ಕಳಾಯಿ ಗೀತತ್ತೆಯ “ಕಲಾವನ”…!

ಸಣ್ಣ ಸಣ್ಣ ಶುದ್ದಿ ಹೇಳುದರ್ಲಿ ಕಳಾಯಿಗೀತತ್ತೆದು ಎತ್ತಿದ ಕೈ.
ದೊಡ್ಡಮಾವನ ಶುದ್ದಿಗೊ ಎಷ್ಟು ದೊಡ್ಡವೋ, ಕಳಾಯಿಗೀತತ್ತೆದು ಅಷ್ಟೇ ಸಣ್ಣ!

ಬೈಲಿನ ಎಲ್ಲಾ ಅಳಿಯ, ಸೊಸೆಯಕ್ಕಳ ಒಟ್ಟಿಂಗೆ ಸಂತೋಷವಾಗಿ ಇಪ್ಪ ಈ ಅತ್ತೆಗೆ – ‘ಎಡೆ ಹೊತ್ತಿಲಿ ಬೈಲಿಂಗೆ ಬಂದು ಶುದ್ದಿ ಹೇಳಿ ಗೀತತ್ತೆ?’ ಹೇಳಿದೆ.
ಸುರುಸುರುವಿಂಗೆ ಎನ್ನಂದ ಅದೆಲ್ಲ ಅರಡಿಯ ಹೇಳಿರೂ, ಕ್ರಮೇಣ ಸುಮಾರು ಸರ್ತಿ ಹೇಳುಗ ಅವಕ್ಕೇ ಆ ಬಗ್ಗೆ ಒಲವು ಬಂತು.

`ಓಮಿನಿ ಕಲುಶುಗಳೂ ಹಾಂಗೇ ಆಯಿದು..!’ ಹೇಳಿ ಮೈರದಜ್ಜ ನೆಗೆಮಾಡಿದವು.
ಹ್ಮ್, ಅಪ್ಪೂಳಿ, ಈಗ ಗೀತತ್ತೆ ಓಮಿನಿ ಬಿಡ್ತವು ಬುರೂನೆ. ಬೈಲಿಂದ ಪೇಟಗೆ, ಪೇಟೆಂದ ಬೈಲಿಂಗೆ ಅವ್ವೇ ಹೋಗಿ ಬತ್ತವು.
ಸಂಗೀತ ಕ್ಲಾಸಿಂದ ಕಳಾಯಿ ಪುಳ್ಳಿಯ ಅವ್ವೇ ಕರಕ್ಕೊಂಡು ಬಪ್ಪದು ಇದಾ, ಓಮಿನಿಲಿ.
ಒಂದೊಂದರಿ ದಾರಿಕರೆಲಿ ಒಪ್ಪಣ್ಣ ನೆಡಕ್ಕೊಂಡು ಹೋಪವ ಸಿಕ್ಕಿರೆ ಪೇಂಕ್ ಹೇಳಿ ಒಂದು ಹೋರ್ನು ಬಡಿತ್ತವು, ’ಗುರ್ತ ಸಿಕ್ಕಿತ್ತು’ ಹೇಳುವ ಸೂಚನೆ.
ಎಲ್ಲಿ ಸಿಕ್ಕಿರೂ ಮಾತಾಡುಗು – ಪುರುಸೊತ್ತಿದ್ದರೆ ಓದುಗು, ಭೈರಪ್ಪನ ಪುಸ್ತಕದ ಬಗ್ಗೆ ವಿಶೇಷ ಒಲವು.

ಬೆಂಗುಳೂರಿಂಗೆ ಹೋಗಿಪ್ಪಗ ಅಳಿಯನೊಟ್ಟಿಂಗೆ ಸಿನಮ ನೋಡಿದ್ದುದೇ ಇದ್ದು, ಹಾಂಗೆ ನೋಡಿನೋಡಿ ಸಿನೆಮ ಪದ್ಯಂಗೊ ದಾರಾಳ ಅರಡಿಗು!
ಅಷ್ಟು ಮಾಂತ್ರ ಅಲ್ಲದ್ದೆ, ಕಾಶಿಂದ ರಾಮೇಶ್ವರ (ನೀರ್ಕಜೆ ಅಳಿಯ ಅಲ್ಲ!) ಒರೆಂಗೂ, ಜಿಮೈಲಿಂದ ಮೈಲುತೂತಿನ ಒರೆಂಗೂ, ಓಮಿನಿಂದ ಭಾಮಿನಿ ಒರೆಂಗೂ ಮಾಹಿತಿ ತಿಳಿವ ಕುತೂಹಲ ಇದ್ದು ಇವಕ್ಕೆ. ಎಲ್ಲವು ಅರಡಿಗುದೇ!

ಆಗಲಿ,
ಬೈಲಿಂಗೆ ಬಂದು ಅಳಿಯಸೊಸೆಯಕ್ಕೊಗೆ ಉತ್ಸಾಹಲ್ಲಿ ಶುದ್ದಿ ಹೇಳ್ತ ಮನಸ್ಸು ಮಾಡಿದ್ದವು.
ಇವರ ಶುದ್ದಿ ಕೇಳುವ, ಒಪ್ಪಒಪ್ಪ ಶುದ್ದಿಗೊಕ್ಕೆ ಒಪ್ಪ ಕೊಡುವ°.
~
ಒಪ್ಪಣ್ಣ

ಇವರ ಶುದ್ದಿಗೊ “ಕಲಾವನ” ಹೇಳ್ತ ಅಂಕಣಲ್ಲಿ ಪ್ರಕಟ ಆವುತ್ತು.
ಸದ್ಯಲ್ಲೇ ಆರಂಭ ಆವುತ್ತು, ಕಾದೊಂಡಿರಿ!

Admin | ಗುರಿಕ್ಕಾರ°

   

You may also like...

2 Responses

  1. ಕಳಾಯಿ ಗೀತತ್ತೆ says:

    ಗುರಿಕ್ಕಾರರೆ……… ಸಿನೆಮ ಪದ್ಯಂಗೋ ಸಿನೆಮ ನೋಡದ್ದೆ FM ಕೇಳಿರೂ ಗೊಂತಾಕ್ಕು…. 😛

  2. Olle shuddi bandare oppa koduva… 😛

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *