Oppanna.com

ಅಭಿವೃದ್ಧಿ

ಬರದೋರು :   ಕಳಾಯಿ ಗೀತತ್ತೆ    on   01/07/2011    6 ಒಪ್ಪಂಗೊ

ಕಳಾಯಿ ಗೀತತ್ತೆ
Latest posts by ಕಳಾಯಿ ಗೀತತ್ತೆ (see all)

ಹೀಂಗೆ ವಿಷಯ ನೆಂಪು ಆತಿದಾ..

ಅಭಿವೃದ್ಧಿ ಶೀಲ ರಾಷ್ಟ್ರ ಹೇಳಿ ನಮ್ಮ ಸರ್ಕಾರ ಗ್ರಾಮೀಣ ರೋಜ್ಗಾರ್ ಹೇಳಿ ಸುರು ಮಾಡಿ ಬಡತನ ನಿರ್ಮೂಲನೆ ಹೇಳಿ ಸುರು ಮಾಡಿತ್ತಿದಾ …ಎಲ್ಲ ಕೇಳುಲೆ  ಚೆಂದವೇ ..ಎದುರಿಂಗೆ..

ಇಡೀ ದೇಶಲ್ಲಿ ಇಂತ ಸ್ಕೀಮುಗೋ ಬಂತಿದಾ …ಅದರ ಪರಿಣಾಮ …ಒಂದು ಉದಾಹರಣೆ ಹೇಳಿರೆ ತಮಿಳು ನಾಡಿನ ಒಂದು ಜಾಗೆ ..ಇಡೀ ತಮಿಳು ನಾಡ್ಡಿನ್ಗೆ ಅಪ್ಪಷ್ಟು ಅಕ್ಕಿ ಉತ್ಪಾದನೆ ಮಾಡ್ತಾ ಇತ್ತು ..

ಆ ಜಾಗೆ ಈಗ ಅಂತೆ ಹಡಿಲು ಬಿದ್ದುಗೊಂದು ಇದ್ದು .ಈ ಪರಿಸ್ಥಿತಿ ದೇಶಲ್ಲಿ ಎಲ್ಲಾ ದಿಕ್ಕೆಲೂ ಇದ್ದು …ಹೀಂಗಾದರೆ ಅಕ್ಕಿಗೆ ದಿನಂದ ದಿನಕ್ಕೆ ಕ್ರಯ ಹೆಚ್ಚಾಗದ್ದೆ ಎಲ್ಲಿ ಹೋವ್ತು ..??? ಉತ್ಪಾದನೆಯೇ ಇಲ್ಲೇ ಹೇಳುವಗ..

ಪರಿಸ್ಥಿತಿ ಎಂತರ ಹೇಳಿರೆ ಕೆಲಸ ಮಾಡುವ ಜನಂಗೋ 200 ರುಪಾಯಿಗೆ ಮಾರ್ಗ ಒಕ್ಕುವ ಕೆಲಸವೋ ಮರಕಡಿವ ಕೆಲಸವೋ ಎಂತಾರು ಕೊಡ್ತವು ಹೇಳುವಗ ಎಲ್ಲೋರು ಅಲ್ಲಿಗೆ ಓಡಿದವು..

ಈ ಗೆದ್ದೇ ಹೇಳಿ ಕೆಸರು ಮಣ್ಣು ಕೆಲಸ ದಿನ ಇಡೀ ಬೇಡ ಹೇಳಿ …ಅದೇ ಗೆದ್ದೆ ಕೆಲ್ಸಕ್ಕೆ ಬರೆಕ್ಕು ಹೇಳಿ ಇದ್ದರೆ 300 ರುಪಾಯಿ ಕೊಟ್ಟರೆ ಬಪ್ಪೆಯೋ …ಹೇಳುಗು ..

ಉತ್ಪಾದನೆ ಖರ್ಚೇ ಬೆಳೆಂದ ಜಾಸ್ತಿ ಆದರೆ ಯಾವ ರೈತ ಅದೇ ಬೆಳೆ  ಮಾಡ್ತ?

ಜಾಗೆಗೋ ಅಂತೆ ಹಡಿಲು ಬೀಳ್ತು ..

