Oppanna.com

ರಾಧಾಕೃಷ್ಣ .. :-)

ಬರದೋರು :   ಕಳಾಯಿ ಗೀತತ್ತೆ    on   15/07/2010    29 ಒಪ್ಪಂಗೊ

ಕಳಾಯಿ ಗೀತತ್ತೆ
Latest posts by ಕಳಾಯಿ ಗೀತತ್ತೆ (see all)

ಮಂದ್ರ ಓದ್ತಾ ಒಂದು confusion ಬಂತು .
ಇಸ್ಕಾನ್ ಲೂ ರಾಧಾಕೃಷ್ಣ ಮೂರ್ತಿ ,ಫೋಟೋ ವುದೇ ಎಲ್ಲಾ ಕಡೆಯೂ ರಾಧಾಕೃಷ್ಣ ,ಹೆಸರುಗಳುದೆ ರಾಧಾಕೃಷ್ಣ ..ನೋಡಿಪ್ಪಿ ..
ನಿಜವಾಗಿ  ನೋಡಿರೆ   ರಾಧೆ ಕೃಷ್ಣ೦ದ 10 ವರ್ಷ ದೊಡ್ಡ …ಮತ್ತೆ ರಾಧೆ ಯಾವಾಗ್ಲಿಂಗೂ ಕೃಷ್ಣನ  ಮದುವೆ ಆಗಿತ್ತಿಲ್ಲೆ ..
ಕೃಷ್ಣನ ನಿಜವಾದ ಹೆಂಡತ್ತಿ ಸತ್ಯಭಾಮೆ ,ರುಕ್ಮಿಣಿ ಮತ್ತೆ 16,000  ಗೋಪಿಕೆಯರು ಇದ್ದವು ಹೇಳಿ ಕಥೆ ಹೇಳ್ತು ..ಕೃಷ್ಣ  ರಾಧೆಯ ಬಿಟ್ಟ ಮೇಲೆ 8 ಮದುವೆ ಆಯ್ದ ಹೇಳಿಯೂ ಹೇಳ್ತು ಕಥೆ…
ನಮ್ಮ ಆಗು ಹೋಗುಗಳ ಸುತ್ತ ಕಥೆಯ ಅರ್ಥ ಮಾಡಿಗೊಳ್ತರೆ   ಭಾರೀ ಕಷ್ಟ..ಗೊಂತಾದರೆ ಹೇಳಿ ..
1) ಅಂಬಗ ರಾಧೆ ಕೃಷ್ಣನ ಹೆಂಡತ್ತಿ ಅಲ್ಲ ಪ್ರೇಯಸಿ ಹೇಳುಲಕ್ಕು..
2) ಅಂಬಗ ಕಥೆಲಿ ಹೆಂಡತ್ತಿಂದ ಜಾಸ್ತಿ ಮರ್ಯಾದೆ ಪ್ರೇಯಸಿ ಆಗಿದ್ದ ರಾಧೆಗೆ ಕೊಟ್ಟ ಹಂಗಾತು .ಶಾಸ್ತ್ರೋಕ್ತ ವಾಗಿ ಮದುವೆ ಆದವಕ್ಕೆ ಕಮ್ಮಿ ಮಾಡಿದ ಹಾಂಗೆ ಆತಿಲ್ಲೆಯಾ?
