ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಎಷ್ಟು ದಿನ ಈ ಕಣ್ಯಾರ ಜಾತ್ರಗೆ
ಇನ್ನು ಒಳುದ್ದು ಮೂರೇದಿನಾ ||೨||
ಜಾತ್ರೆ ನೋಡುಲೆ ನಾವು ಹೋಪೋ ||೨||
ಕುಂಬ್ಳೆ ಸೀಮೆಯ ಚಾಮಿಯ ನೋಡುಲೆ (ಪ)
ಮಕರ ಸಂಕ್ರಮಣದಾ ದಿನವೇ
ಏರ್ತ ಕೊಡಿಯ ನೋಡುವ ಖುಶಿಲೇ ||೨||
ಭಾರಿ ಲಾಯಿಕಿನ ಜಾತ್ರೆಯ ಸುರುವು ||೨||
ಶಂಖ ಜಾಗಟೆ ಸದ್ದಿನ ಎಡೆಲೇ||ಎಷ್ಟು||
ಬೆಡಿಯ ಕಟ್ಟೆಯ ಹತ್ತರೆ ಹೋಪ
ಬಣ್ಣದ ದುರುಸಿನ ನೋಡುಲೆ ಅಕ್ಕು||೨||
ರೋಕೇಟು ಹಾರುವ ಗೌಜಿಯೇ ಬೇರೆ||೨||
ಕಂಬೆಡಿ ಹೊಟ್ಟುವಗ ಓಡೂಲೆ ಅಕ್ಕು||ಎಷ್ಟು||
ಐದು ದಿನದಾ ಜಾತ್ರೆಯ ಗೌಜಿ
ಕೊಡಿಯ ಮರುದಿನ ಒಂದೊದ್ದು(ಸಣ್ಣ ದೀಪ) ಹೇಳಿ ||೨||
ಎರಡೊದ್ದು(ನಡುದೀಪ) ಮುಗುದರೆ ಬೆಡಿಯಾ ಗೌಜಿ ||೨||
ಐದನೆ ದಿನಕ್ಕೆ ಆರಾಟು ಕೆರೆಲೀ ||ಎಷ್ಟು||
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶೇಡಿಗುಮ್ಮೆ ಪುಳ್ಳಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
{ಲೈಟು ಮಾಲೆಯ ತೋರಣ ಇಕ್ಕು
ಮಕ್ಕಳಾಟದ ಸಾಮಾನೂ ಇಕ್ಕು||೨||
ಕಡ್ಳೆಮಿಠಾಯಿ ಲಾಯಿಕದ್ದು ಇಕ್ಕು||೨||
ಮಂಗ್ಳೂರು ಬಂಟನ ಐಸ್ಕ್ರೀಮು ಬಕ್ಕು}
ಒಪ್ಪ ಆಯಿದು ಇದು…
[ಉತ್ತರುಸಿ]
ಹೊತ್ತುವೇಳೆ: 17 January,2012ರ 12:27 PM ಗೆ. (ಒಪ್ಪಸಂಕೊಲೆ)
ಮಾವಾ, ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ
[ಉತ್ತರುಸಿ]
ಓಹೋ ಭಾರೀ ಲಾಯ್ಕ ಆಯ್ದು ಅಣ್ಣಾ…
ನಿ೦ಗೊ ಪದ್ಯ ಬರವಲೆ ಭಾರೀ ಉಶಾರಿ ಇದ್ದಿ…..