ಆಹಾರ ವಸ್ತುಗಳ ಬೆಲೆ ಜಾಸ್ತಿ ಆವ್ತು..ತನ್ಮೂಲಕ ಎಲ್ಲದಕ್ಕೂ ಏರ್ತು ..Living cost ಹೇಳುದೂ ಏರ್ತು ..

ಉದಾಹರಣೆಗೆ ಒಬ್ಬ 300 ರುಪಾಯಿ ಸಂಪಾದನೆ ಮಾಡುವವಂಗೆ 100 ರುಪಾಯಿ ಕನಿಷ್ಠ ಖರ್ಚು ಇತ್ತು ಮೊದಲು ಹೇಳಿರೆ ..

ಈಗ 400 ರುಪಾಯಿ ಸಂಪಾದನೆ ಮಾಡಿ 200 ರುಪಾಯಿ ಕನಿಷ್ಠ ಖರ್ಚು ಹೇಳಿರೆ ಮೊದಲಾಣಂದ ಪರಿಸ್ಥಿತಿ ಸುಧಾರಣೆ ಆತಾ? ? ಹೇಳಿ ಕನ್ಫ್ಯೂಸ್ ಬಪ್ಪದು ಎನಗೆ

6 thoughts on “ಅಭಿವೃದ್ಧಿ

  1. ಸ್ವಂತ ಕೆಲಸ ಮಾಡೆಕ್ಕು ಹೇಳುದು ಅಭಿಪ್ರಾಯ ಸರಿಯೇ ..ಆದರೆ ಅದು ಅಪ್ಪ ಕೆಲಸವಾ ..? ಹೇಳುದು ಪ್ರಶ್ನೆ ..ಹೆಚ್ಚಿನ ಕೃಷಿ ಕೆಲ್ಸಂಗೋ ಒಬ್ಬೊಬ್ಬೋನೆ ಮಾಡುವ ಕ್ರಮ ಇಲ್ಲೇ ..ಕೊಯ್ಲು ,ಗೊಬ್ಬರ ಹಾಕುದು ,ಎಲ್ಲವುದೇ ಗುಂಪಾಗಿ ಮಾಡಿ ರಜ ದಿನಲ್ಲೇ ಮುಗಿಷೆಕ್ಕಾದಂತ ಕೆಲ್ಸಂಗಲೇ ಇಪ್ಪದು ..ಒಬ್ಬನೇ ಮಾಡುದು ಹೆಳೆಕ್ಕಾರೆ 4 ಮರ, ಸೆಂಟ್ಸ್ ಲೆಕ್ಕಲ್ಲಿ ಜಾಗೆ ಇದ್ದರೆ ಅಕ್ಕಷ್ಟೇ ..ಅದೇ ೧೦ ಎಕರೆ ತೋಟ ,೫ ಎಕರೆ ಗೆದ್ದೆ ಇದ್ದರೆ ಜಾಗೆ ಆರಿಂದೋ ಅವನೇ ಒಬ್ಬನೇ ಮಾಡುದು ಕೆಲಸ ಹೇಳುವ ವ್ಯವಸ್ಥೆ ಸೂಕ್ತ ಹೇಳಿ ಅನ್ನಿಸುತ್ತಾ? ಈಗಲೂ ,ಮೊದಲಿಂಗೂ ದೊಡ್ಡ ಕುಟುಂಬ ಇದ್ದರೂ ಸಣ್ಣದು ಇದ್ದರೂ ಕೆಲಸ ಮಾಡಲೇ ಸಾಮರ್ಥ್ಯ ಇಪ್ಪವ ಒಬ್ಬನೋ ಇಬ್ರೋ ಇಕ್ಕಷ್ಟೇ ..ಹಾಂಗಿಪ್ಪಗ ಜಾಗೆ ಇಪ್ಪೋನು ಕೆಲಸ ಮಾಡೆಕ್ಕು ಕಾರ್ಮಿಕ ವರ್ಗ ಅಗತ್ಯ ಇಲ್ಲೆ ಹೇಳುದು ಸೂಕ್ತ ಹೇಳಿ ಆವ್ತಿಲ್ಲೆ

