Oppanna.com

ಆಚಕರೆಲಿ ನಾಯಿ ಸಾಂಕುವ ಕಥೆ …

ಬರದೋರು :   ಕಳಾಯಿ ಗೀತತ್ತೆ    on   12/04/2010    16 ಒಪ್ಪಂಗೊ

ಕಳಾಯಿ ಗೀತತ್ತೆ
Latest posts by ಕಳಾಯಿ ಗೀತತ್ತೆ (see all)

ಆಚಕರೆಲಿ ಒಂದು ನಾಯಿ ಇದ್ದು..ಅಪ್ಪಚ್ಚಿ ಬೆಂಗಳೂರಿಂದ ತಂದದು.ಇದಾ..ಪೈಸೆ ಕೊಟ್ಟು….!!!
ಟಿ.ವಿಲಿ ಫೋನ್ advertise ಲಿ ಬತ್ತಿಲ್ಲೆಯಾ ..ಹಾಂಗೆ ಇಪ್ಪದು ..
ಪೈಸೆ ಕೊಟ್ಟು ತಂದದು ಇದಾ,, ಅದಕ್ಕೆ ಆಚಜ್ಜಂದ ಜಾಸ್ತಿ ಆಥಿತ್ಯ ..ಅದಕ್ಕೆ…..!!! ಅದಕ್ಕೆ ಬೆಶಿ ಬೆಶಿ ಚಪಾತಿಯೇ ಅಯೆಕ್ಕದ..ಅಜ್ಜಂಗೆ ತಣ್ಣoಗೆ,ಹಳತ್ತೋ  ಆವುತ್ತು…
ಒಟ್ಟಾರೆ ನಾಯಿ ಸಾಂಕುವ ಸಂಭ್ರಮ ..!! ವರ್ಷಕ್ಕೊಂದು ಇನ್ಜೆಕ್ಟೆನ್…ರೋಗ ಬಪ್ಪಲಾಗ  ಹೇಳಿ.. ಡಾಕ್ಟ್ರ…ಮಾವ ಬಂದು ಕೊಡುದು..
ಬೆಳ್ಳಾರೆ ಅಕ್ಕನ ಮನೆಲಿ ಬಾಗಿಲು ತೆಗದಪ್ಪಗಳೇ ಏನು ಕೇಳುದೆe..ನಾಯಿ..!! ಅಕ್ಕನ ಹಾಸಿಗೆಲೇ ನಾಯಿದೆ …ಭಾರೀ ಕೊಂಡಾಟ ಇದಾ…

ಓದಿ ಓದಿ ಒರಕ್ಕು ತೂಗುದು ಒಪ್ಪಣ್ಣ ನ ಹಾಂಗೆ ..

ಈಗ babby ಸಿಟ್ಟಿಂಗ್ ನ ಹಾಂಗೆ ನಾಯಿಗೂ ಇದ್ದಡ ಅಪ್ಪಾ..ಉಮ್ಮ…
ಬೆಂಗಳೂರು ಅಕ್ಕ 4 ದಿನಕ್ಕೆ ಗೆಂಡನಒಟ್ಟಿಂಗೆ ದೂರ ಎಲ್ಲಿಯಾರೂ ಹೋಪಲಿದ್ದರೆ  ನಾಯಿಯ ಅಮ್ಮನತ್ರೆ ಬಿಟ್ಟಿಕ್ಕಿ ಹೊeಪದಡ್ಡ. ಅಷ್ಟಪ್ಪಗ ಆನುದೇ ಬತ್ತೆ ಹೇಳುಲೇ ಇಲ್ಲೆ ಇದಾ .. 😉
ಬೆಂಗಳೂರುನ ಹಾಂಗಿಪ್ಪ ಪೇಟೆಗಳಲ್ಲಿ ಫ್ಲಾಟ್ ಗೊ ಇದಾ..ಬೆಂಕಿ ಪೆಟ್ಟಿಗೆಯ ಮೇಲೆ ಮೇಲೆ ಮಡುಗಿದ ಹಾoಗಿಪ್ಪದು..ಅತ್ಲಾಗಿಯಾಣವಕ್ಕೆ  ಇತ್ಳಗಿಯಣವ್ರ ಗೊಂತಿಲ್ಲೆ..ಮತ್ತೆ ನೆಂಟ್ರು ಎಲ್ಲಾ ಬಪ್ಪದು ಹೋಪದು ಹೇಳಿ ಜಾಸ್ತಿ ಇಲ್ಲೆ ..ಬಂದರೂ ಗಂಟೆ ಲೆಕ್ಕ…  ನೆಂಟ್ರು ಬಂದರೆ ರಗಳೆ ಹೇಳಿ ಆಲೋಚನೆ ಇದಾ ಈಗಣವಕ್ಕೆ…ಹಾಂಗೆ ಮತ್ತೆ ಒಬ್ಬನೇ ಇಪ್ಪಲೆ  ಉದಾಸಿನ ಅಪ್ಪದಕ್ಕೆ ಆದರೂ ನಾಯಿ ಚಾಕರಿ, ನಾಯಿ ಆಟ ನೋಡಿಗೊಂದು ಹೊತ್ತು ಕಳವಲೆ   ಒಂದು ಒಳ್ಳೆ ಉಪಾಯ ..:)

