆಕ್ಕು; ಒಟ್ಟಿಂಗೆ ಬ್ರಾಹ್ಮಣ್ಯವನ್ನೂ ಆಂತರಿಕವಾಗಿಯೂ ಅನ್ಯರ ಒಳಿತಿಂಗಾಗಿಯೂ ಬೆಳೆಶಿ ಒಳುಶಿ ಬಳಸೆಕ್ಕು}
    ಮುತ್ತಿನಂಥ ಮಾತು. ಪುನಹ ನಿಂಗೊಗೆ ಧನ್ಯವಾದ.

    [Reply]

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ಸರಿಯಾಗಿಯೇ ಹೇಳಿದಿ ಅಪ್ಪಚ್ಚಿ; ನಿಂಗಳ ಉತ್ತರಕ್ಕುದೇ ರಜ್ಜ ಆಕ್ಷೇಪ ಇದ್ದು;
    ಇರಳಿ,
    ತುಂಬಾ ವಿವರಣೆ ಕೊಡೆಕ್ಕಾವುತ್ತು. ಇಲ್ಲದ್ದರೆ ಅರ್ಥ ಅಪ್ಪಲೆ ಕಷ್ಟ ಇದ್ದು.
    ತತ್ವಾರ್ಥ ಜಿಜ್ಞಾಸೆ ಬೇಕು- ಅದರ ವ್ಯಾವಹಾರ್ಯ ರೂಪದ ಬಗ್ಗೂ ತಿಳುವಳಿಕೆ ಕೊಡೆಕ್ಕು.
    ನಿಧಾನಕ್ಕೆ ಪ್ರಯತ್ನ ಮಾಡುತ್ತೆ, ಈಗ ಪುರುಸೊತ್ತು ಕಮ್ಮಿ ಇದ್ದು;ರಜ್ಜ ತಯಾರಿಯೂ ಬೇಕಾವುತ್ತು; ಬರವದು ಮಾತಾಡಿದಷ್ಟು ಸುಲಭ ಅಲ್ಲನ್ನೆ!

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    ಚೇ, ಹಿರಿಯೋರ ಹತ್ತರೆ ಎಲ್ಲ ಅಪ್ಪಚ್ಚಿ ಹೇಳ್ಸಿಗೊಂಬಲೆ ನಾಚಿಕೆ ಆವುತ್ತು. ಸುರುವಿಲಿ ಈ ಅಪ್ಪಚ್ಚಿ ಹೇಳಿ ಅಂತೇ ಬಂದದು.. ಹಾಂಗಾಗಿ ಇನ್ನು ಮುಂದೆ ಎನ್ನ ಹೆಸರು “ನೀರ್ಕಜೆ ಮಹೇಶ” ಹೇಳಿ ಇರಳಿ. :)

    ಇನ್ನು ಎನ್ನ ಉತ್ತರಕ್ಕೆ ಆಕ್ಷೇಪ ಖಂಡಿತಾ ಇರಳಿ.. ಅದಕ್ಕೆ ಎನ್ನ ಆಕ್ಷೇಪ ಇಲ್ಲೆ :)

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ನಿಂಗಳ ಇನ್ನುಮುಂದೆ ಅಪ್ಪಚ್ಚಿ ಹೇಳಿ ದೆನಿಗೋಳುತ್ತಿಲ್ಲೆ ಆತೊ “ಅ..ಪ್ಪ..ಚ್ಚಿ”!!!

    ಅಲ್ಲ, ಹವ್ಯಕ ಕನ್ನಡದ ಆಡುಭಾಶೆಲಿ ಆತ್ಮೀಯವಾಗಿ ತಮಾಶೆಂದ “ಅಪ್ಪಚ್ಚಿ; ಭಾವ°; ಮಾವ°; ಅಣ್ಣ… ” ಹೀಂಗೆಲ್ಲ ದೆನಿಗೋಳುದು ಇಪ್ಪದೇ ಅನ್ನೆ!!

    ಎನಗಂತೂ ಅಪ್ಪಚ್ಚಿಯೇ ಇಷ್ಟ!!!

    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    ಹಹ.. ನಿಂಗ ಹೇಳಿದ ಬಳಕೆಗೊ ಇಪ್ಪದು ನಿಜ. ಆದರೆ ಅದು ತೀರ ವಿರುಧ್ಧ ಪದ ಅಪ್ಪಲಾಗನ್ನೆ.. ಪ್ರಾಯಲ್ಲಿ ಅಪ್ಪಚ್ಚಿ ಅಪ್ಪ ಹಾಂಗಿಪ್ಪವರ ಹತ್ತರೆ ಅಪ್ಪಚ್ಚಿ ಹೇಳ್ಸಿಗೊಂಡರೆ ನಮೂನೆ ಆವುತ್ತಿಲ್ಲೆಯ! :) ಹಾಂಗೆ ಇಲ್ಲಿ ಬೈಲಿಲಿ ತುಂಬ ಹಿರಿಯೋರುದೆ ಇಕ್ಕು. ಅದಕ್ಕೆ ಹೇಳಿದ ಅಷ್ಟೆ.

    VA:F [1.9.22_1171]
    Rating: 0 (from 0 votes)
    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    { ಬ್ರಾಹ್ಮಣರು ಪ್ರತಿಯೊಂದು ಪುನರುತ್ಥಾನ ಪ್ರಯತ್ನಂಗಳಲ್ಲಿಯುದೇ ಮುಂಚೂಣಿಲಿಯೇ ಇತ್ತಿದ್ದವು}
    ಇಲ್ಲಿ ಒಂದು ಸ್ಪಷ್ಟನೆ. ಮುಂಚೂಣಿಯಲ್ಲಿತ್ತಿದ ಬ್ರಾಹ್ಮಣರು reformist ಬ್ರಾಹ್ಮಣರಾಗಿತ್ತಿದವು. ಉದಾ ರಾಜಾ ರಾಮ್ ಮೋಹನ್ ರಾಯ್. ಇವು ಬ್ರಾಹ್ಮಣ ಜಾತಿಲಿ ಹುಟ್ಟಿದರೂ ಆ ಕಾಲದ ಹಿಂದೂ ಕ್ರಮಂಗಳ ಖಡಾಖಂಡಿತವಾಗಿ ವಿರೋಧಿಸಿದವು. ಮತ್ತೆ ಕೆಲವು ಬ್ರಾಹ್ಮಣರು ಧರ್ಮ ದ್ರೋಹ ಮಾಡಿದವೂ ಇತ್ತಿದವು. ಉದಾಹರಣೆಗೆ ನೆಹರೂ (ಕಾಶ್ಮೀರ ಪಂಡಿತ). ಈಗಳುದೆ ಈ ನಕ್ಸಲ್, ಮಾವೋವಾದಿ ಹಿಂಸೆಯ ಪ್ರಚೋದನೆ ಮಾಡುವ ಸ್ವಜಾತಿ ಬ್ರಾಹ್ಮಣರುದೆ ಇದ್ದವು. ಅದು ಬೇರೆ ವಿಶಯ. ಆನು ಹೇಳಿದ್ದು ಸ್ವಜನ ಪಕ್ಷಪಾತಿ ಮಾಡುವ, ವೈಯಕ್ತಿಕ ಲಾಭ ಬಿಟ್ಟು ಬೇರೆ ಯೋಚನೆ ಮಾಡದ (ಆನು ಹೇಳಿದ ಕಾಶ್ಮೀರ ಉದಾಹರಣೆ ಮಾದರಿ) ಬ್ರಾಹ್ಮಣರ ಬಗ್ಗೆ. ಇಂದಿಂಗೂ reformist ಬ್ರಾಹ್ಮಣರ ಸಂಖ್ಯೆ ಕಮ್ಮಿಯೇ. ನಮ್ಮ ಗುರುಗೊ ಹೊಸ ವಿಚಾರ ತಪ್ಪಗ, ದೇವಸ್ಥಾನವೊಂದರ ಕೊಳಕು ಸರಿಸುವಗ ಇಂಥಾ ಸ್ವಜನ ಪಕ್ಶಪಾತಿಗಳಿಂದ ವಿರೋಧ ಬಂದದೂ, ಅವು ಗುರುಗಳ ಚಾರಿತ್ರ್ಯ ಹರಣ ಮಾಡುಲೆ ತೆರೆಮರೆ ಪ್ರಯತ್ನ ಮಾಡಿ ಸ್ಕ್ಕಿಬಿದ್ದದೂ ನವಗೆ ಗೊಂತಿದ್ದು. ಅಲ್ಲದ?

