ರಾಧಾಕೃಷ್ಣ .. :-)

July 15, 2010 ರ 9:42 amಗೆ ನಮ್ಮ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂದ್ರ ಓದ್ತಾ ಒಂದು confusion ಬಂತು .

ಇಸ್ಕಾನ್ ಲೂ ರಾಧಾಕೃಷ್ಣ ಮೂರ್ತಿ ,ಫೋಟೋ ವುದೇ ಎಲ್ಲಾ ಕಡೆಯೂ ರಾಧಾಕೃಷ್ಣ ,ಹೆಸರುಗಳುದೆ ರಾಧಾಕೃಷ್ಣ ..ನೋಡಿಪ್ಪಿ ..
ನಿಜವಾಗಿ  ನೋಡಿರೆ   ರಾಧೆ ಕೃಷ್ಣ೦ದ 10 ವರ್ಷ ದೊಡ್ಡ …ಮತ್ತೆ ರಾಧೆ ಯಾವಾಗ್ಲಿಂಗೂ ಕೃಷ್ಣನ  ಮದುವೆ ಆಗಿತ್ತಿಲ್ಲೆ ..
ಕೃಷ್ಣನ ನಿಜವಾದ ಹೆಂಡತ್ತಿ ಸತ್ಯಭಾಮೆ ,ರುಕ್ಮಿಣಿ ಮತ್ತೆ 16,000  ಗೋಪಿಕೆಯರು ಇದ್ದವು ಹೇಳಿ ಕಥೆ ಹೇಳ್ತು ..ಕೃಷ್ಣ  ರಾಧೆಯ ಬಿಟ್ಟ ಮೇಲೆ 8 ಮದುವೆ ಆಯ್ದ ಹೇಳಿಯೂ ಹೇಳ್ತು ಕಥೆ…
ನಮ್ಮ ಆಗು ಹೋಗುಗಳ ಸುತ್ತ ಕಥೆಯ ಅರ್ಥ ಮಾಡಿಗೊಳ್ತರೆ   ಭಾರೀ ಕಷ್ಟ..ಗೊಂತಾದರೆ ಹೇಳಿ ..
1) ಅಂಬಗ ರಾಧೆ ಕೃಷ್ಣನ ಹೆಂಡತ್ತಿ ಅಲ್ಲ ಪ್ರೇಯಸಿ ಹೇಳುಲಕ್ಕು..
2) ಅಂಬಗ ಕಥೆಲಿ ಹೆಂಡತ್ತಿಂದ ಜಾಸ್ತಿ ಮರ್ಯಾದೆ ಪ್ರೇಯಸಿ ಆಗಿದ್ದ ರಾಧೆಗೆ ಕೊಟ್ಟ ಹಂಗಾತು .ಶಾಸ್ತ್ರೋಕ್ತ ವಾಗಿ ಮದುವೆ ಆದವಕ್ಕೆ ಕಮ್ಮಿ ಮಾಡಿದ ಹಾಂಗೆ ಆತಿಲ್ಲೆಯಾ?
3) ಅಥವಾ ಆಗಾಣ ಕಾಲಲ್ಲಿ ಹುಡುಗಿಯರ ಸಂಖ್ಯೆ ಹುಡುಗರ ಸಂಖ್ಯೆಗಿಂತ ಹೆಚ್ಚಿತ್ತು ಹೇಳುದು ಬರದವರ ಉದ್ದೇಶ ಇತ್ತಾ?
4)ರಾಧೆ ಕೃಷ್ಣನ ಅಪ್ರತಿಮ (true ಲವ್ / divine love ) ಹೇಳಿ ತಿಳ್ಕೊಂಡರೂ ,ರಾಧೆದು sacrifice ಹೇಳಿರೂ ರಾಧೆ ಏನೂ ಪ್ರತಿಫಲ ಅಪೇಕ್ಷೆ ( /expectation ) ಇಲ್ಲದ್ದೆ    ಇದ್ದರೂ ಕೃಷ್ಣಂಗೆ ರಾಧೆಯ ಮದುವೆ ಅಪ್ಪಲೆ ಆವ್ತಿತಲ್ಲ ..?
5) ಅಲ್ಲ ಕೆಲವು ಸಿನೆಮ೦ಗಳ  ಹಾಂಗೆ true love ಹೇಳಿರೆ bad ending ಇರ್ತು ಹೇಳಿ ಹೇಳೆಕ್ಕಿತ್ತಾ / ಹುಡುಗರಿ೦ಗೆ ಬಿಟ್ಟು  ಹೋಪದು ಸುಲಭ  ಹೇಳಿ ಹೇಳುದು ಉದ್ದೇಶ ಇತ್ತಾ  ಬರದೊರಿಂಗೆ..?
6)ಅಥವಾ ರಾಧೆಗೆ ಮದುವೆ ಹೇಳುದು ಬಂಧನ ಅನ್ನಿಸಿತ್ತಾ ..ಅಥವಾ ನಿಜವಾಗಿಯೂ ಮದುವೆ ಹೇಳಿರೆ ಬಂಧನವೆಯಾ .?
7)ಅಥವಾ ಹುಡಗರು ಹೇಳಿದ ಹಾಂಗೆ ಲೋಕ (male dominating system ನ ) ಹೇಳೆಕ್ಕಿತ್ತಾ ..?
8)ಕೃಷ್ಣ  ರಾಧೆಯ ಬಿಟ್ಟ ಮೇಲೆ 8 ಮದುವೆ ಆದ ಹೇಳಿರೆ ಮೊದಲು ಮದುವೆ ಆಗದ್ದೆ ಒಟ್ಟಿ೦ಗೆ  ಇತ್ತಿದ್ದ ಹೇಳಿಯಾ..?