3) ಅಥವಾ ಆಗಾಣ ಕಾಲಲ್ಲಿ ಹುಡುಗಿಯರ ಸಂಖ್ಯೆ ಹುಡುಗರ ಸಂಖ್ಯೆಗಿಂತ ಹೆಚ್ಚಿತ್ತು ಹೇಳುದು ಬರದವರ ಉದ್ದೇಶ ಇತ್ತಾ?
4)ರಾಧೆ ಕೃಷ್ಣನ ಅಪ್ರತಿಮ (true ಲವ್ / divine love ) ಹೇಳಿ ತಿಳ್ಕೊಂಡರೂ ,ರಾಧೆದು sacrifice ಹೇಳಿರೂ ರಾಧೆ ಏನೂ ಪ್ರತಿಫಲ ಅಪೇಕ್ಷೆ ( /expectation ) ಇಲ್ಲದ್ದೆ    ಇದ್ದರೂ ಕೃಷ್ಣಂಗೆ ರಾಧೆಯ ಮದುವೆ ಅಪ್ಪಲೆ ಆವ್ತಿತಲ್ಲ ..?
5) ಅಲ್ಲ ಕೆಲವು ಸಿನೆಮ೦ಗಳ  ಹಾಂಗೆ true love ಹೇಳಿರೆ bad ending ಇರ್ತು ಹೇಳಿ ಹೇಳೆಕ್ಕಿತ್ತಾ / ಹುಡುಗರಿ೦ಗೆ ಬಿಟ್ಟು  ಹೋಪದು ಸುಲಭ  ಹೇಳಿ ಹೇಳುದು ಉದ್ದೇಶ ಇತ್ತಾ  ಬರದೊರಿಂಗೆ..?
6)ಅಥವಾ ರಾಧೆಗೆ ಮದುವೆ ಹೇಳುದು ಬಂಧನ ಅನ್ನಿಸಿತ್ತಾ ..ಅಥವಾ ನಿಜವಾಗಿಯೂ ಮದುವೆ ಹೇಳಿರೆ ಬಂಧನವೆಯಾ .?
7)ಅಥವಾ ಹುಡಗರು ಹೇಳಿದ ಹಾಂಗೆ ಲೋಕ (male dominating system ನ ) ಹೇಳೆಕ್ಕಿತ್ತಾ ..?
8)ಕೃಷ್ಣ  ರಾಧೆಯ ಬಿಟ್ಟ ಮೇಲೆ 8 ಮದುವೆ ಆದ ಹೇಳಿರೆ ಮೊದಲು ಮದುವೆ ಆಗದ್ದೆ ಒಟ್ಟಿ೦ಗೆ  ಇತ್ತಿದ್ದ ಹೇಳಿಯಾ..?
ಅಷ್ಟೆಲ್ಲ  ಆಗಿ ಈಗ ರುಕ್ಮಿಣಿಕೃಷ್ಣ೦ದ ಜಾಸ್ತಿ ರಾಧಾಕೃಷ್ಣ  ಎಂತಕೆ ಪೂಜೆ ಮಾಡ್ತವು ಗೊಂತಾಯ್ದಿಲ್ಲೆ…ಕಥೆ ಮುಗುದಪ್ಪಗ ..

