ಬರದೋರು :   ಕಳಾಯಿ ಗೀತತ್ತೆ    on   20/12/2010    76 ಒಪ್ಪಂಗೊ

ಕಳಾಯಿ ಗೀತತ್ತೆ
Latest posts by ಕಳಾಯಿ ಗೀತತ್ತೆ (see all)

ನಮ್ಮ ದೇಶ ಅಭಿವೃದ್ಧಿ ಆಯೆಕ್ಕು ಹೇಳಿ ಎಲ್ಲೋರ ಆಶೆ…
ಅದಕ್ಕೆ ನಮ್ಮ ಹಿಂದುಳುದ ವರ್ಗಂಗೊ ಮೊದಲು ಅಭಿವೃದ್ಧಿ ಅಯೆಕ್ಕಡ – ಹಾಂಗೆ, ದೊಡ್ಡ ಮನುಷ್ಯರು ಹೇಳಿದ್ದವಡ..
ಈಗಳೂ ಮೊದಲ ಆದ್ಯತೆಲಿ ಮುಸ್ಲಿಂ, ಹಿಂದುಳಿದ ವರ್ಗಂಗಳ ಅಭಿವೃದ್ಧಿ ಅಯೆಕ್ಕು ಹೇಳಿ ದೊಡ್ಡ ಮನುಷ್ಯರು ಹೇಳ್ತಾ ಇರ್ತವು, ಆವಾಗ ಆವಾಗ…

ಹಾಂಗೆ ದೇಶದ ದೊಡ್ಡ ಮನುಷ್ಯರು ಕಾಯಿಲೆ ಬಿದ್ದಪ್ಪಗ ಎಂತಕೆ ಹೆರ ದೇಶಕ್ಕೆ ಹೋಗಿ ಆಪರೇಷನ್ ಮಾಡ್ಸಿಗೊಂಡು ಬತ್ತವು …?!!!
ಅಲ್ಲದ್ರೆ ಬೊಂಬಾಯಿ ,ಬೆಂಗಳೂರು ಹೀಂಗೆ ದೊಡ್ಡ ದೊಡ್ಡ ಡಾಕ್ಟ್ರ ಹುಡ್ಕುತ್ತವು..ಎಂತಕೆ ಹೇಳುದು ಗೊಂತಾವ್ತಿಲ್ಲೆ…
ಅವೇ ಹೇಳುವ ಹಾಂಗೆ ಅವಕ್ಕೆ ಆಪರೇಷನ್ ಗೆ Reserved  Categoryಗೊಕ್ಕೆ ಮೊದಲ ಆದ್ಯತೆಲಿ ಕೊಡೆಕ್ಕಪ್ಪ.
ಹಾಂಗೆಯೇ, ದೊಡ್ಡ ಕೇಸ್ ಲಿ ಮುಳುಗಿ ಇಪ್ಪಗ, ಪೈಲೆಟ್, ಹೀಂಗೆ  ಎಲ್ಲದರಲ್ಲೂ  ಆದ್ಯತೆ ಕೊಡೆಕ್ಕಪ್ಪ..!
ಎಂತಕೆ ಹಾಂಗೆ ನಡೆತ್ತಿಲ್ಲೆ…???!!!!!

76 thoughts on “ದೇಶ

  1. ಗೀತೆಗೆ ಹಲವು ವರ್ಶನುಗೊ ಇಲ್ಲೆ ಅದರ ವಿಮರ್ಶಗೆ ಇಕ್ಕು ಒಬ್ಬೊಬ್ಬ೦ ಒ೦ದೊ೦ದುರೀತಿ ಅರ್ಥಮಡಿಕ್ಕು ಹಾ೦ಗೆ ವೇದಹೇಳುವದು ನಿತ್ಯ ಸತ್ಯ ಅದರ ವಿಮರ್ಶಗಳಲ್ಲಿ ಮಾ೦ತ್ರ ಭೇದ.ಇನ್ನು ಎಲ್ಲ ಮಹಾತ್ಮ೦ಗಳು ಹೆಳಿದ್ದದು ಅರ್ಥ ಪೂರ್ಣವೆ ಹಾ೦ಗೆ ಹೇಳಿ ಇವ್ವೆಲ್ಲ ಹೇಳಿದ್ದದರ ಓದಲೋ ತಿಳಿವಲೋ ನಮ್ಮ ಜನ್ಮ ಸಾಕಕ್ಕೊ?ಇದರಲ್ಲಿ ಆರು ಹೇಳಿದ್ದದು ಸತ್ಯಕ್ಕೆ ಹತ್ತರೆ ಹೇಳಿ ಹೇಳೇಕಾರೆ ನಾವು ಇದರ ಎಲ್ಲ ಓದಿ ಅರ್ಥಮಾಡಿಯೊ೦ಡಿರೆಡದೊ ಅದುಸಾದ್ಯವೊ?ಅ೦ಬಗ ಇದಕ್ಕೆ ಪರಿಹಾರ ಎ೦ತರ?ನವಗೆ ನಮ್ಮದಾದ ಒ೦ದು ಪರ೦ಪರೆ ಇದ್ದು ಸಾದ್ಯ ಇದ್ದವು ಸಣ್ಣಪ್ರಾಯಲ್ಲೆ ಇದರಲ್ಲೆಲ್ಲ ಅಭಿರುಚಿ ಇದ್ದವು ಇದ್ದರೆ ಸಾಕಷ್ಟು ಗ್ರ೦ಥ೦ಗಳ ಒಳ್ಳೆ ಗುರುಗಳ ಮುಖೇನ ತಿಳಿವಲಕ್ಕು.ಅಲ್ಲ್ಲದ್ದವಕ್ಕೆ ನಮ್ಮ ಗುರುಗೊ ಇದ್ದವು ಅವರ ಮಾರ್ಗ ದರ್ಶನಲ್ಲಿ ಹೋದರಾತು.ಗುರುಗಳೂ ಗ್ರ೦ಥ೦ಗಳೂ ಲೋಕಲ್ಲಿ ಎಷ್ಟೂ ಇಕ್ಕು ಆದರೆ ನವಗೆ ನಮ್ಮ ಗುರುಗಳೇ ಸರಿಯಾದ ಗುರುಗೊ ಹೇ೦ಗೆ ಹೆತ್ತಬ್ಬೆ ಒ೦ದೆಯೋ ಹಾ೦ಗೇ ಹವೀಕರಿ೦ಗೆ ಒ೦ದೇ ಗುರುಗೊ.ಅಮ್ಮಾ ಹೇಳಿ ಎಷ್ಟೋ ಜೆನರ ಹೇಳುತ್ತು ಅಬ್ಬೇ ಹೇಳುವದು ಒಬ್ಬನನ್ನೆ.ಇನ್ನು ಹುಟ್ಟೇ ಪಾ೦ಡಿತ್ಯದ ಅಳತೆ ಗೋಲು ಖ೦ಡಿತಾ ಅಲ್ಲ ಆದರೆ ಹುಟ್ಟಿನ ಪ್ರಭಾವ ಪಾ೦ಡಿತ್ಯದ ಮೇಲೆ ಇದ್ದು.ಅಪವಾದ೦ಗೊ ಇಲ್ಲೆ ಹೇಳಿ ಎನ್ನ ಅಭಿಪ್ರಾಯ ಅಲ್ಲ ವಾಲ್ಮೀಕಿ ಬೇಡ೦ ಹೇಳಿ ಗೊ೦ತಿದ್ದೊ೦ಡೇ ಇದರ ಬರದ್ದದು.ಆನು ಓದಿದ ಮಟ್ಟಿ೦ಗೆ ಗೀತಾಪ್ರೆಸ್ಸಿನವು ಪ್ರಕಟ ಮಾಡಿದ ಶ್ರೀಮದ್ಭಗವದ್ಗೀತೆ ಜಯದಯಾಲ ಗೋಯ೦ದಕಾರ ಹಿ೦ದೀ ಟೀಕೆಯ ಕನ್ನಡಾನುವಾದ ಭಾರೀ ಒಳ್ಳೆ ಪುಸ್ತಕ.ಎ೦ಟುನೂರ ಇಪ್ಪತಯಿದು ಪುಟದ ದಪ್ಪ ಬಯಿ೦ಡಿನಪುಸ್ತಕಕ್ಕೆ ಕೇವಲಾ ಎ೦ಬತ್ತು ರುಪಾಯಿ.ಪುಸ್ತಕ ಭ೦ಡಾರ೦ಗಳಲ್ಲಿ ಸಿಕ್ಕುತ್ತು.ಕರ್ನಾಟಕದ ದೊಡ್ಡ ಪೇಟಗಳಲ್ಲಿ ಅವರದ್ದೇ ಪುಸ್ತಕ ಭ೦ಡಾರ೦ಗೊ ಇದ್ದು ಅವ್ವು ಕೊಡುತ್ತ ಪೈಸಗೆ ಕಾಗದದ ಪೈಸೆ ಕೂಡ ಆಗ.ಸುಬ್ಬಯ೦ಣ್ಣೋ ಗೀತೆಯಷ್ಟು ಸುಲಭ ಅರ್ಥ ಮಾಡಿಯೊ೦ಬಲೆ ಬೇರೆ ಏವ ಪುರಾಣ ಗ್ರ೦ಥ೦ಗಳೂಇಲ್ಲೆ ಮನಸ್ಸು ಬೇಕಷ್ಟೆ.ಎನಗೆ ಸ೦ಸ್ಕ್ರುತ ಗೊ೦ತಿಲ್ಲೆ ಆನು ಕೇವಲಾ ಕನ್ನಡ ಅನುವಾದ೦ಗಳ ಓದುತ್ತು ಹಾ೦ಗಾಗಿ ಆನು ಅರ್ಥ ಮಾಡುವದು ತಪ್ಪಾಗಿದ್ದರೆ ಆನು ಓದಿದವು ಕೊಟ್ಟ ಅನುವಾದಾರ್ಥ ತಪ್ಪಾಗಿಕ್ಕು.ನೀರ್ಕಜೆ ಅಪ್ಪಚ್ಚೀ ಆನು ದಯಾನ೦ದ ಸರಸ್ವತಿಯವರಬಿಡಿ ಇಲ್ಲೆಲ್ಲ ಸಾಮಾನ್ಯ ರಾಜಕೀಯಭಾಷಣ ಮಾಡಿಯೊ೦ಡು ತಿರುಗುವವರಷ್ಟೂ ಜ್ನಾನ ಕೂಡಾ ಇಲ್ಲದ್ದವ೦ ಹಾ೦ಗಾಗಿ ಅ೦ತಾ ಮಹಾಮಹಿಮರ ಬಗ್ಯ ಆನು ತಪ್ಪು ಅಬಿಪ್ರಾಯ ಬತ್ತ ಹಾ೦ಗೆ ಬರದಿದ್ದಿದ್ರೆ ನಿ೦ಗೋಗೋ ಬಯಲಿನೋರಿ೦ಗೋ ತಪ್ಪು ಅಭಿಪ್ರಾಯ ಬ೦ದೀದ್ರೆ ಕ್ಷಮೆ ಇರಳಿ.ಒಪ್ಪ೦ಗಳೊಟ್ಟಿ೦ಗೆ

  2. ಅಬ್ಬೆ ಅಪ್ಪನ ಗುಣ ಬಕ್ಕು ಅಥವಾ ಬಾರ ಹೇಳುವ ಪ್ರಶ್ನೆ ಅಲ್ಲ. ಕೇವಲ ಹುಟ್ಟೇ ಪಾಂಡಿತ್ಯದ ಅಳತೆಗೋಲು ಅಪ್ಪಲೆ ಅಸಾಧ್ಯ ಹೇಳಿ ಎನ್ನ ನಂಬಿಕೆ. ಈ ವಿಷಯಲ್ಲಿ ಇದಮಿಥ್ಥಂ ಹೇಳಿ ಹೇಳಿ ಹೇಳುಲೆ ಬತಿಲ್ಲೆನ್ನೆ.. ಆದಕಾರಣ ವರ್ಮುಡಿ ಬಟ್ಟ ಮಾವ ಹೇಳಿದ್ದೇ ಎನಗೆ ಸರಿ ಹೇಳಿ ಕಾಣುತ್ತು.

    ಇನ್ನು ದಯಾನಂದ ಸರಸ್ವತಿ ಬಗ್ಗೆ. ಅವು ಹೇಳಿದ್ದೆಲ್ಲ ಸಕಲ ಸತ್ಯ ಹೇಳುವ ಪ್ರಶ್ನೆಯೇ ಅಸಂಬಧ್ಧ. ಭಗವಂತ ಮಾತ್ರ ಸಕಲ ಸತ್ಯವ ತಿಳುದವ ಅಲ್ಲದ? ಹಾಂಗಿಪ್ಪಗ ಈ ಲೋಕಲ್ಲಿ ಯಾವ ವಿದ್ವಾಂಸನೂ ಸಕಲವ ತಿಳುದವ ಹೇಳುವ ಹಾಂಗಿಲ್ಲೆ. ಹಾಂಗೆ ಆರಾರು ಹೇಳಿದರೆ ಅವು ಲೊಟ್ಟೆ ಹೇಳುದು ಹೇಳಿಯೇ ಆತು. ಆದಕಾರ ದಯಾನಂದ ಸರಸ್ವತಿ ಹೇಳಿದ್ದರ ವಿಚಾರ ಮಾಡುದರಲ್ಲಿ ತಪ್ಪಿಲ್ಲೆ. ಇನ್ನು ಗೀತೆ ಬಗ್ಗೆ ಹೇಳಿದ್ದಿ. ಗೀತೆಲಿದೆ ಸುಮಾರು ವರ್ಶನುಗೊ ಇದ್ದು. ಅದರಲ್ಲಿ ಯಾವುದು ಸತ್ಯ? ವೇದಕ್ಕೆ ಆದರೆ “ಪಥ”‌ವೆವಸ್ತೆ ಇದ್ದು. ಇದು ಬಾಯಿಂದ ಬಾಯಿಗೆ ಮತ್ತೆ ಶರೀರ ಸಂಜ್ಞೆಗಳ ಮೂಲಕ ರವಾನೆ ಅಪ್ಪ ಕಾರಣ ಇಂದಿಂಗುದೆ ವೇದಂಗ ಬದಲಾಗದ್ದೆ ಒಳುದ್ದು. ಋಗ್ವೇದದ ಎರಡೆರಡು ವರ್ಶನುಗ ಇದ್ದ? ಇಲ್ಲೆನ್ನೆ! ಇದ್ದರೆ ಹೇಳಿ, ತಿಳ್ಕೊಂಬ. ಆದರೆ ಗೀತೆ ಹಾಂಗಲ್ಲ… ಆನು ಹೇಳುದು ಇಷ್ಟೆ. ದಯಾನಂದರು ಹೇಳಿದ್ದು ಇಕ್ಕು, ಶಂಕರರು ಹೇಳಿದ್ದು ಇಕ್ಕು, ಯಾವುದೇ ಆದರು ಅಧ್ಯಯನ ಯೋಗ್ಯ. ಎನ್ನ ಹಾಂಗಿಪ್ಪವಕ್ಕೆ ಯಾವದರಲ್ಲಿದೆ ಹೊಸ ವಿಷಯ ಸಿಕ್ಕುತ್ತು. ಎಲ್ಲ ಓದಿ ಪಾಂಡಿತ್ಯ ಪಡೆದವಂಗೆ ಮಾತ್ರ ಯಾವುದು ಸರಿ ಯಾವುದು ತಪ್ಪು ಹೇಳುವ ಹಕ್ಕು ಇಕ್ಕು ಅಲ್ಲದ?

    1. ಗೀತೆಯ ಪಾಠಾಂತರಂಗಳಲ್ಲಿ ದೊಡ್ದ ಭೇದಂಗೊ ಇಲ್ಲೆನ್ನೆ. ಅದಕ್ಕೂ ಸರಿಯಾದ ಪಂರಂಪರೆ ಇದ್ದು. ಪ್ರಸ್ಥಾನತ್ರಯ ಭಾಷ್ಯಂಗಳ ಆಚಾರ್ಯರುಗೊ ರಚನೆ ಮಾಡುವಗಳುದೇ ಪಾಠಭೇದಂಗೊ ತೊಂದರೆ ಕೊಟ್ಟಿದಿಲ್ಲೆ.

  3. ಇಲ್ಲಿ ಇನ್ನೊ೦ದು ಪ್ರಶ್ನೆ:- ಹುಟ್ಟು ಮನಷ್ಯಾನ ಮೇಲೆ ಪರಿಣಾಮ ಬೀರುತ್ತೋ?ಖ೦ಡಿತಾ ಹೇಳಿ ಎನ್ನ ಅಭಿಪ್ರಾಯ.ರಕ್ತ ಗುಣ ಹೇಳುವದು ಬ೦ದೇ ಬತ್ತು.ಅವನವನ ಅಬ್ಬೆ ಅಪ್ಪನ ಕೆಲವು ಗುಣ೦ಗೊ ಆದರೂ ಬ೦ದೇಬತ್ತು.ಅ೦ಬಗ ಈ ಬ್ರಾಹ್ಮಣ್ಯವೂ ಬಾರದೊ?ಅದು ಹೆಚ್ಹೋಕಮ್ಮಿಯೋ ಹೇಳುವದು ಬೇರೆ.ಇನ್ನು ಯಾವಗಳೂ ಒ೦ದು ಪರಿವರ್ತನೆ ಆಗೀದ್ರೆ ಅದರಲ್ಲಿ ನಮ್ಮ ದೇಶದ ಮಟ್ಟಿ೦ಗೆ ಬ್ರಾಹ್ಮಣರ ಪಾತ್ರ ಇದ್ದು.ಅದಕ್ಕೆ ಜೆನ ಬೆ೦ಬಲ ಸಿಕ್ಕಿದ್ದೋ ಹೇಳುವದು ಬೇರೆ ಸ೦ಗತಿ.ಎಷ್ಟೋ ಸ೦ಗತಿಗೊ ಅವರ ಮರಣಾನ೦ತರ ಸರಿ ಹೇಳಿ ಆದ್ದದು ಇದ್ದು.ಮತ್ತೆ ಜೆನಗಳ ಸಪೋರ್ಟು ಸಿಕ್ಕಿದ್ದಿಲ್ಲೆ ಹೇಳುವ ಕಾರಣ೦ದ ಸತ್ಯ ಲೊಟ್ಟೆ ಆವುತ್ತಿಲ್ಲೆ.ಶ೦ಕರಾಚಾರ್ಯರ ಹಾ೦ಗಿಪ್ಪ ದಯಿವೀಕ ಪುರುಷರಿ೦ಗೇ ವಿರೋದ ಸಾಕಷ್ಟು ಇತ್ತು ಹಾ೦ಗೆ ಹೇಳಿ ಅವು ವಿದ್ವಾ೦ಸರಲ್ಲಾಹೇಳಿಯೋ ತಿಳುವಳಿಕೆ ಕಮ್ಮಿ ಹೇಳ್ಲೋ ನಮ್ಮ ಹಾ೦ಗಿಪ್ಪ ಸಾಮಾನ್ಯ ಮನುಷ್ಯರಿ೦ಗೆ ಎಡಿಗೊ.ದಯಾನ೦ದ ಸರಸ್ವತಿಗೊ ಹೇಳಿದ್ದೊ೦ದೆ ಸಕಲ ಸತ್ಯ ಹೇಳಿ ನ೦ಬಿಯೊ೦ಡು ಹೋದರೆ ನಾವು ಮುರ್ಖರಕ್ಕೋ? ನಿ೦ಗೊ ಗೀತೆ ಓದುತ್ತೀರೊ ಗೊತಿಲ್ಲೆ ಓದುತ್ತರೆ ಮನುಷ್ಯನ ಹೆಚ್ಚಿನ ಸ೦ಶಯ೦ಗೋಕ್ಕೆ ಸಮಸ್ಯಗೋಕ್ಕೆ ಉತ್ತರ ಅದರಲ್ಲೇ ಸಿಕ್ಕುತ್ತು.ದಯಾನಒದ ಸರಸ್ವತಿಗೋಕ್ಕೆ ಜ್ನಾನ ಇತ್ತಿಲ್ಲೆ ಹೇಳಿಯೋ ಅಥವ ಅವರ ವಿಚಾರ೦ಗೊ ಸರಿಯಲ್ಲ ಹೇಳಿ ಅಲ್ಲ.ಅವ್ವು ಹೇಳಿದ ಸಕಲವೂ ಸರಿ ಹೇಳಿ ಒಪ್ಪಲೆ ಆವುತ್ತಿಲ್ಲೆ.ಪ್ರತಿಯೊ೦ದಕ್ಕೂ ವಿರೋದ ಇರುತ್ತು.ಇನ್ನು ಧೀ ಶಕ್ತಿ ಹಿರಿಯರಿ೦ದ ಬತ್ತರೆ ಉಪನಯನ ಬೇಕೋ ಹೇಳುವ ವಿಷಯ ಉಪನಯನ ಹೇಳುವದು ಸ೦ಸ್ಕಾರ ಅದು ನಿ೦ಗಳ ಜ್ನಾನ ಹೆಚ್ಹುಸಲೆ ವಿದ್ಯಾಭ್ಯಾಸಕ್ಕೆ ಹೊಪಲೆ ಹಿ೦ದಾಣ ಕಾಲಲ್ಲಿ ಮಾಡಿಯೊ೦ಡ ಕ್ರಮ.ಇದರ ಎಲ್ಲ ವಿವರುಸೇಕಾರೆ ಆನೆ ಒ೦ದು ಗ್ರ೦ಥ ಬರೇಕಕ್ಕೋ ಏನೊ;ಆದರೆ ಆನು ಅಷ್ಟು ಜ್ನಾನಿಯೂ ಅಲ್ಲ ಎನಗೆ ವಿವರೆಸಲೆ ಎಡಿಗಕ್ಕೋ ಹೇಳಿ ಗೊ೦ತಿಲ್ಲೆ.ಹಿರಿಯವರ ಆಶೀರ್ವಾದದ ಬಲಲ್ಲಿ ಏನೋ ಮನಸ್ಸಿ೦ಗೆ ಬ೦ದದರ ಬರೆತ್ತೆ ಅಷ್ಟೆ.ಒಪ್ಪ೦ಗಳೊಟ್ಟಿ೦ಗೆ.