    [Reply]

    VA:F [1.9.22_1171]
    Rating: 0 (from 0 votes)
  3. ಸುಬ್ಬಯ್ಯ ಭಟ್ಟ ವರ್ಮುಡಿ

    ದಯಾನಂದ ಸರಸ್ವತಿಯವರ ಅದ್ಭುತ ಪ್ರಯತ್ನ- ಸಿದ್ಧಾಂತಂಗೊ ಎಲ್ಲವೂಸರಿಹೇಳಿ ಅಲ್ಲ – ವ್ಯವಹಾರ್ಯವೂ ಅಲ್ಲ.

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    ಸಿಧ್ಧಾಂತ ಇಪ್ಪದೇ ಹೊಸ ಸಿಧ್ಧಾಂತವೊಂದರ ಹುಟ್ಟಿಂಗೆ. ಕಟು ಸತ್ಯ ಹೇಳಿದರೆ ದಯಾನಂದ ಸರಸ್ವತಿಯವರ ವೇದ ಭಾಷ್ಯವ (ಸತ್ಯಾರ್ಥ ಪ್ರಕಾಶ) ಮೀರ್ಸುವ ಇನ್ನೊಂದು ಗ್ರಂಥ ಇನ್ನುದೆ ಬಯಿಂದಿಲ್ಲೆ. ಅಂಥ ವಿದ್ವಾಂಸ – ಕೇವಲ ಧಾರ್ಮಿಕ ಮಾತ್ರ ಅಲ್ಲ, ಜೀವನದ ಎಲ್ಲಾ ರಂಗಗಳಲ್ಲಿಯೂ ಅನ್ವಯಿಸುವ – ಇಲ್ಲಿವರೆಗೆ ಹುಟ್ಟಿದ್ದಾಯಿಲ್ಲೆ. ಅವರ ನಂತರ ಬಂದ ಎಲ್ಲಾ ಸಂತರೂ (ಅರವಿಂದೋ ರಿಂದ ಹಿಡುದು ಈಗಣ ಬಾಬಾ ರಾಮ್ ದೇವ್ ಇತ್ಯಾದಿ) ಮಹರ್ಷಿ ದಯಾನಂದ ಸರಸ್ವತಿಯವರ ತತ್ವಾಧಾರ ಮೇಲೆಯೇ ನಡೆತ್ತಾ ಇಪ್ಪದು.

    ದಯಾನಂದ ಸರಸ್ವತಿಯವರ ಸಿಧ್ಧಾಂತವ ಮೀರ್ಸುವ ಸಿಧ್ಧಾಂತವೊಂದು ಬಂದರೆ ಸಂತೋಷವೇ. ಹಾಂಗೆ ಆದರೆ ನಮ್ಮ ದೇಶದ ವೈದಿಕ ಜ್ನಾನ ಒಂದು ಮೆಟ್ಟಿಲು ಮೇಲೆ ಏರುಗು. ಸದ್ಯಕ್ಕೆ ಅದು ಅಪ್ಪ ಲಕ್ಷಣಂಗ ಕಾಣುತ್ತಿಲ್ಲೆ.

    ಅಲ್ಲದ್ದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೂಲ ಸ್ಪೂರ್ತಿ ಮಹರ್ಷಿ ದಯಾನಂದರೆ ಹೇಳುದರಲ್ಲಿ ಯಾವ ಸಂಶಯವೂ ಇಲ್ಲೆ.

    [Reply]

    Harish kevala Reply:

    Loka uddara avtaru haalu avtaru adaralli brahmanara koduge doddadu heludalli 2 maatille.. Hindana kalada chandraguptha mouryna beleshida acharya kautilyaninda hidudu, indrana kalada RSS chief Mohanji, athava Mayavathiya right hand/brain Mishra or UPA Govt brain mukharji or naxal leader Koteshwara raove agirali brahmanare heludu vasthava. Obba brahmanyava bittaru bloodili bappa dhee shakthi bande battu. Ade reethi intaha samajada lopa doshangala tegeyekkadaru brahmanara patra matte mukhandatva anivarya.
    Neerkaje appachhi helida Devara kone vishayalli ennadu binnabhipraya iddu. Ella acahara vicharagalandalu hechhagi devara kone obbana maneya, manassina nambikeya jaga, so adu avravara alochanage bittadu, hange heli Danada mamasa timba byarigavakke pravesha koduva bramanara manage hindugalada SC gala pravesha nishidda akshamya…
    Viparyasa helire Basavannaninda hidudu Dayanda saraswathiyavara varege samajada jathi paddathiya tegadu hakule heratu avu suru madida horatagale mattondu jathiya ugamakke karana aaddu durantha!!!, Idakke manushyana manasthiyae karana, idu nammalli matra alla. Islam , purbugalallu aidu ( protestent, catholic, sunni shiya etc..) But hindina kaladalli eginastu vyavastitha shikshna, samuha madhyama ittille, so innu munde bappa kranthi sarva samajavnnu badalaysuva sambhava hechhu…

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಅಪ್ಪಚ್ಚಿ Reply:

    {Obba brahmanyava bittaru bloodili bappa dhee shakthi bande battu}
    ಇದು ಒಂದು ತಪ್ಪು ನಂಬಿಕೆ ಹೇಳಿ ಎನಗನಿಸುತ್ತು. ಧೀ ಶಕ್ತಿ ಹಿರಿಯರಿಂದ ಬಪ್ಪದಿದ್ದರೆ ಉಪನಯನದ ಅವಶ್ಯಕತೆ ಎಂತ ಇದ್ದು ಅಲ್ಲದ? ನಿಂಗೊ ಹೇಳಿದ ಮನುಷ್ಯರೆಲ್ಲರೂ ದೇಶಕ್ಕೆ ಒಳ್ಳೆದು ಮಾಡಿದ್ದವಿಲ್ಲೆ ಹೇಳುದರ ಗಮನಿಸೆಕ್ಕು. ಆ ನೆಹರು ನಡೆದ ದಾರಿ ಯಾವ ಬ್ರಾಹ್ಮಣಂಗೂ ಮಾದರಿ ಅಲ್ಲ. ಇದನ್ನೇ ಕೋಟೇಶ್ವರ ರಾವ್ ಮತ್ತೆ ಪ್ರಣಬ್ ಮುಖರ್ಜಿ ಇತ್ಯಾದಿಗಳ ಬಗ್ಗೆ ಹೇಳುಲಕ್ಕು. ಹಾಂಗಾಗಿ ನಿಂಗ ಹೇಳಿದ ವಿಷಯಲ್ಲಿ ಹೆಮ್ಮೆ ಪಡುವಂಥದ್ದು ಇದ್ದು ಹೇಳಿ ಅನಿಸುತ್ತಿಲ್ಲೆ.