[ಉತ್ತರುಸಿ]
ಹೊತ್ತುವೇಳೆ: 17 January,2012ರ 12:28 PM ಗೆ. (ಒಪ್ಪಸಂಕೊಲೆ)
ಪುಟ್ಟಕ್ಕಂಗೆ ಧನ್ಯವಾದ,
ನಿ೦ಗೊ ಪದ್ಯ ಬರವಲೆ ಭಾರೀ ಉಶಾರಿ ಇದ್ದಿ – ನಾವು ಕಾಲೆಳೆತ್ತದರಲ್ಲಿ ಇನ್ನೂ ಉಶಾರಿ ಅಕ್ಕೋ
[ಉತ್ತರುಸಿ]
ಹೊತ್ತುವೇಳೆ: 17 January,2012ರ 1:37 PM ಗೆ. (ಒಪ್ಪಸಂಕೊಲೆ)
ಅಣ್ಣಾ… ಅದು ಗೊ೦ತಿಪ್ಪ ವಿಷಯವೇ……;)
( ಸುಮ್ಮನೆ ಹೇಳಿದ್ದು;))
[ಉತ್ತರುಸಿ]
ಹೊತ್ತುವೇಳೆ: 17 January,2012ರ 1:49 PM ಗೆ. (ಒಪ್ಪಸಂಕೊಲೆ)
ಅಣ್ಣಾ… ಅದು ಗೊ೦ತಿಪ್ಪ ವಿಷಯವೇ……;) – ಇದು ನಿಜ
( ಸುಮ್ಮನೆ ಹೇಳಿದ್ದು;)) – ಇದು ಮಾತ್ರಾ ಸ್ಸತಲೊಟ್ಟೆ
[ಉತ್ತರುಸಿ]
[ಎಂಟು ಗಂಟಗೇ ಹೆರಡೆಕ್ಕು] – ಇದಾ ನಾವು ಉದಿಯಪ್ಪಗ ಎಂಟು ಗಂಟಗೇ ಮಿಂದು ರೆಡಿ ಆಯ್ದು. ಹೋಪೋ ಹೇಳಿದ ನಿಂಗೊ ಎಲ್ಲಿ? ಹುಹ್!!
ಅಪ್ಪು ಭಾವ…. ಅದಿಕ್ಕು, ಇದಿಕ್ಕು ಹೇದಿರನ್ನೇ….. , ಆ ಮೈಕಿಲಿ ದೊಡ್ಡ ಬಾಳೆಗೊನೆ ಏಲಂ ಅಪ್ಪದರ ಏಕೆ ಹೇಳದ್ದು. ಹೋದ ವರ್ಷ ನಾಕು ಸರ್ತಿ ನಿಂಗಳ ಹೆಸರು ಕೇಟಿದು ಮೈಕಿಲ್ಲಿ ನಿಂಗೊ ಐವತ್ತು ಪೈಸೆ ಏರ್ಸಿದ್ದಕ್ಕೆ!!
ಏ ಭಾವ, ಚಳಿಗೆ ಬೆಶಿ ಬೆಶಿ ಚಾಯಕ್ಕೆ ಹೆಬ್ಬಾರನ ಹೋಟಲು ಇಕ್ಕನ್ನೇ. ಇದಾ ರಿಂಗು ಇಡುಕ್ಕಿ ಬಿಸ್ಕುಟು ಪಾಕೇಟು ಗೆಲ್ಲುತ್ತ ಆಟದ ಹತ್ರಂಗೆ ಎನ್ನ ಕರ್ಕೊಂಡು ಕರ್ಕೊಂಡು ಹೋಯೇಕ್ಕಾತೋ. ಅದಪ್ಪೂ…, ಹೋವ್ತೆಂತರ್ಲಿ? ಜೀಪೋ, ಕಾರೋ, ಬೈಕೋ, ಶಂಕರವಿಠಲ ಬಸ್ಸೋ?! ಸೈಕಲ್ಲಾದರೆ ಆನೂ, ಬೋಚಬಾವನೂ ಇಲ್ಲೆ.
ಅದೆಲ್ಲಾ ಸರಿ.., ‘ದೇವರ ಹಿಂದಿಕೆ ಭಕ್ತಿಲಿ ಸುತ್ತ ಬಪ್ಪೋ, ಗೋಪುರಲ್ಲಿ ಎದ್ದು ನಿಂದೊಂಡಿಪ್ಪೋರ ಕಾಂಬೋ.. ‘ ಇದೇಕೆ ಹೇಳದ್ದು.
ಹೋದರೆ ಅದೆಲ್ಲಾ ಇಪ್ಪೋದೇ ಅಲ್ಲದೋ. ಹುಮ್ಮ್ಮ್. ಭಾವ , ಪದ್ಯ ಪಷ್ಟಾಯ್ದು ಹೇಳಿತ್ತಿದಾ- ‘ಚೆನ್ನೈವಾಣಿ’
[ಉತ್ತರುಸಿ]
ಹೊತ್ತುವೇಳೆ: 17 January,2012ರ 12:35 PM ಗೆ. (ಒಪ್ಪಸಂಕೊಲೆ)
ಚೆನ್ನೈ ಭಾವಂಗೆ ಧನ್ಯವಾದ,
(ಇದಾ ನಾವು ಉದಿಯಪ್ಪಗ ಎಂಟು ಗಂಟಗೇ ಮಿಂದು ರೆಡಿ ಆಯ್ದು.-ಏ ಭಾವ, ಚಳಿಗೆ ಬೆಶಿ ಬೆಶಿ ಚಾಯಕ್ಕೆ ಹೆಬ್ಬಾರನ ಹೋಟಲು ಇಕ್ಕನ್ನೇ.) – ಎಂತ ಭಾವಾ ಈ ಹೊತ್ತಿಲಿಯೂ ಚಳಿಯೋ..?
