‘ಕನ್ಯಾಸಮರ್ಪಣಂ’

December 8, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಭಾವಂದನಂ (ಮಂತ್ರ ಬಿನ್ನಹ) ಬೈಲಿಲಿ ಎಲ್ಲೋರಿಂಗೂ ಖುಶೀ ಆದ್ದು ನವಗೂ ಖುಶೀ ಆತು. ಇದರ ಹಾಂಗೇ ಇನ್ನೊಂದು, ನಾವು ಎಲ್ಲಾ ಸಟ್ಟುಮುಡಿಗಳಲ್ಲಿ ಸಭೇಲಿ ಕೂದು ಅರ್ಥಮಾಡಿಗೊಂಡು ಕೇಳುವದು ಕನ್ಯಾಸಮರ್ಪಣೆ ಸಮಯಲ್ಲಿ ಭಟ್ಟಮಾವಂದ್ರು ಹೇಳುವ ನವಗೂ ಲಾಯಕ ಅಪ್ಪ ‘ಈತನೂ ಪರಮೇಶ್ವರನೂ.., ಆದರೋ….’.

ಬೈಲಿನೋರ ಅನುಕೂಲಕ್ಕಾಗಿ ಈ ವಾರದ ಶುದ್ದಿಲಿ – ‘ಕನ್ಯಾಸಮರ್ಪಣಂ

ಬೈಲಿಲಿ ಎಲ್ಲೋರಿಂಗೂ ಸಂಸ್ಕೃತ ದೊಡ್ಡ ಮೇರು ಪರ್ವತ ಏನೂ ಅಲ್ಲಾ., ಮಹೇಶಣ್ಣನ ಸುಲಭ ಸಂಸ್ಕೃತ ಪಾಠವೂ ನವಗೆ ಸಂಸ್ಕೃತವ ಸಣ್ಣಕ್ಕೆ ಅರ್ಥ ಮಾಡಿಗೊಂಬಷ್ಟು ಮಾಡಿಕೊಟ್ಟಿದು. ಸುಲಭ ರೀತಿಲಿ ಅರ್ಥ ಅಪ್ಪ ಶ್ಲೋಕಂಗೊ ಇವ್ವು. ಆದಕಾರಣ, ಪ್ರತಿಯೊಂದು ಶಬ್ದ /ವಾಕ್ಯದ ವಿವರಣೆ ಅಗತ್ಯ ಇಲ್ಲೆ.

ಕನ್ಯಾಸಮರ್ಪಣಂ –

ಅಥ ವಧೂವರಯೋಃ ಪಿತ್ರಾದಯಃ ಸರ್ವೇ ಸಭಾಮಧ್ಯೇ ಉಪವಿಶ್ಯ | ವಧೂವರೌ ಪ್ರಾಙ್ಮುಖೌ ಉಪವೇಶ್ಯ | ವಕ್ಷ್ಯಮಾಣ ಕಥಾಪೂರ್ವಕಂ ಕನ್ಯಾಂ ವರಪಿತ್ರಾದಿಹಸ್ತೇ ದದ್ಯಾತ್ | ಇತಿ ಶಿಷ್ಟಾಚಾರಃ ||