    {Ella acahara vicharagalandalu hechhagi devara kone obbana maneya, manassina nambikeya jaga, so adu avravara alochanage bittadu}
    ಈ ವಾದವ ಎಲ್ಲಾ ನಂಬಿಕೆಗಳಿಂಗೂ ಅನ್ವಯಿಸುಲೆ ಸಾಧ್ಯ ಇದ್ದು. ಇದರಿಂದಾಗಿ ಯಾವ ಸ್ಪಷ್ಟನೆ ಸಿಕ್ಕುತ್ತು? ಆ ನಂಬಿಕೆಗಳ ಪ್ರಶ್ನಿಸುವುದೇ ಸರಿ ಹೊರತು ನಂಬಿಕೆಗಳ ಆಚರ್ಸಿಕೊಂಡಿಪ್ಪವರ ಅವಹೇಳನ ಮಾಡುದಾಗಲೀ ಅಥವಾ ಪ್ರಶ್ನಿಸುವುದಾಗಲೀ ಉದ್ದೇಶ ಇಪ್ಪಲಾಗ. ಬದಲಾವಣೆ ಮನಸ್ಸಿಂದ ಬಂದಪ್ಪಗಳೇ ಅದಕ್ಕೆ ಬೆಲೆ ಹೊರತು ಇನ್ನೊಬ್ಬನ ಒತ್ತಾಯಕ್ಕೆ ಬದಲಾದರೆ ಅದರಂದ ಯಾವ ಉಪಯೋಗವೂ ಇಲ್ಲೆ.

    {avu suru madida horatagale mattondu jathiya ugamakke karana aaddu durantha!!!}
    ಅದಕ್ಕೆ ಎನಗನಿಸುದು ಜಾತಿಯ ತೆಗದು ಹಾಕುವ ಪ್ರಯತ್ನ ವ್ಯರ್ಥ. ಅದು ನಿಸರ್ಗ ವಿರೋಧಿ ಕೂಡ. ಅದಕ್ಕೆ ಬದಲಾಗಿ ಆಯಾಯ ಜಾತಿಗಳಲಿಯೇ ಅವಕ್ಕೆ ಧಾರ್ಮಿಕ ಶಿಕ್ಷಣ ಸಿಕ್ಕುವ ವ್ಯವಸ್ಥೆ ಮಾಡೆಕ್ಕು. ಹಿಂದೆ ವೈದಿಕ ಪರಂಪರೆ ಭಾರತಲ್ಲಿ ಹರಡುವಗ ಅಂದಿನ ಬ್ರ್ಹಾಹ್ಮಣರು ಮಾಡಿದ್ದೂ ಇದನ್ನೇ. ಬುಡಕಟ್ಟುಗಳ ದೈವಂಗಳ ಪ್ರಶ್ನಿಸುದು, ಅವರ ಜಾತಿ ಬದಲಾಯಿಸುದು ಮುಂತಾದ ವ್ಯರ್ಥ ಪ್ರಯತ್ನ ಬಿಟ್ಟು ಅವು ವೈದಿಕ ಧರ್ಮದ ಮೂಲ ತತ್ವಂಗಳ ಎಲ್ಲರಿಂಗೂ ಮನದಟ್ಟು ಮಾಡುತ್ತಾ ಬಂದವು. ಅದರ ಫಲವೇ ಇಂದಿಗೂ ಬುಡಕಟ್ಟುಗೊ, ಬೇರೆ ಬೇರೆ ಜಾತಿಗೊ ಇತ್ಯಾದಿ ಬೇರೆ ಬೇರೆ ದೈವಂಗಳ ಪೂಜ್ಸಿದರೂ ಧರ್ಮದ ಬೇರುಗಳ ತೊರದವಿಲ್ಲೆ. ಉದಾಹರಣೆಗೆ ಪುನರ್ಜನ್ಮದ ತತ್ವಂಗ, ಕರ್ಮ ಸಿಧ್ಧಾಂತ ಇತ್ಯಾದಿ ಅವರಲ್ಲಿಯೂ ಹೃಸ್ವ ರೂಪಲ್ಲಿ ಇದ್ದು. ಹೆಚ್ಚು ತಿಳುವಳಿಕೆ ಇಪ್ಪ ಬುಡಕಟ್ಟು ಜನಂಗೊ ಈ ತಿಳುವಳಿಕೆಯ ಇನ್ನೂ ಹೆಚ್ಚು ಅರಿತುಕೊಂಡು ಸ್ವತಹ ಮಹರ್ಷಿಗಳು, ಸಂತರಾದ್ದುದೆ ಇದ್ದು. ಉದಾಹರಣೆಗೆ ಮಹಾಭಾರತ ಬರದ ವ್ಯಾಸ ಮುನಿ ಹುಟ್ಟಿಂದ ಬೇಡರವ ಅಲ್ಲದ? ಇದು ವೈದಿಕ ಧರ್ಮವ ಭಾರತದಾದ್ಯಂತ ಹರಡಿದ ಅಂದಿನ ನಮ್ಮ ಪೂರ್ವಿಕರ ಬುಧ್ಧಿವಂತಿಕೆ. ಈಗ ನಮ್ಮಲ್ಲಿ ಆ ಬುಧ್ಧಿವಂತಿಕೆ ಇಲ್ಲದ್ದಿಪ್ಪದು ದುರದೃಷ್ಟ.

    ಇನ್ನು ಜಾತಿ ಬೇಡ ಹೇಳಿದ ನಾರಾಯಣಗುರು ಗುರು ಅನುಯಾಯಿಗೊ ಈಗ ಅವರದ್ದೇ ಜಾತಿ (ಪೂಜಾರಿ) ಆದ್ದದರಲ್ಲಿ ವಿಶೇಷ ಎಂತ ಇಲ್ಲೆ. ಗುರು ಗತಿಸಿ ಅಪ್ಪಗ ಅವರ ಶಕ್ತಿಯೂ ಹೆಚ್ಚು ಕಮ್ಮಿ ಹೋವುತ್ತು. ಗುರು ಪರಂಪರೆ ಹೇಳಿ ಮಾಡಿದರುದೆ ಅದು ಎಲ್ಲಾ ಕಡೆ ಪ್ರಖರತೆ ಉಳಿಸಿಕೊಳ್ಳುತ್ತ ಸಾಧ್ಯತೆ ಕಮ್ಮಿ. ಅಷ್ಟಪ್ಪಗ ತತ್ವಂಗ ನಶಿಸಿ ಬರೇ ವ್ಯಕ್ತಿ ನೆನಪು ಮಾತ್ರ ಒಳಿತ್ತು ಅಷ್ಟೆ. ದೇಶಲ್ಲಿ ಧಾರ್ಮಿಕ ಶಿಕ್ಷಣ ಹೇಳ್ತ ಒಂದು ಗಟ್ಟಿ ಮುಟ್ಟಾದ ವ್ಯವಸ್ಥೆ ಇದ್ದರೆ ಒಬ್ಬ ಗುರು ಗತಿಸಿದರೆ ಇನ್ನೊಬ್ಬ ಗುರು ಹುಟ್ಟಿಕೊಳ್ಳುತ್ತ. ಸಮಾಜಲ್ಲಿ ಧಾರ್ಮಿಕತೆ ಕಮ್ಮಿ ಆವುತ್ತಿಲ್ಲೆ ಅಷ್ಟಪ್ಪಗ.