29 thoughts on “ರಾಧಾಕೃಷ್ಣ .. :-)

  1. ಗೀತ ಚಿಕ್ಕಮ್ಮ ನೀನು ಹೇಳಿದ್ದು ಸರಿ ಇದ್ದು ಆತೋ.

  2. ರಾಧಾ ಕೃಷ್ಣರ ಪ್ರೀತಿ ಬಗ್ಗೆ ಮಾತಾಡುವಗ ಪ್ರೀತಿ ಹೇಳ್ತ ಭಾವನೆಯ ಬಗ್ಗೆ ಚಿಂತನೆ ಮಾಡೆಕ್ಕಾದ್ದೇ ವಿನಹ ಅವರ ನಡುವಿನ ಸಂಬಂದದ ಬಗ್ಗೆ ಅಲ್ಲ…..

  3. ಮಂದ್ರವ ಆನು ಓದಿದ್ದಿಲ್ಲೆ. ಮಧ್ಯಮ ಸ್ಥಾಯಿಲಿ ಎನ್ನ ಅಭಿಪ್ರಾಯವ ಹೇಳ್ತೆ. ತಾರ ಸ್ಥಾಯಿಲಿ ಗಲಾಟೆ ಮಾಡುವದು ಬೇಡ. ಹೇಂಗೂ ವೇಣೂರಣ್ಣ “ವಚನ ಬಾಗವತ” ಸಾರಾಂಶ ಕೊಡ್ತೆ ಹೇಳಿದ್ದವಲ್ಲದ.
    ರಾಧಾ-ಕೃಷ್ಣರ ಪ್ರೀತಿ,ಪ್ರೇಮ, ವಾತ್ಸಲ್ಯ, ಎಲ್ಲಾ ಊಹೆಗೂ ಮೀರಿದ್ದು. ಅವರ ಸಂಬಂಧ ಅಣ್ಣ ತಂಗಿದಂತು ಅಲ್ಲ. ಕತೆಲಿ ಒಂದು ಘಟನೆ ಹೀಂಗೆ ಬತ್ತು.
    ಕೃಷ್ಣಂಗೆ ಒಂದರಿ ಸೌಖ್ಯ ಇಲ್ಲದ್ದಿಪ್ಪಗ “ನಿಜವಾದ ಭಕ್ತರ ಚರಣಾಮೃತ” ಸೇವಿಸಿರೆ ಗುಣ ಅಕ್ಕು ಹೇಳ್ತವಡ. ಅಂಬಗ ಕೃಷ್ಣಂಗೆ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರೂ ಇತ್ತಿದ್ದವು, ರುಕ್ಮಿಣಿ , ಸತ್ಯಭಾಮೆಯೂ ಇತ್ತಿದ್ದವು. ಆರೊಬ್ಬನೂ ಕೊಡ್ಲೆ ತಯಾರು ಇತ್ತಿದ್ದವಿಲ್ಲೆ. ಪಾದ ತೊಳದ ನೀರಿನ ಕೃಷ್ಣಂಗೆ ಕೊಟ್ಟು ಆನು ನರಕಕ್ಕೆ ಎಂತಕೆ ಹೋಗಲಿ ಹೇಳಿಯೇ ಆಲೋಚನೆ ಮಾಡ್ತವು. ಅಂಬಗ ರಾಧೆ, ಆನು ನರಕಕ್ಕೆ ಹೋದರೂ ತೊಂದರೆ ಇಲ್ಲೆ, ಕೃಷ್ಣಂಗೆ ಗುಣ ಆದರೆ ಸಾಕು ಹೇಳಿ ಕೊಡ್ಲೆ ತಯಾರು ಆವುತ್ತು.
    ಹೆಂಡತಿ ಅಲ್ಲದ್ದ ರಾಧೆಗೆ ಕೃಷ್ಣನಲ್ಲಿ ಇತ್ತಿದ್ದು ಅಂತಹ ಅನನ್ಯ ಭಕ್ತಿ, ನಿಷ್ಕಾಮ ಪ್ರೇಮ, ಮಾತೃವಾತ್ಸಲ್ಯ.

    1. ಕೃಷ್ಣ ಗೋಕುಲ ಬಿಟ್ಟು ಮಥುರೆಗೆ ಹೋದಮೇಲೆ ಮತ್ತೆ ರಾಧೆಯ ವಿಶಯ ಕೃಷ್ಣ ನ ಕಥೆಲಿ ಎಲ್ಲಿಯೂ ಬಂದ ಹಾಂಗೆ ಎನಗೆ ಗೊಂತಿಲ್ಲೆ…
      ಮೇಲಾಣ ಕಥೆ ಎಲ್ಲಿ ಬತ್ತು?
      ಗೋಕುಲ ಬಿಟ್ಟು ಹೋಪಗ ರಾಧೆಗೆ ಕೃಷ್ಣ ಅವನ ಮುರಳಿಯ ನೆನಪ್ಪಿಂಗೆ ಕೊಡ್ತಡ… ಮತ್ತೆ ಅವ ರಾಧೆಗೆ ಎಲ್ಲಿಯೂ ಸಿಕ್ಕುತ್ತಾಯಿಲ್ಲೆ ಅಲ್ಲದಾ?