    1. ಗೀತೆಯ ಅರ್ಥ ಮಾಡಿಗೊಂಬದುದೇ ಕಷ್ಟವೇನ್ನೆಪ್ಪಾ!

  4. ಅಲ್ಲ ಈಗ,
    ಕಳಾಯಿ ಗೀತತ್ತೆ ಬೈಲಿಂಗೇ ಕಳಿ ಕುಡುಶಿದಾಂಗೆ ಆಯಿದನ್ನೆ!
    ಆಗಲಿ, ಒಳ್ಳೆದೇ ಆತು.

    1. ಹಹ.. ಕಳಿ ಕುಡುದ ಹಾಂಗೆ ಆಯಿದಿಲ್ಲೆಪ್ಪ.. ಹಾಲು ಕುಡುದ ಹಾಂಗೆ ಆತು, ಆದರೆ ಹಾಲು ಚೂರು ಬೆಶಿ ಬೆಶಿ ಇದ್ದು ಹೇಳಿ ಅಷ್ಟೆ.. 🙂

      1. ಸರಿ, ಎನ್ನದು ನೀಚೋಪಮೆ ಆತು…. ಹಹಹಾ…

  5. ಎಂತದಕ್ಕೂ ಒಂದರಿ ಸಮಧಾನಲ್ಲಿ ಶತಾವಧಾನಿ ರಾ ಗಣೇಶರ ಗೀತಾ ಪ್ರವಚನ ಮಾಲಿಕೆಯ ಧ್ವನಿಮುದ್ರಿಕೆಯ ಕೇಳಿ ( ಗೋಖಲೆ ಸಂಸ್ಥೆ ಬೆಂಗಳೂರು ) .

  6. ದಯಾನಂದ ಸರಸ್ವತಿಯವರ ಅದ್ಭುತ ಪ್ರಯತ್ನ- ಸಿದ್ಧಾಂತಂಗೊ ಎಲ್ಲವೂಸರಿಹೇಳಿ ಅಲ್ಲ – ವ್ಯವಹಾರ್ಯವೂ ಅಲ್ಲ.

    1. ಸಿಧ್ಧಾಂತ ಇಪ್ಪದೇ ಹೊಸ ಸಿಧ್ಧಾಂತವೊಂದರ ಹುಟ್ಟಿಂಗೆ. ಕಟು ಸತ್ಯ ಹೇಳಿದರೆ ದಯಾನಂದ ಸರಸ್ವತಿಯವರ ವೇದ ಭಾಷ್ಯವ (ಸತ್ಯಾರ್ಥ ಪ್ರಕಾಶ) ಮೀರ್ಸುವ ಇನ್ನೊಂದು ಗ್ರಂಥ ಇನ್ನುದೆ ಬಯಿಂದಿಲ್ಲೆ. ಅಂಥ ವಿದ್ವಾಂಸ – ಕೇವಲ ಧಾರ್ಮಿಕ ಮಾತ್ರ ಅಲ್ಲ, ಜೀವನದ ಎಲ್ಲಾ ರಂಗಗಳಲ್ಲಿಯೂ ಅನ್ವಯಿಸುವ – ಇಲ್ಲಿವರೆಗೆ ಹುಟ್ಟಿದ್ದಾಯಿಲ್ಲೆ. ಅವರ ನಂತರ ಬಂದ ಎಲ್ಲಾ ಸಂತರೂ (ಅರವಿಂದೋ ರಿಂದ ಹಿಡುದು ಈಗಣ ಬಾಬಾ ರಾಮ್ ದೇವ್ ಇತ್ಯಾದಿ) ಮಹರ್ಷಿ ದಯಾನಂದ ಸರಸ್ವತಿಯವರ ತತ್ವಾಧಾರ ಮೇಲೆಯೇ ನಡೆತ್ತಾ ಇಪ್ಪದು.

      ದಯಾನಂದ ಸರಸ್ವತಿಯವರ ಸಿಧ್ಧಾಂತವ ಮೀರ್ಸುವ ಸಿಧ್ಧಾಂತವೊಂದು ಬಂದರೆ ಸಂತೋಷವೇ. ಹಾಂಗೆ ಆದರೆ ನಮ್ಮ ದೇಶದ ವೈದಿಕ ಜ್ನಾನ ಒಂದು ಮೆಟ್ಟಿಲು ಮೇಲೆ ಏರುಗು. ಸದ್ಯಕ್ಕೆ ಅದು ಅಪ್ಪ ಲಕ್ಷಣಂಗ ಕಾಣುತ್ತಿಲ್ಲೆ.

      ಅಲ್ಲದ್ದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೂಲ ಸ್ಪೂರ್ತಿ ಮಹರ್ಷಿ ದಯಾನಂದರೆ ಹೇಳುದರಲ್ಲಿ ಯಾವ ಸಂಶಯವೂ ಇಲ್ಲೆ.

      1. Loka uddara avtaru haalu avtaru adaralli brahmanara koduge doddadu heludalli 2 maatille.. Hindana kalada chandraguptha mouryna beleshida acharya kautilyaninda hidudu, indrana kalada RSS chief Mohanji, athava Mayavathiya right hand/brain Mishra or UPA Govt brain mukharji or naxal leader Koteshwara raove agirali brahmanare heludu vasthava. Obba brahmanyava bittaru bloodili bappa dhee shakthi bande battu. Ade reethi intaha samajada lopa doshangala tegeyekkadaru brahmanara patra matte mukhandatva anivarya.
        Neerkaje appachhi helida Devara kone vishayalli ennadu binnabhipraya iddu. Ella acahara vicharagalandalu hechhagi devara kone obbana maneya, manassina nambikeya jaga, so adu avravara alochanage bittadu, hange heli Danada mamasa timba byarigavakke pravesha koduva bramanara manage hindugalada SC gala pravesha nishidda akshamya…
        Viparyasa helire Basavannaninda hidudu Dayanda saraswathiyavara varege samajada jathi paddathiya tegadu hakule heratu avu suru madida horatagale mattondu jathiya ugamakke karana aaddu durantha!!!, Idakke manushyana manasthiyae karana, idu nammalli matra alla. Islam , purbugalallu aidu ( protestent, catholic, sunni shiya etc..) But hindina kaladalli eginastu vyavastitha shikshna, samuha madhyama ittille, so innu munde bappa kranthi sarva samajavnnu badalaysuva sambhava hechhu…

        1. {Obba brahmanyava bittaru bloodili bappa dhee shakthi bande battu}
          ಇದು ಒಂದು ತಪ್ಪು ನಂಬಿಕೆ ಹೇಳಿ ಎನಗನಿಸುತ್ತು. ಧೀ ಶಕ್ತಿ ಹಿರಿಯರಿಂದ ಬಪ್ಪದಿದ್ದರೆ ಉಪನಯನದ ಅವಶ್ಯಕತೆ ಎಂತ ಇದ್ದು ಅಲ್ಲದ? ನಿಂಗೊ ಹೇಳಿದ ಮನುಷ್ಯರೆಲ್ಲರೂ ದೇಶಕ್ಕೆ ಒಳ್ಳೆದು ಮಾಡಿದ್ದವಿಲ್ಲೆ ಹೇಳುದರ ಗಮನಿಸೆಕ್ಕು. ಆ ನೆಹರು ನಡೆದ ದಾರಿ ಯಾವ ಬ್ರಾಹ್ಮಣಂಗೂ ಮಾದರಿ ಅಲ್ಲ. ಇದನ್ನೇ ಕೋಟೇಶ್ವರ ರಾವ್ ಮತ್ತೆ ಪ್ರಣಬ್ ಮುಖರ್ಜಿ ಇತ್ಯಾದಿಗಳ ಬಗ್ಗೆ ಹೇಳುಲಕ್ಕು. ಹಾಂಗಾಗಿ ನಿಂಗ ಹೇಳಿದ ವಿಷಯಲ್ಲಿ ಹೆಮ್ಮೆ ಪಡುವಂಥದ್ದು ಇದ್ದು ಹೇಳಿ ಅನಿಸುತ್ತಿಲ್ಲೆ.

          {Ella acahara vicharagalandalu hechhagi devara kone obbana maneya, manassina nambikeya jaga, so adu avravara alochanage bittadu}
          ಈ ವಾದವ ಎಲ್ಲಾ ನಂಬಿಕೆಗಳಿಂಗೂ ಅನ್ವಯಿಸುಲೆ ಸಾಧ್ಯ ಇದ್ದು. ಇದರಿಂದಾಗಿ ಯಾವ ಸ್ಪಷ್ಟನೆ ಸಿಕ್ಕುತ್ತು? ಆ ನಂಬಿಕೆಗಳ ಪ್ರಶ್ನಿಸುವುದೇ ಸರಿ ಹೊರತು ನಂಬಿಕೆಗಳ ಆಚರ್ಸಿಕೊಂಡಿಪ್ಪವರ ಅವಹೇಳನ ಮಾಡುದಾಗಲೀ ಅಥವಾ ಪ್ರಶ್ನಿಸುವುದಾಗಲೀ ಉದ್ದೇಶ ಇಪ್ಪಲಾಗ. ಬದಲಾವಣೆ ಮನಸ್ಸಿಂದ ಬಂದಪ್ಪಗಳೇ ಅದಕ್ಕೆ ಬೆಲೆ ಹೊರತು ಇನ್ನೊಬ್ಬನ ಒತ್ತಾಯಕ್ಕೆ ಬದಲಾದರೆ ಅದರಂದ ಯಾವ ಉಪಯೋಗವೂ ಇಲ್ಲೆ.

          {avu suru madida horatagale mattondu jathiya ugamakke karana aaddu durantha!!!}
          ಅದಕ್ಕೆ ಎನಗನಿಸುದು ಜಾತಿಯ ತೆಗದು ಹಾಕುವ ಪ್ರಯತ್ನ ವ್ಯರ್ಥ. ಅದು ನಿಸರ್ಗ ವಿರೋಧಿ ಕೂಡ. ಅದಕ್ಕೆ ಬದಲಾಗಿ ಆಯಾಯ ಜಾತಿಗಳಲಿಯೇ ಅವಕ್ಕೆ ಧಾರ್ಮಿಕ ಶಿಕ್ಷಣ ಸಿಕ್ಕುವ ವ್ಯವಸ್ಥೆ ಮಾಡೆಕ್ಕು. ಹಿಂದೆ ವೈದಿಕ ಪರಂಪರೆ ಭಾರತಲ್ಲಿ ಹರಡುವಗ ಅಂದಿನ ಬ್ರ್ಹಾಹ್ಮಣರು ಮಾಡಿದ್ದೂ ಇದನ್ನೇ. ಬುಡಕಟ್ಟುಗಳ ದೈವಂಗಳ ಪ್ರಶ್ನಿಸುದು, ಅವರ ಜಾತಿ ಬದಲಾಯಿಸುದು ಮುಂತಾದ ವ್ಯರ್ಥ ಪ್ರಯತ್ನ ಬಿಟ್ಟು ಅವು ವೈದಿಕ ಧರ್ಮದ ಮೂಲ ತತ್ವಂಗಳ ಎಲ್ಲರಿಂಗೂ ಮನದಟ್ಟು ಮಾಡುತ್ತಾ ಬಂದವು. ಅದರ ಫಲವೇ ಇಂದಿಗೂ ಬುಡಕಟ್ಟುಗೊ, ಬೇರೆ ಬೇರೆ ಜಾತಿಗೊ ಇತ್ಯಾದಿ ಬೇರೆ ಬೇರೆ ದೈವಂಗಳ ಪೂಜ್ಸಿದರೂ ಧರ್ಮದ ಬೇರುಗಳ ತೊರದವಿಲ್ಲೆ. ಉದಾಹರಣೆಗೆ ಪುನರ್ಜನ್ಮದ ತತ್ವಂಗ, ಕರ್ಮ ಸಿಧ್ಧಾಂತ ಇತ್ಯಾದಿ ಅವರಲ್ಲಿಯೂ ಹೃಸ್ವ ರೂಪಲ್ಲಿ ಇದ್ದು. ಹೆಚ್ಚು ತಿಳುವಳಿಕೆ ಇಪ್ಪ ಬುಡಕಟ್ಟು ಜನಂಗೊ ಈ ತಿಳುವಳಿಕೆಯ ಇನ್ನೂ ಹೆಚ್ಚು ಅರಿತುಕೊಂಡು ಸ್ವತಹ ಮಹರ್ಷಿಗಳು, ಸಂತರಾದ್ದುದೆ ಇದ್ದು. ಉದಾಹರಣೆಗೆ ಮಹಾಭಾರತ ಬರದ ವ್ಯಾಸ ಮುನಿ ಹುಟ್ಟಿಂದ ಬೇಡರವ ಅಲ್ಲದ? ಇದು ವೈದಿಕ ಧರ್ಮವ ಭಾರತದಾದ್ಯಂತ ಹರಡಿದ ಅಂದಿನ ನಮ್ಮ ಪೂರ್ವಿಕರ ಬುಧ್ಧಿವಂತಿಕೆ. ಈಗ ನಮ್ಮಲ್ಲಿ ಆ ಬುಧ್ಧಿವಂತಿಕೆ ಇಲ್ಲದ್ದಿಪ್ಪದು ದುರದೃಷ್ಟ.

          ಇನ್ನು ಜಾತಿ ಬೇಡ ಹೇಳಿದ ನಾರಾಯಣಗುರು ಗುರು ಅನುಯಾಯಿಗೊ ಈಗ ಅವರದ್ದೇ ಜಾತಿ (ಪೂಜಾರಿ) ಆದ್ದದರಲ್ಲಿ ವಿಶೇಷ ಎಂತ ಇಲ್ಲೆ. ಗುರು ಗತಿಸಿ ಅಪ್ಪಗ ಅವರ ಶಕ್ತಿಯೂ ಹೆಚ್ಚು ಕಮ್ಮಿ ಹೋವುತ್ತು. ಗುರು ಪರಂಪರೆ ಹೇಳಿ ಮಾಡಿದರುದೆ ಅದು ಎಲ್ಲಾ ಕಡೆ ಪ್ರಖರತೆ ಉಳಿಸಿಕೊಳ್ಳುತ್ತ ಸಾಧ್ಯತೆ ಕಮ್ಮಿ. ಅಷ್ಟಪ್ಪಗ ತತ್ವಂಗ ನಶಿಸಿ ಬರೇ ವ್ಯಕ್ತಿ ನೆನಪು ಮಾತ್ರ ಒಳಿತ್ತು ಅಷ್ಟೆ. ದೇಶಲ್ಲಿ ಧಾರ್ಮಿಕ ಶಿಕ್ಷಣ ಹೇಳ್ತ ಒಂದು ಗಟ್ಟಿ ಮುಟ್ಟಾದ ವ್ಯವಸ್ಥೆ ಇದ್ದರೆ ಒಬ್ಬ ಗುರು ಗತಿಸಿದರೆ ಇನ್ನೊಬ್ಬ ಗುರು ಹುಟ್ಟಿಕೊಳ್ಳುತ್ತ. ಸಮಾಜಲ್ಲಿ ಧಾರ್ಮಿಕತೆ ಕಮ್ಮಿ ಆವುತ್ತಿಲ್ಲೆ ಅಷ್ಟಪ್ಪಗ.

          1. ನಮ್ಮ ಮಾತಿಂಗೆ ರಜ ಮೂಲಾಧಾರ ಬೇಕಲ್ಲದೊ? ಅಭಿಪ್ರಾಯಕ್ಕೂ ಆಧಾರ ಬೇಕಲ್ಲದೊ? ಅನುಭವ ಇದ್ದರೆ ಇನ್ನೂ ಒಳ್ಳೆದು;
            @{{Obba brahmanyava bittaru bloodili bappa dhee shakthi bande battu}ಇದು ಒಂದು ತಪ್ಪು ನಂಬಿಕೆ ಹೇಳಿ ಎನಗನಿಸುತ್ತು. ಧೀ ಶಕ್ತಿ ಹಿರಿಯರಿಂದ ಬಪ್ಪದಿದ್ದರೆ ಉಪನಯನದ ಅವಶ್ಯಕತೆ ಎಂತ ಇದ್ದು ಅಲ್ಲದ?}=
            ವೇದಲ್ಲಿ ರೇತಸ್ ಶಕ್ತಿಯ ವ್ಯಾಪನೆಯ ವಿಚಾರ ಇದ್ದು. ಇದು ಹುಟ್ಟಿನ ಮೂಲದ ಶಕ್ತಿಯ, ಮತ್ತೆ ಅದಕ್ಕೆ ಸಂಬಂಧಪಟ್ಟ ವಿಚಾರಂಗೊ; ಉಪನಯನಾದಿಗೊ ಅದರ ಒಳುಶಿ ಬೆಳಶುಲೆ ಇಪ್ಪದು; ಇಲ್ಲದ್ದರೆ ಮೂರು ತಲೆಮಾರಿಲಿ ನಷ್ಟಪ್ರಾಯ ಆವುತ್ತು ಹೇಳಿ ವೇದ ಹೇಳುತ್ತು.
            ಹಾಂಗಾಗಿ Harish kevala ಮತ್ತೆ ನೀರ್ಕಜೆ ಅಪ್ಪಚ್ಚಿ ಇಬ್ರೂ ಹೇಳಿದ್ದು ಅಪರಿಪೂರ್ಣ ಹೇಳಿ ಎನ್ನ ಅಭಿಪ್ರಾಯ.
            @{Viparyasa helire Basavannaninda hidudu Dayanda saraswathiyavara varege samajada jathi paddathiya tegadu hakule heratu avu suru madida horatagale mattondu jathiya ugamakke karana aaddu durantha!!!,}=
            ಇದಕ್ಕೆ ಬೇಕಾಗಿಯುದೇ ಆತು ಹೇಳಿ ಆನು “ದಯಾನಂದ ಸರಸ್ವತಿಯವರ ಅದ್ಭುತ ಪ್ರಯತ್ನ- ಸಿದ್ಧಾಂತಂಗೊ ಎಲ್ಲವೂಸರಿಹೇಳಿ ಅಲ್ಲ – ವ್ಯವಹಾರ್ಯವೂ ಅಲ್ಲ.” ಹೇಳಿ ಹೇಳಿದ್ದು.
            ಇಪ್ಪ ವ್ಯವಸ್ಥೆಯ ಮುರಿವಲಾಗ- ರೂಪಾಂತರುಸೆಕ್ಕು. ಇಲ್ಲದ್ದರೆ “ಇತೋ ಭ್ರಷ್ಟ: ತತೋ ಭ್ರಷ್ಟ:” ಆವುತ್ತು.
            “ಜನರಲ್ಲಿ ಬುದ್ಧಿಭೇದ ಉಂಟು ಮಾಡುಲಾಗ”- ಗೀತೆ.
            “ಸುಧಾರಣೆ” ಮಾಡುವಗ “ಬುದ್ಧಿಭೇದ” ಉಂಟುಮಾಡುಲಾಗ ; ದಯಾನಂದ ಸರಸ್ವತಿಗಳುದೇ ಈ ಬಹು ದೊಡ್ಡ ತಪ್ಪು ಮಾಡಿದ್ದವು. ಉಳುದವರ ವಿಷಯ ಬಿಡಿ!

          2. {ಉಪನಯನಾದಿಗೊ ಅದರ ಒಳುಶಿ ಬೆಳಶುಲೆ ಇಪ್ಪದು; ಇಲ್ಲದ್ದರೆ ಮೂರು ತಲೆಮಾರಿಲಿ ನಷ್ಟಪ್ರಾಯ ಆವುತ್ತು ಹೇಳಿ ವೇದ ಹೇಳುತ್ತು. ಹಾಂಗಾಗಿ Harish kevala ಮತ್ತೆ ನೀರ್ಕಜೆ ಅಪ್ಪಚ್ಚಿ ಇಬ್ರೂ ಹೇಳಿದ್ದು ಅಪರಿಪೂರ್ಣ ಹೇಳಿ ಎನ್ನ ಅಭಿಪ್ರಾಯ}
            ಅದಾ, ಹೇಂಗೆ ಮಾಹಿತಿಗೊ ಸಿಕ್ಕುತ್ತಾ ಇದ್ದು! ಮಣ್ಣು ಒಕ್ಕಿದರೆ ಚಿನ್ನ ಸಿಕ್ಕುಗು.. ಹಾಂಗೆ ಇಲ್ಲಿ ಬೈಲಿಲು ಚೂರು ಬೆಶಿ ಬೆಶಿ ಚರ್ಚೆ ಮಾಡಿದರೆ ಒಳ್ಳೊಳ್ಳೆ ಮಾಹಿತಿ ಸಿಕ್ಕುತ್ತು ಹೇಳಿ ಆತು, ಅಲ್ಲದಾ..

            {ದಯಾನಂದ ಸರಸ್ವತಿಗಳುದೇ ಈ ಬಹು ದೊಡ್ಡ ತಪ್ಪು ಮಾಡಿದ್ದವು. ಉಳುದವರ ವಿಷಯ ಬಿಡಿ!}
            ಮುರಿವಲಾಗ- ರೂಪಾಂತರುಸೆಕ್ಕು ಹೇಳ್ತದು ಅರ್ಥ ಆತು. ಅದಕ್ಕೆ ಜಾತಿಯ ತೆಗದು ಹಾಕುವ ಪ್ರಯತ್ನ ವ್ಯರ್ಥ ಹೇಳಿ ಆನು ಹೇಳಿದ್ದು. ಇರಳಿ, ಆದರೆ ದಯಾನಂದ ಸರಸ್ವತಿ ಹೇಂಗೆ ಮುರಿವ ಕೆಲಸ ಮಾಡಿದವು ಹೇಳಿ ಮಾತ್ರ ಗೊಂತಾಯಿದಿಲ್ಲೆ. ಇರಳಿ, ಇದು ದಯಾನಂದ ಸರಸ್ವತಿ ಕೇಂದ್ರೀಕೃತ ಚರ್ಚೆ ಅಪ್ಪದು ಬೇಡ.