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ನಮ್ಮ ಮಾತಿಂಗೆ ರಜ ಮೂಲಾಧಾರ ಬೇಕಲ್ಲದೊ? ಅಭಿಪ್ರಾಯಕ್ಕೂ ಆಧಾರ ಬೇಕಲ್ಲದೊ? ಅನುಭವ ಇದ್ದರೆ ಇನ್ನೂ ಒಳ್ಳೆದು;
    @{{Obba brahmanyava bittaru bloodili bappa dhee shakthi bande battu}ಇದು ಒಂದು ತಪ್ಪು ನಂಬಿಕೆ ಹೇಳಿ ಎನಗನಿಸುತ್ತು. ಧೀ ಶಕ್ತಿ ಹಿರಿಯರಿಂದ ಬಪ್ಪದಿದ್ದರೆ ಉಪನಯನದ ಅವಶ್ಯಕತೆ ಎಂತ ಇದ್ದು ಅಲ್ಲದ?}=
    ವೇದಲ್ಲಿ ರೇತಸ್ ಶಕ್ತಿಯ ವ್ಯಾಪನೆಯ ವಿಚಾರ ಇದ್ದು. ಇದು ಹುಟ್ಟಿನ ಮೂಲದ ಶಕ್ತಿಯ, ಮತ್ತೆ ಅದಕ್ಕೆ ಸಂಬಂಧಪಟ್ಟ ವಿಚಾರಂಗೊ; ಉಪನಯನಾದಿಗೊ ಅದರ ಒಳುಶಿ ಬೆಳಶುಲೆ ಇಪ್ಪದು; ಇಲ್ಲದ್ದರೆ ಮೂರು ತಲೆಮಾರಿಲಿ ನಷ್ಟಪ್ರಾಯ ಆವುತ್ತು ಹೇಳಿ ವೇದ ಹೇಳುತ್ತು.
    ಹಾಂಗಾಗಿ Harish kevala ಮತ್ತೆ ನೀರ್ಕಜೆ ಅಪ್ಪಚ್ಚಿ ಇಬ್ರೂ ಹೇಳಿದ್ದು ಅಪರಿಪೂರ್ಣ ಹೇಳಿ ಎನ್ನ ಅಭಿಪ್ರಾಯ.
    @{Viparyasa helire Basavannaninda hidudu Dayanda saraswathiyavara varege samajada jathi paddathiya tegadu hakule heratu avu suru madida horatagale mattondu jathiya ugamakke karana aaddu durantha!!!,}=
    ಇದಕ್ಕೆ ಬೇಕಾಗಿಯುದೇ ಆತು ಹೇಳಿ ಆನು “ದಯಾನಂದ ಸರಸ್ವತಿಯವರ ಅದ್ಭುತ ಪ್ರಯತ್ನ- ಸಿದ್ಧಾಂತಂಗೊ ಎಲ್ಲವೂಸರಿಹೇಳಿ ಅಲ್ಲ – ವ್ಯವಹಾರ್ಯವೂ ಅಲ್ಲ.” ಹೇಳಿ ಹೇಳಿದ್ದು.
    ಇಪ್ಪ ವ್ಯವಸ್ಥೆಯ ಮುರಿವಲಾಗ- ರೂಪಾಂತರುಸೆಕ್ಕು. ಇಲ್ಲದ್ದರೆ “ಇತೋ ಭ್ರಷ್ಟ: ತತೋ ಭ್ರಷ್ಟ:” ಆವುತ್ತು.
    “ಜನರಲ್ಲಿ ಬುದ್ಧಿಭೇದ ಉಂಟು ಮಾಡುಲಾಗ”- ಗೀತೆ.
    “ಸುಧಾರಣೆ” ಮಾಡುವಗ “ಬುದ್ಧಿಭೇದ” ಉಂಟುಮಾಡುಲಾಗ ; ದಯಾನಂದ ಸರಸ್ವತಿಗಳುದೇ ಈ ಬಹು ದೊಡ್ಡ ತಪ್ಪು ಮಾಡಿದ್ದವು. ಉಳುದವರ ವಿಷಯ ಬಿಡಿ!

    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    {ಉಪನಯನಾದಿಗೊ ಅದರ ಒಳುಶಿ ಬೆಳಶುಲೆ ಇಪ್ಪದು; ಇಲ್ಲದ್ದರೆ ಮೂರು ತಲೆಮಾರಿಲಿ ನಷ್ಟಪ್ರಾಯ ಆವುತ್ತು ಹೇಳಿ ವೇದ ಹೇಳುತ್ತು. ಹಾಂಗಾಗಿ Harish kevala ಮತ್ತೆ ನೀರ್ಕಜೆ ಅಪ್ಪಚ್ಚಿ ಇಬ್ರೂ ಹೇಳಿದ್ದು ಅಪರಿಪೂರ್ಣ ಹೇಳಿ ಎನ್ನ ಅಭಿಪ್ರಾಯ}
    ಅದಾ, ಹೇಂಗೆ ಮಾಹಿತಿಗೊ ಸಿಕ್ಕುತ್ತಾ ಇದ್ದು! ಮಣ್ಣು ಒಕ್ಕಿದರೆ ಚಿನ್ನ ಸಿಕ್ಕುಗು.. ಹಾಂಗೆ ಇಲ್ಲಿ ಬೈಲಿಲು ಚೂರು ಬೆಶಿ ಬೆಶಿ ಚರ್ಚೆ ಮಾಡಿದರೆ ಒಳ್ಳೊಳ್ಳೆ ಮಾಹಿತಿ ಸಿಕ್ಕುತ್ತು ಹೇಳಿ ಆತು, ಅಲ್ಲದಾ..

    {ದಯಾನಂದ ಸರಸ್ವತಿಗಳುದೇ ಈ ಬಹು ದೊಡ್ಡ ತಪ್ಪು ಮಾಡಿದ್ದವು. ಉಳುದವರ ವಿಷಯ ಬಿಡಿ!}
    ಮುರಿವಲಾಗ- ರೂಪಾಂತರುಸೆಕ್ಕು ಹೇಳ್ತದು ಅರ್ಥ ಆತು. ಅದಕ್ಕೆ ಜಾತಿಯ ತೆಗದು ಹಾಕುವ ಪ್ರಯತ್ನ ವ್ಯರ್ಥ ಹೇಳಿ ಆನು ಹೇಳಿದ್ದು. ಇರಳಿ, ಆದರೆ ದಯಾನಂದ ಸರಸ್ವತಿ ಹೇಂಗೆ ಮುರಿವ ಕೆಲಸ ಮಾಡಿದವು ಹೇಳಿ ಮಾತ್ರ ಗೊಂತಾಯಿದಿಲ್ಲೆ. ಇರಳಿ, ಇದು ದಯಾನಂದ ಸರಸ್ವತಿ ಕೇಂದ್ರೀಕೃತ ಚರ್ಚೆ ಅಪ್ಪದು ಬೇಡ.

    Harish kevala Reply:

    Appachhi, oppanna.comili hegiruva gambira vishayada bagge tingalige ondadaruu charcahge aadre uttama..

    VA:F [1.9.22_1171]
    Rating: 0 (from 0 votes)

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ಆರ್ಯಸಮಾಜದ ಬಹುಪಾಲು ಕಾರ್ಯಂಗಳ ಅವಲೋಕನ ಮಾಡಿದರೆ ಸಾಕು.ಅವರ ಗ್ರಾಂಥಿಕ ಸಾಹಿತ್ಯದೊಟ್ಟಿಂಗೆ ಅದರ ಜಾರಿಮಾಡಿದ ವಿಧಾನ, ಸಮಾಜದ ಬಹುಪಾಲು ಪಾರಂಪರಿಕ ಹಾಂಗೂ ಶಾಸ್ತ್ರೀಯ ಅನುಸರಣೆಗಳ- ಆಚಾರಂಗಳ ಸಾರಾಸಗಟು ತಿರಸ್ಕಾರ ಇತ್ಯಾದಿಗಳನ್ನೂ ಗಮನಿಸೆಕ್ಕಾವುತ್ತು; ಬೆರಳಿಂಗೆ ಮುಳ್ಳು ತಾಗಿ ರೆಶಿಗೆ ಆದರೆ ಸುರುವಿಂಗೇ ಬೆರಳನ್ನೇ ತುಂಡುಮಾಡಿ ತೆಗವದು ಮೂರ್ಖತನ ಅಲ್ಲದೋ? (ಅದು ಕಡೆಯಾಣ ಆಯ್ಕೆ ಅಲ್ಲದೊ?).