ದೇವರ ಹಿಂದಿಕೆ ಭಕ್ತಿಲಿ ಸುತ್ತ ಬಪ್ಪೋ, ಗೋಪುರಲ್ಲಿ ಎದ್ದು ನಿಂದೊಂಡಿಪ್ಪೋರ ಕಾಂಬೋ.. ‘- ಇದೆಂತ ಸಂಗತಿ…!
ಆ ಮೈಕಿಲಿ ದೊಡ್ಡ ಬಾಳೆಗೊನೆ ಏಲಂ ಅಪ್ಪದರ ಏಕೆ ಹೇಳದ್ದು. ಹೋದ ವರ್ಷ ನಾಕು ಸರ್ತಿ ನಿಂಗಳ ಹೆಸರು ಕೇಟಿದು ಮೈಕಿಲ್ಲಿ ನಿಂಗೊ ಐವತ್ತು ಪೈಸೆ ಏರ್ಸಿದ್ದಕ್ಕೆ!! – ಚೆನ್ನೈ ವರೆಗೆ ಕೇಳಿದ್ದು ಹೇಳಿರೆ ಕಣ್ಯಾರ ದೇವರ ಮಹಿಮೆ ಎಂತದ್ದು ಹೇಳಿ ಎಲ್ಲೋರಿಂಗೂ ಗೊಂತಕ್ಕಲ್ಲೋ…
[ಉತ್ತರುಸಿ]
{ ||೨| }
ಅಲ್ಲ ಶೇಪುಭಾವಾ; ಪ್ರತಿ ಗೆರೆಯನ್ನೂ಼ ಎರಡೆರಡು ಸರ್ತಿ ಓದೇಕು ಹೇಳಿಯೋ ಪ್ರತಿ ಗೆರೆ ಆದಮತ್ತೆ ಹಾಂಗೆ ಬರವದು?
ಎನಗೊಂತಿಲ್ಲೆ, ಅದಕ್ಕೆ ಕೇಳಿದ್ದು..
[ಉತ್ತರುಸಿ]
ಹೊತ್ತುವೇಳೆ: 17 January,2012ರ 12:37 PM ಗೆ. (ಒಪ್ಪಸಂಕೊಲೆ)
ಅದು “ಎರಡು” ಹೇಳಿ ಗೊಂತಾಯಿದನ್ನೇ ಬಾಕಿಪ್ಪದು ಮತ್ತೆ ಗೊಂತಕ್ಕು ರಜಾ ಕಾಯೆಕಕ್ಕು , ಇನ್ನೊಂದೆರಡು ಪೂಟ್ರೋಲು ಮುರಿಯೆಕಕ್ಕು….ಹಾಂ,
[ಉತ್ತರುಸಿ]
ಹೊತ್ತುವೇಳೆ: 17 January,2012ರ 1:49 PM ಗೆ. (ಒಪ್ಪಸಂಕೊಲೆ)
“ಶೇಪು ಭಾವ” – ಈ ಹೆಸರು ಲಾಯಿಕಿದ್ದು.
[ಉತ್ತರುಸಿ]
ಹೊತ್ತುವೇಳೆ: 17 January,2012ರ 1:54 PM ಗೆ. (ಒಪ್ಪಸಂಕೊಲೆ)
ಪದ್ಯ ಲಾಯಿಕ ಆಯಿದು. ಕಣ್ಯಾರ ಆಯನದ ಗೌಜಿಯ ಚುಟುಕಾಗಿ ಕೊಟ್ಟಿದೆ.
[ಶೇಪುಭಾವಾ]- ಎಂತ ಶೇಪು ಬದಲ್ಸುತ್ತನಾ ಇನ್ನೊಬ್ಬರದ್ದು?