ಅಷ್ಟೆಲ್ಲ  ಆಗಿ ಈಗ ರುಕ್ಮಿಣಿಕೃಷ್ಣ೦ದ ಜಾಸ್ತಿ ರಾಧಾಕೃಷ್ಣ  ಎಂತಕೆ ಪೂಜೆ ಮಾಡ್ತವು ಗೊಂತಾಯ್ದಿಲ್ಲೆ…ಕಥೆ ಮುಗುದಪ್ಪಗ ..

ರಾಧಾಕೃಷ್ಣ .. :-), 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

 1. ಶ್ರೀಶಣ್ಣ
  ಶ್ರೀಶ. ಹೊಸಬೆಟ್ಟು.

  ಮಂದ್ರವ ಆನು ಓದಿದ್ದಿಲ್ಲೆ. ಮಧ್ಯಮ ಸ್ಥಾಯಿಲಿ ಎನ್ನ ಅಭಿಪ್ರಾಯವ ಹೇಳ್ತೆ. ತಾರ ಸ್ಥಾಯಿಲಿ ಗಲಾಟೆ ಮಾಡುವದು ಬೇಡ. ಹೇಂಗೂ ವೇಣೂರಣ್ಣ “ವಚನ ಬಾಗವತ” ಸಾರಾಂಶ ಕೊಡ್ತೆ ಹೇಳಿದ್ದವಲ್ಲದ.
  ರಾಧಾ-ಕೃಷ್ಣರ ಪ್ರೀತಿ,ಪ್ರೇಮ, ವಾತ್ಸಲ್ಯ, ಎಲ್ಲಾ ಊಹೆಗೂ ಮೀರಿದ್ದು. ಅವರ ಸಂಬಂಧ ಅಣ್ಣ ತಂಗಿದಂತು ಅಲ್ಲ. ಕತೆಲಿ ಒಂದು ಘಟನೆ ಹೀಂಗೆ ಬತ್ತು.
  ಕೃಷ್ಣಂಗೆ ಒಂದರಿ ಸೌಖ್ಯ ಇಲ್ಲದ್ದಿಪ್ಪಗ “ನಿಜವಾದ ಭಕ್ತರ ಚರಣಾಮೃತ” ಸೇವಿಸಿರೆ ಗುಣ ಅಕ್ಕು ಹೇಳ್ತವಡ. ಅಂಬಗ ಕೃಷ್ಣಂಗೆ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರೂ ಇತ್ತಿದ್ದವು, ರುಕ್ಮಿಣಿ , ಸತ್ಯಭಾಮೆಯೂ ಇತ್ತಿದ್ದವು. ಆರೊಬ್ಬನೂ ಕೊಡ್ಲೆ ತಯಾರು ಇತ್ತಿದ್ದವಿಲ್ಲೆ. ಪಾದ ತೊಳದ ನೀರಿನ ಕೃಷ್ಣಂಗೆ ಕೊಟ್ಟು ಆನು ನರಕಕ್ಕೆ ಎಂತಕೆ ಹೋಗಲಿ ಹೇಳಿಯೇ ಆಲೋಚನೆ ಮಾಡ್ತವು. ಅಂಬಗ ರಾಧೆ, ಆನು ನರಕಕ್ಕೆ ಹೋದರೂ ತೊಂದರೆ ಇಲ್ಲೆ, ಕೃಷ್ಣಂಗೆ ಗುಣ ಆದರೆ ಸಾಕು ಹೇಳಿ ಕೊಡ್ಲೆ ತಯಾರು ಆವುತ್ತು.
  ಹೆಂಡತಿ ಅಲ್ಲದ್ದ ರಾಧೆಗೆ ಕೃಷ್ಣನಲ್ಲಿ ಇತ್ತಿದ್ದು ಅಂತಹ ಅನನ್ಯ ಭಕ್ತಿ, ನಿಷ್ಕಾಮ ಪ್ರೇಮ, ಮಾತೃವಾತ್ಸಲ್ಯ.