ಕಿಟಿಕಿಲಿ ನೋಡುದು ..

ಅಂತೂ ಹಾಂಗೆ ನಾಯಿ ಬಾರೀ  ಕೊಂಡಾಟದ್ದು ..ಮನುಷ್ಯರು  ತಿoಬದರ ಎಲ್ಲಾ ನಾಯಿಗೂ ಹಾಕುದೇ..icecream ,sprite ಸೋಡಾ ..ಮತ್ತೆ ಎಂತದೋ ಎಲ್ಲಾ ..
ಅರಡಿಯ ಅತ್ತೆಗೆ..
ರೇಷ್ಮೆ ಹುಳುವಿoಗೆ ಹಿಪ್ಪುನೇರಳೆ ಸೊಪ್ಪು ಬಿಟ್ಟು ಬೇರೆ ಎಂತರೂ ಹಾಕಿರೆ ಬದುಕುಗಾ ಅದು….ಪ್ರೀತಿ ಹೇಳಿ ಹಿಡಿಯದ್ದ ,ಸ್ವಾಭಾವಿಕವಾಗಿ ತಿನ್ನದ್ದದರ,ಒಗ್ಗದ್ದರ ತಿನ್ಸಿ ಅಭ್ಯಾಸ ಮಾಡ್ಸಿ ನಾಯಿ ತಿಂತು ತಿಂತು ಹೇಳಿ ಹೇಳಿಗೊಂಡರೆ ಪ್ರೀತಿ ಜಾಸ್ತಿ ಹೇಳಿ ಆತಾ….ಆಹಾರಂದಾಗಿಯೇ ಅಲರ್ಜಿ ಅಪ್ಪಲಾಗ ಅಲ್ಲದಾ .4 ಸರ್ತಿ ತೋರ್ಸಿಗೊಂಗು..ಅಥವಾ.. ಅಲರ್ಜಿ ಆಗಿ ತೊಂದರೆ ಆದರೂ ಅದಕ್ಕೆ ಹೇಳುಲೇ ಬಾರ … ನಾಯಿಗೆ ಹೇಳಿ ಒಗ್ಗದ್ದರ ಬಗ್ಗೆಯೇ ಜಾಸ್ತಿ ಖರ್ಚು ಮಾಡುದರ ಬದಲು ಅದೇ ಪೈಸೆಯ ಅಗತ್ಯ ಇಪ್ಪ  ನಮ್ಮವೇ ಪಾಪದ  ಕಲಿವ ಮಕ್ಕೊಗೆ ಕೊಟ್ಟರೆ ಉಪಕಾರ ಅಕ್ಕು ಅಲ್ಲದಾ ಹೇಳಿ ಅಪ್ಪದು ಅತ್ತೆಗೆ….??!!!??

16 thoughts on “ಆಚಕರೆಲಿ ನಾಯಿ ಸಾಂಕುವ ಕಥೆ …

  1. ಆ ನಾಯಿಗೆ ಟೊಯ್ಲೆಟ್ಟಿಂಗೆ ಹೋಪಲೆ ಅಭ್ಯಾಸ ಮಾಡಿಸಿದ್ದವ ಕೇಳಿ ಒಂದರಿ. ರಸ್ತೆ ಬದಿ ಮಾಡಿಸೋವನ್ನ ಕಂಡಪ್ಪಗ ಕೋಪ ಬಪ್ಪದು. ಬೇರೆ ಎಲ್ಲ ಬುದ್ಧಿ ಕಲಿಸಲಾವುತ್ತಡ. ಇದು ಎಂಥಕ್ಕೆ ಎಡಿತ್ತಿಲ್ಲೆ ? ಅವಕ್ಕೆ ಕೊಂಡಾಟ. ಬೇರೆಯವ್ರ ಮನೆ ಎದುರೇ ಮಾಡ್ಸಿಕ್ಕಿ ಓಡುತ್ತವು. ನಮಗೆಂತ ಕರ್ಮ ? ಮನೆ ಒಳವೇ ಮಾಡಿಸು ಹಾಂಗೆ ಕಡ್ಡಾಯ ಮಾಡೆಕ್ಕು. ಆನು ಹೇಳುದು ಅಪ್ಪಾ ? ಅಲ್ಲದಾ ?