    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    ಇದರ ಚರ್ಚೆ ಮಾಡುಲೆ ಎನಗಂತೂ ಇಚ್ಛೆ ಇದ್ದು. ಆದರೆ ಇದು ಎಲ್ಲೆಲ್ಲಿಯೋ ಹೋಕು. ಒಪ್ಪಣ್ಣನ ಬೈಲಿಲಿ ಕಮ್ಮಿಲಿ ಒಂದೈದು ಜನ ಚರ್ಚೆಗೆ ಸಿಕ್ಕುಗಾರೆ ಇದರ ಬಗ್ಗೆ ಹೊಸಾ ಚರ್ಚೆ ಶುರು ಮಾಡುಲಕ್ಕು. ಇಲ್ಲಾರೆ ಸುಮ್ಮನೆ ರಜೆ ಮಜಾಲ್ಲಿಪ್ಪ ಬೈಲಿನವಕ್ಕೆ ತಲೆ ಚಿಟ್ಟು ಹಿಡಿಶಿದ ಪಾಪ ನವಗೆಂತಕ್ಕೆ ಅಲ್ಲದ..

    ಮುಳಿಯ ಭಾವ

    ರಘುಮುಳಿಯ Reply:

    ಚರ್ಚೆಗೆ ಸೇರುವ ಯೋಗ್ಯತೆ ಇಲ್ಲದ್ದರೂ ಎರಡು ಹೊಸ ಪುಸ್ತಕ ತೆಗೆಯೆಕ್ಕು ಹೇಳಿ ಗೊಂತಾತು.ಗೊಂತಿಲ್ಲದ್ದ ವಿಷಯ ಸುಮಾರು ಬತ್ತಾ ಇದ್ದು,ಚರ್ಚೆ ಮುಂದುವರಿಸಿ.

    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    ಅರ್ಹತೆ ಒಂದೋ ಎಲ್ಲಾರಿಂಗೂ ಇದ್ದು, ಅಥವಾ ಆರಿಂಗೂ ಇಲ್ಲೆ. :) ಅಲ್ಲದ!

    VA:F [1.9.22_1171]
    Rating: 0 (from 0 votes)

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    @ನೀರ್ಕಜೆ ಅಪ್ಪಚ್ಚಿ/ಮಹೇಶ {ದಯಾನಂದ ಸರಸ್ವತಿ ಕೇಂದ್ರೀಕೃತ ಚರ್ಚೆ ಅಪ್ಪದು ಬೇಡ}.=
    ಅದುದೇ ಸರಿ;ಪುಂಟೆ ಜಗಿವದು ಬೇಡ ಅಲ್ಲದೋ!. ಹೆಚ್ಚು ಮಾತಾಡಿದರೆ ಎನ್ನ ನಿಜ ಬಣ್ಣ ಬಯಲಪ್ಪ ಹೆದರಿಕೆಯೂ ಎನಗಿದ್ದು.
    ಇರಳಿ,
    @ರಘುಮುಳಿಯ=
    ಎಡೇಲಿ ಮುಳಿಯದಣ್ಣನ ಭಾಮಿನಿ ಬಂದಿದ್ದರೆ ಲಾಯಕ ಇತ್ತು.
    {ಚರ್ಚೆಗೆ ಸೇರುವ ಯೋಗ್ಯತೆ ಇಲ್ಲದ್ದರೂ}= ?

    VA:F [1.9.22_1171]
    Rating: 0 (from 0 votes)

    Harish kevala Reply:

    Neerkaje appacchi aanude adanne helidddu, yavude samajalli olleyadvtaru kettadavtaru adaralli brahmanara koduge doddadu heliddu, example agi olledakku kettadakku elladakku melinavara udaharane kottadu…Matte Dhee shakthi upanayandalu hechhagi obbange genetic agide bappadu tumba iddu.. hagagi obba brahmanatva follow madadru ( eg:communistgo) avara brain sharp irtu…
    Matte nambikegala vishaya khanditha yavude acharanegalannu otatyanda badalisudu sadhyave ille.. Hage heli prati ondu jathigoo tannade aada vaishishtya idde irtu.. Badalavane matte jatyateethateya hesarili namma identity hopalaga alda…
    Koneyadaagi Dhaarmika, aadhyatmika shikshana ningo heludara opputte… Aanu ippa Gulfili obba muslimetara muslim adare 1.5 laksha Indian rupees sikkuttu.. hage heli idakkagi convert appa Christians tumba kammi, tumba hindus convert avta irtavu.. Yake helire avakke atleast avradde church matte, network, sariyada dharmika shikshana sikki irtu.. ( hechhina gulf deshangalalli christiangalaste hindugade idaruu avrastu vyavasthithavada pooja mandirango illaddu nammalli irekkada sangha shakthi illada karanave..)
    Aadre ittichina dinangalalli idara anivaryate janagavakke tilita iddu… kelavu vishayangavakke kalave patha kalsuttu… hechahgi anyamateeyaru hechhippa pradeshangalalli sanghatane jagrthi tannastakke huttuttu…
    Adene iddaru hegiruva aarogya poorna charchago samajalli hosa badalavanege nandi hadidare ade dodda santosha.

    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    ಹರೀಶಣ್ಣ, ಇದಾ ಇನ್ನು ಕನ್ನಡ ಲಿಪಿಲಿ ಬರೆಯೆಕ್ಕು ಆತಾ. ಇಲ್ಲಾರೆ ಒಪ್ಪಣ್ಣಂಗೆ ಬೇಜಾರು ಅಕ್ಕು! (ಎನಗೆ ಓದುಲೆ ಕಷ್ಟ ಆವುತ್ತು ಸಾಲದ್ದಕ್ಕೆ..) :)

    Harish Bhat Reply:

    kannada typing battille appachhii:(

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    @ HARISH BHAT=
    1) Please download BARAHA software(free version is available)[baraha.com]
    2) Install it
    3) Start the BARAHA IME Unocode engine – It goes to system tray at right bottom.You can exit from there itself.
    4) F-11 key toggles between Kannada and English
    5) You should need to know only English spelling of kannada words. Just study the ‘help’ of BARAHA (not of BARAHA IME).

    VA:F [1.9.22_1171]
    Rating: +2 (from 2 votes)
  4. ಸುಬ್ಬಯ್ಯ ಭಟ್ಟ ವರ್ಮುಡಿ

    ಎಂತದಕ್ಕೂ ಒಂದರಿ ಸಮಧಾನಲ್ಲಿ ಶತಾವಧಾನಿ ರಾ ಗಣೇಶರ ಗೀತಾ ಪ್ರವಚನ ಮಾಲಿಕೆಯ ಧ್ವನಿಮುದ್ರಿಕೆಯ ಕೇಳಿ ( ಗೋಖಲೆ ಸಂಸ್ಥೆ ಬೆಂಗಳೂರು ) .