ದೇವಾಸುರಗಣೈಃ ಪೂರ್ವಂ ಮಥಿತಃ ಕ್ಷೀರಸಾಗರಃ

ವೇತ್ರಂ ಚ ವಾಸುಕಿಂ ಕೃತ್ವಾ ಮಂಥಾನಂ ಮಂದರಂ ಗಿರಿಮ್ ।

ಮಥಿತೇ ಚ ತದಾ ಸಿಂಧಾವುತ್ಪನ್ನಾ ರತ್ನಜಾತಯಃ

ಪೂರ್ವಂ ಹಾಲಾಹಲಂ ಜಾತಂ ಶಿವೇನಾಂಗೀಕೃತಂ ಖಲು ॥

ಇತ್ಯಾದಿ || ಅಸ್ಯಾರ್ಥಃ – ಪೂರ್ವಂ ದೇವಾ ಅಸುರಾಶ್ಚ ಸಂಭೂಯ, ವಯಮಮೃತಂ ಸಂಪಾದಯಾಮ ಇತಿನಿಶ್ಚಿತ್ಯ, ತದರ್ಥಂ , ಕ್ಷೀರಸಾಗರಮಥನಂ ಕುರ್ಮ ಇತ್ಯಾಲೋಚ್ಯ, ಮಂದರಪರ್ವತಂ ಮಂಥಾನಂ ಕೃತ್ವಾ, ವಾಸುಕಿಂ ರಜ್ಜುಂ ಕೃತ್ವಾ, ಏಕತ್ರ ದೇವಾ ಅನ್ಯತ್ರ ರಾಕ್ಷಸಾಃ ಸ್ಥಿತ್ವಾ, ತೈಃ ಸಮುದ್ರೇ ಮಥ್ಯಮಾನೇ, ತತ್ರ, ಪೂರ್ವಂ ಕಾಲಕೂಟವಿಷಮುತ್ಪನ್ನಂ | ತತ್ತು ಶಿವೇನ ಭಕ್ಷಿತಂ , ತತ ಉಚ್ಚೈಃಶ್ರವಾ ನಾಮಾಶ್ವಃ ಉತ್ಪನ್ನಃ , ಸ ತು ದೇವೇಂದ್ರೇಣ ಗೃಹೀತಃ | ಅಥ ಕಲ್ಪದ್ರುಮಾದಯಃ ಉತ್ಪನ್ನಾಃ | ತತೋ ನಾನಾ ವಿಧಾನಿ ರತ್ನಾನ್ಯುತ್ಪನ್ನಾನಿ, ತತ್ಸರ್ವಂ ದೇವಾ ಯಥಾಯೋಗ್ಯಂ ಗೃಹೀತವಂತಃ | ತತೋsಮೃತಕಲಶಂ ಗೃಹೀತ್ವಾ ಧನ್ವಂತರಿರ್ಜಾತಃ | ತದಮೃತಂ ನಾರಾಯಣೋ ಮೋಹಿನೀರೂಪೇಣ ರಾಕ್ಷಸಾನ್ವಂಚಯಿತ್ವಾ ದೇವಾನಪಾಯಯತ್ | ತತೋ ಲಕ್ಷ್ಮೀರ್ಜಾತಾ | ರಾಕ್ಷಸಾಸ್ತಾಂ ದೃಷ್ಟ್ವಾ ಇಯಮಸ್ಮಾಕಂ ಭವೇದಿತಿ ಸಂತುಷ್ಟಾ ಅಭವನ್ | ದೇವಾಶ್ಚ ತದಾ ನೀಮೇವಂ ಸಮಯಂ ಕೃತವಂತಃ | ಸ್ವಯಂವರಂ ಕಾರಯಿತ್ವಾ, ಯಂ ವರಯೇತ್ತಸ್ಯ ಭಾರ್ಯಾ ಭವಿಷ್ಯತೀತ್ಯೇವಂ ನಿಶ್ಚಿತ್ಯ, ಸಭಾಂ ಕಾರಯಿತ್ವ, ಪುಷ್ಪಮಾಲಾಂ ತಸ್ಯಾ ಹಸ್ತೇ ದತ್ವಾ, ಲಕ್ಷ್ಮೀಂ ಪುರತಃ ಕೃತ್ವಾ, ಧನ್ವಂತರಿರನುಗಚ್ಛನ್ ನಿಂದಾಸ್ತುತಿರೂಪೇಣ ತತ್ರ ಸ್ಥಿತಾದೇವತಾನಾಂ ಗುಣಾವಗುಣಾನ್ ವರ್ಣಯನ್, ವಕ್ಷ್ಯಮಾಣ ಪ್ರಕಾರೇಣ ಲಕ್ಷ್ಮೀಮುವಾಚ |  ಕಿಮುವಾಚೇತ್ಯಾಕಾಂಕ್ಷಾಯಾಮಾಹ ||

ಏಷಬ್ರಹ್ಮಾsತಿವೃದ್ಧಸ್ತ್ರಿದಶಪತಿರಸೌ ಗರ್ವಿತಃ ಕ್ಷೀಯತೇsಬ್ಜೋ

ದಿಗ್ವಾಸಾ ನೀಲಕಂಠಸ್ತಪತಿ ದಿನಕರಶ್ಚಂಚಲೋ ಮಾತರಿಶ್ವಾ |

ಇತ್ಥಂ ಸಂಚಿಂತ್ಯ ಲಕ್ಷ್ಮ್ಯಾ ಭ್ರಮರಕಲಕಲಾರಾವಗೀತಪ್ರಪುಲ್ಲಾ

ಮಾಲಾ ದತ್ತಾ  ಮುರಾರೇಃ ಸುರತರುಕುಸುಮಾಲಂಕೃತಾ ಪಾತು ಯುಷ್ಮಾನ್ ||

ಏಷಬ್ರಹ್ಮಾsತಿವೃದ್ಧಃ – ಈತನು ಬ್ರಹ್ಮನು | ಚತುರ್ಮುಖಗಳಿಂದ ನಾಲ್ಕು ವೇದಗಳನ್ನು ಉಚ್ಚರಿಸುತ್ತಿರುವಂಥವನು | ಆದರೋ ಅತಿ ವೃದ್ಧನು

ತ್ರಿದಶಪತಿರಸೌ ಗರ್ವಿತಃ – ಈತನು ದೇವೇಂದ್ರನು | ತ್ರಯಸ್ತ್ರಿಂಶತ್ ಕೋಟಿದೇವತೆಗಳಿಗೆ ಅಧಿಪತಿಯಾದಂಥವನು | ಆದರೋ ಅತಿ ಗರ್ವಿಷ್ಠನು

ಕ್ಷೀಯತೇಬ್ಜಃ – ಈತನು ಚಂದ್ರನು | ಸಮಸ್ತ ಪ್ರಾಣಿಗಳಿಗೆ ಆಹ್ಲಾದಜನಕನಾದಂಥವನು | ಆದರೋ ಪಕ್ಷಗಳಲ್ಲಿ ವೃದ್ಧಿಕ್ಷೀಣಗಳನ್ನು ಪಡೆಯುತ್ತಿರುವಂಥವನು