  2. ಕೆಲಸದ ವಿಷಯಲ್ಲಿ ಕೃಷಿಕರು ಸೇರಿ ಸ್ವಸಹಾಯ ಸ೦ಘ೦ಗಳೋ ಮತ್ತು ಮಾಡಿ ಪರಸ್ಪರರ ಕೃಷಿ ಸ್ಠಳ೦ಗಳಲ್ಲಿ ಸ್ವ೦ತವಾಗಿ ದುಡಿವಲೆ ತಯಾರಾದರೆ ಮಾ೦ತ್ರ ಎ೦ತಾರು ಪ್ರಯೋಜನ ಅಕ್ಕಷ್ಟೆ ಹೇಳಿ ಎನ್ನ ಅಭಿಪ್ರಾಯ.
    ಕೆಲಸಕ್ಕೆ ಬತ್ತ ಜನ೦ಗೊಕ್ಕೆ ನಾವು ಎಷ್ಟು ಕೊಡ್ತೋ ಅಷ್ಟೇ ನವಗೆ ಕೊಟ್ರೆ ನಾವು ಆ ಕೆಲಸ ಮಾಡ್ಳೆ ತಯಾರಿದ್ದೋ? (ನಾವೂ ಸೇರಿದ ಹಾ೦ಗೆ) ಎಲ್ಲೋರುದೆ ಕಮ್ಮಿ ಕಷ್ಟ ಬ೦ದು ಹೆಚ್ಚು ಸ೦ಬಳ ಸಿಕ್ಕೆಕು ಹೇಳಿ ಆಶೆ ಪಡುವಗ ಹೀ೦ಗಿರ್ತ ಪರಿಸ್ಥಿತಿ ಬಪ್ಪದರ್ಲಿ ಆಶ್ಚರ್ಯವೇ ಇಲ್ಲೆ. ಮೊದಲು ಕೆಲವು ವಿಭಾಗ೦ಗೊಕ್ಕೆ ವಿದ್ಯಾಭ್ಯಾಸದ, ವೈಟ್ ಕಾಲರ್ / ಇತರ ಉದ್ಯೋಗದ ಅವಕಾಶ೦ಗೊ ಕಮ್ಮಿ ಇದ್ದತ್ತು. ಆದ ಕಾರಣ ಅವಕ್ಕೆ ಶಾರೀರಿಕ ಅಧ್ವಾನದ ಕೆಲಸ ಮಾಡದ್ದೆ ನಿವೃತ್ತಿ ಇದ್ದತ್ತಿಲ್ಲೆ. ಈಗ ಹಾ೦ಗೆ ಅಲ್ಲ. ಸಾಮಾಜಿಕ ಪರಿಸ್ಥಿತಿಗಳಲ್ಲಿ ಬ೦ದ ವ್ಯತ್ಯಾಸ೦ಗೊ ಎಲ್ಲೋರ ಜೀವನದ ಮೇಲೆ ಪರಿಣಾಮ ಬೀರಿದ್ದು. ಗೆದ್ದೆ ಕೆಲಸ ಮಾಡಿ ದಿನಕ್ಕೆ ೨೫೦ ರುಪಾಯಿ ತೆಕ್ಕೊ ಅಥವಾ ಪೇಟೆಗೆ ಹೋಗಿ ಕೋ೦ಕ್ರೀಟು ಕೆಲಸ ಮಾಡಿ ೪೦೦ ರುಪಾಯಿ ತೆಕ್ಕೊ ಹೇಳಿ ನಮ್ಮ ಹತ್ರೆ ಆಯ್ಕೆ ಮಾಡ್ಳೆ ಬಿಟ್ರೆ ನಾವು ಯಾವುದರ ಆಯ್ಕೆ ಮಾಡುಗು?
    ಕೃಷಿ ಸ್ಥಳ೦ಗಳ ಹಡ್ಳು ಹಾಕಲೆ ಬಿಡ್ಲಾಗ. ನಿಯಮ ತ೦ದಾದರುದೆ ಅದರ ತಡೆಯೆಕು. ಒಟ್ಟಿ೦ಗೆ ಕೆಲಸಕ್ಕೆ ಬೇಕಾದ ಜೆನ೦ಗಳ ಅಗತ್ಯದ ಮೇರೆಗೆ ಪ೦ಚಾಯತ್ ಮುಖಾ೦ತರವೋ ಮತ್ತು ಪೂರೈಸುತ್ತ ವ್ಯವಸ್ಥೆಯ ಬಗ್ಗೆ ಆಲೋಚನೆ ಮಾಡೆಕು. ಅಲ್ಲದ್ರೆ, ಕೆಲಸಕ್ಕೆ ಬತ್ತವಕ್ಕೆ ಬತ್ತ ಉತ್ಪತ್ತಿಲಿ ಒ೦ದು ಭಾಗ ಕೊಡ್ತ ರೀತಿಯ (ಮೊದಲಾಣ ಗೇಣಿಯ ಇನ್ನೊ೦ದು ರೂಪ) ಚಲಾವಣೆಗೆ ತಪ್ಪಲೆ ಎಡಿತ್ತೋ ನೋಡೆಕು. ಎನಗೆ ಗೊ೦ತಿಪ್ಪ ಕೆಲವು ಜೆನ೦ಗೊ ತೆ೦ಕ್ಲಾಗಿ ಇದ್ದವು – ಅವಕ್ಕೆ ಸ್ವ೦ತವಾಗಿ ಕೃಷಿ ಭೂಮಿ ಇಲ್ಲೆ, ಆದರೆ ಅವು ೧-೨ ವರ್ಷಕ್ಕೆ ಬೇರೆ ಜೆನ೦ಗಳ ಭೂಮಿಯ ಬಾಡಿಗ್ಗೆ ತೆಕ್ಕೊ೦ಡು ಸ್ವ೦ತವಾಗಿ ಭೂಮಿಲಿ ಬೆಗರು ಹರಿಸಿ ಕೃಷಿ ಮಾಡಿ ಒಳ್ಳೆ ಲಾಭ ತೆಕ್ಕೋಳ್ತಾ ಇದ್ದವು.
    ಮುಖ್ಯವಾಗಿ ನಮ್ಮ ಮನಃಸ್ಥಿತಿ ಬದಲಾಯೆಕು. ಕೃಷಿಯ ನಾವು ಇಷ್ಟು ಅವಗಣಿಸಿರೆ ಮು೦ದೆ ಯಾವ ಪರಿಸ್ಥಿತೆ ಬಕ್ಕು ಹೇಳಿ ಊಹಿಸಲೇ ಹೆದರಿಕೆ ಆವ್ತು.