      1. ಕೆಲವು ಕಡೆ ಹೇಳ್ತು …ಕಥೆಲಿ .. ಕೃಷ್ಣ ರಾಧೆ ಬಿಟ್ಟ ಮೇಲೆ ವಾಪಾಸ್ ಬತ್ತಾ ಇಲ್ಲೆ .ಹೇಳಿ … ರಾಧೆ ಕೃಷ್ಣನ ವಾಪಾಸ್ ದಿನಿಗೇಳುಲೆ ಪ್ರಯತ್ನ ಮಾಡ್ತು… ಹೇಳಿ ಇದ್ದು ..
        ಅಂಬಗ ರಾಧೆ ಅಷ್ಟು ಕೇಳ್ತಾ ಇಪ್ಪಗ ಕೃಷ್ಣ ಕೆಮಿಯೇ ಕೇಳದ್ದ ಹಾಂಗೆ(ಬೆಲೆ ಕೊಡದ್ದ ಹಾಂಗೆ ) ಮಾಡಿದ ಹಾಂಗೆ ಆತಿಲ್ಲೆಯ…:P

  4. ಆ ಪುಸ್ತಕಲ್ಲಿಪ್ಪ ಉತ್ತರಂಗಳ ಸಂಕ್ಷೇಪ ಮಾಡಿ ಹಾಕುವ ಪ್ರಯತ್ನ ಸದ್ಯಲ್ಲೇ ಮಾಡ್ತೆ.

  5. ಎಲ್ಲಾ ಅತೀತ೦ಗಳೇ ಆದರೆ ದೈವತ್ವಲ್ಲಿ ನೋಡಿದ ಹಾಂಗೆ ಆತು ..ಯಾವ ವಿಶ್ಯವುದೇ ಸಾಮಾನ್ಯರು ಪ್ರಶ್ನೆ ಮಾಡುವ ಹಾಂಗೆ ಇಲ್ಲೆ …ಸಾಮಾನ್ಯವಾಗಿ ಅರ್ಥ ಮಾಡಿಗೊ೦ಬಲೆ ಇಲ್ಲೆ ಹೇಳಿದ ಹಾಂಗೆ ಆತು ..
    ರಾಧೆದು ನಿಸ್ವಾರ್ಥ ಪ್ರೀತಿ ಆದಿಕ್ಕು …ಕೃಷ್ಣ ನ ವಿಷಯದ ಬಗ್ಗೆ ಕನ್ಫ್ಯೂಸ್ ಆದ್ದು ಇದಾ..:P
    ಅದು ಅಕ್ಕ ತಮ್ಮ ಪ್ರೀತಿ ಗೆ ಉದಾಹರಣೆ ಕೊಡುವಗ ರಾಧಾಕೃಷ್ಣರ ಪ್ರೀತಿ ಹೇಳ್ತವಿಲ್ಲೇ ..
    ಜ್ಞಾನ ವೃದ್ಧ ಕೃಷ್ಣ ಹೇಳಿರೆ ಆದಿಕ್ಕು ..ರಾಧೆಂದ ಜಾಸ್ತಿ ಜ್ಞಾನ ಕೃಷ್ಣ೦ಗೆ ಇದ್ದಿಕ್ಕು …ಒಪ್ಪುವಂಥದ್ದೇ …ಹಂಗಾರೆ ಅಭೌತಿಕ ಪ್ರೀತಿ ಹೇಳಿ ಆತಲ್ಲ …

  6. ಗೀತತ್ತೆ ನಿಂಗಳ ಎಲ್ಲ ಸಮಸ್ಯೆಗೂ ತ. ಸು. ಶ್ಯಾಮರಾಯರು ಬರೆದ “ವಚನ ಭಾಗವತ ” ಪುಸ್ತಕಲ್ಲಿ ವಿವರವಾಗಿ ಉತ್ತರ ಇದ್ದು. ಶ್ರೀರಾಮಕೃಷ್ಣ ಆಶ್ರಮದವು ಪ್ರಕಟಿಸಿದ ಈ ಪುಸ್ತಕಲ್ಲಿ ಸವಿವರವಾಗಿ ಉತ್ತರ ಇಪ್ಪ ಕಾರಣ ಕೇವಲ ದಾರಿ ಮಾತ್ರ ಹೇಳಿದ್ದೆ .