ದಿಗ್ವಾಸಾ ನೀಲಕಂಠಃ – ಈತನು ಪರಮೇಶ್ವರನು | ಸರ್ವಜ್ಞನಾದಂಥವನು | ಕಾಳಕೂಟ ವಿಷಸರ್ಪಾಭರಣಗಳನ್ನು ಧರಿಸಿಕೊಂಡಿರುವಂಥವನು |  ಆದರೋ ದಿಗಂಬರನು

ತಪತಿ ದಿನಕರಃ – ಈತನು ಸೂರ್ಯನು | ಸೂರ್ಯೋದಯವಾಗುತ್ತಿರಲಾಗಿ ಸಮಸ್ತ ಯಜ್ಞಾದಿ ಹವಿರ್ಭಾಗಗಳು ನಡೆದು ಬರುವುವು | ಆದರೋ ತೀಕ್ಷ್ಣಕಿರಣಗಳಿಂದ ಲೋಕವನ್ನು ದಹಿಸುವಂಥವನು |

ಚಂಚಲೋ ಮಾತರಿಶ್ವಾ – ಈತನೂ ವಾಯುವು | ಅಣುತೃಣಾದಿಗಳಲ್ಲಿ ಪರಿವ್ಯಾಪಿಸಿಕೊಂಡಿರುವಂಥವನು | ಆದರೋ ಅತ್ಯಂತ ಚಂಚಲನು

ಇತ್ಥಂ ಸಂಚಿಂತ್ಯ ಲಕ್ಷ್ಮ್ಯಾ ಭ್ರಮರಕಲಕಲಾರಾವಗೀತಪ್ರಪುಲ್ಲಾ ಮಾಲಾ ದತ್ತಾ  ಮುರಾರೇಃ – ಈ ಪ್ರಕಾರವಾಗಿ ಧನ್ವಂತರಿಯು ಹೇಳುತ್ತಿರಲಾಗಿ ಲಕ್ಷ್ಮೀದೇವಿಯು ಪುರೋವರ್ತಿಗಳಾದ ಬ್ರಹ್ಮಾದಿ ದೇವತೆಗಳನ್ನು ತಿರಸ್ಕರಿಸಿ ದುಂಬಿಗಳ ಕೋಲಾಹಲ ಶಬ್ದವೆಂಬ ಗಾನದಿಂದ ವಿಕಸಿತ ಮಂದಾರ ಪಾರಿಜಾತವೇ ಮೊದಲಾದ ಸುರತರುಕುಸುಮಗಳಿಂದ ಯುಕ್ತವಾದ ವೈಜಯಂತೀ ಎಂಬ ಪುಷ್ಪಮಾಲೆಯನ್ನು ದೇವಸಭೆಯಲ್ಲಿ ಮುರವೈರಿಯಾದ ಶ್ರೀಮನ್ನಾರಾಯಣನ ಕಂಠದಲ್ಲಿ ಸಮರ್ಪಿಸಿದಳು.

ಇತ್ತಲಾಗಿ ಬ್ರಹ್ಮಸಭಾಮಧ್ಯದಲ್ಲಿ ‘ಸೀತಾ’ ಎಂಬ ಕನ್ನಿಕೆಯು ‘ರಾಮಶರ್ಮಾ’ ಎಂಬ ವರನ ಕಂಠದಲ್ಲಿ ಪುಷ್ಪಮಾಲೆಯನ್ನು ಸಮರ್ಪಿಸಿದಳು.

ಸುರತರುಕುಸುಮಾಲಂಕೃತಾ ಪಾತು ಯುಷ್ಮಾನ್ – ಆ ಸುರತರುಕುಸುಮಗಳಿಂದ ಯುಕ್ತವಾದ ವೈಜಯಂತೀ ಪಷ್ಪಮಾಲಿಕೆಯು ವಧೂವರರೇ ಮೊದಲಾದ ನಿಮ್ಮೆಲ್ಲರನ್ನು ರಕ್ಷಿಸಲಿ.