  3. ನಾವು ಬರೆ ಮಾರ್ಗ ಒಕ್ಕುವವೊ, ಅಥವಾ ಮರ ಕಡಿವವರದ್ದೊ ಉದಾಹರಣೆ ಕೊಡ್ತು ಎ೦ತಾಳಿರೆ ಅವು ನವಗೆ ಅನಿವಾರ್ಯ. (ಅಲ್ಲದ್ದರೆ ನಮ್ಮ ಗದ್ದೆದೊ ಅಥವಾ ತೋಟದ್ದೊ ಕೆಲಸ ನಾವೆ ಮಾಡ್ತರೆ ಅಕ್ಕು)
    ವಿದ್ಯಾವ೦ತರಲ್ಲೂ ಅದೆ ಅಲ್ಲದಾ ಅಪ್ಪದು? ಯುವಕರು ಹೆಚ್ಚಿನವಅರಿ೦ಗೂ ಪೇಟೆ ಜೀವನದ ಬಗ್ಗೆಯೆ ಆಸಕ್ತಿ. ವಿದ್ಯಾಭ್ಯಾಸ ಆದ ನ೦ತರು ಕ್ರುಶಿ ಬಗ್ಗೆ ಒಲವು ಕಡಮ್ಮೆ ಅಲ್ಲದಾ? ಬೆ೦ಗಳೂರಿನ ಯಾವದೊ ಕ೦ಪ್ಯೂಟರ್ ಸ೦ಸ್ಥೆ ತಿ೦ಗಳಿ೦ಗೆ ೧ ಲಕ್ಶಕ್ಕೂ ಮಿಕ್ಕಿ ಸ೦ಬಳ ಕೊಡುವಗ ಕ್ರುಶಿ ಕೆಲಸಲ್ಲಿ ಅಸಕ್ಥಿ ಒಳಿತ್ತಿಲ್ಲೆ.