  2. ಅದಕ್ಕೆ ಹೇಳುದು, ಬಡವರ ಮನೇಲಿ ಮನುಷ್ಯ ಆಗಿ ಹುಟ್ಟುದಕ್ಕಿಂಥ ಶ್ರೀಮಂತರ ಮನೇಲಿ ನಾಯಿ ಆಗಿ ಹುಟ್ಟೆಕ್ಕು ಹೇಳಿ!! (ಹಿರಿಯೋರು ಹೇಳಿದ್ದು!!!! )ಯಬಾ !!! ನಾಯಿಯಾದರೂ ಎಂಥ ಸೌಕರ್ಯ!!!!

  3. ಗೀತತ್ತೆ ಹೇಳಿದಾಂಗೆ ಅಂತೆ ಆ ನಾಯಿ ಸಾಂಕುಲೆ ಪೈಸೆ ದಂಡ ಮಾಡುದಕ್ಕೆ ಅದರ ಬೇರೆ ಎಂತಾರು ಒಳ್ಳೆ ಕೆಲಸಕ್ಕೆ ಉಪಯೋಗುಸುಲಕ್ಕು.

  4. ಒಪ್ಪಣ್ಣನ ಹಾಂಗೆ ತಿಂಬಲೆ ಸಿಕ್ಕಿರೆ ಒಪ್ಪಣ್ಣನ ಹಾಂಗೆಯೇ ಒರಕ್ಕು ತೂಗುಗು!
    ಪಾಪ!
    ಶುದ್ದಿ ಲಾಯ್ಕಾಯಿದು ಅತ್ತೇ!

    1. ಒಪ್ಪಣ್ಣ ನಳಪಾಕಲ್ಲಿ ಹುಷಾರಿ ಅಡ್ಡ …:P 😀

        1. ಅಲ್ಲ ಒಪ್ಪಣ್ಣ, ದಮಯಂತಿ ಬಂದರೂ, “ನಳ ಪಾಕ” ಹೇಳುದಲ್ಲದೆ “ದಮಯಂತಿ ಪಾಕ” ಹೇಳ್ತವೋ?

          1. ಈಗಳೇ ಇಷ್ಟು ಒರಕ್ಕು ತೂಗುವವ ದಮಯಂತಿ ಪಾಕ ಲಾಯ್ಕಿದ್ದು ಹೇಳಿ ಇಡೀ ದಿನ ಒರಕ್ಕು ತೂಗುಗೋ ಹೇಳಿ…:D

  5. ನಾಯಿಯ ಸ್ವಾಮಿ ನಿಷ್ಠೆ ಎಲ್ಲರೂ ಮೆಚ್ಚೆಕ್ಕಾದ್ದೆ. ಪೇಟೆಯವು ನಾಯಿಗೆ ಬೇಕಾಗಿ ಖರ್ಚು ಮಾಡ್ಲೆ ಹಿಂದೆ ಮುಂದೆ ನೋಡ್ತವಿಲ್ಲೆ ಹೇಳಿ ಮೊನ್ನೆ ಒಂದು ಕಾರ್ಯಕ್ರಮ TV9ಲ್ಲಿ ನೋಡಿ ಗೊಂತಾತು. ಅದರ ಚೆಂದ ಮಾಡ್ಲೆ, ಡ್ರೆಸ್ಸ್ ಮಾಡ್ಲೆ ಸಾವಿರಗಟ್ಲೆ ಖರ್ಚು ಮಾಡುವವೂ ಇದ್ದವು.

  6. ನಾಯಿಗಳ ಬಗ್ಗೆ ಬರದ್ದು ಲಾಯ್ಕ ಆಯಿದು….ಮೊನ್ನೆ ಕದ್ರಿಲಿ ಶ್ವಾನ ಪ್ರದರ್ಶನ ಇತ್ತಡ…(ಕು೦ಬ್ಳೆ ಅಜ್ಜ ಹೋಪನ ಹೇಳಿ ಕೇಳಿದವು..ಹೊಸ ವೋಲ್ವೋ ಬಸ್ಸಿಲಿ!!!ಆದರೆ ಹೋಪಲೆ ಎಡಿಗಾಯಿದಿಲ್ಲೆ)
    ಈಗ ನಾಯಿಗೊಕ್ಕೆ ಬೇಬಿ ಸಿಟ್ಟಿ೦ಗು ಮಾತ್ರ ಅಲ್ಲ..ಬ್ಯೂಟಿ ಪಾರ್ಲರು, ಸೌ೦ದರ್ಯ ಸ್ಪರ್ಧೆ ಎಲ್ಲ ಇದ್ದಡ!!