(ಇಲ್ಲಿಂದ ಮುಂದೆ ಕನ್ಯೆಗೆ ಹಿತೋಪದೇಶ ಮತ್ತು ಕೂಸಿನ ಕೈ ಎತ್ತಿ ಕೊಡುವದು – ತಾತ್ಪರ್ಯ ಹೇಳುವ ಕ್ರಮ ರೂಢಿಲ್ಲಿ ಎಲ್ಯೋ ಕೆಲವರ ಭಾವನೆಗೆ ಬೇನೆ ಆವ್ತು ಹೇಳಿ ಎಲ್ಯೋ ಒಂದಿಕ್ಕೆ ಆಕ್ಷೇಪ ಬಂದಲಾಗಾಯ್ತು ವಿವರಣೆ ಹೇಳುವದರ ನಿಲ್ಸಿದ್ದವಡ. ಈ ವರೇಗೆ ಕನ್ಯೆ ಆಗಿದ್ದ ನೀನು ಈಗ ಮದುವೆ ಆಗಿ ಇನ್ನು ಮುಂದೆ ಗಂಡನ ಮನೇಲಿ ಗಂಡನೊಟ್ಟಿಂಗೆ ಗೃಹಿಣಿಯಾಗಿ ಯಾವ ರೀತಿಲಿ ಕರ್ತವ್ಯ ನಿರ್ವಹಿಸೆಕ್ಕು ಹೇಳಿಯೂ, ಏನೂ ಆರಡಿಯದ್ದ ಬರೇ ಪಾಪ (ಮೃದು) ಸ್ವಭಾವದ ಕೂಸಿನ ನಿನ್ನ ಕೈಗೆ ಕೊಡ್ತೆ ನೀನೂ ಅದರ ಅರ್ಥ ಮಾಡಿಗೊಂಡು ಕೂಸಿನ ಮನಸ್ಸು ಬೇನೆ ಆಗದ್ದ ಹಾಂಗೆ ಪಾಲುಸೇಕು ಹೇಳಿ ಕೂಸಿನ ಅಪ್ಪ° ಮಾಣಿಯ ಕೈಗೆ ಕೂಸಿನ ಕೈ ಎತ್ತಿ ಕೊಡುವ  ಸನ್ನಿವೇಷ ಅದೆಷ್ಟು ಅರ್ಥಗರ್ಭಿತ ಮತ್ತು ಮನಸ್ಸಿಂಗೆ ನೇರ ಮುಟ್ಟುವ ಈ ವಿಷಯಂಗಳ ವಿವರಣೆ ಮೂಲಕ ಹೇಳುವುದೇ ಸೂಕ್ತ ಹೇಳಿ ಎನ್ನ ಅಭಿಪ್ರಾಯ. ನಮ್ಮ ಊರ ನೆಂಟ್ರುಗೊ ಸಂಕುಚಿತ ಭಾವನೆ ಬಿಟ್ಟು ಮಂತ್ರಾರ್ಥ ಅರ್ಥಮಾಡಿಗೊಂಡು ನಮ್ಮತನದ ಹಿರಿಮೆಯ ಪ್ರತಿಬಿಂಬಿಸುವ ಈ ಸಾಲುಗೋ ಸಭೇಲಿ ಮೊಳುಗುತ್ತಾಂಗೆ ನಾವು ಸ್ವಾಗತಿಸೆಕ್ಕು ಹೇಳಿ ಕೇಳಿಕೆಯೂ. ನಮ್ಮೂರಿಲ್ಲಿ ರೂಢಿಲ್ಲಿ ಇಪ್ಪ ಹಾಂಗೇ ಧ್ವನಿ , ವಿವರಣೆ ಇಲ್ಲೆ)