    ಕಒಪ್ಯೂಟರ್ ಕೆಲಸದವ೦ಗೂ ಹಾ೦ಗೆಯೆ. ಮೊದಲಾಣವಕ್ಕೆ ತಿ೦ಗಳಿ೦ಗೆ ೧೦ ಸಾವಿರ ಸ೦ಪಾದನೆ ಆಗಿ ೪ ಸಾವಿರ ಒಳ್ಕೊ೦ದು ಇದ್ದರೆ ಈಗಣವಕ್ಕೆ ೧ ಲಕ್ಶ ಸ೦ಪಾದನೆ ಆಗಿ ೪೦ ಸಾವಿರ ಒಳಿತ್ತು.
    ಸ೦ಪಾದಿಸುವ ಪೈಸೆ ಅಭಿವ್ರುದ್ದಿಗೆ ಮಾನದ೦ಡ ಆದರೆ ಕೆಲಸದೊರೂ ಅರಸರೂ ಒಬ್ಬನ ಒಬ್ಬ ಕೈ ಹಿಡ್ಕೊ೦ಡು ನೆಡವದು ಒಳ್ಳೆದು ಹೇಳಿ ಎನ್ನ ಅನಿಸಿಕೆ.

  4. ಅಪ್ಪು ಗೀತಕ್ಕಾ..!
    ನಿ೦ಗೊ ಹೇಳುದು ಸರೀ ಏ..!!

    ಇದು ಒ೦ದು chain reaction ಹೇಳುಲಕ್ಕು.. ಒ೦ದು ಹಳಿ ತಪ್ಪಿರೆ ಇಡೀ ತಲೆ ಕೆಳ ಅಕ್ಕು.. Standard economic equation ಹೇಳುಲಕ್ಕು..

    “when supply is scares, and demand is high – Cost will Go high”

    ಅದೇ ರೀತಿ Cost of living ಕೂಡ. ಇದು ಬರೀ ಪೇಟೆಕೆ ಸೀಮಿತ ಅಲ್ಲಾ.. ನಮ್ಮ ಹಳ್ಳಿಲಿಯೂ ಈಗೀಗ ಪೆಟ್ಟು ಬೀಳುಲೆ ಸುರುವಾಯಿದು..

    ಪೆಟ್ರೂಲು/ ಡೇಸಲು ಹೆಚ್ಚಿರೆ ‍–>> ಅಕ್ಕಿ ತರಕಾರಿ ಎಲ್ಲಾವೂ ಹೆಚ್ಚುತ್ತು..
    ಇದು ಒ೦ದು ರೀತಿ ನೋಡಿರೆ ಸರಕಾರದ ಒ೦ದು strategy ಹೇಳುಲಕ್ಕು..

  5. ನಿಜವಾಗಿದೆ ಈಗ ಹೀಂಗೆ ಅಪ್ಪದೆಲ್ಲ ಕೇಳುವಗ ಎಂತ ಅವಸ್ತೆ ಬಂತಪ್ಪ ಹೇಳಿ ಬೇಜಾರ ಅವ್ತು. ಗೀತತ್ತೆ ಸರಿಯಾದ ಸುದ್ದಿಯ ಸರಿಯಾದ ಸಮಯಲ್ಲೆ ಹೇಳಿದವು.

  6. ಒಟ್ಟಾರೆ ಕನ್ಫ್ಯೂಸ್ ಆತೀಗ.
    ಹಡಿಲು ಬಿಡ್ಲಾಗ ಹೇಳಿ ಕಾನೂನು ಮಾಡಿರೋ?! – ಛೆ ಅದಾತಿಲ್ಲೇ. ಉತ್ಪಾದನೆ ಕಾಸ್ಟ್ ತಾಳೆ ಅವ್ತಿಲ್ಲೆ. ಬೇಡ ಬಿಡುವೋ.
    ಹಡಿಲು ಬಿಡ್ತ ಜಾಗೆಯ ಸರಕಾರವೇ ಬೇಸಯ ಮಾಡೆಕ್ಕು ಹೇಳಿ ಸಿಪರಾಸು ಮಾಡಿರೆಂತ? ಗುಣಾಜೆ ಮಾಣಿ ಮನಸ್ಸು ಮಾಡೆಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×