          3. Appachhi, oppanna.comili hegiruva gambira vishayada bagge tingalige ondadaruu charcahge aadre uttama..

          4. ಆರ್ಯಸಮಾಜದ ಬಹುಪಾಲು ಕಾರ್ಯಂಗಳ ಅವಲೋಕನ ಮಾಡಿದರೆ ಸಾಕು.ಅವರ ಗ್ರಾಂಥಿಕ ಸಾಹಿತ್ಯದೊಟ್ಟಿಂಗೆ ಅದರ ಜಾರಿಮಾಡಿದ ವಿಧಾನ, ಸಮಾಜದ ಬಹುಪಾಲು ಪಾರಂಪರಿಕ ಹಾಂಗೂ ಶಾಸ್ತ್ರೀಯ ಅನುಸರಣೆಗಳ- ಆಚಾರಂಗಳ ಸಾರಾಸಗಟು ತಿರಸ್ಕಾರ ಇತ್ಯಾದಿಗಳನ್ನೂ ಗಮನಿಸೆಕ್ಕಾವುತ್ತು; ಬೆರಳಿಂಗೆ ಮುಳ್ಳು ತಾಗಿ ರೆಶಿಗೆ ಆದರೆ ಸುರುವಿಂಗೇ ಬೆರಳನ್ನೇ ತುಂಡುಮಾಡಿ ತೆಗವದು ಮೂರ್ಖತನ ಅಲ್ಲದೋ? (ಅದು ಕಡೆಯಾಣ ಆಯ್ಕೆ ಅಲ್ಲದೊ?).

          5. ಇದರ ಚರ್ಚೆ ಮಾಡುಲೆ ಎನಗಂತೂ ಇಚ್ಛೆ ಇದ್ದು. ಆದರೆ ಇದು ಎಲ್ಲೆಲ್ಲಿಯೋ ಹೋಕು. ಒಪ್ಪಣ್ಣನ ಬೈಲಿಲಿ ಕಮ್ಮಿಲಿ ಒಂದೈದು ಜನ ಚರ್ಚೆಗೆ ಸಿಕ್ಕುಗಾರೆ ಇದರ ಬಗ್ಗೆ ಹೊಸಾ ಚರ್ಚೆ ಶುರು ಮಾಡುಲಕ್ಕು. ಇಲ್ಲಾರೆ ಸುಮ್ಮನೆ ರಜೆ ಮಜಾಲ್ಲಿಪ್ಪ ಬೈಲಿನವಕ್ಕೆ ತಲೆ ಚಿಟ್ಟು ಹಿಡಿಶಿದ ಪಾಪ ನವಗೆಂತಕ್ಕೆ ಅಲ್ಲದ..

          6. ಚರ್ಚೆಗೆ ಸೇರುವ ಯೋಗ್ಯತೆ ಇಲ್ಲದ್ದರೂ ಎರಡು ಹೊಸ ಪುಸ್ತಕ ತೆಗೆಯೆಕ್ಕು ಹೇಳಿ ಗೊಂತಾತು.ಗೊಂತಿಲ್ಲದ್ದ ವಿಷಯ ಸುಮಾರು ಬತ್ತಾ ಇದ್ದು,ಚರ್ಚೆ ಮುಂದುವರಿಸಿ.

          7. ಅರ್ಹತೆ ಒಂದೋ ಎಲ್ಲಾರಿಂಗೂ ಇದ್ದು, ಅಥವಾ ಆರಿಂಗೂ ಇಲ್ಲೆ. 🙂 ಅಲ್ಲದ!

          8. @ನೀರ್ಕಜೆ ಅಪ್ಪಚ್ಚಿ/ಮಹೇಶ {ದಯಾನಂದ ಸರಸ್ವತಿ ಕೇಂದ್ರೀಕೃತ ಚರ್ಚೆ ಅಪ್ಪದು ಬೇಡ}.=
            ಅದುದೇ ಸರಿ;ಪುಂಟೆ ಜಗಿವದು ಬೇಡ ಅಲ್ಲದೋ!. ಹೆಚ್ಚು ಮಾತಾಡಿದರೆ ಎನ್ನ ನಿಜ ಬಣ್ಣ ಬಯಲಪ್ಪ ಹೆದರಿಕೆಯೂ ಎನಗಿದ್ದು.
            ಇರಳಿ,
            @ರಘುಮುಳಿಯ=
            ಎಡೇಲಿ ಮುಳಿಯದಣ್ಣನ ಭಾಮಿನಿ ಬಂದಿದ್ದರೆ ಲಾಯಕ ಇತ್ತು.
            {ಚರ್ಚೆಗೆ ಸೇರುವ ಯೋಗ್ಯತೆ ಇಲ್ಲದ್ದರೂ}= ?

          9. Neerkaje appacchi aanude adanne helidddu, yavude samajalli olleyadvtaru kettadavtaru adaralli brahmanara koduge doddadu heliddu, example agi olledakku kettadakku elladakku melinavara udaharane kottadu…Matte Dhee shakthi upanayandalu hechhagi obbange genetic agide bappadu tumba iddu.. hagagi obba brahmanatva follow madadru ( eg:communistgo) avara brain sharp irtu…
            Matte nambikegala vishaya khanditha yavude acharanegalannu otatyanda badalisudu sadhyave ille.. Hage heli prati ondu jathigoo tannade aada vaishishtya idde irtu.. Badalavane matte jatyateethateya hesarili namma identity hopalaga alda…
            Koneyadaagi Dhaarmika, aadhyatmika shikshana ningo heludara opputte… Aanu ippa Gulfili obba muslimetara muslim adare 1.5 laksha Indian rupees sikkuttu.. hage heli idakkagi convert appa Christians tumba kammi, tumba hindus convert avta irtavu.. Yake helire avakke atleast avradde church matte, network, sariyada dharmika shikshana sikki irtu.. ( hechhina gulf deshangalalli christiangalaste hindugade idaruu avrastu vyavasthithavada pooja mandirango illaddu nammalli irekkada sangha shakthi illada karanave..)
            Aadre ittichina dinangalalli idara anivaryate janagavakke tilita iddu… kelavu vishayangavakke kalave patha kalsuttu… hechahgi anyamateeyaru hechhippa pradeshangalalli sanghatane jagrthi tannastakke huttuttu…
            Adene iddaru hegiruva aarogya poorna charchago samajalli hosa badalavanege nandi hadidare ade dodda santosha.

          10. ಹರೀಶಣ್ಣ, ಇದಾ ಇನ್ನು ಕನ್ನಡ ಲಿಪಿಲಿ ಬರೆಯೆಕ್ಕು ಆತಾ. ಇಲ್ಲಾರೆ ಒಪ್ಪಣ್ಣಂಗೆ ಬೇಜಾರು ಅಕ್ಕು! (ಎನಗೆ ಓದುಲೆ ಕಷ್ಟ ಆವುತ್ತು ಸಾಲದ್ದಕ್ಕೆ..) 🙂

          11. @ HARISH BHAT=
            1) Please download BARAHA software(free version is available)[baraha.com]
            2) Install it
            3) Start the BARAHA IME Unocode engine – It goes to system tray at right bottom.You can exit from there itself.
            4) F-11 key toggles between Kannada and English
            5) You should need to know only English spelling of kannada words. Just study the ‘help’ of BARAHA (not of BARAHA IME).

  7. ಒಳ್ಳೆಯ ಚರ್ಚೆ ನಡೆತ್ತಾ ಇದ್ದು.
    ಎಡೇಲಿ ಒಂದು ಸಲಹೆ= ಪಾದೂರು ಗುರುರಾಜ ಭಟ್ ಬರದ ಸಂಶೋಧನಾ ಗ್ರಂಥ ” ತುಳುನಾಡು” ಎಲ್ಲೋರೂ ಓದಿಕ್ಕಿ; ಇದರಲ್ಲಿ ಚರ್ಚೆಯ ವಿಷಯಂಗಳ ಒಟ್ಟಿಂಗೆ ಹಳ್ಳಿಲಿಪ್ಪ ಬ್ರಾಹ್ಮಣರ ಮಕ್ಕೊಗೆ ಮದುವೆ ಅಪ್ಪಲೆ ಕೂಸು ಸಿಕ್ಕದ್ದರ ಬಗ್ಗೆ, – ಚಾರಿತ್ರಿವಾಗಿ ಹವ್ಯಕರೂ ಸೇರಿ ಬ್ರಾಹ್ಮಣರು ಅನ್ಯ ಜಾತಿಂದ ತಂಬಾ ಮದುವೆ ಆದ್ದದರ ಬಗ್ಗೆ ಇದ್ದು.
    ಇಲ್ಲಿ ಬೈಲಿಲಿ ಚರ್ಚೆಲಿ ವಿಷಯ ಇಪ್ಪದು ಸರಳವಾಗಿಯೇ ಇದ್ದು.=
    ೧) ಈಗ ಬ್ರಾಹ್ಮಣರಲ್ಲಿ ಬ್ರಾಹ್ಮಣ್ಯ ಎಷ್ಟು ಇದ್ದು?
    ೨) ಶತಮಾನಂಗಳಿಂದಲೇ ಬ್ರಾಹ್ಮಣ್ಯ ನಿಜವಾಗಿ ಇತ್ತಿದ್ದೋ?
    ೩) ವೇದಾದಿ ಶಾಸ್ತ್ರಂಗಳ ಒಳುಶಿದ್ದದು ನಿಜವಾದರೂ ನಿಜವಾದ ಬ್ರಾಹ್ಮಣ ಮನೋಭೂಮಿಕೆ ಇತ್ತೋ?
    ಎಲ್ಲದಕ್ಕೂ ಬ್ರಾಹ್ಮಣರ ಬೇಜವಾಬ್ದಾರಿ ಮಾಂತ್ರ ಕಾರಣ ಅಲ್ಲ. ದೇಶ-ಕಾಲ ಸ್ಠಿತಿಯೂ ಕಾರಣವಾಗಿ ಇದ್ದು.
    ಆದರೆ, ಬಹುಪಾಲುದೇ ಬೇಜವಾಬ್ದಾರಿ, ಅಧರ್ಮದ ನಡವಳಿಕೆಯೇ ಕಾರಣ.
    ನೀರ್ಕಜೆ ಅಪ್ಪಚ್ಚಿ ಹೇಳಿದ್ದದು ಬಹುಪಾಲುದೇ ಸತ್ಯವೇ- ನಮ್ಮ ಹಿರಿಯರೇ ಬೇಕಾದಶ್ಟು ತಪ್ಪು ನಡವಳಿಕೆಲಿ ಇತ್ತಿದ್ದವು.(ಈಗಾಣವರ ನಡವಳಿಕೆ ಸರಿ ಕಂಡರೂ,ಅಜ್ಞಾನ ಭೂಯಿಷ್ಟವಾದ್ದದು; ತಮ್ಮತನದ ಅರಿವಿಲ್ಲದ್ದದು)
    ಒಂದೆರಡು ಭಿನ್ನಾಭಿಪ್ರಾಯಂಗೊ=
    @ನೀರ್ಕಜೆ ಅಪ್ಪಚ್ಚಿ{ಅವು ಕುಡುದು ತೊಳದ ಗ್ಲಾಸು ನವಗಾಗ. ಈಗ ಪೇಟೆಲಿಪ್ಪವು ಹೋಟ್ಲಿಲ್ಲಿ ಎಂಥೆಂಥಾ ಗ್ಲಾಸಿಲಿ ಕಾಪಿ ಕುಡುದರೂ ಹೇಸಿಗೆ ಆವುತ್ತಿಲ್ಲೆ. ಆಗ ಹಾಂಗಿತ್ತಿಲ್ಲೆ. ಆಳುಗಳೇ ಕಟ್ಟಿದ ದೇವರ ಕೋಣೆಲಿ ಆಳುಗೊಕ್ಕೆ ತಪ್ಪಿಯೂ ಪ್ರವೇಶ ಇಲ್ಲೆ.}- “ಅಸ್ಪೃಶ್ಯತೆ” ಒಂದು ವೈಜ್ಞಾನಿಕ ಶಾಸ್ತ್ರೀಯ ನಡವಳಿಕೆ; ಆದರೆ ಚಾರಿತ್ರಿಕವಾಗಿ ನಡವಳಿಕೆಲಿ ಇದ್ದಹಾಂಗೆ ಅಲ್ಲ.
    ಒಬ್ಬ ಬ್ರಾಹ್ಮಣ ಇನ್ನೊಬ್ಬ ಬ್ರಾಹ್ಮಣನನ್ನೇ ಆದರೂ ಅಯುಕ್ತ ಸ್ಪರ್ಶ ಮಾಡುಲಾಗ; ಈಗ ಕೂಪ ಹಾಂಗೆ ಒಂದೇ ಹಸೆಲಿ ಕೂಪಲೂ ಆಗ (ಏಕಾಸನ ದೊಷ).
    ಹಾಂಗೆಯೇ,
    ಸತ್ವ- ರಜ- ತಮ ಗುಣಂಗೊ ಮಿಶ್ರ ಅಪ್ಪಲಾಗ; ಹಾಂಗಾಗಿ ಬ್ರಾಹ್ಮಣರಲ್ಲದ್ದವಕ್ಕೆ ದೇವರಕೋಣೆಗೆ/ಮನೆಯೊಳಕ್ಕೂ ಪ್ರವೇಶ ಇಲ್ಲೆ. ಶಕ್ತಿಪೂಜೆಯ ಮನೆಗಳಿಂದ ಮದಲಿಂಗೆ ಬಾಕಿದ್ದವು ಕೂಸು ತಾರ, ಸಾಲಿಗ್ರಾಮ ಇಲ್ಲದ್ದ ಮನೆಲಿ ಉಣ್ಣ.
    ವರ್ಣಸಂಕರ ಹೇಳಿದರೆ ಕೇವಲ ಅನ್ಯಜಾತಿ ವಿವಾಹ ಅಲ್ಲ; ಸತ್ವ- ರಜ- ತಮ ಗುಣಂಗೊ ಮಿಶ್ರ ಅಪ್ಪದೇ ವರ್ಣಸಾಂಕರ್ಯ.
    “ಸತ್ವ ನಿಷ್ಠೆ” ಇಲ್ಲದ್ದರೆ ಬ್ರಾಹ್ಮಣ್ಯ ಇಲ್ಲೆ.
    ಇನ್ನು, ಆಚಾರ ಎಲ್ಲಿ ಇತ್ತಿದ್ದು?- “ದೊಡ್ಡ ಬ್ರಾಹ್ಮಣ ಆಯೆಕ್ಕಾದರೆ ಕುಣಿಯ ಹೊಗೆಸೊಪ್ಪು ಎರಡಿಂಚು ತಿನ್ನೆಕ್ಕು” ಹೀಂಗೆ ಅಮಲು ತಿಂಬವರ ಹತ್ರೆ ಎನಗೆ “ಸತ್ವ ನಿಷ್ಠೆ” ಕಾಂಬಲೆ ಸಿಕ್ಕಿದ್ದು ಕಮ್ಮಿ.(ಅಮಲು ತಿನ್ನದ್ದವರ ಹತ್ರೆ “ಸತ್ವ ನಿಷ್ಠೆ”ಇರೆಕ್ಕೂ ಹೇಳಿ ಇಲ್ಲೆ).
    @ನೀರ್ಕಜೆ ಅಪ್ಪಚ್ಚಿ{ಧರ್ಮದ ಪುನರುಥ್ಥಾನಕ್ಕೆ ಕಾರಣರಾದ ಮಹರ್ಷಿ ದಯಾನಂದ ಸರಸ್ವತಿ ಈ ಜಾತಿ, ಸ್ವಜನ ಪಕ್ಷಪಾತ ಇವೆಲ್ಲದರ ಖಡಾಖಂಡಿತವಾಗಿ ತಿರಸ್ಕರಿಸಿತ್ತಿದವು. ಅವರ ಪ್ರಖರತೆಯೇ ಮುಂದೆ ದೇಶಲ್ಲಿ ಹರಡಿ ನವಗೆ ಸ್ವಾತಂತ್ರ್ಯ ಬಂತೇ ಹೊರತಾಗಿ ಸ್ವಜನ ಪಕ್ಷಪಾತಿ ಬ್ರಾಹ್ಮಣರಿಂದ ದೇಶಕ್ಕೆ ಯಾವ ಉಪಕಾರವೂ ಆಯಿದಿಲ್ಲೆ. ಅವರಿಂದಾಗಿ ತೊಂದರೆಯೇ ಆಯಿದಷ್ಟೆ.. }- ನೀರ್ಕಜೆ ಅಪ್ಪಚ್ಚಿ ಹೇಳಿದ್ದು ಪೂರ್ತಿ ಸರಿ ಅಲ್ಲ, ಬ್ರಾಹ್ಮಣರು ಪ್ರತಿಯೊಂದು ಪುನರುತ್ಥಾನ ಪ್ರಯತ್ನಂಗಳಲ್ಲಿಯುದೇ ಮುಂಚೂಣಿಲಿಯೇ ಇತ್ತಿದ್ದವು. ಚರಿತ್ರೆಯ ಒಂದರಿ ನೋಡಿ.(ಕಮ್ಯುನಿಸ್ಟ್ ಚಳವಳಿಲಿಯೂ).ಮಹರ್ಷಿ ದಯಾನಂದ ಸರಸ್ವತಿಗಳ ಹಾಂಗೆ ತುಂಬಾ ಸಾಧಕರ ಪ್ರಯತ್ನ ಇತ್ತಿದ್ದು, ಅವು ಮಾತ್ರ ಪ್ರಧಾನ ಅಲ್ಲ.
    “ಮೀಸಲಾತಿ ಬೇಕು, ಆದರೆ ಈಗ ಇಪ್ಪಹಾಂಗೆ ಅಲ್ಲ”.- ” ಈಗ ಇಪ್ಪ ಸಾಮಜಿಕ – ರಾಜಕೀಯ ಸ್ಥಿತಿಲಿ ಸಾಮಾಜಿಕ ಸಾಮರಸ್ಯ, ಸಮತೋಲನ ತಪ್ಪಲೆ ಬೇಕಾದ ಹಾಂಗಿಪ್ಪ ಮೀಸಲಾತಿ ಬಾರ”. ಬ್ರಾಹ್ಮಣರೂ ಸಾಮಾಜಿಕ – ರಾಜಕೀಯ ಚಾಣಾಕ್ಷತನಂದ ಹಕ್ಕುಗಳ ಸಾಧನೆ ಮಾಡೆಕ್ಕು; ಒಟ್ಟಿಂಗೆ ಬ್ರಾಹ್ಮಣ್ಯವನ್ನೂ ಆಂತರಿಕವಾಗಿಯೂ ಅನ್ಯರ ಒಳಿತಿಂಗಾಗಿಯೂ ಬೆಳೆಶಿ ಒಳುಶಿ ಬಳಸೆಕ್ಕು.
    ಎಡೇಲಿ ಒಂದು ಸಲಹೆ= ಸಮಧಾನಲ್ಲಿ ಶತಾವಧಾನಿ ರಾ ಗಣೇಶರ ಗೀತಾ ಪ್ರವಚನ ಮಾಲಿಕೆಯ ಧ್ವನಿಮುದ್ರಿಕೆಯ ಕೇಳಿ ( ಗೋಖಲೆ ಸಂಸ್ಥೆ ಬೆಂಗಳೂರು ) .

    1. ಅಮೂಲ್ಯ ಮಾಹಿತಿ ನೀಡಿದ ಸುಬ್ರಾಯ ಭಟ್ರಿಂಗೆ ಎನ್ನ ಧನ್ಯವಾದಂಗೊ. ಹಾಂಗೇ ಕೆಲವು ಸ್ಪಷ್ಟನೆಗೊ :
      {ಒಬ್ಬ ಬ್ರಾಹ್ಮಣ ಇನ್ನೊಬ್ಬ ಬ್ರಾಹ್ಮಣನನ್ನೇ ಆದರೂ ಅಯುಕ್ತ ಸ್ಪರ್ಶ ಮಾಡುಲಾಗ}
      ಇದು ಪೌರೋಹಿತ್ಯ ಉಳಿಶಿಕೊಂಡ ಬ್ರಾಹ್ಮಣರಿಂಗೆ ಅನ್ವಯ ಅಪ್ಪದು. ಅಲ್ಲದೋ? ನಮ್ಮ ಜಾತಿ ಬ್ರಾಹ್ಮಣರಲ್ಲಿ ಪ್ರತಿಶತ ಐದರಷ್ಟು ಹೆಚ್ಚು ಹೇಳಿರೆ ಹತ್ತರಷ್ಟು ಜನ ಹಾಂಗೆ ಕುಲಕಸುಬು ಪೌರೋಹಿತ್ಯವ ಉಳಿಶಿಕೊಂಡಿದವು. ಅವು ಅಸ್ಪೃಷ್ಯತೆ ಮಾಡಿದರೆ ಅದರ Technical grounds ಲಿ ಒಪ್ಪಿಕೊಳ್ಳತಕ್ಕದ್ದೇ. ಎರಡು ಮಾತಿಲ್ಲೆ. ಆದರೆ ಒಳುದೋರ ಕಥೆ ಎಂತ?

      {ಈಗಾಣವರ ನಡವಳಿಕೆ ಸರಿ ಕಂಡರೂ,ಅಜ್ಞಾನ ಭೂಯಿಷ್ಟವಾದ್ದದು; ತಮ್ಮತನದ ಅರಿವಿಲ್ಲದ್ದದು}
      ಒಪ್ಪತಕ್ಕದೇ. ಸಂಶಯ ಇಲ್ಲೆ ಇದರಲ್ಲಿ.

      {ಸತ್ವ- ರಜ- ತಮ ಗುಣಂಗೊ ಮಿಶ್ರ ಅಪ್ಪಲಾಗ; ಹಾಂಗಾಗಿ ಬ್ರಾಹ್ಮಣರಲ್ಲದ್ದವಕ್ಕೆ ದೇವರಕೋಣೆಗೆ/ಮನೆಯೊಳಕ್ಕೂ ಪ್ರವೇಶ ಇಲ್ಲೆ. ಶಕ್ತಿಪೂಜೆಯ ಮನೆಗಳಿಂದ ಮದಲಿಂಗೆ ಬಾಕಿದ್ದವು ಕೂಸು ತಾರ, ಸಾಲಿಗ್ರಾಮ ಇಲ್ಲದ್ದ ಮನೆಲಿ ಉಣ್ಣ}
      ಇದಕ್ಕುದೇ ಮೇಲಾಣ ವಾದ ಅನ್ವಯ ಆವುತ್ತಲ್ಲದ? ಅರ್ಹವಾದವ ಅಸ್ಪೃಷ್ಯತೆ ಮಾಡಿದರೆ ಅದಕ್ಕೆ ತಾನೇ ತಾನಾಗಿ ಬೆಲೆ ಬತ್ತು. ಅದಕ್ಕೆ ಆರಿಂದಲೂ ವಿರೋಧ ಬಪ್ಪದು ಎನಗೂ ಸಂಶಯ.