ಉತ್ತುಂಗಸ್ತನಮಂಡಲೋಪರಿ ಲಸತ್ ಪ್ರಾಲಂಬಮುಕ್ತಾಮಣೇ-

ರಂತರ್ಬಿಂಬಿತಮಿಂದ್ರನೀಲನಿಕರಛಾಯಾನುಕಾರಿದ್ಯುತಿ |

ಲಜ್ಜಾವ್ಯಾಜಮುಪೇತ್ಯ ನಮ್ರವದನಾ ಸ್ಪಷ್ಟಂಮುರಾರೇರ್ವಪುಃ

ಪಶ್ಯಂತೀ ಮುದಿತಾ ಮುದೇಸ್ತು ಭವತಾಂ ಲಕ್ಷ್ಮೀರ್ವಿವಾಹೋತ್ಸವೇ ||

ಕುಲಂ ಚ ಶೀಲಂ ಚ ವಪುರ್ವಯಶ್ಚ ವಿತ್ತಂ ಚ ವಿದ್ಯಾಂ ಚ ಸನಾಥತಾಂ ಚ |

ಏತಾನ್ ಗುಣಾನ್ ಸಪ್ತ ಪರೀಕ್ಷ್ಯ ದೇಯಾ ಕನ್ಯಾ ಬುಧೈಃಶೇಷಮಚಿಂತನೀಯಂ ||

ಕನ್ಯಾ ವರಯತೇ ರೂಪಂ ಮಾತಾ ವಿತ್ತಂ ಪಿತಾ ಶ್ರುತಂ |

ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮಿತರೇ ಜನಾಃ ||

ಕಾರ್ಯೇಷು ಮಂತ್ರೀ ಕರಣೇಷು ದಾಸೀ ಭುಕ್ತೌತು ಮಾತಾ ಶಯನೇಷು ವೇಶ್ಯಾ |

ಧರ್ಮೇಷು ಧರ್ಮೀ ಕ್ಷಮಯಾದರಿತ್ರೀ ಷಟ್ಕರ್ಮಯುಕ್ತಾ ಕುಲಮುದ್ಧರಿತ್ರೀ ||

ಅನಯಾ ಸಹಧರ್ಮಚರ್ಯಯಾ ಪುರುಷಾರ್ಥತ್ರಯಸಾಧನಾರ್ಹಯಾ |

ಮುದಮಾಪ್ನುಹಿ ಶಾಶ್ವತೀಃ ಸಮಾಃ ಭಜ ಧರ್ಮಂ ತ್ವಮನನ್ಯಮಾನಸಃ ||

ವಸನಾsಭರಣಾsನ್ನಪಾನದಾನೈರ್ಭರಣೀಯಾನುದಿನಂ ಸುರಕ್ಷಣೀಯಾ |

ಮೃದುಭಿರ್ವಚನೈಃ ಸುಭಾಷಣೀಯಾ ಗೃಹಕೃತ್ಯೇಷ್ವಖಿಲೇಷು ಯೋಜನೀಯಾ ||

ಮಮ ಪುತ್ರ್ಯಬಲಾ ಕ್ರಿಯಾಸುದಕ್ಷಾ ವಚನೇ ಕರ್ಮಣಿ ಕೌಶಲಂ ನ ಯಸ್ಯಾಃ |

ತದಿಯಂ ಭವತಾ ಸುರಕ್ಷಣೀಯಾ ನಖರೇಣಾಪಿ ಮುದಾ ಚ ಲಾಲಸೇನ |

ಯಾ ಕೃಷ್ಣಭಾಂಡೇ ಸಿತತಂಡುಲಾನಾಂ ಪಕ್ವೇಪ್ಯಶಕ್ತಾ ಕಿಮುತಾನ್ನಕೃತ್ಯೇ |

ತಥಾಪ್ಯನಲ್ಪಂ ಕ್ಷಮಯಾ ತ್ವಯೇಯಮಂಗೀಕೃತಾ ಸಾ ಪರಿಪಾಲನೀಯಾ ||

ಅಷ್ಟ (ಬಹು) ವರ್ಷಾತ್ ಇಯಂ ಕನ್ಯಾ ಪುತ್ರವತ್ ಪಾಲಿತಾ ಮಯಾ |

ಇದಾನೀಂ ತವ ಪುತ್ರಾಯ ದತ್ತಾ ಸ್ನೇಹೇನ ಪಾಲ್ಯತಾಂ |

ವಿವಾಹೋತ್ಸವೇ – ವಿವಾಹೋತ್ಸವದಲ್ಲಿ

ಉತ್ತುಂಗಸ್ತನಮಂಡಲೋಪರಿ ಲಸತ್ ಪ್ರಾಲಂಬಮುಕ್ತಾಮಣೇರಂತರ್ಬಿಂಬಿತಂ – ಅತ್ತ್ಯುನ್ನತಗಳಾದ ಕುಚಗಳ ಮೇಲ್ಭಾಗದಲ್ಲಿ ಶೋಭಾಯಮಾನವಾಗಿ ನೇತಾಡುತ್ತಿರುವ ಮುಕ್ತಾಹಾರದ ಒಳಗಡೆಯ ಪ್ರತಿಬಿಂಬವಾದ,

ಇಂದ್ರನೀಲನಿಕರಛಾಯಾನುಕಾರಿದ್ಯುತಿ – ಇಂದ್ರನೀಲಮಣಿಗಳ ಛಾಯೆಗೆ ಸಮಾನವಾಗಿ ಶೋಭಿಸುತ್ತಿರುವ,

ಮುರಾರೇರ್ವಪುಃ – ಶ್ರೀಮನ್ನಾರಾಯಣನ ಶರೀರವನ್ನು,

ಲಜ್ಜಾವ್ಯಾಜಮುಪೇತ್ಯ ನಮ್ರವದನಾ – ಲಜ್ಜೆಯೆಂಬ ನೆವದಿಂದ ಕೂಡಿ ನಮ್ರಮುಖಿಯಾಗಿ,

ಸ್ಪಷ್ಟಂಮುರಾರೇರ್ವಪುಃ ಪಶ್ಯಂತೀ ಮುದಿತಾ – ಸ್ಪಷ್ಟವಾಗಿ ಕಾಣುವ ಶ್ರೀಮನ್ನಾರಾಯಣನ ಶರೀರವನ್ನು ನೋಡುತ್ತಾ ಸಂತೋಷ ಹೊಂದಿದವಳಾದ,

ಲಕ್ಷ್ಮೀ ಮುದೇಸ್ತು ಭವತಾಂ ವಿವಾಹೋತ್ಸವೇ – ಲಕ್ಷ್ಮೀದೇವಿಯು ನಿಮಗೆಲ್ಲರಿಗೂ ಸಂತೋಷವನ್ನುಂಟುಮಾಡಲಿ.

ಕುಲಂ ಚ ಶೀಲಂ ಚ ವಪುರ್ವಯಶ್ಚ ವಿತ್ತಂ ಚ ವಿದ್ಯಾಂ ಚ ಸನಾಥತಾಂ ಚ | ಏತಾನ್ ಗುಣಾನ್ ಸಪ್ತ ಪರೀಕ್ಷ್ಯ ದೇಯಾ ಕನ್ಯಾ ಬುಧೈಃಶೇಷಮಚಿಂತನೀಯಂ – ಕನ್ಯಾದಾನವನ್ನೂ ಮಾಡುವವನು, ವರನು ಸತ್ಕುಲದಲ್ಲಿ ಹುಟ್ಟಿದವನೋ ಎಂದು ವಿಚಾರಿಸಬೇಕು. ಸದ್ಗುಣಗಳಿಂದ ಕೂಡಿದವನೋ ಎಂದು ವಿಚಾರಿಸಬೇಕು, ಶರೀರ ಸೌಂದರ್ಯ ಉಳ್ಳವನೋ, ಯೋಗ್ಯವಾದ ಪ್ರಾಯಸಂಪನ್ನನೋ, ಸಂಪತ್ತಿನಿಂದ ಕೂಡಿದವನೋ, ವಿದ್ಯಾಪಾರಂಗತನೋ, ತಾಯಿತಂದೆಯರೇ ಮುಂತಾದ ಹಿರಿಯರಿಂದ ಕೂಡಿದವನೋ  ಎಂಬುದಾಗಿ ವಿಚಾರಿಸಬೇಕು. ಈ ಏಳುಗುಣಗಳನ್ನು ಪರೀಕ್ಷಿಸಿ ಕನ್ಯಾದಾನ ಮಾಡಬೇಕು. ವಿದ್ವಾಂಸರು ಬೇರೆ ವಿಚಾರಗಳಲ್ಲಿ ಚಿಂತಿಸಬೇಕಾಗಿಲ್ಲ.