    [Reply]

    VA:F [1.9.22_1171]
    Rating: 0 (from 0 votes)
  5. ಸುಬ್ಬಯ್ಯ ಭಟ್ಟ ವರ್ಮುಡಿ

    ಅಲ್ಲ ಈಗ,
    ಕಳಾಯಿ ಗೀತತ್ತೆ ಬೈಲಿಂಗೇ ಕಳಿ ಕುಡುಶಿದಾಂಗೆ ಆಯಿದನ್ನೆ!
    ಆಗಲಿ, ಒಳ್ಳೆದೇ ಆತು.

    [Reply]

    ನೀರ್ಕಜೆ ಮಹೇಶ

    ನೀರ್ಕಜೆ ಮಹೇಶ Reply:

    ಹಹ.. ಕಳಿ ಕುಡುದ ಹಾಂಗೆ ಆಯಿದಿಲ್ಲೆಪ್ಪ.. ಹಾಲು ಕುಡುದ ಹಾಂಗೆ ಆತು, ಆದರೆ ಹಾಲು ಚೂರು ಬೆಶಿ ಬೆಶಿ ಇದ್ದು ಹೇಳಿ ಅಷ್ಟೆ.. :)

    [Reply]

    Harish Bhat Reply:

    haha,, halu halappale bidadre aatu yavagade charcheli..:)

    [Reply]

    VA:F [1.9.22_1171]
    Rating: 0 (from 0 votes)

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ಸರಿ, ಎನ್ನದು ನೀಚೋಪಮೆ ಆತು…. ಹಹಹಾ…

    [Reply]

    VA:F [1.9.22_1171]
    Rating: 0 (from 0 votes)
  6. ಮೋಹನಣ್ಣ
    Krishnamohana Bhat

    ಇಲ್ಲಿ ಇನ್ನೊ೦ದು ಪ್ರಶ್ನೆ:- ಹುಟ್ಟು ಮನಷ್ಯಾನ ಮೇಲೆ ಪರಿಣಾಮ ಬೀರುತ್ತೋ?ಖ೦ಡಿತಾ ಹೇಳಿ ಎನ್ನ ಅಭಿಪ್ರಾಯ.ರಕ್ತ ಗುಣ ಹೇಳುವದು ಬ೦ದೇ ಬತ್ತು.ಅವನವನ ಅಬ್ಬೆ ಅಪ್ಪನ ಕೆಲವು ಗುಣ೦ಗೊ ಆದರೂ ಬ೦ದೇಬತ್ತು.ಅ೦ಬಗ ಈ ಬ್ರಾಹ್ಮಣ್ಯವೂ ಬಾರದೊ?ಅದು ಹೆಚ್ಹೋಕಮ್ಮಿಯೋ ಹೇಳುವದು ಬೇರೆ.ಇನ್ನು ಯಾವಗಳೂ ಒ೦ದು ಪರಿವರ್ತನೆ ಆಗೀದ್ರೆ ಅದರಲ್ಲಿ ನಮ್ಮ ದೇಶದ ಮಟ್ಟಿ೦ಗೆ ಬ್ರಾಹ್ಮಣರ ಪಾತ್ರ ಇದ್ದು.ಅದಕ್ಕೆ ಜೆನ ಬೆ೦ಬಲ ಸಿಕ್ಕಿದ್ದೋ ಹೇಳುವದು ಬೇರೆ ಸ೦ಗತಿ.ಎಷ್ಟೋ ಸ೦ಗತಿಗೊ ಅವರ ಮರಣಾನ೦ತರ ಸರಿ ಹೇಳಿ ಆದ್ದದು ಇದ್ದು.ಮತ್ತೆ ಜೆನಗಳ ಸಪೋರ್ಟು ಸಿಕ್ಕಿದ್ದಿಲ್ಲೆ ಹೇಳುವ ಕಾರಣ೦ದ ಸತ್ಯ ಲೊಟ್ಟೆ ಆವುತ್ತಿಲ್ಲೆ.ಶ೦ಕರಾಚಾರ್ಯರ ಹಾ೦ಗಿಪ್ಪ ದಯಿವೀಕ ಪುರುಷರಿ೦ಗೇ ವಿರೋದ ಸಾಕಷ್ಟು ಇತ್ತು ಹಾ೦ಗೆ ಹೇಳಿ ಅವು ವಿದ್ವಾ೦ಸರಲ್ಲಾಹೇಳಿಯೋ ತಿಳುವಳಿಕೆ ಕಮ್ಮಿ ಹೇಳ್ಲೋ ನಮ್ಮ ಹಾ೦ಗಿಪ್ಪ ಸಾಮಾನ್ಯ ಮನುಷ್ಯರಿ೦ಗೆ ಎಡಿಗೊ.ದಯಾನ೦ದ ಸರಸ್ವತಿಗೊ ಹೇಳಿದ್ದೊ೦ದೆ ಸಕಲ ಸತ್ಯ ಹೇಳಿ ನ೦ಬಿಯೊ೦ಡು ಹೋದರೆ ನಾವು ಮುರ್ಖರಕ್ಕೋ? ನಿ೦ಗೊ ಗೀತೆ ಓದುತ್ತೀರೊ ಗೊತಿಲ್ಲೆ ಓದುತ್ತರೆ ಮನುಷ್ಯನ ಹೆಚ್ಚಿನ ಸ೦ಶಯ೦ಗೋಕ್ಕೆ ಸಮಸ್ಯಗೋಕ್ಕೆ ಉತ್ತರ ಅದರಲ್ಲೇ ಸಿಕ್ಕುತ್ತು.ದಯಾನಒದ ಸರಸ್ವತಿಗೋಕ್ಕೆ ಜ್ನಾನ ಇತ್ತಿಲ್ಲೆ ಹೇಳಿಯೋ ಅಥವ ಅವರ ವಿಚಾರ೦ಗೊ ಸರಿಯಲ್ಲ ಹೇಳಿ ಅಲ್ಲ.ಅವ್ವು ಹೇಳಿದ ಸಕಲವೂ ಸರಿ ಹೇಳಿ ಒಪ್ಪಲೆ ಆವುತ್ತಿಲ್ಲೆ.ಪ್ರತಿಯೊ೦ದಕ್ಕೂ ವಿರೋದ ಇರುತ್ತು.ಇನ್ನು ಧೀ ಶಕ್ತಿ ಹಿರಿಯರಿ೦ದ ಬತ್ತರೆ ಉಪನಯನ ಬೇಕೋ ಹೇಳುವ ವಿಷಯ ಉಪನಯನ ಹೇಳುವದು ಸ೦ಸ್ಕಾರ ಅದು ನಿ೦ಗಳ ಜ್ನಾನ ಹೆಚ್ಹುಸಲೆ ವಿದ್ಯಾಭ್ಯಾಸಕ್ಕೆ ಹೊಪಲೆ ಹಿ೦ದಾಣ ಕಾಲಲ್ಲಿ ಮಾಡಿಯೊ೦ಡ ಕ್ರಮ.ಇದರ ಎಲ್ಲ ವಿವರುಸೇಕಾರೆ ಆನೆ ಒ೦ದು ಗ್ರ೦ಥ ಬರೇಕಕ್ಕೋ ಏನೊ;ಆದರೆ ಆನು ಅಷ್ಟು ಜ್ನಾನಿಯೂ ಅಲ್ಲ ಎನಗೆ ವಿವರೆಸಲೆ ಎಡಿಗಕ್ಕೋ ಹೇಳಿ ಗೊ೦ತಿಲ್ಲೆ.ಹಿರಿಯವರ ಆಶೀರ್ವಾದದ ಬಲಲ್ಲಿ ಏನೋ ಮನಸ್ಸಿ೦ಗೆ ಬ೦ದದರ ಬರೆತ್ತೆ ಅಷ್ಟೆ.ಒಪ್ಪ೦ಗಳೊಟ್ಟಿ೦ಗೆ.