    1. ನಿಂಗೋ ಅದರ ಸಾರಾಂಶವ ಹೇಳಿರೆ ಬೈಲಿಲಿ ಎಲ್ಲೋರಿಂಗೂ, ಸುಲಭಲ್ಲಿ ಪುಸ್ತಕ ಸಿಕ್ಕದ್ದವಕ್ಕೂ, ಪಕ್ಕನೆ ತಿಳ್ಕೊಂಬಲೆ ಉಪಕಾರ ಆವ್ತೀತು …
      ವಿವರವಾದ ಅದ್ಯಯನಕ್ಕೆ ಮಾರ್ಗ ತೋರ್ಸಿದ್ದಕ್ಕಾಗಿ ಧನ್ಯವಾದಗಳು

  7. ರಾಧಾಕೃಷ್ಣ ರ ಪ್ರೀತಿ ಕಾಲಾತೀತ, ದೇಹಾತೀತ, ಸಂಬಂಧಾತೀತ.. ಅವರ ಪ್ರೀತಿಗೆ ವ್ಯಾಖ್ಯಾನ ಇಲ್ಲೆ. ಅದು ಬೇಕು ಬೇಡಗಳ ಮೀರಿ ನಿಂದಂಥದ್ದು.. ಆ ಪ್ರೀತಿಗೆ ಯಾವ ಬಂಧನ ಇಲ್ಲೆ, ಯಾವ ಸ್ವಾರ್ಥ ಇಲ್ಲೆ… ನಾವು ಇಂದಿನ ಈ ಕಾಲಲ್ಲಿ, ಸ್ವಾರ್ಥವೇ ತುಂಬಿಪ್ಪ ಈ ಪ್ರಪಂಚಲ್ಲಿ, ಒಬ್ಬ ಇನ್ನೊಬ್ಬನ, ತನ್ನ ಸ್ವಾರ್ಥಕ್ಕೆ ಪ್ರೀತಿ ಮಾಡಿಗೊಂಡಿಪ್ಪ ಈ ಕಾಲಲ್ಲಿ, ರಾಧಾ ಕೃಷ್ಣ ರ ಪ್ರೀತಿಯ ನಾವು ವಿಶ್ಲೇಷಣೆ ಮಾಡಿ ಹಾಂಗೆ ಪ್ರೀತಿ ನಾವು ಆರ ಮಾಡ್ತು ಹೇಳಿ ಯೋಚನೆ ಮಾಡೆಕ್ಕಾ ಹೇಳಿ ಅನುಸುತ್ತು.. ರಾಧೆದೆ , ಕೃಷ್ಣ ನ್ದೆ ಭೌತಿಕ ಶರೀರಲ್ಲಿ ಗಂಡು ಹೆಣ್ಣು ಆಗಿದ್ದರೂ ಅವರ ಪ್ರೀತಿ ಎಲ್ಲಾ ಕಾಮನೆಗಳ ಮೀರಿ ಒಬ್ಬ ಇನ್ನೊಬ್ಬಂಗೆ ಪೂರಕ ಆಗಿತ್ತಿದ್ದವು ಹೇಳುವ ಹಾಂಗೆ ಪುರಾಣಲ್ಲಿ ಹೇಳ್ತವು… ಹಿಂದಾಣೋರು ನವಗೆ ಎಲ್ಲೋರನ್ನೂ ನಿಸ್ವಾರ್ಥ ವಾಗಿ ಪ್ರೀತಿ ಮಾಡಿ ಹೇಳಿ ರಾಧೆ,ಕೃಷ್ಣರ ಮಾದರಿಯಾಗಿ ಮಾಡಿದ್ದದು.. ಅದರ ನಾವು ಅರ್ಥ ಮಾಡಿಗೊಳ್ಳದ್ದೆ ಅದಕ್ಕೆ ಬೇರೇನೋ ರೂಪ ಕೊಡುತ್ತಾ ಇಪ್ಪದಾ ಹೇಳಿ ಎನ್ನ ಯೋಚನೆ….