ಕನ್ಯಾ ವರಯತೇ ರೂಪಂ ಮಾತಾ ವಿತ್ತಂ ಪಿತಾ ಶ್ರುತಂ | ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮಿತರೇ ಜನಾಃ || – ಕನ್ನಿಕೆಯು ರೂಪಲಾವಣ್ಯಸಂಪನ್ನನಾದ ಗಂಡನಾಗಬೇಕೆಂದು ಯೋಚಿಸುತ್ತಾಳಂತೆ. ವೃತ್ತಿಕ್ಷೇತ್ರಧನಸಂಪನ್ನನಾದ ವರನಾಗಬೇಕು ಮಗಳಿಗೆ ಎಂದು ತಾಯಿಯಾದವಳು ಯೋಚಿಸುತ್ತಾಳಂತೆ. ವೇದಶಾಸ್ತ್ರಾದಿ ಸದ್ವಿದ್ಯಾಪಾರಂಗತನಾದ ವರನಾಗಬೇಕು ಮಗಳಿಗೆ ಎಂದು ತಂದೆಯು ಯೋಚಿಸುತ್ತಾನಂತೆ. ಸತ್ಕುಲದಲ್ಲಿ ಜನಿಸಿದ ವರನಾಗಬೇಕು ಕನ್ನಿಕೆಗೆ ಎಂದು ಬಂಧುಜನರು ಯೋಚಿಸುತ್ತಾರಂತೆ. ದಾತೃತ್ವಸಂಪತ್ತಿನಿಂದ ಕೂಡಿ ಸದಾ ಇಷ್ಟಾನ್ನವನ್ನು ದಾನಮಾಡುವ ವರನಾಗಬೇಕು ಕನ್ಯೆಗೆ ಎಂದು ಇತರ ಜನರು ಯೋಚಿಸುತ್ತಾರಂತೆ.

ಕಾರ್ಯೇಷು ಮಂತ್ರೀ ಕರಣೇಷು ದಾಸೀ ಭುಕ್ತೌತು ಮಾತಾ ಶಯನೇಷು ವೇಶ್ಯಾ | ಧರ್ಮೇಷು ಧರ್ಮೀ ಕ್ಷಮಯಾದರಿತ್ರೀ ಷಟ್ಕರ್ಮಯುಕ್ತಾ ಕುಲಮುದ್ಧರಿತ್ರೀ || – ಸತಿಯು ಪತಿಯ ಸಮಸ್ತಕಾರ್ಯಗಳಲ್ಲಿ ಮಂತ್ರಿಯಂತೆ ಸದಾಲೋಚನೆ ನೀಡುವವಳಾಗಿರಬೇಕು. ಮನೆಯ ಸಮಸ್ತ ಕೆಲಸಗಳಲ್ಲಿ ದಾಸಿಯಂತೆ ಕಾರ್ಯತತ್ಪರಳಾಗಿರಬೇಕು. ಭೋಜನಕಾಲದಲ್ಲಿ ತಾಯಿಯಂತೆ ಸನ್ಮಾನಿಸಿ ವಾತ್ಸಲ್ಯದಿಂದ ಉಣಿಸುವವಳಾಗಿರಬೇಕು. ಶಯನ ಕಾಲದಲ್ಲಿ ಹಾವಭಾವ ವಿಲಾಸಗಗಳಿಂದ ಪತಿಯನ್ನು ಮೋಹಿಸುವವಳಾಗಿರಬೇಕು. ಧರ್ಮಕಾರ್ಯಗಳನ್ನು ಪತಿಯೊಡನೆ ಕೂಡಿಕೊಂಡು ನೆರೆವೇರಿಸುವವಳಾಗಿರಬೇಕು. ಗಂಡನಿಗೆ ಕ್ರೋಧ ಸಂಭವಿಸಿರುವ ಕಾಲದಲ್ಲಿ ಭೂದೇವಿಯಂತೆ ಕ್ಷಮಾಗುಣಸಂಪನ್ನಳಾಗಿರಬೇಕು. ಇವಾರು ಗುಣಗಳಿಂದ ಕೂಡಿದವಳು ಕುಲವನ್ನು ಉದ್ಧರಿಸುತ್ತಾಳೆ.