    [Reply]

    Harishkevala Reply:

    EE vimarshe tumba sare heli ansutta iddu anna…

    [Reply]

    VA:F [1.9.22_1171]
    Rating: 0 (from 0 votes)

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ಗೀತೆಯ ಅರ್ಥ ಮಾಡಿಗೊಂಬದುದೇ ಕಷ್ಟವೇನ್ನೆಪ್ಪಾ!

    [Reply]

    VA:F [1.9.22_1171]
    Rating: 0 (from 0 votes)
  7. ನೀರ್ಕಜೆ ಮಹೇಶ
    ನೀರ್ಕಜೆ ಅಪ್ಪಚ್ಚಿ

    ಅಬ್ಬೆ ಅಪ್ಪನ ಗುಣ ಬಕ್ಕು ಅಥವಾ ಬಾರ ಹೇಳುವ ಪ್ರಶ್ನೆ ಅಲ್ಲ. ಕೇವಲ ಹುಟ್ಟೇ ಪಾಂಡಿತ್ಯದ ಅಳತೆಗೋಲು ಅಪ್ಪಲೆ ಅಸಾಧ್ಯ ಹೇಳಿ ಎನ್ನ ನಂಬಿಕೆ. ಈ ವಿಷಯಲ್ಲಿ ಇದಮಿಥ್ಥಂ ಹೇಳಿ ಹೇಳಿ ಹೇಳುಲೆ ಬತಿಲ್ಲೆನ್ನೆ.. ಆದಕಾರಣ ವರ್ಮುಡಿ ಬಟ್ಟ ಮಾವ ಹೇಳಿದ್ದೇ ಎನಗೆ ಸರಿ ಹೇಳಿ ಕಾಣುತ್ತು.

    ಇನ್ನು ದಯಾನಂದ ಸರಸ್ವತಿ ಬಗ್ಗೆ. ಅವು ಹೇಳಿದ್ದೆಲ್ಲ ಸಕಲ ಸತ್ಯ ಹೇಳುವ ಪ್ರಶ್ನೆಯೇ ಅಸಂಬಧ್ಧ. ಭಗವಂತ ಮಾತ್ರ ಸಕಲ ಸತ್ಯವ ತಿಳುದವ ಅಲ್ಲದ? ಹಾಂಗಿಪ್ಪಗ ಈ ಲೋಕಲ್ಲಿ ಯಾವ ವಿದ್ವಾಂಸನೂ ಸಕಲವ ತಿಳುದವ ಹೇಳುವ ಹಾಂಗಿಲ್ಲೆ. ಹಾಂಗೆ ಆರಾರು ಹೇಳಿದರೆ ಅವು ಲೊಟ್ಟೆ ಹೇಳುದು ಹೇಳಿಯೇ ಆತು. ಆದಕಾರ ದಯಾನಂದ ಸರಸ್ವತಿ ಹೇಳಿದ್ದರ ವಿಚಾರ ಮಾಡುದರಲ್ಲಿ ತಪ್ಪಿಲ್ಲೆ. ಇನ್ನು ಗೀತೆ ಬಗ್ಗೆ ಹೇಳಿದ್ದಿ. ಗೀತೆಲಿದೆ ಸುಮಾರು ವರ್ಶನುಗೊ ಇದ್ದು. ಅದರಲ್ಲಿ ಯಾವುದು ಸತ್ಯ? ವೇದಕ್ಕೆ ಆದರೆ “ಪಥ”‌ವೆವಸ್ತೆ ಇದ್ದು. ಇದು ಬಾಯಿಂದ ಬಾಯಿಗೆ ಮತ್ತೆ ಶರೀರ ಸಂಜ್ಞೆಗಳ ಮೂಲಕ ರವಾನೆ ಅಪ್ಪ ಕಾರಣ ಇಂದಿಂಗುದೆ ವೇದಂಗ ಬದಲಾಗದ್ದೆ ಒಳುದ್ದು. ಋಗ್ವೇದದ ಎರಡೆರಡು ವರ್ಶನುಗ ಇದ್ದ? ಇಲ್ಲೆನ್ನೆ! ಇದ್ದರೆ ಹೇಳಿ, ತಿಳ್ಕೊಂಬ. ಆದರೆ ಗೀತೆ ಹಾಂಗಲ್ಲ… ಆನು ಹೇಳುದು ಇಷ್ಟೆ. ದಯಾನಂದರು ಹೇಳಿದ್ದು ಇಕ್ಕು, ಶಂಕರರು ಹೇಳಿದ್ದು ಇಕ್ಕು, ಯಾವುದೇ ಆದರು ಅಧ್ಯಯನ ಯೋಗ್ಯ. ಎನ್ನ ಹಾಂಗಿಪ್ಪವಕ್ಕೆ ಯಾವದರಲ್ಲಿದೆ ಹೊಸ ವಿಷಯ ಸಿಕ್ಕುತ್ತು. ಎಲ್ಲ ಓದಿ ಪಾಂಡಿತ್ಯ ಪಡೆದವಂಗೆ ಮಾತ್ರ ಯಾವುದು ಸರಿ ಯಾವುದು ತಪ್ಪು ಹೇಳುವ ಹಕ್ಕು ಇಕ್ಕು ಅಲ್ಲದ?

    [Reply]

    ಸುಬ್ಬಯ್ಯ ಭಟ್ಟ ವರ್ಮುಡಿ Reply:

    ಗೀತೆಯ ಪಾಠಾಂತರಂಗಳಲ್ಲಿ ದೊಡ್ದ ಭೇದಂಗೊ ಇಲ್ಲೆನ್ನೆ. ಅದಕ್ಕೂ ಸರಿಯಾದ ಪಂರಂಪರೆ ಇದ್ದು. ಪ್ರಸ್ಥಾನತ್ರಯ ಭಾಷ್ಯಂಗಳ ಆಚಾರ್ಯರುಗೊ ರಚನೆ ಮಾಡುವಗಳುದೇ ಪಾಠಭೇದಂಗೊ ತೊಂದರೆ ಕೊಟ್ಟಿದಿಲ್ಲೆ.

    [Reply]

    VA:F [1.9.22_1171]
    Rating: 0 (from 0 votes)
  8. ಮೋಹನಣ್ಣ
    Krishnamohana Bhat