      {“ಮೀಸಲಾತಿ ಬೇಕು, ಆದರೆ ಈಗ ಇಪ್ಪಹಾಂಗೆ ಅಲ್ಲ”.- ” ಈಗ ಇಪ್ಪ ಸಾಮಜಿಕ – ರಾಜಕೀಯ ಸ್ಥಿತಿಲಿ ಸಾಮಾಜಿಕ ಸಾಮರಸ್ಯ, ಸಮತೋಲನ ತಪ್ಪಲೆ ಬೇಕಾದ ಹಾಂಗಿಪ್ಪ ಮೀಸಲಾತಿ ಬಾರ”. ಬ್ರಾಹ್ಮಣರೂ ಸಾಮಾಜಿಕ – ರಾಜಕೀಯ ಚಾಣಾಕ್ಷತನಂದ ಹಕ್ಕುಗಳ ಸಾಧನೆ ಮಾಡೆಕ್ಕು; ಒಟ್ಟಿಂಗೆ ಬ್ರಾಹ್ಮಣ್ಯವನ್ನೂ ಆಂತರಿಕವಾಗಿಯೂ ಅನ್ಯರ ಒಳಿತಿಂಗಾಗಿಯೂ ಬೆಳೆಶಿ ಒಳುಶಿ ಬಳಸೆಕ್ಕು}
      ಮುತ್ತಿನಂಥ ಮಾತು. ಪುನಹ ನಿಂಗೊಗೆ ಧನ್ಯವಾದ.

      1. ಸರಿಯಾಗಿಯೇ ಹೇಳಿದಿ ಅಪ್ಪಚ್ಚಿ; ನಿಂಗಳ ಉತ್ತರಕ್ಕುದೇ ರಜ್ಜ ಆಕ್ಷೇಪ ಇದ್ದು;
        ಇರಳಿ,
        ತುಂಬಾ ವಿವರಣೆ ಕೊಡೆಕ್ಕಾವುತ್ತು. ಇಲ್ಲದ್ದರೆ ಅರ್ಥ ಅಪ್ಪಲೆ ಕಷ್ಟ ಇದ್ದು.
        ತತ್ವಾರ್ಥ ಜಿಜ್ಞಾಸೆ ಬೇಕು- ಅದರ ವ್ಯಾವಹಾರ್ಯ ರೂಪದ ಬಗ್ಗೂ ತಿಳುವಳಿಕೆ ಕೊಡೆಕ್ಕು.
        ನಿಧಾನಕ್ಕೆ ಪ್ರಯತ್ನ ಮಾಡುತ್ತೆ, ಈಗ ಪುರುಸೊತ್ತು ಕಮ್ಮಿ ಇದ್ದು;ರಜ್ಜ ತಯಾರಿಯೂ ಬೇಕಾವುತ್ತು; ಬರವದು ಮಾತಾಡಿದಷ್ಟು ಸುಲಭ ಅಲ್ಲನ್ನೆ!

        1. ಚೇ, ಹಿರಿಯೋರ ಹತ್ತರೆ ಎಲ್ಲ ಅಪ್ಪಚ್ಚಿ ಹೇಳ್ಸಿಗೊಂಬಲೆ ನಾಚಿಕೆ ಆವುತ್ತು. ಸುರುವಿಲಿ ಈ ಅಪ್ಪಚ್ಚಿ ಹೇಳಿ ಅಂತೇ ಬಂದದು.. ಹಾಂಗಾಗಿ ಇನ್ನು ಮುಂದೆ ಎನ್ನ ಹೆಸರು “ನೀರ್ಕಜೆ ಮಹೇಶ” ಹೇಳಿ ಇರಳಿ. 🙂

          ಇನ್ನು ಎನ್ನ ಉತ್ತರಕ್ಕೆ ಆಕ್ಷೇಪ ಖಂಡಿತಾ ಇರಳಿ.. ಅದಕ್ಕೆ ಎನ್ನ ಆಕ್ಷೇಪ ಇಲ್ಲೆ 🙂

          1. ನಿಂಗಳ ಇನ್ನುಮುಂದೆ ಅಪ್ಪಚ್ಚಿ ಹೇಳಿ ದೆನಿಗೋಳುತ್ತಿಲ್ಲೆ ಆತೊ “ಅ..ಪ್ಪ..ಚ್ಚಿ”!!!

            ಅಲ್ಲ, ಹವ್ಯಕ ಕನ್ನಡದ ಆಡುಭಾಶೆಲಿ ಆತ್ಮೀಯವಾಗಿ ತಮಾಶೆಂದ “ಅಪ್ಪಚ್ಚಿ; ಭಾವ°; ಮಾವ°; ಅಣ್ಣ… ” ಹೀಂಗೆಲ್ಲ ದೆನಿಗೋಳುದು ಇಪ್ಪದೇ ಅನ್ನೆ!!

            ಎನಗಂತೂ ಅಪ್ಪಚ್ಚಿಯೇ ಇಷ್ಟ!!!

          2. ಹಹ.. ನಿಂಗ ಹೇಳಿದ ಬಳಕೆಗೊ ಇಪ್ಪದು ನಿಜ. ಆದರೆ ಅದು ತೀರ ವಿರುಧ್ಧ ಪದ ಅಪ್ಪಲಾಗನ್ನೆ.. ಪ್ರಾಯಲ್ಲಿ ಅಪ್ಪಚ್ಚಿ ಅಪ್ಪ ಹಾಂಗಿಪ್ಪವರ ಹತ್ತರೆ ಅಪ್ಪಚ್ಚಿ ಹೇಳ್ಸಿಗೊಂಡರೆ ನಮೂನೆ ಆವುತ್ತಿಲ್ಲೆಯ! 🙂 ಹಾಂಗೆ ಇಲ್ಲಿ ಬೈಲಿಲಿ ತುಂಬ ಹಿರಿಯೋರುದೆ ಇಕ್ಕು. ಅದಕ್ಕೆ ಹೇಳಿದ ಅಷ್ಟೆ.

    2. { ಬ್ರಾಹ್ಮಣರು ಪ್ರತಿಯೊಂದು ಪುನರುತ್ಥಾನ ಪ್ರಯತ್ನಂಗಳಲ್ಲಿಯುದೇ ಮುಂಚೂಣಿಲಿಯೇ ಇತ್ತಿದ್ದವು}
      ಇಲ್ಲಿ ಒಂದು ಸ್ಪಷ್ಟನೆ. ಮುಂಚೂಣಿಯಲ್ಲಿತ್ತಿದ ಬ್ರಾಹ್ಮಣರು reformist ಬ್ರಾಹ್ಮಣರಾಗಿತ್ತಿದವು. ಉದಾ ರಾಜಾ ರಾಮ್ ಮೋಹನ್ ರಾಯ್. ಇವು ಬ್ರಾಹ್ಮಣ ಜಾತಿಲಿ ಹುಟ್ಟಿದರೂ ಆ ಕಾಲದ ಹಿಂದೂ ಕ್ರಮಂಗಳ ಖಡಾಖಂಡಿತವಾಗಿ ವಿರೋಧಿಸಿದವು. ಮತ್ತೆ ಕೆಲವು ಬ್ರಾಹ್ಮಣರು ಧರ್ಮ ದ್ರೋಹ ಮಾಡಿದವೂ ಇತ್ತಿದವು. ಉದಾಹರಣೆಗೆ ನೆಹರೂ (ಕಾಶ್ಮೀರ ಪಂಡಿತ). ಈಗಳುದೆ ಈ ನಕ್ಸಲ್, ಮಾವೋವಾದಿ ಹಿಂಸೆಯ ಪ್ರಚೋದನೆ ಮಾಡುವ ಸ್ವಜಾತಿ ಬ್ರಾಹ್ಮಣರುದೆ ಇದ್ದವು. ಅದು ಬೇರೆ ವಿಶಯ. ಆನು ಹೇಳಿದ್ದು ಸ್ವಜನ ಪಕ್ಷಪಾತಿ ಮಾಡುವ, ವೈಯಕ್ತಿಕ ಲಾಭ ಬಿಟ್ಟು ಬೇರೆ ಯೋಚನೆ ಮಾಡದ (ಆನು ಹೇಳಿದ ಕಾಶ್ಮೀರ ಉದಾಹರಣೆ ಮಾದರಿ) ಬ್ರಾಹ್ಮಣರ ಬಗ್ಗೆ. ಇಂದಿಂಗೂ reformist ಬ್ರಾಹ್ಮಣರ ಸಂಖ್ಯೆ ಕಮ್ಮಿಯೇ. ನಮ್ಮ ಗುರುಗೊ ಹೊಸ ವಿಚಾರ ತಪ್ಪಗ, ದೇವಸ್ಥಾನವೊಂದರ ಕೊಳಕು ಸರಿಸುವಗ ಇಂಥಾ ಸ್ವಜನ ಪಕ್ಶಪಾತಿಗಳಿಂದ ವಿರೋಧ ಬಂದದೂ, ಅವು ಗುರುಗಳ ಚಾರಿತ್ರ್ಯ ಹರಣ ಮಾಡುಲೆ ತೆರೆಮರೆ ಪ್ರಯತ್ನ ಮಾಡಿ ಸ್ಕ್ಕಿಬಿದ್ದದೂ ನವಗೆ ಗೊಂತಿದ್ದು. ಅಲ್ಲದ?

  8. Meesalathiya main uddesha rajakeeya vote bank.. Bare jathi onde mukhya alla heludu egina matadarige artha avta iddu.. Brahmanara, meljathiya mele- kela jathiyavara etti katti hana madida kala hovta iddu.. Road, current neerige jathi ille, ella jathiyavakku adu anivarya,, aa sathya uttara bharathada janagavakke artha apaple suru aidu!!, khandithavagi sampurna shikshitha yuva janathendagi reservation maya appa ella chances iddu.

    1. ರಿಸರ್ವೇಶನ್ ಮಾಯ ಆದರೆ ಸಂತೋಶವೇ. ಆದರೆ ಅದರೊಟ್ಟಿಂಗೆ ಅವು ಹೋಲ್ ಸೇಲ್ ಆಗಿ ಬೇರೆ ಮತಕ್ಕೆ ಹೋಗದ್ದರೆ ಸಾಕು. ಬೌಧ್ಧ ಧರ್ಮಕ್ಕೋ ಮಣ್ಣು ಹೋದರೆ ಚಿಂತೆ ಇಲ್ಲೆ. ಬ್ಯಾರಿಗೊ ಪುರ್ಬುಗೊ ಆಗದ್ದರೆ ಸಾಕು.

      1. ಒಬ್ಬ ಹಿಂದು ಕನ್ವರ್ಶನ್ ಆದರೆ ಒಬ್ಬ ಹಿಂದು ಕಮ್ಮಿ ಅಪ್ಪದು ಮಾತ್ರ ಅಲ್ಲ, ದೇಶಕ್ಕೆ, ಧರ್ಮಕ್ಕೆ ಒಬ್ಬ ಶತ್ರು ಹೆಚ್ಚು ಆದ ಹಾಂಗೆ ಅಲ್ಲದ?

        1. Convertionige ennadu virodha iddu, adare obba converton ada koodle desha drohi avta heludu tappu.. tumba christians desha premigo iddavu..

          1. {tumba christians desha premigo iddavu}
            ಇದ್ದಿದ್ದರೆ ನಾಗಾಲ್ಯಾಂಡ್ ಮುಂತಾದ ಕ್ರಿಶ್ಚಿಯನ್ ಬಾಹುಳ್ಯದ ಪ್ರದೇಶಂಗೊ ಪ್ರತ್ಯೇಕ ದೇಶಕ್ಕೆ ಈ ನಮುನೆ ಹಿಂಸಾಚಾರಕ್ಕೆ ಇಳಿತಿತ್ತವ? ಅವು (ಮುಸ್ಲಿಮರುದೆ) ಅಲ್ಪ ಸಂಖ್ಯೆಲಿಪ್ಪಗ ನಮ್ಮ ಜೊತೆ ಲಾಯಿಕಲಿ ಇರ್ತವು. ಅವರ ಸಂಖ್ಯೆ ಹೆಚ್ಚಾದ ಹಾಂಗೆ ಅವರ ನಿಜ ಬಣ್ಣ ಹೆರ ಬತ್ತು.

          2. Keralalli christians sankhye tumba iddu.. but byarigalange desha droha madiddu kammi…Naanu christian para heli alla, just ippa vishaya heliddu..

      2. Roga bandare maddu kodekkaddu adara moolakke, summane jathiyathe hogaladsekku heli eene kaanunu maadidaruu kaanunu tappadara badaluu, churchgalalli ade reethi madrsagalali koduva reethi vyavasthitha shikhsanada avakasha suru madire ella samasyego parihara akkulu kanuttu… namma prathi halligalallu devasthanago, bhajana mandirango estude iddu.. prati oorilide makkoge bekappa basic adhyatmika shikshana koduva hiriyoru estuu iddavu.. pratee bhanuvara at least 1-2 gante makkala sersi just namma dharmada bagge mahithi sikkuva vyavaste madire, ella samasyego parihara akku… nammatre ellavu iddu aadare adara vyavasthithavagi madudu onde baaki.. sheegralli suru akku heli haraike..

        1. ಅಪ್ಪು ಆ ಕಾರ್ಯ ಆಯೆಕ್ಕಪ್ಪದು ಹೇಳಿಯೇ ಆನುದೆ ಹೇಳುತ್ತಾ ಇಪ್ಪದು. ಬಾಕಿಯೊರ ಸ್ಪರ್ಧಿ ಹೇಳಿ ಅಥವಾ ಶತ್ರು ಹೇಳಿ ನೋಡುದಕ್ಕಿಂತ ಅವಕ್ಕೆ ಧಾರ್ಮಿಕ ಶಿಕ್ಷಣ ಕೊಡುವ ಕೆಲಸ ತುರ್ತಾಗಿ ಆಯೆಕ್ಕು. ಕೊಡುವವರು ಆರು ಹೇಳಿಯೇ ಇಪ್ಪದು ಪ್ರಶ್ನೆ.

          1. ಬಾಕಿಯೋರ ಸ್ಪರ್ಧಿ ಹೇಳಿ ಖಂಡಿತ ಆಲೋಚನೆ ಮಾಡ್ತಾ ಇಲ್ಲೆ ..ನಮ್ಮ ಒಟ್ಟಿoಗೆ ಸ್ಪರ್ಧೆಗೆ ಅವುದೆ ಬರಲಿ ಹೇಳುದು ಆಶಯ ..ನೂಕಿ ಕೊಡೆಕ್ಕಾದ ಅಗತ್ಯ ಈಗದ ಪರಿಸ್ಥಿತಿಲಿ ಇಲ್ಲೆ ..

          2. Ivaatigu kooda aneka vishayangala brahmanaru start madire uluda vargadavu follow madta ipapdu vastava, soo ee vishayakku idu anvaya khanditha akku..

          3. ಹರೀಶಣ್ಣ, ಈಗ ಗೊಂತಾತು ನಿಂಗ ಹೇಳುದು ಎಂತರ ಹೇಳಿ.. ಮದಲು ಒಂದ್ ಚೂರು ಕನ್ಫ್ಯೂಸ್ ಆತು.. 🙂

  9. Neerkaje appachhi, Kaala badalavta iddu, namma hiriyoru jathi beda heli madikku, hage heli aa dweshava namma generation mele torsire avta? past is past alda,, eega badalavane avta iddu… modalu SC gavakke devasthnakke praveshave ittille, eega avudu olange battvu.. badalavane heludu hanta hantavagi appadu, sudden adare krantiya hesarili himsage daari aste…. Navage nammade ada ideology irtu, hage heli adara namma parents mele force madudu tappavtu.. matantara heli heltavu, hage heli matantarakke ippa moola karana dharmika niraksharathe.. adra koduva pryatna indingo sariyagi avta ille, obba vyakthige tanna darmada bagge sariyagi gontadre yaringo avana convert madle ediya, ella matantara nisheda kanunu tappa modalu ee bagge alochisidare olledu…Prati obbande darmikavagi shikshitha aadare khandithavagiyuu ella samasyegavakku parihara sikkugu heludu nanna bhavane…

    1. {Navage nammade ada ideology irtu, hage heli adara namma parents mele force madudu tappavtu}
      ಆನು ಆ ರೀತಿ ಹೇಳಿದ್ದಲ್ಲ. ಹಿರಿಯೋರು ಮಾಡಿದ ತಪ್ಪನ್ನೇ ನಾವು ಮಾಡದು ಸರಿ ಅಲ್ಲ ಹೇಳಿದ್ದು. ಅವರಲ್ಲಿದ್ದ ಉತ್ತಮ ಅಂಶಗಳ ನಾವು ಅಳವಡ್ಸಿಕೊಳೆಕ್ಕು, ಉತ್ತಮ ಅಲ್ಲದ್ದದರ ನಾವು ಬಿಡೆಕ್ಕು. ಅದಕ್ಕೆ ಚೂರು ದೊಡ್ಡ ಮನಸ್ಸು ಬೇಕು ಅಷ್ಟೆ.

      {badalavane heludu hanta hantavagi appadu}
      ಈ ಚರ್ಚೆಯೂ ಆ ನಿಧಾನ ಬದಲಾವಣೆಯ ಒಂದು ಹಂತ ಆದರೆ ಉತ್ತಮ. ಅಲ್ಲದ?

      {Prati obbande darmikavagi shikshitha aadare khandithavagiyuu ella samasyegavakku parihara sikkugu heludu nanna bhavane}
      ಅಪ್ಪು, ಆನುದೆ ಅದನ್ನೇ ಹೇಳುದು, ಆದರೆ ಅದಕ್ಕೆ ನಮ್ಮವು ಪ್ರಯತ್ನ ಮಾಡೆಕ್ಕನ್ನೇ? ಅವಕ್ಕೆ ಧಾರ್ಮಿಕ ಶಿಕ್ಷಣ ಕೊಡೆಕ್ಕಾರೆ ಆರು ಕೊಡುದು?‌ ಬ್ರಾಹ್ಮಣರೇ ಕೊಡೆಕ್ಕಲ್ಲದ?

      1. Appachhi helidu sari.. Eegina genaration tumba hiriyoru madida tappugala tiraskarisutta iddu..naavude ade vatavaranalli hutti belada karana ellavannu ondariye oppikombale kasta manasinge…adare Genrationinda genarationige badalavanego teevra vegalli batta iddu..heludu santoshada vishaya…
        Innu darmika shikshana adude brahmanare mundalatva tekkondre olledu, ella kade rajeli bramanara makkoge rajeli veda pata iruva hange, at least ade dodda besage rajeli orilippa devasthanagalalli ella jathiya makkogu, namma dharmada bagge summer class heli suru madire oleldu heli enna abhi praya… Bhagavadgeetha, namma acharanegala bagge at least basic idea aadru bandare olledu… Egana hope less summer campinda esto upayoga akkau heli enna bhavane..

      2. Obba muslim hudugi or christian hudugi hindu hudugana maduve avtare avrannuu christian or muslim agi convert madsuttavu.. sanna prayandale taaavu anusarisutta ippadu matrave nijavada dharma heludu taleli lepisida karana elladarindaluu hecchu darmakke adyathe kodtavu… egina kalalli nammavu matte hindu hudugiyaru bereyara love maadi maduve avta ippadu sumaru dikke kanta ippa sangathi… Love madudara tappusule ediya aadare sariyada dharmika shikshana kotatre matantara appadara tappusule edigu, ondu bere jathige convert appadara badalu, bere jathiyave hindu appa chances hechhu!!