  [Reply]

  ಶ್ಯಾಮಣ್ಣ

  Shyamanna Reply:

  ಕೃಷ್ಣ ಗೋಕುಲ ಬಿಟ್ಟು ಮಥುರೆಗೆ ಹೋದಮೇಲೆ ಮತ್ತೆ ರಾಧೆಯ ವಿಶಯ ಕೃಷ್ಣ ನ ಕಥೆಲಿ ಎಲ್ಲಿಯೂ ಬಂದ ಹಾಂಗೆ ಎನಗೆ ಗೊಂತಿಲ್ಲೆ…
  ಮೇಲಾಣ ಕಥೆ ಎಲ್ಲಿ ಬತ್ತು?
  ಗೋಕುಲ ಬಿಟ್ಟು ಹೋಪಗ ರಾಧೆಗೆ ಕೃಷ್ಣ ಅವನ ಮುರಳಿಯ ನೆನಪ್ಪಿಂಗೆ ಕೊಡ್ತಡ… ಮತ್ತೆ ಅವ ರಾಧೆಗೆ ಎಲ್ಲಿಯೂ ಸಿಕ್ಕುತ್ತಾಯಿಲ್ಲೆ ಅಲ್ಲದಾ?

  [Reply]

  ಕಳಾಯಿ ಗೀತತ್ತೆ

  ಕಳಾಯಿ ಗೀತತ್ತೆ Reply:

  ಕೆಲವು ಕಡೆ ಹೇಳ್ತು …ಕಥೆಲಿ .. ಕೃಷ್ಣ ರಾಧೆ ಬಿಟ್ಟ ಮೇಲೆ ವಾಪಾಸ್ ಬತ್ತಾ ಇಲ್ಲೆ .ಹೇಳಿ … ರಾಧೆ ಕೃಷ್ಣನ ವಾಪಾಸ್ ದಿನಿಗೇಳುಲೆ ಪ್ರಯತ್ನ ಮಾಡ್ತು… ಹೇಳಿ ಇದ್ದು ..
  ಅಂಬಗ ರಾಧೆ ಅಷ್ಟು ಕೇಳ್ತಾ ಇಪ್ಪಗ ಕೃಷ್ಣ ಕೆಮಿಯೇ ಕೇಳದ್ದ ಹಾಂಗೆ(ಬೆಲೆ ಕೊಡದ್ದ ಹಾಂಗೆ ) ಮಾಡಿದ ಹಾಂಗೆ ಆತಿಲ್ಲೆಯ…:P

  [Reply]

  VN:F [1.9.22_1171]
  Rating: 0 (from 0 votes)
 2. ಶ್ಯಾಮಣ್ಣ
  Shyamanna

  ರಾಧಾ ಕೃಷ್ಣರ ಪ್ರೀತಿ ಬಗ್ಗೆ ಮಾತಾಡುವಗ ಪ್ರೀತಿ ಹೇಳ್ತ ಭಾವನೆಯ ಬಗ್ಗೆ ಚಿಂತನೆ ಮಾಡೆಕ್ಕಾದ್ದೇ ವಿನಹ ಅವರ ನಡುವಿನ ಸಂಬಂದದ ಬಗ್ಗೆ ಅಲ್ಲ…..

  [Reply]

  VA:F [1.9.22_1171]
  Rating: 0 (from 0 votes)
 3. ಶ್ಯಾಮಣ್ಣ
  Shyamanna

  ಹಾಂಗೆ ಇನ್ನೊಂದು ವಿಶಯ….. ರಾಧೆ ಹೇಳ್ತ ಕೂಸು ಕೃಷ್ಣನ ಕಥೆಲಿ ಇತ್ತೇ ಇಲ್ಲೆಡ…
  ಈ ಲಿಂಕ್ ನೋಡಿ
  http://www.pushti-marg.net/bhagwat/Radha.htm

  [Reply]

  VA:F [1.9.22_1171]
  Rating: 0 (from 0 votes)
 4. ಅಜ್ಜಿಮನೆ ಪುಳ್ಳಿ

  ಗೀತ ಚಿಕ್ಕಮ್ಮ ನೀನು ಹೇಳಿದ್ದು ಸರಿ ಇದ್ದು ಆತೋ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ದೇವಸ್ಯ ಮಾಣಿಮುಳಿಯ ಭಾವಜಯಗೌರಿ ಅಕ್ಕ°ಬಟ್ಟಮಾವ°ಒಪ್ಪಕ್ಕವೇಣಿಯಕ್ಕ°ಅಕ್ಷರದಣ್ಣಮಾಷ್ಟ್ರುಮಾವ°ದೀಪಿಕಾಅನು ಉಡುಪುಮೂಲೆಬಂಡಾಡಿ ಅಜ್ಜಿವಿದ್ವಾನಣ್ಣತೆಕ್ಕುಂಜ ಕುಮಾರ ಮಾವ°ದೊಡ್ಡಮಾವ°ಅನುಶ್ರೀ ಬಂಡಾಡಿರಾಜಣ್ಣಶಾಂತತ್ತೆಸರ್ಪಮಲೆ ಮಾವ°ಬೊಳುಂಬು ಮಾವ°ಪುಣಚ ಡಾಕ್ಟ್ರುಚೆನ್ನೈ ಬಾವ°ಅಜ್ಜಕಾನ ಭಾವಗಣೇಶ ಮಾವ°ವಿಜಯತ್ತೆಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