    1. ಅಪ್ಪು, ಶ್ರೀ ಅಕ್ಕೊ!
      ಒಪ್ಪೆಕ್ಕಾದ ಮಾತು.
      ಎಂಗಳ ರಾಧಾಕೃಷ್ಣ ಅಪ್ಪಚ್ಚಿಯೂ ಇದನ್ನೇ ಹೇಳ್ತವು.. 🙂

  8. ಗೀತತ್ತೆ,
    ವಯಸ್ಸು ಅಪ್ಪದು ದೇಹಕ್ಕೆ, ಆತ್ಮಕ್ಕೆ ಅಲ್ಲ. ವಯೋವೃದ್ಧ – ಜ್ಞಾನ ವೃದ್ಧ ಹೇಳಿ ಎರಡು ನಮುನೆ ಇದ್ದಡ, ಮಾಷ್ಟ್ರುಮಾವ° ಓ ಮೊನ್ನೆ ಹೇಳಿತ್ತಿದ್ದವು.
    ಬೌಶ್ಷ, ಕೃಷ್ಣನ ದೈವತ್ವದ ಎದುರು ರಾಧೆಯ ವಯಸ್ಸು ಸಣ್ಣವೇ ಹೇಳಿ ಮಾತಾಡಿಗೊಂಡಿಕ್ಕು, ಅವರ ಬದ್ದದ್ದಿನ! 🙂
    ಅಲ್ಲದೋ? ಏ°?

    1. ಅವಕ್ಕೆ ಏವಗ ಬದ್ದ ಆದ್ದು?? ಕೃಷ್ಣ 16 ವರ್ಷ ಅಪ್ಪಗ ಗೋಕುಲ ಬಿಟ್ಟು ಮಥುರೆ ಹೋದ್ದ್ದಲ್ಲದಾ? 16 ವರ್ಷ ಹೇಳಿರೆ ಇನ್ನೂ minor ಆತಲ್ಲದಾ?

  9. ಅಲ್ಲ… ಆನು ಕೇಳುದು… ರಾಧೆ ಮತ್ತೆ ಕೃಷ್ಣನ ನಡುವಿನ ಪ್ರೀತಿ ಅಕ್ಕ ಮತ್ತೆ ತಮ್ಮನ ನಡುವಿನ ಪ್ರೀತಿ ಏಕೆ ಆಗಿಪ್ಪಲಾಗ???

  10. ರಾಧೆಯ ಬಿಟ್ಟು ಕೃಷ್ಣ ಮಥುರೆಗೆ ಹೋಪಗ ಅವಂಗೆ ಪ್ರಾಯ ಎಷ್ಟಾಗಿತ್ತಡ?

  11. geetho ninu e makkala bingi keliyondu kooreda aato.. ninu helida vishya appu.. cintisekkadde..

  12. ಮಕ್ಕಳೇ ..ಚರ್ಚೆ…ವ್ಯಕ್ತಿ ನಿಷ್ಠವಾಗಿ ಬೇಡ… ವಿಷಯ ನಿಷ್ಠವಾಗಿ ಇರಲಿ

    1. ಹೇ ಹೇ ಗೀತತ್ತೆಗೆ ಕೋಪ ಬಂತು……!