  10. ಕೆಲವು ದಶಕ೦ಗಳ ಮದಲು “ಹಿಂದುಳಿದ ವರ್ಗ ,ಬುಡಗಟ್ಟು ಜನಾಂಗ ” ಈ ಶಬ್ದಂಗೊಕ್ಕೆ ಅರ್ಥ ಇತ್ತು.ಸಮಾಜಲ್ಲಿ ಇದ್ದ ವ್ಯವಸ್ಥೆಯ ಪರಿಣಾಮವಾಗಿ ಕೆಲವು ಜಾತಿ,ಪಂಗಡದವು ಆರ್ಥಿಕವಾಗಿ ಮತ್ತೆ ಸಾಮಾಜಿಕವಾಗಿ ಹಿಂದೆ ಒಳುದವು ಹೇಳ್ತದು ಸತ್ಯ.ಅದರ ಸರಿ ಮಾಡುವ ಪ್ರಯತ್ನವೇ ಮೀಸಲಾತಿ ವ್ಯವಸ್ಥೆ.ಆದರೆ ಇಂದು ಇದು ತನ್ನ ನಿಜ ಅರ್ಥವ ಕಳಕ್ಕೊಂಡಿದು.ಇಂದು ಅಸ್ಪ್ರಶ್ಯತೆ ಇಲ್ಲೆ,ಸಮಾಜಲ್ಲಿ ವರ್ಗಗಳ ತಾರತಮ್ಯ ಕಾಣುತ್ತಿಲ್ಲೆ (ಉತ್ತರ ಭಾರತಲ್ಲಿ ಇನ್ನೂ ಇದ್ದು).ವಿದ್ಯಾಭ್ಯಾಸದ ಪ್ರಗತಿ,ಹೆಚ್ಚಿದ ಉದ್ಯೋಗ ಅವಕಾಶ ಇದಕ್ಕೆ ಮೂಲ ಕಾರಣವಾದರೆ ಮೀಸಲಾತಿ ಪೂರಕ ಆತು.ಆದರೆ ಒಂದು ತಲೆಮಾರಿಲಿ ಮೀಸಲಾತಿಯ ಪ್ರಯೋಜನ ಪದದ ಮತ್ತೆ ಪುನಃ ಆದರೆ ಲಾಭ ತೆಕ್ಕೊಂಬದು ಅರ್ಥಹೀನ.ನಮ್ಮ ರಾಜಕೀಯ ವ್ಯವಸ್ಥೆ ಇಂದು ಜಾತಿಗಳ ಮೇಲಾಟಲ್ಲಿ ಎಡಿಗಾದಷ್ಟು ಹಾಳಾಯಿದು. ಇತ್ತೀಚಿಗೆ ‘ಕೆನೆಪದರ’ ಹೇಳುವ ಶಬ್ದಪ್ರಯೋಗ ಆತು.ಅದು ನಿಜವಾಗಿ ನಡೆಯೆಕ್ಕಾದ್ದು.ಒಂದು ತಲೆಮಾರಿನ ನಂತರ ಮೀಸಲಾತಿಯ ಯಥಾರೂಪಲ್ಲಿ ಮುಂದುವರಿಸೊದಕ್ಕೆ ಅರ್ಥ ಇಲ್ಲೆ. ಮೀಸಲಾತಿಯ ಪ್ರಯೋಜನ ಪಡದು ಅಥವಾ ಸ್ವಸಾಮರ್ಥ್ಯಂದ ಸಮಾಜಲ್ಲಿ ಆರ್ಥಿಕವಾಗಿ ಮುಂದೆ ಬಂದ ಮತ್ತೆ ಮುಂದಾಣ ತಲೆಮಾರಿಲಿಯೂ ಜಾತಿಯ ಆಧಾರಲ್ಲಿ ಮೀಸಲಾತಿಯ ಲಾಭ ಪಡವೋದು ವಿಪರ್ಯಾಸವೇ ಅಲ್ಲದೋ? ಆದರೆ ಯಾವ ರಾಜಕೀಯ ಪಕ್ಷ ಇದರ ಕಾರ್ಯರೂಪಲ್ಲಿ ತಕ್ಕು?ನಮ್ಮವು ಲಿಂಗಾಯಿತರಲ್ಲಿ ಕೆಲವು ಉಪಜಾತಿಗಳನ್ನೂ ಹಿಂದುಳಿದ ಹೇಳಿ ಗುರುತಿಸುಲೆ ಪ್ರಯತ್ನ ಮಾಡಿಗೊಂಡು ಇದ್ದವು. ಹಾನಾಗಾರೆ ಮುಂದೆ ಎಲ್ಲರನ್ನೂ ಹಿಂದುಲೀದವು ಹೇಳೋದು ಉತ್ತಮ ಅಲ್ಲದೋ? ಗೀತತ್ತೆ ಕೇಳಿದ ಪ್ರಶ್ನೆ ಲಾಯಿಕ ಇದ್ದು.ಹಿಂದುಳಿದ ವರ್ಗದ ದಾಗುತ್ರಕ್ಕಳ ಹತ್ತರೆ ಹೋಪಲೆ ಧೈರ್ಯ ಸಾಕಾಗ.ಇನ್ನು ನ್ಯಾಯಾಂಗ, ಮೀಸಲಾತಿಂದಾಗಿ ಸರಿಯಾಗಿ ಹಾಳಾಯಿದು.ಅಯೋಗ್ಯಂಗೋ ಇನ್ನು ನ್ಯಾಯಾಧೀಶರಾಗಿ ಬಡ್ತಿ ಪಡದು ,ಅವಕ್ಕೆ ತೀರ್ಪು ಬರವಲೂ ಗೊಂತಿಲ್ಲದ್ದೆ,ಏನೆಲ್ಲಾ ಅಸಂಬದ್ಧ ನೆಡೆತ್ತಾ ಇದ್ದು,ಕೊರ್ಟಿಲಿ.ನಮ್ಮ’ಹೋಕ್ವರ್ಕು ‘ ಇಲ್ಲದ್ದ ಕುಟುಂಬ೦ಗೋ ನಂಬ್ರ ಮಾಡೋದು ಬಿಟ್ಟು ರಾಜಿ ಪಂಚಾಯ್ತಿಗೆ ಮಾಡೊದು ಉತ್ತಮ.ಇನ್ನು ಪೈಲಟ್ ಗೋ ಆದರೆ ಜೀವವ ಕೈಲಿ ಹಿಡುಕ್ಕೊಂಡು ಕೂರೆಕ್ಕಷ್ಟೇ,ವಿಮಾನಲ್ಲಿ !!

  11. ಇದು ಬರೀ ಕಾಶ್ಮೀರದ ಬ್ರಾಮ್ಹಣರ ಕಥೆ ಅಲ್ಲ ಮೀಸಲಾತಿಂದಾಗಿ ಉತ್ತರ ಪ್ರದೇಶ,ಬಿಹಾರ ಇತ್ಯಾದಿ ರಾಜ್ಯಂಗಳಲ್ಲಿ ಇಪ್ಪ ಬ್ರಾಮ್ಹಣರ ಅವಸ್ತ್ತೆ..ನಮ್ಮಲ್ಲಿ ಆದರೋ IT,BT,ಬೆಂಗಳೂರು ಹೇಳಿ ನಮ್ಮೋರು..ಬದುಕ್ಕುತ್ತವು…ಹಳ್ಳಿಲಿ ಇಪ್ಪೋರ ಭವಿಶ್ಯ ಆರಾದರೂ ಯೋಚಿಸುತ್ತವಾ????

  12. ನಾವು ಎದುರ್ಸದ್ದರೆ ಕಾಶ್ಮೀರ ಮಾ೦ತ್ರ ಅಲ್ಲ ನಾಳೆ ಕೇರಳಲ್ಲಿಯೂ ಇದೇ ಗೆತಿ.ಕರ್ನಾಟಕಕ್ಕೂಹೆಚ್ಹು ಸಮಯ ಬೇಕಾಗ.ನವಗೆ ಮೈ ನೇಮ್ ಈಸ್ ಖಾನ್ ಹೇಳಿ ಒ೦ದು ಸಿನೆಮ ಮಾಡಿದ ಕೂಡ್ಲೆ ಅದರ ನೋಡಿ ಸ೦ತಾಪ ಪಡ್ಲೆ ಮಾ೦ತ್ರ ಗೊ೦ತು.ನಮ್ಮವಕ್ಕೆ ಬೇಕಾಗಿ ಒ೦ದಷ್ಟು ಕಣ್ಣಿರಾದರು ಹಾಕಲೆ ತಯಾರಿಲ್ಲೆ.ಎಚ್ಹ್ರಿಕೆ ಗ೦ಟೆ ಬಾರ್ಸಿಯೊ೦ಡೆ ಇದ್ದು.ಕಾ೦ಗ್ರೆಸ್ಸಿನವು ಓಟು ಸಿಕ್ಕುತ್ತರೆ ಇಡೀ ಭಾರತವ ಹರಿವಾಣಲ್ಲಿ ಮಡಗಿ ಬ್ಯಾರಿಗೋಕ್ಕೆ ಕೊಡ್ಲೆ ತಯಾರು.ಆಧುನಿಕ ಜಯಸಿ೦ಹ೦ಗೊ.ಈಗಾಣವಕ್ಕೆ ಜಯಸಿ೦ಹನ ಗೊ೦ತಿದ್ದೋ ಗೊತಿಲ್ಲೆ ಗೊತಿಲ್ಲದ್ದರೆ ತಿಳುಕ್ಕೋಳಿ.ಒಪ್ಪ೦ಗಳೊಟ್ಟಿ೦ಗೆ.

    1. ಇದು ನಡೆತ್ತ ಇಪ್ಪ ಘಟನೆಯೇ…ಕಾಶ್ಮೀರಂದ ಓಡ್ಸಿ …ದ ಬ್ರಾಹ್ಮಣರ ಕಥೆ…ಇದು ..ಒಂದರಿ ಪೇಪರ್ ಲಿ ಯೂ ಇದರ ಬಗ್ಗೆ ಬಂದಿತ್ತು ..ಒಂದರಿ …
      ಧನ್ಯವಾದ೦ಗೊ vedioಲಿಂಕ್ ಗೆ ..

    2. ಕಾಶ್ಮೀರದ ಸಮಸ್ಯೆ ಬಗ್ಗೆ ಹೇಳ್ತಾರೆ ನಿಂಗ ಹೇಳಿದ ವೀಡಿಯೋ ನೋಡುದಕ್ಕಿಂತ ಮೊದಲು ಒಂದು ವಿಚಾರ ನೆನಪಿಸಿಕೊಳೆಕ್ಕು. ಹಿಂದಾಣ ಕಾಲಲ್ಲಿ ಬ್ಯಾರಿಗೊ ಬಹುತೇಕ ಹಿಂದೂ ಕಾಶ್ಮೀರಿಗಳ ಕನ್ವರ್ಟ್ ಮಾಡಿತ್ತಿದವು. ಆ ಸಮಯಲ್ಲಿದ್ದ ಮುಸ್ಲಿಮ್ ರಾಜನ ದಬ್ಬಾಳಿಕೆ ಮುಗುದ ಮೇಲೆ ಆ ಕನ್ವರ್ಟ್ ಆದವರಲ್ಲಿ ಬಹುತೇಕರು ಹಿಂದೂ ಮತಕ್ಕೆ ತಿರುಗಿ ಬಪ್ಪ ಇಚ್ಚೆ ವ್ಯಕ್ತಪಡಿಸಿದವು. ಆಗ ಇದೇ ಬ್ರಾಹ್ಮಣರು ಅವು ದನದ ಮಾಂಸ ತಿಂದಿಕ್ಕು ಹೇಳ್ತ ಸಂಕುಚಿತ ಮನೋಭಾವನೆಂದ ಅವರ ವಾಪಸು ಧರ್ಮಕ್ಕೆ ಹಿಂತಿರುಗುಲೆ ಬಿಟ್ಟಿದೊವಿಲ್ಲೆ. ಆ ಸಂಕುಚಿತ ಮನೋಭಾವದ, ಅವಿವೇಕತನದ ಬುಧ್ಧಿಯೇ ಬ್ರಾಹ್ಮಣರ ಇಂದಿನ ಅನೇಕ ಸಮಸ್ಯೆಗೊಕ್ಕೆ ಕಾರಣ.

      ದೂರ ಹೋಪದು ಬೇಡ. ನಮ್ಮ ಊರಿಲಿಯೇ ನೋಡುವ.. ಈಗ ಅಡಕ್ಕೆ ತೆಗವವು ಪೈಸೆ ಜಾಸ್ತಿ ಕೇಳ್ತವು ಹೇಳುವ ಫಿರ್ಯಾದು ಎಲ್ಲರಲ್ಲು ಇದ್ದು. ಈಗಿನ ಪರಿಸ್ಥಿತಿಲಿ ನವಗೆ ಅನುಕೂಲ ಇಲ್ಲೆ, ಖರ್ಚು ಜಾಸ್ತಿ ಉತ್ಪಾದನೆ ಕಮ್ಮಿ ಹೇಳಿ ಒಪ್ಪಿಕೊಂಬ. ಆದರೆ ಹಲವಾರು ವರ್ಷಗಳ ಹಿಂದೆ ನವಗೆ ಅನುಕೂಲ ಇದ್ದಿಪ್ಪಗ ಆಳುಗಳ ಹೇಂಗೆ ನಡೆಶಿಗೊಂಡಿದು ಹೇಳಿ ನವಗೆ ಇಂದು ನೆಂಪು ಇದ್ದೋ? ಸಣ್ಣದಿಪ್ಪಗ ಮನೆಲಿ ಎಂತಾರು ಸ್ವೀಟು ಮಾಡಿದರೆ ಅದರ ಆಳುಗೊಕ್ಕೆ ಕಾಣದ್ದ ಹಾಂಗೆ ಹುಗ್ಗುಸಿ ತಿಂದುಕೊಂಡಿದ್ದದು, ಮನೆಲಿ ನವಗೆ ತಿಂದು ಒಳುದರೆ ಅದರ ನಾಳೆ ಆಳುಗೊಕ್ಕೆ ಬಳುಸುಲಕ್ಕು ಹೇಳ್ತ ಮಾನಸಿಕತೆ ಎನಗೆ ಇನ್ನೂ ನೆಂಪು ಇದ್ದು. ಎಂಗಳ ಮನೆಲಿ ಮಾತ್ರ ಅಲ್ಲ, ಎಲ್ಲ ಕಡೆಯೂ ನೋಡಿದ್ದೆ ಇಂಥದ್ದೆಲ್ಲ. ಅವಕ್ಕೆ ಕೀಜಿ ಗಿಲಾಸು ಬೇರೆ.. ಅವು ಕಟ್ಟಿದ ಮನೆಲಿ ಮನುಗುಲೆ ಅಡ್ಡಿ ಇಲ್ಲೆ, ಆದರೆ ಅವು ಕುಡುದು ತೊಳದ ಗ್ಲಾಸು ನವಗಾಗ. ಈಗ ಪೇಟೆಲಿಪ್ಪವು ಹೋಟ್ಲಿಲ್ಲಿ ಎಂಥೆಂಥಾ ಗ್ಲಾಸಿಲಿ ಕಾಪಿ ಕುಡುದರೂ ಹೇಸಿಗೆ ಆವುತ್ತಿಲ್ಲೆ. ಆಗ ಹಾಂಗಿತ್ತಿಲ್ಲೆ. ಆಳುಗಳೇ ಕಟ್ಟಿದ ದೇವರ ಕೋಣೆಲಿ ಆಳುಗೊಕ್ಕೆ ತಪ್ಪಿಯೂ ಪ್ರವೇಶ ಇಲ್ಲೆ. ಎಂಗಳ ಗ್ರಾಮ ದೇವಸ್ಥಾನಲ್ಲಿ ಈಗಳುದೆ ಒಳ ಬ್ರಾಮರಿಂಗೆ ಊಟ ಆದ ಮೇಲೆ ಹೆರಣೊರಿಂಗೆ ನೀರು ನೀರು ಸಾರು, ನೀರು ಪಾಯಸದ ಊಟ. ಹೀಂಗೆಲ್ಲ ಮಾಡಿದವಂಗೆ ಯಾವ ದೇವರು ಹರಸುಗು ಹೇಳಿ ನಾವು ಯೋಚನೆ ಮಾಡಿದ್ದ? ನಾವು ಬ್ರಾಹ್ಮಣನಾಗಿ ಹುಟ್ಟಿದ ಮಾತ್ರಕ್ಕೆ ದೇವರಿಂಗೆ ಹತ್ತರೆ ಹೇಳಿ ತಿಳ್ಕೊಂಡ ಹಾಂಗಿದ್ದು. ಹಿಂದೆ ಇಡೀ ಭಾರತಲ್ಲಿ ಉಚ್ಚ್ರಾಯ ಸ್ಥಿತಿಲಿದ್ದ ನಮ್ಮವು ಈಗ ಅಶನ ಉಂಬಲೆ ಕಷ್ಟ ಪಡೆಕ್ಕಾದ ಸ್ಥಿತಿ ಇದ್ದು ಹೇಳುದಕ್ಕೆ ಅಡ್ಕತ್ತಿಮಾರು ಮಾವ ಕೊಟ್ಟ ಮಾಹಿತಿಗಳೇ ಸಾಕ್ಷಿ. ನಮ್ಮ ಧರ್ಮದ ಬಗ್ಗೆ ಮಾತಾಡುಲೆ ನಾವು ಮುಸ್ಲಿಮರಿಂಗೆ ಇತ್ಯಾದಿಗೊಕ್ಕೆ ಹೆದರೆಕ್ಕಾದ ಪರಿಸ್ಥಿತಿಗಿಂತ ಹೀನಾಯ ಪರಿಸ್ಥಿತಿ ಇದ್ದ? ಇವೆಲ್ಲ ನಮ್ಮ ಪಾಪ ಕರ್ಮಫಲವೇ ಹೇಳಿ ಆರಿಂಗೂ ಅನ್ಸುತ್ತಿಲ್ಲೆಯ?

      ಇಷ್ಟಲ್ಲ ಆದರೂ ಬ್ರಾಹ್ಮಣರು ಇನ್ನುದೆ ಸಂಕುಚಿತ ಮನಸ್ಥಿತಿ ಬಿಟ್ಟಿದವಿಲ್ಲೆ ಹೇಳಿ ಎನಗಂತೂ ಬೇಜಾರಾವುತ್ತು. ಇಲ್ಲಿ ಮೇಗೆ ಕೊಟ್ಟ ಯೇವದೋ ಲಿಂಕಿಲಿ ಬ್ರಾಹ್ಮಣರೇ ಅಲ್ಪಸಂಖ್ಯಾತರು ಹೇಳಿ ಹೇಳಿದವು. ಅದಕ್ಕೆ ಕಾರಣ ಆರು ಸ್ವಾಮಿ? ಹಿಂದಾಣ ಕಾಲಲ್ಲೇ ಬೇರೆ ಜಾತಿಯವಕ್ಕೆ ದೀಕ್ಷೆ ಕೊಟ್ಟಿದ್ದಿದ್ದರೆ ಈಗ ಬ್ರಾಹ್ಮಣರು ಅಲ್ಪಸಂಖ್ಯಾತರಾಯೆಕ್ಕಾದ ಗತಿ ಬರ್ತಿತ್ತ? ಈಗ ಪೇಜಾವರ ಸ್ವಾಮಿಗೊ ದಲಿತರಿಂಗೆ ದೀಕ್ಷೆ ಕೊಡುತ್ತೆ ಹೇಳಿ ಅಪ್ಪಗ ಎಷ್ಟು ಜನ ಬ್ರಾಹ್ಮಣರು ಅದಕ್ಕೆ ಕೊಂಕು ಮಾತಾಡಿದ್ದವಿಲ್ಲೇ? ಇಂಥವಕ್ಕೆ ಧರ್ಮದ ಉಧ್ಧಾರ ಬೇಕಪ್ಪದೋ ಅಲ್ಲ ಸಂಕುಚಿತ ಮನೋಭಾವನೆಯ ಸ್ವರತಿ ಬೇಕಪ್ಪದೋ ಹೇಳಿ ಎನಗೆ ಇದುವರೆಗೂ ಅರ್ಥ ಆಯಿದಿಲ್ಲೆ.

      ಇನ್ನು ಪುನಾ ಮೀಸಲಾತಿ ವಿಷಯಕ್ಕೆ ಬತ್ತೆ. ಈ ಬೈಲಿಲಿ ಹೆಚ್ಚಿನವು ಎಲ್ಲವುದೆ ಮೀಸಲಾತಿ ಬೇಡ ಹೇಳಿದ್ದದು ಎನ್ನ ಅರಿವಿಂಗೆ ಬತ್ತು. ಈ ಮೀಸಲಾತಿ ಈಗ ತೆಗದರೆ ಪರಿಸ್ಥಿತಿ ಎಂತ ಆವುತ್ತು ಹೇಳಿ ಆರುದೆ ಯೋಚನೆ ಮಾಡಿದ್ದವ? ಜಾತಿ ಪಧ್ಧತಿಗೆ ವಿರೋಧಿಸುವ ಆರೆಸ್ಸೆಸ್ ಕೂಡ ಮೀಸಲಾತಿ ಬಗ್ಗೆ ಮಾತಡದ್ದೆ ಇಪ್ಪಲೆ ಕಾರಣ ಇದ್ದು. ಅದೆಂತ ಹೇಳಿರೆ ಈಗ ಮೀಸಲಾತಿ ತೆಗದರೆ ದಲಿತರೆಲ್ಲ ಹೋಲ್ ಸೇಲ್ ಆಗಿ ಪುರ್ಬುಗಳೋ ಬಿಯಾರಿಗಳೋ ಆಗಿ ಕನ್ವರ್ಟ್ ಆವುತ್ತವು. ಮೀಸಲಾತಿಯ ಆಶೆಗಾದರೂ ಅವು ನಮ್ಮ ಧರ್ಮಲ್ಲಿ ಉಳ್ಕೊಂಡಿದವು ಹೇಳುದಕ್ಕಿಂತ ಬೇರೆ ಧರ್ಮಕ್ಕೆ ಹೋಯಿದವಿಲ್ಲೆ ಹೇಳ್ತದು ಹೆಚ್ಚು ಸರಿ. ಇಲ್ಲಿ ಇನ್ನೊಂದು ವಿಷಯ ಗಮನ್ಸೆಕ್ಕು. ನಾವು ಪ್ರಾಕಿಲಿ ದಲಿತರನ್ನು ಎಷ್ಟೇ ಕೆಟ್ಟದಾಗಿ ನಡೆಶಿಕೊಂಡರುದೆ ಇಂದ್ರಾಣ ದಲಿತರು ನಮ್ಮ ವಿರುಧ್ಧ ಹಿಂಸೆಗೆ ಇಳುದ್ದವಿಲ್ಲೆ. ಮುಸ್ಲಿಮ್ ಬಾಹುಳ್ಯದ ಕಾಶ್ಮೀರಂದ ಪಂಡಿತರ ಓಡ್ಸಿ, ಅವರ ಕೊಂದು, ಹೆಮ್ಮಕ್ಕಳ ಅತ್ಯಾಚಾರ ಮಾಡಿದ ಹಾಂಗೆ ದಲಿತ ಕಾಲೊನಿಂದ ಬ್ರಾಹ್ಮರ ಓಡ್ಸಿದ ಘಟನೆ ಎಲ್ಲಿಯಾದರೂ ಇದ್ದ? ಕಾಶ್ಮೀರ ಹಿಂಸೆ ಮಟ್ಟದ್ದು? ತಮಿಳುನಾಡಿಲಿ ದಲಿತರು ಪೆರಿಯಾರ್ ಅಡಿಲಿ ಬ್ರಾಹ್ಮಣರ ವಿರುಧ್ಧ ತಿರುಗಿ ಬಿದ್ದದು ಅಪ್ಪು, ಆದರೆ ಅಲ್ಲಿ ಜಾತಿ ವೈಷಮ್ಯ ಅಷ್ಟೇ ಇತ್ತು ಹೇಳುದರ ಗಮನ್ಸೆಕ್ಕು. ಆ ನಮುನೆ ತುಳಿಸಿಕೊಂಡವ ತಿರುಗಿ ಬೀಳದ್ದರೇ ತಪ್ಪು ಹೇಳುಲಕ್ಕು. ಇಷ್ಟಾದರೂ ಅದು ಒಂದರಿಯಾಣ ಪ್ರತಿಕ್ರಿಯೆ ಮಾತ್ರ. ಅಲ್ಯಾಣ ತಮಿಳರೆಂದೂ ದಲಿತತ್ವದ ಮೇಲೆ ಪ್ರತ್ಯೇಕ ದೇಶ ಡಿಮ್ಯಾಂಡ್ ಮಾಡಿ ಕೈಲಿ ಬಂದೂಕು ಹಿಡುದು ಹಿಂಸೆ ಮಾಡಿದ್ದವಿಲ್ಲೆ. ಎಲ್ಟಿಟಿಯಿ ಪುರ್ಬುಗಳ ಕುಮ್ಮಕ್ಕಿಂದ ಹಿಂಸೆಗೆ ಇಳುದಿತ್ತೇ ಹೊರತು ದಲಿತರ ಪ್ರಯತ್ನಂದ ಅಲ್ಲ. ಅಲ್ಲದ್ದೆ ಈಗ ಅಲ್ಲಿ ನಮ್ಮ ಧರ್ಮವೂ ಚೆನ್ನಾಗೇ ಬೆಳೆತ್ತಾ ಇದ್ದು. ಸರಕಾರದ ಸಹಕಾರ ಇಲ್ಲದ್ದರೂ‌ ಕಾಂಚಿ ಮಠ ಉತ್ತಮ ಕೆಲಸ ಮಾಡ್ತಾ ಇದ್ದು. ಬಿಯಾರಿಗಳ ಬಾಹುಳ್ಯ ಇಪ್ಪಲ್ಲಿ ಅಥವಾ ನಾಗಾಲ್ಯಾಂಡ್ ನಂಥ ಪುರ್ಬುಗಳ ರಾಜ್ಯಲ್ಲಿ ಕಾಂಚಿ ಮಠ ನಡೆಗ? ಈ ಬಗ್ಗೆ ಮೀಸಲಾತಿ ವಿರೋಧಿಗ ಯೋಚನೆ ಮಾಡೀದ್ದವ? ತಮಿಳುನಾಡಿನ ಮೀನಾಕ್ಷಿಪುರಮ್ ಲಿ ಮೇಲ್ಜಾತಿಯವರ ದೌರ್ಜನ್ಯಂದ ಬೇಸತ್ತು ಇಡೀ ಊರಿಂಗೆ ಊರೇ ಇಸ್ಲಾಮಿಂಗೆ ಕನ್ವರ್ಟ್ ಆದ್ದು ನವಗೆ ನೆಂಪಿದ್ದ? ಹುಟ್ಟಿನಿಂದ ಹಿಂದುವಾದ ಈ ಎ ಆರ್ ರೆಹಮಾನ್ ನ ಸಾಂಕಿದ್ದು ಬಿಯಾರಿ, ಈಗ ನಮ್ಮ ಧರ್ಮವ ಅವಹೇಳನ ಮಾಡಿ ಪದ್ಯ ಬರವ, ಆ ಪದ್ಯಂಗಳ ಕೇಳುವ ದುರ್ಗತಿ ನವಗೆ ಬಂದದಕ್ಕೆ ಆರು ಹೊಣೆ? ಈ ದಲಿತ ಕ್ರಿಶ್ಚಿಯನುಗೊಕ್ಕೆ, ದಲಿತ ಮುಸ್ಲಿಮರಿಂಗೆ ಮೀಸಲಾತಿ ಬೇಕು ಹೇಳುವ ಒತ್ತಾಯ ಎಂತದಕ್ಕೆ ಹೇಳಿ ಈಗ ಗೊಂತಾತ? ಹಾಂಗೆ ಮಾಡಿದರೆ ಬಹುತೇಕ ಭಾರತೀಯರ ಕನ್ವರ್ಟ್ ಮಾಡಿ ನಮ್ಮ ಧರ್ಮವ ನಿರ್ನಾಮ ಮಾಡುಲಕ್ಕು ಹೇಳ್ತ ದೂರಾಲೋಚನೆಂದ. ಈ ಮಟ್ಟದ ದೂರಾಲೋಚನೆ ನವಗೆ ಇದ್ದ?