[ಉತ್ತರುಸಿ]
ಹೊತ್ತುವೇಳೆ: 17 January,2012ರ 4:42 PM ಗೆ. (ಒಪ್ಪಸಂಕೊಲೆ)
ಅಪ್ಪಚ್ಚೀ ಸುರುವಾಣದ್ದಕ್ಕೆ ಧನ್ಯವಾದ,
ಎರಡನೆದಕ್ಕೆ – ಯಾರದ್ದಾರೂ ಇದ್ದರೆ ಹೇಳಿ ಬದಲ್ಸುವ ಬೇಕಾರೆ ಆದರೆ conditions apply.
[ಉತ್ತರುಸಿ]
ಪಷ್ಟಾಯಿದು ಅಣ್ಣೋ..
[ಉತ್ತರುಸಿ]
ಹೊತ್ತುವೇಳೆ: 17 January,2012ರ 1:00 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ,
[ಉತ್ತರುಸಿ]
ಫಸ್ಟಾಯಿದು.
ಹಾ೦ಗಾರೆ ಬೆಡಿ ನೋಡಲೆ ಕಾದು ಕೂಬದೋ ಇನ್ನು?
[ಉತ್ತರುಸಿ]
ಹೊತ್ತುವೇಳೆ: 17 January,2012ರ 1:02 PM ಗೆ. (ಒಪ್ಪಸಂಕೊಲೆ)
ಬೆಡಿಗೆ ಕಾವಲೆ ಎಂತದೂ ಇಲ್ಲೆ ಭಾವಾ, ಇಂದು ರಾತ್ರಗೇ ಅಲ್ಲದೋ….. ಒಂದಾರಿ ಹಾಂಗೆ ಹೋಗಿ ನೋಡಿಂಡು ಬಂದರಾತು.
[ಉತ್ತರುಸಿ]
ಜಾತ್ರೆ ಸುದ್ದಿ ಕೇಳುವಾಗ ಗುರುಗೋ ಹೇಳಿದ್ದು ನೆನಪಾತು… “ವರ್ಷದ ಉಳಿದೆಲ್ಲ ದಿನ ನಾವು ದೇವರ ನೋಡುಲೆ ಹೋಯೆಕ್ಕು… ಜಾತ್ರೆ ದಿನ ಮಾಂತ್ರ ದೇವರು ನಮ್ಮ ನೋಡುಲೆ ಬತ್ತ… ಆದರೆ ನಾವು ಮಾಂತ್ರ ಸಂತೆ ನೋಡುದರಲ್ಲೇ ಬ್ಯುಸಿ ಆಗಿರುತ್ತು…”
ಪದ್ಯ ಲಾಯಕ ಆಯಿದು…
[ಉತ್ತರುಸಿ]
ಹೊತ್ತುವೇಳೆ: 17 January,2012ರ 4:44 PM ಗೆ. (ಒಪ್ಪಸಂಕೊಲೆ)
ಅಕ್ಕೋ ನಾವು ಹೋದರೂ ಅವನೇಬಂದರೂ ಅವನಮ್ಮ ಯಾವಾಗಲೂ ನೋಡ್ತಾ ಇರ್ತ ಅಲ್ಲದೋ…
[ಉತ್ತರುಸಿ]
ಹೊತ್ತುವೇಳೆ: 17 January,2012ರ 4:50 PM ಗೆ. (ಒಪ್ಪಸಂಕೊಲೆ)
ಈ ಒಂದು ಜ್ಹಾನ ಎಲ್ಲೋರಿಂಗೂ ಇರುತ್ತಿದ್ದರೆ ಎಷ್ಟು ಒಳ್ಳೇದಿತ್ತು ಅಲ್ಲದ?
[ಉತ್ತರುಸಿ]
ಕವಿತೆ ಲಾಯ್ಕ ಆಯಿದು . ಓದಿ ಕುಂಬಳೆ ಜಾತ್ರೆಗೆ ಹೋಯೆಕ್ಕಿತ್ತು ಹೇಳಿ ಆತು…..
[ಉತ್ತರುಸಿ]
ಹೊತ್ತುವೇಳೆ: 18 January,2012ರ 1:12 PM ಗೆ. (ಒಪ್ಪಸಂಕೊಲೆ)
ಚೆ ಇಂದು ಆರಾಟು…. ಎಂತ ಮಾಡುದು ಬಪ್ಪವೊರುಶ ಹೋದರಾತಿನ್ನು.