  7. ಅತ್ತೆ ಹೊಲುದ್ದಲ್ಲ..ಅಂಗಿ….ಅದು ಅತ್ತೆಯ ಫ್ರೆಂಡ್ ನ ನಾಯಿ..ಅತ್ತೆ ಫ್ರೆಂಡ್ ಕೆಲಸ …

  8. ಅತ್ತೆಗೆ ನಾಯಿಗೊಕ್ಕೆ ಕೂಡಾ ಅಂಗಿ ಹೊಲಿವಲೆ ಬತ್ತು ಹೇಳಿ ಎನಗೆ ಗೊಂತಿತ್ತಲ್ಲೆಪ್ಪಾ….. ಈಗಾಣಾ ಕಾಲಲ್ಲಿ ಹೀಂಗುದೇ ಇದ್ದಾ ಉಮ್ಮಪ್ಪ!!!!

  9. ನಾಯಿ ಹೇಳಿದರೆ ಮನುಷ್ಯಂಗೆ ಅತಿ ಹತ್ರಾಣ ಪ್ರಾಣಿ. ಮನುಷ್ಯನ ಒಳ್ಳೆ ಫ್ರೆಂಡ್ ಹೇಳಿಯೂ ಹೇಳ್ತವು. ಎನಗೂ ನಾಯಿಗಳ ಕಂಡರೆ ಭಾರೀ ಕೊಶಿ ಅಪ್ಪದು. ಮನುಷ್ಯರಿಗಿಂತ ಹೆಚ್ಚು ಬುದ್ಧಿ ಇರ್ತಡ ನಾಯಿಗೊಕ್ಕೆ. ಕೆಲವು ಸರ್ತಿ ಟೀವಿಲಿ ನಾಯಿಗಳ ಆಟವ ತೋರ್ಸುವಗ ನೆಗೆ ಬತ್ತು. ಕೊಶಿ ಆವುತ್ತು. ಕೆಲಾವು ನಾಯಿಗೊ ಕೆಮರಕ್ಕೆ ಪೋಸ್ ಕೊಡ್ಲೆ ಉಶಾರಿ. ಆನು ಕೆಲಾವು ಸರ್ತಿ ಮನೆಲಿ ನಾಯಿಗಳ ಪಟ ತೆಗವಲಿದ್ದು. ಮೊದಲು ಇತ್ತಿದ್ದ ನಾಯಿಗಳೂ, ಈಗ ಇಪ್ಪ ‘ಲಲ್ಲು’ ಕೂಡ ಪಟ ತೆಗವದು ಹೇಳಿದರೆ ಪೋಸ್ ಕೊಡುಗು. ಎನ್ನ ಬ್ಲಾಗ್‌ಲ್ಲಿ ಕೆಲಾವು ಪಟ ನಾಯಿಗಳದ್ದು ಹಾಕಿದ್ದೆ. ನೋಡಿ. ಎನಗೆ ಪೇಟೆ ನಾಯಿಗಳಿಗಿಂತ ಊರ ನಾಯಿಗಳೇ ಹೆಚ್ಚು ಇಷ್ಟ.
    ಅತ್ತೆಯ ಲೇಖನ ಲಾಯ್ಕ ಆಯಿದು.

    1. ಅದು ಅಪ್ಪು ಊರ ನಾಯಿ ಗಳೇ ಒಳ್ಳೇದು..ಸಾವಿರ ತಕರಾರು ಇಲ್ಲೆ..

  10. ಮನುಷ್ಯ-ಮನುಷ್ಯ ಸಂಬಂಧ ಕೆಲವು ಸರ್ತಿ ಪ್ರಾಣಿ-ಮನುಷ್ಯರ ಸಂಬಂಧ ಗಾಢವಾಗಿರುತ್ತು ಅಲ್ದಾ?ಹ, ಹೇಳಿದ ಹಾಂಗೆ ನಾಯಿಗೆ ಅಂಗಿ ಹೊಲ್ಡದು ಆರು? ಸೊಂತ ತಯಾರಿಯೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×