      ಇಷ್ಟೆಲ್ಲ ಇಪ್ಪಗ ಇನ್ನುದೆ ನಾವು ಸ್ವಜನ ಪಕ್ಷಪಾತ ಮಾಡೆಕ್ಕಾದ ಅವಷ್ಯಕತೆ ಇದ್ದ? ಭಾರತಲ್ಲಿ ಬ್ರಾಹ್ಮಣರೆ ಅಲ್ಪಸಂಖ್ಯಾತರು ಹೇಳಿದವು. ಆ ಅಲ್ಪಸಂಖ್ಯಾತ ಬ್ರಾಹ್ಮಣರಲ್ಲಿ ಎಷ್ಟು ಜನ ನಿಜವಾದ ಬ್ರಾಹ್ಮಣರು? ಹೆಚ್ಚಿನವು ಹುಟ್ಟಿನಿಂದ ಮಾತ್ರ ಬ್ರಾಹ್ಮಣ ಹೇಳಿ ಆದರೆ ಅವಕ್ಕು ಮತ್ತೆ ಇತರರಿಂಗೂ ವ್ಯತ್ಯಾಸ ಎಂತ ಇದ್ದು? ಬ್ರಾಹ್ಮಣ ಹೆಚ್ಚು ತಿಳುದವ, ವಿವೇಕ ಇಪ್ಪವ, ಜ್ಞಾನಿ ಹೇಳಿ ಆದರೆ ಬಾಬಾ ರಾಮ್ ದೇವ್ ಬ್ರ್ರಾಹ್ಮಣ ಅಲ್ಲದ? ಜನಿವಾರ ಇಲ್ಲದ್ದರು? ಈಗ ಜನಿವಾರಕ್ಕೆ ಬೆಲೆ ಎಂತ ಇದ್ದು? ಜನಿವಾರ ಹಾಕಿದ ಮಾತ್ರಕ್ಕೆ ನವಗೆ ಸವಲತ್ತುಗ ಸಿಕ್ಕೆಕ್ಕು ಹೇಳಿದರೆ ಅದಕ್ಕೆ ದೈವಸಮ್ಮತಿ ಇಕ್ಕ? ಇವೆಲ್ಲದರ ಯೋಚನೆ ಮಾಡೆಕ್ಕನ್ನೇ?

      ಈ ದೇಶಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ, ಧರ್ಮದ ಪುನರುಥ್ಥಾನಕ್ಕೆ ಕಾರಣರಾದ ಮಹರ್ಷಿ ದಯಾನಂದ ಸರಸ್ವತಿ ಈ ಜಾತಿ, ಸ್ವಜನ ಪಕ್ಷಪಾತ ಇವೆಲ್ಲದರ ಖಡಾಖಂಡಿತವಾಗಿ ತಿರಸ್ಕರಿಸಿತ್ತಿದವು. ಅವರ ಪ್ರಖರತೆಯೇ ಮುಂದೆ ದೇಶಲ್ಲಿ ಹರಡಿ ನವಗೆ ಸ್ವಾತಂತ್ರ್ಯ ಬಂತೇ ಹೊರತಾಗಿ ಸ್ವಜನ ಪಕ್ಷಪಾತಿ ಬ್ರಾಹ್ಮಣರಿಂದ ದೇಶಕ್ಕೆ ಯಾವ ಉಪಕಾರವೂ ಆಯಿದಿಲ್ಲೆ. ಅವರಿಂದಾಗಿ ತೊಂದರೆಯೇ ಆಯಿದಷ್ಟೆ..

      ಇಷ್ಟೆಲ್ಲ ಇಪ್ಪಗ ನಾವು ಇನ್ನಾದರೂ ಜಾತಿ ಕನ್ನಡಕಂದ ನೋಡದ್ದೆ, ದೇಶಕ್ಕೆ, ಧರ್ಮಕ್ಕೆ ಆರು ನಿಷ್ಟರಾಗಿರುತ್ತವೋ ಅವರೆಲ್ಲರ ಏಳಿಗೆಗೆ ಬಧ್ಧರಾಗೆಡದ? ಇತಿಹಾಸ ನವಗೆ ಸಾಕಷ್ಟು ಎಚ್ಚರಿಕೆ ಕೊಟ್ಟಿದು, ಅವಕಾಶ ಕೊಟ್ಟಿದು. ಎಲ್ಲದರಲ್ಲೂ ನಾವು ಎಡವಿದ್ದು. ಇನ್ನಾದರೂ‌ ತಪ್ಪು ತಿದ್ದಿಕೊಳದ್ದರೆ ನವಗೆ ಭವಿಷ್ಯ ಇಲ್ಲೆ ಹೇಳಿ ಎನಗೆ ಅನುಸುತ್ತು.

      ಬೇರೆಯವಕ್ಕೆ ನಾವು ಉಪಕಾರ ಮಾಡದ್ದರೂ ಚಿಂತೆ ಇಲ್ಲೆ, ಆದರೆ ನವಗೆ ಅವರಿಂದಲೇ ಅಪಾಯ ಹೇಳಿವ ಒಂದು ಯೋಚನೆ, ನಮ್ಮ ಏಳಿಗೆಗೆ ಅವು ಅಡ್ಡಿ ಹೇಳುವ ಮಾನಸಿಕತೆ, ನಾವು ಮುಂದೆ ಉಳಿಯೆಕ್ಕಾರೆ ಬಾಕಿದ್ದವು ಹಿಂದೆ ಉಳಿಯೆಕ್ಕು ಹೇಳುವ ಸಂಕುಚಿತತೆ ಇಲ್ಲದ್ದರೆ ಸಾಕು. ಮೀಸಲಾತಿ ಆನು ಮದಲೇ ಹೇಳಿದ ಹಾಂಗೆ ಈಗಣ ಪರಿಸ್ಥಿತಿಲಿ ಅತ್ಯವಶ್ಯ.

  13. ಒಳ್ಳೆಯ ಚರ್ಚೆ ನೆಡದ್ದು..ಈ ಚರ್ಚೆಲಿ ಎನಗೆ ಒಳ್ಳೆ ಮಾಹಿತಿ ಸಿಕ್ಕಿತ್ತು..ಶುದ್ಧಿ ಹೇಳಿದ ಗೀತತ್ತೆಗೂ ಚರ್ಚೆ ಮಾಡಿದ ಬೈಲಿನ ಮಿತ್ರರಿಂಗೂ ಧನ್ಯವಾದಂಗೋ..ಹೀಂಗಿಪ್ಪ ಶುದ್ಧಿಗಳ ಇನ್ನುದೇ ಬರೆತ್ತಾ ಇರಿ.

  14. ಕೆಲವು ದಶಕ೦ಗಳ ಮದಲು “ಹಿಂದುಳಿದ ವರ್ಗ ,ಬುಡಗಟ್ಟು ಜನಾಂಗ ” ಈ ಶಬ್ದಂಗೊಕ್ಕೆ ಅರ್ಥ ಇತ್ತು.ಸಮಾಜಲ್ಲಿ ಇದ್ದ ವ್ಯವಸ್ಥೆಯ ಪರಿಣಾಮವಾಗಿ ಕೆಲವು ಜಾತಿ,ಪಂಗಡದವು ಆರ್ಥಿಕವಾಗಿ ಮತ್ತೆ ಸಾಮಾಜಿಕವಾಗಿ ಹಿಂದೆ ಒಳುದವು ಹೇಳ್ತದು ಸತ್ಯ.ಅದರ ಸರಿ ಮಾಡುವ ಪ್ರಯತ್ನವೇ ಮೀಸಲಾತಿ ವ್ಯವಸ್ಥೆ.ಆದರೆ ಇಂದು ಇದು ತನ್ನ ನಿಜ ಅರ್ಥವ ಕಳಕ್ಕೊಂಡಿದು.ಇಂದು ಅಸ್ಪ್ರಶ್ಯತೆ ಇಲ್ಲೆ,ಸಮಾಜಲ್ಲಿ ವರ್ಗಗಳ ತಾರತಮ್ಯ ಕಾಣುತ್ತಿಲ್ಲೆ (ಉತ್ತರ ಭಾರತಲ್ಲಿ ಇನ್ನೂ ಇದ್ದು).ವಿದ್ಯಾಭ್ಯಾಸದ ಪ್ರಗತಿ,ಹೆಚ್ಚಿದ ಉದ್ಯೋಗ ಅವಕಾಶ ಇದಕ್ಕೆ ಮೂಲ ಕಾರಣವಾದರೆ ಮೀಸಲಾತಿ ಪೂರಕ ಆತು.ಆದರೆ ಒಂದು ತಲೆಮಾರಿಲಿ ಮೀಸಲಾತಿಯ ಪ್ರಯೋಜನ ಪದದ ಮತ್ತೆ ಪುನಃ ಆದರೆ ಲಾಭ ತೆಕ್ಕೊಂಬದು ಅರ್ಥಹೀನ.ನಮ್ಮ ರಾಜಕೀಯ ವ್ಯವಸ್ಥೆ ಇಂದು ಜಾತಿಗಳ ಮೇಲಾಟಲ್ಲಿ ಎಡಿಗಾದಷ್ಟು ಹಾಳಾಯಿದು. ಇತ್ತೀಚಿಗೆ ‘ಕೆನೆಪದರ’ ಹೇಳುವ ಶಬ್ದಪ್ರಯೋಗ ಆತು.ಅದು ನಿಜವಾಗಿ ನಡೆಯೆಕ್ಕಾದ್ದು.ಒಂದು ತಲೆಮಾರಿನ ನಂತರ ಮೀಸಲಾತಿಯ ಯಥಾರೂಪಲ್ಲಿ ಮುಂದುವರಿಸೊದಕ್ಕೆ ಅರ್ಥ ಇಲ್ಲೆ. ಮೀಸಲಾತಿಯ ಪ್ರಯೋಜನ ಪಡದು ಅಥವಾ ಸ್ವಸಾಮರ್ಥ್ಯಂದ ಸಮಾಜಲ್ಲಿ ಆರ್ಥಿಕವಾಗಿ ಮುಂದೆ ಬಂದ ಮತ್ತೆ ಮುಂದಾಣ ತಲೆಮಾರಿಲಿಯೂ ಜಾತಿಯ ಆಧಾರಲ್ಲಿ ಮೀಸಲಾತಿಯ ಲಾಭ ಪಡವೋದು ವಿಪರ್ಯಾಸವೇ ಅಲ್ಲದೋ?
    ಆದರೆ ಯಾವ ರಾಜಕೀಯ ಪಕ್ಷ ಇದರ ಕಾರ್ಯರೂಪಲ್ಲಿ ತಕ್ಕು?ನಮ್ಮವು ಲಿಂಗಾಯಿತರಲ್ಲಿ ಕೆಲವು ಉಪಜಾತಿಗಳನ್ನೂ ಹಿಂದುಳಿದ ಹೇಳಿ ಗುರುತಿಸುಲೆ ಪ್ರಯತ್ನ ಮಾಡಿಗೊಂಡು ಇದ್ದವು. ಹಾನಾಗಾರೆ ಮುಂದೆ ಎಲ್ಲರನ್ನೂ ಹಿಂದುಲೀದವು ಹೇಳೋದು ಉತ್ತಮ ಅಲ್ಲದೋ?
    ಗೀತತ್ತೆ ಕೇಳಿದ ಪ್ರಶ್ನೆ ಲಾಯಿಕ ಇದ್ದು.ಹಿಂದುಳಿದ ವರ್ಗದ ದಾಗುತ್ರಕ್ಕಳ ಹತ್ತರೆ ಹೋಪಲೆ ಧೈರ್ಯ ಸಾಕಾಗ.ಇನ್ನು ನ್ಯಾಯಾಂಗ, ಮೀಸಲಾತಿಂದಾಗಿ ಸರಿಯಾಗಿ ಹಾಳಾಯಿದು.ಅಯೋಗ್ಯಂಗೋ ಇನ್ನು ನ್ಯಾಯಾಧೀಶರಾಗಿ ಬಡ್ತಿ ಪಡದು ,ಅವಕ್ಕೆ ತೀರ್ಪು ಬರವಲೂ ಗೊಂತಿಲ್ಲದ್ದೆ,ಏನೆಲ್ಲಾ ಅಸಂಬದ್ಧ ನೆಡೆತ್ತಾ ಇದ್ದು,ಕೊರ್ಟಿಲಿ.ನಮ್ಮ’ಹೋಕ್ವರ್ಕು ‘ ಇಲ್ಲದ್ದ ಕುಟುಂಬ೦ಗೋ ನಂಬ್ರ ಮಾಡೋದು ಬಿಟ್ಟು ರಾಜಿ ಪಂಚಾಯ್ತಿಗೆ ಮಾಡೊದು ಉತ್ತಮ.ಇನ್ನು ಪೈಲಟ್ ಗೋ ಆದರೆ ಜೀವವ ಕೈಲಿ ಹಿಡುಕ್ಕೊಂಡು ಕೂರೆಕ್ಕಷ್ಟೇ,ವಿಮಾನಲ್ಲಿ !!

  15. ಮೀಸಲಾತಿ ಮಾಡುವಾಗ ಭರಣ ಘಟನೇಲಿ ಮುವತ್ತು ವರ್ಷವರೆಗೆ ಹೇಳಿ ಮಡಿತ್ತಿದ್ದವು,ಆದರೆ ಈಗಾಣ ರಾಜಕೀಯದವು ಭರಣ ಘಟನಗೆ ಬೇಕಾದ ಹಾ೦ಗೆ ತಿದ್ದುಪಡಿ ಮಾಡಿ ಮೀಸಲಾತಿಯ ಮು೦ದೆ ಹಾಕುತ್ತ ಹೋವುತ್ತವು ಅದರ ವಿರೋದಿಸೀರೆ ಎಲ್ಲಿ ವೋಟಿ೦ಗೆ ಪೆಟ್ಟು ಬಕ್ಕೋ ಹೇಳಿ ಆರೂ ವಿರೋದಿಸುತ್ತವಿಲ್ಲೆ.ರಾಜಕೀಯ ಇಚ್ಚಾಶಕ್ತಿ ಇಲ್ಲದವು ಆಡಳಿತೆ ಮಾಡ್ತದರ ಫಲವೇ ನಾವು ಉಣ್ತದು.ಇನ್ನು ಹಿ೦ದಾಣವು ಮಾಡಿದ ತಪ್ಪಿ೦ಗೆ ನಾವು ಫಲ ಉಣ್ತದಾದರೆ ಅವ್ವು ಮಾಡಿದ ಒಳ್ಳೆದರ ಫಲವೂ ನಾವೇ ಉಣ್ತಾನೆ ಅಲ್ಲಿ೦ದ ಅಲ್ಲಿಗೆ ಸರಿ ಹೋತು.ನಮ್ಮ ಹಿರಿಯವರ ಇಚ್ಚಾಶಕ್ತಿ೦ದ ಇ೦ದು ನಾವು ಯಾವ ಊರಿ೦ಗೆ ಹೋದರೂ ಅಲ್ಲಿ ಕೆಲಸ ಮಾಡಿ ಸೈ ಹೇಳುಸಿಯೋಳ್ತು.ಕಾರಣ ನವಗೆ ನಿಷ್ಟೆ೦ದ ಮನ: ಪ್ಪೂರ್ವಕ ಕೆಲಸ ಮಾಡೇಕು ಹೇಳ್ತ ಸ೦ಸ್ಕಾರವ ನಮ್ಮ ಹಿರಿಯವು ತಿಳುಸಿ ಕೊಟ್ಟಿದವು.ಒಪ್ಪ೦ಗಳೊಟ್ಟಿ೦ಗೆ.

    1. ಕೃಷ್ಣಮೋಹನಪ್ಪಚ್ಚಿ
      ‘ಭರಣ ಘಟನೆ’ಯ ನಾವು ‘ಸಂವಿಧಾನ’ ಹೇಳುವದು ಅಲ್ಲದೋ?

      1. ನಿ೦ಗೊ ಹೇಳಿದ್ದು ಸರಿಯೇ… ಭರಣ ಘಟನೆ ಹೇಳ್ತ ಶಬ್ದ ಹೆಚ್ಚಾಗಿ ಮಲಯಾಳಲ್ಲಿ ಉಪಯೋಗಿಸುವದು, ಕೃಷ್ಣಮೋಹನಪ್ಪಚ್ಚಿ೦ದ ಮೊದಲು ಆನು ಆ ಶಬ್ದ ಉಪಯೋಗಿಸಿದ್ದದು, ಅವು ಅದಕ್ಕೆ ಉತ್ತರ ಹೇಳ್ತ ರೀತಿಲಿ ಬರದ್ದದಲ್ಲದಾ..ಆನು ಮಲಯಾಳಿಗಳ ಒಟ್ಟಿ೦ಗೆ ಹಲವು ವರ್ಷ೦ದ ಇಪ್ಪ ಕಾರಣ ಬ೦ದ ತಪ್ಪು, ಕ್ಷಮೆ ಇರಳಿ ಎನ್ನ ಹತ್ರೆ..