ಅನಯಾ ಸಹಧರ್ಮಚರ್ಯಯಾ ಪುರುಷಾರ್ಥತ್ರಯಸಾಧನಾರ್ಹಯಾ | ಮುದಮಾಪ್ನುಹಿ ಶಾಶ್ವತೀಃ ಸಮಾಃ ಭಜ ಧರ್ಮಂ ತ್ವಮನನ್ಯಮಾನಸಃ || – ಧರ್ಮಾರ್ಥಕಾಮಗಳೆಂಬ ಪುರುಷಾರ್ಥತ್ರಯಗಳಿಗೆ ಸಾಧನಳಾದ ವಿಧ್ಯುಕ್ತ ರೀತಿಯಿಂದ ವಿವಾಹಿತಳಾದ, ಧರ್ಮಕಾರ್ಯಗಳಲ್ಲಿ ಜೊತೆಯಾಗಿದ್ದು ಭಾಗವಹಿಸುವ ಪತ್ನಿಯಾದ ಇವಳಿಂದ ಕೂಡಿದವನಾಗಿ ದೀರ್ಘಕಾಲ ಸಂತೋಷವನ್ನು ಹೊಂದಿ ಏಕಾಗ್ರಚಿತ್ತದಿಂದ ಸ್ವಾಶ್ರಮೋಚಿತ ಧರ್ಮಾನುಷ್ಠಾನ ಮಾಡುವವನಾಗು.

ವಸನಾsಭರಣಾsನ್ನಪಾನದಾನೈರ್ಭರಣೀಯಾನುದಿನಂ ಸುರಕ್ಷಣೀಯಾ | ಮೃದುಭಿರ್ವಚನೈಃ ಸುಭಾಷಣೀಯಾ ಗೃಹಕೃತ್ಯೇಷ್ವಖಿಲೇಷು ಯೋಜನೀಯಾ || – ಈ ಕನ್ನಿಕೆಯನ್ನು ವಸನಾಭರಣ ಅನ್ನಪಾನಗಳಿಂದ ಪ್ರತಿದಿನವೂ ಪಾಲಿಸುತ್ತಾ ರಕ್ಷಿಸಿ ಬರಬೇಕು. ಮೃದುಮಧುರವಾದ ಮಾತುಗಳಿಂದ ಇವಳೊಡನೆ ವ್ಯವಹರಿಸುತ್ತಾ ಮನೆಯ ಎಲ್ಲಾ ಕೆಲಸಗಳಲ್ಲಿ ನಿಯೋಜಿಸಬೇಕು.

ಮಮ ಪುತ್ರ್ಯಬಲಾ ಕ್ರಿಯಾಸುದಕ್ಷಾ ವಚನೇ ಕರ್ಮಣಿ ಕೌಶಲಂ ನ ಯಸ್ಯಾಃ | ತದಿಯಂ ಭವತಾ ಸುರಕ್ಷಣೀಯಾ ನಖರೇಣಾಪಿ ಮುದಾ ಚ ಲಾಲಸೇನ || – ಈ ನನ್ನ ಅಬಲೆಯಾದ ಮಗಳು ಕೆಲಸಗಳನ್ನು ಮಾಡುವುದರಲ್ಲಿ ದಕ್ಷತೆಯಿಲ್ಲದವಳು. ಮಾತನಾಡಲೂ ತಿಳಿಯದವಳು. ಇಂತಹ ಇವಳಲ್ಲಿ ಕಠಿಣತೆಯನ್ನು ಬಿಟ್ಟು ಸಂತೋಷ ಪ್ರೀತಿಗಳಿಂದ ಸಂರಕ್ಷಿಸಿಬರಬೇಕು.

ಯಾ ಕೃಷ್ಣಭಾಂಡೇ ಸಿತತಂಡುಲಾನಾಂ ಪಕ್ವೇಪ್ಯಶಕ್ತಾ ಕಿಮುತಾನ್ನಕೃತ್ಯೇ | ತಥಾಪ್ಯನಲ್ಪಂ ಕ್ಷಮಯಾ ತ್ವಯೇಯಮಂಗೀಕೃತಾ ಸಾ ಪರಿಪಾಲನೀಯಾ || – ಯಾವಳು ಅನ್ನಮಾಡುವ ಪಾತ್ರದಲ್ಲೇ ಹಾಕಿರುವ ಅಕ್ಕಿಯನ್ನೂ ಒಲೆ ಉರಿಸಿ ಬೇಯಿಸುವ ಕೆಲಸದಲ್ಲಿ ಅಸಮರ್ಥಳೋ, ಅವಳು ಬೇರೆ ಕೆಲಸಗಳನ್ನು ಹೇಗೆ ಮಾಡಿಯಾಳು? ಹಾಗಾದರೂ ಅಪಾರವಾದ ಕ್ಷಮೆಯಿಂದ ಸ್ವೀಕರಿಸುವ ನೀವು, ಇವಳನ್ನು ಪ್ರೀತಿಯಿಂದ ಪಾಲಿಸುತ್ತಿರಬೇಕೆಂದು ಪ್ರಾರ್ಥಿಸುತ್ತೇನೆ.

ಅಷ್ಟ (ಬಹು) ವರ್ಷಾತ್ ಇಯಂ ಕನ್ಯಾ ಪುತ್ರವತ್ ಪಾಲಿತಾ ಮಯಾ| ಇದಾನೀಂ ತವ ಪುತ್ರಾಯ ದತ್ತಾ ಸ್ನೇಹೇನ ಪಾಲ್ಯತಾಂ|| – ಇಷ್ಟು ವರ್ಷಗಳಿಂದ ಈ ಕುವರಿಯನ್ನು ಪುತ್ರನಂತೆ ಪಾಲಿಸಿ ಬಂದಿರುತ್ತೇನೆ. ಈಗ ನಿಮ್ಮ ಮಗನಿಗೆ ಸಮರ್ಪಿಸಿರುತ್ತೇನೆ. ಪ್ರೀತಿಯಿಂದ ಪಾಲಿಸಲ್ಪಡಲಿ.