[ಉತ್ತರುಸಿ]
ಶೇಡಿಗುಮ್ಮೆ ಭಾವ ಲಾಯಕೆ ಬರದ್ದಿ..
ಕು೦ಬ್ಳೆ ಜಾತ್ರೆಯ ವರ್ಣನೆ ಲಾಯಕೆ ಆಯಿದು.. ಕೊಶಿಯಾತು ಓದಿ.
[ಉತ್ತರುಸಿ]
ಹೊತ್ತುವೇಳೆ: 18 January,2012ರ 1:15 PM ಗೆ. (ಒಪ್ಪಸಂಕೊಲೆ)
ಚುಬ್ಬಣ್ಣನ ಪ್ರೋತ್ಸಾಹಕ್ಕೆ ಧನ್ಯವಾದಂಗೊ…
[ಉತ್ತರುಸಿ]
ಪದ್ಯ ಭಾರಿ ಲಾಯ್ಕಾಯ್ದು..ಜಾತ್ರೆಗೆ ಹೋದಾ೦ಗೇ ಆತುಃ-)
[ಉತ್ತರುಸಿ]
ಹೊತ್ತುವೇಳೆ: 18 January,2012ರ 1:16 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ…. ಅಕ್ಕಂಗೆ.
[ಉತ್ತರುಸಿ]
ಲಾಯ್ಕ ಆಯಿದು ಪದ್ಯ.
[ಉತ್ತರುಸಿ]
ಹೊತ್ತುವೇಳೆ: 18 January,2012ರ 1:16 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ….
[ಉತ್ತರುಸಿ]
ಕಣ್ಯಾರ ಬೆಡಿಯ ವರ್ಣನೆ ಲಾಯಕಾತದ. ನಿನ್ನೆ ಇರುಳು ಪೂರ್ತಿ ಬೆಡಿ ಹೊಟ್ಟುಸಿದಿರಾಯ್ಕು. ಅಜ್ಜಕಾನ ಭಾವ ಬಯಿಂದನೊ ? ಶೇಡಿಗುಮ್ಮೆ ಪುಳ್ಳಿಯ ಪದ್ಯವ ಏವ ರಾಗಲ್ಲಿ ಹಾಡೆಕು ಹೇಳಿ ತುಂಬಾ ಅಂದಾಜು ಮಾಡಿದೆ. ಪದ್ಯದ ರಾಗ ನಾಲಗೆ ಕೊಡೀಲಿ ಇದ್ದು, ಬಾಯಿಗೆ ಬತ್ತಿಲ್ಲೆ ಹೇಳಿ. ಕಡೇಂಗೆ ಒಂದು ಪ್ರಖ್ಯಾತ ಪದ್ಯಕ್ಕೆ ಹೋಲುಸಿ ಎನ್ನಷ್ಟಕ್ಕೆ ಹಾಡಿದೆ. ಸರೀಯಾಗಿ ಹೊಂದಿತ್ತದ !! ಅಂತೂ ಪುಳ್ಳಿ ಬರದ ಪದ್ಯದ ಸಂಪೂರ್ಣ ರಸಾಸ್ವಾದನೆ ಆತು.
[ಉತ್ತರುಸಿ]
ಹೊತ್ತುವೇಳೆ: 18 January,2012ರ 2:53 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ ಬೊಳುಂಬು ಮಾವಂಗೆ ,
ಅಂತೂ ಹೊಂದುಸಿದಿರನ್ನೆ ಕೊಶೀಆತು.
ನಿನ್ನೆ ಇರುಳು ಪೂರ್ತಿ ಬೆಡಿ ಹೊಟ್ಟುಸಿದಿರಾಯ್ಕು – ಇಲ್ಲೆ ಮಾವಾ, ಹೋಪಲಾಯಿದಿಲ್ಲೆ
[ಉತ್ತರುಸಿ]
ಶೇಪು ಭಾವನ ಪದ್ಯ ಲಾಯಕ ಆಯಿದು.
ಒಂದೊಪ್ಪ.
[ಉತ್ತರುಸಿ]
ಹೊತ್ತುವೇಳೆ: 18 January,2012ರ 3:04 PM ಗೆ. (ಒಪ್ಪಸಂಕೊಲೆ)
ದೊಡ್ಡ ಭಾವಂಗೆ ಧನ್ಯವಾದಂಗೊ….
[ಉತ್ತರುಸಿ]