  16. ಮೀಸಲಾತಿ ಈಗ ಪಡಕ್ಕೊ೦ಬದು ಅರ್ಹರಿ೦ದಲೂ ಹೆಚ್ಚು ಅನರ್ಹರೇ ಹೇಳುವದು ಎಲ್ಲೋರಿ೦ಗೂ ಗೊ೦ತಿಪ್ಪ ವಿಶಯ. ಎಷ್ಟೋ ವರ್ಷ ಮೊದಲು, ನಮ ಹಿ೦ದಿನ ತಲೆಮಾರಿನ ಕೆಲವು ಜನ೦ಗೊ ಆದರೂ ಇತರ ಜಾತಿಯವರ ಮನುಷ್ಯರ ಹಾ೦ಗೆ ಕಾಣದ್ದೆ ಇತ್ತಿದ್ದದರ ಫಲ ಇ೦ದು ನಾವು ಎಲ್ಲರೂ ಅನುಭವಿಸುತ್ತಾ ಇದ್ದು. ಅವಕ್ಕೆ ವಿದ್ಯಾಭ್ಯಾಸ ಇತ್ತಿದ್ದಿಲ್ಲೆ, ಸ್ವಛ್ಛತೆ ಇತ್ತಿದ್ದಿಲ್ಲೆ, ಉನ್ನತ ಮಟ್ಟದ ಸ೦ಸ್ಕಾರ ಇತ್ತಿದ್ದಿಲ್ಲೆ ಎಲ್ಲಾ ಸರಿಯೇ. ಆದರೆ ಈ ಕಾರಣ೦ಗಳ ಮು೦ದೆ ಮಡುಗಿಯೊ೦ಡು ನಮ್ಮ ಹಿ೦ದಿನ ತಲೆಮಾರಿನವು ಅವರ ಅ೦ಧವಾಗಿ ದೂರ ಮಾಡಿದ್ದಲ್ಲದ್ದೆ, ಅವಕ್ಕೆ ಈ ವಿಷಯ೦ಗಳ ಕಲುಶಲೆ ಪ್ರಯತ್ನ ಮಾಡಿದ್ದಿಲ್ಲೆ. ಮೀಸಲಾತಿ ಬಪ್ಪಲೆ ಮೂಲ ಕಾರಣ ಇದುವೇ ಅಲ್ಲದೊ?
    ಈ ಕಾರಣವ ಸರಿಯಾಗಿ ಲಾಭ ಮಾಡಿಯೊ೦ಡದು ಇತರ ಧರ್ಮ೦ಗಳ ಜನ೦ಗೊ. ಅವು ಇಲ್ಲಿ ಬ೦ದು ನಾವು ಇಷ್ಟರ ವರೇ೦ಗೆ ಮಾಡದ್ದ ಎಷ್ಟೋ ಒಳ್ಳೆ ಕೆಲಸ೦ಗಳ ಮಾಡಿದ್ದವು (ಅದರ ಹಿ೦ದೆ ಇಪ್ಪ ಉದ್ದೇಶ ಚರ್ಚಾರ್ಹ ಆದರೂ). ಈಗಳೂ ನಾವು ಅವರ ಟೀಕೆ ಮಾಡುವದಲ್ಲದ್ದೆ, ಸಮಾಜಸೇವೆ-ಲಿ ನಮ್ಮ ನಾವು ಎಷ್ಟು ತೊಡಗಿಸಿಯೊ೦ಡಿದು?

    ಈಗಾಣ ಮೀಸಲಾತಿ ೯೦% ಅಗತ್ಯ ಇಲ್ಲದ್ದವಕ್ಕೆ ಸಿಕ್ಕುವದು ಹೇಳಿ ಎಲ್ಲೋರಿ೦ಗುದೆ ಗೊ೦ತಿದ್ದರುದೆ, ಅದರ ಎದುರು ಮಾತಾಡ್ಳೆ ಆರಿ೦ಗುದೆ ಧೈರ್ಯ ಇಲ್ಲೆ. ಒಟ್ಟು ಜನಸ೦ಖ್ಯೆಲಿ ಮೀಸಲಾತಿ ಇಲ್ಲದ್ದವಕ್ಕಿ೦ತ ಮೀಸಲಾತಿ ಇಪ್ಪವರ ಸ೦ಖ್ಯೆ ಎಷ್ಟೋ ಜಾಸ್ತಿ ಹೇಳುವದೇ ಇದಕ್ಕೆ ಕಾರಣ ಆದಿಕ್ಕು. ಈಗಳುದೆ ಬಿಹಾರದ ಹಾ೦ಗಿಪ್ಪ ಕೆಲವು ರಾಜ್ಯ೦ಗಳಲ್ಲಿ ಮೀಸಲಾತಿಯ ಅಗತ್ಯ ಇದ್ದು, ಆದರೆ ಕೇರಳ, ಕರ್ನಾಟಕದ ಹಾ೦ಗಿಪ್ಪ ರಾಜ್ಯ೦ಗಳಲ್ಲಿ ಎ೦ತಕೆ? ಇನ್ನು ಮೀಸಲಾತಿ ಕೊಡ್ತರುದೆ, ವಿದ್ಯಾಭ್ಯಾಸಕ್ಕೆ ಬೇಕಾದರೆ ಸಹಾಯ ಮಾಡ್ಲಕ್ಕು, ಆದರೆ ಕೆಲಸಲ್ಲಿ ಮೀಸಲಾತಿ ಕೊಡುವದು ತಪ್ಪು ಹೇಳಿ ಎನ್ನ ಅಭಿಪ್ರಾಯ. ಅತ್ಯ೦ತ ಹೆಚ್ಚು ಯೋಗ್ಯತೆ ಇಪ್ಪವ೦ಗೆ ಮಾ೦ತ್ರ ಕೆಲಸ ಕೊಡೆಕು, ಅಲ್ಲಿ ಜಾತಿ ಅಳತೆಗೋಲು ಅಪ್ಪಲಾಗ. ಒಬ್ಬ ಹರಿಜನ/ಗಿರಿಜನ ವರ್ಗದವ೦ಗೆ ಮತ್ತೊಬ್ಬ ಬ್ರಾಹ್ಮಣ೦ದ ಹೆಚ್ಚು ಮಾರ್ಕು, ಬುಧ್ಧಿ, ಯೋಗ್ಯತೆ ಇದ್ದರೆ (ಹಾ೦ಗಿಪ್ಪ ಕೆಲವು ಜನ೦ಗೊ ಇದ್ದವು)ಅಲ್ಲಿ ಅವನನ್ನೇ ಆಯ್ಕೆ ಮಾಡೆಕು, ಅಲ್ಲದ್ದೆ ಅವ ಮೇಲ್ಜಾತಿ ಅಲ್ಲ ಹೇಳ್ತ ಕಾರಣಕ್ಕೆ ಅವನ ಆಯ್ಕೆ ಮಾಡದ್ದಿಪ್ಪಲಾಗ. ಅಲ್ಲದ್ರೆ ದೇಶ ಉಧ್ಧಾರ ಅಪ್ಪಲೆ ಕಷ್ಟ ಇದ್ದು.
    ಮೀಸಲಾತಿ ಸುರು ಆಗಿ ೬೦ ವರ್ಷ೦ದ ಮೇಲೆ ಆತಿಲ್ಯೊ? ಇಷ್ಟು ವರ್ಷಲ್ಲಿ ಮೀಸಲಾತಿ ಒ೦ದರಿ೦ದ ಒ೦ದು ಜಾಸ್ತಿ ಅಲ್ಲದ್ದೆ ಯಾವುದಾದರೂ ಒ೦ದೇ ಒ೦ದು ಮೀಸಲಾತಿ ರದ್ದಾದ ಉದಾಹರಣೆ ಇದ್ದೋ? ಈ ೬೦ ವರ್ಷ ಮೀಸಲಾತಿ ಕೊಟ್ಟುದೆ ಇನ್ನುದೆ ಅವಕ್ಕೆ ಮೀಸಲಾತಿ ಕೊಡೆಕು ಹೇಳ್ತದರ್ಲಿ ಎ೦ತ ಅರ್ಥ? ಮೀಸಲಾತಿ ಆರ೦ಭ ಮಾಡುವಗಳೆ ಅದರ ಯಾವಗ ನಿಲ್ಲುಸೆಕು ಹೇಳ್ತದರ ಬಗ್ಗೆ ನಮ್ಮ ಭರಣಘಟನೆ-ಲಿ ಬರೆದು ಸೇರುಸೆಕಾತು. ಮೀಸಲಾತಿಯ ಮೂಲ ಉದ್ದೇಶ ಹಿ೦ದುಳಿದವರ ಅಭಿವೃಧ್ಧಿ ಮಾಡುವದಲ್ಲದೋ? ಈ ಅಭಿವೃಧ್ಧಿ ಎಲ್ಲಿ ವರೇ೦ಗೆ?
    ಇಷ್ಟೆಲ್ಲಾ ಮೀಸಲಾತಿ ಇದ್ದುದೆ ಇ೦ದು ಮೀಸಲಾತಿ ಇಲ್ಲದ್ದವು ಈಗಾಣ ಮಟ್ಟಲ್ಲಿ ಇಪ್ಪಲೆ ಕಾರಣ ಅವರವರ ಕಠಿಣ ಪರಿಶ್ರಮ, ದೇವರ, ಗುರು ಹಿರಿಯರ ಅನುಗ್ರಹ ಹೇಳುವದರ ಗ್ರೇಶ್ಯೊ೦ಬಗ ಎನಗೆ ಅಭಿಮಾನ ಇದ್ದು. ಎ೦ತ ಮೀಸಲಾತಿ ಇದ್ದರುದೆ, ಇಷ್ಟು ಅಡೆ-ತಡೆಗೊ ಇದ್ದರುದೆ, ನಮ್ಮ ಆತ್ಮಾರ್ಥವಾದ ಪರಿಶ್ರಮವುದೆ, ದೇವರ, ಗುರು ಹಿರಿಯರ ಆಶೀರ್ವಾದವುದೆ ಇದ್ದರೆ ನಮ್ಮ ಅಭಿವೃಧ್ಧಿಯ ಆರಿ೦ಗುದೆ ತಡವಲೆ ಎಡಿಯ.

    1. ಮೀಸಲಿನ ಸಮಸ್ಯೆಂದ ಹೆಚ್ಚು ಅದರ ಜಾರಿಲಿ ಆದ ತಪ್ಪುಗಳಿಂದ ಸಮಸ್ಯೆ ಹೇಳಿ ನಿಂಗಳ ಮಾತಿನಿಂದಲೇ ಗೊಂತಾವುತ್ತು. ಮೀಸಲಿಂದ ಉಪಕಾರ ಆಯೆಕ್ಕಾದವಕ್ಕೆ ಆಗದ್ದರೆ ಮೀಸಲು ಹೀಂಗೆಯೇ ಮುಂದುವರೆಗು. ಅದು ವೊಟು ಗಿಟ್ಟುಸುವ ದಾರಿ ಇದ. ಅದು ನಿಜವಾಗಿ ದುರದೃಷ್ಟವೇ ಸರಿ!

      ಈಗಾಣ ಭ್ರಷ್ಟ ನೀತಿಗೊ ಸರಿಯಾದರೆ ಮೀಸಲಿನಿಂದ ಪ್ರಯೋಜನ ಆಯೆಕ್ಕಾದೊರಿಂಗೆ ಉಪಕಾರ ಅಕ್ಕು. ಗುಜರಾತಿಲಿ ನಮೋ ಮಾಡಿದ ಹಾಂಗೆ. ಅಶ್ಟಪ್ಪಗ ಸಾಮಾನ್ಯ ವರ್ಗದವು ತಮ್ಮ ಸಮಸ್ಯೆಗೊಕ್ಕೆಲ್ಲಾ ಮೀಸಲಾತಿಯ ದೂರುವ ಪ್ರಮೇಯ ಬಾರ!

      1. :-)ನಿ೦ಗೊ ಹೇಳಿದ್ದು ಸತ್ಯ ಅಪ್ಪಚ್ಚಿ..

    2. {ಎ೦ತ ಮೀಸಲಾತಿ ಇದ್ದರುದೆ, ಇಷ್ಟು ಅಡೆ-ತಡೆಗೊ ಇದ್ದರುದೆ, ನಮ್ಮ ಆತ್ಮಾರ್ಥವಾದ ಪರಿಶ್ರಮವುದೆ, ದೇವರ, ಗುರು ಹಿರಿಯರ ಆಶೀರ್ವಾದವುದೆ ಇದ್ದರೆ ನಮ್ಮ ಅಭಿವೃಧ್ಧಿಯ ಆರಿ೦ಗುದೆ ತಡವಲೆ ಎಡಿಯ}
      ವ್ಯಕ್ತಿಗತ ಹಿನ್ನೆಲೆಲಿ ಈ ವಾದವ ಒಪ್ಪತಕ್ಕದ್ದೇ. ಅದು ನಿಜವೂ ಅಪ್ಪು. ಆದರೆ ಒಟ್ಟಾರೆ ಧರ್ಮದ ಹಿನ್ನೆಲೆಲಿ ನೋಡಿದರೆ ನಾವು ಸಾಧ್ಸಿದ್ದು ಎಂತ ಇದ್ದು? ದೇಶದ ಹಿನ್ನೆಲೆಲಿ ನೋಡಿದರೆ ಸಾಧಿಸಿದ್ದು ಎಂತ ಇದ್ದು? ಎಂದೆಂದಿಗೂ ಸಮಗ್ರ ದ್ರುಷ್ಟಿ ಇದ್ದ ನಮ್ಮ ಧರ್ಮದ, ವೇದದ ಅನುಯಾಯಿಗೊ ಈಗ ವೈಯಕ್ತಿಕ ಮಟ್ಟದ ಸಾಧನೆಗಳನ್ನೇ ಮಹತ್ಸಾಧನೆ ಹೇಳುದಾದರೆ ಧರ್ಮ ಎಷ್ಟು ಅವನತಿಗೆ ಇಳುದ್ದು ಹೇಳುದರ ಸೂಚನೆ ಸ್ಪಷ್ಟ ಸೂಚನೆ ಇದು ಹೇಳಿ ಎನ್ನ ಅನಿಸಿಕೆ.

      1. ನಿ೦ಗೊ ಹೇಳಿದ ವಿಷಯ೦ಗೊ ಚಿ೦ತನಾರ್ಹ. ಒಳ್ಳೆ ಮೌಲಿಕವಾದ ಚರ್ಚೆ ನಡೆತ್ತಾ ಇದ್ದು.. ಇದರ ಓದಿ ನೋಡುವಗ ಇದರಲ್ಲಿ ಭಾಗವಹಿಸುವ ಮಟ್ಟಕ್ಕೆ ಆನು ಇನ್ನುದೆ ಬೆಳದ್ದಿಲ್ಲೆ ಹೇಳಿ ಕಾಣ್ತು.

  17. ಗೀತತ್ತೆ ನಿಂಗೊ ಹೇಳಿದ್ದು ಎಂತ ಹೇಳಿ ಎನಗೆ ಗೊಂತಾಯಿದಿಲ್ಲೆ. ನಿಂಗಳ ತಕರಾರು “ರಾಹು”ಲ ಹೇಳಿದ್ದಕ್ಕೋ ಅಲ್ಲ ಹಿಂದುಳಿದ ವರ್ಗಗಳ ಅಭಿವೃಧ್ಧಿ ಅಪ್ಪದು ಬೇಡದ ಹೇಳಿಯೋ?

    ನವಗೆ (ಮೇಲ್ವರ್ಗಕ್ಕೆ) ಅನ್ಯಾಯ ಆವುತ್ತಾ ಇಪ್ಪದು ಮೀಸಲಿಂದ ಆಗಿ ಅಲ್ಲ, ಅನರ್ಹರಿಂಗೆ ಮಿಸಲು ಸಿಕ್ಕುತ್ತ ಇಪ್ಪದರಿಂದಾಗಿ. ಶೀತ ಆದರೆ ಮೂಗು ಕುಯ್ವದು ಎಷ್ಟು ಸರಿ ಅಲ್ಲದೋ ಹಾಂಗೆಯೇ ಮೀಸಲಿನ ದುರುಪಯೋಗಂದಾಗಿ ಮೀಸಲನ್ನೇ ದೂರುದು ಸರಿ ಅಲ್ಲದೋ?

    ಉದಾಹರಣೆಗೆ ಕಾಲೇಜಿಲಿ ಇಪ್ಪ ಮೀಸಲು ಆರಿಂಗೆ ಸಿಕ್ಕುತ್ತು? ಪೈಶೆ ಇಪ್ಪ ಹಿಂದುಳಿದ ವರ್ಗದವನ ಮಕ್ಕೊಗೆ. ಕೆಲವು ಕಡೆ ನಿಜವಾಗಿ ಪಾಪದವಕ್ಕೆ ಸಿಕ್ಕುಲೂ ಸಾಕು. ಅದು ಬಿಟ್ಟರೆ ಪೈಶೆ ಇಪ್ಪವೇ ಶಿಪಾರಸ್ಸು ಮಾಡಿ ಸೀಟು ತೆಕ್ಕೊಳ್ತವು. ಆದರೆ ಅದು ಹಿಂದುಳಿದ ವರ್ಗಕ್ಕೆ ಮಾತ್ರ ಸೀಮಿತ ಅಲ್ಲ. ಶಿಪಾರಸು ಎಲ್ಲಾ ವರ್ಗಂಗಳಲ್ಲಿಯೂ ಇದ್ದು.

    ಭ್ರಶ್ಟಾಚಾರ ಸಮಾಜದ ಪಿಡುಗು. ಇದಕ್ಕೆ ಜಾತಿ ಸೇರ್ಸುದು ಒಳ್ಳೆದಲ್ಲ ಹೇಳಿ ಕಾಣುತ್ತು. “ರಾಹು”ಲ ಹಾಂಗೆ ಮಾಡುದು ಅವನ ಬುಧ್ದಿ ತೋರ್ಸುತ್ತು. ನಾವುದೆ ಹಾಂಗೆ ಮಾಡೆಕ್ಕಾ? ಬೇಡ ಅಲ್ಲದ?

    ಇನ್ನು ಮುಸ್ಲಿಂ ವಿಷಯ ಬೇರೆಯೇ.. ಅದು ಮೀಸಲಿಂದ ಹೆರ ಒಳಿಯೆಕ್ಕೇ. ಮುಸ್ಲಿಮರಿಂಗೆ ಮಿಸಲು ಕೊಡುದಕ್ಕೆ ಅರ್ಥ ಇಲ್ಲೆ.

    1. ವಿದ್ಯಾಭ್ಯಾಸಕ್ಕೆ reservation ಕೊಡುದು ಸರಿ ಹೇಳುದು ಕಷ್ಟ…
      ಒಂದು ಕಾಲೇಜ್ ಲಿ 40 ಒಟ್ಟು ಸೀಟ್ ಇದ್ದರೆ 15 ಸೀಟ್ ಸರಿಯಾಗಿ ಏನೂ reservation ಇಲ್ಲದ್ದವಕ್ಕೆ ಸಿಕ್ಕುಗು …ಅದು 90 ಮಾರ್ಕ್ ಇಪ್ಪವಕ್ಕೆ ..ಸಿಕ್ಕುತ್ತು…ಇನ್ನು reservation ಹೇಳಿ 40 ತೆಗದವರ ಸೇರ್ಸಿ ದೇಶ ಉದ್ದಾರ ಮಾಡುದರಿಂದ 65 /80 ಮಾರ್ಕ್ ತೆಗದವರ ಸೇರ್ಸಿಗೊಂಡರೆ ದೇಶ ಉದ್ದಾರ ಅಕ್ಕೋ….??
      ಅಷ್ಟರಲ್ಲೂ ಎಂಗಳ ಕ್ಲಾಸ್ ಲಿ ಒಂದು ಹುಡುಗಿ ಇತ್ತು ..45 % ಇದ್ದದು ..ಪೋಸ್ಟ್ officer ಮಗಳು…(second level reservation !!!) ಅದರ ಅಪ್ಪನೇ reservation ಲಿ officer ಆದ್ದು…ಮಗಳಿಂಗೆ ವಾಪಾಸ್ reservation !!..
      ಅದರಿಂದ ಮಿಲಿಟರಿ ಲಿ ಒಂದು ಇಂತಿಷ್ಟು ವರ್ಷ ಕೆಲಸ ಮಾಡಿದವರ ಮಕ್ಕೊಗೆ ಹೇಳಿ ಏನಾರೂ reservation ಇರ್ತಿತರೆ ಅದಕ್ಕೊಂದು ಅರ್ಥ ಇತ್ತು..
      ಹೀಂಗೆ ಹಿಂದುಳಿದ ವರ್ಗಂಗಳ ಮುಂದೆ ತಂದರೆ ಮುನದುವರುದ ವರ್ಗಂಗೋ ಹಿಂದುಳಿದ ಕೆಲಸ ಮಾಡೆಕ್ಕಾಕ್ಕು…(ಎಲ್ಲೊರೂ ಅಲ್ಲದ್ರೂ ರಜ ಪ್ರಮಾಣಲ್ಲಿ ಮುಂದೆ ಹಿಂದೆ ಅಕ್ಕು ಇನ್ನೊಂದು 40 ವರ್ಷ ಕಳುದರೆ)

      1. ನಿ೦ಗೊ ಹೇಳಿದ್ದದು ಕೂಡಾ ಒ೦ದು ಹ೦ತದ ವರೇ೦ಗೆ ಸರಿಯೇ.
        ಆನು SSLC ಕಳುದ ಮತ್ತೆ TTC ಮಾಡ್ಳೆ ಅರ್ಜಿ ಕೊಟ್ಟಿತ್ತಿದ್ದೆ. ಅ೦ಬಗ ಕಾಸರಗೋಡು ಜಿಲ್ಲೆಲಿ ಕನ್ನಡ ttc ಗೆ ಒಟ್ಟಾರೆ ಇತ್ತಿದ್ದದು ೪೦ ಸೀಟು. ಅದರ್ಲಿ ೭೫ % (೩೦ ಸೀಟು) ಇತ್ತಿದ್ದದು PDC ಆದವಕ್ಕೆ. ಬಾಕಿ ಇಪ್ಪದು ೧೦ ಸೀಟು. ಅದರ್ಲಿ SC, ST, OBC, OEC, BACKWARD CHRISTIAN, BACKWARD MUSLIM, EX-SERVICEMEN QUOTA ಎಲ್ಲಾ ಕಳುದು ಬಾಕಿ ಸಾಮಾನ್ಯ ಸೀಟು ಇತ್ತಿದ್ದದು ೨. ಅದಕ್ಕೆ ಎನ್ನ೦ದ ಎಷ್ಟೋ ಹೆಚ್ಚು ಮಾರ್ಕು ಇತ್ತಿದ್ದವು ಬಯಿ೦ದವು, ಎನಗೆ ಸಿಕ್ಕಿತ್ತಿದ್ದಿಲ್ಲೆ. ಆದರೆ ಎನ್ನ ಕ್ಲಾಸಿಲ್ಲೇ ಕಲುತ್ತ ಕೇವಲ ಪಾಸ್ ಮಾರ್ಕ್ ಇತ್ತಿದ್ದ ಒ೦ದು ಹಿ೦ದುಳಿದ (?) ವರ್ಗದ ಹುಡುಗಿಗೆ ಆ ಸರ್ತಿ ಸೀಟು ಸಿಕ್ಕಿದ್ದು. (ಅ೦ದು ಆದ್ದದೆಲ್ಲಾ ಒಳ್ಳೇದಕ್ಕೇ ಹೇಳುವದು ಬೇರೆ ವಿಷಯ)
        ನಮ್ಮ ಊರಿಲ್ಲಿ ಮೀಸಲಾತಿಯ ಅಗತ್ಯ ನಿಜವಾಗಿ ಇಲ್ಲೆ ಹೇಳಿ ಕಾಣ್ತು. ಆದರೆ ಈಗಳುದೆ ಕೆಲವು ರಾಜ್ಯ೦ಗಳಲ್ಲಿ, ಕೆಲವು ಜಾಗೆಗಳಲ್ಲಿ ಅವು ಹಿ೦ದುಳಿದವು ಹೇಳ್ತ ಒ೦ದೇ ಕಾರಣಲ್ಲಿ ಅವಕ್ಕೆ ಎಷ್ಟೊ ಸೌಲಭ್ಯ೦ಗೊ ನಿರಾಕರಿಸಲ್ಪಡ್ತು. ಹಾ೦ಗಿಪ್ಪಲ್ಲಿ ಮಾ೦ತ್ರ ಮೀಸಲಾತಿಗೆ ಪ್ರಸಕ್ತಿ ಇಪ್ಪದು ಹೇಳಿ ಎನ್ನ ಅಭಿಪ್ರಾಯ. ಅಲ್ಲಿಯುದೆ, ವಿದ್ಯಾಭ್ಯಾಸಕ್ಕೆ ಮಾ೦ತ್ರ ಅದರ ಸೀಮಿತಗೊಳಿಸಿರೆ ಸಾಕು. ಉದ್ಯೋಗಕ್ಕೆ ಅಲ್ಲ. ವಿದ್ಯಾಭ್ಯಾಸ ಎಷ್ಟು ಜಾಸ್ತಿ ಕೊಡ್ತೋ ಅಷ್ಟುದೆ ಸಾಮೂಹಿಕ ವ್ಯವಸ್ಥೆಲಿ ಅಭಿವೃಧ್ಧಿ ಆವ್ತಿಲ್ಲೆಯಾ? (ಪ್ರತ್ಯಕ್ಷವಾಗಿ ಅಲ್ಲದ್ರುದೆ ಪರೋಕ್ಷವಾಗಿಯಾದರೂ)

      2. ರಿಸರ್ವೇಶನ್ ಬೇಡ ಹೇಳುದು ಒಳ್ಳೆಯ ಆದರ್ಶ ಹೇಳಿ ಒಪ್ಪಿಕೊಂಡರೂ ಹಿಂದುಳಿದವು ಹಿಂದೆಯೇ ಉಳಿಯೆಕ್ಕು ಹೇಳುದಾದರೆ ಎನ್ನ ಹಾಂಗಿಪ್ಪವಕ್ಕೆ ಒಪ್ಪುಲೆ ಕಷ್ಟ. ಏನೋಪ್ಪ..