ಓಂ ಕಾಮಃ ಕಾಮಾಯ ಕಾಮೋದಾತಾ | ಕಾಮಃ ಪ್ರತಿಗೃಹೀತಾ | ಕಾಮೇನ ತ್ವಾ ಪ್ರತಿಗೃಹ್ಣಾಮಿ | ಕಾಮೈತತ್ತೇ | ಏಷಾತೇಕಾಮದಕ್ಷಿಣಾ | ಉತ್ತಾನಸ್ತ್ವಾಂಗೀರಸಃ ಪ್ರತಿಗೃಹ್ಣಾತು || ಧರ್ಮಪ್ರಜಾಸಂಪತ್ ಸಿದ್ಧ್ಯರ್ಥಂ ಇಮಾಂ ಕನ್ಯಾಂ ಪ್ರತಿಗೃಹ್ಣಾಮಿ | ಓಂ ತತ್ಸತ್ ।| 

ಮೇಗಾಣ ಮಂತ್ರಂಗೊ ನಮ್ಮ  ತುಪ್ಪೆಕ್ಕಲ್ಲು ಭಾವಂದ್ರ ಧ್ವನಿಲಿ ಇಲ್ಲಿ ಕೇಳ್ಳೆ –

 

‘ಕನ್ಯಾಸಮರ್ಪಣಂ’, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಸಮಗ್ರ ಶುದ್ದಿ.
  ಚೆನ್ನೈಭಾವ೦ಗೆ ಧನ್ಯವಾದ೦ಗೊ.

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಪ್ರೀತಿಯ ಒಪ್ಪಕ್ಕೆ ಧನ್ಯವಾದ ಭಾವಯ್ಯ.

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಚೆನ್ನೈ ಭಾವ ಕೈ ಎತ್ತಿ ಕೊಟ್ಟದರ ಎನಗೆ ಓದಲೆ ರಜಾ ತಡವಾತದ. ಉತ್ತಮ ಮಾಹಿತಿಯ ಕೊಟ್ಟತ್ತು. ಕೂಸಿನ ಅಬ್ಬೆ, ಅಪ್ಪ, ಅತ್ತೆಕ್ಕಳ ಮನಸ್ಸು ಭಾರ ಆಗಿ ಕಣ್ನಿಲ್ಲಿ ಹನಿ ಎರಡು ಸುರುಸುತ್ತ ಈ ಸಂದರ್ಭವ ಚೆಂದಕೆ ವಿವರುಸಿದ್ದೆ ಭಾವಯ್ಯ. ಧನ್ಯವಾದಂಗೊ.

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತಡವಾದರೂ ಆಸಕ್ತಿಲಿ ಕೂದು ಓದಿನೋಡಿ ಪ್ರೋತ್ಸಾಹ ಕೊಡ್ತಾ ಇದ್ದಿ ಇದಾ. ಇದು ಖುಶೀ ಅಪ್ಪದು ನಿಂಗಳತ್ರೆ. ಧನ್ಯವಾದಂಗೊ.

  VA:F [1.9.22_1171]
  Rating: 0 (from 0 votes)
 3. good one

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯವಾದಗಳು

  VA:F [1.9.22_1171]
  Rating: 0 (from 0 votes)
 4. ಅನಂತ ನಾರಾಯಣ ಎಂ ಜಿ

  ಭಟ್ಟ ಮಾವನ ಸ್ವರ ಕೇಳಿದಷ್ಟೂ ಸಾಕವುತ್ತಿಲ್ಲೆ. ಸಭಾವಂದನಂ ನ ಸಣ್ಣಸಂಕೊಲೆ ಇದ್ದರೆ ಆರಾದರೂ ಕೊಡುವಿರಾ ? ಇವಂಗೆ ಹುದುಕುಲೆ ಎಂತ ದಾಡಿ ಹೇಳಿ ಗ್ರೆಶಡಿ ಪ್ಲೀಸ್ !

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  http://oppanna.com/mantra/bhavantaha-sarvajnaha-sabhavandanam

  ಸಣ್ಣಸಂಕೊಲೆ(shortlink): http://oppanna.com/?p=16226

  VA:F [1.9.22_1171]
  Rating: +1 (from 1 vote)

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಶ್ರೀಅಕ್ಕ°ಪುಣಚ ಡಾಕ್ಟ್ರುಕಜೆವಸಂತ°ಡೈಮಂಡು ಭಾವನೆಗೆಗಾರ°ವಿಜಯತ್ತೆಮಾಷ್ಟ್ರುಮಾವ°ಡಾಮಹೇಶಣ್ಣಮುಳಿಯ ಭಾವಕೇಜಿಮಾವ°ಅಕ್ಷರ°ಪುಟ್ಟಬಾವ°ದೀಪಿಕಾಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕದೊಡ್ಡಮಾವ°ಚುಬ್ಬಣ್ಣಬೋಸ ಬಾವಬಂಡಾಡಿ ಅಜ್ಜಿಗೋಪಾಲಣ್ಣಪವನಜಮಾವಅನುಶ್ರೀ ಬಂಡಾಡಿಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