    ಗೀತೆಗೆ ಹಲವು ವರ್ಶನುಗೊ ಇಲ್ಲೆ ಅದರ ವಿಮರ್ಶಗೆ ಇಕ್ಕು ಒಬ್ಬೊಬ್ಬ೦ ಒ೦ದೊ೦ದುರೀತಿ ಅರ್ಥಮಡಿಕ್ಕು ಹಾ೦ಗೆ ವೇದಹೇಳುವದು ನಿತ್ಯ ಸತ್ಯ ಅದರ ವಿಮರ್ಶಗಳಲ್ಲಿ ಮಾ೦ತ್ರ ಭೇದ.ಇನ್ನು ಎಲ್ಲ ಮಹಾತ್ಮ೦ಗಳು ಹೆಳಿದ್ದದು ಅರ್ಥ ಪೂರ್ಣವೆ ಹಾ೦ಗೆ ಹೇಳಿ ಇವ್ವೆಲ್ಲ ಹೇಳಿದ್ದದರ ಓದಲೋ ತಿಳಿವಲೋ ನಮ್ಮ ಜನ್ಮ ಸಾಕಕ್ಕೊ?ಇದರಲ್ಲಿ ಆರು ಹೇಳಿದ್ದದು ಸತ್ಯಕ್ಕೆ ಹತ್ತರೆ ಹೇಳಿ ಹೇಳೇಕಾರೆ ನಾವು ಇದರ ಎಲ್ಲ ಓದಿ ಅರ್ಥಮಾಡಿಯೊ೦ಡಿರೆಡದೊ ಅದುಸಾದ್ಯವೊ?ಅ೦ಬಗ ಇದಕ್ಕೆ ಪರಿಹಾರ ಎ೦ತರ?ನವಗೆ ನಮ್ಮದಾದ ಒ೦ದು ಪರ೦ಪರೆ ಇದ್ದು ಸಾದ್ಯ ಇದ್ದವು ಸಣ್ಣಪ್ರಾಯಲ್ಲೆ ಇದರಲ್ಲೆಲ್ಲ ಅಭಿರುಚಿ ಇದ್ದವು ಇದ್ದರೆ ಸಾಕಷ್ಟು ಗ್ರ೦ಥ೦ಗಳ ಒಳ್ಳೆ ಗುರುಗಳ ಮುಖೇನ ತಿಳಿವಲಕ್ಕು.ಅಲ್ಲ್ಲದ್ದವಕ್ಕೆ ನಮ್ಮ ಗುರುಗೊ ಇದ್ದವು ಅವರ ಮಾರ್ಗ ದರ್ಶನಲ್ಲಿ ಹೋದರಾತು.ಗುರುಗಳೂ ಗ್ರ೦ಥ೦ಗಳೂ ಲೋಕಲ್ಲಿ ಎಷ್ಟೂ ಇಕ್ಕು ಆದರೆ ನವಗೆ ನಮ್ಮ ಗುರುಗಳೇ ಸರಿಯಾದ ಗುರುಗೊ ಹೇ೦ಗೆ ಹೆತ್ತಬ್ಬೆ ಒ೦ದೆಯೋ ಹಾ೦ಗೇ ಹವೀಕರಿ೦ಗೆ ಒ೦ದೇ ಗುರುಗೊ.ಅಮ್ಮಾ ಹೇಳಿ ಎಷ್ಟೋ ಜೆನರ ಹೇಳುತ್ತು ಅಬ್ಬೇ ಹೇಳುವದು ಒಬ್ಬನನ್ನೆ.ಇನ್ನು ಹುಟ್ಟೇ ಪಾ೦ಡಿತ್ಯದ ಅಳತೆ ಗೋಲು ಖ೦ಡಿತಾ ಅಲ್ಲ ಆದರೆ ಹುಟ್ಟಿನ ಪ್ರಭಾವ ಪಾ೦ಡಿತ್ಯದ ಮೇಲೆ ಇದ್ದು.ಅಪವಾದ೦ಗೊ ಇಲ್ಲೆ ಹೇಳಿ ಎನ್ನ ಅಭಿಪ್ರಾಯ ಅಲ್ಲ ವಾಲ್ಮೀಕಿ ಬೇಡ೦ ಹೇಳಿ ಗೊ೦ತಿದ್ದೊ೦ಡೇ ಇದರ ಬರದ್ದದು.ಆನು ಓದಿದ ಮಟ್ಟಿ೦ಗೆ ಗೀತಾಪ್ರೆಸ್ಸಿನವು ಪ್ರಕಟ ಮಾಡಿದ ಶ್ರೀಮದ್ಭಗವದ್ಗೀತೆ ಜಯದಯಾಲ ಗೋಯ೦ದಕಾರ ಹಿ೦ದೀ ಟೀಕೆಯ ಕನ್ನಡಾನುವಾದ ಭಾರೀ ಒಳ್ಳೆ ಪುಸ್ತಕ.ಎ೦ಟುನೂರ ಇಪ್ಪತಯಿದು ಪುಟದ ದಪ್ಪ ಬಯಿ೦ಡಿನಪುಸ್ತಕಕ್ಕೆ ಕೇವಲಾ ಎ೦ಬತ್ತು ರುಪಾಯಿ.ಪುಸ್ತಕ ಭ೦ಡಾರ೦ಗಳಲ್ಲಿ ಸಿಕ್ಕುತ್ತು.ಕರ್ನಾಟಕದ ದೊಡ್ಡ ಪೇಟಗಳಲ್ಲಿ ಅವರದ್ದೇ ಪುಸ್ತಕ ಭ೦ಡಾರ೦ಗೊ ಇದ್ದು ಅವ್ವು ಕೊಡುತ್ತ ಪೈಸಗೆ ಕಾಗದದ ಪೈಸೆ ಕೂಡ ಆಗ.ಸುಬ್ಬಯ೦ಣ್ಣೋ ಗೀತೆಯಷ್ಟು ಸುಲಭ ಅರ್ಥ ಮಾಡಿಯೊ೦ಬಲೆ ಬೇರೆ ಏವ ಪುರಾಣ ಗ್ರ೦ಥ೦ಗಳೂಇಲ್ಲೆ ಮನಸ್ಸು ಬೇಕಷ್ಟೆ.ಎನಗೆ ಸ೦ಸ್ಕ್ರುತ ಗೊ೦ತಿಲ್ಲೆ ಆನು ಕೇವಲಾ ಕನ್ನಡ ಅನುವಾದ೦ಗಳ ಓದುತ್ತು ಹಾ೦ಗಾಗಿ ಆನು ಅರ್ಥ ಮಾಡುವದು ತಪ್ಪಾಗಿದ್ದರೆ ಆನು ಓದಿದವು ಕೊಟ್ಟ ಅನುವಾದಾರ್ಥ ತಪ್ಪಾಗಿಕ್ಕು.ನೀರ್ಕಜೆ ಅಪ್ಪಚ್ಚೀ ಆನು ದಯಾನ೦ದ ಸರಸ್ವತಿಯವರಬಿಡಿ ಇಲ್ಲೆಲ್ಲ ಸಾಮಾನ್ಯ ರಾಜಕೀಯಭಾಷಣ ಮಾಡಿಯೊ೦ಡು ತಿರುಗುವವರಷ್ಟೂ ಜ್ನಾನ ಕೂಡಾ ಇಲ್ಲದ್ದವ೦ ಹಾ೦ಗಾಗಿ ಅ೦ತಾ ಮಹಾಮಹಿಮರ ಬಗ್ಯ ಆನು ತಪ್ಪು ಅಬಿಪ್ರಾಯ ಬತ್ತ ಹಾ೦ಗೆ ಬರದಿದ್ದಿದ್ರೆ ನಿ೦ಗೋಗೋ ಬಯಲಿನೋರಿ೦ಗೋ ತಪ್ಪು ಅಭಿಪ್ರಾಯ ಬ೦ದೀದ್ರೆ ಕ್ಷಮೆ ಇರಳಿ.ಒಪ್ಪ೦ಗಳೊಟ್ಟಿ೦ಗೆ

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಪುತ್ತೂರುಬಾವಡೈಮಂಡು ಭಾವಸುಭಗಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ಸುವರ್ಣಿನೀ ಕೊಣಲೆಕಳಾಯಿ ಗೀತತ್ತೆಶ್ರೀಅಕ್ಕ°ಚೆನ್ನೈ ಬಾವ°ಕೊಳಚ್ಚಿಪ್ಪು ಬಾವಮುಳಿಯ ಭಾವಶರ್ಮಪ್ಪಚ್ಚಿವೇಣಿಯಕ್ಕ°ವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಕೇಜಿಮಾವ°ಸಂಪಾದಕ°ಶಾ...ರೀಚುಬ್ಬಣ್ಣಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಬಂಡಾಡಿ ಅಜ್ಜಿವಿದ್ವಾನಣ್ಣರಾಜಣ್ಣವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