        ಇನ್ನು ಹಿಂದುಳಿದವರ ಮುಂದೆ ತಂದರೆ ಮುಂದುವರೆದವು ಹಿಂದುಳಿದ ಕೆಲಸ ಮಾಡೆಕ್ಕಕ್ಕು ಹೇಳಿದ್ದಿ.. ಈ ಹಿಂದುಳಿದ ಕೆಲಸ ಹೇಳಿರೆ ಯಾವುದು? ನಮ್ಮ ಯಾವ ಧರ್ಮ ಶಾಸ್ತ್ರ “ಹಿಂದುಳಿದ ಕೆಲಸಂಗಳ” ಪಟ್ಟಿ ಮಾಡಿದ್ದು ಹೇಳಿ ಹೇಳಿದರೆ ಎನ್ನ ಹಾಂಗಿಪ್ಪವಕ್ಕೆ ಚೂರು ಉಪಕಾರ ಅಕ್ಕು ಇದಾ.. ಊರಿಲೆಲ್ಲ ಪೌರೋಹಿತ್ಯಕ್ಕೆ ಹೋಪದುದೆ “ಹಿಂದುಳಿದ ಕೆಲಸ” ಗಳ ಪಟ್ಟಿಗೆ ಸೇರಿದ್ದಾ ಹೇಳಿ ಎನಗೆ ಒಂದು ಡೌಟು ಇದ್ದು. ಎಂತಕ್ಕೆ ಹೇಳಿದರೆ ಎನ್ನ ಪರಿಚಯಲ್ಲಿ ಒಬ್ಬರು ಒಂದು ಪ್ರಪೋಸಲ್ಲಿಂಗೆ “ಪೌರೋಹಿತ್ಯಲ್ಲಿ ಅಂಥಾ ಹುಟ್ಟುವಳಿ ಇಲ್ಲೆ” ಹೇಳಿ ಯೇವದೋ ಇಂಜಿನಿಯರ್ ಗೆ ತನ್ನ ಮಗಳ ಮದುವೆ ಮಾಡಿ ಕೊಟ್ಟಿತ್ತಿದವು. ಈಗ ಆ ಇಂಜಿನಿಯರ್ ಹೆಂಡತಿಯನ್ನೂ ಮಗಳನ್ನು ನಡು ನೀರಿಲಿ ಕೈ ಬಿಟ್ಟಿದ ಹೇಳ್ತು ಬೇರೆ ಮಾತು. ವಿಷಯ ಎಲ್ಲೆಲ್ಲಿಗೋ ಹೋತು ಇರಲಿ.

        ವೈಚಾರಿಕ ಮಟ್ಟಲ್ಲಿ ಆನು ಹೇಳ್ತಾ ಇಪ್ಪದು.. ದಯವಿಟ್ಟು ಆರುದೆ ವೈಯಕ್ತಿಕವಾಗಿ ತೆಕ್ಕೊಳ್ಳೆಡಿ.

        1. ನೀರ್ಕಜೆ ಅಪ್ಪಚ್ಚಿ,
          @ ಹಿಂದುಳಿದವು ಹಿಂದೆಯೇ ಉಳಿಯೆಕ್ಕು ಹೇಳುದಾದರೆ ಎನ್ನ ಹಾಂಗಿಪ್ಪವಕ್ಕೆ ಒಪ್ಪುಲೆ ಕಷ್ಟ…
          ಎನಗುದೆ ಅದೇ ಅಭಿಪ್ರಾಯ ಇಪ್ಪದು. ಆ ಮನೋಭಾವ ದಬ್ಬಾಳಿಕೆ ಅಲ್ಲದಾ? ಆದರೆ ಈಗ ಮೀಸಲಾತಿಯ ಮೂಲ ಉದ್ದೇಶ ಒ೦ದು ಹ೦ತದ ವರೇಒಗೆ achieve ಮಾಡಿ ಆಯಿದು, ಈಗ ಅದರ ಉಪಯೋಗ೦ದಲುದೆ ಜಾಸ್ತಿ ದುರುಪಯೋಗ ಅಲ್ಲದಾ ಅವ್ತಾ ಇಪ್ಪದು ಹೇಳಿ ಎನ್ನ ಅಭಿಪ್ರಾಯ. ಆನುದೆ ಮುಕ್ತ ಮನಸ್ಸಿ೦ದ ಚರ್ಚೆ ಮಾಡ್ತಾ ಇಪ್ಪದಷ್ಟೆ.. ಯಾವುದನ್ನೂ ಆರುದೆ ದಯವಿಟ್ಟು ವೈಯುಕ್ತಿಕವಾಗಿ ತೆಕ್ಕೋಳೆಡಿ..

          1. ಖಂಡಿತವಾಗಿ ಪೌರೋಹಿತ್ಯವ ಹಿಂದುಳಿದ ಕೆಲಸ ಹೇಳಿದ್ದಿಲ್ಲೆ ..ಯಾವುದು ತುಂಬಾ ದೈಹಿಕ ಶಕ್ತಿ ಉಪಯೋಗಿಸಿ ಮಾಡ್ತ ಕೆಲಸವ ಹಿಂದುಳಿದ ಕೆಲಸ ಹೇಳಿದ್ದು ..
            ಎಂತಕೆ ಹೇಳಿರೆ ಎಲ್ಲಾ ಜನಗಳೂ ಶಕ್ತಿ ಉಪಯೋಗಿಸಿ ಮಾಡುವಂತ ಕೆಲಸಂಗಳ ಎಲ್ಲವನ್ನೂ ಉದಾಸಿನ ಮಾಡ್ತವು ಕೆಲಸ ಮಾಡ್ಲೆ ..ಹಾಂಗೆ ಕೆಲ್ಸಂಗಳ ಪಟ್ಟಿಲಿ ಅಂತ ಕೆಲಸಂಗೋ ಹಿಂದೆ ಒಳುದ್ದು..ಉದಾಹರಣೆಗೆ ಆಡಕ್ಕೆ ಗುಂಡಿ ತೆಗವದು, ಮದ್ದು ಬಿಡುದು ,ಮಣ್ಣ ಕೆಲಸ ,ಗೊಬ್ಬರ ಹೊರುದು , ಎಲ್ಲವೂ ಹಿಂದೆ ಒಳುದ್ದು ಕೆಲಸಂಗಳ ಪಟ್ಟಿಲಿ..
            ಎಲ್ಲೋರು ದೈಹಿಕ ಶಕ್ತಿ ಉಪಯೋಗಿಸದ್ದದರನ್ನೇ ಆಯ್ಕೆ ಮಾಡಿಗೋಳ್ತವು..
            ಅಥವಾ ಅಂತ ಕೆಲಸ ಮಾಂಸ ತಿಂದು ಗಟ್ಟಿ(ಹೇಳಿರೆ stamina ) ಹೇಳುವವೇ ಮಾಡ್ತವು ಸಾಮಾನ್ಯವಾಗಿ ..ಅಲ್ಲದ್ದೆ ಕುಟುಂಬಲ್ಲಿ ಇಪ್ಪ ಎಲ್ಲೋರುದೆ ಶಕ್ತಿ ಬೇಡುವ ಕೆಲಸಗಳನ್ನೇ ಮಾಡಿಗೊಂದಿತ್ತವು ಮೊದಲಣ ಹಿಂದುಳಿದ ವರ್ಗ ಹೇಳ್ತ ಜನಗೋ …ಈಗ ಅದು ಕಮ್ಮಿ ಆದರೂ ..ಹಂಗಿಪ್ಪ ಕೆಲ್ಸಂಗಳೂ ಮಾಡಿಯೇ ಮುಗಿಯೆಕ್ಕಲ್ಲದಾ…ನಮ್ಮಂದ ಅಂತ ಕೆಲಸವನ್ನೇ ವೃತ್ತಿ ಆಗಿ ಮಾಡ್ಲೆ ಸಾಧ್ಯ ಇದ್ದರೆ ಅದೂ ಒಂದು ಗಣನೆಗೆ ತೆಕ್ಕೊಂಬ ವಿಷಯವೇ…
            ಹಿಂದುಳಿದ ವರ್ಗಂಗೋ ಹಿಂದೆಯೇ ಒಲಿಯೇಕ್ಕು ಹೇಳುದು ಉದ್ದೇಶ ಅಲ್ಲ…
            ಅವರಲ್ಲೂ ನಿಜವಾಗಿ ಪ್ರತಿಭೆ ಇದ್ದಂತವಕ್ಕೆ ಖಂಡಿತ ಒಳ್ಳೆ ಅವಕಾಶನ್ಗೋ ಖಂಡಿತ reservation ಕೊಡದ್ದೆ ಇದ್ದರೂ ಇದ್ದು..ಎಲ್ಲೋರಾ ಹಾಂಗೆ ಜನರಲ್ ಮೆರಿಟ್ ಹೇಳುದು ಮಾತ್ರ ಇದ್ದುಗೊಂಡು ಅದರಲ್ಲಿ ಅವಕ್ಕೂ ಸ್ಥಾನ ಪದವಳೇ ಎಡಿತ್ತು ಸ್ವಂತ ಸಾಮರ್ಥ್ಯಲ್ಲಿ ಹೇಳಿರೆ ಖಂಡಿತ ಒಳ್ಳೇದೆ…ಅದಕ್ಕೆ ಆರುದೆ ಬೇಡ ಹೇಳಿದೆ ಹೇಳಿದ್ದವಿಲ್ಲೇ ..
            ಸರಿಯಾಗಿ ಕೊಮ್ಪೆತೆತಿಒನ್ ಹೇಳುದು ಇದ್ದರೆ ಮಾತ್ರ ಒಳ್ಳೆ product ಗೊ ಬಪ್ಪದು ..
            ಇದಕ್ಕೆ ಒಳ್ಳೆ ಉದಾಹರಣೆ ಹೇಳಿರೆ ನಮ್ಮ ದೇಶಲ್ಲಿ ಅಂತ ಹೇಳುವ ಹಾಂಗೆ ದೂರಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಆಗಿತ್ತಿಲ್ಲೆ ..ಆವಾಗ ಎಲ್ಲಾ call charges 1Rs ಇತ್ತು ..ಈಗ ಎಲ್ಲಾ ನಾಯಿ ಕೊಡೆ ಹಾಂಗೆ service provider ಗೊ ಬಂದ ಮೇಲೆ competetionಗೆ ಬೇಕಾಗಿ ಒಂದು service provider ಕಮ್ಮಿಗೆ ಕೊಡ್ಲೆ ಸುರು ಮಾಡಿ ಎಲ್ಲವೂ ಕಮ್ಮಿ ಮಾಡ್ಲೆ ಬೇಕಾಗಿ ಬಂತು…ಮತ್ತೋ ಒಳ್ಳೆ ಉದಾಹರಣೆ ಹೇಳಿರೆ ವಿಜಯ ಕರ್ನಾಟಕ ಪೇಪರ್ ನಾವು 1 .30 Rs ಗೆ ಕೊಡ್ಲೆ ಸುರು ಮಾಡಿ ಉದಯವಾಣಿ ಯಾವಕ್ಕೂ ಕಮ್ಮಿ ಮಾಡ್ಲೆ ಬೇಕಾಗಿ ಬಂತು …
            ಹಾಂಗೆ ಎಲ್ಲಿ open competetion ಇರ್ತೋ ಅಲ್ಲಿ ಮಾತ್ರ ಒಳ್ಳೆ product ಬಪ್ಪಲೆ ಸಾದ್ಯ …ಹೇಳಿ ಆನು ಹೇಳುದು..

          2. {ಹಾಂಗೆ ಎಲ್ಲಿ open competetion ಇರ್ತೋ ಅಲ್ಲಿ ಮಾತ್ರ ಒಳ್ಳೆ product ಬಪ್ಪಲೆ ಸಾದ್ಯ}
            ಸ್ಪರ್ಧೆ ಇಪ್ಪಲ್ಲಿ ಮಾ೦ತ್ರ ಗುಣಮಟ್ಟ ಹೆಚ್ಚಪ್ಪದು ಹೇಳಲೆಡಿಗೊ?
            competetion ಗುಣಮಟ್ಟವ ಕಡಿಮೆಯೂ ಮಾಡುಗು ಹೇಳ್ಳೆ ಈಗಾಣ ಟಿವಿ ಚಾನೆಲ್ ಗೊ ಉದಾಹರಣೆ.
            ಮೊದಲು ದೂರದರ್ಶನ ಮಾ೦ತ್ರ ಇಪ್ಪಗ ಬ೦ದೊಡ್ಡಿದ್ದ ಕಾರ್ಯಕ್ರಮ೦ಗಳ ಸ್ತರ ಈಗ ಪ್ರಸಾರ ಅಪ್ಪದರಿ೦ದ ಕಮ್ಮಿ ಆಗಿತ್ತಿಲ್ಲೆ. ನ್ಯೂಸಿನ ವಿಚಾರಲ್ಲಿ ಅ೦ತೂ ಇದು ತು೦ಬಾ ಸ್ಪಷ್ಟ. ಈಗ ಕೊ೦ಪಿಟೀಶನಿ೦ದ ವಾರ್ತೆಗಳ ಪ್ರಮಾಣ (ಸೈಜ಼್) ಹೆಚ್ಚಾಯಿದು, ಪ್ರಾಮಾಣಿಕತೆ ಕಮ್ಮಿ ಆಯಿದು.

          3. ಟಿವಿಯವರ ಹಾಂಗೆ …ಅಥವಾ ಅದೇ ಥರ Cut-throat competition ಒಳ್ಳೇದಲ್ಲ ..ಆದರೆ ಆರೋಗ್ಯವಾದ competetion ಒಳ್ಳೇದೆ .ಯಾವಾಗಲೂ …

          4. ದೈಹಿಕ ಶ್ರಮ ಬೇಡುವ ಕೆಲಸ ನವಗೆ ಅರಡಿಯದ್ದದು ಅಲ್ಲ. ನಾವೇ ಆಯ್ದುಕೊಂಡ ಮಾರ್ಗ ಅದು. ನೀರ್ಕಜೆಲಿ ಎನ್ನ ಅಜ್ಜನ ಕಾಲಲ್ಲಿ ಅಜ್ಜನೇ ಸ್ವತಹ ಸೇರಿಕೊಂಡು ಗುಡ್ಡೆ ಗರ್ಪಿ ತೋಡಿನ ದಾರಿ ಬದಲ್ಸಿ, ತಟ್ಟು ಮಾಡಿತ್ತಿದವು. ಯಾವುದೇ ಮಾಂಸ ತಿಂದು ಮಾಡಿದ್ದಲ್ಲ ಅದು. ಅಪ್ಪ ಮರಕ್ಕೆ ಹತ್ತಿ ಕಾಯಿ ತೆಗೆಗು. ಅಪ್ಪನೂ ಗಂಜಿ ಉಂಡವೇ ಹೊರತು ಮಾಂಸ ತಿಂದವಲ್ಲ. ಮಾಂಸ ತಿಂಬದು ಒಂದು ಆಹಾರ ಪಧ್ಧತಿ ಅಷ್ಟೇ. ದೈಹಿಕ ಶಕ್ತಿ ವಿಚಾರಕ್ಕೆ ಬಪ್ಪಗ ಅಲ್ಲಿ ಮಾಂಸಾಹಾರ ಅಥವಾ ಸಸ್ಯಾಹಾರದ ಪ್ರಶ್ನೆ ಬತ್ತಿಲ್ಲೆ. ಮನ್ನೆ ಒಲಿಂಪಿಕ್ ಚಿನ್ನ ತಂದ ಬಾಕ್ಷರ್ ವಿಜೀಂದರ್ ಶುಧ್ಧ ಸಸ್ಯಾಹಾರಿ. ಹಾಂಗೆಯೇ ಜಗತ್ತಿಲಿ ತುಂಬಾ ಜನ ಕ್ರೀಡಾಪಟುಗೊ ಸಸ್ಯಾಹಾರಂದಲೇ ಸ್ಟಾಮಿನಾ ಪಡೆತ್ತವು. ಚೈನಾದ ಕೆಲವೊಂದು ಯುಧ್ಧಕಲೆಗಳ ಕಲಿವಗ ಸಸ್ಯಾಹಾರ ಕಡ್ಡಾಯ. ಇರಲಿ. ಈಗ ಪುನಾ ನಮ್ಮ ವಿಷಯಕ್ಕೆ ಬಪ್ಪ. ಎನ್ನ ಅಪ್ಪ ಅಜ್ಜ ಅಷ್ಟೆಲ್ಲ ಕೆಲಸ ಮಾಡಿದ್ದರೂ ಎನಗೆ ಒಂದು ಅಡಿ ಮರ ಹತ್ತುಲೂ ಅರಡಿಯ. ಎಂತಕ್ಕೆ ಹೇಳಿದರೆ ಅದು ಆನು ಅಥವಾ ಎನ್ನ ಸಮಾಜ ಆಯ್ದುಕೊಂಡ ಮಾರ್ಗ – ದೈಹಿಕ ಶ್ರ್ಮಮ ಬೇಡದ ಕೆಲಸಂಗೊ ಮಾಡುವ ಆಯ್ಕೆ. ಹೀಂಗೆ ಒಂದರಿ ಆಯ್ಕೆ ಮಾಡಿಕೊಂಡ ಮೇಲೆ ಅದಕ್ಕೆ ತಕ್ಕ ಹಾಂಗೆ ತಯಾರಾಯೆಕ್ಕು. ಅಡಕ್ಕೆ ತೆಗವಲೆ ಜನ ಇಲ್ಲದ್ದರೆ ಯಂತ್ರ ತಯಾರ್ಸೆಕ್ಕು. ಅಥವಾ‌ ಬೇರೆ ಬೆಳೆ ಬೆಳೆಯೆಕ್ಕು. ಅಥವಾ ಬೇಸಾಯ ಬಿಟ್ಟು ಬೇರೆ ಉದ್ಯೋಗಕ್ಕೆ ಹೋಯೆಕ್ಕು. ಎಲ್ಲ ನಮ್ಮ ಕೈಲೇ ಇಪ್ಪದನ್ನೇ? ಅಷ್ಟಪ್ಪಗ ಇದಕ್ಕೆ ಇನ್ನೊಬ್ಬನ ಹೊಣೆಗಾರಿಕೆ ಮಾಡೆಕ್ಕ ಹೇಳ್ತ ಪ್ರಶ್ನೆ ಬತ್ತು ಅಲ್ಲದ?

            ಇನ್ನು ಇದೇ ವಿಷಯಕ್ಕೆ (Dignity of Labor) ಸಂಬಂಧಪಟ್ಟ ಹಾಂಗೆ ನಮ್ಮ ಧರ್ಮದ ಮೂಲ ಗ್ರಂಥವಾದ ವೇದಂಗಳಲ್ಲಿ ಎಂತ ಹೇಳಿದ್ದು ಹೇಳ್ತ ಮಾಹಿತಿ ಇಲ್ಲಿದ್ದು. ಪುರುಸೊತ್ತು ಆದರೆ ಎಲ್ಲರುದೆ ಓದಿ. ಇದರ ಓದಿದರೆ ನಾವು ನಡವ ದಾರಿ ವೈದಿಕ ಅಲ್ಲ, ಬದಲಾಗಿ ಶುಧ್ಧ ಅವೈದಿಕ ಹೇಳಿ ಅರಿಕೆ ಆವುತ್ತು (ಎನಗಂತೂ ಆತು, ಎಲ್ಲೊರಿಂಗೂ ಹೇಂಗೆ ಹೇಳಿ ಎನಗೆ ಅರಡಿಯ) ಈ ಸೈಟು ಭಾರಿ ಲಾಯಿಕ ಇದ್ದು. ಆರ್ಯ ಸಮಾಜದ ಜನಂಗೊ ಬರವ ಸೈಟು ಇದು.

            http://agniveer.com/881/dignity-of-labor/

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×