    2. ಗೀತ ಅತ್ತೆ ಹೇಳಿದ್ದು ಸರಿಯಾಗಿ ಇದ್ದು …ಇಲ್ಲದ್ದರೆ ವಿಷಯಾಂತರ ಆಗಿ ಮುಖ್ಯ ವಿಷಯಕ್ಕೆ ಪ್ರಾಮುಖ್ಯತೆ ಇಲ್ಲದ್ದ ಹಾಂಗೆ ಅವುತ್ತು

      1. ಯೇ ದಿವ್ಯತ್ತೆ.. ಹೀಂಗುದೇ ಹೇಳುದಾ. ಎಂಗಳೂ ಒಂದು ವಿಷ್ಯದ ಬಗ್ಗೆ ಮಾತಾಡಿದ್ದಲ್ಲದೋ. ಈಗ ಅದನ್ನೆ ಎಲ್ಲರೂ ಕೇಳುದು.

        1. ನೆಗೆಗಾರ ಅಣ್ಣ ,,, ಆನು ನಿಂಗೊ ವಿಷಯದ ಬಗ್ಗೆ ಮಥದ್ಲೆ ಆಗ ಹೇಳಿ ಹೇಳಿದ್ದಲ್ಲ..ಆದರೆ ಮಾತಾಡುವಾಗ ಮುಖ್ಯ ವಿಶಯದ ಪ್ರಾಮುಖ್ಯತೆ ಕಡಮೆ ಆಗದ್ದ ಹಾಂಗೆ ಮಾತದೆಕ್ಕು ಹೇಳಿ ಎನ್ನ ಅಭಿಪ್ರಾಯ ..
          ಆನು ಇಲ್ಲಿಗೆ ಈ ವಿಷಯವ ನಿಲ್ಲುಸುತ್ತೆ .. ಇಲ್ಲದ್ದರೆ ಇದುವೇ ಮುಂದೆ ಹೋಗಿ ಮುಖ್ಯ ವಿಷಯ ಇಲ್ಲದ್ದ ಹಾಂಗೆ ಅಕ್ಕು….

          1. ನಿಂಗಳ ಮಾತು ನಿಜ 🙂 ಎಲ್ಲಾ ದಿಕ್ಕೆ ಎಲ್ಲಾ ಹೊತ್ತಿಲಿ ತಮಾಷೆ ಸಲ್ಲ. 🙂 ವಿಷಯಾಂತರಿಸಿದ್ದಾಕ್ಕಗಿ ವಿಷಾದಿಸುತ್ತೇನೆ..

  13. ಐಸ್ಸಿರಿಗ! ವಿಶಯ ಅಪ್ಪಾದ್ದೆ ಆತೋ..
    ಎಂಗೊಗೆ ಮಂದ್ರ ಓದದ್ರೂ ಈ ಕನುಪ್ಯೂಸು ಬಂತಿದಾ.. 😉
    ಕೃಷ್ಣನ ಬಗ್ಗೆ ಕೇಳಿದ ಪ್ರಶ್ನೆ ನೋಡಿ ಆಧುನಿಕ ಕೃಷ್ಣಂದ್ರು ಹೆದರಿ ಹೋಯಿದವೋ ತೋರುತ್ತು. ಆರದ್ದೂ ಶುದ್ದಿ ಇಲ್ಲೆ ಅತ್ತೆ!!

    1. ಏ ನಗೆಗಾರಣ್ಣೋ,, ಈ ವಿಷಯವಾಗಿ ಸಿಬಿಐ ತನಿಖೆ ಆಗಲ್ಲಿ ಹೇಳಿ ನಮ್ಮ ಅಂಬೋಣ.,, ನೀ ಎಂತ ಹೇಳ್ತೆ??? 🙂

        1. ಅಜ್ಜಕಾನ ಬಾವ° ಯೇವತ್ತೂ ಹಾಂಗೆಯೇ.
          ಪೈಸೆ ಮುಗಿತ್ತ ಜೆಂಬಾರ ಆದರೆ ’ಬೇಡ, ಇನ್ನೆಂತಕೆ’ ಹೇಳುಗು.
          ನೀ ಹೆದರೆಡ ಮಾಣಿ, ನಿನ್ನ ಕರ್ಚಿಲಿ ಮಾಡುಸುತ್ತರೆ ಮಾಡುಸು.. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×